453. ರಾಯರು ಬಂದರು ಮಾವನ ಮನೆಗೆ (1993)

ರಾಯರು ಬಂದರು ಮಾವನ ಮನೆಗೇ ಚಿತ್ರದ ಹಾಡುಗಳು 
  1. ಮುದ್ದಿನ ಹುಡುಗಿ ಚೆಂದ, ಮೌನದ ರೂಪವೆ ಅಂದ,
  2. ಅಪರಾಧಿ ನಾನಲ್ಲಾ ಅಪರಾಧ ಏನಾಗಿಲ್ಲಾ...
  3. ಬಾರೇ ಬಾರೇ ದೇವಿಯೇ    ಬಂದೆ ನನ್ನ ಪ್ರೇಮಿಯೇ
  4. ಅಡವಿ ದೇವಿಯಾ ಕಾಡು ಜನಗಳ ಈ ಹಾಡು ನಾಡಿನ ಜೀವ ತುಂಬಿದೆ
  5. ನಗು ಮೋಮು ಕನ ಲೇನಿ ನಾ ಜಾಲಿ ತೆಲಿಸಿ

ರಾಯರು ಬಂದರು ಮಾವನ ಮನೆಗೆ (1993) - ಮುದ್ದಿನ ಹುಡುಗಿ ಚೆಂದ
ಸಾಹಿತ್ಯ: ಆರ್. ಎನ್. ಜಯಗೋಪಾಲ್ ಸಂಗೀತ: ರಾಜ್ ಕೋಟಿ ಗಾಯನ: ಎಸ್. ಪಿ. ಬಾಲಸುಭ್ರಮಣ್ಯಂ

ಮುದ್ದಿನ ಹುಡುಗಿ ಚೆಂದ, ಮೌನದ ರೂಪವೆ ಅಂದ,
ಚೆಂದಕೆ ಚೆಂದ ವಂತೆ ನಿನ್ನ ಅಂದವುಮುದ್ದಿನ ಹುಡುಗಿ ಚೆಂದ, ಮೌನದ ರೂಪವೆ ಅಂದ,
ಚೆಂದಕೆ ಚೆಂದ ವಂತೆ ನಿನ್ನ ಅಂದವು
ಈ ಹೃದಯ ನಿನಗಾಗಿಯೇ ಮೀಸಲು ಓ ಪ್ರಿಯೆ ಎಂದಿಗೂ
ಈ ಬೆಸುಗೆ ಬಿರುಗಾಳಿಯೆ ಬಂದರೂ ಒಡೆಯದು ಎಂದಿಗೂ
ಮುದ್ದಿನ ಹುಡುಗಿ ಚೆಂದ,ಮೌನದ ರೂಪವೆ ಅಂದ,
ಚೆಂದಕೆ ಚೆಂದ ವಂತೆ ನಿನ್ನ ಅಂದವು

ಓ ಚಿನ್ನ ಅಂದು ನೋಡಿದೆ ನಿನ್ನನು
ಓ ರನ್ನ ಸೆರೆ ಮಾಡಿದೆ ನನ್ನನು
ಅರಿಯದೆ ಹೇಗೊ ನಾ ಬೆರೆತೆ ನಿನ್ನಲಿ
ತನು ಮನವೆಲ್ಲ ತುಂಬಿ ನಿಂತೆ ನನ್ನಲಿ
ನಿನ್ನನೆ ಕಂಡೆ ಎಲ್ಲೆಲ್ಲು, ನನ್ನನ್ನೆ ಕಂಡೆ ನಿನ್ನಲ್ಲು
ನಿನ್ನನೆ ಕಂಡೆ ಎಲ್ಲೆಲ್ಲು, ನನ್ನನ್ನೆ ಕಂಡೆ ನಿನ್ನಲ್ಲು
ಈ ಹೃದಯ ನಿನಗಾಗಿಯೇ ಮೀಸಲು ಓ ಪ್ರಿಯೆ ಎಂದಿಗೂ
ಮುದ್ದಿನ ಹುಡುಗಿ ಚೆಂದ,ಮೌನದ ರೂಪವೆ ಅಂದ,
ಚೆಂದಕೆ ಚೆಂದ ವಂತೆ ನಿನ್ನ ಅಂದವು

