444. ಪಿತಾಮಹ (1985)



ಪಿತಾಮಹ ಚಿತ್ರದ ಹಾಡುಗಳು 
  1. ಮರೆಯದಿರು ಆ ಶಕ್ತಿಯಾ 
  2. ಅಂಗೈಲಿರುವ ರೇಖೆಯು ನುಡಿವುದು
  3. ಕುಡಿ ಬಾಬಾ ಕುಡಿ ಬಾಬಾ
  4. ಎಲ್ಲಾರ ಮನೆಯ ದೋಸೆಯೂ 
ಪಿತಾಮಹ (1985) - ಮರೆಯದಿರು ಆ ಶಕ್ತಿಯ ಮೆರೆಯದಿರು ಮಾನವ
ಸಾಹಿತ್ಯ: ಚಿ.ಉದಯಶಂಕರ್  ಸಂಗೀತ: ಎಂ.ರಂಗ ರಾವ್  ಹಾಡಿದವರು: ಕೆ.ಜೆ.ಯೇಸುದಾಸ್


ಉಂ.. ಉಂ..ಉಂ.. ಆಆಆ....   
ಮರೆಯದಿರು ಆ ಶಕ್ತಿಯ ಮೆರೆಯದಿರು ಮಾನವ
ವಿಧಿಯೆನ್ನುವೆಯೊ ಹರಿಯೆನ್ನುವೆಯೊ ಹರನೆನ್ನುವೆಯೊ
ಮರೆಯದಿರು ಆ ಶಕ್ತಿಯ ಮೆರೆಯದಿರು ಮಾನವ

ನೀರನು ಮೋಡವ ಮಾಡುವ ಶಕ್ತಿ 
ಕರಗಿಸಿ ಮಳೆಯನು ಚೆಲ್ಲುವ ಶಕ್ತಿ (ಆಆಆ.... )
ನೀರನು ಮೋಡವ ಮಾಡುವ ಶಕ್ತಿ 
ಕರಗಿಸಿ ಮಳೆಯನು ಚೆಲ್ಲುವ ಶಕ್ತಿ
ಕಡಲಿಗೆ ನದಿಯನು ಸೆಳೆವ ಶಕ್ತಿ   
ನೆಲದಲಿ ಹಸಿರನು ತುಂಬುವ ಶಕ್ತಿ
ಮರೆಯದಿರು ಆ ಶಕ್ತಿಯ ಮೆರೆಯದಿರು ಮಾನವ

ಕಣ್ಣಲಿ ಬೆಳಕನು ತುಂಬಿದ ಶಕ್ತಿ     
ನಾಲಿಗೆಯಿಂದ ನುಡಿಸುವ ಶಕ್ತಿ.. (ಆಆಆ.... )
ಕಣ್ಣಲಿ ಬೆಳಕನು ತುಂಬಿದ ಶಕ್ತಿ     
ನಾಲಿಗೆಯಿಂದ ನುಡಿಸುವ ಶಕ್ತಿ
ನಿನ್ನಲಿ ಉಸಿರನು ತುಂಬಿದ ಶಕ್ತಿ 
ನಿನ್ನನು ನೆಡೆಸುವ ಕಾಣದ ಶಕ್ತಿ
ಮರೆಯದಿರು ಆ ಶಕ್ತಿಯ ಮೆರೆಯದಿರು ಮಾನವ

ನಾನು ನಾನು ಎನ್ನುವೆಯಲ್ಲ
ಹೆಂಡತಿ ಮಕ್ಕಳು ನಿನ್ನವರಲ್ಲ.. (ಆಆಆ.... )
ನಾನು ನಾನು ಎನ್ನುವೆಯಲ್ಲ
ಹೆಂಡತಿ ಮಕ್ಕಳು ನಿನ್ನವರಲ್ಲ
ನಿನಗು ನನಗು ಯಾವುದು ಇಲ್ಲ
ಆ ಶಕ್ತಿ ಆಡಿಸೊ ಗೊಂಬೆಗಳೆಲ್ಲ
ಮರೆಯದಿರು ಆ ಶಕ್ತಿಯ ಮೆರೆಯದಿರು
ಮಾನವ ಮಾನವ ಮಾನವ
-------------------------------------------------------------------------------------------------------------------------

