483. ಅದ್ದೂರಿ (2012)



ಅದ್ದೂರಿ ಚಲನಚಿತ್ರದ ಹಾಡುಗಳು 
  1. ಥೂ ಅಂತ ಉಗಿದರು 
  2. ಯಾರಿಲ್ಲ ಯಾರಿಲ್ಲ ನಿನ್ನಂತೆ ಯಾರಿಲ್ಲ
  3. ಎಬಿಸಿಡಿ
  4. ಅಮ್ಮಾಟೇ 
  5. ಮುಸ್ಸಂಜೇ ವೇಳೆಯಲೀ   
ಅದ್ದೂರಿ (2012) - ಥೂ ಅಂತ ಉಗಿದರು 
ಸಂಗೀತ: ವಿ.ಹರಿಕೃಷ್ಣ ಸಾಹಿತ್ಯ: ಎ.ಪಿ.ಅರ್ಜುನ್  ಗಾಯನ : ವಿ.ಹರಿಕೃಷ್ಣ

ಥೂ ಅಂತ ಉಗಿದರು ನನ್ನ ನಿನ್ನೇ ಪ್ರೀತಿ ಮಾಡುತ್ತೀನಿ
ಹೋಗೇ, ಹೋಗಮ್ಮ ಹೋಗೇ
ಬಾಯ್ತುಂಬ ಬೈದರು ನನ್ನ ಮುದ್ದು ಅಂತ ತಿಳ್ಕೊಂತೀನಿ
ಹೋಗೇ, ಹೋಗಮ್ಮ ಹೋಗೇ
ಏನಾದ್ರು ಹೇಳಿ ಮುಂದೆ ಹೋಗೇ
ಹೇಳ್ದಿದ್ರೆ ಹಿಂದೆ ಬರ್ತೀನ್ ಹೋಗೇ ಹೋಗೇ
ನೀ ನಗಲೇ ಬೇಕು ಓಂದ್ ಸಾರಿ
ದಿಸ್ ಈಸ್ ಅಚ್ಚು ರಚ್ಚು ಲವ್ ಸ್ಟೋರಿ
ದಿಸ್ ಈಸ್ ಅಚ್ಚು ರಚ್ಚು ಲವ್ ಸ್ಟೋರಿ
ಹೋಗೇ, ಹೋಗಮ್ಮ ಹೋಗೇ ಹೋಗೇ
ಥೂ ಅಂತ ಉಗಿದರು ನನ್ನ ನಿನ್ನೇ ಪ್ರೀತಿ ಮಾಡುತ್ತೀನಿ
ಹೋಗೇ, ಹೋಗಮ್ಮ ಹೋಗೇ
ಬಾಯ್ತುಂಬ ಬೈದರು ನನ್ನ ಮುದ್ದು ಅಂತ ತಿಳ್ಕೊಂತೀನಿ
ಹೋಗೇ, ಹೋಗಮ್ಮ ಹೋಗೇ

ಫಸ್ಟಿಂದ ಪ್ರೀತಿನಾ, ಮಾಡ್ತೀನಿ ನಾ ಚಿನ್ನಾ
ಲವ್ ಲೆಟ್ರು ಕೊಡ್ತೀನಿ, ಒದ್ಕೋಂಡ್ ಹೋಗೇ
ನನ್ ಹಾರ್ಟು ಟೆಂಪಲ್ಲು, ಹೇಳಲ್ಲಾ ನಾ ಸುಳ್ಳು
ಕೈಮುಗಿದು ಪ್ರೀತಿನಾ, ಇಟ್ಬಿಟ್ ಹೋಗೇ
ಹೋಗೇ ಹೋಗೇ ಹೋಗೇ ಹೋಗೇ
ಮೂತಿ ಮುರ್ಕೊಂಡಾದ್ರು ಹೋಗೇ
ರಾಜ ರಾಣಿ ಹಾಕ್ಬಿಟ್ ಹೋಗೇ
ರಾಜಾ ಬಿದ್ರೆ ಒಪ್ಕೊಂಡ್ ಹೋಗೇ
ನೀ ನಗಲೇ ಬೇಕು ಒಂದ್ ಸಾರಿ
ದಿಸ್ ಈಸ್ ಅಚ್ಚು ರಚ್ಚು ಲವ್ ಸ್ಟೋರಿ
ದಿಸ್ ಈಸ್ ಅಚ್ಚು ರಚ್ಚು ಲವ್ ಸ್ಟೋರಿ ಹೋಗೇ...
ಥೂ ಅಂತ ಉಗಿದರು ನನ್ನ ನಿನ್ನೇ ಪ್ರೀತಿ ಮಾಡುತ್ತೀನಿ
ಹೋಗೇ, ಹೋಗಮ್ಮ ಹೋಗೇ
ಬಾಯ್ತುಂಬ ಬೈದರು ನನ್ನ ಮುದ್ದು ಅಂತ ತಿಳ್ಕೊಂತೀನಿ
ಹೋಗೇ, ಹೋಗಮ್ಮ ಹೋಗೇ

