486. ಸಂಭ್ರಮ (1999)

ಸಂಭ್ರಮ ಚಿತ್ರದ ಹಾಡುಗಳು
  1. ನಮಸ್ಕಾರ ನಿನಗೆ ಭಾಸ್ಕರ ನಮಸ್ಕಾರ ನಿನಗೆ ಭಾಸ್ಕರ
  2. ಯಾರು ಭೂಮಿಗೆ ಮೊದಲ ಬಾರಿಗೆ ಪ್ರೀತಿಯ ಎಳೆ ತಂದರೋ
  3. ಇದು ನಮ್ಮೂರ ಮಂದಹಾಸ 
  4. ಓ ಭೂರಮೆ ಜೋಗದಿಂದ ಜಾರೋ ನೀರಿನಲ್ಲಿ 
  5. ಈ ರಾಗ ಅನುರಾಗವೋ ಈ ಬಂಧ ಅನುಬಂಧವೋ 
  6. ಓ ಭೂರಮೆ ಜೋಗದಿಂದ ಜಾರೋ ನೀರಿನಲ್ಲಿ (ಎಸ್.ಪಿ.ಬಿ)
  7. ಹುಬ್ಳಿ ಹೋಳಿಗೆಯಂಥ ಹುಡುಗಿ 
ಸಂಭ್ರಮ (1999) - ನಮಸ್ಕಾರ ನಿನಗೆ ಭಾಸ್ಕರ ನಮಸ್ಕಾರ ನಿನಗೆ ಭಾಸ್ಕರ
ಸಾಹಿತ್ಯ: ಹಂಸಲೇಖ ಸಂಗೀತ: ಹಂಸಲೇಖ ಹಾಡಿದವರು: ರಮೇಶ್ ಚಂದ್ರ, ಅನುರಾಧ ಶ್ರೀರಾಮ್

ನಮಸ್ಕಾರ ನಿನಗೆ ಭಾಸ್ಕರ ನಮಸ್ಕಾರ ನಿನಗೆ ಭಾಸ್ಕರ
ನಮಸ್ಕಾರ ನಿನಗೆ ಭಾಸ್ಕರ ನಮಸ್ಕಾರ ನಿನಗೆ ಭಾಸ್ಕರ
ನಿತ್ಯ ಲೋಕ ಸಂಚಾರ, ಸಂಚಾರ, ಸಂಚಾರ
ಸೃಷ್ಟಿಗೆಲ್ಲ ಆಧಾರ, ಆಧಾರ, ಆಧಾರ
ಅಂಧಕಾರ ಸಂಹಾರ, ಸಂಹಾರ, ಸಂಹಾರ
ಜಗದ ಮನದ ಒಳಗೂ ಹೊರಗೂ ಬೆಳಗು ಬೆಳಗು
ನಮಸ್ಕಾರ ನಿನಗೆ ಭಾಸ್ಕರ ನಮಸ್ಕಾರ ನಿನಗೆ ಭಾಸ್ಕರ

ಸರಿಗಮಪದನಿಗಳೆ ಸರಿಗಮಪದನಿಗಳೆ
ನಿನ್ನ ಹಗಲು, ನಿನ್ನ ಇರುಳು
ನಿನ್ನ ಹಗಲು ಇರುಳು ರಥದ ಅಶ್ವಗಳೆ
ನವರಸ ಬಾಳ ವೀಣೆ ನೀಡಿ
ನಮ್ಮನು ನಾಕು ತಂತಿ ಮಾಡಿ
ನುಡಿಸುವ ಗಾನ ಲೋಲ ನೀನು
ಸಸಸಸಸ ನಿಸನಿಸಸಸ ಪದನಿಸಸಸ ಗಪದನಿಸಸ ಸಗಪದನಿದಸ
ಕಾಲಾಯ ತಸ್ಮೈ ನಮಃ ಏಕ ಕಂಠ ನಿರ್ಧಾರ, ನಿರ್ಧಾರ, ನಿರ್ಧಾರ
ಸಪ್ತ ಶೋಕ ಪರಿಹಾರ, ಪರಿಹಾರ, ಪರಿಹಾರ
ಅಂಧಕಾರ ಸಂಹಾರ, ಸಂಹಾರ, ಸಂಹಾರ
ಜಗದ ಮನದ ಒಳಗೂ ಹೊರಗೂ ಬೆಳಗು ಬೆಳಗು
ನಮಸ್ಕಾರ ನಿನಗೆ ಭಾಸ್ಕರ ನಮಸ್ಕಾರ ನಿನಗೆ ಭಾಸ್ಕರ