ಪಿತಾಮಹ (1985) - ಅಂಗೈಲಿರುವ ರೇಖೆಯ ನುಡಿವುದು ಬ್ರಹ್ಮನು ಬರೆದ ಬರಹವನು
ಸಾಹಿತ್ಯ: ಚಿ.ಉದಯಶಂಕರ್ ಸಂಗೀತ: ಎಂ.ರಂಗ ರಾವ್ ಹಾಡಿದವರು: ಎಸ್.ಪಿ.ಬಿ.,  ಕೆ.ಜೆ.ಯೇಸುದಾಸ್


ಆ..ಆ..  ಹೇ..ಹೇ.. ಹೋ.. ಹೋ..
ಪಬಬ..ಪಬಬ..ಪಬಬ..ಬಬ 
ಪಬಬ..ಪಬಬ..ಪಬಬ..ಬಬ 
ಅಂಗೈಲಿರುವ ರೇಖೆಯ ನುಡಿವುದು ಬ್ರಹ್ಮನು ಬರೆದ ಬರಹವನು 
ಹೂಂ... ಅಹ್ಹಹ್ಹಹಹ ತೊಳಲಿ ತುಂಬಿದ ಶಕ್ತಿಯ ಅರಿತವ ಬಾಳುವ ರೀತಿಯ ಬಲ್ಲವನು 
ಓಹೋ... ಅಹ್ಹಹ್ಹಾ... ಅಂಗೈಲಿರುವ ರೇಖೆಯ ನುಡಿವುದು ಬ್ರಹ್ಮನು ಬರೆದ ಬರಹವನು 
ನಾ ಇದೇನೇ ನಂಬಿ ಬಾಳುವೇನೂ 
ಪಂಪಂಪಬಪಬಪಬಂ ಲಾಲಲಲಾ         
ಪಂಪಂಪಬಪಬಪಬಂ ಲಾಲಲಲಾ ಆ.. 
ತೊಳಲಿ ತುಂಬಿದ ಶಕ್ತಿಯ ಅರಿತವ ಬಾಳುವ ರೀತಿಯ ಬಲ್ಲವನು
ನಾ ಇದೇನೇ ನಂಬಿ ಬದುಕುವೆನು
ಹೇ..ಹೇ..ಹೇ   ಆಹಾ ಆಹಾ ಆಹಾಹಾ 

ಬದುಕಿನ ಕಥೆಯಾ ವಿಧಿ ಬರೆದಿರುವಾ 
ನಂಬದೇ ಇರುವಾ ಕಂಬನಿ ಮೀಡಿವಾ 
ಸುಮ್ಮನೇ ಕುಳಿತರೇ ವಿಧಿಯೇ ನಗುವಾ 
ದುಡಿದರೇ ತಾನೇ ಅನ್ನವ ನೀಡುವಾ 
ಅಟ್ಟಡಿಗೆ ಶಿವ ಕೊಟ್ಟರೇ ತಾನೇ 
ಶಿವ ಕೋಡುವುದು ಮಾಡಿದ್ದರೇ ತಾನೇ
ಅಟ್ಟಡಿಗೆ ಶಿವ ಕೊಟ್ಟರೇ ತಾನೇ 
ಶಿವ ಕೋಡುವುದು ಮಾಡಿದ್ದರೇ ತಾನೇ 
ಡೂರ ಹಹ್ಹಹ್ಹಹ್ 
ತೊಳಲಿ ತುಂಬಿದ ಶಕ್ತಿಯ ಅರಿತವ ಬಾಳುವ ರೀತಿಯ ಬಲ್ಲವನು
ನಾ ಇದೇನೇ ನಂಬಿ ಬದುಕುವೆನು 

