448. ಚೂರಿ ಚಿಕ್ಕಣ್ಣ (1969)


ಚೂರಿ ಚಿಕ್ಕಣ್ಣ ಚಿತ್ರದ ಹಾಡುಗಳು 
  1. ಸೈಕಲ್ ಮೇಲೆ ಬಂದ 
  2. ಕಾರನೇರಿ ಬಂದ 
  3. ಮೆಲ್ಲಗೆ ನಡೆ ಮೆಲ್ಲಗೆ 
  4. ನೀ ಮೊದಲು ಮೊದಲು 
  5. ಮಾದಯ್ಯ ಬಂದೆಯಾ 
  6. ಕೇಳೇ ಕೇಳೇ ನನ್ನ ಕಥೆ ಹೇಳುವೆ 
ಚೂರಿ ಚಿಕ್ಕಣ್ಣ (1969)
ಸಾಹಿತ್ಯ: ಚಿ.ಉದಯಶಂಕರ್ ಸಂಗೀತ: ಸತ್ಯಂ ಹಾಡಿದವರು: ಪಿ.ಬಿ.ಶ್ರೀನಿವಾಸ್

ಮೆಲ್ಲಗೆ ನಡೆ ಮೆಲ್ಲಗೆ ಈ ಕೋಪವೇಕೆ ಚಿನ್ನಾ
ಮಲ್ಲಿಗೆ ನನ್ನ ಮಲ್ಲಿಗೆ  ಈ ತಾಪವೇನು ಚೆನ್ನ
ಮೆಲ್ಲಗೆ ನಡೆ ಮೆಲ್ಲಗೆ   ಈ ಕೋಪವೇಕೆ ಚಿನ್ನಾ
ಮಲ್ಲಿಗೆ ನನ್ನ ಮಲ್ಲಿಗೆ  ಈ ತಾಪವೇನು ಚೆನ್ನ
ನಿನ್ನ ಕಣ್ಣು ನಿನ್ನನ್ನು  ಮೋಸ ಮಾಡೆ ನನ್ನನ್ನು
ದೂರ ತಳ್ಳಿ ಹೋಗೋದು ನ್ಯಾಯವೇನು
Stop. Right Turn.
ಮೆಲ್ಲಗೆ ನಡೆ ಮೆಲ್ಲಗೆ  ಈ ಕೋಪವೇಕೆ ಚಿನ್ನಾ
ಮಲ್ಲಿಗೆ ನನ್ನ ಮಲ್ಲಿಗೆ  ಈ ತಾಪವೇನು ಚೆನ್ನ

ಏನೇ ಓದಲೇನು  ಜಾಣೇ ಆದರೇನು
ಏನೇ ಹೇಳಲೇನು  ಹೆಣ್ಣೇ ತಾನೆ ನೀನು
ಬೆರೆತ ಹಾಲು ಜೇನು  ಕಹಿಯಾಗ ಬಲ್ಲದೇನು
ಘಲ್ ಘಲ್ ಗೆಜ್ಜೆ ತಾಳಕ್ಕೆ  ಝಲ್ ಝಲ್ ಬಳೆಯ ಮೇಳಕ್ಕೆ
ದೂರ ದೂರ ಓಡೋದು ಸರಿಯೇನು
Stop. Left Turn.
ಮೆಲ್ಲಗೆ ನಡೆ ಮೆಲ್ಲಗೆ ಈ ಕೋಪವೇಕೆ ಚಿನ್ನಾ
ಮಲ್ಲಿಗೆ ನನ್ನ ಮಲ್ಲಿಗೆ  ಈ ತಾಪವೇನು ಚೆನ್ನ

ಬಾಳ ದೋಣಿಯಲ್ಲಿ  ನೀನೇ ನನ್ನ ಜೋಡಿ
ನಾನು ನಿನ್ನ ಕೂಡಿ  ಪ್ರೇಮ ಗಾನ ಹಾಡಿ
ಪಯಣ ಹೋಗಲೆಂದು ನಾ ಬಂದೆ ನಿನ್ನ ಹಿಂದೆ
ಥೈಯ್ಯ ಥಕ್ಕ ಥೈ ಥೈ ಥೈ  ಥಥೈ ಧಿಮ್ಮಿ ಮೈ ಮೈ ಮೈ
ನಿಲ್ಲು ನಿಲ್ಲು ಹೈ ಹೈ ಎ, ಓ ಚೆಲುವೆ
Stop. above Turn.
(ಸೀಟಿ ಶಬ್ದ)..    ಈ ಕೋಪವೇಕೆ ಚಿನ್ನಾ
(ಸೀಟಿ ಶಬ್ದ)...ಈ ತಾಪವೇನು ಚೆನ್ನ
(ಸೀಟಿ ಶಬ್ದ).. ಈ ಕೋಪವೇಕೆ ಚಿನ್ನಾ
(ಸೀಟಿ ಶಬ್ದ)...ಈ ತಾಪವೇನು ಚೆನ್ನ
-----------------------------------------------------------------------------------------------------------------------

