477. ಪೆದ್ದ ಗೆದ್ದ (1982)

ಪೆದ್ದ ಗೆದ್ದ ಚಿತ್ರದ ಹಾಡುಗಳು 
  1. ನಗುವುದನು ಕಲಿತವನೆ ಬಾಳುವುದ ಅರಿತವನು
  2. ಬೇರೆ ಆಸೇ ಏಕೆ 
  3. ಹುಟ್ಟಿದ ಹಬ್ಬ ಬಂದಾಯ್ತು  ಚಿರೋಟಿ ಲಾಡು ತಿಂದಾಯ್ತು
  4. ಅರಿವನು ಕೊಡುವಳು ಹೆಣ್ಣು 
  5. ಈ ಪೆದ್ದ ಗೆದ್ದ 
  6. ಸ್ವಾಗತ ಸುಸ್ವಾಗತ 
ಪೆದ್ದ ಗೆದ್ದ (1982) - ನಗುವುದನು ಕಲಿತವನೆ ಬಾಳುವುದ ಅರಿತವನು
ಸಾಹಿತ್ಯ: ಚಿ.ಉದಯಶಂಕರ್ ಸಂಗೀತ: ಕೆ.ವಿ.ಮಹದೇವನ್ ಹಾಡಿದವರು: ಎಸ್.ಪಿ.ಬಿ. ಕೋರಸ್ 

ಗಂಡು : ಲಲಲಲಲಲ್ಲಲಲಾ ಆಹಹ್ಹಹ್ಹ  ಲಲಲಲಲಲ್ಲಲಲಾಲ ಅಹ್ಹಹ್ಹಹ್ಹಾ ಲಲಲಲಲ್ಲಲಲಾ ಅಹ್ಹಹ್ಹಹ್ಹಾ 
            ನಗುವುದನು (ಆಆಆ ) ಕಲಿತವನೆ (ಆಆಆ ) ಬಾಳುವುದ (ಆಆಆ ) ಅರಿತವನು
            ಎಲ್ಲರ ಮನವ ಸೆಳೆಯುವ ಹಾಗೆ ನೋಡುವ ಆಸೆಯು ಮೂಡುವ ಹಾಗೆ
            ನಗುವುದನು ಕಲಿತವನೇ... ಬಾಳುವುದ ಅರಿತವನು
ಕೋರಸ್ : ಆ ಆ ಆ ಲಾಲಲಲಲ ಆ ಆ ಆ ಲಾಲಲಲಲ ಆ ಆ ಆ ಲಾಲಲಲಲ
              ಆ ಆ ಆ (ಲಾಲಲಲಲ) ಆ ಆ ಆ (ಲಾಲಲಲಲ) ಆ ಆ ಆ (ಲಾಲಲಲಲ)

ಗಂಡು : ಬಾಲ್ಯವು ಒಂದು ದಿನ ನಿದ್ರೆಗೆ ಒಂದು ದಿನ
            ಮುದಿತನ ಒಂದು ದಿನ ಬದುಕೇ ಮೂರು ದಿನ
            ಬಾಲ್ಯವು ಒಂದು ದಿನ ನಿದ್ರೆಗೆ ಒಂದು ದಿನ
           ಮುದಿತನ ಒಂದು ದಿನ ಬದುಕೇ ಮೂರು ದಿನ
           ಈ ಮೂರೇ ದಿನದ ಜೀವನದಲ್ಲಿ ನಗಿಸುತ ಎಲ್ಲರ ಹಾಯಾಗಿ
          ನಗುವುದನು ಕಲಿತವನೆ ಬಾಳುವುದ ಅರಿತವನು
ಕೋರಸ್ : ಹೂಂಹೂಂಹೂಂಹೂಂ 

ಗಂಡು : ಲಲಲಲಲಲ ಲಲಲಲಲಲ ಲಲಲಲಲಲ 
           ಪ್ರಾಣಿ ಪಕ್ಷಿಗಳು ನಗುವುದು ಅರಿತಿಲ್ಲ  ಮಾನವನೋರ್ವನೆ ನಗುವುದನು ಬಲ್ಲ
            ಪ್ರಾಣಿ ಪಕ್ಷಿಗಳು ನಗುವುದು ಅರಿತಿಲ್ಲ ಮಾನವನೋರ್ವನೆ ನಗುವುದನು ಬಲ್ಲ
           ನಗುವುದೆ ಜನನ ಅಳುವುದೆ ಮರಣ ನಗುವುದೆ ಸುಖಕೆ ಸಾಧನ
            ನಗುವುದನು (ಆಆಆ ) ಕಲಿತವನೆ (ಆಆಆ ) ಬಾಳುವುದ  ಅರಿತವನು
           ಎಲ್ಲರ ಮನವ ಸೆಳೆಯುವ ಹಾಗೆ ನೋಡುವ ಆಸೆಯು ಮೂಡುವ ಹಾಗೆ
           ನಗುವುದನು (ಆಆಆ ) ಕಲಿತವನೆ (ಆಆಆ ) ಬಾಳುವುದ (ಆಆಆ ) ಅರಿತವನು
           ಲಲಲಲಲಾ  ಲಲಲಲಲಾ  ಆಆಆ 
-------------------------------------------------------------------------------------------------------------------------