ಮಣ್ಣನು ಕೊಡಲು ನೀರನು ಕೋಡಲು 
ಬೀಜವ ಬಿತ್ತದೇ ಬೆಳೆಯುವುದೇನು 
ಬೆಳೆದರೇ ಏನೋ ಗಳಿಸಿದರೇನು 
ದೇವರು ಕೊಡದಿರೇ ಏನಿದ್ದೇನೂ 
ಮನಸೊಂದಿದ್ದರೆ ಮಾರ್ಗವು ಉಂಟೂ 
ಆ ಮನದಲ್ಲಿ ದೇವರು ಉಂಟೂ 
ಮನಸೊಂದಿದ್ದರೆ ಮಾರ್ಗವು ಉಂಟೂ 
ಆ ಮನದಲ್ಲಿ ದೇವರು ಉಂಟೂ 
ಹೋಹ್ಹೋ.. ಅಹ್ಹಹ್ಹಾ ಹ್ಹಾ 
ಅಂಗೈಲಿರುವ ರೇಖೆಯ ನುಡಿವುದು ಬ್ರಹ್ಮನು ಬರೆದ ಬರಹವನು 
ನಾ ಇದೇನೇ ನಂಬಿ ಬಾಳುವೇನೂ 
ತೊಳಲಿ ತುಂಬಿದ ಶಕ್ತಿಯ ಅರಿತವ ಬಾಳುವ ರೀತಿಯ ಬಲ್ಲವನು
ನಾ ಇದೇನೇ ನಂಬಿ ಬದುಕುವೆನು 
ಆಆಆಹಾ... ಹೇಹೇ .. ಹೋಹೋ 
ಪಂಪಂಪಬಪಬಪಬಂ 
ಆಆಆಹಾ... ಹೇಹೇ .. ಹೋಹೋ ಹುಂ ಹುಂ 
-------------------------------------------------------------------------------------------------------------------------

ಪಿತಾಮಹ (1985) - ಕುಡಿ ಬಾಬಾ.. ಕುಡಿ ಬಾಬಾ.. ಕುಡಿ ಬಾಬಾ..
ಸಾಹಿತ್ಯ: ಚಿ.ಉದಯಶಂಕರ್ ಸಂಗೀತ: ಎಂ.ರಂಗ ರಾವ್ ಹಾಡಿದವರು: ಎಸ್.ಜಾನಕೀ, ರವಿ
ಗಂಡು : ಕುಡಿ ಬಾಬಾ.. 

ಹೆಣ್ಣು : ಅ ಆ.. 
ಕೋರಸ್ : ಅ ಆ ಇ ಈ   ಉ ಊ ಎ ಏ ಐ  
                ಕುಡಿ ಬಾಬಾ.. ಕುಡಿ ಬಾಬಾ.. ಕುಡಿ ಬಾಬಾ.. 
ಹೆಣ್ಣು : ಅ ಆ.. 
ಕೋರಸ್ : ಕ ಕಾ ಕಿ ಕೀ ಕು ಕೂ ಕೆ ಕೇ 
                ಕುಡಿ ಬಾಬಾ.. ಕುಡಿ ಬಾಬಾ.. ಕುಡಿ ಬಾಬಾ.. 
ಹೆಣ್ಣು : ಅ ಆ ಇ ಈ   ಉ ಊ ಎ ಏ ಐ  
ಕೋರಸ್ : ಕುಡಿ ಬಾಬಾ.. ಕುಡಿ ಬಾಬಾ.. ಕುಡಿ ಬಾಬಾ.. 
ಹೆಣ್ಣು : ಕ ಕಾ ಕಿ ಕೀ ಕು ಕೂ ಕೆ ಕೇ 
ಕೋರಸ್ : ಕುಡಿ ಬಾಬಾ.. ಕುಡಿ ಬಾಬಾ.. ಕುಡಿ ಬಾಬಾ.. 
ಹೆಣ್ಣು : ನನ್ನೀ ಮನಸು   ಕೋರಸ್ : ಕುಡಿ ಬಾಬಾ..
ಹೆಣ್ಣು : ತೂಗಾಡುತಿದೇ ಕೋರಸ್ : ಕುಡಿ ಬಾಬಾ..
ಹೆಣ್ಣು : ನನ್ನೀ ಮನಸು ತೂಗಾಡುತಿದೇ ಉಯ್ಯಾಲೆ ಹಾಗೇ 
ಕೋರಸ್ : ಅ ಆ ಇ ಈ   ಉ ಊ ಎ ಏ ಐ  ಕುಡಿ ಬಾಬಾ.. ಕುಡಿ ಬಾಬಾ.. ಕುಡಿ ಬಾಬಾ.. 
ಕೋರಸ್ : ಕ ಕಾ ಕಿ ಕೀ ಕು ಕೂ ಕೆ ಕೇ ಕುಡಿ ಬಾಬಾ.. ಕುಡಿ ಬಾಬಾ.. ಕುಡಿ ಬಾಬಾ.. 
               ಕುಡಿ ಬಾಬಾ.. ಕುಡಿ ಬಾಬಾ.. ಕುಡಿ ಬಾಬಾ.. (ಬಬ )
               ಕುಡಿ ಬಾಬಾ.. ಕುಡಿ ಬಾಬಾ.. ಕುಡಿ ಬಾಬಾ.. (ಬಬ )
               ಕುಡಿ ಬಾಬಾ.. ಕುಡಿ ಬಾಬಾ.. ಕುಡಿ ಬಾಬಾ.. 
ಕೋರಸ್ : ಪರಪಪ್ಪಪ ಪಪ್ಪಾ  ಓಹೋಹೊಹೋ 
                ಪರಪಪ್ಪಪ ಪಪ್ಪಾ  ಓಹೋಹೊಹೋ 

