478. ಸಂಪತ್ತಿಗೆ ಸವಾಲ್ (1974)



ಸಂಪತ್ತಿಗೆ ಸವಾಲ್ ಚಿತ್ರದ ಹಾಡುಗಳು 
  1. ನಗುವುದೋ ಅಳುವುದೋ ನೀವೇ ಹೇಳಿ 
  2. ರಾಜ ಮುದ್ದು ರಾಜ್ 
  3. ಯಾರೇ ಕೂಗಾಡಲೀ 
  4. ಅಂತಿಂಥ ಹೆಣ್ಣು ನಾನಲ್ಲಾ 

ಸಂಪತ್ತಿಗೆ ಸವಾಲ್ (1974) - ನಗುವುದೋ ಅಳುವುದೋ
ಸಾಹಿತ್ಯ : ಚಿ.ಉದಯಶಂಕರ್ ಸಂಗೀತ : ಜಿ.ಕೆ.ವೆಂಕಟೇಶ್ ಗಾಯನ : ಪಿ.ಬಿ.ಶ್ರೀನಿವಾಸ್


ನಗುವುದೋ ಅಳುವುದೋ ನೀವೆ ಹೇಳಿ
ಇರುವುದೋ ಬಿಡುವುದೋ ಈ ಊರಿನಲಿ
ಈ ಜನರ ನಡುವೆ ನಾನು ಹೇಗೆ ಬಾಳಲಿ
ಅಳುವುದೋ ನಗುವುದೋ ಈಗ ಏನು ಮಾಡಲಿ
ನಗುವುದೋ ಅಳುವುದೋ ನೀವೆ ಹೇಳಿ
ಇರುವುದೋ ಬಿಡುವುದೋ ಈ ಊರಿನಲಿ

ಬಡವರ ಕಂಬನಿಗೆ ಬೆಲೆಯೇ ಇಲ್ಲ
ಧನಿಕರ ವಂಚನೆಗೆ ಕೊನೆಯೇ ಇಲ್ಲ
ತಳುಕಿನ ಮಾತುಗಳ ನಂಬುವರೆಲ್ಲ
ಸತ್ಯವನು ನುಡಿದಾಗ ಹಿಡಿಯುವರೆಲ್ಲ
ದೂರ ತಳ್ಳುವರಲ್ಲ ದೂರ ತಳ್ಳುವರಲ್ಲ
ನಗುವುದೋ ಅಳುವುದೋ ನೀವೆ ಹೇಳಿ
ಇರುವುದೋ ಬಿಡುವುದೋ ಈ ಊರಿನಲಿ
ಈ ಜನರ ನಡುವೆ ನಾನು ಹೇಗೆ ಬಾಳಲಿ
ಅಳುವುದೋ ನಗುವುದೋ ಈಗ ಏನು ಮಾಡಲಿ
ನಗುವುದೋ ಅಳುವುದೋ ನೀವೆ ಹೇಳಿ

ತಾಯಿಯೇ ಮಗನನ್ನು ನಂಬದೆ ಇರಲು
ಅಣ್ಣನೇ ಮನೆಯಿಂದ ಹೊರಗೆ ತಳ್ಳಲು
ಕಾಲವೇ ಎದುರಾಗಿ ವೈರಿಯಾಗಲು
ಅತ್ತಿಗೆಯ ಕಂಗಳಲಿ ಕಂಡೆನು ನಾನು
ಮಾತೃ ವಾತ್ಸಲ್ಯವನು ಮಾತೃ ವಾತ್ಸಲ್ಯವನು
ನಗುವುದೋ ಅಳುವುದೋ ನೀವೆ ಹೇಳಿ 
ಇರುವುದೋ ಬಿಡುವುದೋ ಈ ಊರಿನಲಿ

