52. ಸಾವಿರ ಸುಳ್ಳು (1985)


ಸಾವಿರ ಸುಳ್ಳು ಚಿತ್ರದ ಹಾಡುಗಳು 
  1. ಆಕಾಶ ನೀನಾದರೆ ಆ ತಾರೆ ನಾನಾಗುವೆ
  2. ಹೆಣ್ಣೆಂದರೇನು ಸೌಂದರ್ಯವೇನು 
  3. ಇಂಥ ಗಂಡ ನೋಡೇ ಇಲ್ಲಾ 
  4. ಕಣ್ಣೀರೇ ಇಂಗಿತೇ ಬಾಳಲ್ಲಿ 
ಸಾವಿರ ಸುಳ್ಳು (1985) - ಆಕಾಶ ನೀನಾದರೆ ಆ ತಾರೆ ನಾನಾಗುವೆ
ಸಾಹಿತ್ಯ: ಚಿ.ಉದಯಶಂಕರ್ ಸಂಗೀತ: ಶಂಕರ್-ಗಣೇಶ್ ಹಾಡಿದವರು: ಎಸ್.ಪಿ.ಬಿ., ಎಸ್.ಜಾನಕಿ

ಹೆಣ್ಣು : ಆಕಾಶ ನೀನಾದರೆ ಆ ತಾರೆ ನಾನಾಗುವೆ
ಗಂಡು : ಬಳ್ಳೀಲಿ ಹೂವು ಒಂದಾದ ಹಾಗೆ ನಿನ್ನನ್ನು ಸೇರಿ ಎಂದೆಂದೂ ಹೀಗೆ
           ಬಾಳೆಲ್ಲ ಆನಂದವೊ.. ಓಓಓ ... ಹೇಹೇಹೇ...  ಆಆಅ
          ಆ ತಾರೆ ನೀನಾದರೆ ಆಕಾಶ ನಾನಾಗುವೆ
ಹೆಣ್ಣು : ಬಳ್ಳೀಲಿ ಹೂವು ಒಂದಾದ ಹಾಗೆ ನಿನ್ನನ್ನು ಸೇರಿ ಎಂದೆಂದೂ ಹೀಗೆ
           ಬಾಳೆಲ್ಲ ಆನಂದವೊ.. ಓಓಓ ... ಓಓಓ ..ಓಓಓ ..

ಗಂಡು : ತಂಗಾಳಿ ಬಂದಾಗ ಹೂಗಂಧ ತಂದಾಗ
ಹೆಣ್ಣು : ನಾನು ಗಿಳಿಯಾಗಿ ಮೇಲೆ ಹಾರುವೆನು
ಗಂಡು : ಜೋಡಿ ಗಿಳಿಯಾಗಿ ನಾನು ಸೇರುವೆನು
ಹೆಣ್ಣು : ಮುದ್ದಾಗಿ ಆಗ ಹೇಳು ಮಾತೊಂದನು
ಗಂಡು : ಎಂದೆಂದೂ ಒಂದೇ ಮಾತೆ ನೀ ನನ್ನ ಪ್ರಾಣ ನಲ್ಲೆ
ಹೆಣ್ಣು : ಆಕಾಶ ನೀನಾದರೆ ಆ ತಾರೆ ನಾನಾಗುವೆ
ಗಂಡು : ಬಳ್ಳೀಲಿ ಹೂವು ಒಂದಾದ ಹಾಗೆ ನಿನ್ನನ್ನು ಸೇರಿ ಎಂದೆಂದೂ ಹೀಗೆ
           ಬಾಳೆಲ್ಲ ಆನಂದವೊ.. ಓಓಓ ... ಅಹ್ಹಹ್ಹಹ್ಹಾ.. ಹೇಹೇಹೇಹೇ

