475. ಕೂಡಿ ಬಾಳಿದರೆ ಸ್ವರ್ಗ ಸುಖ (1981)


ಕೂಡಿ ಬಾಳಿದರೆ ಸ್ವರ್ಗ ಸುಖ ಚಿತ್ರದ ಹಾಡುಗಳು 
  1. ನಗುವಾಗ ಹೆಣ್ಣು ಬಲು ಅಂದ ಮುನಿದಾಗ ಇನ್ನೂ ಮೊಗ ಅಂದ
  2. ರೋಷ ದ್ವೇಷದ ಜ್ವಾಲೆ... ನಮ್ಮನ್ನೇ ನುಂಗಿ ನಗುತಿದೆ
  3. ಎಲ್ಲೇ ಇರಲಿ ಹಗಲು ಇರುಳು ನಿನ್ನ ನೆನಪೇ ಕಾಡೈತೆ
  4. ನೊಂದ ಬಾಳು ಸಾಕು ಒಂದು ಗೂಡಬೇಕು ಆಗಲೇ ಹರುಷವು 
ಕೂಡಿ ಬಾಳಿದರೆ ಸ್ವರ್ಗ ಸುಖ (1981) - ನಗುವಾಗ ಹೆಣ್ಣು ಬಲು ಅಂದ ಮುನಿದಾಗ ಇನ್ನೂ ಮೊಗ ಅಂದ
ಸಾಹಿತ್ಯ: ದೊಡ್ಡರಂಗೇ ಗೌಡ ಸಂಗೀತ: ರಾಜನ್-ನಾಗೇಂದ್ರ ಹಾಡಿದವರು: ಎಸ್.ಪಿ.ಬಿ., ಎಸ್.ಜಾನಕಿ

ನಗುವಾಗ ಹೆಣ್ಣು ಬಲು ಅಂದ ಮುನಿದಾಗ ಇನ್ನೂ ಮೊಗ ಅಂದ ಮೈತುಂಬಿ ಮುದ್ದಾಗಿ ಬೆಳೆದ
ಸೊಬಗಿಯ ಕಣ್ಣೇ ಅಂದ ಸೆಳೆಯುವ ಅಂದವೆ ಅಂದ
ಸೊಬಗಿಯ ಕಣ್ಣೇ ಅಂದ ಸೆಳೆಯುವ ಅಂದವೆ ಅಂದ
ಕುಡಿ ಮೀಸೆ ಗಂಡು ಬಲು ಚೆಂದ ಗೆಲುವಾದ ನೋಟ ನಡೆ ಚೆಂದ ತುಂಟಾಟ ಚೆಲ್ಲಾಟ ತಿಳಿದ
ಚೆಲುವನ ಮಾತೇ ಚೆಂದ ಕೆಣಕುವ ಚೆಂದವೆ ಚೆಂದ
ಚೆಲುವನ ಮಾತೇ ಚೆಂದ ಕೆಣಕುವ ಚೆಂದವೆ ಚೆಂದ
ನಗುವಾಗ ಹೆಣ್ಣು ಬಲು ಅಂದ ಕುಡಿ ಮೀಸೆ ಗಂಡು ಬಲು ಚೆಂದ

ನಿನ್ನ ದಾರಿ ಕಾದು ನಿಂತು ಕ್ಷಣವೊಂದು ಯುಗವಾಯ್ತು
ನನ್ನ ಜೊತೆ ನೀನಿರಲು ಯುಗವೊಂದು ಕ್ಷಣವಾಯ್ತು
ದೂರದಲ್ಲಿ ಇರಲು ನೀನು ಬಯಸುವೆ ನಿನ್ನ ನಾನು
ಸನಿಹಕೆ ಬರಲು ನೀನು ಮರೆಯುವೆ ನನ್ನೇ ನಾನು
ನನ್ನ ನಿನ್ನ ಸಂಬಂಧ ಎಂದೂ ತರಲಿ ಆನಂದ
ನಗುವಾಗ ಹೆಣ್ಣು ಬಲು ಅಂದ ಮುನಿದಾಗ ಇನ್ನೂ ಮೊಗ ಅಂದ
ಮೈತುಂಬಿ ಮುದ್ದಾಗಿ ಬೆಳೆದ ಸೊಬಗಿಯ ಕಣ್ಣೇ ಅಂದ ಸೆಳೆಯುವ ಅಂದವೆ ಅಂದ
ಸೊಬಗಿಯ ಕಣ್ಣೇ ಅಂದ ಸೆಳೆಯುವ ಅಂದವೆ ಅಂದ
ಕುಡಿ ಮೀಸೆ ಗಂಡು ಬಲು ಚೆಂದ ನಗುವಾಗ ಹೆಣ್ಣು ಬಲು ಅಂದ