ಋತುಗಳ ಯಜಮಾನನೆ ಋತುಗಳ ಯಜಮಾನನೆ
ಈ ಚಿಗುರು, ಈ ಹಸಿರು
ಈ ಚಿಗುರು ಹಸಿರು ನಿನ್ನ ಸಂಭ್ರಮವೆ
ಬೆಳಕಿನ ಮನೆಯು ನಿನ್ನದಂತೆ
ಹಸಿರೆ ತಳಿರು ತೋರಣವಂತೆ
ಬೆಳೆವುದೆ ನಿನ್ನ ಹಬ್ಬವಂತೆ
ಗಾನ ಕಲಕಲ ನೀರ ಕಿಲಕಿಲ
ಮಲಯ ಮಾರುತದ ಮಾತು ಸಲಸಲ
ನಿಸರ್ಗ ಸಲ್ಲಾಪವೆ ಕಾಲಾಯ ತಸ್ಮೈ ನಮಃ
ಕಾಲ ಕೋಶ ಕರ್ತಾರ, ಕರ್ತಾರ, ಕರ್ತಾರ
ವರ್ತಮಾನ ವಕ್ತಾರ, ವಕ್ತಾರ, ವಕ್ತಾರ
ಅಂಧಕಾರ ಸಂಹಾರ, ಸಂಹಾರ, ಸಂಹಾರ
ಜಗದ ಮನದ ಒಳಗೂ ಹೊರಗೂ ಬೆಳಗು ಬೆಳಗು
ನಮಸ್ಕಾರ ನಿನಗೆ ಭಾಸ್ಕರ ನಮಸ್ಕಾರ ನಿನಗೆ ಭಾಸ್ಕರ
ನಮಸ್ಕಾರ ನಿನಗೆ ಭಾಸ್ಕರ ನಮಸ್ಕಾರ ನಿನಗೆ ಭಾಸ್ಕರ
-------------------------------------------------------------------------------------------------------------------------
ಸಂಭ್ರಮ (1998) - ಯಾರು ಭೂಮಿಗೆ ಮೊದಲ ಬಾರಿಗೆ
ಸಾಹಿತ್ಯ: ಹಂಸಲೇಖ ಸಂಗೀತ: ಹಂಸಲೇಖ ಗಾಯನ : ಎಸ್.ಪಿ.ಬಿ

ಯಾರು ಭೂಮಿಗೆ ಮೊದಲ ಬಾರಿಗೆ ಪ್ರೀತಿಯ ಎಳೆ ತಂದರೋ
ಹೆಣ್ಣು ಮೊದಲ ಗಂಡು ಮೊದಲ ಆಸೆ ಮೊದಲ ಅಂದ ಮೊದಲ
ಅಂದ ಅಂದರೇನು ನೀನೆ ಅಂದೆ ನಾನು
ಅಂದ ಅಂದರೇನು ನೀನೆ ಅಂದೆ ನಾನು
ಚಂದಮಾಮನನ್ನೆ ಮೆಚ್ಚಲಿಲ್ಲ ನಾನು
ಕಾಯಿಸಬೇಡ ಬಾರೆ ಬಾರೆ

ಸಾವಿರ ಹೆಣ್ಣುಗಳ ನೋಡಿದ ಕಣ್ಣುಗಳ ಕೇಳಲಿಲ್ಲ ನಾನೆನ್ದು ನನ್ನವಳು ಯಾರೆನ್ದು
ಮನಸು ಹೇಳಲಿಲ್ಲ ಕನಸು ತೋರಲಿಲ್ಲ ನನ್ನವಳು ಯಾರೆನ್ದು ಹೇಳಲಿಲ್ಲ ನಾನೆನ್ದು
ಕಂಡೆ ನಲ್ಲೆ ನಿನ್ನನಲ್ಲೆ ನೋಡಿದಲ್ಲೆ ನೋಟದಲ್ಲೆ ನನ್ನ ಎದೆಯಲ್ಲೆ ಸೇರಿಹೋದೆ ಬಾ
ಯಾರು ಪ್ರೀತಿಗೆ ಮೊದಲ ಬಾರಿಗೆ ಸೋಲುವ ಕಲೆ ತಂದರೋ
ಕಣ್ಣು ಮೊದಲ ಹೃದಯ ಮೊದಲ ಆಸೆ ಮೊದಲ ಅಂದ ಮೊದಲ
ಅಂದ ಅಂದರೇನು ನೀನೆ ಅಂದೆ ನಾನು ಅಂದ ಅಂದರೇನು ನೀನೆ ಅಂದೆ ನಾನು
ಚಂದಮಾಮನನ್ನೆ ಮೆಚ್ಚಲಿಲ್ಲ ನಾನು ಕಾಯಿಸಬೇಡ ಬಾರೆ ಬಾರೆ

