ಸರ್ವರ ಸೋಮಣ್ಣ ಚಲನಚಿತ್ರದ ಹಾಡುಗಳು
- ತಪ್ಪಿಲ್ಲ ಅಭಿಮಾನವಿದ್ದರೆ
- ನಾನೇ ಸರ್ವರ ಸೋಮಣ್ಣ
- ಆಕಾಶ ಮಳೆತಂತು
- ಆಯ್ ಲೈಕ್ ಯುವರ್ ಇನ್ನೋಸೆನ್ಸ್
- ಓ ರಬ್ಬಾ..
ಸರ್ವರ್ ಸೋಮಣ್ಣ (೧೯೯೩) - ತಪ್ಪಿಲ್ಲ ಅಭಿಮಾನವಿದ್ದರೆ
ಸಂಗೀತ: ರಾಜ್-ಕೋಟಿ, ಸಾಹಿತ್ಯ : ಚಿ.ಉದಯಶಂಕರ, ಗಾಯನ : ಎಸ್.ಪಿ.ಬಿ.
ತಪ್ಪಿಲ್ಲ ಅಭಿಮಾನವಿದ್ದರೆ
ತಪ್ಪಿಲ್ಲ ಸ್ವಾಭಿಮಾನಿ ಆದರೆ ತಪ್ಪಿಲ್ಲ ನನ್ನ ಪ್ರಾಣವೆಂದರೂ
ತಾಯಿ ಭಾಷೆಯು ಕನ್ನಡದ ನುಡಿಯ
ಎದ್ದೇಳು ಎದ್ದೇಳು ಎದ್ದೇಳು ಎದ್ದೇಳು
ಎದ್ದೇಳು ಎದ್ದೇಳು ಹುಲಿಯಂತೆ ಎದ್ದೇಳು
ಎದ್ದೇಳು ನೀನಿನ್ನು ಮಲಗದಿರು ಮರೆಯದಿರು
ನಾನು ಕನ್ನಡ ಕಂದ ಎಂದು ಹೇಳು ನೀ ಹೆಮ್ಮೆ ಇಂದ
ತಿಳಿ ನಿನ್ನ ಭಾಷೆ ಕೋಗಿಲೆ ಹಾಡು ಕನ್ನಡ ಕನ್ನಡ ಕನ್ನಡ
ತಿಳಿ ನಿನ್ನ ನಾಡು ಗಂಧದ ನಾಡು ಕನ್ನಡ ಕನ್ನಡ ಕನ್ನಡ
ಎದ್ದೇಳು ಎದ್ದೇಳು ಹುಲಿಯಂತೆ ಎದ್ದೇಳು
ಎದ್ದೇಳು ನೀನಿನ್ನು ಮಲಗದಿರು ಮರೆಯದಿರು
ಕಸ್ತೂರಿ ಕಂಪಿದೆ ನಿನ್ನ ಮಾತಲಿ
ತಿಳಿ ಸಂಗೀತ ತುಂಬಿದೆ ನಿನ್ನ ನುಡಿಯಲಿ
ಆ ಪಂಪ ರನ್ನರು ಇದ್ದ ನಾಡಿದು ಆ ಸರ್ವಜ್ಞ ಮೆಟ್ಟಿದ ಹೊನ್ನ ಮಣ್ಣಿದು
ನಂಜುಂಡ ಇಲ್ಲೇನೆ ಇರುವ ವೀರ ನಾರಾಯಣ ಇಲ್ಲೇನೆ ಇರುವ
ಚಾಮುಂಡಿ ಇಲ್ಲೇನೆ ಇಹಳು ನಮ್ಮ ಯಲ್ಲಮ್ಮ ಇಲ್ಲೇನೆ ಇಹಳು
ತಾನಿನನಿ ತಂದಾನ ತನಿ ತಾನಿನನಿ ತಂದಾನ ತಾನಿನನಿ ತಂದಾನ ತನಿ ತಾನಿನನಿ ತಂದಾನ
ನಿನ್ನ ನೀ ಮರೆಯದೆ ಯಾರಿಗೂ ಎಂದಿಗೂ ಸೋಲದೆ
ಎದ್ದೇಳು ಎದ್ದೇಳು ಎದ್ದೇಳು ಎದ್ದೇಳು
ಎದ್ದೇಳು ಎದ್ದೇಳು ಹುಲಿಯಂತೆ ಎದ್ದೇಳು
