- ಮುತ್ತೇ ಪ್ರಥಮ ಅದುವೇ ಜಗದ ನಿಯಮ
- ಸಂಗೀತವೇ ನನ್ನ ದೇವರು ಚಪ್ಪಾಳೆಯೇ ನನ್ನ ಉಸಿರು
- ಶ್ರೀ ಕೃಷ್ಣ ಬಂದನೋ ಬೆಂಗಳೂರಿಗೇ
- ಯಾವುದೋ ಈ ಬೋಂಬೆ ಯಾವುದೋ
- ಭೂಲೋಕವೆಲ್ಲಾ ನಾನು ಸುತ್ತಿ ಸುತ್ತಿ ಬಂದೇ
- ಕೇಳಿ ಪ್ರೇಮಿಗಳೇ ಒಬ್ಬಳು ಸುಂದರಿ ಇದ್ದಳು
ಯುಗ ಪುರುಷ (1989) - ಮುತ್ತೇ ಪ್ರಥಮ.. ಅದುವೇ ಜಗದ ನಿಯಮ
ಸಾಹಿತ್ಯ / ಸಂಗೀತ: ಹಂಸಲೇಖ ಗಾಯನ: ಎಸ್.ಪಿ.ಬಿ., ವಾಣಿ ಜಯರಾಂ
ಹೆಣ್ಣು : ಮದುವೇ ಪ್ರಥಮ.. ಅದುವೇ ಜನರ ನಿಯಮ
ಗಂಡು : ಆ ಸೂರ್ಯ ಕಿರಣಗಳು.. ಹಸಿರು ಭೂಮಿಯನು ಚುಂಬಿಸದೇ
ಸಾಗರದ ಅಲೆಗಳಿವು.. ಮರಳ ತೀರವನು ಚುಂಬಿಸದೇ
ಝೇಂಕರಿಸೋ ದುಂಬಿಗಳು.. ನಗುವ ಹೂಗಳನು ಮುದ್ದಿಸದೇ
ಮುತ್ತೇ ಪ್ರಥಮ.. ಅದುವೇ ಜಗದ ನಿಯಮ
ಹೆಣ್ಣು : ಮದುವೇ ಪ್ರಥಮ.. ಅದುವೇ ಜನರ ನಿಯಮ
ಗಂಡು : ತಣ್ಣನೆ ಗಾಳಿ ಇದು ಬೀಸುತಿದೆ.. ನಿನ್ನಯ ಮೈ ಸಿರಿಗೆ ಮುತ್ತಿಟ್ಟಿದೇ
ಸೋಕದ ನಿನ್ನಯ ತುಟಿಗಳ..ನಾ... ಸೋಕ ಬಾರದೇ.. ಸೋಕ ಬಾರದೇ..
ಹೆಣ್ಣು : ಸಂಜೆಯ ವೇಳೆ ಇದು ಜಾರುತಿದೇ.. ನಿನ್ನಯ ಸಂಯಮವು ಮಿರುತಿದೇ..
ಮುತ್ತಿನ ಆರತಿ ನೀಡುವೆ ನಾ ತಾಳಬಾರದೇ.. ತಾಳಬಾರದೇ..
ಗಂಡು : ಮುತ್ತೇ ಪ್ರಥಮ.. ಅದುವೇ ಜಗದ ನಿಯಮ
ಹೆಣ್ಣು : ಮದುವೇ ಪ್ರಥಮ.. ಅಹ್ಹಹ್ಹಹ್ ಅದುವೇ ಜನರ ನಿಯಮ
ಗಂಡು : ಸಾವಿರ ಆಸೆಗಳು ಕಣ್ಣಲಿವೆ.. ಹೀರುವ ದಾರಿಗಳು ಮುತ್ತಲಿದೇ..
ಹಾರುವ ಮನಸಿಗೆ ಚುಂಬನವಾ...... ನೀಡಬಾರದೇ.. ನೀಡಬಾರದೇ..
ಹೆಣ್ಣು : ದೂರದ ಸ್ನೇಹದಲೆ ಪ್ರೇಮವಿದೇ.. ನೊಡುವ ನೋಟದಲೇ ಮೋಹವಿದೇ..
ಸೇರಲು ಕಾಯುವ ವಿರಹದಲೇ.. ಆಸೆ ತೀರದೇ.. ಆಸೇ ತಿರದೇ..
ಗಂಡು : ಮುತ್ತೇ ಪ್ರಥಮ.. ಅದುವೇ ಜಗದ ನಿಯಮ
ಹೆಣ್ಣು : ಮದುವೇ ಪ್ರಥಮ.. ಅದುವೇ ಜನರ ನಿಯಮ
ಗಂಡು : ಆ ಸೂರ್ಯ ಕಿರಣಗಳು.. ಹಸಿರು ಭೂಮಿಯನು ಚುಂಬಿಸದೇ.
ಸಾಗರದ ಅಲೆಗಳಿವು.. ಮರಳ ತೀರವನು ಚುಂಬಿಸದೇ.
ಝೇಂಕರಿಸೋ ದುಂಬಿಗಳು.. ನಗುವ ಹೂಗಳನು ಮುದ್ದಿಸದೇ..
------------------------------------------------------------------------------------------------------------------------
ಯುಗ ಪುರುಷ (1989) - ಸಂಗೀತವೇ ನನ್ನ ದೇವರು
ಸಾಹಿತ್ಯ / ಸಂಗೀತ : ಹಂಸಲೇಖ ಗಾಯನ : ಎಸ್. ಪಿ. ಬಾಲಸುಬ್ರಮಣ್ಯಂ
ಗಂಡು : (ಹಾಯ್ )ಹಾಯ್ ಫಾಲ್ಕ್ಸ್ ವೆಲ್ಕಮ್
ಲಾಲ ಲಾಲ ಲ ಲಲ ( ಲಾಲ ಲಾಲ ಲ ಲಲ ) ಪೂರ್ವದ (ಪೂರ್ವದ)
ಜನ್ಮವು (ಜನ್ಮವು) ಯಾವುದು. (ಯಾವುದು.. )
ಹಾಡುವ ಪುಣ್ಯವು ಯಾರದು.. ಯಾರದು..ನನ್ನದು.. ನನ್ನದು...
ಸಂಗೀತವೇ ನನ್ನ ದೇವರು (ಊಮ್ಊಮ್) ಚಪ್ಪಾಳೆಯೇ ನನ್ನ ಉಸಿರು.(ಊಮ್ಊಮ್) .
ಪೂರ್ವದ ಜನ್ಮವು ಯಾವುದು.. ಈ ಹಾಡುವ ಪುಣ್ಯವು ಯಾರದು..
ಈ ದಿನ ಈ ಜನ ನನ್ನದು.. ನನ್ನದು...

