479. ಹೊಸ ಇತಿಹಾಸ (೧೯೮೪)

ಹೊಸ ಇತಿಹಾಸ ಚಲನಚಿತ್ರದ ಹಾಡುಗಳು 
  1. ನಕ್ಕಾಗ ನೋಡ ಆಷಾಢ ಮೋಡ
  2. ಕಮಲದಾ ಮೊಗದೋಳೇ 
  3. ಮಾವಯ್ಯ ಮಾವಯ್ಯ 
  4. ಆಸೇ ಎದೆಯಲಿ ಮಿಂಚೂ ಒಡಲಲಿ 
  5. ಕಿಚ್ಚು ನನ್ನೆದೆಯಲಿ 
ಹೊಸ ಇತಿಹಾಸ (೧೯೮೪)........ನಕ್ಕಾಗ ನೋಡ ಆಷಾಢ ಮೋಡ
ಸಂಗೀತ : ಶಂಕರ್-ಗಣೇಶ, ಸಾಹಿತ್ಯ : ಆರ್.ಎನ್.ಜಯಗೋಪಾಲ್ ಗಾಯನ : ಎಸ್.ಪಿ.ಬಿ, ಎಸ್.ಜಾನಕಿ

ಗಂಡು : ಧುಮ್ಮು ತಕ್ಕಿಟ ತಕ ತಕ್ಕಿಟ ಧುಮ್ಮು ತಕ್ಕಿಟ ತಕ ತಕ್ಕಿಟ
           ಧುಮ್ಮು ತಕ್ಕಿಟ ತಕ ತಕ್ಕಿಟ ಧುಮ್ಮು ತಕ್ಕಿಟ ತಕ ತಕ್ಕಿಟ ಧುಂ ಧುಂ ಧುಂ
          ನಕ್ಕಾಗ ನೋಡ ಆಷಾಢ ಮೋಡ ಮುತ್ತಾಗಿ ಬಿತ್ತು ಈ ರಾತ್ರಿ ಹೊತ್ತು
          ಮೈಯೆಲ್ಲ ಜುಮ್ಮೆಂದಿತು (ಆ..ಆ..) ಚಳಿ ಹೊತ್ತು (ಆ..ಆ..) ಬಿಸಿ ಮುತ್ತು (ಆ..ಆ..) ಸುಖ ತಂತು
ಹೆಣ್ಣು : ಆ.. ನಕ್ಕಾಗ ನೋಡ ಆಷಾಢ ಮೋಡ ಮುತ್ತಾಗಿ ಬಿತ್ತು ಈ ರಾತ್ರಿ ಹೊತ್ತು
          ಮೈಯೆಲ್ಲ ಜುಮ್ಮೆಂದಿತು (ಹೂಂಹೂಂ) ಚಳಿ ಹೊತ್ತು (ಹಾಯ್ ಹಾಯ್)
          ಬಿಸಿ ಮುತ್ತು (ಹ್ಹಾ ಹ್ಹಾ) ಸುಖ ತಂತು (ಹ್ಹಹ್ಹೋ.. )

ಗಂಡು : ನೀ ಬೇಡಿದೆ ಅದ ನಾ ನೀಡಿದೆ ಬದಲು ಅರೆ ಕೊಡು ಆಹ್ ಅಹ ಕೊಡು
ಹೆಣ್ಣು : ಬೇಕೆಂದಿದೆ ಲಜ್ಜೆ ಸಾಕೆಂದಿದೆ ಇನಿಯ ಬಿಡು ಬಿಡು ಇನಿಯ ಬಿಡು ಬಿಡು
ಗಂಡು : ನೀ ಬರಲು ಬಳಿಗೆ ಬಳಿಗೆ ಅದೇ ಮದ್ದು ಚಳಿಗೆ
            ನೀ ಬರಲು ಬಳಿಗೆ ಬಳಿಗೆ ಅದೇ ಮದ್ದು ಚಳಿಗೆ
ಹೆಣ್ಣು : ದಮ್ಮಯ್ಯ ನಿನಗೆ ನಿನಗೆ ಬಿಡು ನನ್ನ ನೀನು
ಗಂಡು :  ಧುಮ್ಮು ತಕ್ಕಿಟ ತಕ ತಕ್ಕಿಟ ಧುಮ್ಮು ತಕ್ಕಿಟ ತಕ ತಕ್ಕಿಟ
            ಧುಮ್ಮು ತಕ್ಕಿಟ ತಕ ತಕ್ಕಿಟ ಧುಮ್ಮು ತಕ್ಕಿಟ ತಕ ತಕ್ಕಿಟ ಧುಂ ಧುಂ ಧುಂ
ಹೆಣ್ಣು : ನಕ್ಕಾಗ ನೋಡ ಆಷಾಢ ಮೋಡ ಮುತ್ತಾಗಿ ಬಿತ್ತು ಈ ರಾತ್ರಿ ಹೊತ್ತು ಮೈಯೆಲ್ಲ ಜುಮ್ಮೆಂದಿತು
ಗಂಡು : ಅರೆರೇರೇ ಚಳಿ ಹೊತ್ತು (ಹ್ಹಾ) ಬಿಸಿ ಮುತ್ತು (ಹ್ಹ ) ಸುಖ ತಂತು (ಅಹ್ಹಹ್ಹಹ್ಹಹ)