ಎದ್ದೇಳು ನೀನಿನ್ನು ಮಲಗದಿರು ಮರೆಯದಿರು
ಕಾವೇರಿ ನಾಡಿನ ದೇವಗಂಗೆಯು ಆಹಾ ಸುಧೆಯಂತೆ ಓಡುವ ಕಪಿಲೆ ತುಂಗೆಯರು
ಶೃಂಗೇರಿ ಶಾರದೆ ವೀಣೆ ನುಡಿಸುವ
ಅಹಾ ಭೂ ಸ್ವರ್ಗವಾಗಿದೆ ಈ ಪುಣ್ಯ ಭೂಮಿಯು
ನೂರಾರು ಜನುಮನೇ ಬರಲಿ ನಾವು ಈ ತಾಯ ಮಡಿಲಲ್ಲೆ ಇರುವ
ಈ ತಾಯ ಹಾಲನ್ನೆ ಕುಡಿದು ನಾವು ಕನ್ನಡದ ಮಗುವಾಗೆ ಬೆಳೆವ
ತಾನಿನನಿ ತಂದಾನ ತನಿ ತಾನಿನನಿ ತಂದಾನ
ತಾನಿನನಿ ತಂದಾನ ತನಿ ತಾನಿನನಿ ತಂದಾನ
ಎಲ್ಲರ ಪ್ರೇಮದ ಹರಕೆಯ ಪಡೆಯುತ ಗೆಲ್ಲುವಾ
ಎದ್ದೇಳು ಎದ್ದೇಳು ಎದ್ದೇಳು ಎದ್ದೇಳು ಎದ್ದೇಳು ಎದ್ದೇಳು ಹುಲಿಯಂತೆ ಎದ್ದೇಳು

-----------------------------------------------------------------------
ಸರ್ವರ್ ಸೋಮಣ್ಣ (೧೯೯೩) - ನಾನೇ ಸರ್ವರ ಸೋಮಣ್ಣ
ಸಂಗೀತ: ರಾಜ್-ಕೋಟಿ, ಸಾಹಿತ್ಯ : ಆರ್.ಏನ್.ಜಯಗೋಪಾಲ, ಗಾಯನ : ಎಸ್.ಪಿ.ಬಿ.
ಇಡ್ಲಿ ವಡೆ ಸಾಂಬಾರ್ ಚಟ್ನಿ ಮಾಸಾಲ್ ದೋಸೆ ರವಾ ದೋಸೆ
ಕೇಸರಿಭಾತ್ ವಾಂಗಿ ಭಾತ್ ಪುರಿ ಸಾಗೂ ಚೌ ಚೌ ಬಾತ್ ಗುಲಾಬ್ ಜಾಮೂನ್
ರಸಗುಲ್ಲ ಕ್ಯಾರೆಟ್ ಹಲ್ವ್ ಬಾಸುಂದಿ ಏನ್ ಬೇಕು ಹೇಳಿ ಆಹಾ...
ನಾನೇ ಸರ್ವರ್ ಸೋಮಣ್ಣ ಜೋಕರ್ ಅಂತಾರೆ ನನ್ನನ್ನೇ
ನನ್ನ ಮಾತೇನೂ ಸ್ವೀಟೂ ಕೇಳೋಲ್ಲ ರೇಟು ನಗಿಸುವೆ ನಿಮ್ಮನ್ನ
ನಾನೇ ಸರ್ವರ್ ಸೋಮಣ್ಣ ಜೋಕರ್ ಅಂತಾರೆ ನನ್ನನ್ನೇ
ನನ್ನ ಮಾತೇನೂ ಸ್ವೀಟೂ ಕೇಳೋಲ್ಲ ರೇಟು ನಗಿಸುವೆ ನಿಮ್ಮನ್ನ
ಮನಸಿದು ಅಪ್ಪಟ್ಟ ಚಿನ್ನ ಅಂತಾರೆ ತಿಳಿದೋರ ನನ್ನಾ
ನಗಿಸುತ ನಿಮ್ಮಯ ಚಿಂತೆ ನೀಗುವೆ ಕೇಳಣ್ಣ...
