468. ಅಂಡಮಾನ್ (1998)



ಅಂಡಮಾನ ಚಲನಚಿತ್ರದ ಹಾಡುಗಳು 
  1. ನಾದ ನಾದ ಪ್ರೇಮದ ನಾದ 
  2. ಡ್ಯಾಡಿ ಮೈ ಲವ್ಲಿ ಡ್ಯಾಡಿ
  3. ದೂರ ದೂರ 
  4. ನೆನಪು ನೆನಪು 
  5. ಓ ಮಗು ನೀ ನಗು 
  6. ಕಾಲ ಮೀರಿ ಯಾಕೇ ಬಂತೂ 
ಅಂಡಮಾನ್ (1998) - ನಾದ ನಾದ ಪ್ರೇಮದ ನಾದ
ಸಾಹಿತ್ಯ: ಹಂಸಲೇಖ ಸಂಗೀತ: ಹಂಸಲೇಖ ಹಾಡಿದವರು: ಎಸ್.ಪಿ.ಬಿ., ಚಿತ್ರಾ

ನಾದ ನಾದ ಪ್ರೇಮದ ನಾದ ನಾದ ನಾದ ಪ್ರೇಮದ ನಾದ
ಜೀವದ ವೀಣ ತಂತಿಯಲಿ  ಸಾಗರದ ಸಂಗಮದ
ಯೌವನದ ಸಂಭ್ರಮದ  ತನನನನ ತನುವಲಿ
ನಾದ ನಾದ ಪ್ರೇಮದ ನಾದ

ಕಡಲ ಸೇರೊ ನದಿಗೆ ದಾರಿ ತೋರಿದವರು ಯಾರು
ಪುಷ್ಪರಾಗ ರತಿಗೆ ಹಾಡು ಕಲಿಸಿದವರು ಯಾರು
ಪ್ರಣಯ ಭಾಷೆಯ ಅರಿತುಕೊಳ್ಳುವ ಕಣ್ಣಿಗ್ಯಾರು ಗುರು  ಪ್ರೀತಿಯರಿತವರು
ನಾದ ನಾದ ಪ್ರೇಮದ ನಾದ
ಜೀವದ ವೀಣ ತಂತಿಯಲಿ ಸಾಗರದ ಸಂಗಮದ
ಯೌವನದ ಸಂಭ್ರಮದ ತನನನನ ತನುವಲಿ
ನಾದ ನಾದ ಪ್ರೇಮದ ನಾದ

ಪ್ರಣಯ ಗಾಳಿ ಬೀಸಿ ಆಸೆಗಣ್ಣು ತೆರೆದು
ನಿದಿರೆ ಭಂಗವಾಗಿ ಬಯಕೆ ಲಜ್ಜೆ ತೊರೆದು
ತನ್ನನರಿಯದೆ ಕುಸುಮ ಸೇರುವ ದುಂಬಿಗಳ ಪಾಡು ನಮ್ಮ ಈ ಹಾಡು
ನಾದ ನಾದ ಪ್ರೇಮದ ನಾದ
ಜೀವದ ವೀಣ ತಂತಿಯಲಿ ಸಾಗರದ ಸಂಗಮದ
ಯೌವನದ ಸಂಭ್ರಮದ ತನನನನ ತನುವಲಿ
ನಾದ ನಾದ ಪ್ರೇಮದ ನಾದ
ಕೋಟಿ ರಾತ್ರಿ ಬರಲಿ ಮೊದಲ ರಾತ್ರಿ ಮಧುರ
ನೆನಪಿನಾಳದಲ್ಲಿ ಮಧುರ ಮೈತ್ರಿ ಅಮರ
ಪ್ರಥಮ ಚುಂಬನ ಪ್ರಣಯ ಕಂಪನ ತಂದ ಈ ಇರುಳು ಬಾಳ ಜೇನಿರುಳು
ನಾದ ನಾದ ಪ್ರೇಮದ ನಾದ
ಜೀವದ ವೀಣ ತಂತಿಯಲಿ ಸಾಗರದ ಸಂಗಮದ
ಯೌವನದ ಸಂಭ್ರಮದ ತನನನನ ತನುವಲಿ
ನಾದ ನಾದ ಪ್ರೇಮದ ನಾದ.
------------------------------------------------------------------------------------------------------------------------