ಯಾವುದೋ ಜನುಮಾಂತರ ಬಂಧನ,  ಬೆರೆಸಿತು ಅದು ನಮ್ಮನು ಆ ದಿನ
ಹೆಣ್ಣು:  ತಾಳದು ಜೀವ ನೀ ನಿಮಿಷ ನೊಂದರು,  ಒಂದೆ ಒಂದು ಹನಿಯ ಕಣ್ಣೀರು ಬಂದರು,
         ನಿನ್ನನು ಮರೆಯಲಾರೆನು ಅಗಲಿ ಬದುಕಲಾರೆನು  ನಿನ್ನನು ಮರೆಯಲಾರೆನು ಅಗಲಿ ಬದುಕಲಾರೆನು
         ಈ ಬೆಸುಗೆ ಬಿರುಗಾಳಿಯೆ ಬಂದರೂ ಒಡೆಯದು ಎಂದಿಗೂ
         ಮುದ್ದಿನ ಹುಡುಗ ಚೆಂದ,ಮೌನದ ರೂಪವೆ ಅಂದ,   ಚೆಂದಕೆ ಚೆಂದ ವಂತೆ ನಿನ್ನ ಅಂದವು
ಗಂಡು: ಮುದ್ದಿನ ಹುಡುಗಿ ಚೆಂದ,ಮೌನದ ರೂಪವೆ ಅಂದ,  ಚೆಂದಕೆ ಚೆಂದ ವಂತೆ ನಿನ್ನ ಅಂದವು
          ಈ ಹೃದಯ ನಿನಗಾಗಿಯೇ ಮೀಸಲು ಓ ಪ್ರಿಯೆ ಎಂದಿಗೂ
          ಈ ಬೆಸುಗೆ ಬಿರುಗಾಳಿಯೆ ಬಂದರೂ ಒಡೆಯದು ಎಂದಿಗೂ
------------------------------------------------------------------------------------------------------------------------

ರಾಯರು ಬಂದರು ಮಾವನ ಮನೆಗೆ (1993) - ಅಪರಾಧಿ ನಾನಲ್ಲ
ಸಾಹಿತ್ಯ: ಆರ್. ಎನ್. ಜಯಗೋಪಾಲ್ ಸಂಗೀತ: ರಾಜ್ ಕೋಟಿ ಗಾಯನ: ಕೆ.ಎಸ.ಚಿತ್ರಾ ಮತ್ತು ಎಸ್. ಪಿ. ಬಾಲು

ಆಆಆಆಅ.... ಆಆಆ... .ಆಆಆಅ.....
ಅಪರಾಧಿ ನಾನಲ್ಲಾ ಅಪರಾಧ ಏನಾಗಿಲ್ಲಾ...
ಅಪರಾಧಿ ನಾನಲ್ಲಾ ಅಪರಾಧ ಏನಾಗಿಲ್ಲಾ...
ಅಪರಾಧಿ ನಾನಲ್ಲಾ ಅಪರಾಧ ಏನಾಗಿಲ್ಲಾ...
ಕಪಟ ನಾಟಕ ಸೂತ್ರಧಾರೀ ನೀನೇ.....
ಅಪರಾಧಿ ನಾನಲ್ಲಾ ಅಪರಾಧ ಏನಾಗಿಲ್ಲಾ...

