- ಮುತ್ತು ಕೊಡೋಳು ಬಂದಾಗ ತುತ್ತು ಕೊಟ್ಟೋಳ ಮರಿಬೇಡ
- ತಾರೆ ತಾರೆ ಮಿನುಗುವ ತಾರೆ ಮಿನುಗುವ ತಾರೆ
- ತುಸು ಮೆಲ್ಲ ಬೀಸು ಗಾಳಿಯೇ
- ಬಾಳಿಗೊಬ್ಬ ಬಂಧು ಬೇಡವೇ
- ತುಸು ಮೆಲ್ಲ ಬೀಸು ಗಾಳಿಯೇ (ಎಸ್.ಪಿ.ಬಿ)
- ಮದನ ಕಾಮ ರಾಜ ಕೊಟ್ಟ ಒಂದು ವರವ
- ಅಂಗ ಅಂಗ ಸೇರಿ ಅಂತರಂಗ
ತುತ್ತಾ ಮುತ್ತಾ (1999) - ಮುತ್ತು ಕೊಡೋಳು ಬಂದಾಗ
ಸಾಹಿತ್ಯ : ಸಂಗೀತ : ಹಂಸಲೇಖ ಗಾಯನ : ಉನ್ನಿ ಕೃಷ್ಣನ್
ಮುತ್ತು ಕೊಡೋಳು ಬಂದಾಗ ತುತ್ತು ಕೊಟ್ಟೋಳ ಮರಿಬೇಡ
ತಾಯಿ ಇಲ್ಲದೆ ಜಗವಿಲ್ಲ ಮಡದಿ ಇಲ್ಲದೆ ಬಾಳಿಲ್ಲ
ತುತ್ತಾ ಮುತ್ತಾ ಗೊತ್ತ, ಆತ್ತ ಇತ್ತ ಎತ್ತ
ಮಗುವು ಅತ್ತರೆ ತಾನತ್ತು ಹಾಲನೆರೆದವಳು ತಾಯಲ್ಲವೆ ನಮಗಾಗಿ ಜೀವವ ತೇಯ್ದಿಲ್ಲವೆ
ತಾಳಿ ಪಾಶಕೆ ತಲೆ ಕೊಟ್ಟು ಗಂಡಿನರ್ಧವೆ ತಾನಾಗಿ ಸತಿ ನಮಗೆ ಮೀಸಲಾಗಿಲ್ಲವೆ
ಇಬ್ಬರು ಕಂಡಿಹರು ಈ ಗಂಡಿನ ಬೆತ್ತಲೆಯ ಇಬ್ಬರು ಬೆಳಗುವರು ಈ ಹೃದಯದ ಕತ್ತಲೆಯ
ತಾಯಿ ಇಲ್ಲದೆ ಬಲವಿಲ್ಲ್ಲ ಮಡದಿ ಇಲ್ಲದೆ ಛಲವಿಲ್ಲ ತುತ್ತ ಮುತ್ತ ಗೊತ್ತ, ಅತ್ತ ಇತ್ತ ಎತ್ತ
ಕುಂತಿ ಇಲ್ಲದೆ ಪಾಂಡವರೆ ದ್ರೌಪದಿ ಇಲ್ಲದೆ ಭಾರತವೆ
ಗಂಡು ಇಬ್ಬರ ಸ್ವತ್ತಲ್ಲವೆ ನಮ್ಮ ಜನ್ಮಕೆ ಈ ಹೆಣ್ಣು ನಮ್ಮ ಮರಿಯ ಜನ್ಮಕೆ ಆ ಹೆಣ್ಣು
ನಮ್ಮ ಎರಡು ಕಣ್ಣು ಎರಡು ಹೆಣ್ಣು ಮೂಡಣದ ಸೂರ್ಯ ತಾಯಿಯ ಮಡಿಲಂತೆ
ಪಡುವಣದ ಸೂರ್ಯ ಮಡದಿಯ ಮಡಿಲಂತೆ
ತಾಯಿ ಇಲ್ಲದೆ ತವರಿಲ್ಲ ಮಡದಿ ಇಲ್ಲದೆ ಮನೆ ಇಲ್ಲ
ತುತ್ತ ಮುತ್ತ ಗೊತ್ತ ಅತ್ತ ಇತ್ತ ಎತ್ತ
----------------------------------------------------------------------------------------------------------------------
