449. ವೀರ ಕೇಸರಿ (1963)



ವೀರಕೇಸರಿ ಚಿತ್ರದ ಹಾಡುಗಳು 
  1. ಮೆಲ್ಲುಸಿರೇ ಸವಿಗಾನ 
  2. ಸ್ವಾಭಿಮಾನದ ನಲ್ಲೆ 
  3. ಹರೇ ಉಕ್ಕಿದೆ 
  4. ದುಂಡು ಮಲ್ಲೆ 
  5. ಓ ನಾಮ ಬಾರದ 
  6. ರಾಮಲಕ್ಷ್ಮಣರು 
  7. ಎಲ್ಲಾ ನಿನಗಾಗೇ 
  8. ಪ್ರಜಾರ ಮಾತನು 
ವೀರ ಕೇಸರಿ (1963) - ಮೆಲ್ಲುಸಿರೇ ಸವಿಗಾನ
ಸಂಗೀತ: ಘಂಟಸಾಲ ಸಾಹಿತ್ಯ: ಕಣಗಾಲ ಪ್ರಭಾಕರ ಶಾಸ್ತ್ರಿ ಗಾಯನ : ಪಿ. ಸುಶೀಲ, ಘಂಟಸಾಲ 

ಮೆಲ್ಲುಸಿರೇ ಸವಿಗಾನ ಎದೆ ಝಲ್ಲನೆ ಹೂವಿನ ಬಾಣ... ಪ್ರಿಯಾ!ಮೆಲ್ಲುಸಿರೇ ಸವಿಗಾನ  ಎದೆ ಝಲ್ಲನೆ ಹೂವಿನ ಬಾಣ
ಮನದಾಸೆ ದೂಡಿದ ಬಯಕೆ  ಕನಸಾಗಿ ಕಾಡುವುದೇಕೆ?
ಮನದಾಸೆ ದೂಡಿದ ಬಯಕೆ  ಕನಸಾಗಿ ಕಾಡುವುದೇಕೆ?
ಮಧುಮಂಚಕೆ ವಿಧಿಅಂಜಿಕೆ  ಅದಕೇತಕೆ ಅಂಜಿಕೆ ಶಂಕೆ
ಮೆಲ್ಲುಸಿರೇ ಸವಿಗಾನ  ಎದೆ ಝಲ್ಲನೆ ಹೂವಿನ ಬಾಣ

ವಿರಹಾಗ್ನಿ ನಿನ್ನೆದೆ ಸುಡಲು   ಬೆಳದಿಂಗಳಾಯಿತು ಬಿಸಿಲು
ವಿರಹಾಗ್ನಿ ನಿನ್ನೆದೆ ಸುಡಲು   ಬೆಳದಿಂಗಳಾಯಿತು ಬಿಸಿಲು
ಹೋರಾಡಿದೆ ಹಾರಾಡಿದೆ  ಹಾರೈಸಿ ಪ್ರೇಮದ ಹೊನಲು
ಮೆಲ್ಲುಸಿರೇ ಸವಿಗಾನ ಎದೆ ಝಲ್ಲನೆ ಹೂವಿನ ಬಾಣ

ಈ ದೇಹ ರಸಮಯ ಸದನ   ಈ ಮೇಹ ಮಧುಸಂಗ್ರಹಣ
ಈ ದೇಹ ರಸಮಯ ಸದನ   ಈ ಮೇಹ ಮಧುಸಂಗ್ರಹಣ
ಚಿರನೂತನ ರೋಮಾಂಚನ  ದಾಂಪತ್ಯದ ಅನುಸಂಧಾನ
ಮೆಲ್ಲುಸಿರೇ ಸವಿಗಾನ  ಎದೆ ಝಲ್ಲನೆ ಹೂವಿನ ಬಾಣ
--------------------------------------------------------------------------------------------------------------------------

ವೀರ ಕೇಸರಿ (೧೯೬೩) - ಸ್ವಾಭಿಮಾನದ ನಲ್ಲೆ, 
ಸಂಗೀತ: ಘಂಟಸಾಲ ಸಾಹಿತ್ಯ : ಕು. ರ. ಸೀತಾರಾಮ ಶಾಸ್ತ್ರಿ  ಗಾಯನ : ಪಿ. ಬಿ. ಶ್ರೀನಿವಾಸ್

