463. ಬೆಳುವಲದಾ ಮಡಿಲಲ್ಲಿ (1975)



ಬೆಳುವಲದ ಮಡಿಲಲ್ಲಿ ಚಿತ್ರದ ಹಾಡುಗಳು 
  1. ನೋಟಕ್ಕೆ ನೋಟ 
  2. ಬೆಳುವಲದ ಮಡಿಲಲ್ಲಿ 
  3. ಮುತ್ತು ಮಳೆಗಾಗಿ ಹೊತ್ತು 
  4. ಎಲ್ಲಾರ್ ಕಾಯೋ ದ್ಯಾವರೇ ನೀನು 
ಬೆಳುವಲದ ಮಡಿಲಲ್ಲಿ (1975)
ಸಾಹಿತ್ಯ: ಗೀತಪ್ರಿಯ ಸಂಗೀತ: ರಾಜನ್-ನಾಗೇಂದ್ರ ಹಾಡಿದವರು: ಎಸ್.ಪಿ.ಬಿ. ಎಸ್.ಜಾನಕೀ 

ಹೆಣ್ಣು : ನೋಟಕ್ಕೆ ನೋಟ ಮಸೆಯೋನೇ
          ಓಹೋಹೋ  ನೋಟಕ್ಕೆ ನೋಟ ಮಸೆಯೋನೇ
          ಮನಸಿಗೆ ಮನಸನ್ನ ಬೆಸೆಯೋನೇ 
          ಏನೇನೋ ಆಸೆಯ ಹೊಸೆಯೊನೇ ನಾ ಬಲ್ಲೆ ನೀನು ಅಂತೊನೆ 
ಗಂಡು : ದಿಟ್ಟಿಗೆ ದಿಟ್ಟಿ 
           ದಿಟ್ಟಿಗೆ ದಿಟ್ಟಿ ತಟ್ಟೋಳೇ ಮೆತ್ತಗೆ ಕಣ್ಣ ಬಾಣ ಬಿಟ್ಟೋಳೇ 
           ತಟ್ಟಂಥ ಸೀಒಸ್ಮೆ ಕೊಟ್ಟೋಳೇ ನಾ ಬಲ್ಲೆ ನೀನು ಅಂಥೋಳೆ
ಹೆಣ್ಣು : ಅಹ್ಹಹ ನೋಟಕ್ಕೆ ನೋಟ ಮಸೆಯೋನೇ ನಾ ಬಲ್ಲೆ ನೀನು ಅಂತೊನೆ

ಹೆಣ್ಣು : ಕುಡಿ ಮೀಸೆ ತೀಡೋ ಸರದಾರ ಅಹಹಾ... ಓಹೋಹೋ..  ಹೊಯ್
          ಕುಡಿ ಮೀಸೆ ತೀಡೋ ಸರದಾರ ಕಟ್ಟಾಳು ನೀನೇ ನಗುಮಹುರಾ 
         ಹಳ್ಳಿಯ ಹಮ್ಮಿರ ನೋಡ್ಯಾಕೆ ಗಂಭೀರ ನೀನಾದೆ ನನ್ನ ಗೆಣೆಗಾರ  
         ನೀನಾದೆ ನನ್ನ ಗೆಣೆಗಾರ 
ಗಂಡು : ಹೈಯೋ ನುನ್ನಾಣೆ ಸಣ್ಣಾನೇ ನಡುವೋಳೇ (ಹಾಹಾ )
           ಜೋಳಾದ ತೆನೆ ಹಂಗೆ ತೂಗೋಳೇ (ಹಾಹ)
           ಬಳ್ಳಿಹಂಗೆ ಬಳುಕೋಳೆ  (ಅಹ್ಹ ಅಹ್ಹ ಅಹ್ಹ ಆಹ್ಹಾ ) 
          ಕಳ್ಳಿ ಹಂಗೆ ಕೆಣಕೋಳೇ (ಎಹೇ ಎಹೇ ಎಹೇ )    
          ಬಳ್ಳಿಹಂಗೆ ಬಳುಕೋಳೆ ಕಳ್ಳಿ ಹಂಗೆ ಕೆಣಕೋಳೇ 
          ಮಳ್ಳಿಹಂಗೆ ಮನದಾಸೆ ಎರಗೋಳೇ
          ಮಳ್ಳಿಹಂಗೆ ಮನದಾಸೆ ಕೆದಕೋಳೆ
ಹೆಣ್ಣು :ಹೈಯ್  ಅಹ್ಹಹ ನೋಟಕ್ಕೆ ನೋಟ ಮಸೆಯೋನೇ ಮನಸಿಗೆ ಮನಸನ್ನ ಬೆಸೆಯೋನೇ 
ಗಂಡು :ಅರೆರೇರೆ  ದಿಟ್ಟಿಗೆ ದಿಟ್ಟಿ ತಟ್ಟೋಳೇ ಮೆತ್ತಗೆ ಕಣ್ಣ ಬಾಣ ಬಿಟ್ಟೋಳೇ