ತುತ್ತಾ ಮುತ್ತಾ ? (1999) - ತಾರೆ ತಾರೆ ಮಿನುಗುವ ತಾರೆ
ಸಾಹಿತ್ಯ ಮತ್ತು ಸಂಗೀತ: ಹಂಸಲೇಖ ಗಾಯನ: ಉನ್ನಿ ಕೃಷ್ಣನ್
ತಾರೆ ತಾರೆ ಮಿನುಗುವ ತಾರೆ ಮಿನುಗುವ ತಾರೆ
ನಯನಕೆ ತಾರೆ ಚೆಲುವಿನ ಧಾರೆ ಹೃದಯಕೆ ತಾರೆ ಅಮೃತ ಧಾರೆ
ತಾರೆ ತಾರೆ ಮಿನುಗುವ ತಾರೆ ಮಿನುಗುವ ತಾರೆ
ನಿನ್ನಯ ಕಿರುನೋಟ ಕಿರುನಗುವಿನ ಕಾಟ
ಕುಳಿತಲ್ಲೆ ಕನಸನು ಕಾಣೊ ಖಾಯಿಲೆ ಕರುಣಿಸಿದೆ
ಅರೆಗಳಿಗೆ ನೆನಪಲ್ಲಿ ಮರುಗಳಿಗೆ ತಪದಲ್ಲಿ
ಪ್ರತಿಗಳಿಗೆ ಕಳೆಯುವುದೆಂತೊ ಹೃದಯ ನಡುಗುತಿದೆ
ಹಾಡಿಗೆ ಹಾಡು ಪ್ರೀತಿಗೆ ಪ್ರೀತಿ
ಔಷಧಿ ಬಾರೆ ಬೇಗನೆ ಬಾರೆ ಔಷಧಿ ತಾರೆ
ಸೌಂದರ್ಯ ಲೋಕದ ರಾಣಿ ಸಂಗೀತ ಸಾರ ರಸವಾಣಿ
ಮನದುಯ್ಯಾಲೆ ನಿಂದು ತೂಗೋಳೆ ನನ್ನ ಮೇಲೆ ದಯವ ತೋರೆ
ತಾರೆ ತಾರೆ ಮಿನುಗುವ ತಾರೆ ಮಿನುಗುವ ತಾರೆ
ತಾರೆ ತಾರೆ ಮಿನುಗುವ ತಾರೆ ಮಿನುಗುವ ತಾರೆ
ನಯನಕೆ ತಾರೆ ಚೆಲುವಿನ ಧಾರೆ ಹೃದಯಕೆ ತಾರೆ ಅಮೃತ ಧಾರೆ
ತಾರೆ ತಾರೆ ಮಿನುಗುವ ತಾರೆ ಮಿನುಗುವ ತಾರೆ
ಪ್ರೇಮಿಗೆ ಯುಗ ನಿಮಿಷ ವಿರಹಿಗೆ ಕ್ಷಣ ವರುಷ
ಆ ನನ್ನ ಪ್ರೇಮದ ಪದವಿ ದಯಪಾಲಿಸು ಬಾರೆ
ಹೆಣ್ಣಿನ ಗುಣಗಾನ ಪ್ರೇಮಿಗೆ ವರದಾನ
ಬಾಳೆಲ್ಲ ಆರಾಧಿಸುವೆ ಅನುಮತಿಯ ತಾರೆ
ಅಂತರ ಗಂಗೆ ಅಂತರ ಗಂಗೆ
ನಿರ್ಮಲ ನೀರೆ ಜೀವನ ಧಾರೆ ಪ್ರೀತಿಸು ಬಾರೆ
ಅಪರೂಪದ ಸ್ನೇಹದ ತಾರೆ ಅನುರಾಗ ಸಂಗಮ ತಾರೆ
ನಿನ್ನ ಆಂತರ್ಯ ಗೆಲ್ಲೋ ಚಾತುರ್ಯ ಬಂದು ನೀನೆ ತಿಳಿಸಿ ತೋರೆ
ತಾರೆ ತಾರೆ ಮಿನುಗುವ ತಾರೆ ಮಿನುಗುವ ತಾರೆ
ತಾರೆ ತಾರೆ ಮಿನುಗುವ ತಾರೆ ಮಿನುಗುವ ತಾರೆ
ನಯನಕೆ ತಾರೆ ಚೆಲುವಿನ ಧಾರೆ ಹೃದಯಕೆ ತಾರೆ ಅಮೃತ ಧಾರೆ
ತಾರೆ ತಾರೆ ಮಿನುಗುವ ತಾರೆ ಮಿನುಗುವ ತಾರೆ
