455. ತ್ರಿಮೂರ್ತಿ (1975)


ತ್ರಿಮೂರ್ತಿ ಚಿತ್ರದ ಹಾಡುಗಳು 
  1. ಮೂಗನ ಕಾಡಿದರೇನು ಸವಿ ಮಾತನು ಆಡುವನೇನು 
  2. ಏಕೋ ನಾ ಮನಸೋತೆನು 
  3. ಲೇ ಲೇ ಅಪ್ಪನ ಮಗಳೇ ಲೇ  ಲೇ ಅಮ್ಮನ ಮಗಳೇ 
  4. ಏನು ಮಾಡಲಿ ನಾನು 
  5. ಹಣ್ಣು ಮಾಗಿದೆ 
ತ್ರಿಮೂರ್ತಿ (1975) - ಮೂಗನ ಕಾಡಿದರೇನು
ಗಾಯನ : ಡಾ.ರಾಜ್‍ಕುಮಾರ್ ಸಾಹಿತ್ಯ : ಚಿ.ಉದಯಶಂಕರ್ ಸಂಗೀತ : ಜಿ.ಕೆ.ವೆಂಕಟೇಶ್

ಮೂಗನ ಕಾಡಿದರೇನು ಸವಿ ಮಾತನು ಹಾಡುವನೇನು
ಮೂಗನ ಕಾಡಿದರೇನು  ಸವಿ ಮಾತನು ಆಡುವನೇನು
ಕೋಪಿಸಲು ನಿಂದಿಸಲು  ಮೌನವ ಮೀರುವನೇನು
ಮೂಗನ ಕಾಡಿದರೇನು   ಸವಿ ಮಾತನು ಆಡುವನೇನು

ಬೆಳಕೆಲ್ಲೊ ಕಾಣಿಸದು  ಕತ್ತಲೆಯೆ ತುಂಬಿಹುದು
ನಿಜವೆಲ್ಲೊ ಓಡಿಹಿದು  ವಂಚನೆಯೆ ಕಾಣುವುದು
ದಾರಿಯೇ ತೋರದೆ  ಅಲೆಯುತಲಿರುವೀಗ
ಮೂಗನ ಕಾಡಿದರೇನು ಸವಿ ಮಾತನು ಆಡುವನೇನು
ಕೋಪಿಸಲು ನಿಂದಿಸಲು ಮೌನವ ಮೀರುವನೇನು
ಮೂಗನ ಕಾಡಿದರೇನು  ಸವಿ ಮಾತನು ಆಡುವನೇನು

ನನ್ನವರು ದೂರಗಿ  ಬಂಧುಗಳು ಹಗೆಯಾಗಿ
ನೆಮ್ಮದಿಯು ಮರೆಯಾಗಿ ಅಳುತಿರಲು ನೋವಾಗಿ
ಏನನು ಹೇಳಲಿ  ಕೆಣಕಲು ನನ್ನೀಗ
ಮೂಗನ ಕಾಡಿದರೇನು ಸವಿ ಮಾತನು ಆಡುವನೇನು
ಕೋಪಿಸಲು ನಿಂದಿಸಲು ಮೌನವ ಮೀರುವನೇನು
ಮೂಗನ ಕಾಡಿದರೇನು ಸವಿ ಮಾತನು ಆಡುವನೇನು
-----------------------------------------------------------------------------------------------------------------------

ತ್ರಿಮೂರ್ತಿ  (೧೯೭೫) - ಎಲ್ಲ ಬಲ್ಲವರಿಲ್ಲ, ಬಲ್ಲವರು ಯಾರಿಲ್ಲ
ರಚನೆ: ಚಿ. ಉದಯಶಂಕರ್   ಸಂಗೀತ: ಜಿ. ಕೆ. ವೆಂಕಟೇಶ್  ಗಾಯಕ : ಡಾ. ರಾಜಕುಮಾರ್

ಎಲ್ಲ ಬಲ್ಲವರಿಲ್ಲ, ಬಲ್ಲವರು ಯಾರಿಲ್ಲ ಸುಮ್ಮನಿರಬಲ್ಲವರು ಇಲ್ಲವೇ ಇಲ್ಲ
ಏನು ಮಾಡಲಿ ನಾನು ಏನು ಹೇಳಲಿ
ಏನು ಮಾಡಲಿ ನಾನು ಏನು ಹೇಳಲಿ
ಕಣ್ಣುಗಳಿದ್ದು ಕುರುಡರ ಹಾಗೆ ಹಲವರು ನೆಡೆಯುವರು
ಎಲ್ಲಾ ಬಲ್ಲೆನು ಎನ್ನುತ ಹೋಗಿ ಹಳ್ಳದಿ ಬೀಳುವರು
ಏನು ಮಾಡಲಿ ನಾನು ಏನು ಹೇಳಲಿ