ಗಂಡು : ತನ್ನಲ್ಲಿ ಎಲ್ಲಾನು ಮೆಲ್ಲೋಳೆ ಓಹೋಹೋ ಆಹಾಹಾ 
           ತನ್ನಲ್ಲಿ ಎಲ್ಲಾನು ಮೆಲ್ಲೋಳೆ ನೋಡ್ದೆ ಹೇಗೆ ಎಲ್ಲಾರನೂ ಗೆಲ್ಲೋಳೆ 
           ಈ ಮುತ್ತನ್ನ ಚೆಲ್ಲೋಳೆ ಕಣ್ಣಿಂದ ಗೆಲ್ಲೋಳೆ 
           ಬಿನ್ನಾಣದ ಬಾಣ ಬಿಡುವೋಳೇ 
           ಬಿನ್ನಾಣದ ಬಾಣ ಬಿಡುವೋಳೇ 
ಹೆಣ್ಣು : ಆಂ.. ಮುಸಮುಸ್ ನಕ್ಕ ಕಂಡು ನಡೆಯೋನೇ (ಅಹ್ಹಹ್ಹಹ )
          ಮೊಸರನಂಗೆ  ಮನಸನ್ನ ಕಡೆಯೋನೆ (ಹಾಯ್)
           ಕಣ್ಣಸನ್ನೇ ಮಾಡೋನೇ (ಹಹ್ಹಹಹ್ಹ ) ಕನಸಾಗೇ ಕಾಡೋನೆ (ಓಹೋಹೊಹೋ)   


           ಕಣ್ಣಸನ್ನೇ ಮಾಡೋನೇ  ಕನಸಾಗೇ ಕಾಡೋನೆ 
           ಬಿಂಕಕ್ಕೆ ಸುಂಕ ಕೇಳೋನೆ.. ಬಿಂಕಕ್ಕೆ ಸುಂಕ ಕೇಳೋನೆ 
ಗಂಡು : ಟ್ರುಹಾ ...  ದಿಟ್ಟಿಗೆ ದಿಟ್ಟಿ ತಟ್ಟೋಳೇ ಮೆತ್ತಗೆ ಕಣ್ಣ ಬಾಣ ಬಿಟ್ಟೋಳೇ
ಹೆಣ್ಣು : ಅರೆರೇರೆ  ಏನೇನೋ ಆಸೆಯ ಹೊಸೆಯೊನೇ ನಾ ಬಲ್ಲೆ ನೀನು ಅಂತೊನೆ
ಇಬ್ಬರು : ಹೊಯ್ ತಾನ ತಂದಾನ ತಂದನಾನ  ತಂದಾನ ತಾನ ತಂದನಾನ
ಹೆಣ್ಣು : ತಂದನಾ....            ಗಂಡು: ತಂದನಾ....  
ಹೆಣ್ಣು : ತಂದನಾ....            ಗಂಡು: ತಂದನಾ....    
--------------------------------------------------------------------------------------------------------------------------

ಬೆಳುವಲದ ಮಡಿಲಲ್ಲಿ (1975)
ಸಾಹಿತ್ಯ: ಗೀತಪ್ರಿಯ ಸಂಗೀತ: ರಾಜನ್-ನಾಗೇಂದ್ರ ಹಾಡಿದವರು: ಎಸ್.ಪಿ.ಬಿ.ಎಸ್.ಜಾನಕೀ 