ಹೆಣ್ಣು : ಹೇ... ಮತ್ತೇರಲೂ ತೂರಾಡಲೂ ಸಂತೋಷದಾ ಕನಸಾಗಲೂ 
ಕೋರಸ್ : ಕುಡಿ ಬಾಬಾ.. ಕುಡಿ ಬಾಬಾ.. ಕುಡಿ ಬಾಬಾ.. (ಹ್ಹ)
               ಕುಡಿ ಬಾಬಾ.. ಕುಡಿ ಬಾಬಾ.. ಕುಡಿ ಬಾಬಾ.. 
ಹೆಣ್ಣು : ಹೇ... ಮತ್ತೇರಲೂ ತೂರಾಡಲೂ ಸಂತೋಷದಾ ಕನಸಾಗಲೂ 
ಗಂಡು : ಬಂದವರಾರು ಹೋಗುವುದಿಲ್ಲಾ ಹೋಗಲು ಇಲ್ಲಿ ದಾರಿಯೇ ಇಲ್ಲಾ 
           ನಂಬಿಕೆ ದ್ರೋಹ ಮಾಡಿದೆ ಜೀವಾ ಅರೆಕ್ಷಣ ಇಲ್ಲಿ ಉಳಿಯುವುದಿಲ್ಲಾ 
ಕೋರಸ್ : ಅ ಆ ಇ ಈ   ಉ ಊ ಎ ಏ ಐ  ಕುಡಿ ಬಾಬಾ.. ಕುಡಿ ಬಾಬಾ.. ಕುಡಿ ಬಾಬಾ.. 
ಕೋರಸ್ : ಕ ಕಾ ಕಿ ಕೀ ಕು ಕೂ ಕೆ ಕೇ ಕುಡಿ ಬಾಬಾ.. ಕುಡಿ ಬಾಬಾ.. ಕುಡಿ ಬಾಬಾ.. 
               ಕುಡಿ ಬಾಬಾ.. ಕುಡಿ ಬಾಬಾ.. ಕುಡಿ ಬಾಬಾ.. (ಬಬ )
               ಕುಡಿ ಬಾಬಾ.. ಕುಡಿ ಬಾಬಾ.. ಕುಡಿ ಬಾಬಾ.. (ಬಬ )
               ಕುಡಿ ಬಾಬಾ.. ಕುಡಿ ಬಾಬಾ.. ಕುಡಿ ಬಾಬಾ.. 
              ಬ್ಯಾಂಗ್..ಬ್ಯಾಂಗ್..ಬ್ಯಾಂಗ್..ಬ್ಯಾಂಗ್..ಬ್ಯಾಂಗ್..  

