451. ಶುಭ ಮಿಲನ (1987)

ಶುಭ ಮಿಲನ ಚಲನಚಿತ್ರದ ಹಾಡುಗಳು
  1. ಮಿಲನ ಮಿಲನ ಜೀವನದ ಹೊಸ ಗಾನ
  2. ಕೃಷ್ಣನ ಹಾಗೇ ನಾನೀಗ
  3. ಗೆಳೆಯ ಹೀಗೆ ಬಾಳೆಲ್ಲ ಒಂದಾಗುವ
  4. ಬಾಳು ಪ್ರಣವ ಗೀತೆ
  5. ಈ ಚಂಚಲೇ ಕುಣಿಯುವಂತೇ
  6. ನಿನ್ನಾಸೆಯ ಪ್ರೀತಿಯ ಹೂವೂ
ಶುಭ ಮಿಲನ (1987) - ಮಿಲನ ಮಿಲನ ಜೀವನದ ಹೊಸ ಗಾನ
ಸಂಗೀತ: ಎಂ.ರಂಗ ರಾವ್ ಸಾಹಿತ್ಯ: ಚಿ.ಉದಯಶಂಕರ್ ಗಾಯನ : ಎಸ್.ಪಿ.ಬಿ., ಎಸ್.ಜಾನಕಿ

ಗಂಡು : ಮಿಲನ ಮಿಲನ ಜೀವನದ ಹೊಸ ಗಾನ ಮಿಲನ ಶುಭಮಿಲನ
ಹೆಣ್ಣು : ಮಿಲನ ಮಿಲನ ಜೀವನದ ಹೊಸ ಗಾನ ಮಿಲನ ಶುಭಮಿಲನ
ಗಂಡು : ಮಿಲನ ಮಿಲನ ಜೀವನದ ಹೊಸ ಗಾನ ಮಿಲನ ಶುಭಮಿಲನ

ಗಂಡು : ಇದು ಸಂಗಮ ಮಧುರ ಸಂಗಮ, ಅರಳಿದ ಕಂಗಳು
           ಮಧುಮಾಸದ ಹೊಸ ಗೀತೆಯ, ಹಾದಿ ಒಂದಾಗಲಿ
           ಇದು ಸಂಗಮ ಮಧುರ ಸಂಗಮ, ಅರಳಿದ ಕಂಗಳು
           ಮಧುಮಾಸದ ಹೊಸ ಗೀತೆಯ, ಹಾದಿ ಒಂದಾಗಲಿ
ಹೆಣ್ಣು : ನೂರು ವೀಣೆ ಮಿಡಿದು, ಹೃದಯ ಹಿಗ್ಗಿ ನಲಿದು
          ನೂರು ವೀಣೆ ಮಿಡಿದು, ಹೃದಯ ಹಿಗ್ಗಿ ನಲಿದು
         ಹೊಸ ಹೊಸ ನೋಟ ಕಂಡಿತು, ಕಂಡಿತು
         ಮಿಲನ ಮಿಲನ ಜೀವನದ ಹೊಸ ಗಾನ
ಗಂಡು : ಮಿಲನ ಶುಭಮಿಲನ
ಹೆಣ್ಣು : ಅಅಅಅಅ ...               ಗಂಡು : ಲಲಲಲಲಾ

ಹೆಣ್ಣು : ಅನುರಾಗದ ಉಡಿಯಾಡಲೆ, ನಲ್ಲ ಬಾ ಎನ್ನಲೆ
          ಒಲವಿಂದಲಿ ಬಳಿಸೇರಲೆ, ಬೇಕೆ ಮುತ್ತೊಂದು ಎನಲೇ
         ಅನುರಾಗದ ಉಡಿಯಾಡಲೆ, ನಲ್ಲ ಬಾ ಎನ್ನಲೆ
         ಒಲವಿಂದಲಿ ಬಳಿಸೇರಲೆ, ಬೇಕೆ ಮುತ್ತೊಂದು ಎನಲೇ
ಗಂಡು : ಒಲವು ಉಕ್ಕುತಿರಲು, ಬಯಕೆ ಹಾಡುತಿರಲು
           ಒಲವು ಉಕ್ಕುತಿರಲು, ಬಯಕೆ ಹಾಡುತಿರಲು ಉಲ್ಲಾಸ ತುಂಬಿತು, ತುಂಬಿತು
ಇಬ್ಬರು : ಮಿಲನ ಮಿಲನ ಜೀವನದ ಹೊಸ ಗಾನ ಮಿಲನ ಶುಭಮಿಲನ
--------------------------------------------------------------------------------------------------------------------------