ಎಂದೋ ದುಡುಕಿದ ತಪ್ಪಿಗೆ ಇಂದು ದಂಡನೆ ಹೊಂದಿರುವೆ
ಯಾರೋ ಮಾಡಿದ ಮೋಸಕೆ ಇಂದು ನಾ ಬಲಿಯಾಗಿರುವೆ
ಏಕೋ ಏನೋ ನೀ ದಯೆ ತೋರದೆ ಇನ್ನೂ ಅಳಿಸಿರುವೆ
ನನ್ನ ಉಳಿಸುವರ ನೋವ ಅಳಿಸುವರ ಯಾರು ಕಾಣೆನು ಈ ಜಗದಿ
ನಿನ್ನ ಹೊರೆತು ಬೇರಾರು ಇಲ್ಲವೊ ಕಾಪಾಡು ತಂದೆ
ಏನು ಮಾಡಲಿ ನಾ ಏನು ಹೇಳಲಿ
ಏನು ಮಾಡಲಿ ನಾನು ಏನು ಹೇಳಲಿ

ಕರುಣಿಸಿ ನನ್ನೀ ಕೈಗಳ ಹಿಡಿದು ನೆಡೆಸುತ ಉದ್ಧರಿಸು
ಜ್ಯೋತಿಯ ಬೆಳಗಿಸಿ ನನ್ನೀ ಬಾಳಿನ ಕತ್ತಲೆಯಾ ಅಳಿಸು
ದ್ವೇಷವ ತೊಲಗಿಸು ನಿಜವನು ತೋರಿಸು ನನ್ನನು ನೀ ಉಳಿಸು
ಎಲ್ಲ ಮರೆತಿರುವೆ ನಿನ್ನ ನಂಬಿರುವೆ ತಂದೆ ಶರಣು ನಾ ಬಂದಿರುವೆ
ನನ್ನ ಮನೆಯನು ನಿಲ್ಲಿಸು ಎಂದು ನಾ ಬೇಡುತಿರುವೆ
ಏನು ಮಾಡಲಿ ನಾ ಏನು ಹೇಳಲಿ
ಏನು ಮಾಡಲಿ ನಾನು ಏನು ಹೇಳಲಿ
ಕಣ್ಣುಗಳಿದ್ದು ಕುರುಡರ ಹಾಗೆ ಹಲವರು ನೆಡೆಯುವರು
ಎಲ್ಲಾ ಬಲ್ಲೆನು ಎನ್ನುತ ಹೋಗಿ ಹಳ್ಳದಿ ಬೀಳುವರು
ಏನು ಮಾಡಲಿ ನಾ ಏನು ಹೇಳಲಿ
ಏನು ಮಾಡಲಿ ನಾ ಏನು ಹೇಳಲಿ
--------------------------------------------------------------------------------------------------------------------

ತ್ರಿಮೂರ್ತಿ (೧೯೭೫) - ಹಣ್ಣು ಮಾಗಿದೆ ಸಿಹಿಯು ತುಂಬಿದೆ
ರಚನೆ: ಚಿ. ಉದಯಶಂಕರ್    ಸಂಗೀತ: ಜಿ. ಕೆ. ವೆಂಕಟೇಶ್  ಗಾಯಕ: ಡಾ. ರಾಜಕುಮಾರ್, ಎಸ್. ಜಾನಕಿ


