474. ಮಾವನ ಮಗಳು (1965)


ಮಾವನ ಮಗಳು ಚಿತ್ರದ ಹಾಡುಗಳು 
  1. ನಾನೇ ವೀಣೆ ನೀನೇ ತಂತಿ ಅವನೇ ವೈಣಿಕ 
  2. ಒಲಿಸಿದ ದೇವನ ರಸಪೂಜೆಗೇ 
  3. ಮಧುರ ಮಿಲನದ 
  4. ಚಂದ್ರೋದಯ ಮಂದ ನೀಲ 
  5. ಮಲ್ಲಿಗೆ ಅರಳಿಗೇ 
  6. ಆವುದೂ ಆವುದೂ 
  7. ಇನ್ನೂ ಏಕೆ ಅಂಜಿಕೆ 
  8. ಪ್ರೇಮ ಪ್ರೇಮ ಪ್ರೇಮ 
ಮಾವನ ಮಗಳು (1965) - ನಾನೇ ವೀಣೆ ನೀನೇ ತಂತಿ ಅವನೇ ವೈಣಿಕ......
ಸಾಹಿತ್ಯ : ರಾಷ್ಟ್ರಕವಿ ಕುವೆಂಪು ಸಂಗೀತ : ಟಿ. ಚಲಪತಿ ರಾವ್ ಗಾಯನ : ಪಿ.ಬಿ.ಶ್ರೀನಿವಾಸ್ ಮತ್ತು ಎಸ್.ಜಾನಕಿ
ಹೆಣ್ಣು :

ನಾನೇ ವೀಣೆ ನೀನೇ ತಂತಿ ಅವನೇ ವೈಣಿಕ....ಅವನೇ ವೈಣಿಕ
ಗಂಡು : ನಾನೇ ವೀಣೆ ನೀನೇ ತಂತಿ ಅವನೇ ವೈಣಿಕ...ಅವನೇ ವೈಣಿಕ

ಹೆಣ್ಣು : ಮಿಡಿದನೆನಲು ರಸದ ಹೊನಲು ...
          ಮಿಡಿದನೆನಲು ರಸದಹೊನಲು ಬಿಂದು ಬಿಂದು ಸೇರಿಸಿಂತು
          ನಾದ ರೂಪ ತಾ......ನಾದ ರೂಪತಾ.....
ಗಂಡು : ನಾನೇ ವೀಣೆ ನೀನೇ ತಂತಿ ಅವನೇ ವೈಣಿಕ...ಅವನೇ ವೈಣಿಕ
ಹೆಣ್ಣು : ಭುವನವೆಲ್ಲ ಸವಿಯಸೊಲ್ಲ ಕವಿಯ ಗಾನ....
         ಭುವನವೆಲ್ಲ ಸವಿಯಸೊಲ್ಲ ಕವಿಯ ಗಾನ...
ಗಂಡು : ನನ್ನ ನಿನ್ನ ಹೃದಯ ವೀಣಾ 
           ಕಲ್ಲಿಜೇನ ಸೊಗದಸ್ನಾನ...ಅಮೃತಪಾನ....ಅಮೃತಪಾನ
ಹೆಣ್ಣು : ನಾನೇ ವೀಣೆ ನೀನೇ ತಂತಿ ಅವನೇ ವೈಣಿಕ....ಅವನೇ ವೈಣಿಕ
ಗಂಡು : ನಾನೇ ವೀಣೆ ನೀನೇ ತಂತಿ 
ಇಬ್ಬರು : ಅವನೇ ವೈಣಿಕ...ಅವನೇ ವೈಣಿಕ ಅವನೇ ವೈಣಿಕ
            ಹೂಂಹೂಂ ಹೂಂಹೂಂ
-------------------------------------------------------------------------------------------------------------------------

ಮಾವನ ಮಗಳು (1965) - ಒಲಿಸಿದ ದೇವನ ರಸಪೂಜೆಗೆ.
ಸಾಹಿತ್ಯ : ರಾಷ್ಟ್ರಕವಿ ಕುವೆಂಪು ಸಂಗೀತ : ಟಿ. ಚಲಪತಿ ರಾವ್ ಗಾಯನ : ಎಸ್.ಜಾನಕಿ