ಬಡ್ಡಿಯ ಹಣ ತಿಂದು ಬಡವರ ಕೊಂದು
ಕೊಬ್ಬಿದ ಶ್ರೀಮಂತನೇ ನಾನಿನಗಿಂದೂ...
ಹಾಕುವೇ ಸಂಪತ್ತೀಗೆ ನನ್ನ ಸವಾಲು..
ಸಿರಿತನದ ಗರ್ವವನು ಮೆಟ್ಟಿ ಮರಿಯುವೇ 
ನಿನ್ನ ಸೊಕ್ಕು ಮುರಿಯುವೇ..
ನಿನ್ನ ಸೊಕ್ಕು ಮುರಿಯುವೇ..
--------------------------------------------------------------------------------------------------------------------------

ಸಂಪತ್ತಿಗೆ ಸವಾಲ್ (೧೯೭೪) - ರಾಜಾ ಮುದ್ದು ರಾಜಾ

ಸಾಹಿತ್ಯ: ಆರ್.ಎನ್. ಜಯಗೋಪಾಲ್  ಸಂಗೀತ: ಜಿ.ಕೆ. ವೆಂಕಟೇಶ್  ಗಾಯನ: ಪಿ.ಬಿ.ಶ್ರೀ ಮತು ಎಸ್. ಜಾನಕಿ


ರಾಜಾ ಮುದ್ದು ರಾಜಾ, ನೂಕುವಂತ ಕೋಪ ನನ್ನಲೇಕೆ?
ಸರಸದ ವೇಳೆ ದೂರ ನಿಲ್ಲಬೇಕೆ? ಕೋಪವೇಕೆ?
ನಿನಗಾಗಿ ಬಂದೆ ಒಲವನ್ನು ತಂದೆ, ನನದೆಲ್ಲ ನಿಂದೇ, ರಾಜಾ ನನ್ನ ರಾಜಾ... ||ಮುದ್ದು ರಾಜಾ||

ಒಲಿದು ಬಂದ ನನ್ನ, ಬೇಡೆಂದರೇನು ಚೆನ್ನ, ರಾಜ ನನ್ನ ರಾಜ ||೨||
ಆಸೆ ಬರಾದೇನ್ನು, ನನ್ನಂದವಿಲಾವೇನ್ನು, ಮನಸಿನ್ನು ಕಲ್ಲೆನ್ನು?
ರಾಜ ಬೇಡ ರಾಜಾ, ನೂಕುವಂತ ಕೋಪ ನನ್ನಲೇಕೆ? ಮುದ್ದು ರಾಜಾ...

ಹಣದ ಸೊಕ್ಕಿನಿಂದ, ಮೆರೆದಾಡೋ ನಿನ್ನ ಚೆಂದ, ಬಲ್ಲೇ... ನಾ ಬಲ್ಲೇ.....
ಬೆಂಕಿಯಂತೆ ನಾನು, ತಣ್ಣೀರಿನಂತೆ ನೀನು, ಈ ನನ್ನ ಜೊತೆಯೇನ್ನು? ನಿಲ್ಲೇ, ದೂರ ನಿಲ್ಲೇ
ಗಂಡು ಬೀರಿಯಲ್ಲ, ನಾ ಹಿಂದಿನಂತೆ ಇಲ್ಲ ನಲ್ಲಾ ನನ್ನ ನಲ್ಲ...||೨||
ತಂದೆ ಮಾತ ತಳ್ಳಿ, ನಾ ಓಡಿ ಬಂದೆನಲ್ಲ, ನಿನ್ನಾಣೆ ಸುಳ್ಳಲ್ಲ ರಾಜಾ  ||ಮುದ್ದು ರಾಜಾ||
--------------------------------------------------------------------------------------------------------------------------

ಸಂಪತ್ತಿಗೆ ಸವಾಲ್ (1974) - ಯಾರೇ ಕೂಗಾಡಲಿ ಊರೇ ಹೋರಾಡಲಿ
ಸಾಹಿತ್ಯ: ಆರ್.ಎನ್. ಜಯಗೋಪಾಲ್ ಸಂಗೀತ: ಜಿ.ಕೆ. ವೆಂಕಟೇಶ್ ಗಾಯನ: ಡಾ|| ರಾಜ್‍ಕುಮಾರ್


