470. ಬಡವರ ಬಂಧು (1976)


ಬಡವರ ಬಂಧು ಚಿತ್ರದ ಹಾಡುಗಳು 
  1. ನಗಬೇಡ ಅವನ ನೋಡುತ ನೀನು ನಕ್ಕರೇ 
  2. ನಿನ್ನ ಕಂಗಳ ಬಿಸಿಯು ಹನಿಗಳು 
  3. ನೈದಿಲೆಯು ಹುಣ್ಣಿಮೆಯ 
  4. ನಿನ್ನ ನುಡಿಯು ಹೊನ್ನ ನುಡಿಯು 
ಬಡವರ ಬಂಧು (1976) - ನಗಬೇಡ ನಗಬೇಡ ನಗಬೇಡ
ಚಿತ್ರಗೀತೆ : ಚಿ. ಉದಯಶಂಕರ್   ಸಂಗೀತ: ಎಮ್.ರಂಗರಾವ್   ಗಾಯನ:ಪಿ.ಬಿ.ಶ್ರೀನಿವಾಸ್


ನಗಬೇಡ ನಗಬೇಡ ನಗಬೇಡ  ಅವನ ನೋಡುತ ನೀನು ನಕ್ಕರೆ
ಊರೇ ನಗುವುದು ನೀನು ಬಿದ್ದರೆ
ನಗಬೇಡ ನಗಬೇಡ ನಗಬೇಡ  ಅವನ ನೋಡುತ ನೀನು ನಕ್ಕರೆ
ಊರೇ ನಗುವುದು ನೀನು ಬಿದ್ದರೆ

ಒ೦ದೇ ದಿನದಲಿ ಬೀಜವು ಮೊಳೆತು ಹೆಮ್ಮರವಾಗುವುದೇ
ಇ೦ದೇ ಹುಟ್ಟಿದ ಕ೦ದನು ನಡೆದು ಮಾತನಾಡುವುದೇ
ದಿನಗಳು ಕಳೆದ೦ತೆ ಕಾಲವು ಬ೦ದ೦ತೆ
ದಿನಗಳು ಕಳೆದ೦ತೆ ಕಾಲವು ಬ೦ದ೦ತೆ
ಎಲ್ಲಾ ಬೆಳೆಯುವುದು ಹೊಸತನ ಮೂಡುವುದು
ನಗಬೇಡ ನಗಬೇಡ ನಗಬೇಡ  ಅವನ ನೋಡುತ ನೀನು ನಕ್ಕರೆ
ಊರೇ ನಗುವುದು ನೀನು ಬಿದ್ದರೆ

ಕಲಿಯುವುದಿನ್ನು ಸಾಗರದ೦ತಿದೆ ಕಲಿತವರಾರಿಲ್ಲಿ
ಶತಮಾನಗಳೆ ಕಲಿತರೂ ಮುಗಿಯದು ವಿದ್ಯೆಗೆ ವಯಸೆಲ್ಲಿ
ಬಾಳಿನ ಅನುಕ್ಷಣವು ಹೊಸಹೊಸ ಅನುಭವವು
ಬಾಳಿನ ಅನುಕ್ಷಣವು ಹೊಸಹೊಸ ಅನುಭವವು
ಪಾಠವ ಕಲಿಸುವುದು ನೀತಿಯ ತಿಳಿಸುವುದು
ನಗಬೇಡ ನಗಬೇಡ ನಗಬೇಡ ಅವನ ನೋಡುತ ನೀನು ನಕ್ಕರೆ
ಊರೇ ನಗುವುದು ನೀನು ಬಿದ್ದರೆ

ಮು೦ದಕೆ ಬರುವರ ಕ೦ಡರೆ ಕಡುಗುವ ಮನುಜರು ದಾನವರು
ಹೊಟ್ಟೆಯ ಕಿಚ್ಚಲಿ ತಾವೇ ಬೇಯುತ ನೋವಲಿ ನರಳುವರು
ಸ್ನೇಹದಿ ಬಾಳಿದರೆ ಸ೦ಯಮ ತೋರಿದರೆ
ಸ್ನೇಹದಿ ಬಾಳಿದರೆ ಸ೦ಯಮ ತೋರಿದರೆ
ಶಾ೦ತಿಯ ನೀಪಡೆವೆ ನೀನೂ ಸುಖ ಪಡೆವೆ
ನಗಬೇಡ ನಗಬೇಡ ನಗಬೇಡ ಅವನ ನೋಡುತ ನೀನು ನಕ್ಕರೆ
ಊರೇ ನಗುವುದು ನೀನು ಬಿದ್ದರೆ
--------------------------------------------------------------------------------------------------------------------------