ಒಲಿಸಿದ ದೇವನ ರಸಪೂಜೆಗೆ ನಾ ನಿಲುಕದ ಹೂವಾದೆ
ನಾ ನಿಲುಕದ ಹೂವಾದೆ
ಪರಿಚಯವಿಲ್ಲದ ಹಿರಿದೈವಕೆ ನಾ ಹರಕೆಯ ಮುಡಿಪಾದೆ. ...
ನಾ ಹರಕೆಯ ಮುಡಿಪಾದೆ. ...
ಒಲಿಸಿದ ದೇವನ ರಸಪೂಜೆಗೆ ನಾ ನಿಲುಕದ ಹೂವಾದೆ
ನಾ ನಿಲುಕದ ಹೂವಾದೆ

ರಚಿಸಿದ ಹಿಂದಿನ ಸವಿಕಲ್ಪನೆಗಳ ಸುಮಧುರ ಮಂಜುಳಗಾನ
ಸುಮಧುರ ಮಂಜುಳಗಾನ
ಸಂಯಮ ಬಾಹಿರ ನೀತಿಗೆ ದೂರ ನೀರಸ ಶ್ರುತಿಲಯ ಹೀನ
ನೀರಸ ಶ್ರುತಿಲಯ ಹೀನ
ಒಲಿಸಿದ ದೇವನ ರಸಪೂಜೆಗೆ ನಾ ನಿಲುಕದ ಹೂವಾದೆ
ನಾ ನಿಲುಕದ ಹೂವಾದೆ

ನೀಡಿದರಾರೊ ಮಂಗಳ ಸೂತ್ರ ಅವರೇ ಒಲವಿಗೆ ಪಾತ್ರ
ಅವರೇ ಒಲವಿಗೆ ಪಾತ್ರ
ತನುಮನ ಮೀಸಲು ಅವರಿಗೆ ಮಾತ್ರ ಅನ್ಯರು ತಂದೆಯ ಗೋತ್ರ ..
ಅನ್ಯರು ತಂದೆಯ ಗೋತ್ರ ..
ಒಲಿಸಿದ ದೇವನ ರಸಪೂಜೆಗೆ ನಾ ನಿಲುಕದ ಹೂವಾದೆ
ನಾ ನಿಲುಕದ ಹೂವಾದೆ
--------------------------------------------------------------------------------------------------------------------

ಮಾವನ ಮಗಳು (1965) - ಮಧುರ ಮಿಲನದ ಸವಿ ನೆನಪೊಂದು 
ಸಂಗೀತ : ಟಿ. ಚಲಪತಿ ರಾವ್ ಸಾಹಿತ್ಯ : ಆರ್.ಏನ್.ಜಯಗೋಪಾಲ್  ಗಾಯನ :  ಎಸ್.ಜಾನಕಿ 
`
ಮಧುರ ಮಿಲನದ ಸವಿ ನೆನಪೊಂದು ಮೂಡಿದೆ ಮನಸಿನಲಿ 
ಮೂಡಿದೆ ಮನಸಿನಲಿ 
ಮಧುರ ಮಿಲನದ ಸವಿ ನೆನಪೊಂದು ಮೂಡಿದೆ ಮನಸಿನಲಿ 
ಮೂಡಿದೆ ಮನಸಿನಲಿ 
ಮರೆಯುವುದೆಂತೂ ಮೋಹನ ಮೂರುತಿ 
ಮರೆಯುವುದೆಂತೂ ಮೋಹನ ಮೂರುತಿ ನೆಲಸಿರೇ ಹೃದಯದಲಿ 
ಮೂರುತಿ ನೆಲಸಿರೇ ಹೃದಯದಲಿ 
ಮಧುರ ಮಿಲನದ ಸವಿ ನೆನಪೊಂದು ಮೂಡಿದೆ ಮನಸಿನಲಿ 

ಇನಿಯನ ಕಂಗಳ ಕರೆಯ.... ಕಂಡೂ ಮನದಲಿ ನಾಚಿಕೇ ಉದಯ.. 
ನುಡಿಯಲು ಬಯಸಿತು ಹರೆಯ ಮರುದನಿಯನೂ ನೀಡಿತು ಹೃದಯ 
ಮರುದನಿಯನೂ ನೀಡಿತು ಹೃದಯ 
ಮಧುರ ಮಿಲನದ ಸವಿ ನೆನಪೊಂದು ಮೂಡಿದೆ ಮನಸಿನಲಿ 
ಮೂಡಿದೆ ಮನಸಿನಲಿ 