ಹೆಣ್ಣು : ಮಳೆಗಾಲ ಬಂದಾಗ ಮಳೆಬಿಲ್ಲ ಕಂಡಾಗ
ಗಂಡು : ನಾನು ನವಿಲಾಗಿ ಹಾಡಿ ಕುಣಿಯುವೆನು
ಹೆಣ್ಣು : ನಾನು ಜೊತೆಯಾಗಿ ಸೇರಿ ನಲಿಯುವೆನು
ಗಂಡು : ನನ್ನಲ್ಲಿ ಆಗ ಹೇಳು ನಿನ್ನಾಸೆಯ
ಹೆಣ್ಣು : ಎಂದೆಂದೂ ಒಂದೇ ಆಸೆ ನೀನೆಲ್ಲೊ ನಾನು ಅಲ್ಲೆ
ಗಂಡು : ಆ ತಾರೆ ನೀನಾದರೆ ಆಕಾಶ ನಾನಾಗುವೆ
ಹೆಣ್ಣು : ಬಳ್ಳೀಲಿ ಹೂವು ಒಂದಾದ ಹಾಗೆ ನಿನ್ನನ್ನು ಸೇರಿ ಎಂದೆಂದೂ ಹೀಗೆ
           ಬಾಳೆಲ್ಲ ಆನಂದವೊ.. ಓಓಓ ..(ಓಓಓ ) ಓಓಓ . (ಅಹ್ಹಹ್ಹಹ್ಹಾ.) ಓಓಓ
--------------------------------------------------------------------------------------------------------------------------

ಸಾವಿರ ಸುಳ್ಳು (೧೯೮೫) - ಹೆಣ್ಣೆಂದರೇನು ಸೌಂದರ್ಯವೇನು, ಕಣ್ಣಾರ ನಾ ಕಂಡೆನು
ಸಾಹಿತ್ಯ: ಚಿ.ಉದಯಶಂಕರ್ ಸಂಗೀತ: ಶಂಕರ್-ಗಣೇಶ್ ಹಾಡಿದವರು: ಎಸ್.ಪಿ.ಬಿ., ಎಸ್.ಜಾನಕಿ

ಗಂಡು : ಹೆಣ್ಣೆಂದರೇನು ಸೌಂದರ್ಯವೇನು, ಕಣ್ಣಾರ ನಾ ಕಂಡೆನು
            ಮೊಗವು ಎಂಥಾ ಚೆನ್ನ, ನಗುವು ಎಂಥಾ ಚೆನ್ನ
            ನಯನ ಎಂಥಾ ಚೆನ್ನ, ಅಧರ ಎಂಥಾ ಚೆನ್ನ
            ಇಂಥ ಅಂದ ಇಂಥ ಚೆಂದ ಎಲ್ಲೂ ಕಾಣೆ ನಾ
            ಇಂಥ ಅಂದ ಇಂಥ ಚೆಂದ ಎಲ್ಲೂ ಕಾಣೆ ನಾ
            ಹೆಣ್ಣೆಂದರೇನು ಸೌಂದರ್ಯವೇನು, ಕಣ್ಣಾರ ನಾ ಕಂಡೆನು
            ಮೊಗವು ಎಂಥಾ ಚೆನ್ನ, ನಗುವು ಎಂಥಾ ಚೆನ್ನ
           ನಯನ ಎಂಥಾ ಚೆನ್ನ, ಅಧರ ಎಂಥಾ ಚೆನ್ನ
           ಇಂಥ ಅಂದ ಇಂಥ ಚೆಂದ ಎಲ್ಲೂ ಕಾಣೆ ನಾ
           ಇಂಥ ಅಂದ ಇಂಥ ಚೆಂದ ಎಲ್ಲೂ ಕಾಣೆ ನಾ