ಗಂ: ಹಣ್ಣು ಮಾಗಿದೆ ಸಿಹಿಯು ತುಂಬಿದೆ ಕಣ್ಣ ಕಾಡುವ ಬಣ್ಣ ಬಂದಿದೆ
       ಹಣ್ಣು ಮಾಗಿದೆ ಸಿಹಿಯು ತುಂಬಿದೆ ಕಣ್ಣ ಕಾಡುವ ಬಣ್ಣ ಬಂದಿದೆ
       ಕಡಿದು ನೋಡು ಬಾ ಎಂದಿದೆ
      ಹಣ್ಣು ಮಾಗಿದೆ ಸಿಹಿಯು ತುಂಬಿದೆ ಕಣ್ಣ ಕಾಡುವ ಬಣ್ಣ ಬಂದಿದೆ
ಹೆ: ಕಾದೂ ಸೋತೆನು ಇನ್ನು ತಾಳೆನು ಮಾತು ಏಕೆ ಬಾ ಸನಿಹಕೆ
     ರಸಿಕ ನಿನಗೆ ಈ ಕಾಣಿಕೆ
     ಕಾದೂ ಸೋತೆನು ಇನ್ನು ತಾಳೆನು ಮಾತು ಏಕೆ ಬಾ ಸನಿಹಕೆ
ಗಂ: ಬೀಸಿದ ತಂಗಾಳಿ ಸೆರಗ ಸೆಳೆದು ನಿನ್ನಂದ
    ಬೀಸಿದ ತಂಗಾಳಿ ಸೆರಗ ಸೆಳೆದು ನಿನ್ನಂದ 
   ನೋಡುತ ತಾನಿಂದು ಹೊಂದುತಿದೆ ಆನಂದ
ಹೆ: ಬೀಸುವ ಗಾಳಿಗೆ ದಾರಿ ನೀಡದಂತೆನ್ನ
    ಬೀಸುವ ಗಾಳಿಗೆ ದಾರಿ ನೀಡದಂತೆನ್ನ
     ಬಳಸುತ ಮೈಯ್ಯನ್ನು ಸುಖವ ನೀಡು ಬಾ ಚಿನ್ನ
ಗಂ: ನಾನಿಂದು ನಿನ್ನಲಿ ಒಂದಾದೆ
ಹೆ: ನಾನಿಂದು ನಿನ್ನೆದೆ ಹೂವಾದೆ
    ಬಿಡೆನು ಎಂದು ನಾ ನಿನ್ನನು
ಗಂ: ಹಣ್ಣು ಮಾಗಿದೆ ಸಿಹಿಯು ತುಂಬಿದೆ ಕಣ್ಣ ಕಾಡುವ ಬಣ್ಣ ಬಂದಿದೆ
     ಕಡಿದು ನೋಡು ಬಾ ಎಂದಿದೆ
ಹೆ: ಕಾದೂ ಸೋತೆನು ಇನ್ನು ತಾಳೆನು ಮಾತು ಏಕೆ ಬಾ ಸನಿಹಕೆ
     ರಸಿಕ ನಿನಗೆ ಈ ಕಾಣಿಕೆ

ಗಂ: ಪ್ರೇಮದ ಗುಡಿಯಲಿ ಗೋಪುರಗಳು ಕಂಡಿವೆ 
      ಪ್ರೇಮದ ಗುಡಿಯಲಿ ಗೋಪುರಗಳು ಕಂಡಿವೆ
      ಪೂಜಿಸುವಾಸೆಗೆ ಕೈಗಳೆರಡು ಚಾಚಿವೆ
ಹೆ: ಒಲವಿನ ಮಂತ್ರಕೆ ತನುವು ಸೋತು ವಾಲಿದೆ
      ಒಲವಿನ ಮಂತ್ರಕೆ ತನುವು ಸೋತು ವಾಲಿದೆ
      ಪ್ರಣಯದ ಘಂಟೆಯ ನಾದ ಕಿವಿಯ ತುಂಬಿದೆ
ಗಂ: ಇಂದೇನೋ ಹೊಸತನ ನನ್ನಲ್ಲಿ
ಹೆ: ಇನ್ನೇನೂ ಬೇಡೆನು ನಿನ್ನಲ್ಲಿ
     ತನುವು ಮನವು ಹೂವಾಯಿತು
ಗಂ: ಹಣ್ಣು ಮಾಗಿದೆ ಸಿಹಿಯು ತುಂಬಿದೆ ಕಣ್ಣ ಕಾಡುವ ಬಣ್ಣ ಬಂದಿದೆ
       ಕಡಿದು ನೋಡು ಬಾ ಎಂದಿದೆ
ಹೆ: ರಸಿಕ ನಿನಗೆ ಈ ಕಾಣಿಕೆ
------------------------------------------------------------------------------------------------------------------------

ತ್ರಿಮೂರ್ತಿ (೧೯೭೫) - ಲೇ.. ಲೇ... ಅಪ್ಪನ ಮಗಳೆ, ಲೇ..ಲೇ... ಅಮ್ಮನ ಮಗಳೇ
ರಚನೆ: ಚಿ. ಉದಯಶಂಕರ್    ಸಂಗೀತ: ಜಿ. ಕೆ. ವೆಂಕಟೇಶ್  ಗಾಯಕ: ಡಾ. ರಾಜಕುಮಾರ್, 