ಅಂತರಂಗದ ಭಾವತರಂಗದಿ ಕನ್ನಡಿಯಾಗಿದೇ ಕಣ್ಣು 
ಕನ್ನಡಿಯಾಗಿದೇ ಕಣ್ಣು 
ನಿನ್ನ ಕೆನ್ನೆ ಕೆಂಪಾಗಿರಲೂ ಆದುವೇ ಕಾರಣ ವೇನೂ 
ಗೆಳತೀ ಆದುವೇ ಕಾರಣ ವೇನೂ 
ಮಧುರ ಮಿಲನದ ಸವಿ ನೆನಪೊಂದು ಮೂಡಿದೆ ಮನಸಿನಲಿ 

ಆಸೆಯ ಸಡಗರ ನಮದು ಒಲವಿನ ಭೋಗರ ಇನಿದು 
ಇನಿಯಳ ಇಂಗಿತ ತಿಳಿದೂ ಬರಲಾರನೇ ಮಾಧವ ಕುಣಿದು 
ಬಾರನೇ ಮಾಧವ ಕುಣಿದು 
ಮಧುರ ಮಿಲನದ ಸವಿ ನೆನಪೊಂದು ಮೂಡಿದೆ ಮನಸಿನಲಿ 
ಮೂಡಿದೆ ಮನಸಿನಲಿ  ....  
-------------------------------------------------------------------------------------------------------------------------

ಮಾವನ ಮಗಳು (1965) - ಚಂದ್ರೋದಯ ಮಂದಾನಿಲ
ಸಂಗೀತ : ಟಿ. ಚಲಪತಿ ರಾವ್ ಸಾಹಿತ್ಯ : ಆರ್.ಏನ್.ಜಯಗೋಪಾಲ್ ಗಾಯನ : ಎಸ್.ಜಾನಕಿ


ಚಂದ್ರೋದಯ ಮಂದಾನಿಲ 
ಚಂದ್ರೋದಯ ಮಂದಾನಿಲ ಎಂದೆಂದಿಗೂ ಬೇಕೇ ಬೇಕೂ 
ಅದರೊಂದಿಗೇ ಹೃದಯೇಶನ ಮಧು ಸಂಭ್ರಮವೂ ಇರೇ ಜೋಕೇ ಜೋಕೂ 
ಚಂದ್ರೋದಯ ಮಂದಾನಿಲ ಎಂದೆಂದಿಗೂ ಬೇಕೇ ಬೇಕೂ 
ಅದರೊಂದಿಗೇ ಹೃದಯೇಶನ ಮಧು ಸಂಭ್ರಮವೂ ಇರೇ ಜೋಕೇ ಜೋಕೂ 

ಕಿರು ನೋಟದ ಹೂ ನವಿರೂ... ನವಿರು ಹೊರ ಬೀರಲೂ 
ಮೈ ನಿಮಿರೂ ನಿಮಿರು ನಿಮಿರು 
ಕಿರು ನೋಟದ ಹೂ ನವಿರೂ... ನವಿರು ಹೊರ ಬೀರಲೂ 
ಮೈ ನಿಮಿರೂ ನಿಮಿರು ನಿಮಿರು ಅನುದಿನ ಮೈಮನ .. 
ಅನುದಿನ ಮೈಮನ ಪುಲಕಿಸಿ ನಲಿಸೆ ತಣಿಸೆ 
ಚಂದ್ರೋದಯ ಮಂದಾನಿಲ ಎಂದೆಂದಿಗೂ ಬೇಕೇ ಬೇಕೂ 
ಅದರೊಂದಿಗೇ ಹೃದಯೇಶನ ಮಧು ಸಂಭ್ರಮವೂ ಇರೇ ಜೋಕೇ ಜೋಕೂ 