ಸ್ವಾಭಿಮಾನದ ನಲ್ಲೆ, ಸಾಕು ಸಂಯಮ ಬಲ್ಲೆ
ಸ್ವಾಭಿಮಾನದ ನಲ್ಲೆ, ಸಾಕು ಸಂಯಮ ಬಲ್ಲೆ
ಹೊರಗೆ ಸಾಧನೆ, ಒಳಗೆ ವೇದನೆ, ಇಳಿದು ಬಾ ಬಾಲೆ
ಸ್ವಾಭಿಮಾನದ ನಲ್ಲೆ, ಸಾಕು ಸಂಯಮ ಬಲ್ಲೆ
ಹೊರಗೆ ಸಾಧನೆ, ಒಳಗೆ ವೇದನೆ, ಇಳಿದು ಬಾ ಬಾಲೆ
ಸ್ವಾಭಿಮಾನದ ನಲ್ಲೆ

ಮೂಡಿ ಚಂದಿರ ನಿನಗಾಗಿ, ಕೂಡಿ ತಂಬೆಲರೆನಗಾಗಿ
ಮೂಡಿ ಚಂದಿರ ನಿನಗಾಗಿ, ಕೂಡಿ ತಂಬೆಲರೆನಗಾಗಿ
ನೋಡು ಪ್ರಿಯತಮೆ ಹಾಲು ಹುಣ್ಣಿಮೆ ತಂದ ನಮಗಾಗಿ
ಸ್ವಾಭಿಮಾನದ ನಲ್ಲೆ, ಓ ಹೊ ಹೋ ಓ .....

ನಿನ್ನ ಗರ್ವದ ಹುಸಿ ಮೌನ, ಅಣಗಿಸದೆ ನಾ ಬಿಡೆ ನಿನ್ನ
ನಿನ್ನ ಗರ್ವದ ಹುಸಿ ಮೌನ, ಅಣಗಿಸದೆ ನಾ ಬಿಡೆ ನಿನ್ನ
ಪುರುಷ ಸಿಂಹನ ಬಾಹುಬಂಧನ ನಿನ್ನ ಕಲ್ಯಾಣ
ಸ್ವಾಭಿಮಾನದ ನಲ್ಲೆ, ಓ ಹೊ ಹೋ ಓ .....

ತುಂಬು ಹರಯದ ಹೊಸ ಹೆಣ್ಣೆ, ಒಲೆಯ ಮೇಲಿನ ಹಸಿ ಬೆಣ್ಣೆ
ತುಂಬು ಹರಯದ ಹೊಸ ಹೆಣ್ಣೆ, ಒಲೆಯ ಮೇಲಿನ ಹಸಿ ಬೆಣ್ಣೆ
ಏಕೆ ಸುಮ್ಮನೆ ಆತ್ಮ ವಂಚನೆ ನಿನ್ನ ಪತಿ ನಾನೆ
ಸ್ವಾಭಿಮಾನದ ನಲ್ಲೆ, ಸಾಕು ಸಂಯಮ ಬಲ್ಲೆ
ಹೊರಗೆ ಸಾಧನೆ, ಒಳಗೆ ವೇದನೆ, ಇಳಿದು ಬಾ ಬಾಲೆ
ಸ್ವಾಭಿಮಾನದ ನಲ್ಲೆ, ಓ ಹೊ ಹೋ ಓ .....
-------------------------------------------------------------------------------------------------------------------------

ವೀರ ಕೇಸರಿ (೧೯೬೩) - ಹರೆಯುಕ್ಕಿದೆ... ಉಕ್ಕಿದೆ.
ಸಂಗೀತ: ಘಂಟಸಾಲ ಸಾಹಿತ್ಯ :ಸೋರಟ್ ಅಶ್ವಥ  ಗಾಯನ : ಪಿ. ಲೀಲಾ 

ಹರೆಯುಕ್ಕಿದೆ... ಉಕ್ಕಿದೆ.. ಸೊಗಸು  ಕಾದಿದೆ...
ಎಲ್ಲಾ ಇದ್ದು ನಡೆಯಳು ನುಡಿಯಳು ಅಯ್ಯೋ ಪಾಪವೇ ಕನ್ನಿಕೆ