ಅಂಡಮಾನ್ (1998) - ಡ್ಯಾಡಿ ಮೈ ಲವ್ಲಿ ಡ್ಯಾಡಿ 
ಸಾಹಿತ್ಯ: ಹಂಸಲೇಖ ಸಂಗೀತ: ಹಂಸಲೇಖ ಹಾಡಿದವರು: ಶಿವರಾಜಕುಮಾರ, ಚಿತ್ರಾ

ಅಂಡಮಾನ್ ಅಂಡಮಾನ್ ಓ ಓ ಓ
ಅಂಡಮಾನ್ ಅಂಡಮಾನ್ ಓ ಓ ಓ
ಡ್ಯಾಡಿ ಮೈ ಲವ್ಲಿ ಡ್ಯಾಡಿ    ಬೇಬಿ ಮೈ ಲವ್ಲಿ ಬೇಬಿ
ಡ್ಯಾಡಿ ಮೈ ಲವ್ಲಿ ಡ್ಯಾಡಿ    ಬೇಬಿ ಮೈ ಲವ್ಲಿ ಬೇಬಿ
ಬೆಂಗ್ಳುರಿಂದ ಏನು ತಂದೆ  ಪ್ರೀತಿನ ಹೊತ್ತು ಬಂದೆ
ತತ್ತಾ ನೀ ತಾ                 ತಗೋ ಸಿಹಿ ಮುತ್ತ
ಸಾಕು ಇನ್ನೇನು ಬೇಕು ನಂಗೆ. ಏ... 
ಡ್ಯಾಡಿ ಮೈ ಲವ್ಲಿ ಡ್ಯಾಡಿ   ಬೇಬಿ ಮೈ ಲವ್ಲಿ ಬೇಬಿ

ದಿನಾ ನನ್ನ ಕನಸಲ್ಲಿ ತಪ್ಪದೆ ನೀ ಬರ್ತಿದ್ದೆ
ನಾನು ನಿನ್ನ ಹೆಗಲೇರಿ ಹಾಡ್ತಾ ಇದ್ದೆ ಎದ್ದರೆ ಅಳ್ತಾ ಇದ್ದೆ
ಓ ..ದಿನಾ ನನ್ನ ತಟ್ಟೆಯಲ್ಲಿ ನಿನಗೆ ತುತ್ತು ತೆಗೆದಿಡ್ತಿದ್ದೆ
ನಿನ್ನ ಬಿಟ್ಟು ತಿನ್ನೋಕೆ ನೋಯ್ತಾ ಇದ್ದೆ ಈ ದಿನ ಕಾಯ್ತಾ ಇದ್ದೆ
ಅಂಡಮಾನ್ ಅಂಡಮಾನ್ ನಿನಗೆ ವಂದನೆ
ಅಂಡಮಾನ್ ಅಂಡಮಾನ್ ನಿನಗೆ ವಂದನೆ
ಸಾಗರದೂರೇ... ಸಾವಿರ ತೀರೇ
ಇಂಗದ ನೀರೇ -- ದೇವರ ತೇರೇ
ನಾವು ಸೇರೋ ನಿನ್ನಾ ಈ ನೆಲ
ತಂತು ನೂರು ಆನೆಯ ಬಲ
ಡ್ಯಾಡಿ ಮೈ ಲವ್ಲಿ ಡ್ಯಾಡಿ ಬೇಬಿ ಮೈ ಲವ್ಲಿ ಬೇಬಿ