ನೋ ಎಂಟ್ರಿ ರೋಡಲ್ಲಿ, ರೋಸ್ ಅಂಗ್ಡಿ ಇಡ್ತೀನಿ
ನೀ ಟೇಪು ಕಟ್ಮಾಡಿ, ರೋಸ್ ಇಸ್ಕೊಡ್ ಹೋಗೇ
ಕನಸೆಂಬ ಟ್ಯಾಕ್ಸಿಲಿ, ನಾ ಲಿಸ್ಟು ತರ್ತೀನಿ
ಡೋರ್ ಒಪನ್ ಮಾಡ್ತೀಯಾ, ಹೇಳ್ಬಿಟ್ಟು ಹೋಗೇ
ಕೋರ್ಟಲ್ ಕೇಸು ಹಾಕ್ತೀನ್ ಹೋಗೇ
ವಾದ ಮಾಡ್ದೇ ಗೆಲ್ತೀನ್ ಹೋಗೇ
ನಿನ್ಮನ್ಸು ನಂದೆ ಕೊಟ್ಬಿಟ್ ಹೋಗೇ
ನಾನೊಪ್ಸಿ ಕರ್ಕೊಂಡ್ಬರ್ತೀನ್ ಹೋಗೇ
ನೀ ಒಪ್ಲೇ ಬೇಕು ಒಂದ್ ಸಾರಿ
ದಿಸ್ ಈಸ್ ಅಚ್ಚು ರಚ್ಚು ಲವ್ ಸ್ಟೋರಿ
ದಿಸ್ ಈಸ್ ಅಚ್ಚು ರಚ್ಚು ಲವ್ ಸ್ಟೋರಿ
ಹೋಗೇ ಹೋಗಮ್ಮ ಹೋಗೇ ಹೋಗೇ
ಥೂ ಅಂತ ಉಗಿದರು ನನ್ನ ನಿನ್ನೇ ಪ್ರೀತಿ ಮಾಡ್ತೀನ್ ನಾನು
ಹೋಗೇ, ಹೋಗಮ್ಮ ಹೋಗೇ
ಬಾಯ್ತುಂಬ ಬೈದರು ನನ್ನ ಮುದ್ದು ಅಂತ ತಿಳ್ಕೊಂತೀನಿ
ಹೋಗೇ, ಹೋಗಮ್ಮ ಹೋಗೇ
-----------------------------------------------------------------------------------------------------------------------

ಅದ್ದೂರಿ (2012)  - ಯಾರಿಲ್ಲ ಯಾರಿಲ್ಲ ನಿನ್ನಂತೆ ಯಾರಿಲ್ಲ
ಸಂಗೀತ: ವಿ.ಹರಿಕೃಷ್ಣ ಸಾಹಿತ್ಯ: ಎ.ಪಿ.ಅರ್ಜುನ್ ಹಾಡಿದವರು: ಚೇತನ್