ಮಿನುಗುವ ನಕ್ಶತ್ರ ಹಾಡಿತು ಕಿವಿ ಹತ್ರ
ನಮ್ಮ ಚಂದ್ರ ಎಲ್ಲಿ ಅಂತ ಎತ್ತ ಹೋದ ಜಾರಿಕೊಂತ
ನಾಚಿಕೆಯ ಮುಗಿಲಿಂದ ಪ್ರೇಮ ಪೌರ್ಣಿಮೆ ತರಲು
ನನ್ನವಳ ಎದೆಯಲ್ಲಿ ನಿಮ್ಮ ಚಂದ್ರ ಹೋಗಿ ಕುಂತ
ನೋಡಿ ಅಂದೆ ಕೂಗಿ ಎಂದೆ ಪ್ರೇಮೋದಯ ಮಾಡಿಸೆಂದೆ
ನನ್ನ ಮನದಿರುಳ ಮರೆಮಾಡು ಬಾ
ಯಾರು ಹೆಣ್ಣಿಗೆ ಮೊದಲ ಬಾರಿಗೆ
ನಾಚುವ ವರ ತಂದರೋ
ಕಣ್ಣು ಮೊದಲ ರೆಪ್ಪೆ ಮೊದಲ ಆಸೆ ಮೊದಲ ಅಂದ ಮೊದಲ
ಅಂದ ಅಂದರೇನು ನೀನೆ ಅಂದೆ ನಾನು
ಅಂದ ಅಂದರೇನು ನೀನೆ ಅಂದೆ ನಾನು
ಚಂದಮಾಮನನ್ನೆ ಮೆಚ್ಚಲಿಲ್ಲ ನಾನು ಕಾಯಿಸಬೇಡ ಬಾರೆ ಬಾರೆ
--------------------------------------------------------------------------------------------------------------------------

ಸಂಭ್ರಮ (1998) - ಇದು ನಮ್ಮೂರ ಮಂದಹಾಸ
ಸಾಹಿತ್ಯ: ಹಂಸಲೇಖ ಸಂಗೀತ: ಹಂಸಲೇಖ ಗಾಯನ : ಎಸ್.ಪಿ.ಬಿ, ಚಿತ್ರಾ 

ಗಂಡು : ವಾಟ್ ಎ ಸ್ಟೈಲ್ ವ್ಹಾ ವಾಟ್ ಸ್ಟೈಲ್  
           ನಮ್ಮೂರ ಮಂದಾರ ಮಂದಹಾಸ ಇಟ್ಸ್ ಈಕ್ವಲ್ ಟೂ ಮೋನಾಲಿಸಾ 
           ಲಜ್ಜೇ ಈ ಲಜ್ಜೇ ಸಿಹಿ ಶಾಮಿಗೆ ಸಜ್ಜೆ 
           ನಲ್ಲನಿಗಾ ಹಾಯ್ ಹಾಯ್ ನಿನ್ನ ನಲ್ಲನಿಗಾ 
           ವಾಟ್ ಎ ಸ್ಟೈಲ್ ವ್ಹಾ ವಾಟ್ ಸ್ಟೈಲ್  
           ನಮ್ಮೂರ ಮಂದಾರ ಮಂದಹಾಸ ಇಟ್ಸ್ ಈಕ್ವಲ್ ಟೂ ಮೋನಾಲಿಸಾ 