--------------------------------------------------------------------------------------------------------------------------
ತುತ್ತಾ ಮುತ್ತಾ (1999) - ತುಸು ಮೆಲ್ಲ ಬೀಸು ಗಾಳಿಯೇ
ಸಾಹಿತ್ಯ : ಹಂಸಲೇಖ ಸಂಗೀತ : ಹಂಸಲೇಖ ಗಾಯನ : ಚಿತ್ರಾ
ತುಸು ಮೆಲ್ಲ ಬೀಸು ಗಾಳಿಯೇ, ಈ ಲಾಲಿ ಸುವ್ವಾಲಿ
ಈ ಕಂದ ಕೇಳಲಿ, ನಿದ್ದೇಲಿ ಆಡಲಿ
ತುಸು ಮೆಲ್ಲ ಬೀಸು ಗಾಳಿಯೇ
ಬಾಳುವೆ ನಾ ಈ ಕಂದನ ಎಡವಿ ಏಳೊ ದಾರಿಯಲಿ
ಮೀಯುವೆ ನಾ ಈ ಕಂದನ ತೊದಲ ನುಡಿಯ ಮಳೆಯಲಿ
ನನ್ನ ಎದೆ ತುಂಬುವ ಭಾಗ್ಯ ನೀಡ ಬಂದ ಬಾಲ ದೇವತೆ
ತುಸು ಮೆಲ್ಲ ಬೀಸು ಗಾಳಿಯೇ, ಈ ಲಾಲಿ ಸುವ್ವಾಲಿ
ಈ ಕಂದ ಕೇಳಲಿ, ನಿದ್ದೇಲಿ ಆಡಲಿ
ಜನುಮದ ಜನುಮದ ನೆನಪು ತರುವ ಜೋಗುಲ
ನೋವಿನ ನಲಿವಿನ ಕನಸುಮೇಳ ಈ ಜೋಗುಲ
ಹೆಣ್ಣು ಎಂಬ ಜೀವಕ್ಕೆ ತಾಯಿತನ ತಂದ ಅವರ ಕಾಣಿಕೆ
ತುಸು ಮೆಲ್ಲ ಬೀಸು ಗಾಳಿಯೇ, ಈ ಲಾಲಿ ಸುವ್ವಾಲಿ
ಈ ಕಂದ ಕೇಳಲಿ, ನಿದ್ದೇಲಿ ಆಡಲಿ
ತುಸು ಮೆಲ್ಲ ಬೀಸು ಗಾಳಿಯೇ
ತುಸು ಮೆಲ್ಲ ಬೀಸು ಗಾಳಿಯೇ, ಈ ಲಾಲಿ ಸುವ್ವಾಲಿ
ಈ ಕಂದ ಕೇಳಲಿ, ನಿದ್ದೇಲಿ ಆಡಲಿ
ತುಸು ಮೆಲ್ಲ ಬೀಸು ಗಾಳಿಯೇ
--------------------------------------------------------------------------------------------------------------------------
ತುತ್ತಾ ಮುತ್ತಾ (1999) - ಬಾಳಿಗೊಬ್ಬ ಬಂದು ಬೇಡವೇ
ಸಾಹಿತ್ಯ : ಸಂಗೀತ : ಹಂಸಲೇಖ ಗಾಯನ : ಸಿ.ಅಶ್ವಥ
ಬಾಳಿಗೊಬ್ಬ ಬಂದು ಬೇಡವೇ ಓಹ್ ಗೆಳತಿ, ಓ ಗೆಳತಿ
ಸಾವಿಗೊಂದು ತೋಳು ಬೇಡವೇ ಓ ಸುಮತಿ, ಓ ಸುಮತಿ