ನೀನೆ ನನ್ನ ಪ್ರೀತಿ ನಲ್ಲ ನಿನ್ನ ಬಿಟ್ಟು ಬದುಕೇ ಇಲ್ಲ
ನನಗಂತೂ ನೀನೆ ಎಲ್ಲ ಕೂಡಿ ಬರಲಿ ಕಂಕಣ ಬಲ
ಹೊಂಗೆ ನೆರಳ ತಂಪಿನಲಿ ಮಲಗಿ ನಿನ್ನ ಮಡಿಲಿನಲಿ
ಪಡೆಯುವ ಸ್ವರ್ಗ ಸುಖ ಒಲುಮೆಯ ಬಾಳಿನಲಿ
ನನ್ನ ನಿನ್ನ ಸಂಬಂಧ ಎಂದೂ ತರಲಿ ಆನಂದ
ಕುಡಿ ಮೀಸೆ ಗಂಡು ಬಲು ಚೆಂದ
ನಗುವಾಗ ಹೆಣ್ಣು ಬಲು ಅಂದ
ತುಂಟಾಟ ಚೆಲ್ಲಾಟ ತಿಳಿದ
ಸೊಬಗಿಯ ಕಣ್ಣೇ ಅಂದ
ಸೆಳೆಯುವ ಅಂದವೆ ಅಂದ
ಚೆಲುವನ ಮಾತೇ ಚೆಂದ
ಕೆಣಕುವ ಚೆಂದವೆ ಚೆಂದ
-------------------------------------------------------------------------------------------------------------------------

ಕೂಡಿ ಬಾಳಿದರೆ ಸ್ವರ್ಗ ಸುಖ (1981) - ರೋಷ ದ್ವೇಷದ ಜ್ವಾಲೆ... ನಮ್ಮನ್ನೇ ನುಂಗಿ ನಗುತಿದೆ
ಸಾಹಿತ್ಯ: ದೊಡ್ಡರಂಗೇ ಗೌಡ ಸಂಗೀತ: ರಾಜನ್-ನಾಗೇಂದ್ರ ಹಾಡಿದವರು: ಎಸ್.ಪಿ.ಬಿ.

ರೋಷ ದ್ವೇಷದ ಜ್ವಾಲೆ... ನಮ್ಮನ್ನೇ ನುಂಗಿ ನಗುತಿದೆ ಹಠಮಾರಿಗಳಾಗಿ ಕತ್ತಿಯ ತೀಡದೆ ಬುದ್ಧಿಯ... ತೀಡಿರಿ
ನೊಂದ ಬಾಳು ಸಾಕು ಒಂದುಗೂಡ ಬೇಕು ಆಗಲೇ ಹರುಷವು....
ಹಗೆತನ ನೀಗಿ ಬಾಳುವ ಗೆಳೆತನ ಬೆಳೆಸಿ ಸುಖ ಪಡುವ
ನೊಂದ ಬಾಳು ಸಾಕು ಒಂದುಗೂಡ ಬೇಕು ಆಗಲೇ ಹರುಷವು...
ಹಗೆತನ ನೀಗಿ ಬಾಳುವ ಗೆಳೆತನ ಬೆಳೆಸಿ ಸುಖ ಪಡುವ
ನೊಂದ ಬಾಳು ಸಾಕು ಒಂದುಗೂಡ ಬೇಕು