ಗಂಡು : ಕಣ್ಣ ನವಿಲು ಗರಿಯಲಿ ಕನಸುಗಳ ರಂಗಲಿ ಪ್ರಿಯನ ಚಿತ್ರ ಬರೆದೆಯ ಪ್ರಿಯನ ಚಿತ್ರ ಬರದೆಯ 
ಹೆಣ್ಣು : ಹೃದಯದ ತಿಜೋರಿಯಲಿ ಮೀಡಿಯೋ ಪ್ರಾಣ ಪದಕಲದಲಿ ಪ್ರಿಯನ ಬಂಧಿ ಮಾಡಿದೆಯಾ 
          ಪ್ರಿಯನ ಬಂಧಿ ಮಾಡಿದೆಯಾ 
ಗಂಡು : ಮನದ ಮಾವಿನ ಮರದ ಮರೆಯಲಿ ಹಾಡೋದ ಯಾರದೂ 
ಹೆಣ್ಣು : ನಮಗೂ ಕೂಡ ಕೇಳದಂತಿರೋ ಕಂಠ ಯಾವುದು 
ಗಂಡು : ಇದು ನಮ್ಮೂರ ಮಂದಹಾಸ ಇದು ಇಂಗ್ಲೀಷ ನ ಮಪದನಿಸ  
           ಲಜ್ಜೇ ಈ ಲಜ್ಜೇ ಸಿಹಿ ಶಾಮಿಗೆ ಸಜ್ಜೆ ನಲ್ಲನಿಗಾ ಹಾಯ್ ಹಾಯ್ ನಿನ್ನ ನಲ್ಲನಿಗಾ 
           ವಾಟ್ ಎ ಸ್ಟೈಲ್ ವ್ಹಾ ವಾಟ್ ಸ್ಟೈಲ್  
           ನಮ್ಮೂರ ಮಂದಾರ ಮಂದಹಾಸ ಇಟ್ಸ್ ಈಕ್ವಲ್ ಟೂ ಮೋನಾಲಿಸಾ 

ಗಂಡು : ಬಾಳ ಮೊದಲ ರಾತ್ರೀಲಿ ಬೆವರ ಮುತ್ತು ಹಣೇಲಿ ಬಂದರೇ ಏನು ಮಾಡುವುಳೋ 
            ಬಂದರೇ ಏನು ಮಾಡುವುಳೋ 
ಹೆಣ್ಣು : ಸೇರಿ ಎದೆಯ ಹತ್ತಿರ ನೀಡುತ್ತಾಳೆ ಸರಸರ ಮುತ್ತಿನಲಿ ಉತ್ತರ ಮುತ್ತುಗಳಲಿ ಉತ್ತರ 
ಗಂಡು : ಮದುವೆವರೆಗೂ ನಮ್ಮ ಒಡವೆ ಕೇಳೇ ಬಂಗಾರ 
ಹೆಣ್ಣು : ಧಾರೆ ಎದೆಯ ತವರ ತಾರೆ ನೀ ನಗು ನೀ ಮಂದಾರ 
ಗಂಡು : ಇದು ನಮ್ಮೂರ ಮಂದಹಾಸ ಇದು ಇಂಗ್ಲೀಷ ನ ಮಪದನಿಸ  
           ಲಜ್ಜೇ ಈ ಲಜ್ಜೇ ಸಿಹಿ ಶಾಮಿಗೆ ಸಜ್ಜೆ ನಲ್ಲನಿಗಾ ಹಾಯ್ ಹಾಯ್ ನಿನ್ನ ನಲ್ಲನಿಗಾ 
           ವಾಟ್ ಎ ಸ್ಟೈಲ್ ವ್ಹಾ ವಾಟ್ ಸ್ಟೈಲ್  
           ನಮ್ಮೂರ ಮಂದಾರ ಮಂದಹಾಸ ಇಟ್ಸ್ ಈಕ್ವಲ್ ಟೂ ಮೋನಾಲಿಸಾ 
-------------------------------------------------------------------------------------------------------------------------

ಸಂಭ್ರಮ (1998) - ಓ.. ಭೂರಮೇ ಜೋಗ ಜೋಗ ಜೋಗದಿಂದ 
ಸಾಹಿತ್ಯ: ಹಂಸಲೇಖ ಸಂಗೀತ: ಹಂಸಲೇಖ ಗಾಯನ : ಚಿತ್ರಾ