ಯಾರಿಲ್ಲ ಯಾರಿಲ್ಲ ನಿನ್ನಂತೆ ಯಾರಿಲ್ಲ ನಿನ್ನಷ್ಟು ಮುದ್ದಾಗಿ ನಂಗ್ಯಾರು ಕಂಡಿಲ್ಲ
ಗೊತ್ತಿಲ್ಲ ಗೊತ್ತಿಲ್ಲ ನಂಗಂತು ಗೊತ್ತಿಲ್ಲ ನೀನಿಲ್ದೆ ಭೂಮೀಲಿ ಬದುಕೋದೆ ಗೊತ್ತಿಲ್ಲ
ಕಳೆದಿರೋ ಜೀವವೆ ಮರಳಿದೆ ಹೃದಯಕೆ ಹುಡುಕಲು ಸಾದ್ಯವೆ ನಿಂಗೇ ಹೋಲಿಕೆ
ನನ್ ಲವ್ ನೀನೇ ಸಿಂಡ್ರೆಲಾ...
ನನ್ ಲವ್ ನೀನೇ ಸಿಂಡ್ರೆಲಾ...
ಯಾರಿಲ್ಲ ಯಾರಿಲ್ಲ ನಿನ್ನಂತೆ ಯಾರಿಲ್ಲ ನಿನ್ನಷ್ಟು ಮುದ್ದಾಗಿ ನಂಗ್ಯಾರು ಕಂಡಿಲ್ಲ
ಗೊತ್ತಿಲ್ಲ ಗೊತ್ತಿಲ್ಲ ನಂಗಂತು ಗೊತ್ತಿಲ್ಲ ನೀನಿಲ್ದೆ ಭೂಮೀಲಿ ಬದುಕೋದೆ ಗೊತ್ತಿಲ್ಲ

ಕನಸು ಒಂದೊಂದು ನಾಮುಂದು ತಾಮುಂದು ಎಂದು, ಬರುತಿಹೆ
ನಿನ್ನ ಮುತ್ತನ್ನು ಕೇಳೋಕೆ ಮುಂದಾಗಿ ಬಂದು, ಕುಳಿತಿವೆ
ಸುಮ್ಮನೆ ಸೋಲಲು ಕೊಡುವೆಯಾ ಅನುಮತಿ
ಸೂರ್ಯ ಮುಟ್ಟೋಕು ಸಿಗದ, ಯಾವ ಪದದಲ್ಲು ಇರದ
ಎದೆಯ ಹಾಳೇಲಿ ಉಳಿದ, ಹೇ.. ಹೇ.. ಹೇ.. ಹೇ..
ನನ್ ಲವ್ ನೀನೇ ಸಿಂಡ್ರೆಲಾ... ನನ್ ಲವ್ ನೀನೇ ಸಿಂಡ್ರೆಲಾ...
ಯಾರಿಲ್ಲ ಯಾರಿಲ್ಲ ನಿನ್ನಂತೆ ಯಾರಿಲ್ಲ ನಿನ್ನಷ್ಟು ಮುದ್ದಾಗಿ ನಂಗ್ಯಾರು ಕಂಡಿಲ್ಲ
ಗೊತ್ತಿಲ್ಲ ಗೊತ್ತಿಲ್ಲ ನಂಗಂತು ಗೊತ್ತಿಲ್ಲ ನೀನಿಲ್ದೆ ಭೂಮೀಲಿ ಬದುಕೋದೆ ಗೊತ್ತಿಲ್ಲ