ಅಯ್ಯೋ ದಿನ ಓಡ್ತಿದೆ  ಇನ್ನು ಊರು ನೋಡೋದಿದೆ ನಾನು ನೀನು ಈಗ 
ನಡೆ ಕಳೆದೋ ಹೋಗೋಣ  ಎಲ್ಲರ ಮರೆತೋಗೋಣ
ಆಹಾ -ಚಿಂತೆ ಎಲ್ಲ ಹಾರಿದೆ ನೋವು ಮಾಯವೇ ಆಗಿದೆ
ನಿನ್ನ ಪುಟ್ಟ ಕೈಯಲ್ಲಿ ಸುಖವ ಇಟ್ಟ ದೇವರು ನನಗೆ ಕೊಟ್ಟ
ಅಂಡಮಾನ್ ಅಂಡಮಾನ್ ನಿನಗೆ ವಂದನೆ
ಅಂಡಮಾನ್ ಅಂಡಮಾನ್ ನಿನಗೆ ವಂದನೆ
ಸಾಗರದೂರೇ... ಸಾವಿರ ತೀರೇ
ಇಂಗದ ನೀರೇ -- ದೇವರ ತೇರೇ
ನಾವು ಸೇರೋ ನಿನ್ನಾ ಈ ನೆಲ
ತಂತು ನೂರು ಆನೆಯ ಬಲ
ಡ್ಯಾಡಿ ಮೈ ಲವ್ಲಿ ಡ್ಯಾಡಿ   ಬೇಬಿ ಮೈ ಲವ್ಲಿ ಬೇಬಿ
ಬೆಂಗ್ಳುರಿಂದ ಏನು ತಂದೆ  ಪ್ರೀತಿನ ಹೊತ್ತು ಬಂದೆ
ತತ್ತಾ ನೀ ತಾ                 ತಗೋ ಸಿಹಿ ಮುತ್ತ
ಸಾಕು ಇನ್ನೇನು ಬೇಕು ನಂಗೆ. ಏ...
ಡ್ಯಾಡಿ ಮೈ ಲವ್ಲಿ ಡ್ಯಾಡಿ ಬೇಬಿ ಮೈ ಲವ್ಲಿ ಬೇಬಿ
ಅಂಡಮಾನ್ ಅಂಡಮಾನ್ ಓ ಓ ಓ
ಅಂಡಮಾನ್ ಅಂಡಮಾನ್ ಓ ಓ ಓ
-------------------------------------------------------------------------------------------------------------

ಅಂಡಮಾನ್ (1998) - ದೂರ ದೂರ ಎರಡು ತೀರ 
ಸಾಹಿತ್ಯ: ಹಂಸಲೇಖ ಸಂಗೀತ: ಹಂಸಲೇಖ ಹಾಡಿದವರು: ಎಸ್.ಪಿ.ಬಿ., ಚಿತ್ರಾ 

ದೂರ ದೂರ.. 
ದೂರ ದೂರ ಎರಡು ತೀರ ನಡುವೇ ನೆನಪೂ 
ಸರೀನ ವಿಧಿಯೇ ನಿನಗೆ ಅಸೂಯೇ ಬಂತಾ ಕೊನೆಗೇ.. 
ಪ್ರೀತಿಲಿ ಒಡಕು ತರಲು ಅದೇನೂ ಖುಷಿಯೋ ನಿನಗೇ .. 
ದೂರ ದೂರ ಎರಡು ತೀರ ನಡುವೇ ನೆನಪೂ 
ಸರೀನ ವಿಧಿಯೇ ನಿನಗೆ ಅಸೂಯೇ ಬಂತಾ ಕೊನೆಗೇ.. 
 
ಬಾಳಿನಿಂದ ದೂರವಿದ್ದ ವಿರಸ ಹಾಲು ಮನದಲಿ ತಂದು ಸುರಿದೇ 
ಒಡೆದಹಾಲು ಚೆಲ್ಲೋ ಚೆಲ್ಲೇ ನಿನಗೇ ನಂಬಿಕೆಯ ಸೇತುವೆಯ ಮೇಲೆ 
ಸಂಶಯದ ಗುಂಡು ಮಳೆಗರೆದೆ ಖಳನ ನಗೆಯೇ ಒಲವೇ ನಿನಗೆ ಹಗೆಯೇ 
ದೂರ ದೂರ ಎರಡು ತೀರ ನಡುವೇ ನೆನಪೂ 
ಸರೀನ ವಿಧಿಯೇ ನಿನಗೆ ಅಸೂಯೇ ಬಂತಾ ಕೊನೆಗೇ.. 