ಸನೀಸ ದನಿ ಮದ ಸನಿಸ ದನಿ ಮದ
ಗಗಗ ಮಮಮ ದದದ ನಿದಮ ಗಗಗ ಮಮಮ ನಿನಿ
ಮದನಿ ಸ ಸ ದನಿಸ ದನಿ ಸಸ ದನಿಸ ದನಿ ಗಗ ನಿನಿ ಗಗ ನಿನಿ
ಸಗ ಸಗ ಮ ಗಸನಿ ದ ಗ ಸನಿ ದ ಮ
ದನಿಸ ದನಿಸ ದನಿ ಸ ಸ
ಮದನಿ ಮದನಿ ಮ ಮ
ಗಮದ ಗಮ ಸನಿ ದಮ
ನಿನ್ನಯ ಕೈಯಲ್ಲಿ ಬೊಂಬೆಯೂ ನಾನು
ಆಡಿಸಿ ಬೀಳಿಸಿ ನಗುತಿಹೆ ನೀನು
ನನ್ನಯ ಸರಿ ತಪ್ಪು ಹೊಣೆ ನಿನ್ನದು
ಶೋಧನೆ ಈ ದಿನ ನನಗೆ ಅದು
ಪ್ರಭು ಶಿಕ್ಷೆ ನಿಡುವೆಯೋ ರಕ್ಷೆ ಮಾಡುವೆಯೋ
ಪಾಪ ಪುಣ್ಯ ನಿನಗೆ ಅರ್ಪಣೆ
ಪ್ರಭು ಶಿಕ್ಷೆ ನಿಡುವೆಯೋ ರಕ್ಷೆ ಮಾಡುವೆಯೋ
ಪಾಪ ಪುಣ್ಯ ನಿನಗೆ ಅರ್ಪಣೆ
ಪರಮಾತ್ಮನೇ ಶ್ರೀ ಕೃಷ್ಣನೇ 
ದನಿ ಸಮಗ ಸಗಸ ದನಿ ಸಗಸ ನಿಸನಿ ದನಿ 
ಸಮಗ ಸನಿ ನಿಗ ಸನಿದ ಸನಿದಮ 
ಅಪರಾಧಿ ನಾನಲ್ಲಾ ಅಪರಾಧ ಏನಗಿಲ್ಲಾ...
ಕಪಟ ನಾಟಕ ಸೂತ್ರಧಾರೀ ನೀನೇ.....
ಅಪರಾಧಿ ನಾನಲ್ಲಾ ಅಪರಾಧ ಏನಾಗಿಲ್ಲಾ...

ಬೇಡದ ತಾಳಿಯೂ ನನಗೆ ನೀ ತಂದೆ
ಜೀವಕೂ ಜೀವಕು ಹೊಸ ನಂಟು ತಂದೆ
ಕೇಳುವೆ ಏಕಿಂದು ಆ ಬಂಧನ
ಪ್ರೇಮಕೆ ಈ ಶಿಕ್ಷೆ ಏಕಿದಿನ
ಪ್ರಭು ಸ್ನೇಹ ಜೀವಿಯನು ತ್ಯಾಗ ಮೂರ್ತಿಯನು
ಮಮತೆಯಿಂದ ಕಾಯೋ ತಂದೆಯೇ
ನೀ ಎಲ್ಲ ತಪ್ಪುಗಳ ಕ್ಷಮಿಸಿ ಪಾಲಿಸುತಾ
ಜೀವ ನೀಡಿ ಸಲಹೋ ತಂದೆಯೇ
ರಾಘವೇಂದ್ರನೇ ಗುರುರಾಜನೇ
ದನಿ ಸಮಗ ಸಗಸ ದನಿ ಸಗಸ ನಿಸನಿ ದನಿ
ಸಮಗ ಸನಿ ನಿಗ ಸನಿದ ಸನಿದಮ
ಅಪರಾಧಿ ನಾನಲ್ಲಾ ಅಪರಾಧ ಏನಾಗಿಲ್ಲಾ...
ಕಪಟ ನಾಟಕ ಸೂತ್ರಧಾರೀ ನೀನೇ.....
ಅಪರಾಧಿ ನಾನಲ್ಲಾ ಅಪರಾಧ ಏನಾಗಿಲ್ಲಾ...