ಗಂಡು : ಬೆಳವಲದ ಮಡಿಲಲ್ಲಿ .... ಮಡಿಲಲ್ಲಿ ....ಮಡಿಲಲ್ಲಿ ....
ಹೆಣ್ಣು : ಬೆವರ ಹನಿ ಬಿದ್ದಾಗ.......
ಗಂಡು : ಬೆಳವಲದ ಮಡಿಲಲ್ಲಿ ಬೆವರ ಹನಿ ಬಿದ್ದಾಗ
           ಬೆಳವಲದ ಮಡಿಲಲ್ಲಿ ಬೆವರ ಹನಿ ಬಿದ್ದಾಗ
           ಒಂದೊಂದು ಬೆವರ ಹನಿ ಮುತ್ತಾಯ್ತದೊ
           ರಾಗಿಯ ಜ್ವಾಳದ ತೆನೆಯಾಯ್ತದೊ
ಹೆಣ್ಣು : ಒಂದೊಂದು ಬೆವರ ಹನಿ ಮುತ್ತಾಯ್ತದೊ
          ಎಲ್ಲಾರ ಅನ್ನದ ತುತ್ತಾಯ್ತದೋ
ಇಬ್ಬರು : ಬೆಳವಲದ ಮಡಿಲಲ್ಲಿ....  ಬೆವರ ಹನಿ ಬಿದ್ದಾಗ

ಗಂಡು : ದುಡಿಮೇಲಿ ಯಾವತ್ತು ಇರಬೇಕು ಭಕ್ತಿ
ಹೆಣ್ಣು : ಬಡತನವ ಓಡ್ಸೋಕೆ ಅದು ಒಂದೇ ಯುಕ್ತಿ
ಗಂಡು : ದುಡಿಯೋರೆ ನಾಡಿನ...
           ದುಡಿಯೋರೆ ನಾಡಿನ ಬಲು ದೊಡ್ಡ ಶಕ್ತಿ
ಹೆಣ್ಣು : ಬೆಳೆಯೋರ ಕೈಗಳೇ  ದೇಶಕ್ಕೆ ಆಸ್ತಿ!!
ಇಬ್ಬರು : ಈ ನಮ್ಮ ಶಕ್ತೀಲಿ ನಂಬಿಕೆ ಇಟ್ಟಾಗ
             ಈ ನಮ್ಮ ಶಕ್ತೀಲಿ ನಂಬಿಕೆ ಇಟ್ಟಾಗ
            ನಾವ್ಕಾಣೊ ಕಸವೆಲ್ಲ ರಸವಾಯ್ತದೊ
            ನಾವ ಕಂಡ  ಕನಸೆಲ್ಲ ನನಸಾಯ್ತದೊ
ಗಂಡು : ಬೆಳವಲದ ಮಡಿಲಲ್ಲಿ    ಹೆಣ್ಣು : ಬೆಳವಲದ ಮಡಿಲಲ್ಲಿ
ಗಂಡು : ಬೆವರ ಹನಿ ಬಿದ್ದಾಗ..... ಹೆಣ್ಣು : ಬೆವರ ಹನಿ ಬಿದ್ದಾಗ.......  


ಗಂಡು : ಓಹೊ ಹಾಹಾ (ಹಾಹಾ ಹಾಹಾ ಹಾಹಾ)
             ಓಹೊ ಹಾಹಾ (ಓಹೊ ಹಾಹಾ ) ಓಹೊ ಹಾಹಾ (ಓಹೊ ಹಾಹಾ )
ಹೆಣ್ಣು : ಉಳುವೋನೆ ಲೋಕಕ್ಕೆ ಬೇಕಾದ ಗೆಳೆಯ
ಗಂಡು : ಹಳ್ಳಿಗೂ ಡಿಲ್ಲಿಗೂ ಕೊಡ್ತಾನೆ ಬೆಳೆಯ
ಹೆಣ್ಣು : ಭೂತಾಯಿ ಬಂಟ....
          ಭೂತಾಯಿ ಬಂಟ ಈ ನೇಗಿಲನೆಂಟ
ಗಂಡು : ಇವ್ನಿಂದ್ಲೆ ಅಳಿಯೋದು ಹಸಿವಿನಾ ಸಂಕಟ
ಹೆಣ್ಣು : ಈ ಬಂಟ ದುಡಿದಾಗ....
ಗಂಡು : ಭೂದೇವಿ ನಗ್ತಾಳೆ
ಹೆಣ್ಣು : ಈ ಬಂಟ ದುಡಿದಾಗ
ಗಂಡು : ಭೂದೇವಿ ನಗ್ತಾಳೆ
ಹೆಣ್ಣು : ಆವಾಗ್ಲೆ ನೆಲವೆಲ್ಲ ಹಸಿರಾಯ್ತದೊ
ಗಂಡು : ಎಲ್ಲರ ಬಾಳಿನ ಉಸಿರಾಯ್ತದೊ!
ಇಬ್ಬರು: ಬೆಳವಲದ ಮಡಿಲಲ್ಲಿ ಬೆವರ ಹನಿ ಬಿದ್ದಾಗ
           ಒಂದೊಂದು ಬೆವರ ಹನಿ ಮುತ್ತಾಯ್ತದೊ
           ರಾಗಿಯ ಜ್ವಾಳದ ತೆನೆಯಾಯ್ತದೊ
           ಒಂದೊಂದು ಬೆವರ ಹನಿ ಮುತ್ತಾಯ್ತದೊ
          ಎಲ್ಲಾರ ಅನ್ನದ ತುತ್ತಾಯ್ತದೋ
--------------------------------------------------------------------------------------------------------------------------