ಹೆಣ್ಣು : ತುಂಟಾಟಕೆ ನಿನ್ನ ಹುಡುಗಾಟಕೆ ಮಿತಿಯೆ ಇಲ್ಲ ಇಲ್ಲ.. ಅಹ್ಹಹ್ಹಾ..
ಗಂಡು : ಅರೆ ಚೆಲ್ಲಾಟಕೆ ನಿನ್ನ ಕಣ್ಣೋಟಕೆ ಮರೆತೆ ಎಲ್ಲ ಎಲ್ಲ... ಮರೆತೆ ಎಲ್ಲ ಎಲ್ಲ
ಹೆಣ್ಣು : ಈ ವಯಸು ಹೀಗೆ ಇರಲಿ ಈ ಮನಸು ಹೀಗೆ ಇರಲಿ
         ಈ ವಯಸು ಹೀಗೆ ಇರಲಿ ಈ ಮನಸು ಹೀಗೆ ಇರಲಿ
ಗಂಡು : ಈ ಪ್ರೀತಿ ಅರಳಿ ನಗಲಿ ಎಂದೂ ಹೀಗೇನೆ
ಹೆಣ್ಣು :  ಧುಮ್ಮು ತಕ್ಕಿಟ ತಕ ತಕ್ಕಿಟ ಧುಮ್ಮು ತಕ್ಕಿಟ ತಕ ತಕ್ಕಿಟ (ಹ್ಹಾಂ )
            ಧುಮ್ಮು ತಕ್ಕಿಟ ತಕ ತಕ್ಕಿಟ (ಹ್ಹಾಂ )  ಧುಮ್ಮು ತಕ್ಕಿಟ ತಕ ತಕ್ಕಿಟ ಧುಂ ಧುಂ ಧುಂ
ಗಂಡು : ಅರೇ .. ನಕ್ಕಾಗ ನೋಡ ಆಷಾಢ ಮೋಡ
ಹೆಣ್ಣು : ಮುತ್ತಾಗಿ ಬಿತ್ತು ಈ ರಾತ್ರಿ ಹೊತ್ತು
ಗಂಡು : ಮೈಯೆಲ್ಲ ಜುಮ್ಮೆಂದಿತು
ಹೆಣ್ಣು  : ಚಳಿ ಹೊತ್ತು
ಗಂಡು : ಅರೆರೆರೆರೇ ಬಿಸಿ ಮುತ್ತು
ಇಬ್ಬರು :  ಸುಖ ತಂತು
             ಧುಮ್ಮು ತಕ್ಕಿಟ ತಕ ತಕ್ಕಿಟ ಧುಮ್ಮು ತಕ್ಕಿಟ ತಕ ತಕ್ಕಿಟ (ಹ್ಹಾಂ )
            ಧುಮ್ಮು ತಕ್ಕಿಟ ತಕ ತಕ್ಕಿಟ (ಹ್ಹಾಂ )  ಧುಮ್ಮು ತಕ್ಕಿಟ ತಕ ತಕ್ಕಿಟ ಧುಂ ಧುಂ ಧುಂ

------------------------------------------------------------------------------------------------------------------

ಹೊಸ ಇತಿಹಾಸ (೧೯೮೪)........ಕಮಲದಾ ಮೊಗದೋಳೇ
ಸಂಗೀತ : ಶಂಕರ್-ಗಣೇಶ,  ಸಾಹಿತ್ಯ : ಚಿ.ಉದಯಶಂಕರ ಗಾಯನ : ಎಸ್.ಜಾನಕಿ