ಗಂಡು : ವಯ್ಯಾರಿ ನಿನ್ನ ಕಣ್ಣ ನೋಟಕೆ ಬಂಗಾರಿ ನಿನ್ನ ಮೈಯ ಮಾಟಕೆ
            ನನ್ನಾಣೆ ನಲ್ಲೆ ನಾ ಸೋತೆ ನಲ್ಲೆ ನಿನ್ನಿಂದ ನಾನು ಹುಚ್ಚಾದೆ ನಲ್ಲೆ
            ನಡೆದು ಬರಲು, (ಲಲ್ಲಲ್ಲಲ್ಲಲ ) ಬಳುಕಿ ನಡುವು (ಲಲ್ಲಲ್ಲಲ್ಲಲ )
            ಎದೆಯ ಕುಣಿಸಿ, (ಆಆಅಅ ) ತರಲು ಚೆಲುವು (ಆಆಅಅ )
            ಓ ಚೆಲುವೆ ಒಲವ ಬಯಸಿ ಬಯಸಿ ಬಯಕೆ ಅರಳಲು
            ಹೆಣ್ಣೆಂದರೇನು ಸೌಂದರ್ಯವೇನು, ಕಣ್ಣಾರ ನಾ ಕಂಡೆನು
            ಮೊಗವು ಎಂಥಾ ಚೆನ್ನ, ನಗುವು ಎಂಥಾ ಚೆನ್ನ
            ನಯನ ಎಂಥಾ ಚೆನ್ನ, ಅಧರ ಎಂಥಾ ಚೆನ್ನ
            ಇಂಥ ಅಂದ ಇಂಥ ಚೆಂದ ಎಲ್ಲೂ ಕಾಣೆ ನಾ
            ಇಂಥ ಅಂದ ಇಂಥ ಚೆಂದ ಎಲ್ಲೂ ಕಾಣೆ ನಾ

ಹೆಣ್ಣು : ಆಆಆಆಅ.... ಆಆಆ... ಲಾಲಲಲಾ ..ಲಲಲಾ .. ಆಹಾಹಾಹಾ ಓಹೋಹೋ 
          ಲಾಲಲಲಾ ..ಲಲಲಾ  
ಗಂಡು : ಬಾನಿಂದ ಜಾರಿ ಬಂದ ರಂಭೆಯೊ ನಿನ್ನಾಸೆ ಕಂಡು ಇಲ್ಲಿ ನಿಂತೆಯೊ
           ಇದೇನು ಮೌನ ಇದೇನು ದ್ಯಾನ ಮುತ್ತಂತೆ ಒಂದು ಮಾತಾಡು ಚಿನ್ನ
ಹೆಣ್ಣು : ಕಣ್ಣೆ ಎಲ್ಲ,(ಆಆಆ)  ನುಡಿಯುತಿರಲು (ಆಆಆ)  ಬೇರೆ ಚಪಲ,(ಓಓಓ ) ಏಕೆ ಹೇಳು (ಹೂಂಹೂಂಹೂಂ)
ಗಂಡು :  ಓ...  ತರುಣಿ ನುಡಿಯೋ ಕೊಳಲ ಧನಿಯೋ ಗೆಳತಿ ಅರಿಯೆನು
            ಹೆಣ್ಣೆಂದರೇನು ಸೌಂದರ್ಯವೇನು, ಕಣ್ಣಾರ ನಾ ಕಂಡೆನು( ಅಹ್ಹಹ್ಹಾ )
            ಮೊಗವು ಎಂಥಾ ಚೆನ್ನ, ನಗುವು ಎಂಥಾ ಚೆನ್ನ
            ನಯನ ಎಂಥಾ ಚೆನ್ನ, ಅಧರ ಎಂಥಾ ಚೆನ್ನ
            ಇಂಥ ಅಂದ ಇಂಥ ಚೆಂದ ಎಲ್ಲೂ ಕಾಣೆ ನಾ
            ಇಂಥ ಅಂದ ಇಂಥ ಚೆಂದ ಎಲ್ಲೂ ಕಾಣೆ ನಾ
ಹೆಣ್ಣು : ಆಆಆಆಅ.... ಆಆಆ... (ಓಹೋಹೋಹೋಹೊಹೋ  ಓಹೋ ಒಹೋ ) ಆಆಆಆಆ ಆಆಆಆಆ 
           (ಓಹೋಹೋಹೋಹೊಹೋ  ಓಹೋ ಒಹೋ ) 
--------------------------------------------------------------------------------------------------------------------------

ಸಾವಿರ ಸುಳ್ಳು (1985) - ಇಂಥ ಗಂಡ ನೋಡೇ ಇಲ್ಲಾ
ಸಾಹಿತ್ಯ: ಚಿ.ಉದಯಶಂಕರ್ ಸಂಗೀತ: ಶಂಕರ್-ಗಣೇಶ್ ಹಾಡಿದವರು: ಎಸ್.ಪಿ.ಬಿ., ಎಸ್.ಜಾನಕಿ