ಈ ನಿಮ್ಮ ಪ್ರೀತಿಯನು ಮರೆಯಲಾಗದು
ಎಲ್ಲರು :ಸಂಗೀತವೇ ನನ್ನ ದೇವರು ಚಪ್ಪಳೆಯೇ ನನ್ನ ಉಸಿರು..
ಗಂಡು : ಒಮ್ಮೆ ಹೋಳಿ ಹುಣ್ಣಿಮೆಯ ದಿವಸಾ ಚಂದಿರ ಬರದೆ ಕೆಟ್ಟಿತು ಎಲ್ಲಾ ಕೆಲಸ..
ಪ್ರೇಮಿಗಳು.. ಜೋಡಿಗಳು.. ನನ್ನ ಹತ್ತಿರ ಬಂದು ಸೇರಿದರು.. ಹೇ..
ಭೂಮಿಯಲಿ ಪ್ರೀತಿಸಲು ಸ್ಪೂರ್ತಿ ಇಲ್ಲ ಎಂದು ದೂರಿದರು.
ರಾಗ ರಥದ ಮೆಲೇರಿ ಅವಿತ ಚಂದಿರನ ಸೇರಿ..
ಹಾಡಿಸಿ ಕುಣಿಯಿಸಿ ಅವಿತ ಚಂದಿರನ ಹೊರತಂದೇ..
ಸಂಗೀತವೇ ನನ್ನ ದೇವರು (ಊಮ್ಊಮ್) ಚಪ್ಪಾಳೆಯೇ ನನ್ನ ಉಸಿರು.(ಊಮ್ಊಮ್) .
ಗಂಡು : ಒಮ್ಮೆ ದೇವಲೋಕದಲೀ ನಡೆದ ನಾಟ್ಯ ನೋಡಲೆಂದು ಇಂದ್ರ ಕರೆದ.. ಹ್ಹಾ..

ನನ್ನ ಜೋತೆ.. ನನ್ನ ಜನ.. ಕರೆದು ತರಲೇ ಎಂದು ಕೇಳಿದೆನು.... .ಅಹ್ಹಹ್ಹಹ್ಹ
ಸ್ವರ್ಗದಲಿ ಬೇರೆ ಯಾವ ತರಲೇ ಬೇಡ ಎಂದು ಹೇಳಿದನು.
ಇವರು ಇರದಾ ಆ ಸ್ವರ್ಗ ನನಗೆ ಬೇಡವೊ ಮೂರ್ಖ.
ಈ ತನು ಈ ಮನ ಇವರದೂ ಎಂದೇನೂ
ಸಂಗೀತವೇ ನನ್ನ ದೇವರು (ಊಮ್ಊಮ್) ಚಪ್ಪಾಳೆಯೇ ನನ್ನ ಉಸಿರು.(ಊಮ್ಊಮ್) .
ಪೂರ್ವದ ಜನ್ಮವು ಯಾವುದು.. ಈ ಹಾಡುವ ಪುಣ್ಯವು ಯಾರದು..
ಈ ದಿನ ಈ ಜನ ನನ್ನದು.. ನನ್ನದು...
ಎಲ್ಲರು :ಸಂಗೀತವೇ ನನ್ನ ದೇವರು ಚಪ್ಪಳೆಯೇ ನನ್ನ ಉಸಿರು..
ಈ ನಿಮ್ಮ ಪ್ರೀತಿಯನು ಮರೆಯಲಾಗದು
ರಪ್ಪಾಪ ರಪ್ಪಾಪ ರಪ್ಪಾಪ (ಏವರಿಬಡಿ )ರಪ್ಪಾಪಪಪ