ಚೂರಿ ಚಿಕ್ಕಣ್ಣ (1969)
ಸಾಹಿತ್ಯ: ಚಿ.ಉದಯಶಂಕರ್ ಸಂಗೀತ: ಸತ್ಯಂ ಹಾಡಿದವರು: ಪಿ.ಬಿ.ಶ್ರೀನಿವಾಸ್, ಲತಾ


ಗಂಡು : ನೀ ಮೊದಲು ಮೊದಲು ನನ್ನ ನೋಡಿದಾಗ, ಏನು ಹೇಳಿತು
            ನೀ ಮೊದಲು ಮೊದಲು ನನ್ನ ನೋಡಿದಾಗ, ಏನು ಹೇಳಿತು
ಹೆಣ್ಣು :  ಈ ಸೊಗಸುಗಾರ ಜಾಣನಾದರು  ತುಂಟನೆಂದಿತು ಮನಸು ತುಂಟನೆಂದಿತು
            ನೀ ಮೊದಲು ಮೊದಲು ನನ್ನ ನೋಡಿದಾಗ, ಏನು ಹೇಳಿತು
ಗಂಡು : ಈ ಸೊಗಸುಗಾತಿ ಜಾಣೆಯಾದರು  ತುಂಟಿಯೆಂದಿತು ಮನಸು ತುಂಟಿಯೆಂದಿತು
           ಓಓಓ ಓಓಓ     ಹೆಣ್ಣು : ಓಓಓ... ಓಓಓ

ಗಂಡು : ಈ ಹೂವ ಕೆನ್ನೆಯು ಏಕೆ ಚೆಲುವೆ, ಕೆಂಪಗಾಯಿತು
           ಈ ಹೂವ ಕೆನ್ನೆಯು ಏಕೆ ಚೆಲುವೆ, ಕೆಂಪಗಾಯಿತು
ಹೆಣ್ಣು :  ನಿನ್ನ ಬಿಸಿಯ ಉಸಿರಿನ ಕಾವಿನಿಂದ ಹಣ್ಣಾಯಿತು,
           ಕೆನ್ನೆ ಹಣ್ಣಾಯಿತು
ಗಂಡು : ಚೆಂದುಟಿಗಳ ಮೇಲೆ ಹುಸಿನಗೆ ಏಕೆ, ತೇಲುತಿರುವುದು
ಹೆಣ್ಣು : ನನ್ನಾ ಎದೆಯ ಆಸೆ ಈ ನಗೆಯ ರೂಪ ಹೊಂದಿತು, ರೂಪ ಹೊಂದಿತು
ಗಂಡು : ನೀ ಮೊದಲು ಮೊದಲು ನನ್ನ ನೋಡಿದಾಗ, ಏನು ಹೇಳಿತು
ಹೆಣ್ಣು :  ಈ ಸೊಗಸುಗಾರ ಜಾಣನಾದರು  ತುಂಟನೆಂದಿತು ಮನಸು ತುಂಟನೆಂದಿತು