ಶುಭ ಮಿಲನ (1987) - ಕೃಷ್ಣನ ಹಾಗೇ ನಾನೀಗ
ಸಂಗೀತ: ಎಂ.ರಂಗ ರಾವ್ ಸಾಹಿತ್ಯ: ಚಿ.ಉದಯಶಂಕರ್ ಗಾಯನ : ಎಸ್.ಪಿ.ಬಿ., ಎಸ್.ಜಾನಕಿ

ಗಂಡು : ಕೃಷ್ಣನ ಹಾಗೆ ನಾನೀಗ ಗೋಪಿಯಂತೆ ನೀನೀಗ
            ಹಾಲು ಮೊಸರೆಲ್ಲಿದೆ ಹೇಳಿರಿ ಬೇಗ ನಿಮ್ಮ ಬಿಡಲಾರೆನು ಹೇಳದೇ ಈಗ
ಕೋರಸ್: ಮುದ್ದು ಕೃಷ್ಣ ಕಳ್ಳ ಕೃಷ್ಣ ಗೋಕುಲ ಕೃಷ್ಣ ನೀ ತಾನೇ ಕೃಷ್ಣ ನೀನು ಬೇಗನೆ ಬಾರೋ ಕೂಡಿ ಹಾಡಿ ಆಡೋಣ
               ಬಾಲ ಗೋಪಾಲ ಶ್ರೀಲೋಲ ರಂಗ ನಾನು ಎಲ್ಲಿ ಜಲಕ್ರೀಡೆ ಆಡೋದು ಹೇಳಿ ನೀವು
               ನಂದ ಗೋಕುಲ ಈ ನೆಲವು ಯಮುನಾ ನದಿಯೇ ಈ ಜಲವು ನಿನ್ನ ಕೊಳಲೆಲ್ಲಿ ನವಿಲು ಗರಿ ಎಲ್ಲಿ
               ಕಾಶಿ ಪೀತಾಂಬರ ಹೇಳು ಎಲ್ಲಿ ಎಲ್ಲಿ ಎಂದು ನೀ ಕೇಳಬೇಡ ನನ್ನ
ಗಂಡು : ಕೃಷ್ಣನ ಹಾಗೆ ನಾನೀಗ ಗೋಪಿಯಂತೆ ನೀನೀಗ
            ಹಾಲು ಮೊಸರೆಲ್ಲಿದೆ ಹೇಳಿರಿ ಬೇಗ ನಿಮ್ಮ ಬಿಡಲಾರೆನು ಹೇಳದೇ ಈಗ

ಹೆಣ್ಣು : ನೀನು ಎಂದೆಂದೂ ಶ್ರೀ ರಾಮಚಂದ್ರನಂತೇ ನಾನು ನೀನಗಾಗಿ ಧರೆಗಿಳಿದ ಸೀತೆಯಂತೇ 
ಗಂಡು : ಏಕ ಪತ್ನಿ ವೃತ ನನದು ಸತ್ಯವಾಡೋ ಕುಲ ನಮ್ಮದೂ 
ಹೆಣ್ಣು : ತಂದೆ ಮಾತೇನೇ ನಿನಗೆ ಉಸಿರಂತೆ 
ಗಂಡು : ನನ್ನ ಮಾತೇನೇ ಬಾಳ ಬೆಳಕಂತೆ 
ಹೆಣ್ಣು : ಬಲ್ಲೆ ಬಾರೆನ್ನ ಬಾ ಮೋಹನ 
ಗಂಡು : ಕೃಷ್ಣನ ಹಾಗೆ ನಾನೀಗ ಗೋಪಿಯಂತೆ ನೀನೀಗ
            ಹಾಲು ಮೊಸರೆಲ್ಲಿದೆ ಹೇಳಿರಿ ಬೇಗ ನಿಮ್ಮ ಬಿಡಲಾರೆನು ಹೇಳದೇ ಈಗ 
--------------------------------------------------------------------------------------------------------------------------