ನಿಶ್ಚಯ ಮನುಜಗೆ ಮರಣವು ಒಂದೇ
ಮನಸಿಗೆ ಶಾಂತಿಯು ಆಗಲೇ ತಂದೆ
ನಿಶ್ಚಲ ಮನಶಕ್ತಿ ದಯಪಾಲಿಸು
ಅದೇ ಸ್ಥಳ ನೀಡಿ ಕೃಪೆ ತೋರಿಸು
ಪ್ರಭು ನಿನ್ನ ನಂಬಿರುವೆ ಶರಣು ಎಂದಿರುವೇ
ನಿನ್ನಲೇನ್ನ ಒಂದು ಮಾಡಿಕೊ
ಪರಮಾತ್ಮನೇ ಶ್ರೀ ಕೃಷ್ಣನೇ
ದನಿ ಸಮಗ ಸಗಸ ದನಿ ಸಗಸ ನಿಸನಿ ದನಿ
ಸಮಗ ಸನಿ ನಿಗ ಸನಿದ ಸನಿದಮ
ಅಪರಾಧಿ ನಾನಲ್ಲಾ ಅಪರಾಧ ಏನಾಗಿಲ್ಲಾ...
ಕಪಟ ನಾಟಕ ಸೂತ್ರಧಾರೀ ನೀನೇ.....
ಅಪರಾಧಿ ನಾನಲ್ಲಾ ಅಪರಾಧ ಏನಾಗಿಲ್ಲಾ...
--------------------------------------------------------------------------------------------------------------------------

ರಾಯರು ಬಂದರು ಮಾವನ ಮನೆಗೆ (1993) - ಮುದ್ದಿನ ಹುಡುಗಿ ಚೆಂದ
ಸಾಹಿತ್ಯ: ಎಂ.ಏನ್.ವ್ಯಾಸರಾವ್ ಸಂಗೀತ: ರಾಜ್ ಕೋಟಿ ಗಾಯನ: ಚಿತ್ರಾ ಮತ್ತು ಎಸ್. ಪಿ. ಬಾಲಸುಭ್ರಮಣ್ಯಂ

ಬಾರೇ ಬಾರೇ ದೇವಿಯೇ    ಬಂದೆ ನನ್ನ ಪ್ರೇಮಿಯೇ
ಬಳುಕು ಬಳ್ಳಿಯಾ ಮೈನಾ ಹೆಣ್ಣೇ  ಒಲವು ನೋಟಕೆ ಕರಗಿದ ಬೆಣ್ಣೆ 
ಹುರುಪು ಮಿಸೆಯಾ ಚೆನ್ನಿಗ ನೀನೇ  ಒರಟು ಮಾತಲಿ ಸೆಳೆದಿಹೆ ನನ್ನೇ 
ಇಂದೇಕೋ ಕಾತರಿಸಿ ನನ್ನನೇ ಆವರಿಸಿ ಸಂಗಾತಿ ಬಂತು ಈ ಪ್ರೀತಿ 
ನಾಕ್ ಒಂದ್ಲೇ ನಾಕು ನಾಕ್ ಎರಡಲೇ ಎಂಟು ನಾನು ನೀನು ಸೇರಿದಾಗ ಈ ನಂಟು
ನಾಕ್ ಒಂದ್ಲೇ ನಾಕು ನಾಕ್ ಎರಡಲೇ ಎಂಟು ನಾನು ನೀನು ಸೇರಿದಾಗ ಈ ನಂಟು
ಬಾರೇ ಬಾರೇ ದೇವಿಯೇ    ಬಂದೆ ನನ್ನ ಪ್ರೇಮಿಯೇ