ಬಳಗದಲ್ಲಿ ಬಾಳಮ್ಮ ಜಗಳದಲ್ಲಿ ಗೋಳಮ್ಮ ಎದುರಿಜಿ ದಣಿವೆ ಯಾಕಮ್ಮ
ಬಾಳಿಗೊಬ್ಬ ಬಂದು ಬೇಡವೇ ಓ ಗೆಳತಿ, ಓ ಗೆಳತಿ
ಸಾವಿಗೊಂದು ತೋಳು ಬೇಡವೇ ಓ ಸುಮತಿ, ಓ ಸುಮತಿ
ಪ್ರೀತಿಗೆ ಸುಂಕವೇ, ಲಾಲಿಗೆ ಲೆಕ್ಕವೇ
ನಿನ್ನಲ್ಲೇ ಚಿಗುರಿದ ಸಸಿಯೊಂದು ಮರವಾಗಿ ಬಳಸಿದೆ ಲತೆ ಇಂದು,
ಲತೆಯ ನಗಿಸು ಜೊತೆಯ ಹರಸು ಹೂವಿಂದ ಹೂವಿಗೆ
ಮದು ಬಿಂದು, ಹಂಚುತ್ತ ಭದುಕಿದೆ ಜಗವಿಂದು,
ಮಡಿಲಿನಲ್ಲಿ ಮಗನಮ್ಮ, ಮಡದಿಗವ ಜಗವಮ್ಮ
ಜಗನಿಯಮ ಮುರಿವೆ ಯಾಕಮ್ಮ,

ಬಾಳಿಗೊಬ್ಬ ಬಂದು ಬೇಡವೇ
ಓ ಗೆಳತಿ, ಓ ಗೆಳತಿ
ಸಾವಿಗೊಂದು ತೋಳು ಬೇಡವೇ
ಓ ಸುಮತಿ, ಓ ಸುಮತಿ
ಮರುಗಿ ಕೊರಗಿ ಬರುವೆ ತಿರುಗಿ, ನಿನ್ನಿಂತಾ ನಿಲುವಿಗೆ ನೆಲವಿಲ್ಲ,
ವಿತ್ತಂಡ ವಾದಕೆ ಜಯವಿಲ್ಲ, ನೀನೇ ಬಲ್ಲೆ, ನಿನ್ನ ಎಲ್ಲೇ, ತೆರಲ್ಲಿ ಹುಳಿದಿರೋ ಬಲವನ್ನ, ಚಲವಾಗಿ ಬಳಸುವೆ ಹೆಕಿನ್ನ,
ಅರುತಿದೆ ನಿನ್ನ ಹಕ್ಕಿ, ಮರಳಿದರೆ ಕೊಡು ಹಕ್ಕಿ,
ಅದೇ ನಿನ್ನ ನೆನೆದು ಬರಲಮ್ಮ
ಬಾಳಿಗೊಂದು ಬಂದು ಬೇಡವೇ ಓ ಗೆಳತಿ, ಓ ಗೆಳತಿ
ಸಾವಿಗೊಂದು ತೋಳು ಬೇಡವೇ ಓ ಸುಮತಿ, ಓ ಸುಮತಿ
--------------------------------------------------------------------------------------------------------------------------
ತುತ್ತಾ ಮುತ್ತಾ (1999) - ಅಂಗ ಅಂಗ ಸೇರಿ ಅಂತರಂಗ
ಸಾಹಿತ್ಯ : ಸಂಗೀತ : ಹಂಸಲೇಖ ಗಾಯನ : ಎಸ್.ಪಿ.ಬಿ, ಚಿತ್ರಾ
ಹೆಣ್ಣು : ಅಂಗ ಅಂಗ ಸೇರಿ ಅಂತರಂಗ ಗಂಡು : ಸಂಗ ಸಂಗ ಸೇರಿ ಪ್ರಣಯ ಪ್ರಸಂಗ
ಹೆಣ್ಣು : ಹಾಡ್ತಾ ಹಾಡ್ತಾ ರಾಗ ಗಂಡು : ಮಿಡಿತ ಮಿಡಿತ ತಾಗ
ಹೆಣ್ಣು : ನೋಡ್ತಾ ನೋಡ್ತಾ ಮೋಹ ಗಂಡು : ಹೀರ್ತಾ ಹೀರ್ತಾ ದಾಹ