ಗಂಡು : ನಾ ಮರೆಯಲಾರದ ಕಾಣಿಕೆಯೊಂದ, ಮನಸು ಬೇಡಿದೆ
            ನಾ ಮರೆಯಲಾರದ ಕಾಣಿಕೆಯೊಂದ, ಮನಸು ಬೇಡಿದೆ
ಹೆಣ್ಣು :  ನಸು ನಾಚಿಕೆ ನನ್ನ ತಾಳು ತಾಳು ಎಂದು ತಡೆದಿದೆ, ನನ್ನ ತಡೆದಿದೆ
ಗಂಡು : ನೀ ಬಿಡು ಬಿಡು ನಾಚಿಕೆ ಏಕಾಂತವಿದು, ಯಾರ ಭಯವಿದೆ
ಹೆಣ್ಣು : ಇನ್ನು ಮಾತು ಸಾಕು ಸಿಹಿ ಜೇನು ಕಾದಿದೆ....
          ಶೋತೃಗಳಲ್ಲಿ ವಿನಂತಿ ವಿದ್ಯುಚ್ಛಕ್ತಿ ತೊಂದರೆಯಿಂದಾಗಿ
          ನಮ್ಮ ಪ್ರಸಾರ ಕಾರ್ಯಕ್ರಮಕ್ಕೆ ಅಡಚಣೆ ಉಂಟಾದಕ್ಕಾಗಿ
          ಕ್ಷಮಾಪಣೆ ಕೇಳುತ್ತೇವೆ..
 ಗಂಡು : ಈ ಸೊಗಸುಗಾತಿ ಜಾಣೆಯಾದರು ತುಂಟಿಯೆಂದಿತು ಮನಸು ತುಂಟಿಯೆಂದಿತು
           ಓಓಓ ಓಓಓ     ಹೆಣ್ಣು : ಓಓಓ... ಓಓಓ ಇಬ್ಬರು : ಹೂಂ... ಹೂಂ..ಹೂಂ
--------------------------------------------------------------------------------------------------------------------------

ಚೂರಿ ಚಿಕ್ಕಣ್ಣ (1969)
ಸಾಹಿತ್ಯ: ಚಿ.ಉದಯಶಂಕರ್ ಸಂಗೀತ: ಸತ್ಯಂ ಹಾಡಿದವರು: ಪಿ.ಬಿ.ಶ್ರೀನಿವಾಸ್


ಏಯ್.. ಕಾರನೇರಿ ಬಂದ ನನ್ನ ಬ್ಯುಟೀ
ಏಕೋ ಏನೋ ನನ್ನ ಕಂಡು ಹಾಟಿ
ದಾರಿಯಲ್ಲಿ ಬಂದಾಗ ಮಾತನಾಡೆ ನಿಂತಾಗ
ಬೈದಾಡುವುದು ಏನೂ ಡ್ಯೂಟಿ..
ಬ್ಯೂಟೀ  ಈ ಗಂಡು ನಿನಗಿಂತ ಘಾಟೀ
ಯ್ಯಾ ಯ್ಯಾ ಯ್ಯಾ ಯ್ಯಾಯ್ಯಾ ಮೇಡಂ...
ಯ್ಯಾ ಯ್ಯಾ ಯ್ಯಾ ಯ್ಯಾಯ್ಯಾ ಮೇಡಂ
ಏಯ್.. ಕಾರನೇರಿ ಬಂದ ನನ್ನ ಬ್ಯುಟೀ
ಏಕೋ ಏನೋ ನನ್ನ ಕಂಡು ಹಾಟಿ

ಸಿಡುಕಿನ ಹೆಣ್ಣನ್ನು ಕಂಡಾಗ ಹೆದರುವನಲ್ಲ ಈ ಹುಡುಗ
ಥಳುಕಿನ ಹೆಣ್ಣೊಂದು ಬಂದಾಗ ಮರುಳಾಗನು ಈ ನವಯುವಕ
ತಾಳು ನಿನ್ನ ನಾನು ಸುಧಾರಿಸುವೇ
ನೋಡು ನಿನ್ನ ಹೇಗೆ ಸತಾಯಿಸುವೆ
ಯೂ..  ಯೂ.. ಯೂ.. ಮೇಡಂ
ಕಾರನೇರಿ ಬಂದ ನನ್ನ ಬ್ಯುಟೀ
ಏಕೋ ಏನೋ ನನ್ನ ಕಂಡು ಹಾಟಿ