ಕಾಡಿನಲಿ ಕುಣಿವ ನವಿಲೇ ನೀನಿರಲು ಚೆಲುವೆ
ಬೀಸಿರುವೆ ಬಲೆಯ ನನಗೆ ಸೆರೆಯಾದೆ ನಿನಗೆ
ಹರುಷ ನೀ ತಂದಿಹೇ ಹುರುಪು ಮೈ ತುಂಬಿದೆ
ಉಸಿರು ನೀ ನೀಡಿದೆ ಹಸಿರು ಮೈದೋರಿದೆ
ನಿನ್ನ ಅಪ್ಪಿಕೊಂಡು ಮುದ್ದು ಪಪ್ಪೀ ಕೊಡುವೆ
ನಿನ್ನ ಜಿಂಕೆ ಕಣ್ಣಿನಲ್ಲೇ ಸ್ವರ್ಗ ತೆರೆವೆ
ಬರಿ ಮಾತಿನಲ್ಲೆ ಏಕೆ ಹೀಗೆ ಕೊಲ್ಲುವೆ
ಮೈ ತುಂಬ ಜೇನು ತುಂಬಿ ನಾನು ನಿಂತಿಹೆ
ಚಿನ್ನ ಕೇಳೇ ಈ ನನ್ನ ಜೀವ ನೀನೆ ಈ ಬಿಂಕ ಬೇಕು ಕಾಣೆ
ಹೀಗೇಕೆ ಇಂದು ದೂರ ದೂರ ದೂರ ಓಡುವೇ
ಬಾರೇ ಬಾರೇ ದೇವಿಯೇ    ಬಂದೆ ನನ್ನ ಪ್ರೇಮಿಯೇ
ತಪ್ಪು ತಪ್ಪು ತಾರಾ   ತಪ್ಪು ತಪ್ಪು ತಾರಾ 
ತಪ್ಪು ತಪ್ಪು ತಪ್ಪು ತಪ್ಪು ತಪ್ಪು ತಾರಾ
ತಪ್ಪು ತಪ್ಪು ತಾರಾ   ತಪ್ಪು ತಪ್ಪು ತಾರಾ 
ತಪ್ಪು ತಪ್ಪು ತಪ್ಪು ತಪ್ಪು ತಪ್ಪು ತಾರಾ

ಬಾಳಿನಲ್ಲಿ ಮೊದಲ ಸಲಕೆ ಪ್ರೀತಿಯನು ಪಡೆದೇ
ಜೀವನದ ಕಡಲ ಎದೆಗೆ ಈ ನದಿಯಾ  ಕರೆದೆ
ಒಲವು ನೀ ತೋರಿದೆ ಚೆಲುವು ನಾ ನೀಡಿದೆ
ತೊಡಿಸು ಆಲಿಂಗನಾ ತರುವೆ ರೋಮಾಂಚನ
ಸುಗ್ಗಿಯಾಗಿ ನನ್ನ ಮನಸು ಹಿಗ್ಗಿ ಹೋಗಿದೆ
ಹಿಗ್ಗಿ ನಿಂತ ಹತ್ತು ರೀತಿ ಕನಸು ಎದ್ದಿದೆ
ರೆಪ್ಪೆಯಲ್ಲಿ ಚುಕ್ಕಿ ಚಂದ್ರ ಗೂಡು ಕಟ್ಟಿದೆ
ಗೂಡಿನಲ್ಲಿ ನನ್ನ ನಿನ್ನ ಒಂದು ಮಾಡಿದೆ
ನಲ್ಲ ಕೇಳು ಈ ಕಣ್ಣ ಸಾಕ್ಷಿಯಾಗಿ ಆ ದೇವರಣೆಯಾಗಿ
ನಾನಿನ್ನ ಬಿಟ್ಟು ದೂರ ದೂರ ಓದಿ ಹೋಗೆನು
ಬಾರೇ ಬಾರೇ ದೇವಿಯೇ    ಬಂದೆ ನನ್ನ ಪ್ರೇಮಿಯೇ
ಬಳುಕು ಬಳ್ಳಿಯಾ ಮೈನಾ ಹೆಣ್ಣೇ  ಒಲವು ನೋಟಕೆ ಕರಗಿದ ಬೆಣ್ಣೆ 
ಹುರುಪು ಮಿಸೆಯಾ ಚೆನ್ನಿಗ ನೀನೇ  ಒರಟು ಮಾತಲಿ ಸೆಳೆದಿಹೆ ನನ್ನೇ 
ಇಂದೇಕೋ ಕಾತರಿಸಿ ನನ್ನನೇ ಆವರಿಸಿ ಸಂಗಾತಿ ಬಂತು ಈ ಪ್ರೀತಿ 
ನಾಕ್ ಒಂದ್ಲೇ ನಾಕು ನಾಕ್ ಎರಡಲೇ ಎಂಟು ನಾನು ನೀನು ಸೇರಿದಾಗ ಈ ನಂಟು
ನಾಕ್ ಒಂದ್ಲೇ ನಾಕು ನಾಕ್ ಎರಡಲೇ ಎಂಟು ನಾನು ನೀನು ಸೇರಿದಾಗ ಈ ನಂಟು
ಬಾರೇ ಬಾರೇ ದೇವಿಯೇ    ಬಂದೆ ನನ್ನ ಪ್ರೇಮಿಯೇ 
------------------------------------------------------------------------------------------------------------------------