ಹೆಣ್ಣು : ಸವತಿ ಶತ್ರು ಯಾರಿಲ್ಲ ಸ್ವಚ್ಛಂದ ರಾಸಲೀಲೆಗೇ
ಹೆಣ್ಣು : ಅಂಗ ಅಂಗ ಸೇರಿ ಅಂತರಂಗ ಗಂಡು : ಸಂಗ ಸಂಗ ಸೇರಿ ಪ್ರಣಯ ಪ್ರಸಂಗ
ಹೆಣ್ಣು : ಕಣ್ಣಲ್ಲಿ ಕಣ್ಣಂಚಲಿ ವಿರಹ ಕೋಟಿ ತರಹ
ಗಂಡು : ಉಸಿರಲ್ಲಿ ಬಿಸಿ ಉಸಿರಲ್ಲಿ ನಡುಕ ಮೇಯ್ಯೇ ಪುಳಕ
ಹೆಣ್ಣು : ನಲಿದು ಜಾರಿ ಮುತ್ತಾಯಿತು
ಗಂಡು : ಕಾಲ ಓಡಿ ಹೊತ್ತಾಯಿತು ಹೆಣ್ಣು : ಆಸೆ ಅರಳಿ ಹೆಣ್ಣಾಯಿತು
ಗಂಡು : ಬೆಂಕಿ ಕೆರಳಿ ಗಂಡಾಯಿತು
ಇಬ್ಬರು : ಕಾಮನಾ ಕಾಮನಾ ಲಾಂಛನ ಹೃದಯದೊಳಗಾಯ್ತು
ಹೆಣ್ಣು : ಅಂಗ ಅಂಗ ಸೇರಿ ಅಂತರಂಗ ಗಂಡು : ಸಂಗ ಸಂಗ ಸೇರಿ ಪ್ರಣಯ ಪ್ರಸಂಗ
ಗಂಡು : ಹೂ ಗರಿಯ ರವಿ ಹೂ ಗರಿಯ ಎಸೆದಾ ಧಾರೆಯಾ ಬೆಸೆದಾ
ಹೆಣ್ಣು : ಅಂಬುಧಿಯ ಪ್ರೇಮಾಂಬುಧಿಯಾ ಕಡೆದಾ ತಾರಾ ಜೊತೆ ಬಾ
ಗಂಡು : ನೆರಳು ಬೆಳಕು ಒಂದಾಗದು ಹೆಣ್ಣು : ಗಾಳಿ ಗಂಧ ಒಂದಾಗದು
ಗಂಡು : ಆಧರ ಮಧುರ ಒಂದಾಗದು ಹೆಣ್ಣು : ತನುವು ಮನವು ಒಂದಾಗದು
ಇಬ್ಬರು : ಕಂಪನ ಸಿಂಚನ ಪ್ರೇಮದೊಳಗಾಯ್ತು
ಹೆಣ್ಣು : ಅಂಗ ಅಂಗ ಸೇರಿ ಅಂತರಂಗ ಗಂಡು : ಸಂಗ ಸಂಗ ಸೇರಿ ಪ್ರಣಯ ಪ್ರಸಂಗ
ಹೆಣ್ಣು : ಹಾಡ್ತಾ ಹಾಡ್ತಾ ರಾಗ ಗಂಡು : ಮಿಡಿತ ಮಿಡಿತ ತಾಗ
ಹೆಣ್ಣು : ನೋಡ್ತಾ ನೋಡ್ತಾ ಮೋಹ ಗಂಡು : ಹೀರ್ತಾ ಹೀರ್ತಾ ದಾಹ
ಹೆಣ್ಣು : ಸವತಿ ಶತ್ರು ಯಾರಿಲ್ಲ ಸ್ವಚ್ಛಂದ ರಾಸಲೀಲೆಗೇ
ಹೆಣ್ಣು : ಅಂಗ ಅಂಗ ಸೇರಿ ಅಂತರಂಗ ಗಂಡು : ಸಂಗ ಸಂಗ ಸೇರಿ ಪ್ರಣಯ ಪ್ರಸಂಗ
-------------------------------------------------------------------------------------------------------------------------
