476. ಮುಗ್ಧ ಮಾನವ (1977)




ಮುಗ್ಧ ಮಾನವ ಚಲನಚಿತ್ರದ ಹಾಡುಗಳು
  1. ನಗುವೇ ಸ್ನೇಹದ ಹಾಡು
  2. ತಪ್ಪಂತೆ ಸರಿಯಂತೆ ಏಕೆ ಹೀಗಂತೆ
  3. ಹಾಲಿನ ಬಟ್ಟಲಲೀ ಹುಳಿಯೂ ಬೆರೆಯಿತೇ 
  4. ಮನೆ ಮನೆ ತುಂಬಾ
  5. ನೀ ಇಡುವಾ ಹೊಸ ಹೆಜ್ಜೇ 
ಮುಗ್ಧ ಮಾನವ (1977) - ನಗುವೇ ಸ್ನೇಹದ ಹಾಡು
ಸಾಹಿತ್ಯ: ಚಿ.ಉದಯಶಂಕರ್ ಸಂಗೀತ: ವಿಜಯಭಾಸ್ಕರ್ ಹಾಡಿದವರು: ಎಸ್.ಪಿ.ಬಿ


ನಗುವೇ ಸ್ನೇಹದ ಹಾಡು ಮಗುವೇ ತಾಯಿಯ ಹಾಡು
ನಗುವೇ ಸ್ನೇಹದ ಹಾಡು  ಮಗುವೇ ತಾಯಿಯ ಹಾಡು
ನಗುತಿರೆ ಪನ್ನೀರು  ಅಳುತಿರೆ ಕಣ್ಣೀರು
ಪ್ರೀತಿಯೆ ಈ ಮನೆಯ ಹಾಡು ಹಾಡು
ನಗುವೇ ಸ್ನೇಹದ ಹಾಡು  ಮಗುವೇ ತಾಯಿಯ ಹಾಡು

ಹಗಲೇ ಸೂರ್ಯನ ಹಾಡು  ಇರುಳೇ ಚಂದ್ರನ ಹಾಡು
ಹಗಲೇ ಸೂರ್ಯನ ಹಾಡು  ಇರುಳೇ ಚಂದ್ರನ ಹಾಡು
ಹಗಲು ಇರುಳು, ಓಡುತಲಿರಲು
ಎಂದೂ ಮುಗಿಯದ, ಕಾಲದ ಹಾಡು
ನಗುವೇ ಸ್ನೇಹದ ಹಾಡು  ಮಗುವೇ ತಾಯಿಯ ಹಾಡು

ಶಾಂತಿ ಸಹನೆಯ ಹಾಡು  ನೀತಿ ಬದುಕಿನ ಹಾಡು
ಶಾಂತಿ ಸಹನೆಯ ಹಾಡು  ನೀತಿ ಬದುಕಿನ ಹಾಡು
ಶಾಂತಿ ನೀತಿಯ, ಅರಿತು ಗಳಿಸುವ
ಎಂದೂ ಸೋಲದ, ಗೆಲುವಿನ ಹಾಡು
ನಗುವೇ ಸ್ನೇಹದ ಹಾಡು  ಮಗುವೇ ತಾಯಿಯ ಹಾಡು
ನಗುತಿರೆ ಪನ್ನೀರು  ಅಳುತಿರೆ ಕಣ್ಣೀರು
ಪ್ರೀತಿಯೆ ಈ ಮನೆಯ ಹಾಡು ಹಾಡು
ನಗುವೇ ಸ್ನೇಹದ ಹಾಡು  ಮಗುವೇ ತಾಯಿಯ ಹಾಡು
------------------------------------------------------------------------------------------------------------------------

ಮುಗ್ಧ ಮಾನವ (1977) - ತಪ್ಪಂತೆ ಸರಿಯಂತೆ ಏಕೆ ಹೀಗಂತೆ
ಸಾಹಿತ್ಯ: ಆರ್.ಎನ್.ಜಯಗೋಪಾಲ್ ಸಂಗೀತ: ವಿಜಯಭಾಸ್ಕರ್ ಹಾಡಿದವರು: ಎಸ್.ಪಿ.ಬಿ

ತಪ್ಪಂತೆ ಸರಿಯಂತೆ ಏಕೆ ಹೀಗಂತೆ
ನನ್ನ ನಾನೆ ಕೇಳಿಕೊಂಡೆ ಬೇಕೆ ಈ ಚಿಂತೆ, ಬೇಕೆ ಈ ಚಿಂತೆ
ತಪ್ಪಂತೆ ಸರಿಯಂತೆ ಏಕೆ ಹೀಗಂತೆ
ನನ್ನ ನಾನೆ ಕೇಳಿಕೊಂಡೆ ಬೇಕೆ ಈ ಚಿಂತೆ, ಬೇಕೆ ಈ ಚಿಂತೆ