----------------------------------------------------------------------------------------------------------------------
ಯುಗ ಪುರುಷ (1989) - ಶ್ರೀ ಕೃಷ್ಣ ಬಂದನೆ
ಸಾಹಿತ್ಯ / ಸಂಗೀತ : ಹಂಸಲೇಖ ಗಾಯನ : ಎಸ್. ಪಿ. ಬಾಲಸುಬ್ರಮಣ್ಯಂ
ಗಂಡು : ಹೇಯ್ ಹೇಯ್ ಹೇಯ್ ಹೇಯ್ ಹೇಯ್ ಹೇಯ್ ಹೇಯ್ ಹೇಯ್
ಸಂಗಡಿಗರು: ಶ್ರೀ ಕೃಷ್ಣ ಬಂದನೆ ಬೆಂಗಳೂರಿಗೆ ಗೋಪೇರಾ ಹಿಂಡು ಕಾಯಲೂ
ಗಿಂಜೋ ಕಾಮಣ್ಣರ ಬೆನ್ನು ಮೂಳೆಗೆ ಬೆಂಡೆತ್ತಿ ಬ್ರೇಕು ಹಾಕಲು
ಎಸ್.ಪಿ.ಬಿ : ಓ... ಬಳ್ಳಿ ಬಾಲೆಯರೇ ನೀವಿದ್ದರೆ ಕೋಲಾಟಾ
ಓ... ಮಳ್ಳಿ ನಾರಿಯರೇ ನೀವಿದ್ದರೆ ಕಾದಾಟಾ
ಸಂಗಡಿಗರು: ಶ್ರೀ ಕೃಷ್ಣ ಬಂದನೆ ಬೆಂಗಳೂರಿಗೆ ಗೋಪೇರಾ ಹಿಂಡು ಕಾಯಲು

ಕೋರಸ್ : ಮಥುರಾ ಸೆಂಟ್ರಲ್ ಜೇಲಿನಲ್ಲಿ ನೀ ಹುಟ್ಟಿದೆ ನೀ ಹುಟ್ಟಿದೆ
ಆ ಕಂಸನಾ ಪೀಸೂ ಮಾಡಲು... ಆ ಊರಿಗೆ ಪಿಸೂ ನೀಡಲು...
ಎಸ್.ಪಿ.ಬಿ: ಬೃಂದಾವನದ ಪಾರ್ಕಿನಲ್ಲಿ ಓಡಾಡಲು ಹಾಡೇಳಲು ನಾ ಹುಟ್ಟಿದೆ ಜಾಲಿ ಮಾಡಲು
ಕರೆ ಬಂತು ಕೇಡಿಗಳಾ ಕೊಲ್ಲಲು... ಹ್ಹಾ..
ಸಂಗಡಿಗರು: ನೀನೇನಯ್ಯ ಮಾಯಾಗಾರನು ಕತ್ತಿ ಗನ್ನಿಲ್ಲದೇನೆ ಗೆಲ್ಲಬಲ್ಲೆಯು
ಎಸ್.ಪಿ.ಬಿ: ಘುಮ್ಮೆಂದಿದೆ ಕಿವಿಯೆಲ್ಲವು ಬಾಲೆರ ಹೊಗಳು ಮಾತು ಕೇಳಿ ಕೇಳಿ

ಓ... ಬಳ್ಳಿ ಬಾಲೆಯರೇ ನೀವಿದ್ದರೆ ಕೋಲಾಟಾ ಹಹ್ಹಾ.. ಹಹ್ಹಾ
ಓ... ಮಳ್ಳಿ ನಾರಿಯರೇ ನೀವಿದ್ದರೆ ಕಾದಾಟ ಹಹ್ಹ... ಹ್ಹಹ್ಹಾ.. ಹ್ಹಾ..

