485. ಭಲೇ ಭಾಸ್ಕರ್ (1971)

ಭಲೇ ಭಾಸ್ಕರ ಚಲನ ಚಿತ್ರದ ಹಾಡುಗಳು 
  1. ನನ್ನೆದೆಯ ಮಾತೆಲ್ಲ ನೀನಾಡ ಬೇಕು
  2. ಬನ್ನಿ ನನ್ನ ಗೆಳತಿಯರೇ 
  3. ಇಲ್ಲಿರುವೇ ಇಲ್ಲಿರುವೇ ನಿನಗಾಗಿ 
  4. ಏಳೇಳೂ ಶರಧಿಯೂ 
  5. ಬೆಟ್ಟದ ಮ್ಯಾಲಿಂದ ಬೋರಮ್ಮ ಬಂದವಳೇ 
  6. ಡೋಂಟ್ ಡೈಲ್ ರಾಂಗ್ ನಂಬರ್ 
ಭಲೇ ಭಾಸ್ಕರ್ (೧೯೭೧) - ನನ್ನೆದೆಯ ಮಾತೆಲ್ಲ ನೀನಾಡ ಬೇಕು
ಸಂಗೀತ: ಸತ್ಯಂ ಸಾಹಿತ್ಯ: ಚಿ.ಉದಯಶಂಕರ್ ಹಾಡಿದವರು: ಪಿ.ಬಿ.ಶ್ರೀನಿವಾಸ್, ಪಿ.ಸುಶೀಲಾ

ಹೆಣ್ಣು : ಆಹಾಹಾ ಆಹಾಹಾ ಆಹಾಹಾಹಾ 
ಗಂಡು : ಆಹಾ ಆಹಾ ಆಹಾಹಾಹಾ
ಹೆಣ್ಣು : ನನ್ನೆದೆಯ ಮಾತೆಲ್ಲ ನೀನಾಡ ಬೇಕು
          ಆ ನುಡಿಯ ದನಿಯಾಗಿ ನಾ ಬಾಳಬೇಕು ನಾ ಬಾಳಬೇಕು (ಹೂಂಹೂಂಹೂಂಹೂಂ)
         ನನ್ನೆದೆಯ ಮಾತೆಲ್ಲ ನೀನಾಡ ಬೇಕು
         ಆ ನುಡಿಯ ದನಿಯಾಗಿ ನಾ ಬಾಳಬೇಕು ನಾ ಬಾಳಬೇಕು..  ಹೂಂಹೂಂಹೂಂಹೂಂ  
ಗಂಡು :ಪ್ರೇಮಾನುರಾಗವೆ ಉಸಿರಾಗ ಬೇಕು ಉಸಿರಾಗ ಬೇಕು (ಹೂಂಹೂಂ ಹೂಂ ಹೂಂ)
           ಒಂದಾಗಿ ಮೈಮರೆತು ಓಲಾಡಬೇಕು ಓಲಾಡಬೇಕು.. ಹೂಂಹೂಂ ಹೂಂ ಹೂಂ
ಇಬ್ಬರು : ನನ್ನೆದೆಯ ಮಾತೆಲ್ಲ ನೀನಾಡ ಬೇಕು
             ಆ ನುಡಿಯ ದನಿಯಾಗಿ ನಾ ಬಾಳಬೇಕು ನಾ ಬಾಳಬೇಕು.. ಹೂಂಹೂಂ ಹೂಂ ಹೂಂ

ಗಂಡು : ನೀ ನೋಡೋ ನೋಟಕ್ಕೆ ಕಣ್ಣಾಗಬೇಕು ಕಣ್ಣಾಗಬೇಕು
           ಚೆಂದುಟಿಯ ಕಿರುನಗೆಯೆ ನಾನಾಗಬೇಕು ನಾನಾಗಬೇಕು.. ಹೂಂಹೂಂ ಹೂಂ ಹೂಂ
ಹೆಣ್ಣು : ನೀ ಹಾಡೋ ಗೀತೆಯು ನಾನಾಗಬೇಕು ನಾನಾಗಬೇಕು (ಹೂಂಹೂಂ ಹೂಂ ಹೂಂ)
          ನಿನ್ನಲ್ಲಿ ನಾನಾಗಿ ಮೈಮರೆಯಬೇಕು ಮೈಮರೆಯಬೇಕು.. (ಹೂಂಹೂಂ ಹೂಂ ಹೂಂ)
ಇಬ್ಬರು : ನನ್ನೆದೆಯ ಮಾತೆಲ್ಲ ನೀನಾಡ ಬೇಕು
             ಆ ನುಡಿಯ ದನಿಯಾಗಿ ನಾ ಬಾಳಬೇಕು ನಾ ಬಾಳಬೇಕು.. ಹೂಂಹೂಂ ಹೂಂ ಹೂಂ