ಬಡವರ ಬಂಧು (1976) - ನೈದಿಲೆಯು ಹುಣ್ಣಿಮೆಯ ಚಂದ್ರನ ಮರೆಯುವುದೇ
ಸಾಹಿತ್ಯ: ಚಿ.ಉದಯಶಂಕರ್ ಸಂಗೀತ: ಎಂ.ರಂಗ ರಾವ್ ಹಾಡಿದವರು: ಪಿ.ಸುಶೀಲಾ


ನೈದಿಲೆಯು ಹುಣ್ಣಿಮೆಯ ಚಂದ್ರನ ಮರೆಯುವುದೇ ತಾವರೆಯು ಭಾಸ್ಕರನ ಮರೆತರೆ ಬಾಳುವುದೇ
ನೈದಿಲೆಯು ಹುಣ್ಣಿಮೆಯ ಚಂದ್ರನ ಮರೆಯುವುದೇ
ತಾವರೆಯು ಭಾಸ್ಕರನ ಮರೆತರೆ ಬಾಳುವುದೇ

ಹರಿಯುವ ನದಿಯು ಸಾಗರ ಕಂಡು ದೂರಕೆ ಓಡುವುದೇನು
ಹರಿಯುವ ನದಿಯು ಸಾಗರ ಕಂಡು ದೂರಕೆ ಓಡುವುದೇನು
ಸುರಿಯುವ ಮಳೆಯ ಹನಿಗಳು ಭೂಮಿಯ ಬೆರೆಯದೆ ಹೋಗುವುದೇನು
ದೇವರ ನಿಯಮವು ತಾನೆ ತಡೆಯುವರಾರನು ಕಾಣೆ
ನೈದಿಲೆಯು ಹುಣ್ಣಿಮೆಯ ಚಂದ್ರನ ಮರೆಯುವುದೇ
ತಾವರೆಯು ಭಾಸ್ಕರನ ಮರೆತರೆ ಬಾಳುವುದೇ

ಹಣತೆಯ ಕೈಲಿ ಹಿಡಿಯುವ ಹಾಗೆ ಬೆಳಕನು ಹಿಡಿಯುವರಾರು
ಹಣತೆಯ ಕೈಲಿ ಹಿಡಿಯುವ ಹಾಗೆ ಬೆಳಕನು ಹಿಡಿಯುವರಾರು
ಪರಿಮಳವನ್ನು ಹರಡದ ಹಾಗೆ ಮಾಡುವ ಜಾಣರು ಯಾರು
ತೀರದ ಆಸೆಯು ತಾನೆ, ಚಪಲವು ಏಕೋ ಕಾಣೆ
ನೈದಿಲೆಯು ಹುಣ್ಣಿಮೆಯ ಚಂದ್ರನ ಮರೆಯುವುದೇ
ತಾವರೆಯು ಭಾಸ್ಕರನ ಮರೆತರೆ ಬಾಳುವುದೇ
---------------------------------------------------------------------------------------------------------------------

ಬಡವರ ಬಂಧು (1976) - ನಿನ್ನ ಕಂಗಳ ಬಿಸಿಯ ಹನಿಗಳು...
ಸಾಹಿತ್ಯ: ಚಿ.ಉದಯಶಂಕರ್   ಸಂಗೀತ: ಎಮ್.ರಂಗರಾವ್   ಗಾಯನ: ಡಾ.ರಾಜ್ ಕುಮಾರ್


ನಿನ್ನ ಕಂಗಳ ಬಿಸಿಯ ಹನಿಗಳು ನೂರು ಕಥೆಯಾ ಹೇಳಿವೇ
ನಿನ್ನ ಪ್ರೇಮದ ನುಡಿಯ ಕೇಳಿ  ನೂರು ನೆನಪೂ ಮೂಡಿವೇ....ನಿನ್ನ ಕಂಗಳ..

ತಂದೆಯಾಗಿ ತಾಯಿಯಾಗಿ ಮಮತೆಯಿಂದಾ ಬೆಳೆಸಿದೇ
ಬಿಸುಲು ಮಳೆಗೆ ನರಳದಂತೇ ನಿನ್ನ ನೆರಳಲಿ ಸಲಹಿದೇ
ಆ ಪ್ರೀತಿಯಾ ಮನ ಮರೆವುದೇ....ನಿನ್ನ ಕಂಗಳ....