ಆಆಆ... ಆಆಆ.... ಆಆಆ... ಆಅ .. ಆಅ .. ಆಆಆ.. ಆಆಆ..
ಕಮಲದಾ ಮೊಗದೋಳೇ ಕಮಲದಾ ಕಣ್ಣೋಳೆ ಕಮಲವ ಕೈಯಲ್ಲೀ ಹಿಡಿದೋಳೇ ..
ಕಮಲದಾ ಮೊಗದೋಳೇ ಕಮಲದಾ ಕಣ್ಣೋಳೆ ಕಮಲವ ಕೈಯಲ್ಲೀ ಹಿಡಿದೋಳೇ ..
ಕಮಲನಾಭನ ಹೃದಯ ಕಮಲದಲಿ ನಿಂತೋಳೆ ಕಮಲೀ ನೀ ಕರ ಮುಗಿವೇ ಬಾ ಅಮ್ಮಾ.. 
ಪೂಜೆಯ ಸ್ವೀಕರಿಸೀ ದಯಮಾಡಿಸಮ್ಮಾ
ಕಮಲದಾ ಮೊಗದೋಳೇ ಕಮಲದಾ ಕಣ್ಣೋಳೆ ಕಮಲವ ಕೈಯಲ್ಲೀ ಹಿಡಿದೋಳೇ .. 

ಕಾವೇರಿ ನೀರ ಅಭಿಷೇಕಗಾಗಿ ನಿನಗಾಗಿ ನಾ ತಂದೇನಮ್ಮಾ 
ತಂಪನ್ನೂ ಚೆಲ್ಲೋ ಸುಮರಾಶಿಯಿಂದ ಹೂಮಾಲೆ ಕಟ್ಟಿರುವೇನಮ್ಮಾ 
ಬಂಗಾರ ಕಾಲ್ಗಜ್ಜೇ ನಾದ ನಮ್ಮ ಮನೆಯೆಲ್ಲ.. ವಾ  ಆ ತುಂಬುವಂತೇ .. 
ಬಂಗಾರ ಕಾಲ್ಗಜ್ಜೇ ನಾದ ನಮ್ಮ ಮನೆಯೆಲ್ಲ.. ವಾ ತುಂಬುವಂತೇ .. 
ನಲಿಯುತ .. ಕುಣಿಯುತ.... ಒಲಿದು ಬಾ ನಮ್ಮ ಮನೆಗೇ ಬಾ.. 
ಕಮಲದಾ ಮೊಗದೋಳೇ ಕಮಲದಾ ಕಣ್ಣೋಳೆ ಕಮಲವ ಕೈಯಲ್ಲೀ ಹಿಡಿದೋಳೇ .. 
ಕಮಲನಾಭನ ಹೃದಯ ಕಮಲದಲಿ ನಿಂತೋಳೆ ಕಮಲೀ ನೀ ಕರ ಮುಗಿವೇ ಬಾ ಅಮ್ಮಾ..
ಪೂಜೆಯ ಸ್ವೀಕರಿಸೀ ದಯಮಾಡಿಸಮ್ಮಾ
ಕಮಲದಾ ಮೊಗದೋಳೇ ಕಮಲದಾ ಕಣ್ಣೋಳೆ ಕಮಲವ ಕೈಯಲ್ಲೀ ಹಿಡಿದೋಳೇ .. 