ನಾನೇ ಸರ್ವರ್ ಸೋಮಣ್ಣ ಜೋಕರ್ ಅಂತಾರೆ ನನ್ನನ್ನೇ
ನನ್ನ ಮಾತೇನೂ ಸ್ವೀಟೂ ಕೇಳೋಲ್ಲ ರೇಟು ನಗಿಸುವೆ ನಿಮ್ಮನ್ನ
ನಮಗೆ ಗೊತ್ತಾ ಸಾರ್ ನಾನು ಹುಟ್ಟದಾಗ ನನ್ ಜಾತಕ್ ನೋಡಿ ನಮ್ಮಪ್ಪನ ಹತ್ರ
ಜೋಯಿಸರು ಹೇಳಿದ್ರಂತೆ ನಿಮ್ಮಗ ನೂರಾರು ಜನಕ್ಕೆ ಅನ್ನಾ ಹಾಕ್ತಾನೆ ಅಂತಾ
ಆದ್ರೇ ಆ ಮಾತು ಈ ಥರ ನಿಜ ಆಗುತ್ತೇ ಅಂತ ಯಾರು ಕಂಡಿದ್ರೂ
ಹೊಸ ಹೆಂಡ್ತಿ ಬಂದಾಗ ಅಡಿಗೆ ಬರದೇ ನಿಂಗಾಗ ಆಪತ್ತಿಗೆ ಆಗೋನು ನಾನೇನೇ..
ಆಗ ಥ್ಯಾಂಕ್ಸ್ ಹೇಳೋರು ನೀವೇನೇ
ನೆಂಟ್ರು ಬಂದು ಕೂತಾಗ ನಲ್ಲೆ ಒಲ್ಲೇ ಎಂದಾಗ ನಿಮ್ಮ ಮಾನ ಕಾಯೋನು ನಾನೇನೇ
ನನ್ನ ಹಾಡಿ ಹೋಗೋಳುರು ನೀವೇನೇ ಶಹಬ್ಬಾಸ್ ಸೋಮಾ ಎನ್ನಿ... ಓಓಓ
ಹೆಂಡ್ತಿ ರಾಜ ಹಾಕಿದಳಂದ್ರೆ ಅತ್ತ ಅವ್ಳು ತವರಿಗೆ ಹೋದ್ರೆ
ತೀರಿಸ್ತೀನಿ ನಿಮ್ಮಯ ತೊಂದ್ರೆ ಚಿಂತೆಯ ಬೀಡಣ್ಣ
ನಾನೇ ಸರ್ವರ್ ಸೋಮಣ್ಣ ಜೋಕರ್ ಅಂತಾರೆ ನನ್ನನ್ನೇ
ನನ್ನ ಮಾತೇನೂ ಸ್ವೀಟೂ ಕೇಳೋಲ್ಲ ರೇಟು ನಗಿಸುವೆ ನಿಮ್ಮನ್ನ
ಕಾಲೇಜಿನ ಪಿಕನಿಕ್ಕು ತಾಳ ಹಾಕೋ ಮ್ಯೂಸಿಕ್ ಆಗ ನೋಡಿ ಈ ನನ್ನ ಟೇಕನ್ನಿಕ್ಕೂ
ತಿಂಡಿ ಕೊಡು ನೀ ಠೀವಿ ಮ್ಯಾಜಿಕ್ಕೂ ರಾಕ್ ಯಾಂಡ್ ರೋಲ್ ಈ ಡಾನ್ಸ್
ಮಧ್ಯ ಪ್ರೇಮಿ ರೋಮಾನ್ಸು ಹೊಟ್ಟೆ ತಾಳ ಹಾಕ್ದಾಗ ನಾನುಂಟು
ಖಾಯಂ ಅಂತೇ ಎಂದೆಂದೂ ಈ ನೆಂಟು ತಿಂಡಿ ರೇಡಿ ಬನ್ನೀ ... ಓಓಓ
ನೋಡ್ತಾ ನೋಡ್ತಾ ಹುಡ್ಗಿರಂದ ಚೆಟ್ನಿ ಜೊತೆ ಜಿಲೇಬಿ ತಿಂದ
ಆದರೇನು ಸಂತೋಷದಿಂದ ನನ್ ಜೊತೆ ಆಡಣ್ಣ