ಹೆಣ್ಣು : ಆಹಾ.. ಕಹಿಯಲ್ಲಿಯೂ ಸಿಹಿ ಕಾಣಲೂ ಈ ರಾತ್ರಿಯಾ ಸುಖ ನೋಡಲೂ 
               ಕುಡಿ ಬಾಬಾ.. ಕುಡಿ ಬಾಬಾ.. ಕುಡಿ ಬಾಬಾ.. (ಹ್ಹ)
               ಕುಡಿ ಬಾಬಾ.. ಕುಡಿ ಬಾಬಾ.. ಕುಡಿ ಬಾಬಾ.. 
ಹೆಣ್ಣು : ಆಹಾ.. ಕಹಿಯಲ್ಲಿಯೂ ಸಿಹಿ ಕಾಣಲೂ ಈ ರಾತ್ರಿಯಾ ಸುಖ ನೋಡಲೂ 
ಗಂಡು : ಯಾರುವೂ ಇಲ್ಲಿ ಬದುಕುವುದಿಲ್ಲಾ ಧರ್ಮದ ನೆರಳು ಇಲ್ಲಿ ಬೀಳುವುದಿಲ್ಲಾ 
            ದೇವರು ಹಣೆಯಲಿ ಬರೆದ  ಬರಹ ತಿದ್ದಲು ಹೋರಟ ಸೈನಿಕರೆಲ್ಲಾ 
ಕೋರಸ್ : ಅ ಆ ಇ ಈ   ಉ ಊ ಎ ಏ ಐ  ಕುಡಿ ಬಾಬಾ.. ಕುಡಿ ಬಾಬಾ.. ಕುಡಿ ಬಾಬಾ.. 
               ಕ ಕಾ ಕಿ ಕೀ ಕು ಕೂ ಕೆ ಕೇ ಕುಡಿ ಬಾಬಾ.. ಕುಡಿ ಬಾಬಾ.. ಕುಡಿ ಬಾಬಾ.. 
               ಕುಡಿ ಬಾಬಾ.. ಕುಡಿ ಬಾಬಾ.. ಕುಡಿ ಬಾಬಾ.. (ಬಬ )
               ಕುಡಿ ಬಾಬಾ.. ಕುಡಿ ಬಾಬಾ.. ಕುಡಿ ಬಾಬಾ.. (ಬಬ )
               ಕುಡಿ ಬಾಬಾ.. ಕುಡಿ ಬಾಬಾ.. ಕುಡಿ ಬಾಬಾ.. 
ಹೆಣ್ಣು : ಚ ಛ ಜ ಝ ನ್ಯನ್ಯನಿ  ತ ಥ ದ ಧ ನನನೀ 
          ತ ಥ ದ ಧ ನನನೀ  ಪ ಫ ಬ ಭ ಮಮಮ                
ಕೋರಸ್ :  ಜುಂಚಲೀ..ಜುಂಚಲೀ..ಜುಂಚಲೀ..ಜುಂಚಲೀ..ಜುಂಚಲೀ..
ಹೆಣ್ಣು : ಹೇ.....ಆ.... 
-------------------------------------------------------------------------------------------------------------------------

ಪಿತಾಮಹ (1985) - ಎಲ್ಲಾರ ಮನೆಯಾ ದೋಸೆಯು ತೂತೇ ಎನ್ನುವ ಗಾದೆಯು 
ಸಾಹಿತ್ಯ: ಚಿ.ಉದಯಶಂಕರ್ ಸಂಗೀತ: ಎಂ.ರಂಗ ರಾವ್ ಹಾಡಿದವರು: ಎಸ್.ಪಿ.ಬಿ, ಎಸ್.ಜಾನಕೀ,