ಬೂದಿ ಮುಚ್ಚಿದಂತ ಕೆಂಡವಾಗಿ ಗೋಡೆ ನುಂಗೋ ಮಣ್ಣ ಗೆದ್ದಲಾಗಿ 
ಸುಳಿವೇ ಕೊಡದೇ ಪ್ರೀತಿಯ ಮನೆಯ ಮುರಿದೇ 
ಗೂಡಿನಲ್ಲಿ ಮಿನುಗೋ ದೀಪ ತಂದು ಗಾಳಿಗಿಟ್ಟ ಸೊಡರಾಗಿ ಮಾಡಿದೇ 
ಆರೋ ಹಣತೆ ನೋಡೋ ಆಸೆಯೇ ನಿನಗೇ  
ದೂರ ದೂರ ಎರಡು ತೀರ ನಡುವೇ ನೆನಪೂ 
ಸರೀನ ವಿಧಿಯೇ ನಿನಗೆ ಅಸೂಯೇ ಬಂತಾ ಕೊನೆಗೇ.. 
ಪ್ರೀತಿಲಿ ಒಡಕು ತರಲು ಅದೇನೂ ಖುಷಿಯೋ ನಿನಗೇ .. 
-----------------------------------------------------------------------------------------------------

ಅಂಡಮಾನ್ (1998) - ನೆನಪು ನೆನಪು ಸಿಹಿ ನೆನಪು 
ಸಾಹಿತ್ಯ: ಹಂಸಲೇಖ ಸಂಗೀತ: ಹಂಸಲೇಖ ಹಾಡಿದವರು: ರಾಜೇಶ ಕೃಷ್ಣನ , 

ನೆನಪೂ ನೆನಪೂ ಸಿಹಿ ನೆನಪೂ 
ನೆನಪೂ ನೆನಪೂ ಸಿಹಿ ನೆನಪೂ 
ಅರಳಿದೆ ಚೆಲುವಿಂದ ಚೆಲ್ಲಿದೇ ಶ್ರೀಗಂಧ 
ಹೊಂಗನಸೂ ಸಾವಿರಾರೂ ಈ ಕನಸ ಕದಿಯುವರಾರೂ 
ಹೊಂಗನಸೂ ಸಾವಿರಾರೂ ಈ ಕನಸ ಕದಿಯುವರಾರೂ 
ನೆನಪೂ ನೆನಪೂ ಸಿಹಿ ನೆನಪೂ 
ನೆನಪೂ ನೆನಪೂ ಸಿಹಿ ನೆನಪೂ 
ಅರಳಿದೆ ಚೆಲುವಿಂದ ಚೆಲ್ಲಿದೇ ಶ್ರೀಗಂಧ 
ಹೊಂಗನಸೂ ಸಾವಿರಾರೂ ಈ ಕನಸ ಕದಿಯುವರಾರೂ 
ಹೊಂಗನಸೂ ಸಾವಿರಾರೂ ಈ ಕನಸ ಕದಿಯುವರಾರೂ 
ನೆನಪೂ ನೆನಪೂ ಸಿಹಿ ನೆನಪೂ 

