484. ಹೃದಯ ಹಾಡಿತು (1991)


ಹೃದಯ ಹಾಡಿತು ಚಿತ್ರದ ಹಾಡುಗಳು 
  1. ನಲಿಯುತಾ ಹೃದಯ ಹಾಡನು ಹಾಡಿದೆ
  2. ಓ ನನ್ನ ಮಲ್ಲಿಗೆ  ಬಯಸಿ ಬಂದೆ ಇಲ್ಲಿಗೆ
  3. ತಂಪಾದ ಗಾಳಿ ಬೀಸಲಿ  ಇಂಪಾದ ರಾಗ ಹಾಡಲಿ
  4. ಕಣ್ಣಲ್ಲಿ ಜ್ಯೋತಿ ತಂದನೋ ನೀನೇ 
  5. ಗಿರಿ ನವಿಲು ಎಲ್ಲೋ ಕರಿ ಮುಗಿಲೋ ಎಲ್ಲೋ 
ಹೃದಯ ಹಾಡಿತು (1991) - ನಲಿಯುತಾ ಹೃದಯ ಹಾಡನು ಹಾಡಿದೆ
ಸಾಹಿತ್ಯ: ಚಿ. ಉದಯಶಂಕರ್ ಸಂಗೀತ: ಉಪೇಂದ್ರಕುಮಾರ್ ಗಾಯನ: ಡಾ| ರಾಜ್‍ಕುಮಾರ್


ನಲಿಯುತಾ ಹೃದಯ ಹಾಡನು ಹಾಡಿದೆ
ನಯನವು ಬಯಕೆ ಸಾವಿರ ಹೇಳಿದೆ
ನಲಿಯುತಾ ಹೃದಯ ಹಾಡನು ಹಾಡಿದೆ
ನಯನವು ಬಯಕೆ ಸಾವಿರ ಹೇಳಿದೆ

ಬಾನಲ್ಲಿ ಬೆಳಕಿಂದು ಮೂಡಿದೆ  ಬೆಳಕಲ್ಲಿ ಹೊಸಬಾಳು ಕಂಡಿದೆ
ಹೊಸಬಾಳು ಹೊಸ ಆಸೆ ತಂದಿದೆ  ಹೊಸಆಸೆ ಜೊತೆಯೊಂದ ಕೇಳಿದೆ
ಬರಡಾದ ಲತೆಯೀಗ ಹಸಿರಾಗಿದೆ  ಹೊಸಜೀವ ಬಂತೆಂದು ಕುಣಿದಾಡಿದೆ
ಬರಡಾದ ಲತೆಯೀಗ ಹಸಿರಾಗಿದೆ   ಹೊಸಜೀವ ಬಂತೆಂದು ಕುಣಿದಾಡಿದೆ
ಬೆಳಗಿನ ರವಿಯು ಮೂಡಿದ ಬಾನಲಿ ಬೆಳಗಿನ ತೆರೆಯ ಹಾಸಿದ ಬಾಳಲಿ

ಆ ಚಂದ್ರ ಮೇಲಿಂದ ಬಂದನೂ  ತಂಪಾದ ಬೆಳಕನ್ನು ತಂದನೂ
ಅನುರಾಗದಾನಂದ ತುಂಬುತಾ  ಜೊತೆಯಾಗೆ ಧರೆಯಲ್ಲೇ ನಿಂತನೂ
ಕಣ್ಣೋಟ ಬೆರೆತಾಗ ಆನಂದವೋ  ತುಟಿಯಲ್ಲೇ ಮರೆಯಾಯ್ತು ಮಾತೆಲ್ಲವು
ಕಣ್ಣೋಟ ಬೆರೆತಾಗ ಆನಂದವು  ತುಟಿಯಲ್ಲೇ ಮರೆಯಾಯ್ತು ಮಾತೆಲ್ಲವು
ನಲಿಯುತ ಹೃದಯ ಹಾಡನು ಹಾಡಿದೆ  ನಯನವು ಬಯಕೆ ಸಾವಿರ ಹೇಳಿದೆ
------------------------------------------------------------------------------------------------------------------------