ನೀನಗಲಿರೆ ಪ್ರತಿಕ್ಷಣವೂ...   ವರುಷ ನಿನ್ನೊಡನಿರುವ ಯುಗ ಒಂದೇ ಒಂದೇ ನಿಮಿಷ
ನೀನಗಲಿರೆ ಪ್ರತಿಕ್ಷಣವೂ ವರುಷ ನಿನ್ನೊಡನಿರುವ ಯುಗ ಒಂದೇ ಒಂದೇ ನಿಮಿಷ 
ತಾ ಸಖ ಈ ಸುಖ 
ತಾ ಸಖ ಈ ಸುಖ ಮರೆಯದ ಸವಿಯ ಸಿರಿಯ
ಚಂದ್ರೋದಯ ಮಂದಾನಿಲ ಎಂದೆಂದಿಗೂ ಬೇಕೇ ಬೇಕೂ
ಅದರೊಂದಿಗೇ ಹೃದಯೇಶನ ಮಧು ಸಂಭ್ರಮವೂ ಇರೇ ಜೋಕೇ ಜೋಕೂ
-------------------------------------------------------------------------------------------------------------------------
ಮಾವನ ಮಗಳು (1965) - ಮಲ್ಲಿಗೆ ಅರಳಿಗೇ ಮುತ್ತಿನ ಚೆಂಡಿಗೆ  
ಸಂಗೀತ : ಟಿ. ಚಲಪತಿ ರಾವ್ ಸಾಹಿತ್ಯ : ಆರ್.ಏನ್.ಜಯಗೋಪಾಲ್ ಗಾಯನ : ಎಸ್.ಜಾನಕಿ 

ಹೆಣ್ಣು : ಮಲ್ಲಿಗೆ ಅರಳಿಗೇ ಮುತ್ತಿನ ಚೆಂಡಿಗೆ
         ಮದುವೇ ಮದುವೇ ಮದುವೇ ಮದುವೇ
ಕೋರಸ್: ಮದುವೇ ಮದುವೇ ಮದುವೇ ಮದುವೇ
ಗಂಡು : ಮಾವನ ಮಗಳಿಗೇ ಭಾವನ ಕಾಣಿಕೆ
           ಒಲವೇ ಒಲವೇ ಒಲವೇ ಒಲವೇ
ಕೋರಸ್ : ಒಲವೇ ಒಲವೇ ಒಲವೇ ಒಲವೇ

ಹೆಣ್ಣು  : ಭೂಮಿಗಿಂತ ನವಿರು ನವಿರು ಎಳಸು ಚಿಗುರೂ ಬಾಲೇ
ಗಂಡು : ಅಂಜುಬುರುಕೀ ಮಳ್ಳಿ ಸಿಡುಕೀ ಬಲ್ಲೆ ನಿಮ್ಮ ಬಾಲೇ
ಹೆಣ್ಣು : ಬಾಡದಂತೇ ನೋಡಿ ಕೊಳ್ಳಿ ಮಗಳ ಇನ್ನೂ ನೀನೇ
ಗಂಡು : ಹೊನ್ನ ತರುವ ಚೆನ್ನ ಇವಗೇ ತಾರದಿರಲಿ ಶೂಲೇ
ಹೆಣ್ಣು : ನೋವ ನಳಿಸಿ ನಗೆಯ ತರಲಿ ಸಂಬಂಧ ಮಾಲೇ...  ಸಂಬಂಧ ಮಾಲೇ..
ಕೋರಸ್: ಮಲ್ಲಿಗೆ ಅರಳಿಗೇ ಮುತ್ತಿನ ಚೆಂಡಿಗೆ
         ಮದುವೇ ಮದುವೇ ಮದುವೇ ಮದುವೇ
         ಮದುವೇ ಮದುವೇ ಮದುವೇ ಮದುವೇ
         ಮಾವನ ಮಗಳಿಗೇ ಭಾವನ ಕಾಣಿಕೆ
         ಒಲವೇ ಒಲವೇ ಒಲವೇ ಒಲವೇ
         ಒಲವೇ ಒಲವೇ ಒಲವೇ ಒಲವೇ 

ಹೆಣ್ಣು : ಗಂಡನೊಂದೂ ಗುಮ್ಮನೆಂದು ಅಂಜಿ ನಡೆಯುವುದಿಲ್ಲಾ
ಗಂಡು : ಚಿಗುರು ಮೀಸೆ ಗಂಡು ಇವನೂ ಸುಮ್ಮನಿರುವುದಿಲ್ಲಾ
ಹೆಣ್ಣು : ಕಲ್ಲೂ ಮನಸೂ ಟೂ ಟೂ ಸಂಗ ಬೇಡವಲ್ಲಾ
ಗಂಡು : ಸೋತೆ ಪುಡುಕಿ ಸೌತೆಕಾಯಿ ಹೆಣ್ಣು ಬೇಡವಲ್ಲಾ
ಕೊರಸ: ತಾಳಿ ಘಟ್ಟಿ ಜಗಳವಾಡಿ ಮದುವೇ ನಿಲ್ಲದಲ್ಲಾ ಮದುವೇ ನಿಲ್ಲದಲ್ಲಾ
ಕೋರಸ್: ಮಲ್ಲಿಗೆ ಅರಳಿಗೇ ಮುತ್ತಿನ ಚೆಂಡಿಗೆ
         ಮದುವೇ ಮದುವೇ ಮದುವೇ ಮದುವೇ
         ಮದುವೇ ಮದುವೇ ಮದುವೇ ಮದುವೇ