ಶ್ರೀದೇವಿ ಬಾ ಅಮ್ಮಾ ಧನಲಕ್ಷ್ಮಿ ಬಾ ಅಮ್ಮ ಮನೆಯನ್ನು ಬೆಳಕಾಗಿ ಮಾಡು..
ದಯೆತೋರಿ ಬಂದು ಮನದಲ್ಲಿ ನಿಂತು ಸಂತೋಷ ಸೌಭಾಗ್ಯ ನೀಡು..
ಸ್ಥಿರವಾಗಿ ಬಂದಿಲ್ಲಿ ನೆಲೆಸು.. ತಾಯೇ ವರಮಹಾಲಕ್ಷ್ಮಿಯೇ ಹರಸು..
ಸ್ಥಿರವಾಗಿ ಬಂದಿಲ್ಲಿ ನೆಲೆಸು.. ತಾಯೇ ವರಮಹಾಲಕ್ಷ್ಮಿಯೇ ಹರಸು..
ಕರವನು ಮುಗಿಯುವೆ.. ಆರತೀ.. ಗ ಬೆಳಗುವೇ..
ಕಮಲದ ಮೊಗದೊಳೆ ಕಮಲದ ಕಣ್ಣೋಳೆ ಕಮಲವ ಕೈಯಲ್ಲಿ ಹಿಡಿದೊಳೆ..
ಕಮಲನಾಭನ ಹೃದಯ ಕಮಲದಲಿ ನಿಂತೋಳೆ ಕಮಲಿ ನೀ ಕರಮುಗಿವೆ ಬಾ ಮಾ..
ಪೂಜೆಯ ಸ್ವೀಕರಿಸೆ ದಯಮಾಡಿಸಮ್ಮ...
ಕಮಲದ ಮೊಗದೊಳೆ ಕಮಲದ ಕಣ್ಣೋಳೆ ಕಮಲವ ಕೈಯಲ್ಲಿ ಹಿಡಿದೊಳೆ..
ಕಮಲವ ಕೈಯಲ್ಲಿ ಹಿಡಿದೊಳೆ..
------------------------------------------------------------------------------------------------------------------

ಹೊಸ ಇತಿಹಾಸ (೧೯೮೪)........ಮಾವಯ್ಯ ಮಾವಯ್ಯ
ಸಂಗೀತ : ಶಂಕರ್-ಗಣೇಶ,  ಸಾಹಿತ್ಯ : ಚಿ.ಉದಯಶಂಕರ ಗಾಯನ : ಎಸ್.ಜಾನಕಿ

ಕೋರಸ್ : ಲಲೋ ಲಲೋ ಲಲೋ ಲಲೋ ಲಲೋ ಲಲೋ ಲಲೋ
               ಲಗೂ ಲಗೂ  ಲಗೂ  ಲಗೂ  ಲಗೂ  ಲಗೂ  ಲಗೂ  ಲಗೂ  ಲಗೂ  ಲಗೂ
               ಹೊಯ್ಯ್ ಹೊಯ್ಯ್ ಹೊಯ್ಯ್ ಹೊಯ್ಯ್ ಹೊಯ್ಯ್ ಹೊಯ್ಯ್ ಹೊಯ್ಯ್ ಹೊಯ್ಯ್
ಹೆಣ್ಣು : ಮಾವಯ್ಯ ಮಾವಯ್ಯ ಬಾರಯ್ಯ ಬಾರಯ್ಯ ದೂರ ನಿಂತೇ ಹೀಗೆ ಏಕೇ
          ಮಾವಯ್ಯ ಮಾವಯ್ಯ ಯಾರೂ ಇಲ್ಲ ನೋಡು ಇಲ್ಲಿ ಬಾರಯ್ಯ ಬಾರಯ್ಯ
          ನಾಳೇ ನಾನೂ ಸಿಕ್ಕಲ್ಲ  ಮಾವಯ್ಯ ಮಾವಯ್ಯ ಇಂದೇ ಸೇರೋ ನನ್ನನ್ನೂ ಬಾರಯ್ಯ ಬಾರಯ್ಯ
ಕೋರಸ್ : ಲಗೂ ಲಗೂ  ಲಗೂ  ಲಗೂ  ಲಗೂ  ಲಗೂ  ಲಗೂ  ಲಗೂ  ಲಗೂ  ಲಗೂ
                ಹೊಯ್ಯ್ ಹೊಯ್ಯ್ ಹೊಯ್ಯ್ ಹೊಯ್ಯ್ ಹೊಯ್ಯ್ ಹೊಯ್ಯ್ ಹೊಯ್ಯ್ ಹೊಯ್ಯ್
ಹೆಣ್ಣು : ರಾತ್ರೀ ಬಂತೂ ನೋಡಿಲ್ಲಿ ಚಂದ್ರ ಬಂದ ಬಾನಲ್ಲಿ          
          ರಾತ್ರೀ ಬಂತೂ ನೋಡಿಲ್ಲಿ ಚಂದ್ರ ಬಂದ ಬಾನಲ್ಲಿ       
ಕೋರಸ್ : ಲಗೂ ಲಗೂ  ಲಗೂ  ಲಗೂ  ಲಗೂ  ಲಗೂ  ಲಗೂ  ಲಗೂ  ಲಗೂ  ಲಗೂ
                ಹೊಯ್ಯ್ ಹೊಯ್ಯ್ ಹೊಯ್ಯ್ ಹೊಯ್ಯ್ ಹೊಯ್ಯ್ ಹೊಯ್ಯ್ ಹೊಯ್ಯ್ ಹೊಯ್ಯ್
ಹೆಣ್ಣು : ಓ.. ಮಾವಯ್ಯ ಮಾವಯ್ಯ ಬಾರಯ್ಯ ಬಾರಯ್ಯ