ಮಾಮರದಲಿ ಕೋಗಿಲೆ ಕೂಗೆ
ತಂಬೆಲರಿಗೆ ಹೂಗಳು ಆಲುಗೆ
ಜಗವಾಗಲು ಸಿಂಗಾರದೂಡುಗೆ
ಮನ ಓಡಲು ಮೋಹದ ಕಡೆಗೆ
ಹಾಯ್ ಮೌನಿಯು ಸಹಿತ ಮೋಹಿಪ ವೇಳೆ
ಮೊರೆ ತಿರುವುತಲಿ ನಿಂತಳೇ ಯಾರೇ ಇನ್ಯಾರೇ
ನಮ್ಮ ರಾಜ ಮಂದಿರದ ಈ ಗಿಳಿ
ನಗೆ ನಿಧಿಯನೆ ತರುವ ನೀರಾಮಿಗೆ
ಮಧುವನೇ ತೋರುವ ಮಾರಾ
ತಾ ಬರುವನು ಕೇಳ್ ಜೋತೆಗಾರ
ಆರುತಿಹನೆಲ್ಲವ ಅವಧೀರಾ
ಹಾಯ್ ತಂಡದ ಅಂದರೆ  ಉಸ್ಸನೇ ಭುಸ್ಸನೇ
ಉರಿದು ಉರಿದು ತಾ ನೋಡವಳೇ
ಯಾರೇ ಇನ್ಯಾರೇ ನಮ್ಮ ರಾಜ ಮಂದಿರದಾ ಈ ಗಿಳಿ
------------------------------------------------------------------------------------------------------------------------

ವೀರ ಕೇಸರಿ (೧೯೬೩) - ದುಂಡುಮಲ್ಲೇ ದುಂಡುಮಲ್ಲೆ
ಸಂಗೀತ: ಘಂಟಸಾಲ ಸಾಹಿತ್ಯ :ಸೋರಟ್ ಅಶ್ವಥ  ಗಾಯನ : ಘಂಟಸಾಲ, ಪಿ. ಲೀಲಾ 

ಗಂಡು : ಏನೀ ಚೆಂದದ ವಸಂತಕಾಲಾ... ಬಳುಕಿ ಬಾ ಚೆಲುವೆ ತೂಗು ಉಯ್ಯಾಲೆ...
            ದುಂಡುಮಲ್ಲೇ ದುಂಡುಮಲ್ಲೆ ದುಂಡುಮಲ್ಲೇ
           ಇಂದೇ ಬಂದೈತೆ ಮೋಜು ಚೆಲುವಿನ ನಲ್ಲೆ
ಹೆಣ್ಣು : ಚೆನ್ನ ಚೆಲುವೋ ಚೆನ್ನ ಚೆಲುವೋ ಚೆನ್ನ ಚೆಲುವೋ
          ನಿನ್ನ ಕಂಡಾಗ ಮೈ ಝಲ್ಲೋ ಝಲ್ಲೋ
ಗಂಡು : ದುಂಡುಮಲ್ಲೆ ದುಂಡುಮಲ್ಲೇ
ಹೆಣ್ಣು :  ಚೆನ್ನ ಚೆಲುವೋ ಚೆನ್ನ ಚೆಲುವೋ

ಗಂಡು : ಹೆಣ್ಣೇ ನಿನ್ನ ತುರುಬಿನ ಹೂ ಕುಲುಕಿತೇತಕೆ
ಹೆಣ್ಣು :  ಕಣ್ಣ ಸನ್ನೆಯಿಂದ ನೀನು ಕರೆದ ರೀತಿಗೆ
ಗಂಡು : ನವಿರಾದ ಮೇಲ ಸೆರಗು ಜಾರಿತೇತಕೆ
            ನಲ್ಲೆ ಹೊಂಗುತ ಕರೆಯಲು ಕೂಡೆ ಜೋಡಿಗೆ
ಗಂಡು : ದುಂಡುಮಲ್ಲೆ ದುಂಡುಮಲ್ಲೇ
ಹೆಣ್ಣು :  ಚೆನ್ನ ಚೆಲುವೋ ಚೆನ್ನ ಚೆಲುವೋ

ಹೆಣ್ಣು : ಕಣ್ಣಿಗಿಂದು ರಂಗಿನ ಪುಡಿ ಚೆಲ್ಲಿದೇತಕೆ
ಗಂಡು : ಕೆನ್ನೆಯ ಮೇಲ್ ಕಸ್ತೂರಿಯ ಬಳಿದ ತಪ್ಪಿಗೆ
ಹೆಣ್ಣು : ಕಳ್ಳ ಮುನಿಸು ತೋರಿ ಕೊರಗಲೇಕೆ
ಗಂಡು : ಸುಳ್ಳಾಡುತೆ ಕರೆದು ಕೈಯ್ಯ ಜಿಗುಟಿದ್ದಕೆ
ಗಂಡು : ದುಂಡುಮಲ್ಲೆ ದುಂಡುಮಲ್ಲೇ
           ಇಂದೇ ಬಂದೈತೆ ಮೋಜು ಚೆಲುವಿನ ನಲ್ಲೆ
ಹೆಣ್ಣು :  ಚೆನ್ನ ಚೆಲುವೋ ಚೆನ್ನ ಚೆಲುವೋ
          ನಿನ್ನ ಕಂಡಾಗ ಮೈ ಝಲ್ಲೋ ಝಲ್ಲೋ 
ಗಂಡು : ದುಂಡುಮಲ್ಲೆ ದುಂಡುಮಲ್ಲೇ
ಹೆಣ್ಣು :  ಚೆನ್ನ ಚೆಲುವೋ ಚೆನ್ನ ಚೆಲುವೋ 
------------------------------------------------------------------------------------------------------------------------