ಕಡಲ ಬಾಯಲ್ಲಿ ಕೈಹಾಕಿ ಮುತ್ತೊಂದ ತಂದು, ಕೊಡುವೆನು
ಬೆಳ್ಳಿ ಬಾನಲ್ಲಿ ಕೈಚಾಚಿ ನಿನ್‌ಹೆಸರ ಒಮ್ಮೆ, ಬರೆವೆನು
ಪ್ರತಿಕ್ಷಣ ನಿನ್ನನೇ ಜಪಿಸುವಾ ಉಸಿರಿದು
ಕಂಪು ಕಸ್ತೂರಿ ಸುರಿದ, ನಗುವ ಕಾವೇರಿ ಮೊಗದ
ನನ್ನ ಕಣ್ಣಲ್ಲೇ ಮೆರೆದ, ಹೇ.. ಹೇ.. ಹೇ.. ಹೇ.. ನೀನೇ ನನ್ನ ಸಿಂಡ್ರೆಲಾ...
ನೀನೇ ನನ್ನ ಸಿಂಡ್ರೆಲಾ...
ಯಾರಿಲ್ಲ ಯಾರಿಲ್ಲ ನಿನ್ನಂತೆ ಯಾರಿಲ್ಲ ನಿನ್ನಷ್ಟು ಮುದ್ದಾಗಿ ನಂಗ್ಯಾರು ಕಂಡಿಲ್ಲ
ಗೊತ್ತಿಲ್ಲ ಗೊತ್ತಿಲ್ಲ ನಂಗಂತು ಗೊತ್ತಿಲ್ಲ ನೀನಿಲ್ದೆ ಭೂಮೀಲಿ ಬದುಕೋದೆ ಗೊತ್ತಿಲ್ಲ
-------------------------------------------------------------------------------------------------------

ಅದ್ದೂರಿ (2012)  - ಎಬಿಸಿಡಿ  
ಸಂಗೀತ: ವಿ.ಹರಿಕೃಷ್ಣ ಸಾಹಿತ್ಯ: ಎ.ಪಿ.ಅರ್ಜುನ್ ಹಾಡಿದವರು: ರಂಜಿತ, ಹರಿಕೃಷ್ಣ 
 

-------------------------------------------------------------------------------------------------------

ಅದ್ದೂರಿ (2012) - ಅಮ್ಮಾಟೇ
ಸಂಗೀತ: ವಿ.ಹರಿಕೃಷ್ಣ ಸಾಹಿತ್ಯ: ಎ.ಪಿ.ಅರ್ಜುನ್ ಹಾಡಿದವರು: ಹರಿಕೃಷ್ಣ

ಹೂಂ ಅಂದ್ಳು ಆ ದಿನ ಊಹೂಂ ಅಂದ್ಳು ಈ ದಿನ ಆಹಾ ಅಮ್ಮಾಟೇ... ಆಹಾ ಅಮ್ಮಾಟೇ...  
ಲಿಪ್ಸ ಕೊಟ್ಟಳು ಆ ದಿನ ಚಿಪ್ಸ ಕೊಟ್ಟಳು ಈ ದಿನ ಆಹಾ ಅಮ್ಮಾಟೇ... ಆಹಾ ಅಮ್ಮಾಟೇ... 
ನಾನೂ ಸುಮ್ಮನೇ ನಿಂತಿದ್ದೇ ಎದುರಿಗೇ ಬಂದ್ಬಿಟ್ಟಳೂ ನನ್ನ ಗುಂಡಿ ಬಿಚ್ಚಿತೂ ಹೃದಯ ಕದ್ದಬಿಟ್ಟಳೂ 
  
ಓಹ್ ಮೈ ಲಾರ್ಡ್ ನಾನೂ ಸತ್ಯಾನೇ ಹೇಳುತ್ತೇನೇ ಸತ್ಯವನ್ನೂ ಬಿಟ್ಟೂ ಬೇರೇನೂ ಹೇಳುವುದಿಲ್ಲಾ 
ರೋಮಿಯೋ ಜೂಲಿಯೆಟ್ ಲೈಲ್ಲಾ ಮಜನೂ ಸಲೀಮ್ ಆರ್ನಾಕಲೀ ಅವರದೇಲ್ಲಾ ಫ್ಲಾಪ್ ಲವ್ ಸ್ಟೋರೀಸ್  
ಓನ್ ಏಂಡ್ ಓನ್ಲಿ ಈ ಅಚ್ಚೂಸ್ ಮಾತ್ರ ಟಾಪ್ ಲವ್ ಸ್ಟೋರಿ (ಸರೀ, ಮುಂದೇ ಹೇಳ್ ಮಾಮ )
ಹೂಂ ಅಂದ್ಳು ಆ ದಿನ ಊಹೂಂ ಅಂದ್ಳು ಈ ದಿನ ಆಹಾ ಅಮ್ಮಾಟೇ... ಆಹಾ ಅಮ್ಮಾಟೇ...  
ಓಡಿ ಬಂದ್ಳೂ ಆ ದಿನ ಓಡಿ ಹೋಡ್ದಬಿಟ್ಟಳು ಈ ದಿನ  ಆಹಾ ಅಮ್ಮಾಟೇ... ಆಹಾ ಅಮ್ಮಾಟೇ...  