ಓ.. ಭೂರಮೇ ಜೋಗ ಜೋಗ ಜೋಗದಿಂದ ಜಾರೊ ಜಾರೊ ನೀರಿನಲ್ಲಿ ಸ್ನಾನ ಮಾಡೋ ಪ್ರೇಮ ಸಂಭ್ರಮ
ಓ.. ಭೂರಮೆ ಕಾಲ ಕಾಲದಿಂದ ಮಾಗಿ ಮಾಡೋ ಮಾಯದಿಂದ ನೀನು ಮೈ ಮರೆಯೋ ಸಂಭ್ರಮ

ಬಾಳ ಬಾನಿನಲ್ಲಿ ಪ್ರೇಮ ಸೂರ್ಯನು ಬಂದನು ಬಂದನು
ಸೂರ್ಯನಂತೆ ನಾನು ಜಾರಿ ಹೋಗೇನು ಎಂದನು ನಿಂತನು
ಅಂತರಗಂಗೆಯೇ ನೋಡು ನೀ ವಾಹಿನಿ ಚೈತ್ರದ ಕೋಗಿಲೆ ಕೇಳು ನೀ ಈ ರಾಗ ವಾಹಿನಿ
ಓ.. ಭೂರಮೆ ಯಾವ ಬಾಲೆ ಹೇಳುತಾಳೆ ಸುಮ್ನೆ ಪ್ರೀತಿ ಮಾಡುತಾಳೆ ನೀನೇ ಹೇಳು ನನ್ನ ಸಂಭ್ರಮ

ಪ್ರೇಮಧಾರೆಯಿಂದ ತುಂಬಿಹೋಗಿದೆ ಹೃದಯದ ಜಲಾಶಯ
ಹೇಗೆ ತೆರೆಯಲೆಂದು ನಾಚಿ ನಿಂತಿದೆ ಹೃದಯದ ಬಾಗಿಲು
ಅವನೇ ತೆರೆಯಲಿ ಹೆಣ್ಣಾಸೆ ತಿಳಿಯಲಿ ಎಂದೇ ನಾ
ಓ..ಭೂರಮೆ ಹೇಳು ಆನಂದ ಬಚ್ಚಿಡಲೂ ಆನಂದ
ಓ.. ಭೂರಮೆ ಈ ಸಂಭ್ರಮ ಏಳು ಏಳು ಜನ್ಮದಿಂದ ಹಾಡಿ ಕೂಡಿಕೊಂಡು ಬಂದ
ಅಮರ ಮಧುರ ಪ್ರೇಮ ಸಂಭ್ರಮ
--------------------------------------------------------------------------------------------------------------------------

ಸಂಭ್ರಮ (1998) - ಈ ರಾಗ ಅನುರಾಗವೋ ಈ ಬಂಧ ಅನುಬಂಧವೋ 
ಸಾಹಿತ್ಯ: ಹಂಸಲೇಖ ಸಂಗೀತ: ಹಂಸಲೇಖ ಗಾಯನ : ಪಂಪಾ, ನಂದಿತಾ 

ಹೆಣ್ಣು : ಈ ರಾಗ ಅನುರಾಗವೋ ಈ ಬಂಧ ಅನುಬಂಧವೋ
          ಈ ರಾಗ ಅನುರಾಗವೋ ಈ ಬಂಧ ಅನುಬಂಧವೋ
          ಅಂಬರದೆ ನೇಸರ ಬಂದಾಗ ಸುಂದರ ನಿನ್ನ ಕೂಡಿ ಹಾಡುವಾಸೆಯೋ
          ದುಂಬಿ ಬಂದ ಈ ಸ್ವರ ಕರ್ಣ ತುಂಬೋ ಇಂಚರ ಸಪ್ತ ಸ್ವರದಿ ಸೇರೋ ಆಸೆಯೋ