ಪೆದ್ದ ಗೆದ್ದ (1982) - ಬೇರೆ ಆಸೇ ಏಕೆ
ಸಾಹಿತ್ಯ: ಚಿ.ಉದಯಶಂಕರ್ ಸಂಗೀತ: ಕೆ.ವಿ.ಮಹದೇವನ್ ಹಾಡಿದವರು: ಎಸ್.ಜಾನಕೀ

ಬೇರೆ ಆಸೇ ಏಕೇ ಈ ಹೆಣ್ಣು ಬಳಿ ಇರುವಾಗ ಬೇರೆ ದೀಪ ಏಕೇ ಈ ಕಣ್ಣ ಬೆಳಕಿರುವಾಗ
ಬೇರೆ ಆಸೇ ಏಕೇ ಈ ಹೆಣ್ಣು ಬಳಿ ಇರುವಾಗ ಬೇರೆ ದೀಪ ಏಕೇ ಈ ಕಣ್ಣ ಬೆಳಕಿರುವಾಗ
ಟಡಟಟಟಾಡಾ  ಟಡಟಟಟಾಡಾ  ಟಡಟಟಟಾಡಾ  ಟಡಟಟಟ
ಟಡಟಟಟಾಡಾ  ಟಡಟಟಟಾಡಾ  ಅಹ್ಹಹ್ಹ.. ಟಡಟಟಟಾಡಾ  ಟಡಟಟಟ

ನಾ ನಿನ್ನ ಕಂಡಾಯ್ತು ಒಲವನ್ನು ಪಡೆದಾಯ್ತು ಬಂಗಾರ ಇನ್ನೇತಕೇ ಹಣದಾಸೆ ನನಗೇತಕೆ
ನಾ ನಿನ್ನ ಕಂಡಾಯ್ತು ಒಲವನ್ನು ಪಡೆದಾಯ್ತು ಬಂಗಾರ ಇನ್ನೇತಕೇ ಹಣದಾಸೆ ನನಗೇತಕೆ
ಈ ದೇಹ ನೀನಗಾಗಿ ಈ ಜೀವ ನಿನಗಾಗಿ... ನನ್ನಾಣೆ ಈ ಹೆಣ್ಣು ಎಂದೆಂದೂ ನೀನಗಾಗಿ
ಆನಂದ ಕೊಡಲೆಂದೇ ನಾನಿಲ್ಲಿರುವಾಗ
ಬೇರೆ ಆಸೇ ಏಕೇ ಈ ಹೆಣ್ಣು ಬಳಿ ಇರುವಾಗ ಬೇರೆ ದೀಪ ಏಕೇ ಈ ಕಣ್ಣ ಬೆಳಕಿರುವಾಗ
ಟಡಟಟಟಾಡಾ  ಟಡಟಟಟಾಡಾ  ಟಡಟಟಟಾಡಾ  ಟಡಟಟಟ
ಲಲಲಲರಲಲಲ ಲಲಲಲರಲಲಲ ಲಲಲಲರಲಲಲ ಲಲಲಲರಲಲಲ
ಅಅಅಅಅಅ  ಅಅಅಅಅಅ  ಅಅಅಅಅಅ  ಅಅಅಅಅಅ  ಅಅಅಅಅಅ