ನಾನೇ ಸರ್ವರ್ ಸೋಮಣ್ಣ ಜೋಕರ್ ಅಂತಾರೆ ನನ್ನನ್ನೇ
ನನ್ನ ಮಾತೇನೂ ಸ್ವೀಟೂ ಕೇಳೋಲ್ಲ ರೇಟು ನಗಿಸುವೆ ನಿಮ್ಮನ್ನ
ಮನಸಿದು ಅಪ್ಪಟ್ಟ ಚಿನ್ನ ಅಂತಾರೆ ತಿಳಿದೋರ ನನ್ನಾ
ನಗಿಸುತ ನಿಮ್ಮಯ ಚಿಂತೆ ನೀಗುವೆ ಕೇಳಣ್ಣ...
ನಾನೇ ಸರ್ವರ್ ಸೋಮಣ್ಣ ಜೋಕರ್ ಅಂತಾರೆ ನನ್ನನ್ನೇ
ನನ್ನ ಮಾತೇನೂ ಸ್ವೀಟೂ ಕೇಳೋಲ್ಲ ರೇಟು ನಗಿಸುವೆ ನಿಮ್ಮನ್ನ
----------------------------------------------------------------------
ಸರ್ವರ್ ಸೋಮಣ್ಣ (೧೯೯೩) - ಆಕಾಶ ಮಳೆತಂತು
ಸಂಗೀತ: ರಾಜ್-ಕೋಟಿ, ಸಾಹಿತ್ಯ : ಆರ್.ಏನ್.ಜಯಗೋಪಾಲ, ಗಾಯನ : ಎಸ್.ಪಿ.ಬಿ. ಮಂಜುಳಗುರುರಾಜ
ಹೆಣ್ಣು : ಆಕಾಶ ಮಳೆ ತಂತು ನಮಗಾಗಿ
ಗಂಡು : ಚಳಿಯಲ್ಲೂ ಮೈಯಾಯ್ತು ಬಿಸಿಯಾಗಿ
ಹೆಣ್ಣು : ತಾನು ನೂರಾಸೆ ಮಿಂಚಾಗಿದೆ
ಗಂಡು : ಹೊಸ ಮತ್ತಲಿ ತೂರಾಡಿದೆ
ಹೆಣ್ಣು : ಆಕಾಶ ಮಳೆ ತಂತು ನಮಗಾಗಿ
ಗಂಡು : ಚಳಿಯಲ್ಲೂ ಮೈಯಾಯ್ತು ಬಿಸಿಯಾಗಿ
ಗಂಡು : ಜೇನ ತುಟಿ ರಸ ತುಂಬಿ ಕೆಂಪಾಗಿದೆ ನೀ ನಲ್ಲ ಹೀರೇಂದಿದೆ
ಹೆಣ್ಣು : ಮುತ್ತಿನಲ್ಲಿ ಎಂಥ ಸುಖ ನೋಡೆಂದಿದೆ ನಿಶೆಯಲ್ಲಿ ಆಡೆಂದಿದೆ
ಗಂಡು : ಸೊಂಟ ನೋಡು ಬಳುಕುತಾ ಹಿಡಿ ಎಂದು ಬೇಡಿದೆ
ಹೆಣ್ಣು : ಪ್ರಾಯ ಭಾರ ತಾಳೆ ನಾ ಬೇಗ ಬಾರ ಎಂದಿದೆ
ಪ್ರಿಯ ನೀ ಅಪ್ಪಿ ಆ ತೊಳಲಿ ಹೊಸ ಸುಖ ಕಂಡೆ ಈ ಬಾಳಲಿ
ಹೆಣ್ಣು : ಆಕಾಶ ಮಳೆ ತಂತು ನಮಗಾಗಿ
ಗಂಡು : ಚಳಿಯಲ್ಲೂ ಮೈಯಾಯ್ತು ಬಿಸಿಯಾಗಿ
ಗಂಡು : ಮಂಜು ತೆರೆ ಮಧ್ಯದಿಂದ ಕೆಂದಾವರೆ ಮೊಗ್ಗುಗಳು ತಾವಾಡಿದೆ