ಗಂಡು : ಮುದ್ದು ಮುದ್ದು ಮಾತು ಚಿನ್ನವೇ ಗೆಳತೀ ಮುದ್ದು ಮಾಡೋ ಹರೆಯ ಚೆನ್ನವೇ
ಹೆಣ್ಣು : ಮುಗ್ದ ಮನಸೇ ಮಾಡೆ ಚೆನ್ನವೋ ಗೆಳಯ ತುಂಟತನದ ನಗುವು ಚೆನ್ನವೋ
ಗಂಡು : ಮೆಲ್ಲ ಮೆಲ್ಲ ಅರಳೆ ಚೆನ್ನವೇ ಮನಸು ಅರಳೆಯಂತೆ ಬಿರಿಯೆ ಚೆನ್ನವೇ
ಹೆಣ್ಣು :  ಸುಳ್ಳೇ ಇರದ ಬಾಳು ಚೆನ್ನವೋ ಚೆನ್ನಿಗಾ ಜೀವ ಭಾವ ಬೆರೆಯೇ ಚೆನ್ನವೋ
ಗಂಡು : ಮುತ್ತಿನಂಥ ಭಾವ ಬಂತು ಚಿತ್ತಾರದ ಹೂವು ತಂತು ಹೂವು ಮುಡಿದು ನಾಲಿಯೇ ಬಾಲೆಯೇ
ಹೆಣ್ಣು : ಚಿತ್ತಾರದ ಹೂವು ನಾನು ಒತ್ತಾಸೆಗೆ ಇರುವೆ ನೀನು ಮತ್ತೇನು ಬೇಡ ಬಾಲೆಗೆ
          ಈ ರಾಗ ಅನುರಾಗವೋ ಈ ಬಂಧ ಅನುಬಂಧವೋ
          ಅಂಬರದೆ ನೇಸರ ಬಂದಾಗ ಸುಂದರ ನಿನ್ನ ಕೂಡಿ ಹಾಡುವಾಸೆಯೋ
          ದುಂಬಿ ಬಂದ ಈ ಸ್ವರ ಕರ್ಣ ತುಂಬೋ ಇಂಚರ ಸಪ್ತ ಸ್ವರದಿ ಸೇರೋ ಆಸೆಯೋ

ಹೆಣ್ಣು : ಗಗನ ಚುಕ್ಕಿ ಹಿಡಿಯೋ ಆಸೆಯ ಚೆಲುವ ಜೊತೆಗೆ ಸೇರಿ ಆಡೋ ಆಸೆಯೇ 
ಗಂಡು : ಬಾನ ಏರಿ ಹಾರೋ ಆಸೆಯೇ ಚೆಲುವೆ ಮುಗಿಲ ಸಂಗ ತೇಲೋ ಆಸೆಯ 
ಹೆಣ್ಣು : ನನ್ನ ಚಿತ್ತ ಒಡಲ ಒಳಗಡೆ ಚೆಲುವ ಬೆಟ್ಟದಷ್ಟು ದೊಡ್ಡ ಆಸೆಯೇ 
ಗಂಡು : ಬೆಟ್ಟದಷ್ಟು ಆಸೆ ಬೇಡವೇ ಚೆಲುವೆ ಪುಟ್ಟ ಬಾಳು ಒಂದು ಸೌಖ್ಯವೇ 
ಹೆಣ್ಣು : ಸುತ್ತ ಮುತ್ತ ನೂರು ಕಣ್ಣು ಕದ್ದು ನೋಡುತಾವೆ ನಿನ್ನ ಬಚ್ಚಿಟ್ಟು ಕೊಳ್ಳೋ ಆಸೆಯೇ 
ಗಂಡು : ಅಕ್ಕಪಕ್ಕ ಹಳದಿ ಕಣ್ಣು ಅಂಜಬೇಡ ಅಂಜು ಮಲ್ಲೆ ಬಾಳಿನಲ್ಲಿ ನಿನ್ನ ಕಾಯುವೆ 
          ಈ ರಾಗ ಅನುರಾಗವೋ ಈ ಬಂಧ ಅನುಬಂಧವೋ
          ಅಂಬರದೆ ನೇಸರ ಬಂದಾಗ ಸುಂದರ ನಿನ್ನ ಕೂಡಿ ಹಾಡುವಾಸೆಯೋ
          ದುಂಬಿ ಬಂದ ಈ ಸ್ವರ ಕರ್ಣ ತುಂಬೋ ಇಂಚರ ಸಪ್ತ ಸ್ವರದಿ ಸೇರೋ ಆಸೆಯೋ 
--------------------------------------------------------------------------------------------------------------------------

ಸಂಭ್ರಮ (1998) - ಓ.. ಭೂರಮೆ ಜೋಗ ಜೋಗ ಜೋಗದಲ್ಲಿ 
ಸಾಹಿತ್ಯ: ಹಂಸಲೇಖ ಸಂಗೀತ: ಹಂಸಲೇಖ ಗಾಯನ : ಎಸ್.ಪಿ.ಬಿ, 

