51. ಮತದಾನ (೨೦೦೧)




ಮತದಾನ ಚಲನಚಿತ್ರದ ಹಾಡುಗಳು 
  1. ಐದು ವರ್ಷಕ್ಕೊಮ್ಮೆ ಬರುವ
  2. ಅಳುವ ಕಡಲೊಳು
  3. ಒಲವಲಿ ಹಾಡಿದೆ ಹಂಸ
  4. ಇದು ಮೊದಲನೆ ಹಾಡು
  5. ರಂಗು ಕುಣಿದು ರಂಗು ಏರಿ 
  6. ನಾಯೀ ತಲೆಮ್ಯಾಲಿನ 
ಮತದಾನ (೨೦೦೧) - ಐದು ವರ್ಷಕ್ಕೊಮ್ಮೆ ಬರುವ
ಸಂಗೀತ: ಸಿ.ಅಶ್ವಥ್, ವಿ.ಮನೋಹರ್  ಸಾಹಿತ್ಯ :ಸಿದ್ದಲಿಂಗಯ್ಯ ಗಾಯನ :  ರಾಜೇಶ ಕೃಷ್ಣನ 

ಐದು ವರ್ಷಕ್ಕೊಮ್ಮೆ ಬರುವ ಕಡು ಬಡವಗು ಹೆಮ್ಮೆಯ ತರುವ 
ಐದು ವರ್ಷಕ್ಕೊಮ್ಮೆ ಬರುವ ಕಡು ಬಡವಗು ಹೆಮ್ಮೆಯ ತರುವ 
ಎಲ್ಲ ಜನಗಳ ಕಣ್ಣು ತೆರೆಸುವ ವರದಾನ 
ಎಲ್ಲರ ಪಾಲಿಗು ಅಮೂಲ್ಯವಾದ ಮತದಾನ  
ಎಲ್ಲ ಜನಗಳ ಕಣ್ಣು ತೆರೆಸುವ ವರದಾನ 
ಎಲ್ಲರ ಪಾಲಿಗು ಅಮೂಲ್ಯವಾದ ಮತದಾನ  

ಪ್ರಜಾ ಪ್ರಭುತ್ವ ಕೊಟ್ಟ ಕೊಡುಗೆಯೋ ಪರಮಧಿಕಾರ ಇಟ್ಟ ನಡಿಗೆಯೋ
ದುಷ್ಟರ ಕೂಟಕೆ ದಿಟ್ಟ ಸವಾಲೋ ಜನಗಳ ಅರಿವಿನ ಅಗ್ನಿ ಪರೀಕ್ಷೆಯೋ
ಎಲ್ಲರ ಎದೆಯಲಿ ಕನಸನು ಬೆಳೆಸುತ ಭ್ರಮೆಗಳ ನೆಲೆಸುವ ಮತದಾನ
ಎಲ್ಲರ ಪಾಲಿಗು ಅಮೂಲ್ಯವಾದ ಮತದಾನ 

ಬಣ್ಣ ಬಣ್ಣದ ಭಾಷಣದಲ್ಲಿ ಭಾಷಣದಲ್ಲಿ ಭಾಷಣದಲ್ಲಿ
ಕಣ್ಮನ ಸೆಳೆಯುವ ಸ್ವರ್ಗವ ತಂದು ತಂದು ತಂದು, ಸ್ವರ್ಗವ ತಂದು
ಎಲ್ಲರ ಎದೆಯಲಿ ಕನಸನು ಬೆಳೆಸುತ ಭ್ರಮೆಗಳ ಮೆರೆಸುವ ಮತದಾನ
ಎಲ್ಲರ ಪಾಲಿಗು ಅಮೂಲ್ಯವಾದ ಮತದಾನ

ಮತಪೆಟ್ಟಿಗೆಯೇ ಪ್ರೀತಿಯ ಒಡಲು ಜಾತಿಯ ಮಾತೇ ನೀತಿಯ ಮಡಿಲು
ಆಡುವ ಮಾತು ಹೃದಯದ್ದಲ್ಲ ಮಾಡುವ ಕೆಲಸ ಮನಸಿನದಲ್ಲ
ಭಾವನೆ ಇಲ್ಲದ ಕನಸನು ಕೊಲ್ಲುವ ಸುಳಿಯಲಿ ಸಿಲುಕುವ ಮತದಾನ
ಎಲ್ಲರ ಪಾಲಿಗು ಅಮೂಲ್ಯವಾದ ಮತದಾನ

ನಾಡ ದುರಂತ ಹೃದಯವ ತಟ್ಟಿ ದೇಶವ ಉಳಿಸುವ ಕನಸನು ಕಟ್ಟಿ
ಪಣವನು ತೊಟ್ಟು ಬಂದವರನ್ನು ಸಂಚುಕೋರರ ವ್ಯೂಹಕೆ ತಳ್ಳಿ
ಬೆಸೆದ ಮನಗಳ ಭೇದ ಮಾಡಿದ  ಮತದಾನ
--------------------------------------------------------------------------------------------------------------------------