ಹೆಣ್ಣು : ಜಗಳರರಳೀ ಬಂದರೇನೇ ಮದುವೆ ಮನಕೆ ಅಂದ
          ಮನಸು ಮನಸು ಬೆರೆತೆರೇನೇ ಮದುವೇ ಆನಂದಾ
          ಬೀಗರಾಗಿ ದೂರಿದರೇ ತೀರದೂ ಸಂಬಂಧ  ತೀರದೂ ಸಂಬಂಧ
ಕೋರಸ್: ಮಲ್ಲಿಗೆ ಅರಳಿಗೇ ಮುತ್ತಿನ ಚೆಂಡಿಗೆ
         ಮದುವೇ ಮದುವೇ ಮದುವೇ ಮದುವೇ
         ಮದುವೇ ಮದುವೇ ಮದುವೇ ಮದುವೇ
         ಮಾವನ ಮಗಳಿಗೇ ಭಾವನ ಕಾಣಿಕೆ
         ಒಲವೇ ಒಲವೇ ಒಲವೇ ಒಲವೇ
         ಒಲವೇ ಒಲವೇ ಒಲವೇ ಒಲವೇ 

-------------------------------------------------------------------------------------------------------------------------

ಮಾವನ ಮಗಳು (1965) - ಆವುದೋ ಆವುದೋ ಆವುದೋ
ಸಂಗೀತ : ಟಿ. ಚಲಪತಿ ರಾವ್ ಸಾಹಿತ್ಯ : ಆರ್.ಏನ್.ಜಯಗೋಪಾಲ್ ಗಾಯನ : ಎಸ್.ಜಾನಕಿ

ಹೂಂಹೂಂಹೂಂ ಹೂಂಹೂಂಹೂಂ ಹೂಂಹೂಂಹೂಂ
ಆವುದೋ ಆವುದೋ ಆವುದೋ ಅರಿಯದ ಈ ಮುದ ಆವುದೋ
ಆವುದೋ ಎನಿತೆಯ ಹುರುಪಿಂದ ಆವರಿಸಿದೇ ಮಹದಾನಂದ
ಹೂಂಹೂಂಹೂಂ ಹೂಂಹೂಂಹೂಂ ಹೂಂಹೂಂಹೂಂ

ಗೆಳೆತನ ಅಳದಿಹ ಸೂಚನೆಯೂ ಗೆಳೆತನ ಕೆಣುಕುವ ಸೂಚನೆಯೂ
ಗೆಳೆತನ ಅಳದಿಹ ಸೂಚನೆಯೂ ಗೆಳೆತನ ಕೆಣುಕುವ ಸೂಚನೆಯೂ
ಆವುದೋ ಆವುದೋ ಆವುದೋ ಅರಿಯದ ಈ ಮುದ ಆವುದೋ 

ಬೆಳ್ಳಮುಗಿಲಿನ ಸುಚಿ ಕಂಗಳಿಗೆ ಹೊಮ್ಮುಗುಳಿನ ರುಚಿ ನಾಲಿಗೆಗೇ 
ಅಳಿಗಳ ಇನಿರವ ಕಿವಿಗಳಿಗೇ 
ಅಳಿಗಳ ಇನಿರವ ಕಿವಿಗಳಿಗೇ ಬೆಳಗಿ ಮೊಳಗಿ ಮೊಳಗಿ ಮೊಳಗಿ 
ಆವುದೋ ಆವುದೋ ಆವುದೋ ಅರಿಯದ ಈ ಮುದ ಆವುದೋ 
ಆವುದೋ ಎನಿತೆಯ ಹುರುಪಿಂದ ಆವರಿಸಿದೇ ಮಹದಾನಂದ
ಹೂಂಹೂಂಹೂಂ ಹೂಂಹೂಂಹೂಂ ಹೂಂಹೂಂಹೂಂ 