ತುತ್ತಾ ಮುತ್ತಾ (1999) - ತುಸು ಮೆಲ್ಲ ಬೀಸು ಗಾಳಿಯೇ
ಸಾಹಿತ್ಯ : ಸಂಗೀತ : ಹಂಸಲೇಖ ಗಾಯನ : ಎಸ್.ಪಿ.ಬಿ
ತುಸು ಮೆಲ್ಲ ಬೀಸು ಗಾಳಿಯೇ
ತುಸು ಮೆಲ್ಲ ಬೀಸು ಗಾಳಿಯೇ, ಈ ಲಾಲಿ ಸುವ್ವಾಲಿ ಈ ತಾಯ್ ಕೇಳಲಿ ಎದ್ದೇಳಿ ಆಡಲಿ
ಉಂಉಂಉಂಉಂಉಂಉಂಉಂ
ತುಸು ಮೆಲ್ಲ ಬೀಸು ಗಾಳಿಯೇ, ಈ ಲಾಲಿ ಸುವ್ವಾಲಿ ಈ ತಾಯ್ ಕೇಳಲಿ ಎದ್ದೇಳಿ ಆಡಲಿ
ಉಂಉಂಉಂಉಂಉಂಉಂಉಂ
ಲಾಲನೆಯ ಪಾಲನೆಯ ಮಾಡಿದಳಲ್ಲ ಜೀವಕೇ
ಚಿಂತಿಸುತ ಹರಸುತ್ತಾ ಮಿಡಿದು ಬಳಲೋ ಕಂಪಿಗೇ
ಕೊಂಚ ಬಿಡುವು ಬೇಡವೇ ನಿದ್ದೆಯಲಿ ಮಗನ ನೆನೆಯೇ ಮನಸಿಗೇ
ತುಸು ಮೆಲ್ಲ ಬೀಸು ಗಾಳಿಯೇ, ಈ ಲಾಲಿ ಸುವ್ವಾಲಿ ಈ ತಾಯ್ ಕೇಳಲಿ ಎದ್ದೇಳಿ ಆಡಲಿ
ಉಂಉಂಉಂಉಂಉಂಉಂಉಂ
ಜನುಮದ ಜನುಮದ ನೆನಪು ನೀಡೋ ಜೋಗುಳ
ನೋವಿನ ನಲಿವಿನ ಕಲಸು ಮೇಘ ಜೋಗುಳ
ಕೇಳಿ ಬಂದ ಗುರುವಿಗೇ ಜೋಗಳದಿ ಲೋಕ ಕೂಗೋ ತಾಯಿಗೇ
ತುಸು ಮೆಲ್ಲ ಬೀಸು ಗಾಳಿಯೇ
ತುಸು ಮೆಲ್ಲ ಬೀಸು ಗಾಳಿಯೇ, ಈ ಲಾಲಿ ಸುವ್ವಾಲಿ ಈ ಕಂದ ಕೇಳಲಿ, ನಿದ್ದೇಲಿ ಆಡಲಿ
ತುಸು ಮೆಲ್ಲ ಬೀಸು ಗಾಳಿಯೇ
ಉಂಉಂಉಂಉಂಉಂಉಂಉಂ
-------------------------------------------------------------------------------------------------------------------------
ತುತ್ತಾ ಮುತ್ತಾ (1999) - ಮದನ ಕಾಮರಾಜ ಕೊಟ್ಟ ಒಂದು ವರವ
ಸಾಹಿತ್ಯ : ಸಂಗೀತ : ಹಂಸಲೇಖ ಗಾಯನ : ಎಸ್.ಪಿ.ಬಿ. ಚಿತ್ರಾ
ಕೋರಸ್ : ಸುರತ ಸುರತ ಸುಖ ಸುಖ ಸುರತ ಸುಖ ಸಂವರ್ಧಿನಿ ಪಂಚ ಸುರತ
ಕವಿ ಕಲ್ಯಾಣ ಮಲ್ಲ ವಿರಚಿತ ಆನಂದ ಸುರತ ಉತ್ತಿಟ್ಟ ಸುರತ
ಪಿರಿಯಂ ಸುರತ ತಾರಕ ಸುರತ ತಿಥಿ ಸುರತ ಪಂಚ ಸುರತ ಆನಂಗ ರಂಗ ಸುಖ ಸುರತ