ಮತದಾನ (2001) - ಅಳುವ ಕಡಲೊಳು
ಸಂಗೀತ: ಸಿ.ಅಶ್ವಥ್, ವಿ.ಮನೋಹರ್ ರಚನೆ: ಗೋಪಾಲ ಕೃಷ್ಣ ಅಡಿಗ  ಗಾಯನ : ಬಿ.ಆರ್.ಛಾಯ/ರಾಜೇಶ್ ಕೃಷ್ಣನ್ 

ಅಳುವ ಕಡಲೊಳು ತೇಲಿ ಬರುತಲಿದೆ ನಗೆಯ ಹಾಯಿ ದೋಣಿ
ಮುರಿದು ಬಿದ್ದ ಮನ ಮನದ ಕೊರಡೊಳು ಹೂವು ಹೂವು ಅರಳಿ

ಇದನರಿತೆನೆಂದೆ ಆ ಅರಿವು ಕಿರಣವನೆ ನುಂಗಿತೊಂದು ಮೇಘ
ಆ ಮುಗಿಲ ಬಸಿರನೆ ಬಗೆದು ಬಂತು ನವಕಿರಣ ಒಂದ ಮೋಘ
ಹಿಡಿದ ಹೊನ್ನೆ ಮಣ್ಣಹದು ಮಣ್ಣೊಳು ಹೊಳೆದುದುಂಟು ಹೊನ್ನು
ಇದು ಹೀಗೆ ಎಂಬ ನಂಬುಗೆಯ ಊರುಗೋಲಿಲ್ಲ ಇನ್ನು ಮುನ್ನ

ಆಶೆ ಎಂಬ ತಳವೊಡೆದ ದೋಣಿಯಲಿ ದೂರ ತೀರ ಯಾನ
ಯಾರ ಲೀಲೆಗೊ ಯಾರೊ ಏನೊ ಗುರಿ ಇರದೆ ಬಿಟ್ಟ ಬಾಣ
ಇದು ಬಾಳು ನೋಡು ಇದ ತಿಳಿದೆನೆಂದರು ತಿಳಿದ ಧೀರನಿಲ್ಲ
ಹಲವುತನದ ಮೈ ಮರೆಸುವಾಟವಿದು ನಿಜವು ತೋರದಲ್ಲ
------------------------------------------------------------------------------------------------------------------------

ಮತದಾನ (2001) - ಒಲವಲಿ ಹಾಡಿದೆ ಹಂಸ
ಸಂಗೀತ: ಸಿ.ಅಶ್ವಥ್, ವಿ.ಮನೋಹರ್ ಸಾಹಿತ್ಯ : ವಿ.ಮನೋಹರ ಹಾಡಿರುವವರು: ರಾಜೇಶ್ ಕೃಷ್ಣನ್, ನಂದಿತಾ

ಹಂಸ ಹಂಸ ಒಲವಲಿ ಹಾಡಿದೆ ಹಂಸ ನಗುತ ನೀ ನೀಡಿದೆ ಮನಸ 
ಆದರೂ ಸ್ವರಗಳು ಲಯದಲಿ ಬೆರೆಯದೆ ಧಾಟಿಯೇ ಬದಲು ದಾರಿಯೇ ಕವಲು

ನಂದಿತ: ನಿನ್ನಯ ರಾಗಕೆ ಕವಿತೆಯ ಬರೆದೆ ಪದಗಳು ಹೊಳೆಯದೆ ಹಾಳೆಯೂ ಬರೆದೆ
             ಕನಸು ನೀ ನನಗೆ ನೆನಪು ನಾ ನಿನಗೆ ಬಯಕೆ ಮಾತು ನಗೆ, ನಮದು ಒಂದೇ ಬಗೆ
             ಆದರು ಬೇರೆಯೆ ಉಳಿಯಿತೇ ಕನಸು
 
ರಾಜೇಶ್: ಹಾರುತ ಹೊರಟವೋ ಜೋಡಿ ಹಂಸಗಳು ಗಾಳಿಯ ರಭಸಕೆ ದಿಕ್ಕು ತಪ್ಪಿದವು
              ಎದುರೇ ಹಾರಿದರೂ ಬೆರೆತೆ ಬಾಳಿಸದೆ ಮರಳಿ ಸೇರಿಸದೆ ಮರೆಯಲೂ ಬಿಡದೆ
              ಕಾಣದ ಪುಟಗಳ ಬರಹವಿದು ಸರಿಯೇ
 -----------------------------------------------------------------------------------------------------------------------