ಗಂಡಂತೆ ವೇಷವ ಧರಿಸಿದರೇ
ಅಬಲೆಯು ಪ್ರಬಲಳು ಆಗುವಳೇ
ನನ್ನಂತ ವೀರನು ಜೊತೆಯಲಿರೆ
ಹೊಸ ಕಳೆ ಹೆಣ್ಣಿಗೆ ನೀ ಕೇಳೇ
ಕೇಳಿದ್ದೆಲ್ಲಾ ಕೊಟ್ಟು ಸುಧಾರಿಸುವೆ
ಕಾಣದಂಥ ಸ್ವರ್ಗ ನಾ ತೋರಿಸುವೆ
ಹಲೋ ಹಲೋ ಹಲೋ ಮೇಡಂ
ಕಾರನೇರಿ ಬಂದ ನನ್ನ ಬ್ಯುಟೀ
ಏಕೋ ಏನೋ ನನ್ನ ಕಂಡು ಹಾಟಿ
ದಾರಿಯಲ್ಲಿ ಬಂದಾಗ ಮಾತನಾಡೆ ನಿಂತಾಗ
ಬೈದಾಡುವುದು ಏನೂ ಡ್ಯೂಟಿ..
ಬ್ಯೂಟೀ  ಈ ಗಂಡು ನಿನಗಿಂತ ಘಾಟೀ
ಯ್ಯಾ ಯ್ಯಾ ಯ್ಯಾ ಯ್ಯಾಯ್ಯಾ ಮೇಡಂ...
ಯ್ಯಾ ಯ್ಯಾ ಯ್ಯಾ ಯ್ಯಾಯ್ಯಾ ಮೇಡಂ
-------------------------------------------------------------------------------------------------------------------------

ಚೂರಿ ಚಿಕ್ಕಣ್ಣ (1969)
ಸಾಹಿತ್ಯ: ಚಿ.ಉದಯಶಂಕರ್ ಸಂಗೀತ: ಸತ್ಯಂ ಹಾಡಿದವರು: ಎಲ್.ಆರ್.ಈಶ್ವರಿ 


ಓಹ್...  ಮಾದಯ್ಯ .. ಬಂದೆಯಾ ಕುಶಲವೇ ಹೇಳಯ್ಯಾ
ಅತ್ತೆಯ ಮಗಳಿಗೆ ಕಾಣಿಕೆ ತಂದೆಯಾ
ನಿನ್ನೇ ವರಿಸುವೇ ಏಯ್...  ಬಾ...
ಸುಖವ ನೀಡುವೆ ಆಂ... ಹೂಂ ...
ಮಾದಯ್ಯ ಬಂದೆಯಾ ಕುಶಲವೇ ಹೇಳಯ್ಯಾ
ಅತ್ತೆಯ ಮಗಳಿಗೆ ಕಾಣಿಕೆ ತಂದೆಯಾ

ರಾತ್ರಿಯಾ...  ವೇಳೆಯಾ...  ತಣ್ಣನೇ ಗಾಳಿಯಾ
ರಾತ್ರಿಯಾ...  ವೇಳೆಯಾ...  ತಣ್ಣನೇ ಗಾಳಿಯಾ
ಚಳಿ ಚಳಿ ಮೈಯಲಿ ತುಂಬಿದೆ  ಆಸೆಯಾ
ಸರಸಕೆ... ಬಾರೆಯಾ... ಹರುಷವ ನೀಡಯ್ಯಾ
ಮಾದಯ್ಯ ಬಂದೆಯಾ ಕುಶಲವೇ ಹೇಳಯ್ಯಾ
ಅತ್ತೆಯ ಮಗಳಿಗೆ ಕಾಣಿಕೆ ತಂದೆಯಾ

ಕಾತರ ಕಣ್ಣಲಿ ಆತುರ ಮನದಲಿ
ಕಾತರ ಕಣ್ಣಲಿ ಆತುರ ಮನದಲಿ
ಯೌವ್ವನ ಎದೆಯಲಿ ಸುಖವಿದೆ ನನ್ನಲ್ಲಿ
ಅಧರದ...  ಮಧುವಲಿ...  ಮತ್ತಿದೇ ನೋಡಯ್ಯಾ
ಮಾದಯ್ಯ ಬಂದೆಯಾ ಕುಶಲವೇ ಹೇಳಯ್ಯಾ
ಅತ್ತೆಯ ಮಗಳಿಗೆ ಕಾಣಿಕೆ ತಂದೆಯಾ
ನಿನ್ನೇ ವರಿಸುವೇ ಏಯ್ ಬಾ...
ಸುಖವ ನೀಡುವೆ ಆಂ... ಹೂಂ ...
ಲಾಲಲಾ... ಲಾಲಲಾ... ಲಾಲಲಾ... ಲಾಲಲಾ... 
ಲಾಲಲಾ... ಲಾಲಲಾ... ಲಾಲಲಾ... ಲಾಲಲಾ...
-------------------------------------------------------------------------------------------------------------------------