ಹೆಣ್ಣು : ಮೋಡಗಳು ಬಗ್ಗಿ ಬಗ್ಗಿ ಈ ಭೂಮಿಗೆ ಮುತ್ತ ನೀಡಬೇಕೆಂದಿದೆ
ಗಂಡು : ಮರವನ್ನು ಬಗ್ಗಿ ಬಳ್ಳಿಯು ತಬ್ಬಿ ನಿಂತು ತೂಗಿತೇ
ಹೆಣ್ಣು : ಲತೆ ಒಳಗೆ ತಲ್ಲಣ ನೂರು ಕಥೆಯಾ ಹೇಳಿದೆ
ಗಂಡು : ಪ್ರತಿ ಕ್ಷಣದಲ್ಲೂ ಮೃದು ಕಂಪನ ಕಣ ಕಣದಲ್ಲೂ ರೋಮಾಂಚನ
ಹೆಣ್ಣು : ಆಕಾಶ ಮಳೆ ತಂತು ನಮಗಾಗಿ
ಗಂಡು : ಚಳಿಯಲ್ಲೂ ಮೈಯಾಯ್ತು ಬಿಸಿಯಾಗಿ
ಹೆಣ್ಣು : ತಾನು ನೂರಾಸೆ ಮಿಂಚಾಗಿದೆ
ಗಂಡು : ಹೊಸ ಮತ್ತಲಿ ತೂರಾಡಿದೆ
ಹೆಣ್ಣು : ಆಕಾಶ ಮಳೆ ತಂತು ನಮಗಾಗಿ
ಗಂಡು : ಚಳಿಯಲ್ಲೂ ಮೈಯಾಯ್ತು ಬಿಸಿಯಾಗಿ
-----------------------------------------------------------------------
ಸರ್ವರ್ ಸೋಮಣ್ಣ (೧೯೯೩) - ಆಯ್ ಲೈಕ್ ಯುವರ್ ಇನ್ನೋಸೆನ್ಸ್
ಸಂಗೀತ: ರಾಜ್-ಕೋಟಿ, ಸಾಹಿತ್ಯ : ಆರ್.ಏನ್.ಜಯಗೋಪಾಲ, ಗಾಯನ : ಎಸ್.ಪಿ.ಬಿ. ಮಾಲ್ಗುಡಿ ಶುಭ
ಹೆಣ್ಣು : ಐ ಲೈಕ್ ಯೂ ವಿನಸನ್ ಈ ಹಾಲು ಮನಸು
ಐ ಲೈಕ್ ಯೂ ವಿನಸನ್ ಈ ಏನೊಂದು ಸೊಗಸು
ನನ್ನಯ ಜೊತೆಗೆ ನಾನಿರೋ ಘಳಿಗೆ ಸವಿ ಸವಿ ಅನುಭವ
ಗಂಡು : ಸುಂದರಿ ಅಪ್ಸರೆ ಬಂದೆ ನೀ ಬಾಳಿಗೆ ಇಂದು
ನಿನ್ನಿಂದ ಆನಂದ ಮೈತುಂಬಿ ಹಾಡಾಯಿತು
ಹೆಣ್ಣು : ಐ ಲೈಕ್ ಯೂ ವಿನಸನ್ ಈ ಹಾಲು ಮನಸು ಗಂಡು : ಅಂತಂದೆ ನೀನು
ಹೆಣ್ಣು : ಐ ಲೈಕ್ ಯೂ ವಿನಸನ್ ಈ ಹಾಲು ಮನಸು ಗಂಡು : ಹಾಗಂದರೇನು
ಹೆಣ್ಣು : ಮಗುವಿನ ಹಾಗೆ ನೀನಿರು ಹೀಗೆ ಎಂದಿಗೂ ನಗುತಲೀ ...