ಹೆಣ್ಣು : ನಾನೊಂದು ಹೂವಾಗಿ ತೂಗಾಡಬೇಕು ತೂಗಾಡಬೇಕು...
          ಆ ಹೂವ ಪರಿಮಳವು ನೀನಾಗಬೇಕು ನೀನಾಗಬೇಕು..
ಗಂಡು : ನೀನೊಂದು ಗಿಣಿಯಾಗಿ ಹಾರಾಡಬೇಕು ಹಾರಾಡಬೇಕು.. (ಹೂಂಹೂಂ ಹೂಂ ಹೂಂ)
            ಹಸಿರಾಗಿ ಒಡಲೆಲ್ಲ ನಾ ತುಂಬಬೇಕು ನಾ ತುಂಬಬೇಕು(ಹೂಂಹೂಂ ಹೂಂ ಹೂಂ)
ಇಬ್ಬರು : ನನ್ನೆದೆಯ ಮಾತೆಲ್ಲ ನೀನಾಡ ಬೇಕು
            ಆ ನುಡಿಯ ದನಿಯಾಗಿ ನಾ ಬಾಳಬೇಕು ನಾ ಬಾಳಬೇಕು ಹೂಂಹೂಂ ಹೂಂ ಹೂಂ
--------------------------------------------------------------------------------------------------------------------------

ಭಲೇ ಭಾಸ್ಕರ್ (೧೯೭೧) - ಬನ್ನೀ ನನ್ನ ಗೆಳತಿಯರೇ
ಸಂಗೀತ: ಸತ್ಯಂ ಸಾಹಿತ್ಯ: ಚಿ.ಉದಯಶಂಕರ್ ಹಾಡಿದವರು: ವಸಂತ, ಕೋರಸ್

ಲಲ್ಲಲಲ್ಲಲಲ್ಲಲಲ್ಲಲಲ್ಲಲ್ಲಾ ....
ಬನ್ನಿ ನನ್ನ ಗೆಳತಿಯರೆ ಬನ್ನಿ ಬನ್ನಿ ನನ್ನವರೆ
ಹೊಸ ದಾರಿ ಕಾಣೋಣ ಹೊಸ ಹಾಡ ಹಾಡೋಣ
ಲಲ್ಲಾಲ ಲ ಲ ಲ ಲಾ ಲಲ್ಲಾಲ ಲ ಲ ಲ ಲಾ
ಹೊಸ ದಾರಿ ಕಾಣೋಣ ಹೊಸ ಹಾಡ ಹಾಡೋಣ

ಅಂದದಲ್ಲಿ ಲಲಲ್ಲ ಲಲ್ಲ ಚಂದದಲ್ಲಿ ಲಲಲ್ಲ ಲಲ್ಲ
ಸ್ನೇಹದಲ್ಲಿ ಲಲಲ್ಲ ಲಲ್ಲ ಮೋಹದಲ್ಲಿ ಲಲಲ್ಲ ಲಲ್ಲ
ಶಕ್ತಿಯಲ್ಲಿ ಯುಕ್ತಿಯಲ್ಲಿ.. ಸಾಹಸದಲ್ಲಿ ಧೈರ್ಯದಲ್ಲಿ..
ನಮ್ಮ ಸರಿಸಾಟಿ ಯಾರಿಲ್ಲ ಈ ನಾಡಲಿ..
ಬನ್ನಿ ನನ್ನ ಗೆಳತಿಯರೆ ಬನ್ನಿ ಬನ್ನಿ ನನ್ನವರೆ
ಹೊಸ ದಾರಿ ಕಾಣೋಣ ಹೊಸ ಹಾಡ ಹಾಡೋಣ
ಲಲ್ಲಾಲ ಲ ಲ ಲ ಲಾ ಲಲ್ಲಾಲ ಲ ಲ ಲ ಲಾ