ಕೋರಸ್ : ಸೀರೆ ಕದಿಯೋ ಹ್ಯಾಂಡಿನಲ್ಲಿ ಸೀರೆ ಕೊಳ್ಳುವೆ ಮಾನಾ ತರುವೆ
ನೂರಾ ಒಂದು ವಿಲ್ಲನ್ ಮಧ್ಯದಲ್ಲಿ ಮಾನಾ ಹೋಗೊ ಅಂತ ಟೈಮಿನಲ್ಲಿ
ಎಸ್.ಪಿ.ಬಿ: ನನ್ನ ಚಿಂತೆ ಯಾರಿಗಿಲ್ಲಾ ಊರ ಚಿಂತೆ ಹೇ.. ಎಲ್ಲಾ ಕಂತೆ
ಬಂದು ಬಿತ್ತು ನನ್ನ ಮೇಜಿನಲ್ಲಿ ಅರ್ಧ ಜಾಲಿ ಹೋಯ್ತು ಬಾಳಿನಲ್ಲಿ
ಕೋರಸ್ : ನಿನಗೇನಯ್ಯ ಮೋಜುಗಾರನು ಹತ್ತು ಹದಿನಾರು ನೂರು ಗೋಪೇಯರು
ಎಸ್.ಪಿ.ಬಿ: ಘುಮ್ಮೆಂದಿದೆ ಕಿವಿಯೆಲ್ಲವು ಬಾಲೆರ ಹೊಗಳು ಮಾತು ಕೇಳಿ ಕೇಳಿ
ಹೇಯ್ ತರತ್ತತ್ ತರತ್ತತ್ ಬಳ್ಳಿ ಬಾಲೆಯರೇ ನೀವಿದ್ದರೆ ಕೋಲಾಟಾ
ಟಟ್ಟಟ್ಟಟ ತಕಿಟ ತಕಿಟ ತತ್ ದಿಂತಾ ಹ್ಹಾ.. ಮಳ್ಳಿ ನಾರಿಯರೇ ನೀವಿದ್ದರೆ ಕಾದಾಟ ಹ್ಹಾ..ಆ
ಸಂಗಡಿಗರು: ಶ್ರೀ ಕೃಷ್ಣ ಬಂದನೆ ಬೆಂಗಳೂರಿಗೆ ಎಸ್.ಪಿ.ಬಿ: ರಪಪ್ಪಾ
ಸಂಗಡಿಗರು: ಗೋಪೇರಾ ಹಿಂಡು ಕಾಯಲೂ ಎಸ್.ಪಿ.ಬಿ: ತುರುತ್ತುತೂ
ಸಂಗಡಿಗರು: ಗಿಂಜೋ ಕಾಮಣ್ಣರ ಬೆನ್ನು ಮೂಳೆಗೆ ಎಸ್.ಪಿ.ಬಿ: ಹೇಹೇಹ್ಹೇ
ಸಂಗಡಿಗರು: ಬೆಂಡೆತ್ತಿ ಬ್ರೇಕು ಹಾಕಲು ಎಸ್.ಪಿ.ಬಿ: ಹ್ಹಹ್ಹಹ್ಹಾ
-----------------------------------------------------------------------------------------------------------------------
ಯುಗ ಪುರುಷ (1989) - ಯಾವುದೋ... ಈ ಬೊಂಬೇ ಯಾವುದೋ..
ಸಾಹಿತ್ಯ / ಸಂಗೀತ: ಹಂಸಲೇಖ ಗಾಯನ : ಎಸ್. ಪಿ. ಬಾಲಸುಬ್ರಮಣ್ಯಂ
ಒನ್ ಟೂ ಥ್ರೀ ಫೋರ್ ಜುಮ್. ಜುಜುಮ್.. ಜುಮ್ ಜು ಜುಮ್..ನಿಸಗರಿಸ..
(ಜುಮ್. ಜುಜುಮ್.). ಈ ತಾಳ ಇದ್ದರೇ (ಜುಮ್. ಜುಜುಮ್.)..

ಹಾಡು ಬಾರದೇ.. (ಜುಮ್. ಜುಜುಮ್.).ಈ ಹಾಡು ಇದ್ದರೇ (ಜುಮ್. ಜುಜುಮ್.)
ನಿದ್ದೆ ಬಾರದೇ..(ಜುಮ್. ಜುಜುಮ್.) ಆ ನಿದ್ದೆ ಬಂದರೇ (ಜುಮ್. ಜುಜುಮ್.)
ಕನಸು ಬಾರದೇ.. (ಜುಮ್. ಜುಜುಮ್.) ಆ ಕನಸಿನಲ್ಲಿ.. ಈ ಬೊಂಬೆ ಕಾಣದೇ
(ಜೂಜುಜೂಜು ಜೂಜುಜೂಜು ಜೂಜುಜೂಜು )