ಚೂರಿ ಚಿಕ್ಕಣ್ಣ (1969)
ಸಾಹಿತ್ಯ: ಚಿ.ಉದಯಶಂಕರ್ ಸಂಗೀತ: ಸತ್ಯಂ ಹಾಡಿದವರು: ಎಲ್.ಆರ್.ಈಶ್ವರಿ, ಎಸ್.ಜಾನಕೀ  


ಏ... ಸೈಕಲ್ ಮೇಲೆ ಬಂದ ನಮ್ಮ ಮೈನರ್
ಈ ದಾರಿಗೆಲ್ಲಾ ನೀನೇ ಏನೋ  ಓನರ್
ಹೆಣ್ಣೊಂದು ನೋಡಿ ನೋಡಿ ಬಂದಿಲ್ಲಿ ಕಾಡಿ ಕಾಡಿ
ಕಾದಾಡದಿರು ನೀ ಡೇಂಜರ್ ಹೂಂಹೂಂ
ಕಾದಾಡದಿರು ನೀ ಡೇಂಜರ್
ಯ್ಯಾ ಯ್ಯಾ ಯ್ಯಾ ಮಿಸ್ಟರ್ ಯು ಯು ಯು ಮಿಸ್ಟರ್
ಸೈಕಲ್ ಮೇಲೆ ಬಂದ ನಮ್ಮ ಮೈನರ್
ಈ ದಾರಿಗೆಲ್ಲಾ ನೀನೇ ಏನೋ  ಓನರ್

ಗಂಡಿನ ನೋಟಕ್ಕೆ ನಸುನಾಚಿ ಮೌನದಿ ನಿಲ್ಲಲು ಈ ಹುಡುಗಿ
ಅಬಲೆಯ ಹೆಣ್ಣೆಂದು ಶಿರ ಬಾಗಿ  ಹಿಂದಕೆ ನಡೆಯಳು ಈ ಬೆಡಗಿ
ಆಂ..  ಕಾಲ ಇಂದು ತುಂಬಾ ಸುಧಾರಿಸಿದೇ.. ಯ್ಯಾ.. ಯ್ಯಾ..
ಓಡು ಬೇಗ ನಮ್ಮ ಸತಾಯಿಸದೇ  ಯು ಯು ಯು ಮಿಸ್ಟರ್
ಸೈಕಲ್ ಮೇಲೆ ಬಂದ ನಮ್ಮ ಮೈನರ್
ಈ ದಾರಿಗೆಲ್ಲಾ ನೀನೇ ಏನೋ  ಓನರ್

ಸೀರೆಯ ಬಟ್ಟೇಲಿ ಬುಷ್ ಶರ್ಟ್ ಕೊಳಾಯಿ ಕೊಳವೆಯ  ಟೈ ಪ್ಯಾಂಟು
ಸಿನಿಮಾ ಹೀರೋನ ಡ್ರಾಫ್ಟ್ ಕ್ರಾಫ್ಟ್ ಬಲ್ಲೆನು ಶೋಕಿಯ ಒಳಗುಟ್ಟು
ಲ್ಲಲ್ಲ.. ಓದುಗಿದಿಗೆಲ್ಲಾ  ತಿಲಾಂಜಲಿಯೇ
ಬೀದಿ ರೋಮಿಯೋಗೆ ಇದೇ ಗತಿಯೇ.. ಯು ಯು ಯು ಮಿಸ್ಟರ್
ಸೈಕಲ್ ಮೇಲೆ ಬಂದ ನಮ್ಮ ಮೈನರ್
ಈ ದಾರಿಗೆಲ್ಲಾ ನೀನೇ ಏನೋ  ಓನರ್
ಹೆಣ್ಣೊಂದು ನೋಡಿ ನೋಡಿ ಬಂದಿಲ್ಲಿ ಕಾಡಿ ಕಾಡಿ
ಕಾದಾಡದಿರು ನೀ ಡೇಂಜರ್ ಹೂಂಹೂಂ
ಕಾದಾಡದಿರು ನೀ ಡೇಂಜರ್
ಯು ಯು ಯು ಮಿಸ್ಟರ್ ಯ್ಯಾ ಯ್ಯಾ ಯ್ಯಾ ಮಿಸ್ಟರ್
-------------------------------------------------------------------------------------------------------------------------

ಚೂರಿ ಚಿಕ್ಕಣ್ಣ (1969)
ಸಾಹಿತ್ಯ: ಚಿ.ಉದಯಶಂಕರ್ ಸಂಗೀತ: ಸತ್ಯಂ ಹಾಡಿದವರು: ಪಿ.ಬಿ.ಶ್ರೀನಿವಾಸ್, ರತ್ನಾಕರ್ 


