481. ಅದಲು ಬದಲು (1979)


ಅದಲು ಬದಲು ಚಿತ್ರದ ಹಾಡುಗಳು 
  1. ನಲಿದಿದೆ ಜೀವನ ಗಂಗಾ ಬಾಳಿನ 
  2. ಬಾ ಸುಖವ ಪಡೆ ಬಾ ಗೆಳೆಯಾ 
  3.  ಪ್ರಾಯದ ವಯಸ್ಸಿಗೇ
  4. ನಲಿದಿದೆ ಜೀವನ ಗಂಗಾ ಬಾಳಿನ  (ಎಸ್.ಪಿ.ಬಿ.)

ಅದಲು ಬದಲು (1979) - ನಲಿದಿದೆ ಜೀವನ ಗಂಗಾ ಬಾಳಿನ 
ಸಾಹಿತ್ಯ: ವಿಜಯನಾರಸಿಂಹ ಸಂಗೀತ: ವಿಜಯಭಾಸ್ಕರ್ ಹಾಡಿದವರು: ಎಸ್.ಪಿ.ಬಿ., ವಾಣಿ ಜಯರಾಮ್

ಗಂಡು : ನಲಿದಿದೆ ಜೀವನ ಗಂಗಾ ಬಾಳಿನ ಭಾವ ತರಂಗ
           ಒಲವೂ ನಲಿವೂ ಎಂಥಾ ಸಂಗಮ
ಹೆಣ್ಣು  : ನಲಿದಿದೆ ಜೀವನ ಗಂಗಾ ಬಾಳಿನ ಭಾವ ತರಂಗ
           ಒಲವೂ ನಲಿವೂ ಎಂಥಾ ಸ್ಪಂದನ

ಗಂಡು : ಹೃದಯದಲ್ಲಿ ಮಧುರ ಭಾವ ರೂಪ ತಾಳಿ ನಿಂತಿದೆ
           ಹೃದಯದಲ್ಲಿ ಮಧುರ ಭಾವ ರೂಪ ತಾಳಿ ನಿಂತಿದೆ
ಹೆಣ್ಣು : ಒಲವಿನಲ್ಲಿ ಹರುಷ ಹಕ್ಕಿ ಹಾರುವಂತೆ ಕಂಡಿದೆ
ಗಂಡು : ಮನೆಗೆ ಶೋಭೆ ಮಡದಿ ನೀಡೆ ರಂಗುವಲ್ಲಿ ನಗುತಲಿದೆ
ಹೆಣ್ಣು : ನಲಿದಿದೆ ಜೀವನ ಗಂಗಾ ಬಾಳಿನ ಭಾವ ತರಂಗ
          ಒಲವೂ ನಲಿವೂ ಎಂಥಾ ಸ್ಪಂದನ

ಹೆಣ್ಣು : ರಸಿಕ ಜೀವ ಚೆಲುವಿಗಾಗಿ ನಿನ್ನ ಸಂಗ ಕೋರಿತು
          ರಸಿಕ ಜೀವ ಚೆಲುವಿಗಾಗಿ ನಿನ್ನ ಸಂಗ ಕೋರಿತು
ಗಂಡು : ಒಲವು ತಂದ ನೆರಳಿನಿಂದ ಬಾಳು ಪೂರ್ಣ ಆಯಿತು
ಹೆಣ್ಣು : ಬೆಸುಗೆಯಾದ ಬದುಕಿನಲ್ಲಿ ಅಂದ ಚೆಂದ ಚಿಗುರುತಿದೆ
ಗಂಡು : ನಲಿದಿದೆ ಜೀವನ ಗಂಗಾ
ಹೆಣ್ಣು : ಬಾಳಿನ ಭಾವ ತರಂಗ
ಗಂಡು : ಒಲವೂ     ಹೆಣ್ಣು : ನಲಿವೂ
ಇಬ್ಬರು ಎಂಥಾ ಸಂಗಮ ...
ಹೆಣ್ಣು : ಎಂಥಾ ಸಂಗಮ ...
ಗಂಡು : ಎಂಥಾ ಸಂಗಮ ... 
--------------------------------------------------------------------------------------------------------------------------

ಅದಲು ಬದಲು (1979) - ಬಾ ಸುಖವ ಪಡೆ ಬಾ ಗೆಳೆಯಾ
ಸಂಗೀತ: ವಿಜಯಭಾಸ್ಕರ, ಸಾಹಿತ್ಯ: ಚಿ.ಉದಯಶಂಕರ ಹಾಡಿದವರು: ವಾಣಿ ಜಯರಾಮ್