ಯಾವುದೋ... ಈ ಬೊಂಬೆ ಯಾವುದೋ..(ಜುಮ್. ಜುಜುಮ್.)
ಉರ್ವಶಿಯ ಕುಲವೋ.. (ಜುಮ್. ಜುಜುಮ್.) ಮೇನಕೆಯ ಚೆಲುವೋ..(ಜುಮ್. ಜುಜುಮ್.)
ಯಾವುದೋ ಈ ಅಂದ ಯಾವುದೋ..(ಜುಮ್. ಜುಜುಮ್.)
ಬೇಲೂರಿನ ಶಿಲೆಯೋ.. (ಜುಮ್. ಜುಜುಮ್.)ಶಾಂತಲೆಯ ಕಲೆಯೋ..(ಜುಮ್. ಜುಜುಮ್.)
ಕಾಳಿದಾಸನ (ಓಓಓಓಓ) ಪ್ರೇಮ ಗೀತೆಯೋ..
ಕಾಳಿದಾಸನ (ಓಓಓಓಓ) ಪ್ರೇಮ ಗೀತೆಯೋ..
ಠೇವ್‍ಡಠಾವ್ ಠೇವ್‍ಡಠಾವ್ ಠೇವ್‍ಡಠಾವ್ ಠಾ...ಆಆಆಆಆ..
(ಲಾಲ.. ಲಲ್ಲ.. ಲಾಲ.. ಲಲ್ಲ.. ಲಾಲ.. ಲಲ್ಲ.. ಲಾಲಲ್ಲ್ಲ
ಲಾಲ.. ಲಲ್ಲ.. ಲಾಲ.. ಲಲ್ಲ.. ಲಾಲ.. ಲಲ್ಲ.. ಲಾಲಲ್ಲ್ಲ
ನೂರಾರು ಹೂಗಳಿದ್ದರೂ ಈ ಅಂದ ಬೇರೆ.ಆ ತಾರೆ ಮಿನುಗುತಿದ್ದರೂ.. ಈ ಕಣ್ಣೇ ಬೇರೆ... ನೀನ್ಯಾರೇ...
ನೀನಿಲ್ಲಿ ಸುಮನಿದ್ದರೂ ಒಳಮಾತೇ ಬೇರೇ..ಹಾಡಲ್ಲೇ ನೀನು ಇದ್ದರೂ ಎದುರಿರುವ ತಾರೇ.. ಹಲೋ.. ನೀನ್ಯಾರೇ.
ನನ್ನ ಮನದ ಪ್ರೇಮ ರಾಗಕೇ ನಿನ್ನ ಎದೆಯ ತಾಳ ಇದ್ದರೇ...
ನಾನು ಹಾಡೋ ನೂರು ಭಾವಕೆ ನೀನು ಒಮ್ಮೆ ನೋಡಿ ನಕ್ಕರೇ ಸಾಕು....
ಲಾಲ.. ಲಲ್ಲ.. ಲಾಲಾ ಲ ತನನ ತಾನಾನ ನಾನನನ
ಯಾವುದೋ.. ಈ ಬೊಂಬೆ ಯಾವುದೋ.. ಯಾವುದೋ..... ಈ ಬೊಂಬೆ ಯಾವುದೋ..
ನೀನ್‍ಯಾರೊ ತಿಳಿಯದಿದ್ದರೂ.. ನನಗೇನೇ ರಾಧೇ..
ಕಲ್ಲಾಗಿ ನಾನು ನಿಂತರೂ.. ಕರಗೀ ನೀರಾದೇ.... ಏಕಾದೇ..
ಈ ಹಾಡು ನಿನ್ನದಾದರೂ.. ರಾಗ ನಾನಾದೇ..
ಯಾರೇನು ಹೇಳದಿದ್ದರೂ.. ನನಗೇ ಜೋತೆಯದೇ.. ಹೇಗಾದೇ...
ಇಂದು ನೆನ್ನೆ ನಾಳೆ ಯಾವುದೂ... ನನಗೆ ಈಗ ನೆನಪು ಬಾರದು..
ನಿನ್ನ ಬಿಟ್ಟು ನನ್ನ ಮನಸಿದು ಬೇರೆ ಏನು ಹೇಳಳಾರದು.. ರಾಧೇ..
ಲಲ.. ಲಲ... ಲಾಲಾ.. ಲಾಲಾ..ಲಾ ಲಲ.. ಲಲ... ಲಾಲಾ.. ಲಾಲಾ..ಲಾ
ಯಾವುದೋ... ಈ ಬೊಂಬೆ ಯಾವುದೋ..(ಜುಮ್. ಜುಜುಮ್.)
ಉರ್ವಶಿಯ ಕುಲವೋ.. (ಜುಮ್. ಜುಜುಮ್.) ಮೇನಕೆಯ ಚೆಲುವೋ..(ಜುಮ್. ಜುಜುಮ್.)
ಯಾವುದೋ ಈ ಅಂದ ಯಾವುದೋ..(ಜುಮ್. ಜುಜುಮ್.)
ಬೇಲೂರಿನ ಶಿಲೆಯೋ.. (ಜುಮ್. ಜುಜುಮ್.)ಶಾಂತಲೆಯ ಕಲೆಯೋ..(ಜುಮ್. ಜುಜುಮ್.)
ಕಾಳಿದಾಸನ (ಓಓಓಓಓ) ಪ್ರೇಮ ಗೀತೆಯೋ..
ಕಾಳಿದಾಸನ (ಓಓಓಓಓ) ಪ್ರೇಮ ಗೀತೆಯೋ..
ಠೇವ್‍ಡಠಾವ್ ಠೇವ್‍ಡಠಾವ್ ಠೇವ್‍ಡಠಾವ್ ಠಾ...ಆಆಆಆಆ..
(ಲಾಲ.. ಲಲ್ಲ.. ಲಾಲ.. ಲಲ್ಲ.. ಲಾಲ.. ಲಲ್ಲ.. ಲಾಲಲ್ಲ್ಲ
ಲಾಲ.. ಲಲ್ಲ.. ಲಾಲ.. ಲಲ್ಲ.. ಲಾಲ.. ಲಲ್ಲ.. ಲಾಲಲ್ಲ್ಲ
ಉರ್ವಶಿಯ ಕುಲವೋ.. (ಜುಮ್. ಜುಜುಮ್.) ಮೇನಕೆಯ ಚೆಲುವೋ..(ಜುಮ್. ಜುಜುಮ್.)
ಯಾವುದೋ ಈ ಅಂದ ಯಾವುದೋ..(ಜುಮ್. ಜುಜುಮ್.)
ಬೇಲೂರಿನ ಶಿಲೆಯೋ.. (ಜುಮ್. ಜುಜುಮ್.)ಶಾಂತಲೆಯ ಕಲೆಯೋ..(ಜುಮ್. ಜುಜುಮ್.)
ಕಾಳಿದಾಸನ (ಓಓಓಓಓ) ಪ್ರೇಮ ಗೀತೆಯೋ..
ಕಾಳಿದಾಸನ (ಓಓಓಓಓ) ಪ್ರೇಮ ಗೀತೆಯೋ..
ಠೇವ್‍ಡಠಾವ್ ಠೇವ್‍ಡಠಾವ್ ಠೇವ್‍ಡಠಾವ್ ಠಾ...ಆಆಆಆಆ..
(ಲಾಲ.. ಲಲ್ಲ.. ಲಾಲ.. ಲಲ್ಲ.. ಲಾಲ.. ಲಲ್ಲ.. ಲಾಲಲ್ಲ್ಲ
ಲಾಲ.. ಲಲ್ಲ.. ಲಾಲ.. ಲಲ್ಲ.. ಲಾಲ.. ಲಲ್ಲ.. ಲಾಲಲ್ಲ್ಲ
ಜೂಜುಜೂಜು ಜೂಜುಜೂಜು ಜೂಜುಜೂಜು ಜೂಜುಜೂಜು ಜೂಜುಜೂಜು
ಜೂಜುಜೂಜು ಜೂಜುಜೂಜು ಜೂಜುಜೂಜು ಜೂಜುಜೂಜು ಜೂಜುಜೂಜು )