ಹೃದಯ ಹಾಡಿತು (1991) - ಓ ನನ್ನ ಮಲ್ಲಿಗೆ
ರಚನೆ: ಚಿ.ಉದಯಶಂಕರ್ ಸಂಗೀತ: ಉಪೇಂದ್ರಕುಮಾರ್ ಗಾಯನ: ಎಸ್.ಪಿ.ಬಾಲಸುಬ್ರ್ಹಹ್ಮಣ್ಯಂ


ಓ ನನ್ನ ಮಲ್ಲಿಗೆ ಬಯಸಿ ಬಂದೆ ಇಲ್ಲಿಗೆ
ಹಿತವಾಗಿ ತಂಗಾಳಿ ಚಳಿಯನ್ನು ತಂದಾಗ
ತನುವೆಲ್ಲ ಝುಮ್ಮೆಂದು ಜೊತೆಯೆಲ್ಲಿ ಎಂದಾಗ
ನಿನಗಾಗಿ ಓಡಿ ಬಂದೆ ಬಳಿ ಬಾರೆ
ಓ ನನ್ನ ಮಲ್ಲಿಗೆ  ಬಯಸಿ ಬಂದೆ ಇಲ್ಲಿಗೆ
ಹಿತವಾಗಿ ತಂಗಾಳಿ ಚಳಿಯನ್ನು ತಂದಾಗ
ನಿನಗಾಗಿ ಓಡಿ ಬಂದೆ ಬಳಿ ಬಾರೆ
ಆಹಾಹ ಆಹಾಹ ಓ ನನ್ನ ಮಲ್ಲಿಗೆ

ನಮಗಾಗಿ ಮಂಚ ನನಗಾಗಿ ಕೊಂಚ  ಕೊಡಲಾರೆಯ ನೀ ಜಾಗವ
ಅಗೋ ಚಂದ್ರಕಾಂತಿ ನನಗೆಲ್ಲಿ ಶಾಂತಿ ಶಶಿ ಈಗ ಏನು ಮಾಡುವ
ಜೊತೆಯಾಗಿ ನಾವು ನೋಡುವ
ಓ ನನ್ನ ಮಲ್ಲಿಗೆ  ಬಯಸಿ ಬಂದೆ ಇಲ್ಲಿಗೆ
ಹಿತವಾಗಿ ತಂಗಾಳಿ ಚಳಿಯನ್ನು ತಂದಾಗ
ನಿನಗಾಗಿ ಓಡಿ ಬಂದೆ ಬಳಿ ಬಾರೆ
ಆಹಾಹ ಆಹಾಹ ಓ ನನ್ನ ಮಲ್ಲಿಗೆ

ಸಿಹಿಯಾದ ಹೊತ್ತು ಹೂಂ..  ತುಟಿಗೊಂದು ಮುತ್ತು
ಕೊಡಬೇಕೆಂದು ಎಂಬ ಆಸೆಯು
ಬಿಸಿಯೇರಿದಾಗ ಹಾಯ್.. ಮನ ಕೂಗುವಾಗ
ಇರುಳಲ್ಲಿ ಬೇಕು ಜೋಡಿಯು
ಇದು ರಾತ್ರಿ ಮಾಡುವ ಮೋಡಿಯು
ಓ ನನ್ನ ಮಲ್ಲಿಗೆ ಬಯಸಿ ಬಂದೆ ಇಲ್ಲಿಗೆ
ಹಿತವಾಗಿ ತಂಗಾಳಿ ಸ್.. ಚಳಿಯನ್ನು ತಂದಾಗ
ತನುವೆಲ್ಲ ಝುಮ್ಮೆಂದು ಜೊತೆಯೆಲ್ಲಿ ಎಂದಾಗ
ನಿನಗಾಗಿ ಓಡಿ ಬಂದೆ ಬಳಿ ಬಾರೆ
ಓ ನನ್ನ ಮಲ್ಲಿಗೆ  ಬಯಸಿ ಬಂದೆ ಇಲ್ಲಿಗೆ
-------------------------------------------------------------------------------------------------------------------------