ಜಾಲಲಿನೋ....  ಜಾಲಲಿನೋ...  ಜಾಲಲಿನೋ.. ಹ್ಹಾಂ... ಒಹೋ
ಬಾ ಸುಖವ ಪಡೆವಾ ಗೆಳೆಯಾ
ಬಾ ಸುಖವ ಪಡೆವಾ ಗೆಳೆಯಾ
ಹಾಡಿ ನಲಿವ ಮೈಯ ಮರೆವಾ  
ಹಾಡಿ ನಲಿವ ಮೈಯ ಮರೆವಾ  
ಬಾ ಸುಖವ ಪಡೆವಾ ಗೆಳೆಯಾ 
ಬಾ ಸುಖವ ಪಡೆವಾ ಗೆಳೆಯಾ 

ಕಣ್ಣು ನೋಡೂ ಓ.... 
ಕಣ್ಣು ನೋಡೂ ಫಳಫಳ ಹೊಳೆಹೊಳೆಯುತಿದೆ ಮಿಂಚಂತೇ 
ಹೆಣ್ಣಾ ನೋಡು ಹೋಯ್...   
ಹೆಣ್ಣಾ ನೋಡು ನಲಿನಲಿಸುತಾ ನಡುಗುತಿದೆ ಹಾವಂತೇ 
ಆಸೇ ಬಾರದೇ ಬೇಕೂ ಎನ್ನದೇ 
ಆಸೇ ಬಾರದೇ ಬೇಕೂ ಎನ್ನದೇ ಸಾಕು ಬಾ ಬೇಗ 
ಬಾ ಸುಖವ ಪಡೆವಾ ಗೆಳೆಯಾ
ಬಾ ಸುಖವ ಪಡೆವಾ ಗೆಳೆಯಾ 

ತಂಪು ಗಾಳಿ.. ಹೊಯ್ 
ತಂಪು ಗಾಳಿ ಸುಳಿಸುಳಿಯುತ ಚಳಿ ತರುತಿದೆ ಜೂಮ್ಮೆಂದು 
ಇಂಪೂ ರಾಗ.. ಹ್ಹಾ... 
ಇಂಪೂ ರಾಗ ತುಟಿ ಕರೆತಿದೆ ಎದೆ ಬೆರೆತಿದೆ ಝಲ್ಲೆಂದೂ 
ಮತ್ತು ಏರಿದೆ ಮುತ್ತಿನ ಆಸೆಗೇ 
ಮತ್ತು ಏರಿದೆ ಮುತ್ತಿನ ಆಸೆಗೇ ತಾಳೇ ಬಾ ಬೇಗ 
ಬಾ ಸುಖವ ಪಡೆವಾ ಗೆಳೆಯಾ
ಬಾ ಸುಖವ ಪಡೆವಾ ಗೆಳೆಯಾ 

ಪ್ರೀತಿಯಿಂದಾ ಹ್ಹಾ... 
ಪ್ರೀತಿಯಿಂದಾ ಧರೇ ತೊಳೆಯುವೇ ಸುಖ ಹರಿಸುವೇ ಒಂದಾಗಿ 
ರಾತ್ರಿಯೆಲ್ಲಾ.. ಹ್ಹಾಂ ... 
ರಾತ್ರಿಯೆಲ್ಲಾ ನಲಿನಲಿಯುತಾ ಕುಣಿಕುಣಿಯುವ ಹಾಲಾಗಿ 
ಬೇಡ ಎನ್ನದೇ ದೂರ ತಳ್ಳದೇ 
ಬೇಡ ಎನ್ನದೇ ದೂರ ತಳ್ಳದೇ ನಲ್ಲ ಬಾ ಬೇಗ 
ಬಾ ಸುಖವ ಪಡೆವಾ ಗೆಳೆಯಾ
ಬಾ ಸುಖವ ಪಡೆವಾ ಗೆಳೆಯಾ
ಹಾಡಿ ನಲಿವ ಮೈಯ ಮರೆವಾ  
ಹಾಡಿ ನಲಿವ ಮೈಯ ಮರೆವಾ  
ಬಾ ಸುಖವ ಪಡೆವಾ ಗೆಳೆಯಾ
ಬಾ ಸುಖವ ಪಡೆವಾ ಗೆಳೆಯಾ 
--------------------------------------------------------------------------------------------------------------------------