ವೀರ ಕೇಸರಿ (೧೯೬೩) - ಓ ನಾಮ ಬಾರದ ಓ ರಾಮಯ್ಯ 
ಸಂಗೀತ: ಘಂಟಸಾಲ ಸಾಹಿತ್ಯ :ಸೋರಟ್ ಅಶ್ವಥ  ಗಾಯನ :  ಪಿ. ಲೀಲಾ 

ಓ ನಾಮ ಬಾರದ ಓ ರಾಮಯ್ಯ  ಸಿಂಗಾರ ಸಿಂಗೇಕೆ ಹೋಗಯ್ಯಾ 
ರಸಿಕತೆ ಅರಿಯದೇನಾ ಮುಂದೆ ಸಂಗೀತ ನಾಟ್ಯ ಸಂಭ್ರಮವೇಕೆ 
ಕಿವುಡನಾದವಗೆ ಕಿನ್ನರಿಯ ಮಿಡಿದಂತೆ 
ಕುರುಡಂಗೆ ಕನ್ನಡಿ ತೋರಿದಂಗೆ .. ವೃಥಾ... ವೃಥಾ... ವೃಥಾ... 

ರಸಿಕನು ನಾನೆನುತ ತಲೆದೂಗುವ 
ಭಲೇ ಮುಡಿಯ ಮಾವಯ್ಯ ಬಡಾಯಿ ಏಕಯ್ಯಾ 
ಚಪಳಾ ಏತಕೆ ಸಾಗು ಸಾಗು ಜಾಣ 

ರಾಮ ಲಕ್ಷ್ಮಣರನು ಸಾಮಾನ್ಯರೆಂದೆನಿಸಿ 
ವಂಚಿಪನೆಂದು ಭಂಗ ಪಟ್ಟಳೇ ಶೂರ್ಪನಖಿ 
ಓಹೋ..ಸುಪನಾತಿಯೇ ...  ಓಹೋ..ಸುಪನಾತಿಯೇ  
ಆಂಜನೇಯನ ಕಪಿ ಎಂದು ದಿಕ್ಕರಿಸಿ ಧಕ್ಕನೆ
ಲಂಕಿಣಿ ಖಿಣಿ ಖಿಣಿ ಹಲ್ ಕಿರಿದಳೋ
ವೇಷವ ನೋಡಿದರೂ ಗುರುತಾ ಕಾಣದಿರೇ
ಇಲ್ಲೇ ತಿರುಗುತಲೀ ನಮಗೆ ತಿಳಿಯದಲೇ
ಸಮಯ ನೋಡಿ ಹಾಕನೂ ನಾಮಾ
ಆಡೋಕೋ ಬಾರದ ಓ...ವೈಯ್ಯಾರಿ
ನೆಲವನೇ ಡೋಂಕೆನ್ನುವೆ ಕಿಶೋರಿ
---------------------------------------------------------------------------------------------------

ವೀರ ಕೇಸರಿ (೧೯೬೩) - ರಾಮಲಕ್ಷ್ಮಣರು 
ಸಂಗೀತ: ಘಂಟಸಾಲ ಸಾಹಿತ್ಯ :ಸೋರಟ್ ಅಶ್ವಥ  ಗಾಯನ : ಘಂಟಸಾಲ, ಪಿ. ಲೀಲಾ 

---------------------------------------------------------------------------------------------------

ವೀರ ಕೇಸರಿ (೧೯೬೩) - ಎಲ್ಲಾ ನಿನಗಾಗೇ 
ಸಂಗೀತ: ಘಂಟಸಾಲ ಸಾಹಿತ್ಯ :ಸೋರಟ್ ಅಶ್ವಥ  ಗಾಯನ : ಘಂಟಸಾಲ, ಪಿ. ಲೀಲಾ 

---------------------------------------------------------------------------------------------------

ವೀರ ಕೇಸರಿ (೧೯೬೩) - ಪ್ರಜಾರ ಮಾತನು
ಸಂಗೀತ: ಘಂಟಸಾಲ ಸಾಹಿತ್ಯ :ಸೋರಟ್ ಅಶ್ವಥ  ಗಾಯನ : ಘಂಟಸಾಲ, ಪಿ.  ಸುಶೀಲಾ 
 

--------------------------------------------------------------------------------------------------- 

No comments:

Post a Comment