ರಾಯರು ಬಂದರು ಮಾವನ ಮನೆಗೆ (1993) - ಮುದ್ದಿನ ಹುಡುಗಿ ಚೆಂದ
ಸಾಹಿತ್ಯ: ಎಂ.ಏನ್.ವ್ಯಾಸರಾವ್ ಸಂಗೀತ: ರಾಜ್ ಕೋಟಿ ಗಾಯನ: ಚಿತ್ರಾ ಮತ್ತು ಎಸ್. ಪಿ. ಬಾಲಸುಭ್ರಮಣ್ಯಂ

ಅಡವಿ ದೇವಿಯಾ ಕಾಡು ಜನಗಳ ಈ ಹಾಡು ನಾಡಿನ ಜೀವ ತುಂಬಿದೆ
ಅಡವಿ ದೇವಿಯಾ ಕಾಡು ಜನಗಳ ಈ ಹಾಡು ನಾಡಿನ ಜೀವ ತುಂಬಿದೆ
ಕನ್ನಡ ನಾಡೇ ಮಧುಚಂದ್ರ ಕನ್ನಡ ನುಡಿಯೇ ಶ್ರೀಗಂಧ 
ಉಸಿರೂ ನೀಡಿದೇ... ಹಸಿರು ತೂಗಿದೆ.. ಮಧುರವಾಗಿದೇ ...   
ಅಡವಿ ದೇವಿಯಾ ಕಾಡು ಜನಗಳ ಈ ಹಾಡು ನಾಡಿನ ಜೀವ ತುಂಬಿದೆ 
ಅಡವಿ ದೇವಿಯಾ ಕಾಡು ಜನಗಳ ಈ ಹಾಡು ನಾಡಿನ ಜೀವ ತುಂಬಿದೆ 

ಕಾಡು ಮಲ್ಲೆಯಂಗೆ ಜೇನು ಕಿತ್ತು ಪೂಜೆ ಕೊಟ್ಟು 
ಜಾಜಿ ಮಲ್ಲೆ ತಂದು ದೇವಮ್ಮಗೆ ಮಾಲೆ ಇಟ್ಟು 
ಏಳು ಹಟ್ಟಿಯಿಂದ ಏಳು ರಾತ್ರಿ ಏಳು ಹಗಲು 
ಏಳು ಕನ್ಯೆರಿಗೆ ಸೋಬಲಕ್ಕೀ ದೇವಿಗಿಡಲು 
ಚಿಗೊರೊಡೆಯಿತು ಬೆಳಕರಳಿತು ಹೊಳೆ ಹರಿಸಿತು ರಸತಾಣ 
ಮನೆಮನೆಯಲೂ ಜನಮನದಲೂ ಶಿವನೊಲವಿನ ಶುಭ ಧ್ಯಾನ 
ಕನ್ನಡ ನೆಲವೇ ಧನ್ಯ ಕನ್ನಡ ಜಲವೇ ಮಾನ್ಯ 
ಕನ್ನಡ ನೆಲವೇ ಧನ್ಯ ಕನ್ನಡ ಜಲವೇ ಮಾನ್ಯ 
ಉಸಿರೂ ನೀಡಿದೇ... ಹಸಿರು ತೂಗಿದೆ.. ಮಧುರವಾಗಿದೇ ...   
ಅಡವಿ ದೇವಿಯಾ ಕಾಡು ಜನಗಳ ಈ ಹಾಡು ನಾಡಿನ ಜೀವ ತುಂಬಿದೆ 