ಕೋರಸ್ : ತಾಜಮ್ ತಾಜಮ್  ತಾಜಮ್ ತಾಜಮ್  ತಾಜಮ್ ತಾಜಮ್  ತಾಜಮ್ ತಾಜಮ್
               ತಾರಾರಂ ತಾರಾರಂ ತಾರಾರಂ ತಾರಾರಂ ತಾರಾರಂ ತಾರಾರಂ ತಾರಾರಂ ತಾರಾರಂ
ಗಂಡು : ಇಂಥ ಗಂಡ ನೋಡೇ ಇಲ್ಲ ಇಂಥ ಭೂಪ ಎಲ್ಲೂ ಇಲ್ಲ ಮಾತಿನಲ್ಲಿ ಸೋಲೊದಿಲ್ಲಾ
            ಮಾದುವೆಯಾಗಿ ವರುಷವಿಲ್ಲ ಹರುಷವಿಲ್ಲ ಸರಸವಿಲ್ಲ
ಹೆಣ್ಣು : ಈ ರೀತಿ ಹೇಗಾಯ್ತು ಕಾಣೇ ನನ್ನಲ್ಲಿ ನೀ ಹೇಳೇ ಜಾಣೆ
           ಈ ರೀತಿ ಹೇಗಾಯ್ತು ಕಾಣೇ ನನ್ನಲ್ಲಿ ನೀ ಹೇಳೇ ಜಾಣೆ
           ಇಂಥ ಗಂಡ ನೋಡೇ ಇಲ್ಲ ಇಂಥ ಭೂಪ ಎಲ್ಲೂ ಇಲ್ಲ ಮಾತಿನಲ್ಲಿ ಸೋಲೊದಿಲ್ಲಾ
            ಮಾದುವೆಯಾಗಿ ವರುಷವಿಲ್ಲ ಹರುಷವಿಲ್ಲ ಸರಸವಿಲ್ಲ
ಗಂಡು : ಈ ರೀತಿ ಹೇಗಾಯ್ತು ಕಾಣೇ ನನ್ನಲ್ಲಿ ನೀ ಹೇಳೇ ಜಾಣೆ
           ಈ ರೀತಿ ಹೇಗಾಯ್ತು ಕಾಣೇ ನನ್ನಲ್ಲಿ ನೀ ಹೇಳೇ ಜಾಣೆ

ಗಂಡು : ವಾವಾಂವ್ಯಾ ಯಾವನ್ಯಾವ್ ನ್ಯಾವಾವ್  ವಾವಾಂವ್ಯಾ ಯಾವನ್ಯಾವ್ ನ್ಯಾವಾವ್
ಹೆಣ್ಣು : ಇನ್ನೂ ಆರು ತಿಂಗಳೇ (ಲಲ್ಲಲ್ಲಾ ಲಾಲಾಲಾಲ ) ನೀನು ಅಪ್ಪನಾಗಲೂ         
ಗಂಡು : ಇನ್ನೂ ಆರು ತಿಂಗಳೇ (ಲಲ್ಲಲ್ಲಾ ಲಾಲಾಲಾಲ ) ಕೊಬ್ಬರೇ ಸಕ್ಕರೇ ಹಂಚಲೂ
           ಬಿಸಿ ಬಿಸಿ ಸುದ್ದಿಯೂ ಹೇಗಿದೇ ...
          ಬಿಸಿ ಬಿಸಿ ಸುದ್ದಿಯೂ ಹೇಗಿದೇ ಹೇ... ಹೇ.. ಹೇ.. ಹೇ.. ಹೇಹೇ .. ಒಹೋ.. ಆಹಾ.. ಆಹಾ
ಹೆಣ್ಣು : ಅಂತೂ ಇಂತೂ ನನ್ನ ತಮ್ಮ ತೊಟ್ಟಿಲನ್ನೂ ತೂಗುವಾ
ಗಂಡು : ಅಂತೂ ಇಂತೂ ನನ್ನ ಭಾವ ಲಾಲಿ ಲಾಲಿ ಹಾಡುವಾ
           ಲಾಯರನ್ ನೋಡಲೂ ಲೇಡಿ ಡಾಕ್ಟರನ್ ನೋಡಲೂ ತೊಟ್ಟಿಲ ಕಟ್ಟಲು
           ನಾನು ಜೋಗಳ ಹಾಡಲೂ ಲೊಲೊಳಾಯಿ
ಹೆಣ್ಣು : ಇಂಥ ಗಂಡ ನೋಡೇ ಇಲ್ಲ ಇಂಥ ಭೂಪ ಎಲ್ಲೂ ಇಲ್ಲ ಮಾತಿನಲ್ಲಿ ಸೋಲೊದಿಲ್ಲಾ
          ಮಾದುವೆಯಾಗಿ ವರುಷವಿಲ್ಲ ಹರುಷವಿಲ್ಲ ಸರಸವಿಲ್ಲ
ಗಂಡು : ಈ ರೀತಿ ಹೇಗಾಯ್ತು ಕಾಣೇ ನನ್ನಲ್ಲಿ ನೀ ಹೇಳೇ ಜಾಣೆ
           ಈ ರೀತಿ ಹೇಗಾಯ್ತು ಕಾಣೇ ನನ್ನಲ್ಲಿ ನೀ ಹೇಳೇ ಜಾಣೆ ಓ..ಓ..