ಮತದಾನ (೨೦೦೧) - ಇದು ಮೊದಲನೆ ಹಾಡು
ಸಂಗೀತ : ವಿ. ಮನೋಹರ ಮತ್ತು ಸಿ.ಅಶ್ವಥ ಸಾಹಿತ್ಯ : ವಿ.ಮನೋಹರ ಗಾಯನ : ರಾಜೇಶ ಮತ್ತು ನಂದಿತಾ

ಇದು ಮೊದಲನೆ ಹಾಡು ಹೇಗೋ ಏನೋ ಅರಿಯೇ
ನನ್ನ ನಲುಮೆಯ ಮಾತು ರೀತಿ ನೀತಿ ಸರಿಯೇ
ಮನವನೊಲಿಸುವ ಲಯವ ತಿಳಿಯೆನು
ಬಯಸಿದ ಇಂಚರ ಬೆರೆತರೆ ಸುಂದರ 

ಹೆಣ್ಣು : ಭಾವಗಳ ಧಾರೆಗೆ ನದಿಯೊಂದು ಸಿಕ್ಕಬಹುದೆ
          ಆಸೆಗಳ ಧ್ಯಾನಕೆ ವರದಾನವಾಗಬಹುದೆ
ಗಂಡು : ನಿನ್ನೊಲವು ಏನಿದೆ ಕನಸೇನೋ ತಿಳಿಯದೆ
           ನಿನ್ನಂತರಂಗ ತಿಳಿವ ಹಂಬಲ ನನಗಿದೆ
ಹೆಣ್ಣು : ಹೊಂಗನಸ ತುಂಬ ನಿನ್ನ ಹಾಡಾಗಬಹುದೆ ನಾನು
ಗಂಡು : ನಿನ್ನೆಲ್ಲ ಆಸೆಗಳಿಗೆ ಉಸಿರಾಗಬಹುದೆ ನಾನು
ಇಬ್ಬರು : ಎರಡು ಜೀವ ಬೆರೆಯೇ ಸುಂದರ ಸುಂದರ

ಗಂಡು : ನಿನ್ನ ಹೃದಯವು ಕೂಗಿ ಕೂಗಿ ಕೂಗಿ ಕರೆಯೇ
            ನನ್ನ ಹೃದಯವು ತೇಲಿ ತೇಲಿ ತೇಲಿ ಅಲಿಯೇ
            ಮನಸು ಮನಸಲಿ ಬೆರೆತು ಅರಳಿತು
            ಸುಮಧುರ ಇಂಚರ ಸುಂದರ ಸುಂದರ
            ಮಾತಿರದ ಹೂಗಳ ಮೊಗದಲ್ಲಿ ಮಂದಹಾಸ
            ಪ್ರೀತಿಸುವ ಜೀವಕೆ ಬದುಕೆಲ್ಲ ಚೈತ್ರಮಾಸ
ಹೆಣ್ಣು : ಒಡಲಾಳದಾಸೆಯೇನೋ ಬಯಲಲ್ಲಿ ಇಟ್ಟ ಹಣತೆ
          ನಿನ್ನ ಪ್ರೇಮರಕ್ಷೆ ಇರಲು ಇನ್ನೇನು ಇಲ್ಲ ಕೊರತೆ
ಗಂಡು : ಅದಕೆ ಎಲ್ಲಾ ಈಗ ಸುಂದರ ಸುಂದರ
ಇಬ್ಬರು : ನಿನ್ನ ಹೃದಯವು ಕೂಗಿ ಕೂಗಿ ಕೂಗಿ ಕರೆಯೇ
             ನನ್ನ ಹೃದಯವು ತೇಲಿ ತೇಲಿ ತೇಲಿ ಅಲಿಯೇ
             ಮನಸು ಮನಸಲಿ ಬೆರೆತು ಅರಳಿತು
            ಸುಮಧುರ ಇಂಚರ ಸುಂದರ ಸುಂದರ
---------------------------------------------------------------------------------------------------------------

ಮತದಾನ (೨೦೦೧) - ರಂಗ ಕುಣಿದು ರಂಗು ಏರಿ 
ಸಂಗೀತ: ಅಶ್ವಥ್, ಮನೋಹರ, ಸಾಹಿತ್ಯ:ಕೃಷ್ಣಮೂರ್ತಿಹುನ್ನೂರು ಗಾಯನ : ಯುವರಾಜ ಜನಾರ್ಧನ, ಸುರೇಖಾ, 
ಎಂ.ಡಿ.ಪಲ್ಲವಿ   


---------------------------------------------------------------------------------------------------------------

ಮತದಾನ (೨೦೦೧) - ನಾಯಿ ತಲೆಮ್ಯಾಲೀನ  
ಸಂಗೀತ: ಸಿ.ಅಶ್ವಥ್, ವಿ.ಮನೋಹರ್  ಸಾಹಿತ್ಯ :ವೆಂಕಟೇಶಮೂರ್ತಿ  ಗಾಯನ :  ಸಿ.ಅಶ್ವಥ 

---------------------------------------------------------------------------------------------------------------

No comments:

Post a Comment