ಬೆಳುವಲದ ಮಡಿಲಲ್ಲಿ (1975) ಮುತ್ತುಮಳೆಗಾಗಿ ಹೊತ್ತು ಕಾದಿ
ಸಾಹಿತ್ಯ : ಗೀತಪ್ರಿಯ ಸಂಗೀತ : ರಾಜನ್-ನಾಗೇಂದ್ರ ಗಾಯನ : ವಾಣಿಜಯರಾಂ


ಮುತ್ತು ಮಳೆಗಾಗಿ ಹೊತ್ತು ಕಾದಿದೆ
ಕೆನ್ನೆಕೆಂಪಗಾಗಿ ತಂಪು ಕೋರಿದೆ
ಮುತ್ತು ಮಳೆಗಾಗಿ ಹೊತ್ತು ಕಾದಿದೆ ಕೆನ್ನೆಕೆಂಪಗಾಗಿ ತಂಪು ಕೋರಿದೆ
ಹುಸಿಕೋಪ ಬೇಡ ನಲ್ಲ  ಬಿಸಿತಾಪ ಬಲ್ಲೆ ಎಲ್ಲಾ..ಲಲ...ಲಲ....
ನನ್ನಲ್ಲಿ ನೀನಾಗಿ ನಿನ್ನಲ್ಲಿ ನಾನಾಗಿ....
ಮುತ್ತು ಮಳೆಗಾಗಿ ಹೊತ್ತು ಕಾದಿದೆ
ಕೆನ್ನೆಕೆಂಪಗಾಗಿ ತಂಪು ಕೋರಿದೆ

ಮಿಂಚೊಂದು ಈ ಕಣ್ಣ ಅಂಚಲ್ಲಿದೆ
ಸಂಚೊಂದು ಮುಂಗರುಳ ಮರೆಯಲ್ಲಿದೆ...ಆಹಹಾ...ಲಲಲಾ....ಓ ....
ನಿನ್ನಿಂದ ನನ್ನುಸಿರು ಬಿಸಿಯಾಗಿದೆ
ನಿನಗಾಗಿ ಮೈಮನಸು ಹಸಿಯಾಗಿದೆ
ನಿನ್ನಯ ಒಲವು ನನ್ನಯ ಗೆಲುವು
ಕಾಣಲು ಚೆಲುವು ಉಲ್ಲಾಸ ಉಲ್ಲಾಸ ಉಲ್ಲಾಸವೋ.....
ಮುತ್ತು ಮಳೆಗಾಗಿ ಹೊತ್ತು ಕಾದಿದೆ
ಕೆನ್ನೆಕೆಂಪಗಾಗಿ ತಂಪು ಕೋರಿದೆ