ಹೆಣ್ಣು : ಅಲ್ಲಿ ಇಲ್ಲಿ ಹೀಗೇಕೇ ನೋಡುತಿರುವೇ ಮುದ್ದು ಮಾವ.. ಪೆದ್ದು ಮಾವ.. ಹ್ಹ..  
          ಅಲ್ಲಿ ಇಲ್ಲಿ ಹೀಗೇಕೇ ನೋಡುತಿರುವೇ ಮುದ್ದು ಮಾವ.. ಪೆದ್ದು ಮಾವ....  
          ಕಣ್ಣೂ ಬಿಡಬೇಡ ನೀ ದೂರ ಇರಬೇಡ 
          ಕಣ್ಣೂ ಬಿಡಬೇಡ ನೀ ದೂರ ಇರಬೇಡ ಕೇಳೋರೂ ಯಾರಿಲ್ಲಾ ಹೇಳೋರೂ ಯಾರಿಲ್ಲಾ.. 
          ನನ್ನಂಥ ರಸಬಾಳೆ ಮತ್ತಲ್ಲೂ ಸಿಕ್ಕೊಲ್ಲ.. 
ಕೋರಸ್ : ಲಗೂ ಲಗೂ  ಲಗೂ  ಲಗೂ  ಲಗೂ  ಲಗೂ  ಲಗೂ  ಲಗೂ  ಲಗೂ  ಲಗೂ
                ಹೊಯ್ಯ್ ಹೊಯ್ಯ್ ಹೊಯ್ಯ್ ಹೊಯ್ಯ್ ಹೊಯ್ಯ್ ಹೊಯ್ಯ್ ಹೊಯ್ಯ್ ಹೊಯ್ಯ್ 
ಹೆಣ್ಣು : ಮಾವಯ್ಯ ಮಾವಯ್ಯ ಬಾರಯ್ಯ ಬಾರಯ್ಯ ದೂರ ನಿಂತೇ ಹೀಗೆ ಏಕೇ 
ಕೋರಸ್ : ಮಾವಯ್ಯ ಮಾವಯ್ಯ 
ಹೆಣ್ಣು : ಯಾರೂ ಇಲ್ಲ ನೋಡಿಲ್ಲಿ                         ಕೋರಸ್ :  ಬಾರಯ್ಯ ಬಾರಯ್ಯ 
ಹೆಣ್ಣು : ನಾಳೇ ನಾನೂ ಸಿಕ್ಕಲ್ಲ                           ಕೋರಸ್ :  ಮಾವಯ್ಯ ಮಾವಯ್ಯ 
ಹೆಣ್ಣು : ಇಂದೇ ಸೇರೋ ನನ್ನನ್ನೂ                       ಕೋರಸ್ :  ಬಾರಯ್ಯ ಬಾರಯ್ಯ 