ಹಯ್ಯಾ... ಕೇಳೇ ಕೇಳೇ ನನ್ನ ಕಥೆ ಹೇಳುವೇ
ನನ್ನ ಕಥೆ ಕೇಳಿದ ಮ್ಯಾಲೇ ನೀನೆ ಒಲಿವೆ
ಕೇಳೇ ಕೇಳೇ ನನ್ನ ಕಥೆ ಹೇಳುವೇ
ನನ್ನ ಕಥೆ ಕೇಳಿದ ಮ್ಯಾಲೇ ನೀನೆ ಒಲಿವೆ
ಕಥೆ ಕೇಳಿದ ಮ್ಯಾಲೇ ನೀನೆ ಒಲಿವೆ ಚೆಲುವೇ
ಮರದುವೆಯಾಗಿ ನನ್ನೊಡನೆ ಥೈ ಥಕ ಕುಣಿವೇ
ನನ್ನ ಮದುವೆಯಾಗಿ ನನ್ನೊಡನೆ ಥೈ ಥಕ ಕುಣಿವೇ
ಥೈ ತಕ ತಕತಕ  ಥೈ ತಕ ತಕತಕ ಡುಂಕಿನಕ 
ನಕ್ತಿನಕ ಫಲೇ ಫಲೇ ಫಲಕ ಚಮಕ ಸುಂಯ್

ಅಹ್.. ಹಗಲನ್ನು ಕಂಡರೇ.....
ಚಿನ್ನ ನನಗೆ ಹಗಲನ್ನು  ಕಂಡರೇ ತುಂಬಾ ಭಯ ಕಣೇ
ಹೊರಗೆ ತಲೆಯ ಹಾಕೇನೇ ಬಿಸಿಲ ಕಂಡ ಅರಿಯನೇ
ಕತ್ತಲೆಂದರೇ ನನಗೇ....
ಚಿನ್ನ ಕತ್ತಲೆಂದರೇ ನನಗೆ ತುಂಬಾ ಇಷ್ಟ ಕಣೇ
ಬೀದಿ ಬೀದಿ ಅಲೆವನೇ ಮೀಸೆ ತಿರುವಿ ಮೆರೆವೆನೇ
ಎಂಥ ಮನೆಯೇ ಆಗಿರಲೀ.... 
ಎಂಥ ಮನೆಯೇ ಆಗಿರಲೀ ಕನ್ನ ಹಾಕುವೇ
ಇಲ್ಲ ಬೀಗ ಮುರಿಯುವೇ ಬಿಡದೇ ಎಲ್ಲ ದೋಚುವೇ
ರೇಗಿದರೇ ಸೊಂಟ ಮುರಿಯುವೇ
ಇಲ್ಲಾ  ಬರ್ತಿಯಾ ಒಂದ್  ಕೈ ನೋಡತಿಯಾ
ಪಟಪಟ ಚಟಚಟ ಲಟಲಟ  ಪಟಪಟ ಚಟಚಟ ಲಟಲಟ
ಪಟಪಟ ಚಟಚಟ ಲಟಲಟ ಕಚಕ್ ಕಚಕ್ ಕಚಕ್
ರತ್ನಾಕರ : ಹಾಗಾದರೇ ನೀನೊಬ್ಬ ಪಕ್ಕಾ ಕಳ್ಳ ತಾನೇ (ಹೌದು)
                ದೊಡ್ಡ ಸುಳ್ಳಾ ತಾನೇ (ಹೌದೇ  ಸತ್ಯ ನಿನ್ನಾಣೆ )
                ಅಯ್ಯೋ ಈಗ ನನ್ನೆಲ್ಲಿಗೆ ಕರಕೊಂಡ ಹೋಗ್ತಿಯಾ (ಮನೆಗೆ)
                ಎಲ್ಲಿದೇ ನನ್ನ ಮನೆ (ಅಹ್ಹಹ್ಹಹಾ ಅಹ್ಹಹ್ಹಹಾ .... ಕೇಳೇ)