ಗಂಡು : ಮದನ ಕಾಮರಾಜ ಕೊಟ್ಟ ಒಂದು ವರವ ಕೋಟಿ ಸಾರಿ ಕೊಲ್ಲೋ ಮಾಯಾ ಪುಷ್ಪ ಶರವ
ದಿನ ತೆಗೆವೆ ಪ್ರಾಣ ನಿಂಗೆ ದಿನ ಜೀವದಾನ
ಕೋರಸ್ : ಅಯ್ಯಯ್ಯಯ್ಯೋ ಓ ಅಯ್ಯಯ್ಯಯ್ಯೋ ಓ ಅಯ್ಯಯ್ಯಯ್ಯೋ ಓ ಅಯ್ಯಯ್ಯಯ್ಯೋ ಓ
ಗಂಡು : ಶೃಂಗಾರ ಶಯನ ಸಿಂಗಾರ
ಕೋರಸ್ : ಅಯಸ್ಕಾಂತಿನಿ ವೆಸಿತಾಸನ ಸಂ ಸಂವಾದಿನಿಸಯ್ಯ ವಾಸನಾ
ಗಂಡು : ಬಾರೇ ಬೇಗ ಇಲ್ಲಿ ಹೋಗಬೇಡ ಗಿಲ್ಲಿ
ಹೆಣ್ಣು : ಎಲ್ಲಿ ಅಂದರಲ್ಲಿ ಕಾಡಬೇಡಿ ನಿಲ್ಲಿ
ಗಂಡು : ನಿರ್ಭಿತವಿರೋ ನಿರ್ಲಜ್ಜೆ ಇರೋ ರತಿ ಮನ್ಮಥ ಮುನಿ ಸಮ್ಮತ
ಹೆಣ್ಣು : ಕಾಮೇಶ್ವರನೇ ವಿದ್ಯಾಧರನೇ ಸವಿ ಅಮೃತ ನೀ ನೀಡುತ
ಮದನ ಕಾಮರಾಜ ಕೊಟ್ಟ ಒಂದು ವರವ ಕೋಟಿ ಕೋಟಿ ಸಾರಿ ಕೊಲ್ಲೋ ಮಾಯಾ ಪುಷ್ಪ ಶರವ
ಮದನ ಕಾಮರಾಜ ಕೊಟ್ಟ ಒಂದು ವರವ ಕೋಟಿ ಕೋಟಿ ಸಾರಿ ಕೊಲ್ಲೋ ಮಾಯಾ ಪುಷ್ಪ ಶರವ
ಹಿಡಿ ನನ್ನ ಪ್ರಾಣ ಮತ್ತೇ ಕೊಡು ಜೀವದಾನ
ಕೋರಸ್ : ಅಯ್ಯಯ್ಯಯ್ಯೋ ಓ ಅಯ್ಯಯ್ಯಯ್ಯೋ ಓ ಅಯ್ಯಯ್ಯಯ್ಯೋ ಓ ಅಯ್ಯಯ್ಯಯ್ಯೋ ಓ
ಶೃಂಗಾರ ಶಯನ ಸಿಂಗಾರ
ಕೋರಸ್ : ಸಂಭಿತ ಬಂದ ಸನ್ನ ವಿಲಾಸ ರೇಣುಕ ಬಂದ ವೀರ ವಿಲಾಸೀ
ಹೆಣ್ಣು : ಬನ್ನಿ ಬೇಗ ಇಲ್ಲಿ ಹೋಗಬೇಡಿ ಗಿಲ್ಲಿ
ಗಂಡು : ಕಾಮಗಂಧ ಚೆಲ್ಲಿ ಬಂದು ಸೇರು ಇಲ್ಲಿ
ಹೆಣ್ಣು : ವಾತ್ಸಾಯನ ಸೂತ್ರ ಅಂಧರಿಗೆ ನೇತ್ರ ನಡೆಯೋಣವೇ ಪರಿಪಾಲಿಸಿ ನಮಗೊಪ್ಪುವಾ ಪುಟ ಆರಿಸಿ
ಗಂಡು : ಸೃಷ್ಟಿಯ ಸುಂದರ ಸೂತ್ರಗಳೆಲ್ಲವೂ ನಿನ್ನದೇ ಸುರ ಸುಂದರಿ ಈ ಪುರುಷದು ಬರಿ ಕಿಂದರಿ
ಸ್ತ್ರೀ ಗೆಲ್ಲವೂ ವೇದ್ಯ ಅರ್ಪಿಸು ನೈವೇದ್ಯ ಚೀತ್ಕಾರದ ಮೆದು ಮಂತ್ರವ ಸತ್ಕಾರದ ರತಿ ತಂತ್ರವ
ಹೆಣ್ಣು : ಮೋಹನ ಮರ್ಮವ ಕಾಮಿನಿ ಕರ್ಮವ ಅರಿಯಿರಾ ರಸ ಪುಂಗವ ರತಿ ಚಕ್ರದಾ ರಸ ಭಂಗವ