--------------------------------------------------------------------------------------------------------------------------ಯುಗ ಪುರುಷ (1989) - ಭೂಲೋಕವೆಲ್ಲಾ ನಾನು ಸುತ್ತಿ ಸುತ್ತಿ ಬಂದೇ
ಸಾಹಿತ್ಯ / ಸಂಗೀತ: ಹಂಸಲೇಖ ಗಾಯನ : ಎಸ್. ಪಿ. ಬಾಲಸುಬ್ರಮಣ್ಯಂ. ಕೋರಸ್
ಗಂಡು : ಭೂಲೋಕವೆಲ್ಲಾ ನಾನು ಸುತ್ತಿ ಸುತ್ತಿ ಸುತ್ತಿ ಬಂದೇ
ಆಸೆಯ ಮೂಟೆಯನ್ನೂ ಹೊತ್ತು ಹೊತ್ತು ಹೊತ್ತು ತಂದೇ
ಅಜ್ಜಿಗೆ ಅರಿವೇ ಆಸೆ ಅಪ್ಪನಿಗೆ ಅಮ್ಮನ ಆಸೆ
ಅಮ್ಮನಿಗೆ ಮಕ್ಕಳ ಆಸೆ ಮಕ್ಕಳಿಗೆ ತಾತನ ಆಸೆ
ತಾತನಿಗೇ ಅಜ್ಜಿಯ ಆಸೆ ಅಜ್ಜಿಗೆ ತಾತನ ಆಸೆ
ಆಸೆಯೂ ಇಲ್ಲದೇ ಜಗವೇ ಇಲ್ಲಾ ಆಸೆಯೇ ದುಃಖದ ಮೂಲ
ಬುದ್ದಂ ಶರಣಂ ಗಚ್ಛಾಮಿ ಆಸೆಯ ಬಿಡಿಸೋ ಮಹಾಸ್ವಾಮಿ
ಎಲ್ಲರು : ಬುದ್ದಂ ಶರಣಂ ಗಚ್ಛಾಮಿ ಆಸೆಯ ಬಿಡಿಸೋ ಮಹಾಸ್ವಾಮಿ
ಕೋರಸ್ : ತನನನಂ ತನನನಂ ತನನನಂ ತನನನಂ
ಗಂಡು : ಸೂಜಿ ಕಣ್ಣಿನಲ್ಲಿ ದೊಡ್ಡ ಒಂಟೆ ಹೋದರೂನು ಹೋಗಬಹುದು

ಅಯ್ಯಯ್ಯೋ ಜನರಿಗೆ ದುಡ್ಡಿನಾಸೆ ಹೋಗದು
ಚಟ್ಟ ಹತ್ತಿ ಉರಿಯೋ ಹೆಣ ಮೇಲೆ ಎದ್ದರೂನು ಏಳಬಹುದು
ಅಮ್ಮಮ್ಮೋ ಗಂಡಿಗೆ ಹೆಣ್ಣಿನಾಸೆ ಸಾಯದು
ಭೂಮಿಗೆ ಮುಪ್ಪು ಬಂದರು ಆಕಾಶ ಬಿದ್ದು ಹೋದರು
ಮರುಭೂಮಿ ನೀರೇ ಆದರೂ ಸಾಗರವೇ ಬತ್ತಿ ಹೋದರು
ಅತ್ತ ಹೋಗದು ಇತ್ತ ಹೋಗದು ಬತ್ತಿ ಹೋಗದು ಸತ್ತು ಹೋಗದ
ಆಸೆಯ ಮೂಟೆಯನ್ನೂ ಹೊತ್ತು ಹೊತ್ತು ಹೊತ್ತು ತಂದೇ
ಭೂಲೋಕವೆಲ್ಲಾ ನಾನು ಸುತ್ತಿ ಸುತ್ತಿ ಸುತ್ತಿ ಬಂದೇ