ಕೋರಸ್ : ತುತ್ತೂ ತೂರು (ಲಾ ಲಾ ಲಾ ಲಾ ಲಾ ) ತುತ್ತೂ ತೂರು (ಲಾ ಲಾ ಲಾ ಲಾ ಲಾ ) 
ಹೆಣ್ಣು : ಮೈಯಲ್ಲೆಲ್ಲಾ ಕಾವೇರೀ ಕೂಗುತಿರುವೇ ಬಾರೋ ಈಗ ಸೇರೋ ಬೇಗ 
          ಹೇ.. ಮೈಯಲ್ಲೆಲ್ಲಾ ಕಾವೇರೀ ಕೂಗುತಿರುವೇ ಬಾರೋ ಈಗ ಸೇರೋ ಬೇಗ 
          ಹೂವೂ ಕಾಯಾಗೀ ಆ ಕಾಯೀ ಹಣ್ಣಾಗಿ 
          ಹೂವೂ ಕಾಯಾಗೀ ಆ ಕಾಯೀ ಹಣ್ಣಾಗಿ ಹಣ್ಣಲ್ಲಾ ಜೇನಾಯ್ತು ಆ ಜೇನೂ ನಿನ್ನದಾಯ್ತು 
          ಈ ರಾತ್ರಿ ನಮ್ಮದಾಯಿತೂ .. ಆನಂದ ನಮಗಾಯಿತೂ 
ಕೋರಸ್ : ಲಗೂ ಲಗೂ  ಲಗೂ  ಲಗೂ  ಲಗೂ  ಲಗೂ  ಲಗೂ  ಲಗೂ  ಲಗೂ  ಲಗೂ
                ಹೊಯ್ಯ್ ಹೊಯ್ಯ್ ಹೊಯ್ಯ್ ಹೊಯ್ಯ್ ಹೊಯ್ಯ್ ಹೊಯ್ಯ್ ಹೊಯ್ಯ್ ಹೊಯ್ಯ್ 
ಹೆಣ್ಣು : ಮಾವಯ್ಯ ಮಾವಯ್ಯ ಬಾರಯ್ಯ ಬಾರಯ್ಯ ದೂರ ನಿಂತೇ ಹೀಗೆ ಏಕೇ 
ಕೋರಸ್ : ಮಾವಯ್ಯ ಮಾವಯ್ಯ 
ಹೆಣ್ಣು : ಯಾರೂ ಇಲ್ಲ ನೋಡಿಲ್ಲಿ                         ಕೋರಸ್ :  ಬಾರಯ್ಯ ಬಾರಯ್ಯ 
ಹೆಣ್ಣು : ನಾಳೇ ನಾನೂ ಸಿಕ್ಕಲ್ಲ                           ಕೋರಸ್ :  ಮಾವಯ್ಯ ಮಾವಯ್ಯ 
ಹೆಣ್ಣು : ಇಂದೇ ಸೇರೋ ನನ್ನನ್ನೂ                       ಕೋರಸ್ :  ಬಾರಯ್ಯ ಬಾರಯ್ಯ 
ಕೋರಸ್ : ಲಗೂ ಲಗೂ  ಲಗೂ  ಲಗೂ  ಲಗೂ  ಲಗೂ  ಲಗೂ  ಲಗೂ  ಲಗೂ  ಲಗೂ
                ಹೊಯ್ಯ್ ಹೊಯ್ಯ್ ಹೊಯ್ಯ್ ಹೊಯ್ಯ್ ಹೊಯ್ಯ್ ಹೊಯ್ಯ್ ಹೊಯ್ಯ್ ಹೊಯ್ಯ್ 
ಹೆಣ್ಣು : ರಾತ್ರೀ ಬಂತೂ ನೋಡಿಲ್ಲಿ ಚಂದ್ರ ಬಂದ ಬಾನಲ್ಲಿ          
          ರಾತ್ರೀ ಬಂತೂ ನೋಡಿಲ್ಲಿ ಚಂದ್ರ ಬಂದ ಬಾನಲ್ಲಿ       
ಕೋರಸ್ : ಲಗೂ ಲಗೂ  ಲಗೂ  ಲಗೂ  ಲಗೂ  ಲಗೂ  ಲಗೂ  ಲಗೂ  ಲಗೂ  ಲಗೂ
                ಹೊಯ್ಯ್ ಹೊಯ್ಯ್ ಹೊಯ್ಯ್ ಹೊಯ್ಯ್ ಹೊಯ್ಯ್ ಹೊಯ್ಯ್ ಹೊಯ್ಯ್ ಹೊಯ್ಯ್
--------------------------------------------------------------------------------------------------------------

ಹೊಸ ಇತಿಹಾಸ (೧೯೮೪)........ಆಸೇ ಎದೆಯಲೀ ಮಿಂಚೂ ಒಡಲಲಿ
ಸಂಗೀತ : ಶಂಕರ್-ಗಣೇಶ,  ಸಾಹಿತ್ಯ : ಆರ್.ಎನ್.ಜಯಗೋಪಾಲ್  ಗಾಯನ : ಎಸ್.ಪಿ.ಬಿ, ಎಸ್.ಜಾನಕಿ