ಕೋರಸ್ : ಸಮರೋತ್ಸಾಹಿನಿ ವಿವರ್ಧಿಸಾಸನ ವಿಜಯೋತ್ಸಾಹಿನಿ ಜಯ ಜಗದಾಸನ
ಹೆಣ್ಣು : ಬನ್ನಿ ಬೇಗ ಇಲ್ಲಿ ಹೋಗಬೇಡಿ ಗಿಲ್ಲಿ
ಗಂಡು : ಕಾಮಗಂಧ ಚೆಲ್ಲಿ ಬಂದು ಸೇರು ಇಲ್ಲಿ
ಹೆಣ್ಣು : ವಾತ್ಸಾಯನ ಸೂತ್ರ ಅಂಧರಿಗೆ ನೇತ್ರ ನಡೆಯೋಣವೇ ಪರಿಪಾಲಿಸಿ ನಮಗೊಪ್ಪುವಾ ಪುಟ ಆರಿಸಿ
ಗಂಡು : ಸೃಷ್ಟಿಯ ಸುಂದರ ಸೂತ್ರಗಳೆಲ್ಲವೂ ನಿನ್ನದೇ ಸುರ ಸುಂದರಿ ಈ ಪುರುಷದು ಬರಿ ಕಿಂದರಿ
ಸ್ತ್ರೀ ಗೆಲ್ಲವೂ ವೇದ್ಯ ಅರ್ಪಿಸು ನೈವೇದ್ಯ ಚೀತ್ಕಾರದ ಮೆದು ಮಂತ್ರವ ಸತ್ಕಾರದ ರತಿ ತಂತ್ರವ
ಹೆಣ್ಣು : ಮೋಹನ ಮರ್ಮವ ಕಾಮಿನಿ ಕರ್ಮವ ಅರಿಯಿರಾ ರಸ ಪುಂಗವ ರತಿ ಚಕ್ರದಾ ರಸ ಭಂಗವ
ಗಂಡು : ಮದನ ಕಾಮರಾಜ ಕೊಟ್ಟ ಒಂದು ವರವ ಕೋಟಿ ಸಾರಿ ಕೊಲ್ಲೋ ಮಾಯಾ ಪುಷ್ಪ ಶರವ
ದಿನ ತೆಗೆವೆ ಪ್ರಾಣ ನಿಂಗೆ ದಿನ ಜೀವದಾನ
ಕೋರಸ್ : ಅಯ್ಯಯ್ಯಯ್ಯೋ ಓ ಅಯ್ಯಯ್ಯಯ್ಯೋ ಓ ಅಯ್ಯಯ್ಯಯ್ಯೋ ಓ ಅಯ್ಯಯ್ಯಯ್ಯೋ ಓ
ಶೃಂಗಾರ ಶಯನ ಸಿಂಗಾರ
ಗಂಡು : ಬಾರೆ ಬೇಗ ಇಲ್ಲಿ ಹೋಗಬೇಡ ಗಿಲ್ಲಿ
ಹೆಣ್ಣು : ಎಲ್ಲಿ ಅಂದರಲ್ಲಿ ಕಾಡಬೇಡಿ ನಿಲ್ಲಿ
--------------------------------------------------------------------------------------------------------------------------
ಹೆಣ್ಣು : ಎಲ್ಲಿ ಅಂದರಲ್ಲಿ ಕಾಡಬೇಡಿ ನಿಲ್ಲಿ
ಕೋರಸ್ : ಸುರತ ಸುರತ ಸುಖ ಸುಖ ಸುರತ ಸುಖ ಸಂವರ್ಧಿನಿ ಪಂಚ ಸುರತ
ಸುರತ ಸುರತ ಸುಖ ಸುಖ ಸುರತ ಸುಖ ಸಂವರ್ಧಿನಿ ಪಂಚ ಸುರತ
ಸುರತ ಸುರತ ಸುಖ ಸುಖ ಸುರತ ಸುಖ ಸಂವರ್ಧಿನಿ ಪಂಚ ಸುರತ
ಸುರತ ಸುರತ ಸುಖ ಸುಖ ಸುರತ ಸುಖ ಸಂವರ್ಧಿನಿ ಪಂಚ ಸುರತ
No comments:
Post a Comment