ಓ..ಭೂರಮೆ ಜೋಗ ಜೋಗ ಜೋಗದಲ್ಲಿ ಜಾರೊ ಜಾರೋ ನೀರಿನಲ್ಲಿ ಸ್ನಾನ ಮಾಡೋ ಸಂಭ್ರಮ
ಓ... ಭೂರಮೆ ಕಾಲ ಕಾಲ ಕಾಲದಿಂದ ಮಾಗಿ ಮಾಡೋ ಮಾಯದಿಂದ
ಓ.. ಭೂರಮೆ ಮೈ ಮರೆಯೋ ಸಂಭ್ರಮ...  ಸಂಭ್ರಮ ಸಂಭ್ರಮ ಸಂಭ್ರಮ ಸಂಭ್ರಮ ಸಂಭ್ರಮ

ಬಾಳ ಬಾನಿನಲ್ಲಿ ಪ್ರೇಮದೇವತೆ ಬಂದಳೂ ಬಂದಳೂ
ಧಾರೆ ಧಾರೆಯಾಗಿ   ಪ್ರೇಮ ವರ್ಷವ ತಂದಳೂ ತಂದಳೂ
ಅಂತರಗಂಗೆಯೇ ನೋಡು ನೀ ನನ್ನಲ್ಲಿ ಚೈತ್ರದ ಕೋಗಿಲೆ ಕೇಳು ನೀ ನನ್ನ ಈ ರಾಗವಾಹಿನಿ
ಓ..ಭೂರಮೆ ಉದಯದಾ ಹೊಂಬಿಸಿಲಿನಲ್ಲಿ ಹಾರುವಾ ಹೊಂಗನಸು ಕಾಣೋ ಬಾಳ ಹಕ್ಕಿ ಪ್ರಾಯ ಸಂಭ್ರಮ
ಕೋರಸ್ : ಲಾಲಾಲಾಲ ಲಾಲಾಲಾಲ ಲಾಲಾಲಾಲ ಲಾಲಾಲಾಲ

ಪ್ರೇಮಧಾರೆಯಿಂದ ತುಂಬಿ ಹೋಗಿದೆ ಹೃದಯದಾ ಜಲಾಶಯ
ಹೇಗೆ ತೆರೆಯಲಿ  ಎಂದು ನಾಚಿ ನಿಂತಿದೆ ಹೃದಯದಾ ಬಾಗಿಲು
ಅವಳೇ ತೆರೆಯಲಿ ನನ್ನಾಸೆ ತಿಳಿಯಲಿ ಎಂದೇ ನಾ ಓ..ಭೂರಮೆ
ಹೇಳಲೂ ಆನಂದ ಬಚ್ಚಿಡಲು ಆನಂದ ಓ..ಭೂರಮೆ ಈ ಸಂಭ್ರಮ.. ಆಆಆ ...
ಏಳು ಏಳು ಜನ್ಮದಿಂದ ಹಾಡಿ ಕೂಡಿಕೊಂಡು ಬಂದ ಅಮರ ಮಧುರ ಪ್ರೇಮ ಸಂಭ್ರಮ ...
--------------------------------------------------------------------------------------------------------------------------

ಸಂಭ್ರಮ (1998) -  ಹುಬ್ಳಿ ಹೋಳಿಗೆಯಂಥ ಹುಡುಗಿ 
ಸಾಹಿತ್ಯ: ಹಂಸಲೇಖ ಸಂಗೀತ: ಹಂಸಲೇಖ ಗಾಯನ : ಎಸ್.ಪಿ.ಬಿ, ಅನುರಾಧ ಶ್ರೀರಾಮ್ 

ಗಂಡು : ಹುಬ್ಳಿ ಹೋಳಿಗೆಯಂಥ ಹುಡುಗಿ   ಹೆಣ್ಣು : ಬ್ಯಾಡಗಿ ಮೆಣಸಿನಂತ ಹುಡುಗ
ಇಬ್ಬರು : ಸೇರಿ ಗರಗರ ಗರಗರ ಗರಗರ ಕಣ್ಣುಗರ ಗರಗರ
             ಗರಗರ ಗರಗರ ಗರಗರ ಬಾಳು ಸಿಹಿ ಖಾರ