ಗಂಡಿಗೆ ಹೆಣ್ಣು ಲಲಲ್ಲ ಲಲ್ಲ ದಾಸಿಯಲ್ಲ ಲಲಲ್ಲ ಲಲ್ಲ
ಕಣ್ಣಿನ ಬಲೆಗೆ ಲಲಲ್ಲ ಲಲ್ಲ ಬೀಳ್ವಳಲ್ಲ ಲಲಲ್ಲ ಲಲ್ಲ
ಪ್ರಣಯಕೆ ಎಂದೂ ಸೋಲುವಳಲ್ಲ..
ವಿರಹದಿ ಕರಗಿ ಕರಗುವಳಲ್ಲ.. ನಮ್ಮ ಗೆಲಬಲ್ಲ
ಬನ್ನಿ ನನ್ನ ಗೆಳತಿಯರೆ ಬನ್ನಿ ಬನ್ನಿ ನನ್ನವರೆ
ಹೊಸ ದಾರಿ ಕಾಣೋಣ ಹೊಸ ಹಾಡ ಹಾಡೋಣ
ಲಲ್ಲಾಲ ಲ ಲ ಲ ಲಾ ಲಲ್ಲಾಲ ಲ ಲ ಲ ಲಾ
--------------------------------------------------------------------------------------------------------------------------

ಭಲೇ ಭಾಸ್ಕರ್ (೧೯೭೧) - ಇಲ್ಲಿರುವೇ .. ಇಲ್ಲಿರುವೇ .. ನಿನಗಾಗಿ ನಾ ಕಾದಿರುವೇ
ಸಂಗೀತ: ಸತ್ಯಂ ಸಾಹಿತ್ಯ: ಚಿ.ಉದಯಶಂಕರ್ ಹಾಡಿದವರು: ಎಸ್.ಪಿ.ಬಿ.

ಇಲ್ಲಿರುವೇ ... ಇಲ್ಲಿರುವೇ ...
ನಿನಗಾಗೇ ನಾ ಕಾದಿರುವೇ ಓ ಗೆಳತೀ ಬಾರೇಯಾ
ದೂರದಲಿ ಏಕೇ ನಿಂತಿರುವೇ ನನ್ನ ಕರೆಯಾ ಕೇಳೆಯಾ
ಕಾಣುವ ತವಕದಿ ಬಂದಿರುವೇ ನೀ ಮೊಗವ ತೋರೆಯಾ.....
ಇಲ್ಲಿರುವೇ ... ಇಲ್ಲಿರುವೇ ...ಏಏಏಏ

ತಂಗಾಳಿಯಲೀ ನಾ ಬೆರೆತೂ ಮುಂಗುರುಳಾ ಕುಣಿಸಿಹೇ..
ಅರಳಿದ ಹೂವಲೀ ನಾ ಕುಳಿತೂ ಪರಿಮಳವಾ ಚೆಲ್ಲಿಹೇ ...
ಓಡುವಾ ನದಿಯಲೀ ನಾ ಕಲೆತು ನಿನ್ನ ಅಡಿಯ ತೊಳೆದಿಹೇ ...
ಇಲ್ಲಿರುವೇ ... ಇಲ್ಲಿರುವೇ ...ಏಏಏಏ

ಒಲವಿನ ಗಾನ ನಾನಾಗೀ ಕುಣಿದಾಡಿ ನಲಿವೇನೂ..
ಸಾವಿರ ಜನುಮವೇ ಬರಲೆನಗೇ ನಾ ನಿನ್ನಾ ಮರೆಯೇನೂ...
ನಿನ್ನಲ್ಲೀ ಸೇರಿ ಒಂದಾಗಿ ನಾ ನನ್ನೇ ಮರೆವೇನೂ...
ಇಲ್ಲಿರುವೇ ... ಇಲ್ಲಿರುವೇ ...ಏಏಏಏ
ನಿನಗಾಗೇ ನಾ ಕಾದಿರುವೇ ಓ ಗೆಳತೀ ಬಾರೇಯಾ
ದೂರದಲಿ ಏಕೇ ನಿಂತಿರುವೇ ನನ್ನ ಕರೆಯಾ ಕೇಳೆಯಾ
ಕಾಣುವ ತವಕದಿ ಬಂದಿರುವೇ ನೀ ಮೊಗವ ತೋರೆಯಾ.....
ಇಲ್ಲಿರುವೇ ... ಇಲ್ಲಿರುವೇ ...
--------------------------------------------------------------------------------------------------------------------------