ಅದಲು ಬದಲು (1979) - ಪ್ರಾಯದ ವಯಸ್ಸಿಗೇ
ಸಂಗೀತ: ವಿಜಯಭಾಸ್ಕರ, ಸಾಹಿತ್ಯ: ದೊಡ್ಡರಂಗೇಗೌಡ  ಹಾಡಿದವರು: ಎಸ್.ಪಿ.ಬಿ., ಎಸ್ ಜಾನಕೀ

ಗಂಡು : ಆಸೆ ಸುತ್ತಿ ಮುತ್ತಿ ದಾರಿ ಸವಿದೈತೇ
ಹೆಣ್ಣು : ಪ್ರಾಯದ ವಯಸಿಗೇ ಪ್ರೀತಿಯ ಬರಿದೈತೆ
          ಆಸೆ ಸುತ್ತಿ ಮುತ್ತಿ ದಾರಿ ಸವಿದೈತೇ
ಗಂಡು : ಮೋಹ... ಅನುದಿನ ನಗಿಸೀ
ಹೆಣ್ಣು : ದಾಹ... ಗೆಳೆತನ ಬೆಳೆಸೀ
ಗಂಡು : ಚಿಮ್ಮಿ ಚಿಮ್ಮಿ ನಲ್ಮೆ ಗೆಲ್ಮೆ ಹಾಡಿ ಕೂಡಿ ಇಂದೇ ಹರಸೈತೆ

ಗಂಡು : ಮನಸು ಮನಸು ಕಲೆತು ಕಂಡತೈ ಹೃದಯ
            ಚೆಲುವು ಗೆಲುವೂ ತೆರೆದು ಮಿಂದೈತೆ ಸವಿಯ
            ಮನಸು ಮನಸು ಕಲೆತು ಕಂಡತೈ ಹೃದಯ
           ಚೆಲುವು ಗೆಲುವೂ ತೆರೆದು ಮಿಂದೈತೆ ಸವಿಯ
ಹೆಣ್ಣು : ಬಾಳೆಲ್ಲಾ ಹಗುರಾಗುತಾ (ಆಹ್ಹಾ) ಕನಸೆಲ್ಲಾ ಹೊಸದಾಗುತಾ 
         ಬಾಳೆಲ್ಲಾ ಹಗುರಾಗುತಾ (ಹೊಯ್ ಹೊಯ್ ) ಕನಸೆಲ್ಲಾ ಹೊಸದಾಗುತಾ 
        ಹಿಗ್ಗಿ ಹಿಗ್ಗಿ ನಕ್ಕು ನಡು ಜೋಡಿ ಹಾಡಿ ಒಲುಮೆ ಬೆರೆತೈತೇ
ಗಂಡು  : ಪ್ರಾಯದ ವಯಸಿಗೇ(  ಹ್ಹಾ...) ಪ್ರೀತಿಯ ಕರಿದೈತೆ  (ಆಹ್ಹಾ )
          ಆಸೆ ಸುತ್ತಿ ಮುತ್ತಿ ದಾರಿ ಸವಿದೈತೇ
ಹೆಣ್ಣು : ಮೋಹ... ಅನುದಿನ ನಗಿಸೀ  ದಾಹ... ಗೆಳೆತನ ಬೆಳೆಸೀ
         ಚಿಮ್ಮಿ ಚಿಮ್ಮಿ ನಲ್ಮೆ ಗೆಲ್ಮೆ ಹಾಡಿ ಕೂಡಿ ಇಂದೇ ಹರಸೈತೆ