ಹೃದಯ ಹಾಡಿತು (1991) - ತಂಪಾದ ಗಾಳಿ ಬೀಸಲಿ ಇಂಪಾದ ರಾಗ ಹಾಡಲಿ
ಸಾಹಿತ್ಯ: ಚಿ.ಉದಯಶಂಕರ್ ಸಂಗೀತ: ಉಪೇಂದ್ರ ಕುಮಾರ್ ಹಾಡಿದವರು: ಎಸ್.ಪಿ.ಬಿ.


ತಂಪಾದ ಗಾಳಿ ಬೀಸಲಿ ಇಂಪಾದ ರಾಗ ಹಾಡಲಿ
ತಂಪಾದ ಗಾಳಿ ಬೀಸಲಿ  ಇಂಪಾದ ರಾಗ ಹಾಡಲಿ
ಅರಳುತಿಹ ಹೂವಿನ ಹಾಗೆ  ನಲಿಯುತಲಿ ಎಂದಿಗು ಹೀಗೆ
ನಗುತಲಿರು ನನ್ನ ಮಲ್ಲಿಗೆ
ತಂಪಾದ ಗಾಳಿ ಬೀಸಲಿ  ಇಂಪಾದ ರಾಗ ಹಾಡಲಿ
ಅರಳುತಿಹ ಹೂವಿನ ಹಾಗೆ  ನಲಿಯುತಲಿ ಎಂದಿಗು ಹೀಗೆ
ನಗುತಲಿರು ನನ್ನ ಮಲ್ಲಿಗೆ
ತಂಪಾದ ಗಾಳಿ ಬೀಸಲಿ  ಇಂಪಾದ ರಾಗ ಹಾಡಲಿ

ಹರಸುವೆನು ಪ್ರೀತಿಯಲಿಂದು  ಸುಖವಾಗಿ ಬಾಳು
ಹರಸುವೆನು ಪ್ರೀತಿಯಲಿಂದು  ಸುಖವಾಗಿ ಬಾಳು
ಬದುಕಿನಲಿ ಸಂತಸ ತರುವ  ಸವಿಮಾತೆ ಕೇಳು
ಕನಸಲ್ಲು ನೋಯದ ಹಾಗೆ  ಎಂದೆಂದು ಬಾಡದ ಹಾಗೆ
ನಗುತಲಿರು ನನ್ನ ಮಲ್ಲಿಗೆ
ತಂಪಾದ ಗಾಳಿ ಬೀಸಲಿ  ಇಂಪಾದ ರಾಗ ಹಾಡಲಿ
ನಯನಗಳು ಹೀಗೆಯೆ ಎಂದೂ ಹೊಸ ನೋಟ ನೋಡಿ
ನಯನಗಳು ಹೀಗೆಯೆ ಎಂದೂ  ಹೊಸ ನೋಟ ನೋಡಿ
ಮನಸಿನಲಿ ಸಂಭ್ರಮ ತುಂಬಿ  ಹೊಸ ಗೀತೆ ಹಾಡಿ
ಧ್ರುವತಾರೆ ಮಿನುಗುವ ಹಾಗೆ  ನೀ ಬಾಳ ಬಾನಲಿ ಹೀಗೆ
ನಗುತಲಿರು ನನ್ನ ಮಲ್ಲಿಗೆ
ತಂಪಾದ ಗಾಳಿ ಬೀಸಲಿ  ಇಂಪಾದ ರಾಗ ಹಾಡಲಿ
ಅರಳುತಿಹ ಹೂವಿನ ಹಾಗೆ  ನಲಿಯುತಲಿ ಎಂದಿಗು ಹೀಗೆ
ನಗುತಲಿರು ನನ್ನ ಮಲ್ಲಿಗೆ ತಂಪಾದ ಗಾಳಿ ಬೀಸಲಿ
ಇಂಪಾದ ರಾಗ ಹಾಡಲಿ   ಅರಳುತಿಹ ಹೂವಿನ ಹಾಗೆ
ನಲಿಯುತಲಿ ಎಂದಿಗು ಹೀಗೆ  ನಗುತಲಿರು ನನ್ನ ಮಲ್ಲಿಗೆ
ತಂಪಾದ ಗಾಳಿ ಬೀಸಲಿ  ಇಂಪಾದ ರಾಗ ಹಾಡಲಿ
------------------------------------------------------------------------------------------------------------------------