ಆ..ಆ.. ಹ್ಹಹ್ಹ ಆಆಆ...
ಗಂಡು : ಎಲ್ಲಾರ ಮನೆಯಾ ದೋಸೆಯು ತೂತೇ ಎನ್ನುವ ಗಾದೆಯು ನಿಮಗೆ ಗೊತ್ತೇ.. ಹೇಹೇ.. ಹೇಹೇ
ಕೋರಸ್ : ಎಲ್ಲಾರ ಮನೆಯಾ ದೋಸೆಯು ತೂತೇ ಎನ್ನುವ ಗಾದೆಯು ನಿಮಗೆ ಗೊತ್ತೇ
ಗಂಡು : ನೆಮ್ಮದಿಯನುವುದು ಮಾತಲ್ಲೇ ಎಲ್ಲರ ಕಥೆಯ ನಾ ಬಲ್ಲೇ...

ಗಂಡು : ಆಆಆ... ಪ.. ಪ.. ಪ.. ಪ ಪಕ್ಕದ ಮನೆಯ ಹುಂಹೂಂ ಪ.. ಪ.. ಪಪಪಬ ಪದ್ಮನ ಗಂಡ
            ಪಕ್ಕದ ಮನೆಯ ಪದ್ಮನ ಗಂಡ ಡಾಕ್ಟರ್ (ಆ...ಡಾಕ್ಟರ್)
            ಅವಳ ವ್ಯಥೆಯ ನೀನೇ ಕೇಳು ಶಂಕರ (ಆ..ಶಂಕರ )
            ಅವಳ ಕಥೆಯನು ಗೊತ್ತಾ... (ಹೇಳಿ..ಹೇಳಿ ಕೇಳ್ತಿವೀ )
ಹೆಣ್ಣು : ಅಹ್ಹಹ್ಹಹ ಯಾರನ್ನಾದರೂ ಮದುವೆ ಆಗಿರೀ ಡಾಕ್ಟರ್ ಬೇಡಾ ಡಾಕ್ಟರ್ ಹೋಯ್
          ಡಾಕ್ಟರ್ ಬೇಡಾ ಡಾಕ್ಟರ್
          ಯಾರನ್ನಾದರೂ ಮದುವೆ ಆಗಿರೀ ಡಾಕ್ಟರ್ ಬೇಡಾ ಡಾಕ್ಟರ್ ಅಯ್ಯೋ
          ಡಾಕ್ಟರ್ ಬೇಡಾ ಡಾಕ್ಟರ್
          ಸವಿಮಾತಾಡಲು ಪುರೋಸ್ಸುತ್ತ ಇಲ್ಲಾ (ಹುಂಹುಂಹುಂ )
          ವಾಕಿಂಗ್ ಹೋಗಲು ಟೈಮೇ ಇಲ್ಲಾ ಆಂ... (ಆಹಾಆಹಾಆಹಾ)
          ಸವಿಮಾತಾಡಲು ಪುರೋಸ್ಸುತ್ತ ಇಲ್ಲಾ
          ವಾಕಿಂಗ್ ಹೋಗಲು ಟೈಮೇ ಇಲ್ಲಾ
         ಸಿನಿಮಾ ನಾಟಕ ಬೇಕಾಗಿಲ್ಲಾ ರಾತ್ರಿ ಕೂಡಾ ನೆಮ್ಮದಿಯಿಲ್ಲಾ 
         ಅಯ್ಯಯ್ಯಯೋ.. ರಾತ್ರಿಯೂ ಪೂರಾ ನಿದ್ರೆಯಿಲ್ಲಾ (ಯಾಕೇ ಯಾಕೇ ಹ್ಹ... )
        ಇಂಜೆಕ್ಷನ್ (ಹ್ಹ ) ಚುಚ್ಚುವುದೊಂದೇ (ಚುಚ್ಚುಚ್ಚುಚ್ಹೂ) ಅಯ್ಯೋ ನನಗೆ ಸಾಕಾಯ್ತಲ್ಲಾ
        ಇಂಜೆಕ್ಷನ್ ಚುಚ್ಚುವುದೊಂದೇ ಅಯ್ಯೋ ನನಗೆ ಸಾಕಾಯ್ತಲ್ಲಾ (ಸಾಕಾಯ್ತೇ.. ಒಹೋ)   
ಕೋರಸ್ : ಎಲ್ಲಾರ ಮನೆಯಾ ದೋಸೆಯು ತೂತೇ ಎನ್ನುವ ಗಾದೆಯು ನಿಮಗೆ ಗೊತ್ತೇ..