ಹಗಲಲ್ಲಿ ಹಾಡೋಣ ಸಂಜೇಲಿ ನಲಿಯೋಣ ಇರುಳಲ್ಲಿ ಜೊತೆಯಾಗಿ... ಸೇರೋಣ ಹೀತವಾಗಿ ...
ಹಗಲಲ್ಲಿ ಹಾಡೋಣ ಸಂಜೇಲಿ ನಲಿಯೋಣ ಇರುಳಲ್ಲಿ ಜೊತೆಯಾಗಿ... ಸೇರೋಣ ಹೀತವಾಗಿ ...
ನಾ ಕಂಡ ಸವಿಯಾದ ಕನಸೆಲ್ಲಾ ನಿಜವಾಗಿ... ಸಿಹಿಜೇನ ಕಡಲಲ್ಲಿ ತೇಲಾಡೋ ನೀನಾಗಿ..
ಸಂತೋಷ ತರಲೆಂದೇ ನೀ  ನನ್ನ ಕರೆದಾಗ
ಬೇರೆ ಆಸೇ ಏಕೇ ಈ ಹೆಣ್ಣು ಬಳಿ ಇರುವಾಗ ಬೇರೆ ದೀಪ ಏಕೇ ಈ ಕಣ್ಣ ಬೆಳಕಿರುವಾಗ
ಟಡಟಟಟಾಡಾ  ಟಡಟಟಟ ಟಡಟಟಟಾಡಾ  ಟಡಟಟಟ
ತೂರುತ್ತುತ್ತೂ  ತೂರುತ್ತುತ್ತೂ  ತೂರುತ್ತುತ್ತೂ  ತೂರುತ್ತುತ್ತೂರು
--------------------------------------------------------------------------------------------------------------------------

ಪೆದ್ದ ಗೆದ್ದ (1982) - ಹುಟ್ಟಿದ ಹಬ್ಬ ಬಂದಾಯ್ತು  ಚಿರೋಟಿ ಲಾಡು ತಿಂದಾಯ್ತು
ಸಾಹಿತ್ಯ: ಚಿ.ಉದಯಶಂಕರ್ ಸಂಗೀತ: ಕೆ.ವಿ.ಮಹದೇವನ್ ಹಾಡಿದವರು: ಎಸ್.ಪಿ.ಬಿ. ಕೋರಸ್, ಕೋರಸ್ 

ಕೋರಸ್ : ಲಾಲಲಲಾ ಲಾಲಲಲಾ  ಲಾಲಲ  ಲಾಲಲಲಾ  ಲಾಲಲ ಲಾಲಲಲಾ
ಗಂಡು : ಬಬ್ಬಬ ಬಬ್ಬಬ ಹುಟ್ಟಿದ ಹಬ್ಬ ಬಬ್ಬಬ
ಕೋರಸ್  : ಬಬ್ಬಬ ಬಬ್ಬಬ ಹುಟ್ಟಿದ ಹಬ್ಬ ಬಬ್ಬಬ
ಗಂಡು : ಹುಟ್ಟಿದ ಹಬ್ಬ ಬಂದಾಯ್ತು  ಚಿರೋಟಿ ಲಾಡು ತಿಂದಾಯ್ತು
            ಹುಟ್ಟಿದ ಹಬ್ಬ ಬಂದಾಯ್ತು  ಚಿರೋಟಿ ಲಾಡು ತಿಂದಾಯ್ತು
            ಗಟಗಟನೆ ನೀರೂ ಕುಡಿದಾಯ್ತು ಹೊಟ್ಟೆಯ ಭಾರ ಬಲು ಹೆಚ್ಚಾಗಿ
            ಏವ್ ಎಂದೂ ತೇಗಾಯ್ತು ಹೇ.. ಏವ್ ಎಂದೂ ತೇಗಾಯ್ತು
            ಹುಟ್ಟಿದ ಹಬ್ಬ ಬಂದಾಯ್ತು  ಚಿರೋಟಿ ಲಾಡು ತಿಂದಾಯ್ತು
            ಗಟಗಟನೆ ನೀರೂ ಕುಡಿದಾಯ್ತು ಹೊಟ್ಟೆಯ ಭಾರ ಬಲು ಹೆಚ್ಚಾಗಿ
            ಏವ್ ಎಂದೂ ತೇಗಾಯ್ತು ಹೇ.. ಏವ್ ಎಂದೂ ತೇಗಾಯ್ತು
ಕೋರಸ್  : ಬಬ್ಬಬ ಬಬ್ಬಬ ಹುಟ್ಟಿದ ಹಬ್ಬ ಬಬ್ಬಬ (ಹ್ಹಾ)..  ಬಬ್ಬಬ ಬಬ್ಬಬ ಹುಟ್ಟಿದ ಹಬ್ಬ ಬಬ್ಬಬ