ಹೃದಯ ಹಾಡಿತು (1991) - ಕಣ್ಣಲ್ಲಿ ಜ್ಯೋತಿ ತಂದೋನೂ ನೀನೇ ನನ್ನಲ್ಲಿ ಪ್ರೀತಿ ತಂದೋನು ನೀನೇ
ಸಾಹಿತ್ಯ: ಚಿ.ಉದಯಶಂಕರ್ ಸಂಗೀತ: ಉಪೇಂದ್ರ ಕುಮಾರ್ ಹಾಡಿದವರು: ಮಂಜುಳಾ ಗುರುರಾಜ


ಆಆಆ... ಆಆಆ... ಆಅ ...
ಕಣ್ಣಲ್ಲಿ ಜ್ಯೋತಿ ತಂದೋನೂ ನೀನೇ ನನ್ನಲ್ಲಿ ಪ್ರೀತಿ ತಂದೋನು ನೀನೇ
ನನ್ನ ಬಾಳ ಗೀತೆಯಲ್ಲಿ ನಲ್ಲ ಪಲ್ಲವಿ ನೀನೇ ಎನ್ನುತ್ತಿದೇ ಈ ಹೃದಯ
ಪ್ರೀತಿಸುವಾ ಬಾ ಇನಿಯಾ
ಕಣ್ಣಲ್ಲಿ ಜ್ಯೋತಿ ತಂದೋನೂ ನೀನೇ ನನ್ನಲ್ಲಿ ಪ್ರೀತಿ ತಂದೋನು ನೀನೇ
ನನ್ನ ಬಾಳ ಗೀತೆಯಲ್ಲಿ ನಲ್ಲ ಪಲ್ಲವಿ ನೀನೇ ಎನ್ನುತ್ತಿದೇ ಈ ಹೃದಯ
ಪ್ರೀತಿಸುವಾ ಬಾ ಇನಿಯಾ

ಬದುಕೇನು ನಿನ್ನ ನಾನು ನೋಡದೇ ಈಗ...
ಬದುಕೇನು ನಿನ್ನ ನಾನು ನೋಡದೇ ಈಗ...
ಅಳುವುದು ನನ್ನ ಈ ಜೀವ ದೂರ ಇರುವಾಗ
ಮನಸಿನ ಮಾತ ನಲ್ಲ ಕೇಳಿಕೋ ಬೇಗ
ಬಯಕೆಯ ಬೇಗ ಪೂರೈಸು ತೋರಿ ಅನುರಾಗ
ಕೋಪದಲಿ ನೋಡದಿರೂ ವೇದಮೇವ ತುಂಬದಿರೂ ಎನ್ನುತ್ತಿದೇ ಈ ಹೃದಯ
ಪ್ರೀತಿಸುವಾ ಬಾ ಇನಿಯಾ
ಕಣ್ಣಲ್ಲಿ ಜ್ಯೋತಿ ತಂದೋನೂ ನೀನೇ ನನ್ನಲ್ಲಿ ಪ್ರೀತಿ ತಂದೋನು ನೀನೇ