ಓ ಹೋ.... ಆ ಹಾ...ಓ ಓ ಓ...ಹೇ ಹೇ ಹೇ... ಆಹ....ಓಹೋ...ಏ...ಓಹೋ
ಯಾರೇ ಕೂಗಾಡಲಿ, ಊರೇ ಹೋರಾಡಲಿ
ನಿನ್ನ ನೆಮ್ಮದಿಗೆ ಭಂಗವಿಲ್ಲ ಎಮ್ಮೇ ನಿನಗೇ ಸಾಟಿಯಿಲ್ಲ
ಬಿಸಿಲು ಮಳೆಗೆ, ಬಿರುಗಾಳಿ ಚಳಿಗೆ ನೀ .. ಅಳುಕದೇ ಮುಂದೇ ಸಾಗುವೆ
ಅರೆ ಹೊಯ್ ಅರೆ ಹೊಯ್ ಅರೆ ಹೊಯ್ ಅರೆ ಹೊಯ್  ಟೂರ್ರ್ರ್ರ್ರ್ರ್ರ್ರ್ರ್ರ್ರ್ರಾ

ಗುಣದಲ್ಲಿ ನೀ ಉಪಕಾರಿ, ಮಾನವಗೆ ನೀ ಸಹಕಾರಿ ||
ಕಸವನ್ನೇ ತಿಂದರು ಕೊನೆಗೆ ಹಾಲನ್ನೇ ನೀಡುವೆ ನಮಗೆ
ಹಾಲನ್ನು ಕುಡಿದ ಜನರು ವಿಷವನ್ನೇ ಕಕ್ಕುತಲಿಹರು ||
ಸದಾ ರೋಷ, ಸದಾ ದ್ವೇಷ  ಅದಕ್ಕೆ ಹೀಗಿದೆ ಈ ದೇಶ  ||ಯಾರೇ ಕೂಗಾಡಲಿ...||

ಪ್ರಾಣಿಗಳೇ ಗುಣದಲಿ ಮೇಲು, ಮಾನವನದಕಿಂತ ಕೀಳ ||
ಉಪಕಾರವ ಮಾಡಲಾರ  ಬದುಕಿದರೆ ಸೈರಿಸಲಾರ
ಸತ್ಯಕ್ಕೆ ಗೌರವವಿಲ್ಲ, ವಂಚನೆಗೆ ಪೂಜ್ಯತೆಯೆಲ್ಲ ||
ಇದೇ ನೀತಿ ಇದೇ ರೀತಿ  ಇನ್ನೆಲ್ಲಿದೆ ಗುರುಹಿರಿಯರ ಭೀತಿ ||ಯಾರೇ ಕೂಗಾಡಲಿ...||
----------------------------------------------------------------------------------------------------------------------

ಸಂಪತ್ತಿಗೆ ಸವಾಲ್ (೧೯೭೪)
ಸಂಗೀತ : ಜಿ.ಕೆ.ವೆಂಕಟೇಶ  ಸಾಹಿತ್ಯ: ಆರ್.ಏನ್.ಜಯಗೋಪಾಲ್ ಗಾಯನ : ಎಸ್.ಜಾನಕೀ

ಅಂತಿಂಥ ಹೆಣ್ಣು ನಾನಲ್ಲ   ನನ್ನಂಥ ಹೆಣ್ಣು ಯಾರು ಇಲ್ಲ 
ನಾ ಬರುವ ದಾರಿ ಗೌರವ ತೋರಿ
ನಾ ಬರುವ ದಾರಿ ಗೌರವ ತೋರಿ 
ಅತ್ತ ಇತ್ತ ಕೈಯ ಕಟ್ಟಿ ನಿಲ್ಲುವರೆಲ್ಲಾ... 
ಅಂತಿಂಥ ಹೆಣ್ಣು ನಾನಲ್ಲ   ನನ್ನಂಥ ಹೆಣ್ಣು ಯಾರು ಇಲ್ಲ 