ಗಂಡು : ಲಲಲಲ್ಲಲಲ್ಲಾ .. ಅಪ್ಪಯ ಕಂಡರೇ ಇಷ್ಟ ಮಾವನ ಕಂಡರೇ ಕಷ್ಟ
           ಅಯ್ಯಯ್ಯಯ್ಯೋ  ಈ  ಮಾವನ ಮಗನು ಸತ್ತರೇ ಯಾರಿಗೇ ನಷ್ಟ
ಕೋರಸ್ : ಸತ್ತರೇ ಯಾರಿಗೇ ನಷ್ಟ
ಗಂಡು : ಅತ್ತೆಯ ಕಂಡರೇ ಇಷ್ಟ ಮಾವನ ಕಂಡರೇ ಕಷ್ಟ
           ಅಯ್ಯಯ್ಯಯ್ಯೋ  ಈ  ಮಾವನ ಮಗನು ಸತ್ತರೇ ಯಾರಿಗೇ ನಷ್ಟ.. ಸತ್ತರೇ ಯಾರಿಗೇ ನಷ್ಟ
ಕೋರಸ್  : ಬಬ್ಬಬ ಬಬ್ಬಬ ಹುಟ್ಟಿದ ಹಬ್ಬ ಬಬ್ಬಬ (ಹ್ಹಾ)..  (ಬಬ್ಬಬ) ಬಬ್ಬಬ ಬಬ್ಬಬ ಹುಟ್ಟಿದ ಹಬ್ಬ (ಬಬ್ಬಬ)

 ಗಂಡು : ನಾನೂ ದೊಡ್ಡವನಾಗುವೆನೂ.. ಮೀಸೆ ತಿರುವಿ ನಡೆಯುವೇನು
            ಅಹ್ಹಹ್ಹ..  ನಾನೂ ದೊಡ್ಡವನಾಗುವೆನೂ.. ಮೀಸೆ ತಿರುವಿ ನಡೆಯುವೇನು
            ನಾನಾಗ ಈ ಬೆತ್ತವ ಹಿಡಿದು ಜೋರಾಗ ಎಲ್ಲರ ಗದರುವೇನು
            ನಾನಾಗ ಈ ಬೆತ್ತವ ಹಿಡಿದು ಜೋರಾಗ ಎಲ್ಲರ ಗದರುವೇನು
ಎಲ್ಲರು : ಬಬ್ಬಬ ಬಬ್ಬಬ ಹುಟ್ಟಿದ ಹಬ್ಬ ಬಬ್ಬಬ (ಹ್ಹಾ)..  (ಬಬ್ಬಬ) ಬಬ್ಬಬ ಬಬ್ಬಬ ಹುಟ್ಟಿದ ಹಬ್ಬ (ಬಬ್ಬಬ)

ಗಂಡು : ಅಯ್ಯೋ ನನ್ನ ನಾಯಿಮರೀ ತಿನ್ನುವೆಯೇನೋ ಕಡಲೇಪುರಿ
            ಅಯ್ಯೋ ನನ್ನ ನಾಯಿಮರೀ ತಿನ್ನುವೆಯೇನೋ ಕಡಲೇಪುರಿ
            ಐಸ್ ಕ್ರೀಮೂನ ಕೊಡುವೇ ನಿನಗೇ ಬೌ (ಬೌ) ಬೌ (ಬೌ) ಬೌ (ಬೌ)
            ಐಸ್ ಕ್ರೀಮೂನ ಕೊಡುವೇ ನಿನಗೇ ಬೌ ಬೌ ಬೌ ಬೌ ಏನದಿರು ಜಾಣಮರಿ
           ಬೌ ಬೌ ಬೌ ಬೌ ಏನದಿರು ಜಾಣಮರಿ  ಐಸ್ ಕ್ರೀಮ ಐಸ್ ಕ್ರೀಮ ಐಸ್ ಕ್ರೀಮ ಐಸ್ ಕ್ರೀಮ
           ಐಸ್ ಕ್ರೀಮ ಐಸ್ ಕ್ರೀಮ ಐಸ್ ಕ್ರೀಮ ಕುಡತ್ಯಾಕು  ಕುಡತ್ಯಾಕು ಐಸ್ ಕ್ರೀಮ  
 ಎಲ್ಲರು : ಕುಡತ್ಯಾಕು  ಕುಡತ್ಯಾಕು ಐಸ್ ಕ್ರೀಮ ಕುಡತ್ಯಾಕು  ಕುಡತ್ಯಾಕು ಕುಡತ್ಯಾಕು  ಕುಡತ್ಯಾಕು
-------------------------------------------------------------------------------------------------------------------------