ಈ ನನ್ನ ಮನ ನಿನ್ನ ಮನೆಯಾಗಿದೆ
ನೀ ಮನದೆ ತುಂಬಿರಲು ಹಾಯಾಗಿದೆ.. ಅಹಹಾ...ಲಲಲಾ....ಓಓ  ....
ಈ ಪ್ರೇಮಪಾಠಕ್ಕೆ ಮೊದಲೆಲ್ಲಿದೆ
ಈ ಮೋಹದಾಹಕ್ಕೆ ಮಿತಿಯಲ್ಲಿದೆ
ಏತಕೆ ಮುನಿಸು ಎಲ್ಲಿದೆ ಮನಸು
ಇಲ್ಲಿರೆ ಸೊಗಸು ಸಂತೋಷ..ಸಂತೋಷ...ಸಂತೋಷವೋ...
ಮುತ್ತು ಮಳೆಗಾಗಿ ಹೊತ್ತು ಕಾದಿದೆ
ಕೆನ್ನೆಕೆಂಪಗಾಗಿ ತಂಪು ಕೋರಿದೆ
ಹುಸಿಕೋಪ ಬೇಡ ನಲ್ಲ  ಬಿಸಿತಾಪ ಬಲ್ಲೆ ಎಲ್ಲಾ..ಲಲ...ಲಲ....
ನನ್ನಲ್ಲಿ ನೀನಾಗಿ ನಿನ್ನಲ್ಲಿ ನಾನಾಗಿ....
ಮುತ್ತು ಮಳೆಗಾಗಿ ಹೊತ್ತು ಕಾದಿದೆ
ಕೆನ್ನೆಕೆಂಪಗಾಗಿ ತಂಪು ಕೋರಿದೆ
ಲಲ್ಲಲ್ಲಲಾ ಲಲ್ಲಲ್ಲಲಾ ಲಲ್ಲಲ್ಲಲಾ ಲಲ್ಲಲ್ಲಲಾ
---------------------------------------------------------------------------------------------------------------------

ಬೆಳುವಲದ ಮಡಿಲಲ್ಲಿ (1975)

ಸಾಹಿತ್ಯ: ಗೀತಪ್ರಿಯ  ಸಂಗೀತ: ರಾಜನ್-ನಾಗೇಂದ್ರ   ಹಾಡಿದವರು: ಎಸ್.ಪಿ.ಬಿ.


ಎಲ್ಲಾರ್ನ್ ಕಾಯೋ ದ್ಯಾವ್ರೇ ನೀನು, ಎಲ್ಲಿ ಕುಂತಿದ್ದೀ
ನಮ್ಮನ್ನೆಲ್ಲಾ ಭೂಮ್ಯಾಗ್ ಬುಟ್ಟು ಏನು ಮಾಡ್ತಿದ್ದೀ... ನೀ ಏನು ಮಾಡ್ತಿದ್ದೀ
ಎಲ್ಲಾರ್ನ್ ಕಾಯೋ ದ್ಯಾವ್ರೇ ನೀನು ಎಲ್ಲಿ ಕುಂತಿದ್ದೀ
ನಮ್ಮನ್ನೆಲ್ಲಾ ಭೂಮ್ಯಾಗ್ ಬುಟ್ಟು ಏನು ಮಾಡ್ತಿದ್ದೀ...
ಎಲ್ಲಾರ್ನ್ ಕಾಯೋ ದ್ಯಾವ್ರೇ....

ಮನ್ಸಾರ್ನ್ ಮಾಡಿ ಅವರಿಷ್ಟ್‌ದಂಗೆ ಆಡಾಕ್ ಬುಟ್‌ಬಿಟ್ಟೆ
ನಿನ್ನೇ ಅವ್ರು ಕಲ್ನಾಗ್ ಕಡದು ಗುಡಿಯಾಗ್ ಕೂಡ್ಬುಟ್ರು
ಮನ್ಸಾರ್ನ್ ಮಾಡಿ ಅವರಿಷ್ಟ್‌ದಂಗೆ ಆಡಾಕ್ ಬುಟ್‌ಬಿಟ್ಟೆ
ನಿನ್ನೇ ಅವ್ರು ಕಲ್ನಾಗ್ ಕಡದು ಗುಡಿಯಾಗ್ ಕೂಡ್ಬುಟ್ರು
ನಿನ್ನ ಹೆಸರನ್ ಹೇಳ್ಕಂಡ್ ಎಷ್ಟೋ ಪಾಪ ಮಾಡ್ತಾರೆ
ನಿನ್ನ ಹೆಸರನ್ ಹೇಳ್ಕಂಡ್ ಎಷ್ಟೋ ಪಾಪ ಮಾಡ್ತಾರೆ
ಹಣ್ಣು ಕಾಯಿ ಲಂಚ ಕೊಟ್ಟು ಕ್ಷಮ್ಸು ಅಂತಾರೆ, ದ್ಯಾವ್ರೇ...
ಎಲ್ಲಾರ್ನ್ ಕಾಯೋ ದ್ಯಾವ್ರೇ ನೀನು ಎಲ್ಲಿ ಕುಂತಿದ್ದೀ
ನಮ್ಮನ್ನೆಲ್ಲಾ ಭೂಮ್ಯಾಗ್ ಬುಟ್ಟು ಏನು ಮಾಡ್ತಿದ್ದೀ...
ಎಲ್ಲಾರ್ನ್ ಕಾಯೋ ದ್ಯಾವ್ರೇ....