ಶುಭ ಮಿಲನ (1987) - ಗೆಳೆಯ ಹೀಗೆ ಬಾಳೆಲ್ಲಾ ಒಂದಾಗುವ
ಸಂಗೀತ: ಎಂ.ರಂಗ ರಾವ್ ಸಾಹಿತ್ಯ: ಚಿ.ಉದಯಶಂಕರ್ ಗಾಯನ : ಎಸ್.ಪಿ.ಬಿ., ಎಸ್.ಜಾನಕಿ

ಗಂಡು : ಅಹ್ಹಹ್ಹಹ್ಹ .. ಅಹ್ಹಹ್ಹಹ್ಹ ..             ಹೆಣ್ಣು : ಅಮ್ಮಮ್ಮಮ್ಮ .. ಅಮ್ಮಮ್ಮಮ್ಮ .. ಅಹ್ಹಹ್ಹಹ್ಹ ..
ಗಂಡು : ಲಲಲಾಲಾ..  ಲಲಲಾಲಲ್ಲಲ್ಲಲಾ..       ಹೆಣ್ಣು : ಲಲಲಾಲಾ..   ಲಲಲಾಲಲ್ಲಲ್ಲಲಾ..
ಹೆಣ್ಣು : ಗೆಳೆಯ ಹೀಗೆ ಬಾಳೆಲ್ಲ ಒಂದಾಗುವ ಪ್ರೀತಿಸಿ..  ಪ್ರೀತಿಸಿ...  ಸೇರಿ ಸಂತೋಷದಿಂದ...
ಗಂಡು : ಗೆಳತೀ ಹೀಗೆ ಬಾಳೆಲ್ಲ ಒಂದಾಗುವ ಪ್ರೀತಿಸಿ...  ಪ್ರೀತಿಸಿ... ಸೇರಿ ಸಂತೋಷದಿಂದ...
ಹೆಣ್ಣು : ಗೆಳೆಯ...                       ಗಂಡು : ಗೆಳತೀ

ಗಂಡು : ಶ್ರಾವಣ ಇದು ಶ್ರಾವಣ ಕರಗಿದೆ ಮುಗಿಲಿನ ಹನಿಹನಿ ತನುವನು ಸೋಕುತ ಚಳಿ ತಂದಿದೇ
ಹೆಣ್ಣು : ಸ್ನೇಹದಿ ಬಳಿ ಸೇರಲು ಹೊಸ ಹೊಸ ಬಯಕೆಯ ಎದೆಯಲಿ ಚಿಗುರಲು ಮೋಡವು ನೀರಾಗಿದೆ
ಗಂಡು : ಮಳೆಯ ಬಿಲ್ಲಂತೆ ಚೆಲುವೆ ನಿನ್ನಂದ         ಹೆಣ್ಣು : ಸುಳಿವ ಮಿಂಚಂತೆ ನಿನ್ನ ಕಣ್ಣಂದ
ಇಬ್ಬರು : ಬದುಕೇ ಸೊಗಸು ನಮಗೀಗ
ಗಂಡು : ಗೆಳತೀ (ಓ) ಹೀಗೆ ಬಾಳೆಲ್ಲ ಒಂದಾಗುವ
ಹೆಣ್ಣು : ಪ್ರೀತಿಸಿ (ಆಆ )  ಪ್ರೀತಿಸಿ (ಆಆ ) ಸೇರಿ ಸಂತೋಷದಿಂದ
ಗಂಡು : ಗೆಳತೀ                                              ಹೆಣ್ಣು : ಗೆಳೆಯ...                   