ಹೆಣ್ಣು : ಹಗಲು ಇರುಳೂ ಬಯಕೆ ತಂದೈತೇ ಖುಷಿಯಾ 
         ಕರೆದು ಕರೆದು ಮಿಲನ ಕರೆದೈತೆ ಕಹಿಯ 
        ಹಗಲು ಇರುಳೂ ಬಯಕೆ ತಂದೈತೇ ಖುಷಿಯಾ 
        ಕರೆದು ಕರೆದು ಮಿಲನ ಕರೆದೈತೆ ಕಹಿಯ 
ಗಂಡು : ಊರೆಲ್ಲಾ ತಿರುಗಾಡುತಾ (ಹ್ಹಾ) ಬದುಕೆಲ್ಲಾ ತೆರವಾಗುತಾ (ಹ್ಹಾ) 
           ಊರೆಲ್ಲಾ ತಿರುಗಾಡುತಾ (ಅಹ್ಹಾ) ಬದುಕೆಲ್ಲಾ ತೆರವಾಗುತಾ    
           ಅಲ್ಲಿ ಇಲ್ಲಿ ಅಕ್ಕ ಪಕ್ಕ ಹಾಡಿ ಸಾಗಿ ಸುಖವೂ ಮಿನುಗೈತೇ 
ಹೆಣ್ಣು : ಪ್ರಾಯದ ವಯಸಿಗೇ ಪ್ರೀತಿಯ ಬರಿದೈತೆ
          ಆಸೆ ಸುತ್ತಿ ಮುತ್ತಿ ದಾರಿ ಸವಿದೈತೇ
ಗಂಡು : ಮೋಹ... ಅನುದಿನ ನಗಿಸೀ  ದಾಹ... ಗೆಳೆತನ ಬೆಳೆಸೀ
ಇಬ್ಬರು : ಚಿಮ್ಮಿ ಚಿಮ್ಮಿ ನಲ್ಮೆ ಗೆಲ್ಮೆ ಹಾಡಿ ಕೂಡಿ ಇಂದೇ ಹರಸೈತೆ
 -------------------------------------------------------------------------------------------------------------------------

ಅದಲು ಬದಲು (1979) - ನಲಿದಿದೆ ಜೀವನ ಗಂಗಾ ಬಾಳಿನ 
ಸಂಗೀತ: ವಿಜಯಭಾಸ್ಕರ, ಸಾಹಿತ್ಯ: ಚಿ.ಉದಯಶಂಕರ ಹಾಡಿದವರು: ಎಸ್.ಪಿ.ಬಿ.ಕುಮಾರಿ ಶಿರಿಶ್

ನಲಿದಿದೆ ಜೀವನ ಗಂಗಾ ಬಾಳಿನ ಭಾವ ತರಂಗ
ನಲಿದಿದೆ ಜೀವನ ಗಂಗಾ ಬಾಳಿನ ಭಾವ ತರಂಗ
ಒಲವೂ ನಲಿವೂ ಎಂಥಾ ಸಂಗಮ
ನಲಿದಿದೆ ಜೀವನ ಗಂಗಾ ಬಾಳಿನ ಭಾವ ತರಂಗ
ಒಲವೂ ನಲಿವೂ ಎಂಥಾ ಸಂಗಮ

ಹೃದಯದಲ್ಲಿ ಮಧುರ ಭಾವ ರೂಪ ತಾಳಿ ನಿಂತಿದೆ
ಹೃದಯದಲ್ಲಿ ಮಧುರ ಭಾವ ರೂಪ ತಾಳಿ ನಿಂತಿದೆ
ಒಲವಿನಲ್ಲಿ ಹರುಷ ಹಕ್ಕಿ ಹಾರುವಂತೆ ಕಂಡಿದೆ
ಮನೆಗೆ ಶೋಭೆ ಮಡದಿ ನೀಡೆ ರಂಗುವಲ್ಲಿ ನಗುತಲಿದೆ
ನಲಿದಿದೆ ಜೀವನ ಗಂಗಾ ಬಾಳಿನ ಭಾವ ತರಂಗ
ಒಲವೂ ನಲಿವೂ ಎಂಥಾ ಸಂಗಮ

ರಸಿಕ ಜೀವ ಚೆಲುವಿಗಾಗಿ ನಿನ್ನ ಸಂಗ ಕೋರಿತು
ರಸಿಕ ಜೀವ ಚೆಲುವಿಗಾಗಿ ನಿನ್ನ ಸಂಗ ಕೋರಿತು
ಒಲವು ತಂದ ನೆರಳಿನಿಂದ ಬಾಳು ಪೂರ್ಣ ಆಯಿತು
ಬೆಸುಗೆಯಾದ ಬದುಕಿನಲ್ಲಿ ಅಂದ ಚೆಂದ ಚಿಗುರುತಿದೆ
ನಲಿದಿದೆ ಜೀವನ ಗಂಗಾ ಬಾಳಿನ ಭಾವ ತರಂಗ
ಒಲವೂ ನಲಿವೂ ಎಂಥಾ ಸಂಗಮ ಎಂಥಾ ಸಂಗಮ
ಎಂಥಾ ಸಂಗಮ
ಮಗು : ನಲಿದಿದೆ ಜೀವನ ಗಂಗಾ ಬಾಳಿನ ಭಾವ ತರಂಗ
ಒಲವೂ ನಲಿವೂ ಎಂಥಾ ಸಂಗಮ 
--------------------------------------------------------------------------------------------------------------------------

No comments:

Post a Comment