ಒಂದೇ ತಾಯಿಯ ಮಕ್ಕಳು ನಾವು ಒಮ್ಮತದಿಂದಿರಬೇಕು
ಒಂದೇ ತಾಯಿಯ ಮಕ್ಕಳು ನಾವು ಒಮ್ಮತದಿಂದಿರಬೇಕು
ಸುತ್ತಲು ಕವಿದ ಕತ್ತಲೆ ಓಡಿಸಿ ಬೆಳಕನು ಕಾಣಲೆ ಬೇಕು
ಸೇಡಿನ ಉರಿಗೆ.. ಊರೆರಡಾಯ್ತು ಸಂಸಾರಗಳೆ.. ಸಿಡಿದೆರಡಾಯ್ತು
ನ್ಯಾಯ ಅನ್ಯಾಯವೇನೆಂದು ಹೇಳುವ
ಬದುಕುವ ದಾರಿ ತಿಳಿಯುವ
ನೊಂದ ಬಾಳು ಸಾಕು ಒಂದುಗೂಡ ಬೇಕು ಆಗಲೇ ಹರುಷವು...
ಹಗೆತನ ನೀಗಿ ಬಾಳುವ ಗೆಳೆತನ ಬೆಳೆಸಿ ಸುಖ ಪಡುವ
ನೊಂದ ಬಾಳು ಸಾಕು ಒಂದುಗೂಡ ಬೇಕು

ಗೋಮುಖ ವ್ಯಾಘ್ರರ ಕಪಟವ ನಂಬಿ ಪ್ರೀತಿಯು ಮರೆಯಾಗಿ ಹೋಯ್ತೆ
ಗೋಮುಖ ವ್ಯಾಘ್ರರ ಕಪಟವ ನಂಬಿ ಪ್ರೀತಿಯು ಮರೆಯಾಗಿ ಹೋಯ್ತೆ
ಭೇದವ ತೋರುತ ಸ್ವಾರ್ಥವು ತುಂಬಿ ಮುಗ್ಧರ ಬಲಿಯಾಗಿ ಹೋಯ್ತೆ
ರೋಷವ ತೋರಿ.. ರಾವಣ ಅಳಿದ ಕ್ರೋಧವ ಕಾರಿ.. ಕೌರವ ಮಡಿದ
ನೀತಿ ಅನೀತಿ ಏನೆಂದು ಸಾರುವ ಒಳ್ಳೆಯ ಮಾರ್ಗ ಹಿಡಿಯುವ
ನೊಂದ ಬಾಳು ಸಾಕು, ಒಂದುಗೂಡ ಬೇಕು, ಆಗಲೇ ಹರುಷವು..
ಹಗೆತನ ನೀಗಿ ಬಾಳುವ ಗೆಳೆತನ ಬೆಳೆಸಿ ಸುಖ ಪಡುವ
ನೊಂದ ಬಾಳು ಸಾಕು ಒಂದುಗೂಡ ಬೇಕು
-----------------------------------------------------------------------------------------------------------------------

ಕೂಡಿ ಬಾಳಿದರೆ ಸ್ವರ್ಗ ಸುಖ (೧೯೮೧)....ಎಲ್ಲೇ ಇರಲಿ ಹಗಲು ಇರುಳು
ಸಾಹಿತ್ಯ : ಚಿ.ಉದಯಶಂಕರ್ ಸಂಗೀತ : ರಾಜನ್ - ನಾಗೇಂದ್ರ ಗಾಯನ : ಎಸ್.ಪಿ.ಬಾಲಸುಬ್ರಹ್ಮಣ್ಯಮ್, ಎಸ್.ಜಾನಕಿ

ಎಸ್.ಜಾನಕಿ: ಎಲ್ಲೇ ಇರಲಿ ಹಗಲು ಇರುಳು ನಿನ್ನ ನೆನಪೇ ಕಾಡೈತೆ
                  ಎಲ್ಲೇ ಇರಲಿ ಹಗಲು ಇರುಳು ನಿನ್ನ ನೆನಪೇ ಕಾಡೈತೆ
                 ಸೇರೋ ದಾರಿ ಕಾಣದೆ ಹೋಗಿ ಮನಸು ಅಳುತಾ ನೊಂದೈತೆ
ಎಸ್.ಪಿ.: ಎಲ್ಲೇ ಇರಲಿ ಹಗಲು ಇರುಳು ನಿನ್ನ ನೆನಪೇ ಕಾಡೈತೆ
             ಸೇರೋ ದಾರಿ ಕಾಣದೆ ಹೋಗಿ ಮನಸು ಅಳುತಾ ನೊಂದೈತೆ
            ಎಲ್ಲೇ ಇರಲಿ ಹಗಲು ಇರುಳು ನಿನ್ನ ನೆನಪೇ ಕಾಡೈತೆ