ಎಲ್ಲರು : ಆಸೇ ... ದುಃಖ ದುಃಖ... ಆಸೇ
ಲಾಲಾಲಾಲಾ ರಂಪಂಪಂಪಂ ಲಾಲಾಲಾಲಾ ರಂ ಪಂ ಪಂ ಪಂ
ಗಂಡು : ಕಾರ್ಪೊರೇಷನ್ ಕೊಳಾಯಲ್ಲಿ ಹಾಲು ಬಂದು ನಿಂತು ಹೋಗಬಹುದು... ಹ್ಹೂಹ್ಹೂಹ್ಹೂ

ಆಸೆಯ ಹಿಂದಿನ ಕಣ್ಣ ನೀರು ನಿಲ್ಲದು
ರೇಷನ್ ಕಾರ್ಡಿನಲ್ಲಿ ಒಳ್ಳೆ ಅಕ್ಕಿ ಸಿಕ್ಕುರೂನು ಸಿಕ್ಕಬಹುದು
ಆಸೆಯಾ ಕ್ಯೂವಿಗೆ ಎಲ್ಲೂ ಕೊನೆಯೇ ಸಿಕ್ಕದು
ಬರಗಾಲ ನಿಂತು ಹೋದರೂ ಯುದ್ಧಗಳೇ ಇಲ್ಲವಾದರೂ
ಜನಸಂಖ್ಯೆ ಕಡಿಮೆಯಾದರೂ ಬೆಲೆಯೇ ಇಳಿದೂ ಹೋದರೂ
ಬಾನು ಮುಟ್ಟುವ ಸರಕು ಧಾರಣೆ ಕೆಳಗೆ ಇಳಿಯುವ ಆಸೆ ಕಾಣೆನೆ
ಭೂಲೋಕವೆಲ್ಲಾ ನಾನು ಸುತ್ತಿ ಸುತ್ತಿ ಸುತ್ತಿ ಬಂದೇ
ಆಸೆಯ ಮೂಟೆಯನ್ನೂ ಹೊತ್ತು ಹೊತ್ತು ಹೊತ್ತು ತಂದೇ
ಅಜ್ಜಿಗೆ ಅರಿವೇ ಆಸೆ ಅಪ್ಪನಿಗೆ ಅಮ್ಮನ ಆಸೆ
ಅಮ್ಮನಿಗೆ ಮಕ್ಕಳ ಆಸೆ ಮಕ್ಕಳಿಗೆ ತಾತನ ಆಸೆ
ತಾತನಿಗೇ ಅಜ್ಜಿಯ ಆಸೆ ಅಜ್ಜಿಗೆ ತಾತನ ಆಸೆ
ಆಸೆಯೂ ಇಲ್ಲದೇ ಜಗವೇ ಇಲ್ಲಾ ಆಸೆಯೇ ದುಃಖದ ಮೂಲ
ಎಲ್ಲರು : ಬುದ್ದಂ ಶರಣಂ ಗಚ್ಛಾಮಿ ಆಸೆಯ ಬಿಡಿಸೋ ಮಹಾಸ್ವಾಮಿ
ಬುದ್ದಂ ಶರಣಂ ಗಚ್ಛಾಮಿ ಆಸೆಯ ಬಿಡಿಸೋ ಮಹಾಸ್ವಾಮಿ...
ಗಂಡು : ತಾರರಿರಿರೀ...

--------------------------------------------------------------------------------------------------------------------------
ಯುಗ ಪುರುಷ (1989) - ಕೇಳಿ ಪ್ರೇಮಿಗಳೇ ಒಬ್ಬಳು ಸುಂದರಿ ಇದ್ದಳು
ಸಾಹಿತ್ಯ / ಸಂಗೀತ: ಹಂಸಲೇಖ ಗಾಯನ : ಎಸ್. ಪಿ. ಬಾಲಸುಬ್ರಮಣ್ಯಂ. ಲತಾ ಹಂಸಲೇಖ
ಗಂಡು : ರೋಮಿಯೋ ... ಹೆಣ್ಣು : ಜೂಲಿಯೆಟ್
ಗಂಡು : ದೇವದಾಸ್ ... ಹೆಣ್ಣು : ಪಾರ್ವತಿ

ಗಂಡು : ಲೈಲಾ ... ಹೆಣ್ಣು : ಮಜ್ನು
ಗಂಡು : ಪ್ರೇಮ ದೈವ ಎಂದರು ಹೆಣ್ಣು : ಪ್ರೇಮ ದೈವ ಎಂದರು
ಇಬ್ಬರು : ಪ್ರೇಮಕೆ ಪ್ರಾಣವ ಕೊಟ್ಟರೂ ತಾರೆಗಳಾಗಿ ನಿಂತರೂ
ಗಂಡು : ಪ್ರೀತಿ ಕೊಂದ ಕೊಲೆಗಾತಿ ನಾ ಹೇಳೋ ಕಥೆಗೆ ಸ್ಫೂರ್ತಿ
ಕೇಳಿ ಪ್ರೇಮಿಗಳೇ ಒಬ್ಬಳು ಸುಂದರಿ ಇದ್ದಳು
ಹೆಣ್ಣು : ಕೇಳಿ ಪ್ರೇಮಿಗಳೇ ಒಬ್ಬನು ಸುಂದರ ಇದ್ದನು
ಗಂಡು : ಜೋಡಿ ಜೋಡಿ ಕಂಗಳಿಗೆ ಪ್ರೀತಿ ಬಂತು ಸ್ಫೂರ್ತಿ
ಪ್ರೀತಿ ಕೊಂದ ಕೊಲೆಗಾತಿ ನಾ ಹೇಳೋ ಕಥೆಗೆ ಸ್ಫೂರ್ತಿ