ಪೆದ್ದ ಗೆದ್ದ (1982) - ಅರಿವನು ಕೊಡುವಳು ಹೆಣ್ಣು
ಸಾಹಿತ್ಯ: ಚಿ.ಉದಯಶಂಕರ್ ಸಂಗೀತ: ಕೆ.ವಿ.ಮಹದೇವನ್ ಹಾಡಿದವರು: ಎಸ್.ಪಿ.ಬಿ. ಎಸ್.ಜಾನಕೀ

ಗಂಡು : ಅರಿವನು ಕೊಡುವಳು ಹೆಣ್ಣು ಸಿರಿಯನು ಕೊಡುವಳು ಹೆಣ್ಣು
ಹೆಣ್ಣು : ಶಕ್ತಿಯ ಕೊಡುವಳು ಹೆಣ್ಣು ಹೆಣ್ಣೇ ಬಾಳಿನ ಕಣ್ಣೂ
ಗಂಡು : ಅರಿವನು ಕೊಡುವಳು ಹೆಣ್ಣು ಸಿರಿಯನು ಕೊಡುವಳು ಹೆಣ್ಣು
ಹೆಣ್ಣು : ಶಕ್ತಿಯ ಕೊಡುವಳು ಹೆಣ್ಣು ಹೆಣ್ಣೇ ಬಾಳಿನ ಕಣ್ಣೂ

ಹೆಣ್ಣು : ದಾಸಿಯ ಹಾಗೇ ಸೇವೆಯ ಮಾಡಿ ನೆಮ್ಮದಿ ನೀಡುವಳೂ
ಗಂಡು : ಮಂತ್ರಿಯ ಹಾಗೇ ಸಮಯಕೆ ತಕ್ಕ ಬುದ್ಧಿಯ ಹೇಳುವಳೂ ..ಆಹಾ
ಹೆಣ್ಣು : ದಾಸಿಯ ಹಾಗೇ ಸೇವೆಯ ಮಾಡಿ ನೆಮ್ಮದಿ ನೀಡುವಳೂ
ಗಂಡು : ಮಂತ್ರಿಯ ಹಾಗೇ ಸಮಯಕೆ ತಕ್ಕ ಬುದ್ಧಿಯ ಹೇಳುವಳೂ...  ಆಆಆ
ಹೆಣ್ಣು : ಲಕ್ಷ್ಮಿಯ ಹಾಗೇ ಸೌಂದರ್ಯದಲ್ಲಿ ಮನೆಯನು ಬೆಳಗುವಳೂ
ಗಂಡು : ಸಹನೆಯ ತೋರಿ ಭೂಮಿಯ ಹಾಗೇ
ಹೆಣ್ಣು : ಅಕ್ಕರೇ ತೋರಿ ಅಮ್ಮನ ಹಾಗೇ
ಇಬ್ಬರು : ಜೊತೆಯಲಿ ನಡೆದೂ ನೆರಳಿನ ಹಾಗೇ ಸುಖವನು ನೀಡುವಳೂ
ಹೆಣ್ಣು : ಅರಿವನು ಕೊಡುವಳು ಹೆಣ್ಣು ಸಿರಿಯನು ಕೊಡುವಳು ಹೆಣ್ಣು
ಗಂಡು : ಶಕ್ತಿಯ ಕೊಡುವಳು ಹೆಣ್ಣು ಹೆಣ್ಣೇ ಬಾಳಿನ ಕಣ್ಣೂ

ಗಂಡು : ಕಡಲಿನ ಆಳಕೆ ಹೋದರೇ ತಾನೇ ರತ್ನವೂ ದೊರಕುವುದೂ .....
ಹೆಣ್ಣು :  ಬೆಂಕಿಯ ಉರಿಯಲಿ ಬೆಂದರೇ ತಾನೇ ಚಿನ್ನವೂ ಹೊಳೆಯುವುದೂ
ಗಂಡು : ಕಡಲಿನ ಆಳಕೆ ಹೋದರೇ ತಾನೇ ರತ್ನವೂ ದೊರಕುವುದೂ .....
ಹೆಣ್ಣು :  ಬೆಂಕಿಯ ಉರಿಯಲಿ ಬೆಂದರೇ ತಾನೇ ಚಿನ್ನವೂ ಹೊಳೆಯುವುದೂ
ಗಂಡು : ಕಲ್ಲಿಗೆ ಉಳಿಯಲೇ ಹೊಡೆದರೇ ತಾನೇ ಅಂದವೂ ಮೂಡುವುದೂ ....
ಹೆಣ್ಣು : ನಿಲ್ಲದ ನಡೆಯೂ ಓಡುವ ಹಾಗೇ
ಗಂಡು : ಋಷಿಗಳು ಧ್ಯಾನ ಮಾಡುವ ಹಾಗೇ
ಇಬ್ಬರು : ಒಂದೇ ಗುಡಿಯಲಿ ಸಾಗುತ ಹೋಗಿ ಜ್ಞಾನವೂ ಲಭಿಸುವುದೂ
ಗಂಡು : ಅರಿವನು ಕೊಡುವಳು ಹೆಣ್ಣು   
ಹೆಣ್ಣು : ಸಿರಿಯನು ಕೊಡುವಳು ಹೆಣ್ಣು
ಇಬ್ಬರು : ಶಕ್ತಿಯ ಕೊಡುವಳು ಹೆಣ್ಣು ಹೆಣ್ಣೇ ಬಾಳಿನ ಕಣ್ಣೂ
-------------------------------------------------------------------------------------------------------------------------