ಎಸ್.ಪಿ. : ಬಳೆಯಾ ಸದ್ದು ಬಂದಾಗ.. ಒಂಟಿ ಮಂಚ ಕಂಡಾಗ.. ನಿನ್ನ ಆಸೆ ನನಗಾಗ
ಎಸ್.ಜಾನಕಿ: ರಾತ್ರಿ ಮೂಡಿ ಬಂದಾಗ... ಗಾಳಿ ಚಳಿಯ ತಂದಾಗ.. ಏನೋ ನೋವು ನನಗಾಗ
ಎಸ್.ಪಿ.: ಸೇರಿ ನಿನ್ನ ಬಾಳೊ ಆಸೆ ದಾರಿ ಕಾಣೆ ನಾನೀಗ ಭಯವೂ ನಡೆಸಿತು ನನ್ನೀಗ
ಎಸ್.ಜಾನಕಿ: ಎಲ್ಲೇ ಇರಲಿ ಹಗಲು ಇರುಳು ನಿನ್ನ ನೆನಪೇ ಕಾಡೈತೆ
ಎಸ್.ಪಿ.: ಸೇರೋ ದಾರಿ ಕಾಣದೆ ಹೋಗಿ ಮನಸು ಅಳುತಾ ನೊಂದೈತೆ
ಎಸ್.ಜಾನಕಿ: ಎಲ್ಲೇ ಇರಲಿ ಹಗಲು ಇರುಳು ನಿನ್ನ ನೆನಪೇ ಕಾಡೈತೆ

ಎಸ್.ಜಾನಕಿ: ಹೊಳೆಯಾ ಕಡೆಗೇ ಹೋದಾಗ... ಜೋಡಿವೊoದ ಕಂಡಾಗ... ನಿನ್ನ ಚಿಂತೆ ನನಗಾಗ
ಎಸ್.ಪಿ.: ನಮ್ಮಾ ಊರೂ ಒಂದೇನೇ... ನಮ್ಮಾ ಮನಸೂ ಒಂದೇನೇ... ನಾವೂ ಮಾತ್ರ ದೂರಾನೇ
ಎಸ್.ಜಾನಕಿ: ನಿನ್ನ ಬಿಟ್ಟು ದೂರ ಹೋಗಿ ಅತ್ತು ಅತ್ತು ಸಾಕಾದೆ ನೀರ ಬಿಟ್ಟ ಮೀನಾದೆ
ಎಸ್.ಪಿ.: ಎಲ್ಲೇ ಇರಲಿ ಹಗಲು ಇರುಳು ನಿನ್ನ ನೆನಪೇ ಕಾಡೈತೆ
ಎಸ್.ಜಾನಕಿ: ಸೇರೋ ದಾರಿ ಕಾಣದೆ ಹೋಗಿ ಮನಸು ಅಳುತಾ ನೊಂದೈತೆ
ಎಸ್.ಪಿ.: ಎಲ್ಲೇ ಇರಲಿ ಹಗಲು ಇರುಳು ನಿನ್ನ ನೆನಪೇ ಕಾಡೈತೆ
ಎಸ್.ಜಾನಕಿ: ನಿನ್ನ ನೆನಪೇ ಕಾಡೈತೆ
ಎಸ್.ಪಿ.: ನಿನ್ನ ನೆನಪೇ ಕಾಡೈತೆ
ಎಸ್.ಜಾನಕಿ: ನಿನ್ನ ನೆನಪೇ ಕಾಡೈತೆ
--------------------------------------------------------------------------------------------------------------------------

ಕೂಡಿ ಬಾಳಿದರೆ ಸ್ವರ್ಗ ಸುಖ (1981) - ನೊಂದ ಬಾಳು ಸಾಕು ಒಂದು ಗೂಡಬೇಕು ಆಗಲೇ ಹರುಷವು 
ಸಾಹಿತ್ಯ: ದೊಡ್ಡರಂಗೇ ಗೌಡ ಸಂಗೀತ: ರಾಜನ್-ನಾಗೇಂದ್ರ ಹಾಡಿದವರು: ಎಸ್.ಪಿ.ಬಿ., ಎಸ್.ಜಾನಕಿ

--------------------------------------------------------------------------------------------------------------------------

No comments:

Post a Comment