ಭಲೇ ಭಾಸ್ಕರ್ (೧೯೭೧) - ಏಳೇಳೂ ಶರಧಿಯೂ
ಸಂಗೀತ: ಸತ್ಯಂ ಸಾಹಿತ್ಯ: ಚಿ.ಉದಯಶಂಕರ್ ಹಾಡಿದವರು: ಪಿ.ಬಿ.ಶ್ರೀನಿವಾಸ, ಎಂ.ಸತ್ಯಂ

ಸತ್ಯಂ : ಹ್ಹೇ .. ಏಳೇಳೂ ಶರಧಿಯೂ ಏಕವಾಗಿದೇ ಕಂಡ್ಯಾ.. ಹೇಗೆ ಬಂದೆಯೋ ಹೇಳೋ ಕೋತಿ
            ಏಳೇಳೂ ಶರಧಿಯೂ ಏಕವಾಗಿದೇ ಕಂಡ್ಯಾ.. ಹೇಗೆ ಬಂದೆಯೋ ಹೇಳೋ ಕೋತಿ
ಪಿಬಿ.: ಅಹ್ಹಹ್ಹ.. ಏಳೇಳೂ ಶರದಿಯೂ ಎನಗೇಳೂ ಕಾಲುವೆಯೂ 
         ಏಳೇಳೂ ಶರದಿಯೂ ಎನಗೇಳೂ ಕಾಲುವೆಯೂ
          ಹೂಳಿ ಲಂಕಿಸಿ ಬಂದೇ ಭೂತ  ನಾ ಹೂಳಿ ಲಂಕಿಸಿ ಬಂದೇ ಭೂತ

ಸತ್ಯಂ : ಆಹ್ಹ್.. ಲಂಕಾ ದ್ವಾರಗಳೊಬ್ಬ..
            ಲಂಕಾ ದ್ವಾರಗಳೊಬ್ಬ ಲಂಕಿಣಿ ಇರುವಳು ಹೇಗೆ ಬಿಟ್ಟಳೋ ಕೋತಿ                             
            ನಿನ್ನ ಹೇಗೆ ಬಿಟ್ಟಳೋ ಕೋತಿ                             
ಪಿ.ಬಿ.: ಲಂಕಿಣಿಯನ್ನೂ ಕೊಂದು..  ಲಂಕಿಣಿಯನ್ನೂ ಕೊಂದು..ಶಂಕೆಯಿಲ್ಲದೇ ನಾನು ಬಿಂಕದಲೀ ನಾ ಬಂದೇ ಭೂತ
          ನಾನು ಬಿಂಕದಲೀ ನಾ ಬಂದೇ ಭೂತ
ಸತ್ಯಂ : ಹ್ಹೇ .. ಏಳೇಳೂ ಶರಧಿಯೂ ಏಕವಾಗಿದೇ ಕಂಡ್ಯಾ.. ಹೇಗೆ ಬಂದೆಯೋ ಹೇಳೋ ಕೋತಿ