ತೆಂಗೀನ್ ಮರ ಸಾಕಿದ್ರೆ ಎಳನೀರ್ ಕೊಡ್ತದೆ
ಪ್ರೀತ್ಸಿದ್ ಬೆಳ್ಸಿದ್ ಮಕ್ಕಳಿಂದ ಕಣ್ಣೀರ್ ಸಿಗ್ತದೆ
ಬರೀ ಕಣ್ಣೀರ್ ಸಿಗ್ತದೆ ಅಹ್...
ತೆಂಗೀನ್ ಮರ ಸಾಕಿದ್ರೆ ಎಳನೀರ್ ಕೊಡ್ತದೆ
ಪ್ರೀತ್ಸಿದ್ ಬೆಳ್ಸಿದ್ ಮಕ್ಕಳಿಂದ ಕಣ್ಣೀರ್ ಸಿಗ್ತದೆ
ಅಪ್ಪ ಅಮ್ಮ ಬದ್ಕಿರೋ ತನಕ ಕೀಳಾಗ್ ಕಾಣ್ತಾರೆ
ಸತ್ತೋದ್ ಮ್ಯಾಗೆ ಶ್ರಾದ್ಧಾ ಮಾಡಿ ಭಕ್ತಿ ತೋರ್ತಾರೆ
ಅವರ್ನೆಲ್ಲ ಕಾಗೆ ಮಾಡಿ ಕೂಳ್ ಹಾಕ್ತಾರೆ, ಅಹ್ಹಹ್ಹಹ್ಹಾ...  ದ್ಯಾವ್ರೇ
ಎಲ್ಲಾರ್ನ್ ಕಾಯೋ ದ್ಯಾವ್ರೇ ನೀನು, ಎಲ್ಲಿ ಕುಂತಿದ್ದೀ...
ಎಲ್ಲಾರ್ನ್ ಕಾಯೋ ದ್ಯಾವ್ರೇ

ಬೇಸಾಯ್ದ್ ಬದುಕು ಬ್ಯಾಡ್ದೇ ಹೋದ್ರು ಭೂಮೀಲ್ ಪಾಲ್ಬೇಕು
ಬೆವರು ಮಾತ್ರ ಸುರೀಬಾರ್ದು ಭಾಗ್ಯ ಮಾತ್ರ ಬೇಕು
ಬೇಸಾಯ್ದ್ ಬದುಕು ಬ್ಯಾಡ್ದೇ ಹೋದ್ರು ಭೂಮೀಲ್  ಪಾಲ್ಬೇಕು
ಬೆವರು ಮಾತ್ರ ಸುರೀಬಾರ್ದು ಭಾಗ್ಯ ಮಾತ್ರ ಬೇಕು
ಉತ್ತು ಬಿತ್ತು ಬೆಳೆಯೋನ್ಗಲ್ವೆ ಸೇರ್ಬೇಕಾದ್ದು ಭೂಮಿ
ದುಡಿಯೋನಲ್ವೆ ಒಡೆಯ ಇನ್ನು ನೀನೇ ಹೇಳು ಸ್ವಾಮಿ, ದ್ಯಾವ್ರೇ
ಎಲ್ಲಾರ್ನ್ ಕಾಯೋ ದ್ಯಾವ್ರೇ ನೀನು, ಎಲ್ಲಿ ಕುಂತಿದ್ದೀ
ನಮ್ಮನ್ನೆಲ್ಲಾ ಭೂಮ್ಯಾಗ್ ಬುಟ್ಟು ಏನು ಮಾಡ್ತಿದ್ದೀ....
ಎಲ್ಲಾರ್ನ್ ಕಾಯೋ ದ್ಯಾವ್ರೇ
-------------------------------------------------------------------------------------------------------------------------


No comments:

Post a Comment