ಮಗುವಿನ ಹಾಗೆ ನೀನಿರು ಹೀಗೆ ಎಂದಿಗೂ ನಗುತಲೀ ...
ಗಂಡು : ನಿನಗೆ ಮೆರವೆಯ ನಾಟಕ ಏತಕೆ ಆಡಿದೆ ಅದರ ನಿಜವಾದ ಅರ್ಥವ ಈ ಮನ ತಿಳಿದಿದೆ
ಮನದ ಮಾತನು ಹೊರಗೆ ಹೇಳಲು ನಿನಗೆ ನಾಚಿಕೆ ನನಗೆ ಅಂಜಿಕೆ
ಗಂಡು : ನಿನ್ನ ಮಾತೆಲ್ಲ ಸವಿ ಸವಿ ಕೇಸರಿಭಾತಲಿ ನಿನ್ನ ಈ ರೀತಿ ನೆನೆಯುವೆ ರಾತ್ರಿ ಹೊತ್ತಲಿ
ನಿನ್ನ ಪ್ರೀತಿಯ ಹಗಲು ಕನಸಲು ಡ್ಯೂಟಿ ಟೈಮಲ್ಲೂ ಕಂಡು ನಿಂತೇನು
ಹೆಣ್ಣು : ಐ ಲೈಕ್ ಯೂ ವಿನಸನ್ ಈ ಹಾಲು ಮನಸು
ಐ ಲೈಕ್ ಯೂ ವಿನಸನ್ ಈ ಏನೊಂದು ಸೊಗಸು
ನನ್ನಯ ಜೊತೆಗೆ ನಾನಿರೋ ಘಳಿಗೆ ಸವಿ ಸವಿ ಅನುಭವ
ಗಂಡು : ಸುಂದರಿ ಅಪ್ಸರೆ ಬಂದೆ ನೀ ಬಾಳಿಗೆ ಇಂದು
ನಿನ್ನಿಂದ ಆನಂದ ಮೈತುಂಬಿ ಹಾಡಾಯಿತು
ಹೆಣ್ಣು : ಐ ಲೈಕ್ ಯೂ ವಿನಸನ್ ಈ ಹಾಲು ಮನಸು ಗಂಡು : ಅಂತಂದೆ ನೀನು
ಹೆಣ್ಣು : ಐ ಲೈಕ್ ಯೂ ವಿನಸನ್ ಈ ಹಾಲು ಮನಸು ಗಂಡು : ಹಾಗಂದರೇನು
----------------------------------------------------------------------
ಸರ್ವರ್ ಸೋಮಣ್ಣ (೧೯೯೩) - ಓ ರಬ್ಬಾ..
ಸಂಗೀತ: ರಾಜ್-ಕೋಟಿ, ಸಾಹಿತ್ಯ : ಆರ್.ಏನ್.ಜಯಗೋಪಾಲ, ಗಾಯನ : ಎಸ್.ಪಿ.ಬಿ. ಮಾಲ್ಗುಡಿ ಶುಭ
ಹೆಣ್ಣು : ಹೋಯ್ ರಬ್ಬಾ ಹೋಯ್ ರಬ್ಬಾ ಹರೆಯದಲ್ಲಿ ದಿನ ಹಬ್ಬ
ಪ್ರಾಯ ಒಂದು ಸಂಗೀತ ಆಡಿ ಕುಣಿಯೋ ಸಂಕೇತ
ಗಂಡು : ಹೀಗಾಗಿ ಎಂಜಾಯ್ ಮಾಡೋಣ ಆಮೇಲೆ ಬಾಯ್ ಬಾಯ್ ಬಿಡೋಣ
ಬೇಬಿ ಬೇಬಿ ಓ ಬೇಬಿ ಬೇಬಿ ಓ...