ಈ ಚಿರ ಪರಿಚಿತ ರಮ್ಯವನ ಬಿಗುಡಿ ಈ ದಿನ ವಿನೂತನ 
ರಸಮಯ ರೋಮಾಂಚನ ಕದನ 
ರಸಮಯ ರೋಮಾಂಚನ ಕದನ ಏಕೋ ಏನೋ ಕಾಣೇ ಕಾಣೇ 
ಆವುದೋ ಆವುದೋ ಆವುದೋ ಅರಿಯದ ಈ ಮುದ ಆವುದೋ 
ಆವುದೋ ಎನಿತೆಯ ಹುರುಪಿಂದ ಆವರಿಸಿದೇ ಮಹದಾನಂದ
ಹೂಂಹೂಂಹೂಂ ಹೂಂಹೂಂಹೂಂ ಹೂಂಹೂಂಹೂಂ 
-------------------------------------------------------------------------------------------------------------------------

ಮಾವನ ಮಗಳು (1965) - ಇನ್ನೂ ಯಾಕೇ ಅಂಜಿಕೆ ಅಪನಂಬಿಕೆ 
ಸಂಗೀತ : ಟಿ. ಚಲಪತಿ ರಾವ್ ಸಾಹಿತ್ಯ : ಆರ್.ಏನ್.ಜಯಗೋಪಾಲ್ ಗಾಯನ : ಎಸ್.ಜಾನಕಿ

ಗಂಡು : ಇನ್ನೂ ಯಾಕೇ ಅಂಜಿಕೆ ಅಪರಂಜಿ
            ಹೊಯ್ ಯಾಕೇ ಚಿಂತೇ ಚೆಲುವಿನ ಕಾರಂಜೀ
            ಇನ್ನೂ ಯಾಕೇ ಅಂಜಿಕೆ ಅಪರಂಜಿ
            ಹೊಯ್ ಯಾಕೇ ಚಿಂತೇ ಚೆಲುವಿನ ಕಾರಂಜಿ

ಗಂಡು : ಕಳಚಿ ಬಿತ್ತೇ ಆಕಾಶ ತಳವಾಯ್ತೇ ಕೈಲಾಸ
           ಕಳಚಿ ಬಿತ್ತೇ ಆಕಾಶ ತಳವಾಯ್ತೇ ಕೈಲಾಸ
            ಭೂಮಿಗಿಂತ ಭಾರವಾಯ್ತೇ ಗುಲಗಂಜಿ ಗುಲಗುಂಜಿ 
            ಇನ್ನೂ ಯಾಕೇ ಅಂಜಿಕೆ ಅಪರಂಜಿ
            ಹೊಯ್ ಯಾಕೇ ಚಿಂತೇ ಚೆಲುವಿನ ಕಾರಂಜಿ 
ಹೆಣ್ಣು : ದೇವರ ಹಾಗೇ ನೇರವಾದ ಸರದಾರ 
          ದೂರಿಂದ ಶರಣಂದೇ ಕೈಯಾರ 
          ದೇವರ ಹಾಗೇ ನೇರವಾದ ಸರದಾರ 
          ದೂರಿಂದ ಶರಣಂದೇ ಕೈಯಾರ 
         ಬಾಳಿನಲ್ಲಿ ದಾಟಿನಿಂತು ಹೋದ ಜೀವ ಮತ್ತೇ ಬಂತು 
         ಮರೆಯಲಲ್ಲಿ ಮಾಡಿದಂತ ಉಪಕಾರ 
         ದೇವರ ಹಾಗೇ ನೇರವಾದ ಸರದಾರ 
         ದೂರಿಂದ ಶರಣಂದೇ ಕೈಯಾರ 