ಹೆಣ್ಣು : ಇನ್ನೂ ನಿನ್ನ ಕೋಪಕೇ (ಲಲ್ಲಲ್ಲಲ್ಲಾಲಾ ) ಬೆಲೆಯೇ ಇಲ್ಲ ತಮ್ಮನೇ
ಗಂಡು : ಇನ್ನೂ ನಿನ್ನ ದೂರಕೇ (ಲಲ್ಲಲ್ಲಲ್ಲಾಲಾ ) ಹೋದರೇನು ಸುಮ್ಮನೇ ವಿರಸದ ನಾಟಕ ಏತಕೆ
            ವಿರಸದ ನಾಟಕ ಏತಕೆ ಹೇ... ಹೋ .. . ಹ್ಹಾ ..ಆ..  ಹೇಹೇ .. ಒಹೋ.. ಆಹಾ.. ಆಆ
ಹೆಣ್ಣು : ಎಂಥ ಧೀರನಾದರೇನು ಸೋಲಬೇಕು ಹೆಣ್ಣಿಗೇ  ಒಂದೇ ಒಂದು ರಾತ್ರಿ ಸಾಕೂ ಇಂಥ ಜಾಲಿ ಹಾಡಿಗೇ
ಗಂಡು : ರೇಡಿಯೋ ಕೇಳಿಲ್ಲವೇ ಇಪ್ಪತೈದು ಪೈಸೆಕೇ ಗತಿಯಿಲ್ಲವೇ ಇನ್ನೂ ನಿಮಗೂವೇ ಇಂಥ ವಿಷಯವೂ ಗೊತ್ತಿಲ್ಲವೇ
           ಇಂಥ ಗಂಡ ನೋಡೇ ಇಲ್ಲ ಇಂಥ ಭೂಪ ಎಲ್ಲೂ ಇಲ್ಲ ಮಾತಿನಲ್ಲಿ ಸೋಲೊದಿಲ್ಲಾ
            ಮಾದುವೆಯಾಗಿ ವರುಷವಿಲ್ಲ ಹರುಷವಿಲ್ಲ ಸರಸವಿಲ್ಲ
ಹೆಣ್ಣು : ಈ ರೀತಿ ಹೇಗಾಯ್ತು ಕಾಣೇ ನನ್ನಲ್ಲಿ ನೀ ಹೇಳೇ ಜಾಣೆ (ಆಆಆ)
ಇಬ್ಬರು :  ಈ ರೀತಿ ಹೇಗಾಯ್ತು ಕಾಣೇ ನನ್ನಲ್ಲಿ ನೀ ಹೇಳೇ ಜಾಣೆ
--------------------------------------------------------------------------------------------------------------------------