ಆಆಆ... ಆಆಆ... ಆಅ ... ಓಓಓಓಓ ಓಓಓ
ಕನಸಲಿ ನನ್ನ ಸೇರಿ ಹಾಡುವೇ ನೀನೂ
ಕನಸಲಿ ನನ್ನ ಸೇರಿ ಹಾಡುವೇ ನೀನೂ
ಎದುರಲಿ ಬಂದು ನಿಂತಾಗ ಮೌನ ಇದು ಏನೂ
ಎದೆಯಲಿ ಪ್ರೀತಿಯನು ತುಂಬಿದ ನೀನೂ
ಕರೆದರೇ ದೂರ ಹೋಗೋದು ಹೀಗೆ ಸರಿಯೇನೂ
ನೀನಿರಲ್ಲೇ ಈ ಹಸಿರು ನಿನ್ನೊಲವೇ ನನ್ನುಸಿರು
ಎನ್ನುತ್ತಿದೇ ಈ ಹೃದಯ ಪ್ರೀತಿಸುವಾ ಬಾ ಇನಿಯಾ
ಕಣ್ಣಲ್ಲಿ ಜ್ಯೋತಿ ತಂದೋನೂ ನೀನೇ ನನ್ನಲ್ಲಿ ಪ್ರೀತಿ ತಂದೋನು ನೀನೇ
ನನ್ನ ಬಾಳ ಗೀತೆಯಲ್ಲಿ ನಲ್ಲ ಪಲ್ಲವಿ ನೀನೇ ಎನ್ನುತ್ತಿದೇ ಈ ಹೃದಯ
ಪ್ರೀತಿಸುವಾ ಬಾ ಇನಿಯಾ
ಕಣ್ಣಲ್ಲಿ ಜ್ಯೋತಿ ತಂದೋನೂ ನೀನೇ ನನ್ನಲ್ಲಿ ಪ್ರೀತಿ ತಂದೋನು ನೀನೇ
ನನ್ನ ಬಾಳ ಗೀತೆಯಲ್ಲಿ ನಲ್ಲ ಪಲ್ಲವಿ ನೀನೇ ಎನ್ನುತ್ತಿದೇ ಈ ಹೃದಯ
ಪ್ರೀತಿಸುವಾ ಬಾ ಇನಿಯಾ
--------------------------------------------------------------------------------------------------------------------------

ಹೃದಯಹಾಡಿತು (೧೯೯೧) - ಗಿರಿ ನವಿಲೂ ಎಲ್ಲೋ ಕರಿ ಮುಗಿಲೂ ಎಲ್ಲೋ
ಸಂಗೀತ : ಉಪೇಂದ್ರಕುಮಾರ್ ಸಾಹಿತ್ಯ : ಚಿ.ಉದಯಶಂಕರ, ಗಾಯನ : ಎಸ್.ಪಿ.ಬಿ, ಮಂಜುಳಾ ಗುರುರಾಜ್.


ಗಂಡು : ಹಾ...ಹಾ...ಹಾ...ಅಹಾ........
ಹೆಣ್ಣು : ಗಿರಿ ನವಿಲೂ ಎಲ್ಲೋ ಕರಿ ಮುಗಿಲೂ ಎಲ್ಲೋ 
         ಮಳೆ ಮಿಂಚು ಕಂಡು ಬಲು ಮೋಹಗೊಂಡು ಕುಣಿದಾಡಿ ಕೂಗದೆ,
         ಪ್ರೇಮ ಎನುವಾ ಮಾತಲ್ಲಿ ಎಂಥ ಮೋಡಿಯೋ ಪ್ರೀತಿಸಿರುವ ನಾವಿಂದು ಎಂಥ ಜೊಡಿಯೋ
ಗಂಡು : ಗಿರಿ ನವಿಲೂ ಎಲ್ಲೋ ಕರಿ ಮುಗಿಲೂ ಎಲ್ಲೋ
           ಮಳೆ ಮಿಂಚು ಕಂಡು ಬಲು ಮೋಹಗೂಂಡು ಕುಣಿದಾಡಿ ಕೂಗದೆ,
           ಪ್ರೇಮ ಎನುವಾ ಮಾತಲ್ಲಿ ಎಂಥ ಮೋಡಿಯೋ ಪ್ರೀತಿಸಿರುವ ನಾವಿಂದು ಎಂಥ ಜೊಡಿಯೋ