ಸತ್ಯಂ : ಕೊಂಬೇ ಕೊಂಬೆಗೇ ಕೋತಿ ಮಂದಿರ ಕಸಗಿದೆ ಹೇಹೇ .. ಹೇಹೇ ..
            ಕೊಂಬೇ ಕೊಂಬೆಗೇ ಕೋತಿ ಮಂದಿರ ಖಕಸಗಿದೆ ಹೇಗೆ ಬಿಟ್ಟರೋ ಹೇಳೋ ಕೋತಿ
ಪಿ.ಬಿ.: ಕೊಂಬೇ ಕೊಂಬೆಗೇ ಕೋತಿ ಮಂದಿರ ಖಸರ ಕಚಕ ಕಚಕ್
          ಕೊಂಬೇ ಕೊಂಬೆಗೇ ಕೋತಿ ಮಂದಿರ ಖಸರ ಕೊಂದ್ಹಾಕಿ ಬಂದೆನೋ ಪೆಡಂಭೂತಾ..
ಸತ್ಯಂ : ಹ್ಹೇ .. ಏಳೇಳೂ ಶರಧಿಯೂ ಏಕವಾಗಿದೇ ಕಂಡ್ಯಾ.. ಹೇಗೆ ಬಂದೆಯೋ ಹೇಳೋ ಕೋತಿ
ಪಿ.ಬಿ. : ಹೇಳಿದನ್ನೆಲ್ಲೋ ..

ಸತ್ಯಂ : ಹೇ... ದೂತನಾಗಿಹೇ .. ಎನ್ನ ಕೈಯ್ಯೋಳು ಸಿಕ್ಕಿಯೇ (ಯಾರೋ) ನೀನೇ ..
            ದೂತನಾಗಿಹೇ .. ಎನ್ನ ಕೈಯ್ಯೋಳು ಸಿಕ್ಕಿಯೇ ಕೋಪದಿ ಇನ್ನೇತಕೋ ಕೋತಿ
ಪಿ.ಬಿ. : ನಾ ತಾಳಿಕೊಂಡಿಹೇನೂ ಈ ಕ್ಷಣದಿ ಲಂಕೇ
           ನಾ ತಾಳಿಕೊಂಡಿಹೇನೂ ಈ ಕ್ಷಣದಿ ಲಂಕೇ ನಿರ್ಭುಮವನೂ ಮಾಳಪೇ ಭೂತ
           ನಿರ್ಭುಮವನೂ ಮಾಳಪೇ ಭೂತ
ಸತ್ಯಂ : ಹ್ಹೇ .. ಏಳೇಳೂ ಶರಧಿಯೂ ಏಕವಾಗಿದೇ ಕಂಡ್ಯಾ.. ಹೇಗೆ ಬಂದೆಯೋ ಹೇಳೋ ಕೋತಿ
ಪಿ.ಬಿ. : ಎಷ್ಟ ಸಲನೋ  ಹೇಳೋದೋ

ಸತ್ಯಂ : ನಿಮ್ಮಂಥ ದಾಸರೂ ನಿಮ್ಮರಸನ ಬಳಿ
            ನಿಮ್ಮಂಥ ದಾಸರೂ ನಿಮ್ಮರಸನ ಬಳಿ ಎಷ್ಟೂ ಮಂದಿ ಇದ್ದಾರೋ ಕೋತಿ..
ಪಿ.ಬಿ. : ನನ್ನಂಥ ದಾಸರೂ ನಿನ್ನಂಥ ಹೇಡಿಗಳೂ
           ನನ್ನಂಥ ದಾಸರೂ ನಿನ್ನಂಥ ಹೇಡಿಗಳೂ .. ನಿನ್ನಂಥ ಹೇಡಿಗಳೂ .. ನಿನ್ನಂಥ ಹೇಡಿಗಳೂ
           ಹೇಡಿ.. ಹೇಡಿ.. ಛೀ..  ಹೇಡಿ.. ಕೋಟ್ಯಾನು ಕೋಟಿಯೋ  ಭೂತ...
          ಏಳೇಳೂ ಶರಧಿಯೂ ಏಕವಾಗಿದೇ ಕಂಡ್ಯಾ.. ಹೇಗೆ ಬಂದೆಯೋ ಹೇಳೋ ಕೋ...
ಸತ್ಯಂ . : ಅಹ್ಹಹ್ಹಹ್ಹ ಅಹ್ಹಹ್ಹಹಹ ಶ್ರೀರಾಮಚಂದ್ರನೂ ನಿನ್ನರಸನಾದರೇ ಆಟ ಮುನ್ನಾರೂ ಹೇಳೋ ಕೋತಿ
ಪಿ.ಬಿ. : ಹಿರಣ್ಯಕನನೂ ಸೀಳಿ ಪ್ರಲ್ಹಾದಗೇ ಒಲಿದ 
           ಹಿರಣ್ಯಕನನೂ ಸೀಳಿ ಪ್ರಲ್ಹಾದಗೇ ಒಲಿದ ಶ್ರೀ ಪುರಂದರ ವಿಠಲನೂ ಭೂತ.. ರಾವಣ..
           ಹಿರಣ್ಯಕನನೂ ಸೀಳಿ ಸೀ .. ಸೀ .. ಸೀ  ಸೀ ..
ಸತ್ಯಂ : ಸೀತೆ.. ಸೀತೆ ... ಎಲ್ಲಿ.. ಎಲ್ಲಿ...
ಪಿ.ಬಿ.: ಅದೋ ಅಲ್ಲೀ .. 
--------------------------------------------------------------------------------------------------------------------------

