472. ಸವತಿಯ ನೆರಳು (1979)

ಸವತಿಯ ನೆರಳು ಚಿತ್ರದ ಹಾಡುಗಳು 
  1. ನಗೆ ಹೂವು ನೀನು ನನಗಾಗಿ ಬಂದೆ 
  2. ಮಧುಮಾಸ ಬಂದಿದೆ 
  3. ಒಕ್ಕಲುಗಿತ್ತಿ ನಕ್ಕು ಹಾಡ್ಯಾಳ 
ಸವತಿಯ ನೆರಳು (1979) - ನಗೆ ಹೂವು ನೀನು
ಸಂಗೀತ: ಸತ್ಯಂ  ಸಾಹಿತ್ಯ: ಅರ್.ಎನ್. ಜಯಗೋಪಾಲ್ ಗಾಯನ: ಎಸ್.ಪಿ.ಬಾಲಸುಬ್ರಮ್ಹಣ್ಯಂ ಮತ್ತು ಎಸ್.ಜಾನಕಿ

ಗಂಡು : ನಗೆ ಹೂವು ನೀನು ನನಗಾಗಿ ಬಂದೆ ಓ ನಲ್ಲೇ ಚಲುವೇ...  ಒಲವೇ..
ಹೆಣ್ಣು : ಈ ಹಾದಿ ಹೂವು ನಾನಾಗಿ ಕಾದೆ ನಿನಗೆಂದೇ ಇನಿಯಾ ಗೆಳೆಯಾ.....
ಗಂಡು : ನಗೆ ಹೂವು ನೀನು ನನಗಾಗಿ ಬಂದೆ ಓ ನಲ್ಲೇ 

ಗಂಡು : ಈ ಬಾಳ ಹಾದಿ ಕವಲಲ್ಲಿ ನಿಂದೆ
           ಕೊಹಿನೂರಿನಂತೇ ಕೋರೈಸಿ ಬಂದೆ
          ಈ ಅಂದ ಕಂಡು ಮೋಹಗೊಂಡು ಮಾರುಹೋದೇ
         ಪೂರೈಸಿ ಆಸೆ ತಂಪು ಮನದೆ ನೀನೆ ತಂದೇ...
ಹೆಣ್ಣು : ಈ ಹಾದಿ ಹೂವು ನಾನಾಗಿ ಕಾದೆ ನಿನಗೆಂದೇ ಇನಿಯಾ ಗೆಳೆಯಾ.....
ಗಂಡು : ನಗೆ ಹೂವು ನೀನು ನನಗಾಗಿ ಬಂದೆ ಓ ನಲ್ಲೇ 

ಹೆಣ್ಣು : ಬಂಗಾರವಾಗೇ ನನ್ನಾಸೆಯೆಲ್ಲಾ ಕಂಡಂತ ಕನಸೂ ನಿಜವಾಯಿತಲ್ಲಾ
          ಈ ನನ್ನ ಪ್ರೀತಿ ಪ್ರಾಣಜ್ಯೋತಿ ಎಲ್ಲಾ ನೀನೇ
          ನೀ ನನ್ನ ಜೋಡೀ ಬಾಳಿನಲ್ಲೀ ದೇವರಾಣೆ...
ಗಂಡು : ಅಹ್ಹಹ್ಹಾ .. ನಗೆ ಹೂವು ನೀನು ನನಗಾಗಿ ಬಂದೆ ಓ ನಲ್ಲೇ ಚಲುವೇ...  ಒಲವೇ..
ಹೆಣ್ಣು : ಈ ಹಾದಿ ಹೂವು ನಾನಾಗಿ ಕಾದೆ ನಿನಗೆಂದೇ ಇನಿಯಾ 
--------------------------------------------------------------------------------------------------------------------------

ಸವತಿಯ ನೆರಳು (1979) - ಮಧು ಮಾಸ ಬಂದಿದೆ
ಸಂಗೀತ: ಸತ್ಯಂ ಸಾಹಿತ್ಯ: ಅರ್.ಎನ್. ಜಯಗೋಪಾಲ್ ಗಾಯನ: ಎಸ್.ಜಾನಕಿ

ಮಧುಮಾಸ ಬಂದಿದೇ  ಮಧುವೆಲ್ಲಾ ತಂದಿದೇ 
ಮಧುಮಾಸ ಬಂದಿದೇ  ಮಧುವೆಲ್ಲಾ ತಂದಿದೇ 
ಹೂವೊಂದು ಏಕೋ ಏನೋ ಬಲು ನೊಂದಿದೇ...  
ಮಧುಮಾಸ ಬಂದಿದೇ  ಮಧುವೆಲ್ಲಾ ತಂದಿದೇ 

ಸುಮಪೂಜೆಯಲ್ಲಿ ಸೇರಿ ಹೊಸ ಬಾಳ ತೋರಲೂ 
ಸುಮಪೂಜೆಯಲ್ಲಿ ಸೇರಿ ಹೊಸ ಬಾಳ ತೋರಲೂ 
ಆ ದೈವ ಮೌನ ತಾಳಿ  
ಆ ದೈವ ಮೌನ ತಾಳಿ ಮನದ ಬಯಕೆ ಭ್ರಮೆಯ ಪಾಲೇ 
ಮಧುಮಾಸ ಬಂದಿದೇ  ಮಧುವೆಲ್ಲಾ ತಂದಿದೇ 