ಗಂಡು : ಹ್ಹಾಂ... ಲೊಲೊಳಾಯಿ ಆಆಆ... ಹಾ ಹೀ ಹೂ ಹೇಹೇ ಹೈ ಹೊ ಹೋಹೋ ಹೋ
           ಮೂಲೆ ಮನೆಯ ಮಂಗಳೆ ಗಂಡಾ..
          ಮೂಲೆ ಮನೆಯ ಮಂಗಳೆ ಗಂಡ ಡ್ರೈವರ್ (ಆಹಾ ಡ್ರೈವರ್ )
         ಅರೇ ಅವಳ ವ್ಯಥೆಯ ಕಥೆಯ ಕೇಳು ಶೇಖರ.. (ಆಹಾ... ಶೇಖರ )
         ಅವಳ ಕಥೆ ಒಂದು ಹರಿಕಥೆ (ಹೇಳಿ ಹೇಳಿ ಕೇಳೀತೀವಿ)
ಹೆಣ್ಣು : ಯಾರನ್ನಾದರೂ ಮದುವೆ ಆಗಿರೀ ಡ್ರೈವರ್ ಬೇಡಾ ಡ್ರೈವರ್ ಹೋಯ್
         ಡ್ರೈವರ್ ಬೇಡಾ ಡ್ರೈವರ್
         ಯಾರನ್ನಾದರೂ ಮದುವೆ ಆಗಿರೀ ಡ್ರೈವರ್ ಬೇಡಾ ಡ್ರೈವರ್ ಅಯ್ಯೋ
         ಡ್ರೈವರ್ ಬೇಡಾ ಡ್ರೈವರ್ ಅಯ್ಯೋ ಡ್ರೈವರ್ ಬೇಡಾ ಡ್ರೈವರ್
         ಪ್ರೇಮದ ಮಾತಿನ ಪರಿಚಯವಿಲ್ಲಾ (ಡ್ರನ್ ಡ್ರನ್ಟ್ರ)
         ಮೋಹದ ಮೋಡಿ ಹಾಕುವುದಿಲ್ಲಾ (ಡ್ರನ್ ಡ್ರನ್)
         ಪ್ರೇಮದ ಮಾತಿನ ಪರಿಚಯವಿಲ್ಲಾ ಮೋಹದ ಮೋಡಿ ಹಾಕುವುದಿಲ್ಲಾ
         ಮುದ್ದಿಸುವ ಆಸೆಯೂ ಮೊದಲೇ ಇಲ್ಲಾ ಹೆಂಡತಿ ಆಸೆಯೂ ಕೇಳುವುದಿಲ್ಲಾ  
         (ಅಹ್ಹಾಂ)   ಹಾಯ್ ಪೂರ್ತಿ ಪುರಾ ನಿದ್ದೇ ಇಲ್ಲಾ (ಅದ್ಯಾಕಮ್ಮಾ)
        ಪೊಮ್ಮಯ್ಯ ಪೊಮ್ಮಯ್ಯ (ಹ್ಹಾ!) ಹಾರ್ನ್ ಒಂದೇ (ಓಹೋಹೋ)
        ಅಯ್ಯೋ ಕಿವಿಯೇ  ಒಡೆದು ಹೋಯ್ತಲ್ಲಾ
        ಪೊಮ್ಮಯ್ಯ ಪೊಮ್ಮಯ್ಯ ಹಾರ್ನ್ ಒಂದೇ ಅಯ್ಯೋ ಕಿವಿಯೇ  ಒಡೆದು ಹೋಯ್ತಲ್ಲಾ
       (ಓಹೋಹೋ ಹೋಹೋ  ಓಹೋಹೋ ಹೋಹೋ )
ಕೋರಸ್ : ಎಲ್ಲಾರ ಮನೆಯಾ ದೋಸೆಯು ತೂತೇ ಎನ್ನುವ ಗಾದೆಯು ನಿಮಗೆ ಗೊತ್ತೇ