ಗಂಡು : ಮರೆಯೆನೆಂಬ ನುಡಿ ಯಾಕೇ ದೂರವೆಂಬ ಮಡಿಯಾಕೆ 
           ಮರೆಯೆನೆಂಬ ನುಡಿ ಯಾಕೇ ದೂರವೆಂಬ ಮಡಿಯಾಕೆ 
           ಸೂಜಿನಂತ ಮಾತಿನಲ್ಲಿ ಮುಳ್ಳು ಯಾಕೇ ಮುಳ್ಳು ಯಾಕೇ 
            ಇನ್ನೂ ಯಾಕೇ ಅಂಜಿಕೆ ಅಪರಂಜಿ
            ಹೊಯ್ ಯಾಕೇ ಚಿಂತೇ ಚೆಲುವಿನ ಕಾರಂಜಿ
ಹೆಣ್ಣು : ಹೂವಿನಂತೇ ಹೆಣ್ಣಿನಂದ ಶೀಲವಗರ ಮಧುರಾಗಂಧ 
          ಅದನು ಕಾವಾ ಮುಳ್ಳಿಗಿಂತೇ ಅಪಚಾರ             
         ದೇವರ ಹಾಗೇ ನೇರವಾದ ಸರದಾರ 
         ದೂರಿಂದ ಶರಣಂದೇ ಕೈಯಾರ 

ಗಂಡು : ಅಂದಚಂದ ಬೇಕಿಲ್ಲ ಗಂಧ ಅರಸಿ ಬಂದಿಲ್ಲಾ 
           ಅಂದಚಂದ ಬೇಕಿಲ್ಲ ಗಂಧ ಅರಸಿ ಬಂದಿಲ್ಲಾ 
           ನೀತಿ ಬಿಟ್ಟ ನೀಚ ಭೃಂಗ ನಾನಲ್ಲಾ ನಾನಲ್ಲಾ 
ಹೆಣ್ಣು : ಒಳ್ಳೆಯಂತ ಹುಂಬ ಹೃದಯ ಕಳೆಯೇತಿಗ ಹುಲಿಯ ಧೈರ್ಯ 
          ಮನ್ನಿಸೆನ್ನಾ ಮಾತಾಡೆಲ್ಲಾ ಮಹರಾಯ 
            ಇನ್ನೂ ಯಾಕೇ ಅಂಜಿಕೆ ಅಪರಂಜಿ
            ಹೊಯ್ ಯಾಕೇ ಚಿಂತೇ ಚೆಲುವಿನ ಕಾರಂಜಿ
ಹೆಣ್ಣು : ದೇವರ ಹಾಗೇ ನೇರವಾದ ಸರದಾರ 
         ದೂರಿಂದ ಶರಣಂದೇ ಕೈಯಾರ 
-------------------------------------------------------------------------------------------------------------------------

ಮಾವನ ಮಗಳು (1965) - ಪ್ರೇಮ ಪ್ರೇಮ ಪ್ರೇಮ ಆಹ್ಹಾ ಎಂಥ ಸುಂದರ ನಾಮ 
ಸಂಗೀತ : ಟಿ. ಚಲಪತಿ ರಾವ್ ಸಾಹಿತ್ಯ : ಆರ್.ಏನ್.ಜಯಗೋಪಾಲ್ ಗಾಯನ : ಎಸ್.ಜಾನಕಿ

ಗಂಡು : ಪ್ರೇಮ ಪ್ರೇಮ ಪ್ರೇಮ ಆಹ್ಹಾ ಎಂಥ ಸುಂದರ ನಾಮ
           ನೆನೆದರೇ ಸಾಕೂ ಸಂಯಮ ನಿಯಮ ಎಲ್ಲಾ ನಿರ್ನಾಮ
           ಪ್ರೇಮ ಪ್ರೇಮ ಪ್ರೇಮ ಆಹ್ಹಾ ಎಂಥ ಸುಂದರ ನಾಮ
ಹೆಣ್ಣು : ಮಜನೂ ಮಜನೂ ಮಜನೂ ಆಹ್ಹಾ ಎಂಥಾ ಮಾನಸಿಕ ನೀನೂ
          ಸದ್ಗತಿಯಲ್ಲೇ ಸಾಧ್ವಿಯ ಒಲವನು ಸಾಧಿಸಿಕೊಂಡವನೂ
          ನನ್ನ ಮಜನೂ ಮಜನೂ ಮಜನೂ ಆಹ್ಹಾ ಎಂಥಾ ಮಾಂತ್ರಿಕ ನೀನೂ 