ಗಂಡು : ಕೇಳಿ ಪ್ರೇಮಿಗಳೇ ಒಬ್ಬಳು ಸುಂದರಿ ಇದ್ದಳು
ಗಂಡು : ಕೋಟಿ ಮಾತನಾಡಿದರೂ ಕೋಟಿ ಮುತ್ತ ನೀಡಿದರೂ
ತಿರುಗದ ನೋಟದ ಸೆರೆಯಲಿ ತಿರುಗುವ ಭೂಮಿಯ ಮರೆತರೂ
ಹೆಣ್ಣು : ಜನವ ಹಿಂದೇ ದೂಡಿದರೂ ದಿನವೂ ಒಂದು ಗೂಡಿದರೂ
ತಿಂಗಳ ಬೆಳಕಿನ ತೆರೆಯಲಿ ಸೂರ್ಯನು ಬರುವುದೇ ಮರೆತರೂ
ಗಂಡು : ಬಾಷೆಯ ರಾಶಿ ಸುರಿದವೂ
ಹೆಣ್ಣು : ಆಣೆಯ ಕೋಟೆ ಮೆರೆದವು
ಇಬ್ಬರು : ಪ್ರೇಮ ಪ್ರಣಯದ ಮನೆಯಲಿ ಬೇರೆತವೂ

ಕೋರಸ್ : ಆಆಆಆಅ..... ಆಆಆಆಅ.....
ಹೆಣ್ಣು : ಪ್ರೇಮ ಒಂದು ವರದಾನ ಅದರ ಹಿಂದೆ ಬಲಿದಾನ
ಎಂಬುದ ತಿಳಿಯದ ಹುಡುಗನು ಹುಡುಗಿಯ ಮದುವೆಯ ಆದನು
ಗಂಡು : ತನ್ನ ಕಣ್ಣ ನೋಟದಲಿ ಕಡಲಿಗಿಂತ ಆಳದಲೀ
ಪ್ರೇಮವ ಕೊಲ್ಲುವ ಚೂರಿಯ... ಕಾಣದೇ ಇಟ್ಟಳು ಮರೆಯಲಿ
ಹೆಣ್ಣು : ನಿರ್ಮಲ ಪ್ರೇಮದ ಕಣ್ಣಿಗೆ
ಗಂಡು : ಕಲ್ಮಶ ತಿಳಿಯದ ಮನಸಿಗೆ
ಇಬ್ಬರು : ಕಾಣದೇ ಹೋಯಿತು ಸಂಚಿನ ಹುಸಿನಗೆ
ಗಂಡು : ಆ ಸಾವಂತೇ ಬಯಲಾಯ್ತು ಈ ಹೆಮ್ಮಾರಿ ವೇಷಾ.. (ವೇಷ ವೇಷ ವೇಷ)

ಪ್ರೀತಿ ಎಂಬ ಮುಖವಾಡ ತಾ ಮಾಡಿತ್ತು ಮೋಸ...
ಕೋರಸ್ : ಮೋಸ ಮೋಸ ಮೋಸ ದ್ವೇಷ ಮೋಸ ದ್ವೇಷ ಮೋಸ
ಜೂಜುಜೂಜು ಜೂಜುಜೂಜು ಜೂಜುಜೂಜು ಜೂಜುಜೂಜು
ಜೂಜುಜೂಜು ಜೂಜುಜೂಜು ಜೂಜುಜೂಜು ಜೂಜುಜೂಜು
ಗಂಡು : ಕೇಳಿ ಪ್ರೇಮಿಗಳೇ ಪ್ರೇಮಿಯೇ ಪ್ರೇಮವ ಕೊಂದಳು
ಕೇಳಿ ಪ್ರೇಮಿಗಳೇ ಪ್ರೇಮಿಯೇ ಪ್ರೇಮವ ಕೊಂದಳು
-----------------------------------------------------------------------------------------------------------------------
ಜೂಜುಜೂಜು ಜೂಜುಜೂಜು ಜೂಜುಜೂಜು ಜೂಜುಜೂಜು
ಗಂಡು : ಕೇಳಿ ಪ್ರೇಮಿಗಳೇ ಪ್ರೇಮಿಯೇ ಪ್ರೇಮವ ಕೊಂದಳು
ಕೇಳಿ ಪ್ರೇಮಿಗಳೇ ಪ್ರೇಮಿಯೇ ಪ್ರೇಮವ ಕೊಂದಳು
-----------------------------------------------------------------------------------------------------------------------
No comments:
Post a Comment