ಗಂಡು : ಆಸೇ ಎದೆಯಲಿ ಮಿಂಚೂ ಒಡಲಲಿ ಈ ಮೈಯ್ಯ ಮೈಯ್ಯ ತಾಕೇ ಹೊಸದು ಏನೋ ಏನೋ ಸುಖ
ಹೆಣ್ಣು : ಆಸೇ ಎದೆಯಲಿ ಮಿಂಚೂ ಒಡಲಲಿ ಈ ಮೈಯ್ಯ ಮೈಯ್ಯ ತಾಕೇ ಹೊಸದು ಏನೋ ಏನೋ ಸುಖ

ಗಂಡು : ಜಾಜಿ ಮಲ್ಲೆ ರಾಶಿ ನೂರು ಇಲ್ಲೀ ಹೂವ ಮಂಚದಲ್ಲಿ ನಮ್ಮ ಕರೆದಿದೇ ..
            ತಂಪು ಗಾಳಿ ಬಿಸಿ ಬಂದು ಇಲ್ಲಿ ಗಂಧವನ್ನು ಚೆಲ್ಲೀ ಬನ್ನೀ ಎನ್ನುತಿದೇ ..
            ಬಯಕೆ ಕೆಣಕೋ ಕಂಗಳಲ್ಲಿ ಬಳಿಗೆ ಕರೆದ ನಗುವಿನಲ್ಲಿ ನಾ ಸೋತೆ ಹುಚ್ಚಾಗಿ ತೇಲಿ ಹೋದೇ ..
ಹೆಣ್ಣು : ಆಸೇ ಎದೆಯಲಿ (ಪಪ ಪಪಪಪಪ)  ಮಿಂಚೂ ಒಡಲಲಿ
ಗಂಡು : ಈ ಮೈಯ್ಯ ಮೈಯ್ಯ ತಾಕೇ ಹೊಸದು ಏನೋ ಏನೋ ಸುಖ
ಹೆಣ್ಣು : ಆಸೇ ಎದೆಯಲಿ  ಮಿಂಚೂ ಒಡಲಲಿ

ಹೆಣ್ಣು : ರಾತ್ರಿ ಚಂದ್ರ ನಗುತಿರುವಾಗ ಮೋಹ ಎಂಬ ದಾಹ ದೇಹ ಸುಡುವಾಗ
          ಕಿವಿಯಲಿ ನೀನೂ ನುಡಿದಾಗ ಏನೋ ಒಂದು ವೇಗ ಮತ್ತು ತರುವಾಗ
          ತೋಳ ಬಳಸಿ ಹಿಡಿಯುವಾಗ ಹೃದಯ ಕೆಣಕಿ ಮಿಲನದಾಗ
          ಸಾಕು ನನ್ನ ನೀ ನನ್ನ ಸರದಾರ
ಗಂಡು : ಆಸೇ ಎದೆಯಲಿ  ಮಿಂಚೂ ಒಡಲಲಿ
ಹೆಣ್ಣು  : ಈ ಮೈಯ್ಯ ಮೈಯ್ಯ ತಾಕೇ ಹೊಸದು ಏನೋ ಏನೋ ಸುಖ
          ಆಸೇ ಎದೆಯಲಿ  ಮಿಂಚೂ ಒಡಲಲಿ ಈ ಮೈಯ್ಯ ಮೈಯ್ಯ ತಾಕೇ ಹೊಸದು ಏನೋ ಏನೋ ಸುಖ
-----------------------------------------------------------------------------------------------------------------

ಹೊಸ ಇತಿಹಾಸ (೧೯೮೪)........ಕಿಚ್ಚು ನನ್ನೆದೆಯಲಿ
ಸಂಗೀತ : ಶಂಕರ್-ಗಣೇಶ,  ಸಾಹಿತ್ಯ : ಆರ್.ಎನ್.ಜಯಗೋಪಾಲ್  ಗಾಯನ : ಎಸ್.ಪಿ.ಬಿ, 

ಕೆಚ್ಚು ನನ್ನೆದೆಯಲಿ ಕಿಚ್ಚು ನನ್ನೊಡಲಲಿ ರೋಷ ನರನರದೇ ಬಂದಾಗ
ಯಾರೇ ಎದುರಿರಲೀ ಯಾವ ತಡೆಯಿರಲೀ ಗೂಳಿನಂತೆ ಹೋಗಬಲ್ಲೇ ನಾ.. ಗೆಲ್ಲುವೇನು ನಾ.. ನಿಲ್ಲುವೇನು .. ನಾ..
ಕೆಚ್ಚು ನನ್ನೆದೆಯಲಿ ಕಿಚ್ಚು ನನ್ನೊಡಲಲಿ ರೋಷ ನರನರದೇ ಬಂದಾಗ
ಯಾರೇ ಎದುರಿರಲೀ ಯಾವ ತಡೆಯಿರಲೀ ಗೂಳಿನಂತೆ ಹೋಗಬಲ್ಲೇ ನಾ.. ಗೆಲ್ಲುವೇನು ನಾ.. ನಿಲ್ಲುವೇನು .. ನಾ..