ಕನ್ಫ್ಯೂಸ್ ಆಗೋ ಕಲರ್ ಕನಸೂ ಹುಡ್ಗಿರ್ ಒಬ್ಬರೇನೇ ಹೆಸರೂ ಇಡೋಕ್ ಆಗ್ದೇ ಇರೂ ಸ್ವೀಟೂ ಇವಳೇನೇ 
ಕ್ಯಾಲೆಂಡರಲ್ಲಿ ಇಲ್ಲದೇ ಇರೋ ತಾರೀಖ ಇವಳೇನೇ ಸೊನ್ನೆಗಿಂತ ಮೋಸ ಅವಳ ಸ್ಮೈಲ್ ಒಂದೇನೇ 
ಸ್ಟೈಲನ್ನೂ ಕೊಟ್ಟಳೂ ಹಾರ್ಟನ್ನೂ ಕೊಟ್ಟೇನೂ ಪ್ರೀತಿಸಿ ಬಿಟ್ಟಳೂ ಪ್ರೀತಿಸ ಬಿಟ್ಟನೂ  
ಅಮ್ಮಾಟೇ...  ಅಮ್ಮಾಟೇ... ಲವ್ ಇಸ್ ಬ್ಲೈಂಡೂ ಅಮ್ಮಾಟೇ...  
ಅಮ್ಮಾಟೇ...  ಅಮ್ಮಾಟೇ... ಮೈ ಲವ್ ಇಸ್ ಗಾನ್ ಅಮ್ಮಾಟೇ...  
ಈ ಪ್ರಪಂಚದಲೀ ಸಕ್ಸಸಫೂಲ್ ಲವ್ ಸ್ಟೋರಿ ಇರೋದೂ ಶ್ರೀ ಕೃಷ್ಣ ಪರಮಾತ್ಮನದೂ ಮಾತ್ರ 
ಅವರೂ ಬರೆದಿರೋ ಭಗ್ವಧ್ಗೀತಾ ಮೇಲೆ ಪ್ರಮಾಣ ಮಾಡಿ ಹೇಳ್ತೀನಿ 
ಕಿಸ್ಸೂ ಕೊಟ್ಟಳು ಆ ದಿನ ಕಿತ್ತಕೊಂಡ ಬಿಟ್ಟಳು ಈ ದಿನ ಆಹಾ ಅಮ್ಮಾಟೇ... ಆಹಾ ಅಮ್ಮಾಟೇ... 
ತಬ್ಬಿಕೊಂಡಳೂ ಆ ದಿನ ತಳ್ಳ ಬಿಟ್ಟಳೂ ಈ ದಿನ ಆಹಾ ಅಮ್ಮಾಟೇ... ಆಹಾ ಅಮ್ಮಾಟೇ...       