ಹೆಣ್ಣು : ತುಂಬಿದ ಹೊಸ ಯೌವ್ವನ ಹಗಲಲಿ ಇರುಳಲಿ ಪ್ರಣಯದ ಕನಸನು ತುಂಬುತ ನನ ಕಾಡಿದೆ
ಗಂಡು : ಪ್ರೇಯಸಿ ನೀ ನೋಡಿದ ಕನಸಿನ ಕಥೆಯನು ನಿಜವನು ಮಾಡಲೇ ಈ ದಿನ ನಿನ ಸೇರಿದೇ
ಹೆಣ್ಣು : ಇನ್ನೂ ಮಾತೇಕೇ ಬೇಗ ಬಾ ನಲ್ಲ            ಗಂಡು : ನಿನ್ನ ಈ ಮಾತೇ ನನಗೇ ಸಿಹಿ ಬೆಲ್ಲ
ಇಬ್ಬರು : ವಿರಹ ಇನ್ನೂ ನಮಗಿಲ್ಲ
ಹೆಣ್ಣು : ಗೆಳೆಯ (ಆಅ ) ಹೀಗೆ ಬಾಳೆಲ್ಲ ಒಂದಾಗುವ
ಗಂಡು : ಪ್ರೀತಿಸಿ (ಆಆ ) ಪ್ರೀತಿಸಿ (ಆಅ ) ಸೇರಿ ಸಂತೋಷದಿಂದ
ಹೆಣ್ಣು : ಗೆಳೆಯ...                       ಗಂಡು : ಗೆಳತೀ
ಹೆಣ್ಣು : ಗೆಳೆಯ...                       ಗಂಡು : ಗೆಳತೀ
--------------------------------------------------------------------------------------------------------------------------

ಶುಭ ಮಿಲನ (1987) - ಬಾಳು ಪ್ರಣಯ ಗೀತೆ
ಸಂಗೀತ: ಎಂ.ರಂಗ ರಾವ್ ಸಾಹಿತ್ಯ: ಚಿ.ಉದಯಶಂಕರ್ ಗಾಯನ : ಎಸ್.ಪಿ.ಬಿ., ಎಸ್.ಜಾನಕಿ

ಗಂಡು : ಆಹಾ... ಲಾಲಾಲಾಲಾ ...                   ಹೆಣ್ಣು : ಆಹಹಾ...ಆಹಹಾ...ಆಹಹಾ...
ಗಂಡು : ಬಾಳು ಪ್ರಣಯಗೀತೆ ನಮಗೆ ಇಂದೂ ಜೊತೆಯಾಗಿ ನೀನಿರುವಾಗ ಸುಖವೊಂದೇ ಎಂದೆಂದು
ಹೆಣ್ಣು : ಬಾಳು ಪ್ರಣಯಗೀತೆ ನಮಗೆ ಇಂದೂ ಜೊತೆಯಾಗಿ ನೀನಿರುವಾಗ ಸುಖವೊಂದೇ ಎಂದೆಂದು
          ಬಾಳು ಪ್ರಣಯಗೀತೆ

ಗಂಡು : ಒಲವಿನ ಮಾತಿನ ಉಯ್ಯಾಲೆಯಲ್ಲಿ ತೂಗಾಡುವಾಗ ಸೊಗಸು ಬದುಕೆಲ್ಲ
ಹೆಣ್ಣು : ಇನಿಯನ ಸ್ನೇಹವ ಸಂತೋಷದಲ್ಲಿ ನಲಿದಾಡುವಾಗ ನನಸು ಕನಸೆಲ್ಲ
ಗಂಡು : ಆಆಆ... ನಿನ್ನ ಪ್ರೀತಿಗಿಂತ ಸಿಹಿಯಲ್ಲ
ಹೆಣ್ಣು : ಮನಸಾರೆ ಹೇಳುವೆ ನಲ್ಲ ನೀ ನನ್ನ ಪ್ರಾಣವೂ
ಹೆಣ್ಣು : ಬಾಳು ಪ್ರಣಯಗೀತೆ ನಮಗೆ ಇಂದೂ
ಗಂಡು : ಜೊತೆಯಾಗಿ ನೀನಿರುವಾಗ ಸುಖವೊಂದೇ ಎಂದೆಂದು
           ಬಾಳು ಪ್ರಣಯಗೀತೆ