ಮನ ತುಂಬಾ ಮಲ್ಲಿಗೆ ಮನಸೂ 
ಈ ತೆನೆ ತುಂಬಿ ಬೀಗೋ ತೆನೆ ಸೊಗಸೂ 
ಮನ ತುಂಬಾ ಮಲ್ಲಿಗೆ ಮನಸೂ 
ಈ ತೆನೆ ತುಂಬಿ ಬೀಗೋ ತೆನೆ ಸೊಗಸೂ 
ಹೊಸ ಹೂವೂ ... ಆಆಆ ಹೊಸ ಜೀವಾ... ಆಆಆ 
ಹೊಸ ಹೂವೂ ಅರಳೋ ಕಾಲ 
ಹೊಸ ಜೀವ ಉದಿಸೋ ಕಾಲ 
ಶತಕೋಟಿ ವೇದನಾದ ಬಾಳಲ್ಲಿ 
ಮಂದಾರ ಬಂಗಾರ ಮಡಿಲಲ್ಲಿ 
ನೆನಪೂ ನೆನಪೂ ಸಿಹಿ ನೆನಪೂ 
ನೆನಪೂ ನೆನಪೂ ಸಿಹಿ ನೆನಪೂ 
ಅರಳಿದೆ ಚೆಲುವಿಂದ ಚೆಲ್ಲಿದೇ ಶ್ರೀಗಂಧ 
ಹೊಂಗನಸೂ ಸಾವಿರಾರೂ ಈ ಕನಸ ಕದಿಯುವರಾರೂ 
ಹೊಂಗನಸೂ ಸಾವಿರಾರೂ ಈ ಕನಸ ಕದಿಯುವರಾರೂ 
ನೆನಪೂ ನೆನಪೂ ಸಿಹಿ ನೆನಪೂ 

ಕನಸಲ್ಲೇ ಕನಸ ಕಂಡ ನೆನಪೂ .. 
ಭುವಿಯಲ್ಲೇ ಭುವಿ ಮರೆತ ನೆನಪೂ 
ತನುವಲ್ಲೇ ತನುವೂ ನೆಂದ ನೆನಪೂ 
ಮನಸಲ್ಲೇ ಮನಸೂ ಮಿಂದ ನೆನಪೂ 
ಸುಖದ ಕೊನೆ ನಮ್ಮೀ ಮನೆ ಸುಖದ ಕೋಣೇಲಿ
ನಮ್ಮ ಮನೆ ದೀಪ ಬೆಳಗೀತಮ್ಮಾ... ಈ ಮನೆಯಾ ಬನದ ತುಂಬಾ 
ಆನಂದ ಅರವಿಂದ ಅದರಿಂದ ಮಕರಂದ 
ನೆನಪೂ ನೆನಪೂ ಸಿಹಿ ನೆನಪೂ 
ನೆನಪೂ ನೆನಪೂ ಸಿಹಿ ನೆನಪೂ 
ಅರಳಿದೆ ಚೆಲುವಿಂದ ಚೆಲ್ಲಿದೇ ಶ್ರೀಗಂಧ 
ಹೊಂಗನಸೂ ಸಾವಿರಾರೂ ಈ ಕನಸ ಕದಿಯುವರಾರೂ 
ಹೊಂಗನಸೂ ಸಾವಿರಾರೂ ಈ ಕನಸ ಕದಿಯುವರಾರೂ 
ನೆನಪೂ ನೆನಪೂ ಸಿಹಿ ನೆನಪೂ 
-----------------------------------------------------------------------------------------------------------------------------

ಅಂಡಮಾನ್ (1998) - ಓ ಮಗು ನೀ ನಗು ಅಳದಿರು ಎಂದಿಗೂ 
ಸಾಹಿತ್ಯ: ಹಂಸಲೇಖ ಸಂಗೀತ: ಹಂಸಲೇಖ ಹಾಡಿದವರು: ಎಸ್.ಪಿ.ಬಿ, ಚಿತ್ರಾ 

ಓ ಮಗು ನೀ ನಗು ಅಳದಿರು ಎಂದಿಗೂ 
ನನ್ನ ಈ ಜೀವಕೇ ನನ್ನ ಈ ಜೀವಕೇ ನೀ ಪ್ರೇಮದ ಕಾಣಿಕೆ 
ಓ ಮಗು ನೀ ನಗು ಅಳದಿರು ನೀನ್ ಎಂದಿಗೂ 