ನಂಬರ್ ಪ್ಲೇಟ್ ಇಲ್ಲದೇ ಇರೋದ ಹಾರ್ಟಗೇ ಒಂದೇನೇ ಒಂದೇ ಹುಡ್ಗಿನ್ ಪ್ರೀತ್ಸೋ ಹುಡುಗ ಸಿಕ್ಕೋದ ಕಷ್ಟಾನೇ 
ಹಠ ಮಾಡೋ ಹುಡ್ಗಿರ್ ಪ್ರೀತೀನ ಗೆಲ್ಲೋದ ಕಷ್ಟಾನೇ ಗೆದ್ದೋರೇಲ್ಲಾ ಸೋತೀದ್ದು  ಪ್ರೀತಿ ಮುಂದೇನೇ 
ಫೇಲೂ ಆಗಿರೋದ್ ಹೃದಯ ನನ್ನದೂ ಫೀಲಲ್ಲಿ ಇದ್ದರೂ ಅವಳಿಗೇ ಕಾಣದೂ 
ಅಮ್ಮಾಟೇ... ಅಮ್ಮಾಟೇ...  ಲವ್ ಇಸ್ ಬ್ಲೈಂಡೂ ಅಮ್ಮಾಟೇ...      
ಅಮ್ಮಾಟೇ... ಅಮ್ಮಾಟೇ...  ಲವ್ ಇಸ್ ಗಾನ್ ಅಮ್ಮಾಟೇ...                    
ಟೈಮ್ ಆಯಿತು ಸಾಂಗ್ ಮುಗಿಸಿಬಿಡೋಣ (ಕೊನೇದಾಗಿ ಒಂದ್ ಸ್ಲೋಗನ್ ಹೇಳಿ ಬಾಸೂ  )
ಮಚ್ಚಲ್ಲೀ ಹೊಡೆದರೇ ಒಂದೇ ಒಂದೂ ಏಟೂ ಲವ್ವಲ್ಲೀ ಬಿದ್ದರೇ ಬದುಕೋದೇ ಡೌಟ್ 
ನಾನೂ ಸತ್ಯವನ್ನೇ ಹೇಳುತ್ತೇನೇ ಸತ್ಯವನ್ನೂ ಬಿಟ್ಟೂ ಬೇರೇನೂ ಹೇಳುವುದಿಲ್ಲಾ  
-------------------------------------------------------------------------------------------------------

ಅದ್ದೂರಿ (2012) - ಮುಸ್ಸಂಜೇ ವೇಳೆಲೀ
ಸಂಗೀತ: ವಿ.ಹರಿಕೃಷ್ಣ ಸಾಹಿತ್ಯ: ಎ.ಪಿ.ಅರ್ಜುನ್ ಹಾಡಿದವರು: ವಾಣಿ ಹರಿಕೃಷ್ಣ 

ಮುಸ್ಸಂಜೇ ವೇಳೆಲೀ ಮುತ್ತಿಟ್ಟ ಉಸಿರನೇ ಬಿಟ್ಟೋಗೋ ದಾರಿಯಲ್ಲಿ ಖುಷಿಯೇ ಇಲ್ಲ 
ಒಟ್ಟಾದ ಹೆಜ್ಜೇನ ಕಿತ್ತಿಟ್ಟು ಹೋರಡೋಕೇ ಜೊತೆ ಇದ್ದ ನೆರಳಿಗೂ ಯಾಕೋ ಇಷ್ಟ ಇಲ್ಲಾ 
ಒಲವಿಲ್ಲದ ಒಡಲೆಲ್ಲಿದೇ.. ತಾಯಿಯಿಲ್ಲದ ಮಡಿಲೆಲ್ಲಿದೇ 
ಕಣ್ಣಿರಿಗೂ ಒಂದೂ ಕೊನೆಯ ಆಸೇ ಇದೇ 
ಕಣ್ಣಿಲ್ಲದ ಪ್ರೀತಿಯ ಕೇಳದೇ ಸಾಯುತಿದೇ 
ಮುಸ್ಸಂಜೇ ವೇಳೆಲೀ ಮುತ್ತಿಟ್ಟ ಉಸಿರನೇ ಬಿಟ್ಟೋಗೋ ದಾರಿಯಲ್ಲಿ ಖುಷಿಯೇ ಇಲ್ಲ 
ಒಟ್ಟಾದ ಹೆಜ್ಜೇನ ಕಿತ್ತಿಟ್ಟು ಹೋರಡೋಕೇ ಜೊತೆ ಇದ್ದ ನೆರಳಿಗೂ ಯಾಕೋ ಇಷ್ಟ ಇಲ್ಲಾ 
 