ಪೆದ್ದ ಗೆದ್ದ (1982) - ಈ ಪೆದ್ದ ಗೆದ್ದ
ಸಾಹಿತ್ಯ: ಚಿ.ಉದಯಶಂಕರ್ ಸಂಗೀತ: ಕೆ.ವಿ.ಮಹದೇವನ್ ಹಾಡಿದವರು: ಎಸ್.ಪಿ.ಬಿ. ಕೋರಸ್, ಎಸ್.ಜಾನಕೀ

ಹೆಣ್ಣು : ಆಆಆ... (ಓಓಓಓಓ ) ಆಆಆಅ (ಓಓಓಓಓ ) ಆಆಆಅ ಆಆಆಅ
ಗಂಡು : ಆಆಆಅ ಆಆಆಅ
ಹೆಣ್ಣು : ಈ ಪೆದ್ದ ಗೆದ್ದ ಬಿದ್ದೋನು ಎದ್ದ ಎದ್ದೋನು ಗಂಡು ಹುಲಿಯಾದ
ಗಂಡು  : ಈ ಪೆದ್ದ ಗೆದ್ದ ಬಿದ್ದೋನು ಎದ್ದ ಎದ್ದೋನು ಗಂಡು ಹುಲಿಯಾದ
ಹೆಣ್ಣು : ಕೆಟ್ಟೋರ ಕಣ್ಣಿಗೇ ಮುಳ್ಳಾದ
ಗಂಡು : ಒಳ್ಳೇವರ ಪಾಲಿಗೇ ಹೂವಾದ
ಇಬ್ಬರು  : ಈ ಪೆದ್ದ ಗೆದ್ದ ಬಿದ್ದೋನು ಎದ್ದ ಎದ್ದೋನು ಗಂಡು ಹುಲಿಯಾದ

ಹೆಣ್ಣು : ನಿನ್ನೆಯ ತನಕ ಕಂದನ ಹಾಗೇ ಆಡುತಾ ಇವನಿದ್ದಾ
ಗಂಡು : ಘಟ್ಯಾಯಾಗಿ ಗದರಿ ಮಾತಾಡಿದಾಗ ನಡುಗುತ ಹೆದರಿದ್ದಾ
ಹೆಣ್ಣು : ನಿನ್ನೆಯ ತನಕ ಕಂದನ ಹಾಗೇ ಆಡುತಾ ಇವನಿದ್ದಾ
ಗಂಡು : ಘಟ್ಯಾಯಾಗಿ ಗದರಿ ಮಾತಾಡಿದಾಗ ನಡುಗುತ ಹೆದರಿದ್ದಾ
ಹೆಣ್ಣು : ಹೊಡೆದಾಡಿ ಸಾವಿನ ಜೊತೆಗೇ
ಗಂಡು : ಬಡಿದಾಡಿ ಬದುಕಿದ ಕೊನೆಗೇ
ಹೆಣ್ಣು : ಹೂವಾಗಿ ಕಾಯಾಗಿ ಹಣ್ಣಾದ ಹಾಗೇ        
ಗಂಡು : ಈ ರೀತಿ ಬದಲಾಗಿ ಇಲ್ಲಿ ಬಂದಾ
ಇಬ್ಬರು  : ಈ ಪೆದ್ದ (ಅಲೆಲೆಲೇ )  ಈ ಪೆದ್ದ 
              ಈ ಪೆದ್ದ ಗೆದ್ದ ಬಿದ್ದೋನು ಎದ್ದ ಎದ್ದೋನು ಗಂಡು ಹುಲಿಯಾದ
              ಪೆದ್ದ ಗೆದ್ದ ಪೆದ್ದ ಗೆದ್ದ ಪೆದ್ದ ಗೆದ್ದ    ಪೆದ್ದ ಗೆದ್ದ ಪೆದ್ದ ಗೆದ್ದ ಪೆದ್ದ ಗೆದ್ದ
ಗಂಡು : ಸರಿಗಗ ಗಗಗಗ ಗಗಗಗ (ಆಆಆಆ) ರಿಸರಿರಿ ರಿರಿರಿರಿರಿರಿ (ಆಆಆ)
            ದನಿಸಸ ಸಸಸಸಸ  (ಆಆಆ) ನಿಸ ನಿಸ ನಿಸ ನಿಸ ನಿಸ