ಪಿ.ಬಿ.: ಊರುರಲಿ ನಮಗಾಗಿ...   ಊರುರಲಿ ನಮಗಾಗಿ ದೊಡ್ಡ ಮನೆ ಇದೆ
          ಕೊಡಿ ಸವಾಲದಕಿದೆ  ಒಳಗೆ ಭಾರಿ  ಮಜವಿದೆ... ಒಳಗೆ ಭಾರಿ  ಮಜವಿದೆ 
ರತ್ನಕರ: ಜೈಲಲ್ಲಿ ಇರಬೇಕಾದವನು ಇಲ್ಲಿಗೆ ಯಾಕೆ ಬಂದೆ ನನ್ನ ಹೊಟ್ಟೆ ಉರಿಸೋಕೆ
ಪಿ.ಬಿ.: ಇಲ್ಲಾ ಕಣೇ... ನಿನ್ನ ಆಸೆಗೇ ದೋಸೆಹೊಯ್
          ಭಾರಿ ಕೇಡಿ ಒಬ್ಬ ಇದ್ದ ಓಡಿ ಬಂದೇನೇ ಅವನ ಹಿಡಿಯ ಬಂದೆನೆ
           ಆಗ ನಿನ್ನ ಕಂಡೆನೆ ಮೋಹಗೊಂಡೇನೇ ನಾನು ಮೋಹಗೊಂಡೆನೆ
ರತ್ನಾಕರ : ಆ ಕೇಡಿ ನಿನ್ ಕೈಗೆ ಸಿಕ್ತಾನಾ (ಸಿಗದೇ ಇದ್ರೇ ಬಿಡೋರು ಯಾರೇ)
ಪಿ.ಬಿ.: ಅಹ್ಹಹ್ಹ.. ವೇಷ ಕಂಡು ಮೋಸ ಹೋಗೋ ಮಂಕನಲ್ಲವೇ
         ಕಳ್ಳ ನನ್ನ ಮಗನ  ಹಿಡಿವ ಛಲವ ಬಿಡುವುದಿಲ್ಲವೇ (ಹಾಂ.. )
         ನಟನೆಯಲ್ಲಿ...  ನಟನೆಯಲ್ಲಿ ಅವನಗಿಂತ ನಿಸ್ಸಿಮ ನಾನೇ
         ಭಾರಿ ನಟ ನಾ ಕಣೇ ನಾನೇ ರಾಜಾಕಳ್ಳ ಕಣೇ
         ನೂರು ಕೆರೆಯ ನೀರು ಕುಡಿದು ಬಂದವ ನಾನೇ
        ಅವನ ಸುಮ್ನೆ ಬಿಡುವೆನೇ  ನೀರ ಕುಡಿಸದಿರುವೆನೇ
       ಶಿವ ಅಂತಾ ಜಮಾಯಿಸಿ ಬಿಡ್ತೀನಿ ಎಲೇ... (ಹಾಂ)
       ಅವನ ಗುಟ್ಟು ಗಿಟ್ಟನೆಲ್ಲಾ ರಟ್ಟು ಮಾಡುವೇ ಅಂಥ ಪಟ್ಟು ತೋರುವೇ
       ಅವನ ಮಟ್ಟ ಹಾಕುವೇ ಬಚ್ಚಿಟ್ಟ ಬಂಗಾರವ....
       ಚಿನ್ನ ಬಚ್ಚಿಟ್ಟ ಬಂಗಾರವ ಹೊರಗೆ ತೆಗಿಸುವೇ ಬಡಿದು ನಿಜವ ನುಡಿಸುವೇ
       ಕೈಗೆ ಕೋಳ ತೊಡಿಸುವೇ (ಹುಂಹುಂಹ್ಹುಂ) ನೀ ಯಾಕೆ ಅಳ್ತಿ ಸದಾರಮೆ
       ಹೆದರದಿರು ನಿನ್ನ ನಾನು ಮದುವೆಯಾಗುವೇ ಆಗಿ ಸುಖದಲಿ ಇರಿಸುವೇ
        ಪಿಪಿಪಿಪಿಪ್ಪಿಪ್ಪಿಪ್ಪಿ  ಪಿಪಿಪಿಪಿಪ್ಪಿಪ್ಪಿಪ್ಪಿ ತಿಲ್ಲಾ ಲಂಗಡಿ ಲೇಲೋ..
       ಲಕಿ ಲಕಾ ಜಪಟ ಲಕಾ  ಜಪಟ ಲಕಾ ಜಪಟ ಲಕಾ ಲಪಟ ಜಕಾ ಲಫಾ
-------------------------------------------------------------------------------------------------------------------------
    










No comments:

Post a Comment