ಬಳ್ಳಿಯಂತೆ ಹಬ್ಬಿ ನಿನ್ನಾ ಆಸರೆಯಲೀ ಬೆಳೆದೆನೂ ಆ.....ಆ.....ಆ....ಆ....
ನನ್ನ ತಾಯಿಯ ಪಾದದಾಣೆ ಬೇರೆ ಏನನೂ ಅರಿಯೆನೂ
ನೀನ ನನ್ನಾ ದೇವನೂ....ನಿನ್ನ ಕಂಗಳ...

ನೀನು ನಕ್ಕರೆ ನಾನು ನಗುವೇ ಅತ್ತರೇ ನಾ ಅಳುವೆನೂ
ನಿನ್ನ ಉಸಿರಲಿ ಉಸಿರು ಬೆರೆತಿರೆ ನಿನ್ನಲೊಂದಾಗಿರುವೆನೂ
ನಾ ನಿನ್ನ ಕಾಣದೇ ಬದುಕೆನೂ....ನಿನ್ನ ಕಂಗಳ....
------------------------------------------------------------------------------------------------------------------------

ಬಡವರ ಬಂಧು (೧೯೭೬) - ನಿನ್ನ ನುಡಿಯು ಹೊನ್ನ ನುಡಿಯು,
ರಚನೆ: ಚಿ. ಉದಯಶಂಕರ್  ಸಂಗೀತ: ಎಂ. ರಂಗರಾವ್  ಗಾಯಕ/ನಟ: ಡಾ. ರಾಜಕುಮಾರ್

ನಿನ್ನ ನುಡಿಯು ಹೊನ್ನ ನುಡಿಯು, ಜೇನ ಹನಿಯು ಹೃದಯಕೆ
ನನ್ನ ಎದೆಯ ವೀಣೆ ತಂತಿಯ, ಮೀಟಿ ಓಡಿದೆ ಏತಕೆ
ನಿನ್ನ ನುಡಿಯು ಹೊನ್ನ ನುಡಿಯು, ಜೇನ ಹನಿಯು ಹೃದಯಕೆ

ನೆಡೆವ ಹಾದಿಗೆ ನಗೆಯ ಹೂವನು ಚೆಲ್ಲಿದಾಗಲು ಕಾಣದೆ
ನೆಡೆವ ಹಾದಿಗೆ ನಗೆಯ ಹೂವನು ಚೆಲ್ಲಿದಾಗಲು ಕಾಣದೆ
ಕಣ್ಗಳಿಂದಲೇ ಪ್ರಣಯ ಕಾವ್ಯವ ಹಾಡಿದಾಗಲು ಕೇಳದೆ
ನಿನ್ನನರಿಯದೆ ಹೋದೆನು, ಮನಸ ತಿಳಿಯದೆ ಹೋದೆನು
ಕನಸಿನಲ್ಲಿ ಕಂಡ ಹಣ್ಣಿಗೆ ಆಸೆ ಪಡುವಂತಾದೆನು
ನಿನ್ನ ನುಡಿಯು ಹೊನ್ನ ನುಡಿಯು, ಜೇನ ಹನಿಯು ಹೃದಯಕೆ

ಕಂಡು ಕಾಣದ ಮಿಂಚಿನಂತೆ ಸುಳಿದು ಓಡಿದೆ ದೂರಕೆ
ಕಂಡು ಕಾಣದ ಮಿಂಚಿನಂತೆ ಸುಳಿದು ಓಡಿದೆ ದೂರಕೆ
ತಂದು ಬಯಕೆಯ ತುಂಬಿ ನನ್ನಲಿ ಇಂದು ಕೆಣಕಿದೆ ಏತಕೆ
ನೀನು ಗಗನದ ಕುಸುಮವು ನಾನು ಭೂಮಿಯ ಭ್ರಮರವು
ಮಗುವಿನಾಸೆಯು ಸಹಜವಾಗಲು ಸೇರಲೆಲ್ಲಿದೆ ಹಾದಿಯು
ನಿನ್ನ ನುಡಿಯು ಹೊನ್ನ ನುಡಿಯು, ಜೇನ ಹನಿಯು ಹೃದಯಕೆ
ನನ್ನ ಎದೆಯ ವೀಣೆ ತಂತಿಯ, ಮೀಟಿ ಓಡಿದೆ ಏತಕೆ
ನಿನ್ನ ನುಡಿಯು ಹೊನ್ನ ನುಡಿಯು, ಜೇನ ಹನಿಯು ಹೃದಯಕೆ
-----------------------------------------------------------------------------------------------------------------------

No comments:

Post a Comment