ಭಲೇ ಭಾಸ್ಕರ್ (೧೯೭೧) - ಬೆಟ್ಟದ ಮ್ಯಾಲಿಂದ ಬೋರಮ್ಮಾ ಬಂದವಳೇ ತಾನೀ ತಂದಾನ
ಸಂಗೀತ: ಸತ್ಯಂ ಸಾಹಿತ್ಯ: ಚಿ.ಉದಯಶಂಕರ್ ಹಾಡಿದವರು: ವಸಂತ, ಪಿ.ಬಿ.ಶ್ರೀನಿವಾಸ್  

ಗಂಡು : ಆಹಾಂ... ಛೀಛೀಛೀ                ಹೆಣ್ಣು : ಅಬಲೆಕೊಯ್
ಗಂಡು : ಕಿಚಿಕಿಚಿ                                 ಹೆಣ್ಣು : ಲಬೋ ಲಬೋ
ಹೆಣ್ಣು : ಬೆಟ್ಟದ ಮ್ಯಾಲಿಂದ ಬೋರಮ್ಮ ಬಂದಾವಳೇ ತಾನೀ ತಂದಾನ
          ಗುಟ್ಟಾದೋರಮ್ಯಾಲೇ ಕಣ್ಣನ್ನೂ ಮಡಗವಳೇ ತಾನೀ ತಂದಾನ
          ಬೆಟ್ಟದ ಮ್ಯಾಲಿಂದ ಬೋರಮ್ಮ ಬಂದಾವಳೇ ತಾನೀ ತಂದಾನ
          ಗುಟ್ಟಾದೋರಮ್ಯಾಲೇ ಕಣ್ಣನ್ನೂ ಮಡಗವಳೇ ತಾನೀ ತಂದಾನ   
ಗಂಡು : ಹೊಯ್.. ಅತ್ತೆ ಇಲ್ಲಾ ಮಾವನಿಲ್ಲಾ  ಸುತ್ತಾಲೂ ಯಾರಿಲ್ಲ ತಾನೀ ತಂದಾನ   
            ಮೆತ್ತಗೇ ಬಂದರೇ ಎತ್ತಿ ಮುದ್ದಾಡುವೇ ತಾನೀ ತಂದಾನ   
           ಅತ್ತೆ ಇಲ್ಲಾ ಮಾವನಿಲ್ಲಾ  ಸುತ್ತಾಲೂ ಯಾರಿಲ್ಲ ತಾನೀ ತಂದಾನ   