ಲೇ.. ಲೇ... ಅಪ್ಪನ ಮಗಳೆ, ಲೇ..ಲೇ... ಅಮ್ಮನ ಮಗಳೇ
ಲೇ.. ಲೇ... ಅಪ್ಪನ ಮಗಳೆ, ಲೇ..ಲೇ... ನಿಮ್ಮಮ್ಮನ ಮಗಳೇ
ನನ್ನನ್ನು ಕಂಡು ಯಾರಿವನೆಂದು ಕೇಳೋದೆನೇ ಮಾವನ ಮಗಳೇ 
ಲೇ.. ಲೇ... ಅಪ್ಪನ ಮಗಳೆ, ಲೇ..ಲೇ... ಅಮ್ಮನ ಮಗಳೇ
ಲೇ.. ಲೇ... ಅಪ್ಪನ ಮಗಳೆ, ಲೇ..ಲೇ... ನಿಮ್ಮಮ್ಮನ ಮಗಳೇ 

ಸೀಮೆಯ ಸುತ್ತಿ ಬಂದ ರೌಡಿ ಕಣೇ, 
ನಾ ಕೆಟ್ಟೋರ ಪಾಲಿಗೆ ಕೆಟ್ಟೋರ ವೈರಿ ಕಣೇ  
ಊರೂರು ಅಲೆಯುವ ದುಷ್ಟಾ ಕಣೇ
ಇಂಥ ಪಾಪಿಷ್ಠರಿಗೆ ಅದು ಗೊತ್ತು ಕಣೇ
ವಂಚನೆ ಮಾಡೋ ಗುಂಪಿಗೆಲ್ಲಾ ಬುದ್ದಿ ಕಲಿಸೋನು
ಆಸ್ತಿ ನುಂಗೋ ಠಕ್ಕರಿಗೆಲ್ಲಾ ಪಾಠ ಕಲಿಸೋನು
ಯಾರೆಂದು ತಿಳಿಯಿತೇ ಮಾವನ ಮಗಳೇ
ಲೇ.. ಲೇ... ಅಪ್ಪನ ಮಗಳೆ, ಲೇ..ಲೇ... ಅಮ್ಮನ ಮಗಳೇ
ಲೇ.. ಲೇ... ಅಪ್ಪನ ಮಗಳೆ, ಲೇ..ಲೇ... ನಿಮ್ಮಮ್ಮನ ಮಗಳೇ 

ಎಲ್ಲಾ ಬಲ್ಲೋರು ಕೋಟಿ ಉಂಟು ಕಣೇ 
ನನ್ನ ಮರ್ಮ ಬಲ್ಲೋರು ಯಾರು ಇಲ್ಲ ಕಣೇ
ನ್ಯಾಯ ಎಂಬೋದು ಒಂದು ಕತ್ತಿ ಕಣೇ
ಆ ಕತ್ತಿ ಮೇಲೆ ನಡೆಯೋ ಭೂಪ ಕಣೇ
ನೆತ್ತಿಯ ಮೇಲೆ ಕತ್ತಿ ಉಂಟು ಯಾರು ಕಾಣರು
ಕುತ್ತಿಗೆ ಮೇಲೆ ಬೀಳೋ ಕ್ಷಣವ ಯಾರು ಬಲ್ಲರು
ಏನೆಂದು ವಿಷಯವ ನೀನೇ ಬಲ್ಲೇ
ನಾನೇನು ಹೇಳೇನು ಮಾವನ ಮಗಳೇ
ಲೇ.. ಲೇ... ಅಪ್ಪನ ಮಗಳೆ, ಲೇ..ಲೇ... ಅಮ್ಮನ ಮಗಳೇ
ಲೇ.. ಲೇ... ಅಪ್ಪನ ಮಗಳೆ, ಲೇ..ಲೇ... ನಿಮ್ಮಮ್ಮನ ಮಗಳೇ
ನನ್ನನ್ನು ಕಂಡು ಯಾರಿವನೆಂದು ಕೇಳೋದೆನೇ ಮಾವನ ಮಗಳೇ 
ಲೇ.. ಲೇ... ಅಪ್ಪನ ಮಗಳೆ, ಲೇ..ಲೇ... ಅಮ್ಮನ ಮಗಳೇ
ಲೇ.. ಲೇ... ಅಪ್ಪನ ಮಗಳೆ, ಲೇ..ಲೇ... ನಿಮ್ಮಮ್ಮನ ಮಗಳೇ 
--------------------------------------------------------------------------------------------------------------------------