ಗಂಡು : ಇಳುಕಲ್ಲ ರವಿಕೆ ನಿನ್ನ ಬಿಗಿದು ಬಯಲು ಮಾಡ್ತು ಕೆಚ್ಚೇ ಸೀರೆ ನಿನ್ನ ಸಿಗಿದು ಎರಡು ಮಾಡ್ತು
            ಲಚುಮಿ ಡಾಬು ನಾಡಿ ಹಿಡಿದು ಸುಕ್ಕು ಮಾಡ್ತು ಚೈನಾ ಚೈನು ಎದೆ ಹತ್ತಿ ಕುಂತು ನೋಡ್ತು
            ಅಯ್ಯೋ ಶಿವನೇ ನೋಡು ಶಿವನೇ ಕೊಡು ನನಗಾ ಭಾಗ್ಯ
ಗಂಡು : ಹುಬ್ಳಿ ಹೋಳಿಗೆಯಂಥ ಹುಡುಗಿ   ಹೆಣ್ಣು : ಬ್ಯಾಡಗಿ ಮೆಣಸಿನಂತ ಹುಡುಗ
ಇಬ್ಬರು : ಸೇರಿ ಗರಗರ ಗರಗರ ಗರಗರ ಕಣ್ಣುಗರ ಗರಗರ
             ಗರಗರ ಗರಗರ ಗರಗರ ಬಾಳು ಸಿಹಿ ಖಾರ 

ಹೆಣ್ಣು : ಕನಸೇ ನಮ್ಮ ಧಾನ್ಯ ಏಳು ಖಂಡುಗ ಬೆಳೆದು ಕುಂತೆ ಮನಸೇ ಉಗ್ರಾಣ ಬಂಡಿ ಬಂಡಿ  ತುಂಬಿಸಿ ನಿಂತೇ 
          ಎಳೇ ಹೆಜ್ಜೆಗೆ ಕಾಲು ಹಿಡಿದು ಕೆರೆದು ಕುಂತೆ ಲಗೂನ ಲಗನಾ ಅಂತ ಛತ್ತೆ ನೋಡ್ತಾ ನಿಂತೇ 
          ತೋರ್ಸೋ ಶಿವನೇ ಆರ್ಸೊ ಶಿವನೇ ಮಧುಮಂಚದ ಮನದಿ ಬಾ 
ಗಂಡು : ಹುಬ್ಳಿ ಹೋಳಿಗೆಯಂಥ ಹುಡುಗಿ   ಹೆಣ್ಣು : ಬ್ಯಾಡಗಿ ಮೆಣಸಿನಂತ ಹುಡುಗ
ಇಬ್ಬರು : ಸೇರಿ ಗರಗರ ಗರಗರ ಗರಗರ ಕಣ್ಣುಗರ ಗರಗರ
             ಗರಗರ ಗರಗರ ಗರಗರ ಬಾಳು ಸಿಹಿ ಖಾರ 
ಹೆಣ್ಣು : ಹೋಲಿ ಹೋಲಿ ನಿನ್ನ ನೋಡಿದಾಗಲೆಲ್ಲಾ 
ಗಂಡು : ಟುವ್ವಿ ಟುವ್ವಿ ನಿನ್ನ ಮುಟ್ಟಾದಾಗಲೆಲ್ಲ 
ಹೆಣ್ಣು : ರತ್ತೋ ರತ್ತೋ ನಿನ್ನ ನೆನಸಿದಾಗಲೆಲ್ಲ 
ಗಂಡು : ಬಿತ್ತೋ ಬಿತ್ತೋ ಭ್ರಮೆ ಕಳಚಿದಾಗಲೆಲ್ಲ 
ಹೆಣ್ಣು : ಬಂದ್ರೂ ಕಷ್ಟ              ಗಂಡು : ಹೋದ್ರೂ ಕಷ್ಟ 
ಇಬ್ಬರು : ಇಂದು ಎಂಥಾ ಮಾಯಾನೋ 
ಗಂಡು : ಹುಬ್ಳಿ ಹೋಳಿಗೆಯಂಥ ಹುಡುಗಿ   ಹೆಣ್ಣು : ಬ್ಯಾಡಗಿ ಮೆಣಸಿನಂತ ಹುಡುಗ
ಇಬ್ಬರು : ಸೇರಿ ಗರಗರ ಗರಗರ ಗರಗರ ಕಣ್ಣುಗರ ಗರಗರ
             ಗರಗರ ಗರಗರ ಗರಗರ ಬಾಳು ಸಿಹಿ ಖಾರ 
--------------------------------------------------------------------------------------------------------------------------

No comments:

Post a Comment