ಗಂಡು : ಮಾತನ್ನೇ ಆಡದ ಮೂಗನೂ ಹಾಡನು ಹಾಡಿದ ಹಾಗಾಯಿತು
ಹೆಣ್ಣು : ನಡೆಯೋಕೇ ಬಾರದ ಕುಂಟನು ನಾಟ್ಯವ ಆಡುವ ಹಾಗಾಯಿತು
ಗಂಡು : ಮಾತನ್ನೇ ಆಡದ ಮೂಗನೂ ಹಾಡನು ಹಾಡಿದ ಹಾಗಾಯಿತು
ಹೆಣ್ಣು : ನಡೆಯೋಕೇ ಬಾರದ ಕುಂಟನು ನಾಟ್ಯವ ಆಡುವ ಹಾಗಾಯಿತು
ಗಂಡು : ಕತ್ತಲೆಯಾ ದಾಟಿದ ಕೊನೆಗೇ 
ಹೆಣ್ಣು : ಬೆಳಕನ್ನು ಕಂಡ ಕಡೇಗೇ 
ಗಂಡು : ಹೊಸ ಬಾಳು ಕಂಡಂತೇ ಸಂತೋಷದಿಂದ
ಹೆಣ್ಣು : ನಮಗಾಗಿ ಓಡಾಡಿ ಇಲ್ಲಿ ಬಂದಾ 
ಇಬ್ಬರು  : ಈ ಪೆದ್ದ (ಅಲೆಲೆಲೇ )  ಈ ಪೆದ್ದ 
              ಈ ಪೆದ್ದ ಗೆದ್ದ ಬಿದ್ದೋನು ಎದ್ದ ಎದ್ದೋನು ಗಂಡು ಹುಲಿಯಾದ
              ಕೆಟ್ಟೋರ ಕಣ್ಣಿಗೇ ಮುಳ್ಳಾದ ಒಳ್ಳೇವರ ಪಾಲಿಗೇ ಹೂವಾದ
              ಈ ಪೆದ್ದ ಗೆದ್ದ ಬಿದ್ದೋನು ಎದ್ದ ಎದ್ದೋನು ಗಂಡು ಹುಲಿಯಾದ
              ಪೆದ್ದ ಗೆದ್ದ ಪೆದ್ದ ಗೆದ್ದ ಪೆದ್ದ ಗೆದ್ದ  (ಹೇಹೇಹೇ) ಪೆದ್ದ ಗೆದ್ದ ಪೆದ್ದ ಗೆದ್ದ ಪೆದ್ದ ಗೆದ್ದ  (ಅಲೆಲೆಲೇ )
             ಪೆದ್ದ ಗೆದ್ದ ಪೆದ್ದ ಗೆದ್ದ ಪೆದ್ದ ಗೆದ್ದ   ಪೆದ್ದ ಗೆದ್ದ ಪೆದ್ದ ಗೆದ್ದ ಪೆದ್ದ ಗೆದ್ದ 
-------------------------------------------------------------------------------------------------------------------------

ಪೆದ್ದ ಗೆದ್ದ (1982) - ಸ್ವಾಗತ ಸುಸ್ವಾಗತ
ಸಾಹಿತ್ಯ: ಚಿ.ಉದಯಶಂಕರ್ ಸಂಗೀತ: ಕೆ.ವಿ.ಮಹದೇವನ್ ಹಾಡಿದವರು: ಎಸ್.ಜಾನಕೀ

ಸ್ವಾಗತ...  ಸುಸ್ವಾಗತ...
ಸ್ವಾಗತ ಸುಸ್ವಾಗತ ಮೆಲ್ಲನೇ ನನ್ನ ನೋಡುತಾ ಪ್ರೀತಿಯ ನೀ ತೋರುತಾ
ನಲ್ಲನೇ ನನ್ನ ನೋಡುತಾ ಪ್ರೀತಿಯ ನೀ ತೋರುತಾ ಸೇರೆಯಾ ಸುಖ ನೀಡುತಾ ಆಆಆ...
ಸ್ವಾಗತ...  ಸುಸ್ವಾಗತ...  ಸ್ವಾಗತ...  ಸುಸ್ವಾಗತ...