ಹೆಣ್ಣು : ಸುಳಿಯುವ ಗಾಳಿಯು ನಿನ್ನುಸಿರದ ಗಾಳಿ ಹೀತ ನೀಡಿದಂತೆ ಹರುಷ ತರದಲ್ಲ 
ಗಂಡು : ಅರಗಿಳಿ ಆಡುವ ಸವಿಯಾದ ಮಾತು ಸಿಹಿಯಾಗಲಿಲ್ಲ ಗೆಳತೀ ಸುಳ್ಳಲ್ಲ 
ಹೆಣ್ಣು : ಆಆಆ... ಹೂ ಮತ್ತೆಯಂತೆ ಬಾಳೆಲ್ಲ 
ಗಂಡು : ಮೇಲಿಂದ ಜಾರಿದ ಸ್ವರ್ಗ ನಿನ್ನಲ್ಲಿ ಕಂಡೇನೂ 
ಗಂಡು :  ಬಾಳು (ಆಹಾ) ಪ್ರಣಯಗೀತೆ (ಆಹಾ) ನಮಗೆ ಇಂದೂ
ಹೆಣ್ಣು : ಜೊತೆಯಾಗಿ ನೀನಿರುವಾಗ ಸುಖವೊಂದೇ ಎಂದೆಂದು
          ಬಾಳು ಪ್ರಣಯಗೀತೆ
ಗಂಡು : ಆಆಆ...              ಹೆಣ್ಣು : ಲಾಲಾಲಲ
ಹೆಣ್ಣು : ಆಆಆ ...               ಹೆಣ್ಣು :  ಆಆಆ ...      
--------------------------------------------------------------------------------------------------------------------------

ಶುಭ ಮಿಲನ (1987) - ಈ ಚಂಚಲೇ ಕುಣಿಯುವಂತೇ
ಸಂಗೀತ: ಎಂ.ರಂಗ ರಾವ್ ಸಾಹಿತ್ಯ: ಚಿ.ಉದಯಶಂಕರ್ ಗಾಯನ : ಎಸ್.ಪಿ.ಬಿ., ಎಸ್.ಜಾನಕಿ

ಹೆಣ್ಣು : ಈ ಚಂಚಲೇ ಕುಣಿಯುವಂತೇ ಕುಣಿಯ ಬಲ್ಲವರು
ಕೋರಸ್ :  ಯಾರು ಇಲ್ಲ ... ಯಾರು ಇಲ್ಲ
ಗಂಡು : ಈ ರಸಿಕನು ಆಡುವಂತೇ ಆಡಬಲ್ಲವರು ಯಾರು ಇಲ್ಲ... ಯಾರು ಇಲ್ಲ
            ಓಲೇ ಓಹೋಹೋ ಚಿಲುಮೆ ಮೇಲೆ ಚಿಮ್ಮುವಂತೇ ಮಿಂಚು ಮೇಲೆ ಸುಳಿಯುವಂತೇ
ಕೋರಸ್ : ಓಲೇ ಓಹೋಹೋ ಚಿಲುಮೆ ಮೇಲೆ ಚಿಮ್ಮುವಂತೇ ಮಿಂಚು ಮೇಲೆ ಸುಳಿಯುವಂತೇ