ಒಳಗೂ ಇರದು ನಗಲು ಬಿಡದು ಯಾಕೀ ಕಣ್ಣೀರೂ 
ಅಮ್ಮಾ ದೂರ ನಾನು ಭಾರ ನಿನಗೇ ಇನ್ಯಾರೂ 
ನನ್ನ ಈ ಕಂದನ... 
ನನ್ನ ಈ ಕಂದನ ನಗುವಿದೇ ಸಾಲದೇ 
ಓ ಮಗು ನೀ ನಗು ಅಳದಿರು ನೀನ್ ಎಂದಿಗೂ 

ಚೂಮ ಮಂತರ ಕಾಳಿ... ಚೂಮ್ ಕಿನ್ನರ ಗಾಳಿ 
ಚೂಮ್ ಯಕ್ಷರ ಕೇಳಿ ಭ್ರಾಮ ಭ್ರೀಮ್ ಭ್ರೂಮ್ ಹಾ ಹಾ 
ಅರೆರೇ ನೋಡು ಅಲ್ಲಿ ಚಿತ್ತಾರ ಮೋಡಗಳಲ್ಲಿ 
ಮೋಡದ ಬೊಂಬೆಗಳಲ್ಲಿ ನಾನೂ ನೀನೂ ಎಲ್ಲೀ.. 
ಆನೆ ನೋಡು ಜಿಂಕೇನ್ ನೋಡು ಸಿಂಹ ನೋಡು ಬೆಳ್ಳಕ್ಕಿ ನೋಡು 
ನನ್ನ ನಿನ್ನ ಜೋಡಿನ ನೋಡು 
ಕುದುರೆಗಾಡಿ ಓಡಿಸೋ ಡ್ಯಾಡಿ ಬೊಂಬೆ ನೋಡಲ್ಲಿ     
ಗಾಡಿಯ ಒಳಗೇ ಒಬ್ಬಳೇ ನಾನು ಮಮ್ಮಿ ಮುಖವೆಲ್ಲಿ 
ನಿನ್ನ ಈ ನಗುವಲ್ಲಿ... 
ನಿನ್ನ ಈ ನಗುವಲ್ಲಿ ಅವಳದೇ ಮುಖವಿದೇ..  
ಓ ಮಗು ನೀ ನಗು ಅಳದಿರು ನೀನ್ ಎಂದಿಗೂ 

ಸಾಗರ ಲೋಕದಲ್ಲಿ ಬಣ್ಣದ ಬೀದಿಯಲ್ಲಿ ನಮ್ಮದೇ ಮೀನು ವಿಮಾನ 
ಇದರಲ್ಲಿ ಗಾನ ಯಾನ ನಾಗ ಲೋಕಕೆ ನೀನೀಗ ರಾಣಿ 
ಬರಲೀ ನಿನ್ನ ಅಧಿಕಾರವಾಣಿ ಆಜ್ಞೆ ಮಾಡೂ ಓ ನಾಗರಾಣಿ 
ಚಿನ್ನದ ಮೀನೇ ರನ್ನದ ಮೀನೇ ಹೊರಡಿರಿ ನೀವೀಗ 
ನನ್ನಯ ತಾಯಿಯ ಒಪ್ಪಿಸಿ ತಂದರೇ ಔತಣ ನಮಗೀಗ 
ನನ್ನ ಈ ಜೀವಕೇ ...  
ನನ್ನ ಈ ಜೀವಕೇ ನೀ ಪ್ರೇಮದ ಕಾಣಿಕೆ 
ಓ ಮಗು ನೀ ನಗು ಅಳದಿರು ಎಂದಎಂದಿಗೂ 
ಲಾಲಾ ಲಾಲಾ ಲಾಲಾ ಲಾಲಾ ಲಾಲಾ ಲಾಲಾ 
-----------------------------------------------------------------------------------------------------------

ಅಂಡಮಾನ್ (1998) - ಕಾಲ ಮೀರಿ ಯಾಕೇ ಬಂತೂ ಮುಂಗಾರೂ 
ಸಾಹಿತ್ಯ: ಹಂಸಲೇಖ ಸಂಗೀತ: ಹಂಸಲೇಖ ಹಾಡಿದವರು: ಎಸ್.ಪಿ.ಬಿ, ಚಿತ್ರಾ 