ನಿನ್ನಾಣೆಗೂ ಗೊತ್ತಿಲ್ಲಾ ಈ ಒಂಟಿಯ ಹೊಸ ಆಟ ಕಳೆದಹೋಗೋ ಮುನ್ನ ಕೈ ಸೇರಬಾರದೇ 
ಮಾತಿಲ್ಲದೇ ಕುಂತಿದ್ದ ಆ ಮೌನದ ಮನವಿ ನಾ ಏನೆಂದೂ ನೀನೋಮ್ಮೆ ಕೆಳಬಾರದೇ 
ಹಳೇ ಜಾಗ ಹೊಸ ನೋವೂ ದಿನ ಕಳೆಯಲೂ ಗೊತ್ತಿಲ್ಲಾ 
ಎದೆಗೂಡ ಗಡಿಯಾರ ನೀನಿಲ್ಲದೇ ನಡೆಯೋಲ್ಲ 
ಚೂರಾಗದ ಮನಸೆಲ್ಲಿದೇ ಚೂರಾದರೂ ಮನಸೂ ಇದೇ 
ಆ ಮುತ್ತಿಗೂ ಹಣೆಯ ಮುಟ್ಟಿದ ನೆನಪೂ ಇದೇ ಹಣೆ ಮುಟ್ಟಿದ ತಪ್ಪಿಗೇ ಶಿಕ್ಷೆಯ ಕೇಳುತಿದೇ ... 
ಓ.. ಮುಸ್ಸಂಜೇ ವೇಳೆಲೀ ಮುತ್ತಿಟ್ಟ ಉಸಿರನೇ ಬಿಟ್ಟೋಗೋ ದಾರಿಯಲ್ಲಿ ಖುಷಿಯೇ ಇಲ್ಲ 
ಒಟ್ಟಾದ ಹೆಜ್ಜೇನ ಕಿತ್ತಿಟ್ಟು ಹೋರಡೋಕೇ ಜೊತೆ ಇದ್ದ ನೆರಳಿಗೂ ಯಾಕೋ ಇಷ್ಟ ಇಲ್ಲಾ 
  
ಎದೆಮೇಲೆ ಮಾಡಿದ್ದ ಆ ಆಣೆಗೂ ಭಾಷೆಗೂ ಬಲವಿದ್ದರೇ ಒಲವನ್ನೂ ಕಾಯಬಾರದೇ 
ಉಸಿರೋಗೋ ಮುಂಚೇನೇ ಹೃದಯಕ್ಕೇ ತಾಗಿ ಬಡಿತಗಳ ಕೈ ತುತ್ತ ನೀಡಬಾರದೇ 
ಹೆಸರನ್ನೂ ಬರೆದಿದ್ದ ಆ ಗೋಡೆಗೂ ಉಸಿರಿಲ್ಲಾ ಮನಸಾರೇ ಆಲಿಸೋಕೇ ಇದೂ ಬೊಂಬೆಯ ಕನಸಲ್ಲ 
ಈಗಾಗಲೇ ನೋವಾಗಿದೇ ದೂರಾಗಲೂ ಭಯವಾಗಿದೇ 
ನಿನ್ನೊಟ್ಟಿಗೇ ಕಳೆದ ನೆನಪೇ ಕಾಡುತಿದೇ ನನ್ನ ಕನಸಿನ ಪ್ರೀತಿಗೇ ಬೀಗವ ಬೇರುತಿದೆ  
ಓ.. ಮುಸ್ಸಂಜೇ ವೇಳೆಲೀ ಮುತ್ತಿಟ್ಟ ಉಸಿರನೇ ಬಿಟ್ಟೋಗೋ ದಾರಿಯಲ್ಲಿ ಖುಷಿಯೇ ಇಲ್ಲ 
ಒಟ್ಟಾದ ಹೆಜ್ಜೇನ ಕಿತ್ತಿಟ್ಟು ಹೋರಡೋಕೇ ಜೊತೆ ಇದ್ದ ನೆರಳಿಗೂ ಯಾಕೋ ಇಷ್ಟ ಇಲ್ಲಾ 
-------------------------------------------------------------------------------------------------------

No comments:

Post a Comment