ಯಾರೇ ಇಲ್ಲಿ ಬಂದ್ರು ಸ್ನೇಹಕ್ಕೇನು ಕಮ್ಮಿ ಇಲ್ಲಾ 
ನಮ್ಮ ಪ್ರೀತಿಯಲ್ಲಿ ಸುಳ್ಳು ಮೋಸ ಒಂದು ಇಲ್ಲಾ  
ನಮ್ಮ ಧರ್ಮದಲ್ಲಿ ಬೇಧ ಭಾವ ಕಾಣೋದಿಲ್ಲಾ 
ನಮ್ಮ ನೀತಿಯಲ್ಲಿ ಕಾಡೇ ಇಲ್ಲದೇ ನಾಡೇ ಇಲ್ಲಾ 
ಗಿಡಮರಗಳೇ ತರುಲತೆಗಳೇ ನದಿವನಗಳೇ ವರದಾನ 
ಜನ ಬೆರೆತರೆ ಸಮರಸದಲಿ ಅದೇ ಒಲವಿನ ಹೊಸಗಾನ 
ಕನ್ನಡ ಜನರೇ ಚಂದ ಕನ್ನಡ ಮನವೇ ಅಂದ 
ಕನ್ನಡ ಜನರೇ ಚಂದ ಕನ್ನಡ ಮನವೇ ಅಂದ 
ಉಸಿರೂ ನೀಡಿದೇ... ಹಸಿರು ತೂಗಿದೆ.. ಮಧುರವಾಗಿದೇ ...   
ಅಡವಿ ದೇವಿಯಾ ಕಾಡು ಜನಗಳ ಈ ಹಾಡು ನಾಡಿನ ಜೀವ ತುಂಬಿದೆ 
--------------------------------------------------------------------------------------------------------------------------

ರಾಯರು ಬಂದರು ಮಾವನ ಮನೆಗೆ (1993) - ಮುದ್ದಿನ ಹುಡುಗಿ ಚೆಂದ
ಸಾಹಿತ್ಯ: ಎಂ.ಏನ್.ವ್ಯಾಸರಾವ್ ಸಂಗೀತ: ರಾಜ್ ಕೋಟಿ ಗಾಯನ: ಏಸುದಾಸ
ಆಆಆ... ಆಆಆ... ಆಆಆ..  ಸಾಗಮಪನಿಸ ನಿದಮಪಮಗರಿಗರಿಸ
ನಗು ಮೋಮು ಕನ ಲೇನಿ ನಾ ಜಾಲಿ ತೆಲಿಸಿ
ನನ್ನು ಬ್ರೋವ ರಾದಾ ಶ್ರೀ ರಘುವರ ನೀ ।। ನಗು।।

ಅ. ನಗ ರಾಜ.. ।।  ಧರ ನೀದು ಪರಿವಾರುಲೆಲ್ಲ
ಒಗಿ ಬೋಧನ ಜೇಸೇ ವಾರಲು ಕಾರೇಯಟುಲುಂಡುದುರೇ ನೀ .. ।। ನಗು ।।

ಚ. ಖಗ ರಾಜು ನೀಯಾನತಿ ವಿನಿ ವೇಗ ಚನ ಲೇಡೋ
ಗಗನಾನಿಕಿಲಕು ಬಹು ದೂರಂಬನಿನಾಡೋ
ಜಗಮೇಲೇ.. ।।  ಪರಮಾತ್ಮ ಎವರಿತೋ ಮೊರಲಿಡುದು
ವಗ ಜೂಪಕು ತಾಳನು ನನ್ನೇಲುಕೋರಾ ತ್ಯಾಗರಾಜ ನುತ ನೀ ।। ನಗು ।।
------------------------------------------------------------------------------------------------------------------------

No comments:

Post a Comment