ಕಾಲ ಮೀರಿ ಯಾಕೇ ಬಂತೂ ಮುಂಗಾರೂ 
ಸಾರೀ ಹೇಳಿ ಹೋಗಲೆಂದೂ ಬಂಗಾರೂ .. 
ಕಾಲ ಮೀರಿ ಯಾಕೇ ಬಂತೂ ಮುಂಗಾರೂ 
ಸಾರೀ ಹೇಳಿ ಹೋಗಲೆಂದೂ ಬಂಗಾರೂ .. 
ಕಾಯಿಸೋ ಮಳೆ ಪ್ರೀತಿಸೋ ಇಲ್ಲೇ ಸೇರಿದಾಗ ಓ ಓ ಬೆಲೆ ಓ ಓ ಓ 
ಕಾಲ ಮೀರಿ ಯಾಕೇ ಬಂತೂ ಮುಂಗಾರೂ 
ಸಾರೀ ಹೇಳಿ ಹೋಗಲೆಂದೂ ಬಂಗಾರೂ .. 

ಮೋಡ ನೋಡುತ ಮಿಂಚು ಕಾಯುತ 
ಕಾಯೋ ಸಜೆ ಪ್ರೇಮಿಗೆ ಕೊಡಬಹುದೇ 
ನಾನು ನಿನ್ನ ನೀನೂ ನನ್ನ ಕಾದುಕೊಳ್ಳೋ ಆಣೆ ಬರೆಬಹುದೇ 
ನೋ ನೋ ನೋ ಆಯ್ ಡೋಂಟ್ ಲವ್ 
ನೋ ನೋ ನೋ ಆಯ್ ವಾಂಟ್ ಲವ್ 
ಟೂ ಟೂ ಟೂ ಟು ಟು ಟೂ .. ಆಯ್ ಲವ್ ಯೂ ಟೂ .. 
ಕಾಯಿಸೋ ಮಳೆ ಪ್ರೀತಿಸೋ ಇಲ್ಲೇ ಸೇರಿದಾಗ ಓ ಓ ಬೆಲೆ ಓ ಓ 
ಪ್ರೀತಿಯಲ್ಲಿ ಕೋಪ ಯಾಕೇ ಬಂಗಾರೂ.. 
ಕಾಲ ಮೀರಿ ಯಾಕೇ ಬಂತೂ ಮುಂಗಾರೂ 
 
ಜೀವನೆಂದಿದೇ ಕೋಪನಂದಿದೇ ತಾರೋ ತುಟಿಗೇ ಉಡುಗೊರೆಯ ಸಿಹಿ 
ಕಾಯೋದೇ ಕಹೀ ದೂರಾಗೋದೆ ಕಹಿ ಕೂಡಿಯಾಡೋ ಕಾಲಾನೇ ಸಿಹಿ    
ಟೂ ಟೂ ಟೂ ಏನಾಯ್ತು ಟೂ ಬಿಟ್ಟೂ ಓಡೋ ಹೋಯ್ತು 
ಆಯ್ ಎಮ್ ಇನ್ ಲವ್ 
ಆಯ್ ಎಮ್ ಇನ್ ಲವ್ ವೀ ಆರ್ ಇನ್ ಲವ್ 
ಕಾಯಿಸೋ ಮಳೆ ಪ್ರೀತಿಸೋ ಇಲ್ಲೇ ಸೇರಿದಾಗ ಓ ಓ ಬೆಲೆ ಓ ಓ ಓ 
ಕಾಲ ಮೀರಿ ಯಾಕೇ ಬಂತೂ ಮುಂಗಾರೂ 
ಕಾದು ಸವಿಯೋ ಪ್ರೀತಿಗಾಗಿ ಬಂಗಾರೂ 
ಕಾಲ ಮೀರಿ ಯಾಕೇ ಬಂತೂ ಮುಂಗಾರೂ 
ಕಾಯೋ ಸುಖವ ಕಾಣಲೆಂದೂ ಬಂಗಾರೂ 
--------------------------------------------------------------------------------------------------

No comments:

Post a Comment