ಪ್ರೇಮ ಮಂದಿರದ ಕದವ ತೆರೆದಿದೇ ಬಾರೇಯಾ .. 
ಪ್ರೀತಿ ಮಾತುಗಳ ತೋರಣ ಕಟ್ಟಿದೆ ನೋಡೆಯಾ... 
ಪ್ರೇಮ ಮಂದಿರದ ಕದವ ತೆರೆದಿದೇ ಬಾರೇಯಾ .. 
ಪ್ರೀತಿ ಮಾತುಗಳ ತೋರಣ ಕಟ್ಟಿದೆ ನೋಡೆಯಾ... 
ನನ್ನ ಆಸೆಗಳ ಹೂವನೂ ಹಾಸಿದೇ ಕಾಣೆಯಾ 
ಓಡಿ ಬಂದೂ ಈ ಹೆಣ್ಣ ಬಯಕೆ ಪೂರೈಸೆಯಾ 
ನಲ್ಲನೇ ನನ್ನ ನೋಡುತಾ ಪ್ರೀತಿಯ ನೀ ತೋರುತಾ ಸೇರೆಯಾ ಸುಖ ನೀಡುತಾ ಆಆಆ...
ಸ್ವಾಗತ...  ಸುಸ್ವಾಗತ...  ಸ್ವಾಗತ...  ಸುಸ್ವಾಗತ...

ಇಂಥ ಅಂದವ ನೋಡದಂಥ ಕಣ್ಣೆತಕೇ ಅಹ್ಹಹ್ಹಹ್ಹ... 
ಬೇಡಿ ಬರುವರು ಸಾವಿರಾರೂ ನನ್ನ ಸ್ನೇಹಕೇ 
ಇಂಥ ಅಂದವ ನೋಡದಂಥ ಕಣ್ಣೆತಕೇ ... 
ಬೇಡಿ ಬರುವರು ಸಾವಿರಾರೂ ನನ್ನ ಸ್ನೇಹಕೇ 
ಮಾತನಾಡದೇ ಹೋದೇ ಅಂದೂ ನೀ ಏತಕೇ
ನಿಲ್ಲ ಬೇಡವೇ ನನ್ನ ಪ್ರೇಮದ ಕಾಣಿಕೆ     
ನಲ್ಲನೇ ನನ್ನ ನೋಡುತಾ ಪ್ರೀತಿಯ ನೀ ತೋರುತಾ ಸೇರೆಯಾ ಸುಖ ನೀಡುತಾ ಆಆಆ...
ಸ್ವಾಗತ...  ಸುಸ್ವಾಗತ...  ಸ್ವಾಗತ...  ಸುಸ್ವಾಗತ...

ಎದೆಯ ಹಕ್ಕಿ ಹೊಸ ಪ್ರಣಯಗೀತೆಯ  ಹಾಡಿದೇ
ಗರಿಯ ಬಿಚ್ಚಿದ ನವಿಲಿನಂತೇ ಮನ ಕುಣಿದಿದೆ
ಎದೆಯ ಹಕ್ಕಿ ಹೊಸ ಪ್ರಣಯಗೀತೆಯ  ಹಾಡಿದೇ
ಗರಿಯ ಬಿಚ್ಚಿದ ನವಿಲಿನಂತೇ ಮನ ಕುಣಿದಿದೆ
ಕಂಡ ಕನಸು ನಿಜವಾದ ಕಾಲವೂ ಬಂದಿದೆ
ಇನ್ನೂ ಎಲ್ಲವೂ ನಿನಗೇ ನನ್ನದೂ ಏನಿದೇ
ನಲ್ಲನೇ ನನ್ನ ಕೂಡುತಾ ಪ್ರೀತಿಯ ನೀ ತೋರುತಾ ಸೇರೆಯಾ ಸುಖ ನೀಡುತಾ ಆಆಆ...
ಸ್ವಾಗತ...  ಸುಸ್ವಾಗತ...  ಸ್ವಾಗತ...  ಸುಸ್ವಾಗತ... ಸುಸ್ವಾಗತ... ಸುಸ್ವಾಗತ... ಸುಸ್ವಾಗತ...
-------------------------------------------------------------------------------------------------------------------------

No comments:

Post a Comment