ಬುಗುರಿಯ ತರಹ ಎಲ್ಲರ ನಾನು ಆಡಿಸಬಲ್ಲೇ ನೋಟದಲಿ 
ಬುಗುರಿಯ ತರಹ ಎಲ್ಲರ ನಾನು ಆಡಿಸಬಲ್ಲೇ ನೋಟದಲಿ 
ಕರೀಗಲೇ ತರಹ ನಡುಗುವರೆಲ್ಲಾ 
ನನ್ನಯ ಮಾತಿನ ಸಾಟಿಯಲಿ 
ಸರಿಸಮ ನನ್ನ ಜೊತೆ ಯಾರಿಹರಿಲ್ಲಿ
ಅಂತಿಂಥ ಹೆಣ್ಣು ನಾನಲ್ಲ   ನನ್ನಂಥ ಹೆಣ್ಣು ಯಾರು ಇಲ್ಲ 

ಹಣವನು ಚೆಲ್ಲಿ ಹಳ್ಳಿಯನ್ನೆಲ್ಲಾ ಕೊಳ್ಳಲುಬಲ್ಲೇ.. ಸುಲಭದಲ್ಲಿ  
ಹಣವನು ಚೆಲ್ಲಿ ಹಳ್ಳಿಯನ್ನೆಲ್ಲಾ ಕೊಳ್ಳಲುಬಲ್ಲೇ.. ಸುಲಭದಲ್ಲಿ  
ರೋಷದೆ ನಾನು ದುರ್ಗಿಯ ರೂಪ ನಿಲ್ಲುವರಿಲ್ಲಾ ಎದುರಿನಲ್ಲಿ 
ಸರಿಸಮ ನನ್ನ ಜೊತೆ ಯಾರಿಹರಿಲ್ಲಿ.. 
ಅಂತಿಂಥ ಹೆಣ್ಣು ನಾನಲ್ಲ   ನನ್ನಂಥ ಹೆಣ್ಣು ಯಾರು ಇಲ್ಲ 

ಗಂಡಿನ ಕೊಬ್ಬು ಇಳಿಸಲು ಬಲ್ಲೆ ಸುಲಭದಿ ಒಂದೇ ನಿಮಿಷದಲ್ಲಿ 
ಗಂಡಿನ ಕೊಬ್ಬು ಇಳಿಸಲು ಬಲ್ಲೆ ಸುಲಭದಿ ಒಂದೇ ನಿಮಿಷದಲ್ಲಿ 
ಮಣ್ಣನು ಮುಕ್ಕಿ ಕೈಕೈ ಹಿಸುಕು  ನಿಲ್ಲುವ ಭೂಪತಿ ಮೌನದಲಿ 
ಸರಿಸಮ ನನ್ನ ಜೊತೆ ಯಾರಿಹರಿಲ್ಲಿ.. 
ಅಂತಿಂಥ ಹೆಣ್ಣು ನಾನಲ್ಲ   ನನ್ನಂಥ ಹೆಣ್ಣು ಯಾರು ಇಲ್ಲ 
ನಾ ಬರುವ ದಾರಿ ಗೌರವ ತೋರಿ
ನಾ ಬರುವ ದಾರಿ ಗೌರವ ತೋರಿ 
ಅತ್ತ ಇತ್ತ ಕೈಯ ಕಟ್ಟಿ ನಿಲ್ಲುವರೆಲ್ಲಾ... 
ಅಂತಿಂಥ ಹೆಣ್ಣು ನಾನಲ್ಲ   ನನ್ನಂಥ ಹೆಣ್ಣು ಯಾರು ಇಲ್ಲ 
-------------------------------------------------------------------------------------------------------------------

No comments:

Post a Comment