ಗಂಡು : ನಿನ್ನಾ ಕಣ್ಣ ನೋಟ ನೋಡಿದೇ.. ನೀನೇ ಜೀವ ಎಂದು ಹೇಳಿದೇ..,
            ನಿನ್ನಾ ಕಣ್ಣ ನೋಟ ನೋಡಿದೇ...ನೀನೇ ಜೀವ ಎಂದು ಹೇಳಿದೇ..,
ಹೆಣ್ಣು : ನಿನ್ನ ಸ್ನೇಹ ಇಂದು ನೋಡಿದೇ..ಸೋತು ನಲ್ಲ ನಿನ್ನ ಕೂಡಿದೇ..,
ಗಂಡು : ಒಲವಿನ ಗಂಧ ಕೊಡಲಾನಂದ ಹೃದಯ ಹಾಡಿದೇ ಪ್ರೇಮ ಎನುವಾ ಮಾತಲ್ಲಿ ಎಂಥ ಮೊಡಿಯೋ
           ಪ್ರೀತಿಸಿರುವಾ ನಾವಿಂದು ಎಂಥ ಜೊಡಿಯೋ
ಹೆಣ್ಣು : ಗಿರಿ ನವಿಲೂ ಎಲ್ಲೋ ಕರಿ ಮುಗಿಲೂ ಎಲ್ಲೋ

ಹೆಣ್ಣು : ಎಂಥ ಭಾಗ್ಯ ನಿನ್ನ ನೋಡಿದೇ... ಎಂಥ ಪುಣ್ಯ ನಿನ್ನ ಸೇರಿದೇ...
         ಎಂಥ ಭಾಗ್ಯ ನಿನ್ನ ನೋಡಿದೇ...ಎಂಥ ಪುಣ್ಯ ನಿನ್ನ ಸೇರಿದೇ.....
ಗಂಡು : ನೀನೇ ನನ್ನ ಬಾಳ ಜೋಡಿಯೂ ನೀನೇ ನನ್ನ ಪ್ರೇಮ ಗೀತೆಯೂ
ಹೆಣ್ಣು : ಒಲಿಯುತ ಬಂದೆ ಗೆಲುವನು ತಂದೆ ನನ್ನಾ ಬಾಳಿಗೆ,
          ಪ್ರೇಮ ಎನುವಾ ಮಾತಲ್ಲಿ ಎಂಥ ಮೋಡಿಯೋ
         ಪ್ರೀತಿಸಿರುವಾ.. ನಾವಿಂದು ಎಂಥ ಜೋಡಿಯೋ
ಗಂಡು : ಗಿರಿ ನವಿಲೂ ಎಲ್ಲೋ ಕರಿ ಮುಗಿಲೂ ಎಲ್ಲೋ
ಹೆಣ್ಣು : ಮಳೆ ಮಿಂಚು ಕಂಡು ಬಲು ಮೋಹಗೊಂಡು ಕುಣಿದಾಡಿ ಕೂಗದೆ,
ಗಂಡು : ಪ್ರೇಮ ಎನುವಾ ಮಾತಲ್ಲಿ ಎಂಥ ಮೋಡಿಯೋ
ಹೆಣ್ಣು : ಪ್ರೀತಿಸಿರುವ ನಾವಿಂದು ಎಂಥ ಜೋಡಿಯೋ
ಇಬ್ಬರು : ಲಾ ಲಾ ಲಾ ಲಾ ಲಾ ಲಾ ಲಾ ಲಾ ಲಾ ಲಾ ಲಾ ಲಾ ಲಾ
           ಲಾ ಲಾ ಲಾ ಲಾ ಲಾ ಲಾ ಲಾ ಲಾ ಲಾ ಲಾ ಲಾ ಲಾ ಲಾ
--------------------------------------------------------------------------------------------------------------------------

No comments:

Post a Comment