ಹೆಣ್ಣು : ಪಮಪ ಪಮ ಮಗ ಸನೀಸನಿ ನಿಗಗ ಮಪ ಮಗಗ
ಗಂಡು : ನವಿಲು ಕಲಿಯಿತು ನನ್ನಿಂದ ನನ್ನಿಂದ ಡಾನ್ಸ್ ನನ್ನಿಂದ
            ಮಮಮ ಗಮ ಗಮ ಮಮಮ ಪಪಪ ಮಪಮಗ ಮಪಪ
ಹೆಣ್ಣು: ಕೊಳಲು ಕಲಿಯಿತು ಸಂಗೀತ ನನ್ನಿಂದ ಡ್ರಮ್ ನನ್ನಿಂದ ನಾನೊಂದು ಪುಟ ಚೆಂಡು
ಗಂಡು : ನಾನೊಂದು ಸಿಡಿ ಗುಂಡು
ಹೆಣ್ಣು : ನನ್ನಂತೇ ಯಾರಿಲ್ಲ                         ಗಂಡು : ಸರಿಸಾಟಿ ನನಗಿಲ್ಲ
ಹೆಣ್ಣು : ಹಕ್ಕಿ ಹಾಗೇ ..                               ಗಂಡು : ಹಾರಲೇನು
ಕೋರಸ್ : ಓಲೇ ಓಹೋಹೋ ಚಿಲುಮೆ ಮೇಲೆ ಚಿಮ್ಮುವಂತೇ ಮಿಂಚು ಮೇಲೆ ಸುಳಿಯುವಂತೇ

ಹೆಣ್ಣು : ಹೇ.. ನಡುವು ಉಳುಕಿತು ಇಂದೇಕೋ (ಹ್ಹಹ್ಹ ) ಅಮ್ಮಯ್ಯ ನೋವು ದಮ್ಮಯ್ಯ
ಗಂಡು : ಹ್ಹಾಂ .. ಕುಣಿಯಲಾರದ ಚೆಲುವೆಗೇ ಡೋಂಕಂತೆ ನೆಲವೂ ಡೋಂಕಂತೆ 
ಹೆಣ್ಣು : ಹಾ.. ಸುಳ್ಳಲ್ಲ ಅಣ್ಣಯ್ಯ                            ಗಂಡು : ನಿಜವಲ್ಲ ಅಕ್ಕಯ್ಯ 
ಹೆಣ್ಣು : ನಿನಗಿಂತ ಚಿಕ್ಕೊಳು                               ಗಂಡು : ಮಾತಲ್ಲಿ ದೊಡ್ಡೋಳು 
ಹೆಣ್ಣು : ಆಗೋದಿಲ್ಲ                                          ಗಂಡು : ಸಾಧ್ಯ ಇಲ್ಲ 
ಹೆಣ್ಣು : ಸೋತೆ ಸೋತೆ                                    ಗಂಡು : ಬುದ್ದಿ ಬಂತೇ .. 
ಗಂಡು : ಈ ರಸಿಕನು ಆಡುವಂತೇ ಆಡಬಲ್ಲವರು            ಕೋರಸ್ :  ಯಾರು ಇಲ್ಲ... ಯಾರು ಇಲ್ಲ
ಗಂಡು : ಈ ರಸಿಕನು ಆಡುವಂತೇ ಆಡಬಲ್ಲವರು            ಕೋರಸ್ :  ಯಾರು ಇಲ್ಲ... ಯಾರು ಇಲ್ಲ
ಕೋರಸ್ : ಓಲೇ ಓಹೋಹೋ ಚಿಲುಮೆ ಮೇಲೆ ಚಿಮ್ಮುವಂತೇ ಮಿಂಚು ಮೇಲೆ ಸುಳಿಯುವಂತೇ
               ಓಲೇ ಓಹೋಹೋ  ಚಿಲುಮೆ ಮೇಲೆ (ಹೇಹೇ )ಚಿಮ್ಮುವಂತೇ (ಹೇಹೇ ) ಮಿಂಚು ಮೇಲೆ ಸುಳಿಯುವಂತೇ
               (ತರರರಾ )
--------------------------------------------------------------------------------------------------------------------------