ಗಂಡು : ವ್ವಾವಾಹ್ ಘಾಟಿ ಬಕ್ಸಮ್ ಬ್ಯೂಟಿ ಮಾಡಿದೆ ಮನಸನು ಲೂಟಿ ಆಆಆ....
            ವ್ವಾವಾಹ್ ಘಾಟಿ ಬಕ್ಸಮ್ ಬ್ಯೂಟಿ ಮಾಡಿದೆ ಮನಸನು ಲೂಟಿ
           ನಾನು ಬುಗುರಿ ನೀನು ಚಾಟೀ  ನನ್ನದೇ ನಿನ್ನಹ ಸೋಕಿ
           ಓ..  ಪ್ರೇಮ ಪ್ರೇಮ ಪ್ರೇಮ ಆಹ್ಹಾ ಎಂಥ ಸುಂದರ ನಾಮ

ಹೆಣ್ಣು : ಕೀಟಲೇ ಮಾತಿನ ಕಿಂದರಜೋಗಿ ನಾನಿಲ್ಲಿ ನೆನಪಿರಲಿ
          ಕೀಟಲೇ ಮಾತಿನ ಕಿಂದರಜೋಗಿ ನಾನಿಲ್ಲಿ ನೆನಪಿರಲಿ
          ಹಳ್ಳಕ್ಕೇ ಕೊಳ್ಳಕ್ಕೇ...
          ಹಳ್ಳಕ್ಕೇ ಕೊಳ್ಳಕ್ಕೇ ಒಯ್ಯದಿರೇನ್ನ ನಂಬಿಕೆ ನಾ ನಿನ್ನ
  .      ಆಹ್ಹಾ..  ನನ್ನ ಮಜನೂ ಮಜನೂ ಮಜನೂ ಆಹ್ಹಾ ಎಂಥಾ ಮಾಂತ್ರಿಕ ನೀನೂ 

ಗಂಡು : ಬೆಳ್ಳಗೆ ತೆಳ್ಳಗೇ ಬಳುಕುವ ಬಾಲೇ ಚೆಲುವಿನ ತೂಗುಯ್ಯಾಲೆ
            ಬೆಳ್ಳಗೆ ತೆಳ್ಳಗೇ ಬಳುಕುವ ಬಾಲೇ ಚೆಲುವಿನ ತೂಗುಯ್ಯಾಲೆ
            ಒಲ್ಲೇ ಒಲ್ಲೇ ಎಂದವನಲ್ಲೇ ಸಲಿಗೆಯ ಬೆಳೆಸಿದೆಯಲ್ಲೇ
           ಓ..  ಪ್ರೇಮ ಪ್ರೇಮ ಪ್ರೇಮ ಆಹ್ಹಾ ಎಂಥ ಸುಂದರ ನಾಮ

ಹೆಣ್ಣು : ಬೆಳಸುವರಾರೂ ಅಳಿಸುವರಾರೂ ಒಲವಿಗೇ ಹೊಣೆ ಯಾರೂ 
          ಬೆಳಸುವರಾರೂ ಅಳಿಸುವರಾರೂ ಒಲವಿಗೇ ಹೊಣೆ ಯಾರೂ  
          ಮನಸೂ ಮನಸೂ...   
          ಮನಸೂ ಮನಸೂ ಒಂದಾದಾಗ ಅರಳಿತು ಅನುರಾಗ
ಗಂಡು : ಓ.. ಪ್ರೇಮ ಪ್ರೇಮ ಪ್ರೇಮ ಆಹ್ಹಾ ಎಂಥ ಸುಂದರ ನಾಮ
           ನೆನೆದರೇ ಸಾಕೂ ಸಂಯಮ ನಿಯಮ ಎಲ್ಲಾ ನಿರ್ನಾಮ
ಹೆಣ್ಣು : ಮಜನೂ ಮಜನೂ ಮಜನೂ ಆಹ್ಹಾ ಎಂಥಾ ಮಾನಸಿಕ ನೀನೂ
          ಸದ್ಗತಿಯಲ್ಲೇ ಸಾಧ್ವಿಯ ಒಲವನು ಸಾಧಿಸಿಕೊಂಡವನೂ
          ನನ್ನ ಮಜನೂ ಮಜನೂ ಮಜನೂ ಆಹ್ಹಾ ಎಂಥಾ ಮಾಂತ್ರಿಕ ನೀನೂ 
ಗಂಡು : ಓ.. ಪ್ರೇಮ ಪ್ರೇಮ ಪ್ರೇಮ
--------------------------------------------------------------------------------------------------------------------------

No comments:

Post a Comment