ವನರಾಣಿ ತಾನೇಯೆಂದೂ ಮನಸಾರೇ ನಂಬಲೂ 
ವನರಾಣಿ ತಾನೇಯೆಂದೂ ಮನಸಾರೇ ನಂಬಲೂ 
ನೆರಳಾಗಿ ಕಾದು ಬರಲೂ....   
ನೆರಳಾಗಿ ಕಾದು ಬರಲೂ ನಗುವ ನಲಿವ ದಿನವೂ ಎಂದೂ 
ಮಧುಮಾಸ ಬಂದಿದೇ  ಮಧುವೆಲ್ಲಾ ತಂದಿದೇ 

ಬೀರುಗಾಳಿ ಬೀಸಿ ಬಂತೂ ಸುಖ ಶಾಂತಿ ನೀಗಿತೂ  
ಕರುಣಾಳು ತಾನೇ ದಾರಿ ನಡಿಸು ಒಲವ ದಯವ ತೋರಿ...  
ಮಧುಮಾಸ ಬಂದಿದೇ  ಮಧುವೆಲ್ಲಾ ತಂದಿದೇ 
ಹೂವೊಂದು ಏಕೋ ಏನೋ ಬಲು ನೊಂದಿದೇ...  
ಮಧುಮಾಸ ಬಂದಿದೇ  ಮಧುವೆಲ್ಲಾ ತಂದಿದೇ 
--------------------------------------------------------------------------------------------------------------------------

ಸವತಿಯ ನೆರಳು (1979) - ಒಕ್ಕಲಗಿತ್ತಿ ನಕ್ಕು ಹಾಡ್ಯಾಳ 
ಸಂಗೀತ: ಸತ್ಯಂ ಸಾಹಿತ್ಯ: ಅರ್.ಎನ್. ಜಯಗೋಪಾಲ್ ಗಾಯನ: ಎಸ್.ಜಾನಕಿ

 ಆಆಆ... ಆಆಆ... ಆಆಆ... ಆಹಹಾ ಓಹೋಹೋ..
ಒಕ್ಕಲಗಿತ್ತಿ ನಕ್ಕು ಹಾಡ್ಯಾಳ ಹೊಯ್ ಚಕ್ಕ ಮಕ್ಕ ಹಕ್ಕಿ ಹಾರೈತ
ಒಕ್ಕಲಗಿತ್ತಿ ನಕ್ಕು ಹಾಡ್ಯಾಳ ಹೊಯ್ ಚಕ್ಕ ಮಕ್ಕ ಹಕ್ಕಿ ಹಾರೈತ
ಹೊಸ ರಂಗೂ ಜೀಸಿ ತುಂಗೂ ಹೊಳೇ ತಟ್ಟನೇ ಪಕ್ಕನೇ ನಕ್ಕರೇ ಅಕ್ಕರೇ ತೂರೀ... 
ಒಕ್ಕಲಗಿತ್ತಿ ನಕ್ಕು ಹಾಡ್ಯಾಳ ಹೊಯ್ ಚಕ್ಕ ಮಕ್ಕ ಹಕ್ಕಿ ಹಾರೈತ
ಜುಮ್ ಜುಮ್ ಅಂತಾ ಸುಮ್ಮನ ಬಂತಾ ಈಗ
ಮೈ ಜುಮ್ ಜುಮ್ ಅಂತಾ ಹಮ್ಮೇಲ್ಲಾ ಬಂತ ರಾಗಾ...
ಸುಯ್ ಸುಯ್ ಅಂತಾ ತಂಗಾಳಿ ಬಂತಾ
ಹೂಯ್ ಹೂಯ್ ಅಂತಾ ಮುಂಗಾರೂ ತಂತಾ
ನಾಚುತಾವೇ ಹೂವೂ ಅದಕಿಲ್ಲಾ ನೋವೂ
ಐಲೇ..   ಆಹ್ ನೂರಾ ನೂರಾ ನೂರಾ ಆಹ್ ನೂರಾ ನೂರಾ ನೂರಾ
ಒಕ್ಕಲಗಿತ್ತಿ ನಕ್ಕು ಹಾಡ್ಯಾಳ.. ಅಹ್ ಅಹ್ ಅಹ್  ಹೊಯ್ ಚಕ್ಕ ಮಕ್ಕ ಹಕ್ಕಿ ಹಾರೈತ

ಕಾವೇರಿ ನಮ್ಮ ಗಂಗೇ ಹೆಣ್ಣೂ ಹಾವಂಗೇ ಹರಿದವಳೇ ಹೆಣ್ಣು
ನಾರಿಗೇ ಸಿರಿದೇವಿ ತಾನೂ ತಂದವಳೇ ನಗೆ ಸುದ್ದಿ ಜೇನೂ
ಹಳ್ಳಿಯ ಅಂದ ದಿಲ್ಲಿಯ ಪ್ರಾಣ
ಐಲೇ..   ಆಹ್ ನೂರೂ ನೂರೂ  ನೂರೂ ಆಹ್ ನೂರೂ ನೂರೂ ನೂರೂ
ಒಕ್ಕಲಗಿತ್ತಿ ನಕ್ಕು ಹಾಡ್ಯಾಳ ಹೊಯ್ ಚಕ್ಕ ಮಕ್ಕ ಹಕ್ಕಿ ಹಾರೈತ
ಹೊಸ ರಂಗೂ ಜೀಸಿ ತುಂಗೂ ಹೊಳೇ ತಟ್ಟನೇ ಪಕ್ಕನೇ ನಕ್ಕರೇ ಅಕ್ಕರೇ ತೂರೀ... 
ಒಕ್ಕಲಗಿತ್ತಿ ನಕ್ಕು ಹಾಡ್ಯಾಳ ಹೊಯ್ ಚಕ್ಕ ಮಕ್ಕ ಹಕ್ಕಿ ಹಾರೈತ 
--------------------------------------------------------------------------------------------------------------------------

No comments:

Post a Comment