ತ್ರಿಮೂರ್ತಿ (೧೯೭೫) - ಏಕೋ ನಾ ಮನಸೋತೆನು.....
ರಚನೆ: ಚಿ. ಉದಯಶಂಕರ್    ಸಂಗೀತ: ಜಿ. ಕೆ. ವೆಂಕಟೇಶ್  ಗಾಯಕ: ಎಸ್.ಜಾನಕೀ 

ಅಆ.. ಅಆ...  ಲಲಾ ಲಲಾ
ಏಕೋ ಏಕೋ ನಾ ಮನಸೋತೆನು.. ಓ.. ನಲ್ಲಾ
ನಿನ್ನಂದ ಕಂಡು ಕಂಡಾಗ ನಸು ನಕ್ಕಾಗ
ಏಕೋ ನಾ ಮನಸೋತೆನು.....

ಯಾರು ಇಲ್ಲಾ ನಿಲ್ಲು ಓಡದೇ
ನಾನು ನೀನೇ ಬಾರೋ ಸಿಡುಕದೇ
ಯಾರು ಇಲ್ಲಾ ನಿಲ್ಲು ಓಡದೇ
ನಾನು ನೀನೇ ಬಾರೋ ಸಿಡುಕದೇ
ಕಣ್ಣನೆಯೇ ಗಾಳಿಗೇ ಬಂದೊಡಗಿದೆ  
ಬಳ್ಳಿ ನಡು ಬಳುಕುತಲಿ  ಆಡಿದೆ 
ಆಸರೆಯೂ ಬೇಕೆಂದು ಬೇಡುತಿದೆ 
ಸಮೀಪಿಸು ಸುಧಾರಿಸು ಕಾಡದೇ 
ಏಕೋ ನಾ ಮನಸೋತೆನು.. ಓ.. ನಲ್ಲಾ
ಆಹಾ.. ನಿನ್ನಂದ ಕಂಡು ಕಂಡಾಗ ನಸು ನಕ್ಕಾಗ

ಏನೋ ಆಸೆ ಹೇಳಲಾರೇನು
ಇನ್ನೂ ದೂರ ನಿಲ್ಲಲಾರೇನು
ಏನೋ ಆಸೆ ಹೇಳಲಾರೇನು
ಇನ್ನೂ ದೂರ ನಿಲ್ಲಲಾರೇನು
ಸಂಜೆಯಲಿ ರಂಗಿನಲಿ ಹೆಣ್ಣಾ 
ಚೆಂದವನು ಕಂಡಿಹೆಯಾ ಚೆನ್ನಾ 
ಕಂಗಳಲಿ ಕುಣಿಸುವೆನು ನಿನ್ನಾ 
ಸಲ್ಲಾಪರೀ ಸುಧಾರಿಸೇ ನಿನ್ನಾ  
ಏಕೋ ನಾ ಮನಸೋತೆನು.. ಓ.. ನಲ್ಲಾ
ನಿನ್ನಂದ ಕಂಡು ಕಂಡಾಗ ನಸು ನಕ್ಕಾಗ  

ನನ್ನ ನಲ್ಲಾ ಬಳಿಗೆ ಬಾರೆಯಾ 
ನನ್ನ ಮನದ ಬಯಕೆ ಕೇಳಯಾ 
ಈ ಸಮಯ ಬಯಸಿದರೇ ಬಾರದು 
ಬಾಡಿದ ಹೂ ದೇವರಿಗೆ ಸೇರದು 
ರಸಿಕನಿಗೆ ತಾಮಸವು ಸಲ್ಲದು 
ನಿಧಾನಿಪೆ ವಿಷಾದವೂ ತಪ್ಪದೂ.....  
ಏಕೋ ಏಕೋ ನಾ ಮನಸೋತೆನು.. ಓ.. ನಲ್ಲಾ
ಆಹಾ.. ನಿನ್ನಂದ ಕಂಡು ಕಂಡಾಗ ನಸು ನಕ್ಕಾಗ  
ಏಕೋ... ಅಹ್ಹ..ಏಕೋ...
--------------------------------------------------------------------------------------------------------------------------

No comments:

Post a Comment