ದುಂಬಿ ಹೂವನು ಚುಂಬಿಸಿದಾಗ ತಪ್ಪಿಲ್ಲವಂತೆ
ಬಳ್ಳಿ ಮರವ ಅಪ್ಪಿಕೊಂಡರೆ ತಪ್ಪಿಲ್ಲವಂತೆ
ದುಂಬಿ ಹೂವನು ಚುಂಬಿಸಿದಾಗ ತಪ್ಪಿಲ್ಲವಂತೆ
ಬಳ್ಳಿ ಮರವ ಅಪ್ಪಿಕೊಂಡರೆ ತಪ್ಪಿಲ್ಲವಂತೆ
ಹಕ್ಕಿ ಹಕ್ಕಿಗೆ ಮುತ್ತಿಕ್ಕಿದರೆ ಅದುವೂ ಸರಿಯಂತೆ
ಹಕ್ಕಿ ಹಕ್ಕಿಗೆ ಮುತ್ತಿಕ್ಕಿದರೆ ಅದುವೂ ಸರಿಯಂತೆ
ನಾನು ಇತ್ತ ಮೆಚ್ಚಿಗೆ ಮುತ್ತು ತಪ್ಪು ತಪ್ಪು ತಪ್ಪು
ತಪ್ಪಂತೆ ಸರಿಯಂತೆ ಬೇಕೆ ಹೀಗಂತೆ   ನನ್ನ ನಾನೆ ಕೇಳಿಕೊಂಡೆ ಬೇಕೆ ಈ ಚಿಂತೆ, ಬೇಕೆ ಈ ಚಿಂತೆ

ಆಕಾಶವದು ತನ್ನೆಡೆ ಬಾಗಲು ಭೂಮಿ ನಾಚೊಲ್ಲ
ಸಾಗರದಲ್ಲಿ ನದಿಯು ಸೇರಲು ಯಾರೂ ತಡೆಯೊಲ್ಲ
ಆಕಾಶವದು ತನ್ನೆಡೆ ಬಾಗಲು ಭೂಮಿ ನಾಚೊಲ್ಲ
ಸಾಗರದಲ್ಲಿ ನದಿಯು ಸೇರಲು ಯಾರೂ ತಡೆಯೊಲ್ಲ
ಚಂದ್ರನ ನೆರಳು ಸೂರ್ಯನ ಮೇಲೆ ಬಿದ್ದರು ತಪ್ಪಿಲ್ಲ
ಚಂದ್ರನ ನೆರಳು ಸೂರ್ಯನ ಮೇಲೆ ಬಿದ್ದರು ತಪ್ಪಿಲ್ಲ
ನಾನು ಇತ್ತ ಮೆಚ್ಚಿಗೆ ಮುತ್ತು ತಪ್ಪು ತಪ್ಪು ತಪ್ಪು
ತಪ್ಪಂತೆ ಸರಿಯಂತೆ ಏಕೆ ಹೀಗಂತೆ  ನನ್ನ ನಾನೆ ಕೇಳಿಕೊಂಡೆ ಬೇಕೆ ಈ ಚಿಂತೆ, ಬೇಕೆ ಈ ಚಿಂತೆ
--------------------------------------------------------------------------------------------------------------

ಮುಗ್ಧ ಮಾನವ (1977) - ಹಾಲಿನ ಬಟ್ಟಲಲೀ ಹುಳಿಯೂ ಬೆರೆಯಿತೇ 
ಸಾಹಿತ್ಯ: ಆರ್.ಎನ್.ಜಯಗೋಪಾಲ್ ಸಂಗೀತ: ವಿಜಯಭಾಸ್ಕರ್ ಹಾಡಿದವರು: ರವಿ

ಹಾಲಿನ ಬಟ್ಟಲಲೀ ಹುಳಿಯೂ ಬೆರೆಯಿತೇ 
ಹಾಲಿನ ಬಟ್ಟಲಲೀ ಹುಳಿಯೂ ಬೆರೆಯಿತೇ 
ಪೂಜಿಸೋ ದೈವವೇ.. ಕುಣಿದು ತೊರೆಯಿತೇ 
ಹಾಲಿನ ಬಟ್ಟಲಲೀ ಹುಳಿಯೂ ಬೆರೆಯಿತೇ 

ನಾಲ್ಕೂ ಕಂಬ ನಾಲ್ಕೂ ಮೂಲೇ ... ಆದರೂ ಮನೆಗೇ ಆಧಾರ 
ನಾಲ್ಕೂ ಕಂಬ ನಾಲ್ಕೂ ಮೂಲೇ  ಆದರೂ ಮನೆಗೇ ಆಧಾರ 
ಜೀವ ಜೀವ ಹೋಗದು ದೂರ ಬಯ್ಯದು ಮಮತೆಯ ಮಮಕಾರ 
ಹಾಲಿನ ಬಟ್ಟಲಲೀ ಹುಳಿಯೂ ಬೆರೆಯಿತೇ 