ಇಬ್ಬರು : ಬೇಬಿ ಬೇಬಿ ಓ ಬೇಬಿ ಬೇಬಿ ಓ...
ಗಂಡು : ನಾಳೆ ಚಿಂತೆ ಬೇಕಾಗಿಲ್ಲ ಇಂದೇ ಆಗ್ಲಿ ಶೋಕಿ ಎಲ್ಲ
ಯೌವ್ವನ ಇದ್ರೇ ಜೀವನ ಬೆಲ್ಲ ಇಲ್ದೇ ಇದ್ರೆ ಬೇವೇ ಎಲ್ಲ
ಹೆಣ್ಣು : ಇದ್ದಾಗ ನಮಗೆ ಟೀನೇಜು ಮಾಜಾ ಮಾಡೋಕ್ ಕಾಲೇಜೂ
ಗಂಡು : ಆದ್ಮೇಲ್ ನಮಗೆ ಮ್ಯಾರೇಜು ಬಾಳೇ ಒಂದು ಗ್ಯಾರೇಜೂ
ಬೇಬಿ ಬೇಬಿ ಓ ಬೇಬಿ ಬೇಬಿ ಓ...
ಬೇಬಿ ಓ ಬೇಬಿ ಓಓ ಬೇಬಿ ಬೇಬಿ ಓ...
ಹೆಣ್ಣು : ನೋಟ ನೋಡು ಗುಂಡೆಂತಿದೆ ನೋಡ್ತಾ ನೋಡ್ತಾ ಬಂತೆ ಆಸೆ
ಗಂಡು : ಎಗರಿ ನಿಲ್ಲು ನನ್ನಾ ಮೀಸೆ ಹೇಳೋಕ್ ಹೋದ್ರೇ ಇಲ್ಲಾ ಭಾಷೇ
ಪ್ರಾಯದ ಹೆಣ್ಣಿನ ಕಣ್ಣೇಟು ನೋಡೋ ಗಂಡಿಗ್ ಗುಂಡೇಟು
ಬ್ರಹ್ಮ ನಿಂಗೆ ಸೆಲ್ಯೂಟೂ ನಿನ್ನ ಸೃಷ್ಟಿ ಬೊಂಬಾಟು
ಬೇಬಿ ಬೇಬಿ ಓ ಬೇಬಿ ಬೇಬಿ ಓ...
ಬೇಬಿ ಓ ಬೇಬಿ ಓಓ ಬೇಬಿ ಬೇಬಿ ಓ...
ಹೆಣ್ಣು : ಹೋಯ್ ರಬ್ಬಾ ಹೋಯ್ ರಬ್ಬಾ ಹರೆಯದಲ್ಲಿ ದಿನ ಹಬ್ಬ
ಪ್ರಾಯ ಒಂದು ಸಂಗೀತ ಆಡಿ ಕುಣಿಯೋ ಸಂಕೇತ
ಗಂಡು : ಹೀಗಾಗಿ ಎಂಜಾಯ್ ಮಾಡೋಣ ಆಮೇಲೆ ಬಾಯ್ ಬಾಯ್ ಬಿಡೋಣ
ಬೇಬಿ ಬೇಬಿ ಓ ಬೇಬಿ ಬೇಬಿ ಓ...
ಇಬ್ಬರು : ಬೇಬಿ ಬೇಬಿ ಓ ಬೇಬಿ ಬೇಬಿ ಓ...
--------------------------------------------------------------------
No comments:
Post a Comment