ಗಂಡು : ಓ... ಓಓಓ... ಓಓಓಓ ಬೇಲಿಯ ಮನೆಯ ಭಾವನಿ ಗಂಡ ಪೋಸ್ಟ್ ಮೆನ್ (ಅಹ್ ಪೋಸ್ಟ್ ಮೆನ್ )
          ಅವಳ ವ್ಯಥೆಯ ಕೇಳು ಭಾಯಿ ವಾಮನ್ (ಅಹ್ ವಾಮನ್ ) ಓಹೋಹೊಹೋ 
ಹೆಣ್ಣು :ಓಹೋಹೋ..  ಯಾರನ್ನಾದರೂ ಮದುವೆ ಆಗಿರೀ  ಹ್ಹಾಂ.. ಹ್ಹಾಂ  ಹ್ಹಾಂ
          ಪೋಸ್ಟ್ ಮೆನ್ ಬೇಡಾ ಪೋಸ್ಟ್ ಮೆನ್ ಬೇಡಾ ಬೇಡಾ ಬೇಡಾ ಬೇಡಾ 
         (ಯಾಕೇ ಯಾಕೇ ಯಾಕೇ )
         ಬಿಸಿಲೋ ಮಳೆಯೋ ನೋಡೋದಿಲ್ಲಾ (ಆಹಾಆಹೂಂ  ಆಹಾಆಹೂಂ )
         ಹತ್ತಿದ ಸೈಕಲ್ ಇಳಿಯೋದಿಲ್ಲಾ  (ಆಹಾಆಹೂಂ  ಆಹಾಆಹೂಂ )
         ಬಿಸಿಲೋ ಮಳೆಯೋ ನೋಡೋದಿಲ್ಲಾ ಹತ್ತಿದ ಸೈಕಲ್ ಇಳಿಯೋದಿಲ್ಲಾ 
        ಪ್ರೇಮದ ಪತ್ರ ಹಂಚುವ ಆತ ಪ್ರೇಯಸಿ ಬಯಕೆ ಅರಿಯೊದಿಲ್ಲಾ ರಾತ್ರಿ ಪೂರಾ...ನಿದ್ರೇ.. ಇಲ್ಲಾ 
        (ಅಯ್ಯೋ ನಿದ್ರೇ ಯಾಕೇ ಬರಲಿಲ್ಲಾಯ್) ಠಪ್ಪ  ಠಪ್ಪ (ಹೂಂ) ಠಸ್ಸೆ ಹೊಡೆಯುವಾ (ಅಯ್ಯಯ್ಯೋ) 
        ಸಾಕೋ ಎಂದರೂ  ನಿಲ್ಲಿಸನಲ್ಲಾ   
        ಠಪ್ಪ  ಠಪ್ಪ ಠಸ್ಸೆ ಹೊಡೆಯುವಾ ಸಾಕೋ ಎಂದರೂ  ನಿಲ್ಲಿಸನಲ್ಲಾ (ನಿಲ್ಲಿಸೇ ಇಲ್ವಾ) ಹೂಂಹುಂ 
ಕೋರಸ್ : ಎಲ್ಲಾರ ಮನೆಯಾ ದೋಸೆಯು ತೂತೇ ಎನ್ನುವ ಗಾದೆಯು ನಿಮಗೆ ಗೊತ್ತೇ
                ಎಲ್ಲಾರ ಮನೆಯಾ ದೋಸೆಯು ತೂತೇ ಎನ್ನುವ ಗಾದೆಯು ನಿಮಗೆ ಗೊತ್ತೇ
               ಹೊಯ್ ಹೊಯ್ ಹೊಯ್ ಹೊಯ್ ಹೊಯ್ ಹೊಯ್ ಹೊಯ್ 
------------------------------------------------------------------------------------------------------------------------

No comments:

Post a Comment