ಮಲಗಿರೇ ನ್ಯಾಯ ಕುಣಿದಿರೇ ದ್ರೋಹ ಸಿಡಿದು ಬಂದೇ ಇಲ್ಲೇ ..
ಹಣವನೂ ಕೊಟ್ಟೂ ಛಲದಡಿ ಇಟ್ಟೂ ಬರುವ ಬೆಂಕಿ ಜ್ವಾಲೇ ..
ಮಲಗಿರೇ ನ್ಯಾಯ ಕುಣಿದಿರೇ ದ್ರೋಹ ಸಿಡಿದು ಬಂದೇ ಇಲ್ಲೇ ..
ಹಣವನೂ ಕೊಟ್ಟೂ ಛಲದಡಿ ಇಟ್ಟೂ ಬರುವ ಬೆಂಕಿ ಜ್ವಾಲೇ ..
ವೇಗದಿಂದ ಬಂದ ಬಿರುಗಾಳಿ ನಾ
ಕೆಚ್ಚು ನನ್ನೆದೆಯಲಿ ಕಿಚ್ಚು ನನ್ನೊಡಲಲಿ ರೋಷ ನರನರದೇ ಬಂದಾಗ
ಯಾರೇ ಎದುರಿರಲೀ ಯಾವ ತಡೆಯಿರಲೀ ಗೂಳಿನಂತೆ ಹೋಗಬಲ್ಲೇ ನಾ.. ಗೆಲ್ಲುವೇನು ನಾ.. ನಿಲ್ಲುವೇನು .. ನಾ..

ಮಮತೆಯ ಬಳ್ಳಿ ಅರಸುತ ಇಲ್ಲೀ .. ಬಂದೇ ಪ್ರೇಮದಿಂದಾ..
ಬಳ್ಳಿಯ ಸುಟ್ಟ ಕಳ್ಳಿಯ ಮುಳ್ಳೂ ನೊಂದೇ ತಾಪದಿಂದಾ..
ಮಮತೆಯ ಬಳ್ಳಿ ಅರಸುತ ಇಲ್ಲೀ .. ಬಂದೇ ಪ್ರೇಮದಿಂದಾ..
ಬಳ್ಳಿಯ ಸುಟ್ಟ ಕಳ್ಳಿಯ ಮುಳ್ಳೂ ನೊಂದೇ ತಾಪದಿಂದಾ..
ಕಣ್ಣ ನೀರೂ ಬತ್ತಿ ಹೋಯಿತು ಈಗಲೇ
ಕಣ್ಣ ನೀರೂ ಬತ್ತಿ ಹೋಯಿತು ಈಗಲೇ... ಅಹ್ಹಹ್ಹಹ್ಹ .. 
ಕೆಚ್ಚು ನನ್ನೆದೆಯಲಿ ಕಿಚ್ಚು ನನ್ನೊಡಲಲಿ ರೋಷ ನರನರದೇ ಬಂದಾಗ
ಯಾರೇ ಎದುರಿರಲೀ ಯಾವ ತಡೆಯಿರಲೀ ಗೂಳಿನಂತೆ ಹೋಗಬಲ್ಲೇ ನಾ.. ಗೆಲ್ಲುವೇನು ನಾ.. ನಿಲ್ಲುವೇನು .. ನಾ..
ಕೆಚ್ಚು ನನ್ನೆದೆಯಲಿ ಕಿಚ್ಚು ನನ್ನೊಡಲಲಿ ರೋಷ ನರನರದೇ ಬಂದಾಗ
ಯಾರೇ ಎದುರಿರಲೀ ಯಾವ ತಡೆಯಿರಲೀ ಗೂಳಿನಂತೆ ಹೋಗಬಲ್ಲೇ ನಾ.. ಗೆಲ್ಲುವೇನು ನಾ.. ನಿಲ್ಲುವೇನು .. ನಾ.. 
------------------------------------------------------------------------------------------------------------------

No comments:

Post a Comment