ನಾನು ನನ್ನದೂ ನನ್ನವರೆಂಬುದ.... ತೊರೆಯನ್ನುವದೂ ವೇದಾಂತ     
ನಾನು ನನ್ನದೂ ನನ್ನವರೆಂಬುದ.... ತೊರೆಯನ್ನುವದೂ ವೇದಾಂತ     
ಪ್ರೇಮಪಾಶ ಬಿಡದು ನಮ್ಮ ಹೃದಯ ಮಿಡಿವ ಭಯಂತ 
ಹಾಲಿನ ಬಟ್ಟಲಲೀ ಹುಳಿಯೂ ಬೆರೆಯಿತೇ 

ಹಕ್ಕಿಗೂಡದು ಒಡೆದಿದೆ ಇಂದೂ.. ಆವದು ಮನುಜನ ವೇಷದಲೀ
ಹಕ್ಕಿಗೂಡದು ಒಡೆದಿದೆ ಇಂದೂ.. ಆವದು ಮನುಜನ ವೇಷದಲೀ
ವಾತ್ಸಲ್ಯವಿಲ್ಲಿ ಒಲುಮೆಯೂ ಅಲ್ಲೀ .. ಕರೆದಿದೇ ಹೆಣ್ಣಿನ ರೂಪದಲಿ 
ಹಾಲಿನ ಬಟ್ಟಲಲೀ ಹುಳಿಯೂ ಬೆರೆಯಿತೇ 
ಪೂಜಿಸೋ ದೈವವೇ.. ಕುಣಿದು ತೊರೆಯಿತೇ 
ಹಾಲಿನ ಬಟ್ಟಲಲೀ ಹುಳಿಯೂ ಬೆರೆಯಿತೇ 
--------------------------------------------------------------------------------------------------------------

ಮುಗ್ಧ ಮಾನವ (1977) - ಮನೆ ಮನೆ ತುಂಬಾ 
ಸಾಹಿತ್ಯ : ಎಂ.ನರೇಂದ್ರ ಬಾಬು ಸಂಗೀತ: ವಿಜಯಭಾಸ್ಕರ್ ಹಾಡಿದವರು: ಪಿ.ಬಿ.ಎಸ್, ಬಿ.ಕೆ.ಸುಮಿತ್ರಾ

ಈ ಹಾಡಿನ ಸಾಹಿತ್ಯ ಲಭ್ಯವಿರುವುದಿಲ್ಲಾ ... 
--------------------------------------------------------------------------------------------------------------

ಮುಗ್ಧ ಮಾನವ (1977) - ನೀ ಇಡುವಾ ಹೊಸ ಹೆಜ್ಜೇ 
ಸಾಹಿತ್ಯ : ಎಂ.ನರೇಂದ್ರ ಬಾಬು ಸಂಗೀತ: ವಿಜಯಭಾಸ್ಕರ್ ಹಾಡಿದವರು: ಪಿ.ಸುಶೀಲಾ 

ನೀ ಇಡುವ ಹೊಸ ಹೆಜ್ಜೇ ನನ್ನದಾಗಲೀ 
ನಿನ್ನೊಡನೇ ನಾ ಬರುವೇ ಬಾಳಪಯಣದಲೀ    
ನೀ ಇಡುವ ಹೊಸ ಹೆಜ್ಜೇ ನನ್ನದಾಗಲೀ 

ಹಗಲೇ ಇರಲೀ ಇರುಳೇ ಬರಲೀ ಕಾಲವ ಮರೆತೂ ನಡೆಯುವಾ 
ಹಗಲೇ ಇರಲೀ ಇರುಳೇ ಬರಲೀ ಕಾಲವ ಮರೆತೂ ನಡೆಯುವಾ 
ಮನೆಯೇ ಇರಲೀ ಗಿರಿಯೇ ಸಿಗಲೀ ನದಿಯ ಹಾಗೇ ಸಾಗುವಾ.. 
ಸ್ವರ್ಗಕೇನೂ ಕಡಿಮೇ ಇಲ್ಲಾ ಭೂಮಿ ಎಂದೂ ಆಡುವಾ 
ನೀ ಇಡುವ ಹೊಸ ಹೆಜ್ಜೇ ನನ್ನದಾಗಲೀ 

ಸಲಿಗೆಯಿಂದ ಹೃದಯದಲ್ಲಿ ಬಯಕೆ ಎಂಥ ತುಂಬಿದೆ 
ಸಲಿಗೆಯಿಂದ ಹೃದಯದಲ್ಲಿ ಬಯಕೆ ಎಂಥ ತುಂಬಿದೆ 
ಮುಗ್ದ ಮನದ ಆಸೇ ನಿನ್ನ ಮರಳು ಮಾಡಿ ಕಾಡಿದೇ 
ಕಂಗಳಿಂದ ಮೌನವಾಗಿ ಕರೆಯೇ ಗೀತೆ ಹಾಡಿದೇ 
ನೀ ಇಡುವ ಹೊಸ ಹೆಜ್ಜೇ ನನ್ನದಾಗಲೀ 
ನಿನ್ನೊಡನೇ ನಾ ಬರುವೇ ಬಾಳಪಯಣದಲೀ    
--------------------------------------------------------------------------------------------------------------

No comments:

Post a Comment