ಶುಭ ಮಿಲನ (1987) - ನಿನ್ನಾಸೆಯ ಪ್ರೀತಿಯ ಹೂವೂ
ಸಂಗೀತ: ಎಂ.ರಂಗ ರಾವ್ ಸಾಹಿತ್ಯ: ಆರ್.ಏನ್.ಜಯಗೋಪಾಲ್ ಗಾಯನ : ಎಸ್.ಪಿ.ಬಿ.,

ನಿನ್ನಾಸೆಯ ಪ್ರೀತಿಯ ಹೂವೂ ಅದು ನೀಡಿದೆ ಕಂಬನಿ ನೋವು
ಈ ದಿನ ನಿನ್ನವರಾರೋ ಪಡೆದೆಯ ಪ್ರತಿಫಲ ಮಮತೆಯ ಮೋಹಕೆ
ನಿನ್ನಾಸೆಯ ಪ್ರೀತಿಯ ಹೂವೂ ಅದು ನೀಡಿದೆ ಕಂಬನಿ ನೋವು
ಈ ದಿನ ನಿನ್ನವರಾರೋ ಪಡೆದೆಯ ಪ್ರತಿಫಲ ಮಮತೆಯ ಮೋಹಕೆ

ಜೀವನವೇ ಸಂಗ್ರಾಮವೇನೋ ವ್ಯಾಮೋಹದಲಿ ಮುಳುಗಿದೇ
ಕೈ ಹಿಡಿದ ಸಂಗಾತಿ ಜೊತೆ ಸಂಘರ್ಷದಲಿ ತೊಡಗಿದೆ
ಕೈಗೇ ಬಂದ ನಿಜ ಆನಂದ ಎಸೆದೇ ದೂರಕೆ ನೀನು
ಕರುಳೇ ನಿನ್ನ ಕರಳನು ಕೊಯ್ಯೇ ಕಂಬನಿ ಸುರಿಸುವೇ ಏನು
ಛಲದಲಿ ಒಲವನು ನೂಕಿದೆ ದೂರಕೆ
ನಿನ್ನಾಸೆಯ ಪ್ರೀತಿಯ ಹೂವೂ ಅದು ನೀಡಿದೆ ಕಂಬನಿ ನೋವು
ಈ ದಿನ ನಿನ್ನವರಾರೋ ಪಡೆದೆಯ ಪ್ರತಿಫಲ ಮಮತೆಯ ಮೋಹಕೆ

ಮರೆಯದಿರು ಜನ್ಮಾಂತರದ ಸಂಬಂಧವಿದು ಮದುವೆಯೂ
ಮಾನಸಿಕ ಹೋರಾಟದಲಿ ಬತ್ತಿ ಹೋಗದಾ ಚಿಲುಮೆಯೂ
ಮಕ್ಕಳೇ ನಿನ್ನಾ ಆಶ್ರಯವೆನ್ನೋ ಹುಚ್ಚಿನ ಭಾವನೇ ಬೇಡ
ಕೈ ಹಿಡಿದವಳೇ ಕೊನೆವರೆಗೆನ್ನೋ ಗಾದೆಯ ಮಾತಿದೇ ನೋಡ
ನಿನ್ನೆಯ ಮರೆಯಲೀ ನಾಳೆ ಇದೇ ಮುಂದಕೆ
ನಿನ್ನಾಸೆಯ ಪ್ರೀತಿಯ ಹೂವೂ ಅದು ನೀಡಿದೆ ಕಂಬನಿ ನೋವು
ಈ ದಿನ ನಿನ್ನವರಾರೋ ಪಡೆದೆಯ ಪ್ರತಿಫಲ ಮಮತೆಯ ಮೋಹಕೆ
 ಪಡೆದೆಯ ಪ್ರತಿಫಲ ಮಮತೆಯ ಮೋಹಕೆ
--------------------------------------------------------------------------------------------------------------------------

No comments:

Post a Comment