ಹೆಣ್ಣು : ಚಿಕ್ಕನಳ್ಳಿ ದೊಡ್ಡಳ್ಳಿ ತಿಮ್ಮನಳ್ಳಿ ಬೊಮ್ಮನಳ್ಳಿ ತಂದಾನ
          ಬಿಸಲಾಗೇ ಬೆವರುತ್ತಾ ಊರೂರು ಹುಡುಕಿದೇ ತಂದಾನ
          ಚಿಕ್ಕನಳ್ಳಿ ದೊಡ್ಡಳ್ಳಿ ತಿಮ್ಮನಳ್ಳಿ ಬೊಮ್ಮನಳ್ಳಿ ತಂದಾನ
          ಬಿಸಲಾಗೇ ಬೆವರುತ್ತಾ ಊರೂರು ಹುಡುಕಿದೇ ತಂದಾನ
          ಅಂತೋ ಇಂತೋ ಎಲ್ಲಗೋ ಇಲ್ಲಿ ಕಂಡೇ ಬಿಟ್ಟೇ ರಾಜ ನೀನೂ
          ಬೆಟ್ಟದ ಮ್ಯಾಲಿಂದ ಬೋರಮ್ಮ ಬಂದಾವಳೇ ತಾನೀ ತಂದಾನ
          ಗುಟ್ಟಾದೋರಮ್ಯಾಲೇ ಕಣ್ಣನ್ನೂ ಮಡಗವಳೇ ತಾನೀ ತಂದಾನ   
ಗಂಡು : ಹೀಹ್ಹಿಹಿ.. ಅತ್ತೆ ಇಲ್ಲಾ ಮಾವನಿಲ್ಲಾ  ಸುತ್ತಾಲೂ ಯಾರಿಲ್ಲ ತಾನೀ ತಂದಾನ   
            ಮೆತ್ತಗೇ ಬಂದರೇ ಎತ್ತಿ ಮುದ್ದಾಡುವೇ ತಾನೀ ತಂದಾನ   

ಗಂಡು : ಆಫ್ರಿಕಾ ಕಾಡಲ್ಲಿ ಬಂದೂಕ ಇರದರ್ದರೇ ತಂದಾನ
            ಅರೇಬಿಯಾ ಮಲೇರಿಯಾ ಊರೆಲ್ಲಾ ಗುಡಿಸಿದೇ ತಂದಾನ
           ಆಫ್ರಿಕಾ ಕಾಡಲ್ಲಿ ಬಂದೂಕ ಇರದರ್ದರೇ ತಂದಾನ
           ಅರೇಬಿಯಾ ಮಲೇರಿಯಾ ಊರೆಲ್ಲಾ ಗುಡಿಸಿದೇ ತಂದಾನ
           ಅಂದು ಇಂದು ಬೆಂಗಳೂರನಾಗೇ ಹಿಡಿದೇ ಬಿಟ್ಟೇ ರಾಣಿ ನಿನ್ನ                     
           ಅತ್ತೆ ಇಲ್ಲಾ ಮಾವನಿಲ್ಲಾ  ಸುತ್ತಾಲೂ ಯಾರಿಲ್ಲ ತಾನೀ ತಂದಾನ   
           ಮೆತ್ತಗೇ ಬಂದರೇ ಎತ್ತಿ ಮುದ್ದಾಡುವೇ ತಾನೀ ತಂದಾನ   
ಹೆಣ್ಣು : ಹೊಯ್  ಬೆಟ್ಟದ ಮ್ಯಾಲಿಂದ ಬೋರಮ್ಮ ಬಂದಾವಳೇ ತಾನೀ ತಂದಾನ
          ಗುಟ್ಟಾದೋರಮ್ಯಾಲೇ ಕಣ್ಣನ್ನೂ ಮಡಗವಳೇ ತಾನೀ ತಂದಾನ
ಗಂಡು : ಕಿಚಿಕಿಚಿ                                 ಹೆಣ್ಣು : ಲಬೋ ಲಬೋ 
ಇಬ್ಬರು : ತಾನೀ ತಂದಾನ ತಾನೀ ತಂದಾನ ತಾನೀ ತಂದಾನ ತಾನೀ ತಂದಾನ ತಾನೀ ತಂದಾನ
--------------------------------------------------------------------------------------------------------------------------

ಭಲೇ ಭಾಸ್ಕರ್ (೧೯೭೧) - ಡೋಂಟ್ ಡೈಲ್ ರಾಂಗ್ ನಂಬರ್
ಸಂಗೀತ: ಸತ್ಯಂ ಸಾಹಿತ್ಯ: ಚಿ.ಉದಯಶಂಕರ್ ಹಾಡಿದವರು: ಎಲ್.ಆರ್.ಈಶ್ವರಿ