ಸಾವಿರ ಸುಳ್ಳು (1985) - ಕಣ್ಣೀರೇ ಇಂಗಿತೇ ಕಣ್ಣಲ್ಲಿ 
ಸಾಹಿತ್ಯ: ಚಿ.ಉದಯಶಂಕರ್ ಸಂಗೀತ: ಶಂಕರ್-ಗಣೇಶ್ ಹಾಡಿದವರು: ಎಸ್.ಪಿ.ಬಿ., ಎಸ್.ಜಾನಕಿ

ಕಣ್ಣೀರೇ ಇಂಗಿತೇ ಕಣ್ಣಲ್ಲಿ ನನ್ನಾಸೆ ಮುಗಿಯಿತೇ ಬಾಳಲ್ಲಿ
ಎಂದಿಗೇ ಕೊನೆ ಈ ವೇದನೆಯೂ ಆ ವಿಧಿರಾಯನ ಶೋಧನೆಯೂ ಅಹ್ಹಹಾಹಾ ...
ಕಣ್ಣೀರೇ ಇಂಗಿತೇ ಕಣ್ಣಲ್ಲಿ ನನ್ನಾಸೆ ಮುಗಿಯಿತೇ ಬಾಳಲ್ಲಿ
ಎಂದಿಗೇ ಕೊನೆ ಈ ವೇದನೆಯೂ ಆ ವಿಧಿರಾಯನ ಶೋಧನೆಯೂ

ನಾನೇಕೇ ಮದುವೆಯಾದೇ ಹೀಗೇಕೇ ಸೋತುಹೋದೇ ಅಹ್ಹಹ್ಹ ..
ನಾನೇಕೇ ಮದುವೆಯಾದೇ ಹೀಗೇಕೇ ಸೋತುಹೋದೇ
ಆ ಹೆಣ್ಣಾ ಚೆಲುವಾ ಕಂಡೂ ಹ್ಹೂಹ್ಹೂಹ್ಹೂ  ಮುಳ್ಳಲ್ಲಿ ಜಾರುತ ಬಿದ್ದೇ
ದಾರಿಯನೇ..  ಹ್ಹಹ್ಹ .. ಕಾಣೆನು ನಾ ಅಹ್ಹಹ್ಹಾ..   ಏತಕೆ ಈ ಗತಿಯಾದೇ ಹ್ಹಹ್ಹ..
ಕಣ್ಣೀರೇ ಇಂಗಿತೇ ಅಹ್ಹಹ್ಹ ಕಣ್ಣಲ್ಲಿ ನನ್ನಾಸೆ ಮುಗಿಯಿತೇ ಬಾಳಲ್ಲಿ ಅಯ್ಯೋ..
ಎಂದಿಗೇ ಕೊನೆ ಈ ವೇದನೆಯೂ ಆ ವಿಧಿರಾಯನ ಶೋಧನೆಯೂ ಓ.. ಗಾಡ್

ಯಮರಾಯ ನಿದಿರೇ ಏನೋ ನನ್ನ ಕೂಗೂ ಕೇಳದೇನೋ ಹಲೋ ...
ಯಮರಾಯ ನಿದಿರೇ ಏನೋ ನನ್ನ ಕೂಗೂ ಕೇಳದೇನೋ
ನಿನ್ನ ಕೋಣ ಸತ್ತಿತೇನೋ ನಿನಗೊಂದು ಕಾರಿಲ್ಲವೇನೋ
ಪಾಶವನೂ ಬೀಸುತಾ ಬಾ ತಾಳೇನು ತಾಮಸವನ್ನೂ ಅಹ್ಹಹ್ಹ.. 
ಕಣ್ಣೀರೇ ಇಂಗಿತೇ ಕಣ್ಣಲ್ಲಿ ನನ್ನಾಸೆ ಮುಗಿಯಿತೇ ಬಾಳಲ್ಲಿ ಅಯ್ಯೋ..
ಎಂದಿಗೇ ಕೊನೆ ಈ ವೇದನೆಯೂ ಆ ವಿಧಿರಾಯನ ಶೋಧನೆಯೂ
--------------------------------------------------------------------------------------------------------------------------

No comments:

Post a Comment