ಹೆಣ್ಣು :  ಹಾಯ್  ಡೋಂಟ್ ಡೈಲ್ ರಾಂಗ್ ನಂಬರ್,  ನೋಟ್ ಮೈ ರಿಯಲ್ ನಂಬರ್
           ನೋಟಕ್ಕಾಗಿ ಆರು ಹೆಣ್ಣೂ ಬೇಟೇಗಾಗಿ ನೂರೂ ಕಣ್ಣೂ ಫೋರ್ ಟೂ ಜೀರೋ ರಿಮೆಂಬರ್
ಗಂಡು : ಫೋರ್ ಟ್ವೆಂಟೀ...
ಹೆಣ್ಣು : ಅಹ್ಹಹ್ಹ... ಡೋಂಟ್ ಡೈಲ್ ರಾಂಗ್ ನಂಬರ್,  ನೋಟ್ ಮೈ ರಿಯಲ್ ನಂಬರ್
           ನೋಟಕ್ಕಾಗಿ ಆರು ಹೆಣ್ಣೂ ಬೇಟೇಗಾಗಿ ನೂರೂ ಕಣ್ಣೂ ಫೋರ್ ಟೂ ಜೀರೋ ಮೈ ನಂಬರ್

ಹೆಣ್ಣು : ಲಾ..ಲಲ್ಲಲಲ್ಲ .. ಲಲ್ಲ ಲಾ ಲಾ..ಲಲ್ಲಲಲಾ..
          ಅಲ್ಲೇನಿಲ್ಲಾ.. ಇಲ್ಲೇ ಎಲ್ಲಾ.. ಎಲ್ಲೋ ಹೀಗೇ ನೋಡೋ ಆಸೇ ಒಳ್ಳೇದಲ್ಲಾ..
          ಬಲ್ಲೇ ಎಲ್ಲಾ.. ಕೋಪವಿಲ್ಲಾ ಇನ್ನೂ ಎಂದೂ ನಿನ್ನ ಬಿಟ್ಟೂ ಓಡೋದಿಲ್ಲಾ..
          ದೇಹದಿಂದ ಸೇರಿ ಹಾಡು ಪ್ರೀತಿಯಿಂದ ಕೂಡಿ ಹಾಡು
          ನಿನ್ನದೇ ಹೆವನ್  ರಿಮೆಂಬರ್
ಗಂಡು : ಒಂದೇ ಸಲ ಲಬೋ ಲಬೋ ಇಲ್ಲಾ ಡಬೋ.ಡಬೋ
ಹೆಣ್ಣು : ಡೋಂಟ್ ಡೈಲ್ ರಾಂಗ್ ನಂಬರ್,  ನೋಟ್ ಮೈ ರಿಯಲ್ ನಂಬರ್
          ನೋಟಕ್ಕಾಗಿ ಆರು ಹೆಣ್ಣೂ ಬೇಟೇಗಾಗಿ ನೂರೂ ಕಣ್ಣೂ ಫೋರ್ ಟೂ ಜೀರೋ ಮೈ ನಂಬರ್

ಹೆಣ್ಣು : ಕಂಡೇ ನಿನ್ನ ಅಂದವನ್ನ ಅಂದೇ ಎಲ್ಲ ಮರೆತೂ ಹಿಂದೇ ಬಂದೇ ಇಲ್ಲಾ
          ನೋಡು ನನ್ನಾ ಮೈಯ್ಯ ಬಣ್ಣ ಕಣ್ಣು ಕುಕ್ಕೋ ಚಿನ್ನದಂಥ ಈ ಹೊಳಪನ್ನ..
          ನಿನ್ನದೇ ಹೆವನ್  ರಿಮೆಂಬರ್
ಗಂಡು : ಈಗ ಬೇಕೋ ಲಬೋ ಲಬೋ ಇಲ್ಲಾ ಡಬೋ.ಡಬೋ
ಹೆಣ್ಣು : ಡೋಂಟ್ ಡೈಲ್ ರಾಂಗ್ ನಂಬರ್,  ನೋಟ್ ಮೈ ರಿಯಲ್ ನಂಬರ್
          ನೋಟಕ್ಕಾಗಿ ಆರು ಹೆಣ್ಣೂ ಬೇಟೇಗಾಗಿ ನೂರೂ ಕಣ್ಣೂ ಫೋರ್ ಟೂ ಜೀರೋ ರಿಮೆಂಬರ್
--------------------------------------------------------------------------------------------------------------------------

No comments:

Post a Comment