487. ನಾಗ ಕಾಳ ಭೈರವ (1981)


ನಾಗ ಕಾಳ ಭೈರವ ಚಿತ್ರದ ಹಾಡುಗಳು 
  1. ನಮ್ಮಿ ಬಾಳೇ ರಸಮಯ ಕಾವ್ಯ 
  2. ಒಲವಿನ ಉದಯ ಕಂಡಿತು 
  3. ನಗುವುದೇ ಸ್ವರ್ಗ ಅಳುವುದೇ ನರಕ 
  4. ನಗುವುದೇ ಸ್ವರ್ಗ ಅಳುವುದೇ ನರಕ (ಯುಗಳ)
  5. ಚಿಮ್ಮಿತು ಹೊಮ್ಮಿತು 
ನಾಗ ಕಾಳ ಭೈರವ (1981)
ಸಾಹಿತ್ಯ: ವಿಜಯನರಸಿಂಹ ಸಂಗೀತ: ಎಂ.ರಂಗ ರಾವ್ ಹಾಡಿದವರು: ಕೆ.ಜೆ.ಯೇಸುದಾಸ್, ಬೆಂಗಳೂರು ಲತಾ


ಹೆಣ್ಣು : ಆಆಆ... ಗಂಡು : ಉಂಉಂಉಂ.
ಹೆಣ್ಣು : ಆಆಆ...  ಗಂಡು : ಉಂಉಂಉಂ. 
ಗಂಡು : ನಮ್ಮೀ ಬಾಳೇ ರಸಮಯ ಕಾವ್ಯ ಪುಟ ಪುಟವೂ ನವ್ಯ
             ನಮ್ಮೀ ಪ್ರೇಮದ ಭಾವ ತರಂಗ  ದಿನ ದಿನವೂ ದಿವ್ಯ
             ನಮ್ಮೀ ಬಾಳೇ ರಸಮಯ ಕಾವ್ಯ ಪುಟ ಪುಟವೂ ನವ್ಯ

ಹೆಣ್ಣು : ಆಆಆ... ಆಆಆ... ಆಆಆ...
ಗಂಡು : ರಾಗಸುಧಾರಸ ಧಾರೆ ಬಾರೆ  ಮೂಡಿ ಬಂದಿರೆ ಮನಸಾರೆ
ಹೆಣ್ಣು : ಆಆಆ... ಆಆಆ... ಆಆಆ...
ಗಂಡು : ರಾಗಸುಧಾರಸ ಧಾರೆ ಬಾರೆ ಮೂಡಿ ಬಂದಿರೆ ಮನಸಾರೆ
           ರಮ್ಯ ಮನೋಹರ ರಾಸಲೀಲೆ
ಹೆಣ್ಣು : ಆಆಆ... ಆಆಆ... ಆಆಆ...
ಗಂಡು : ರಮ್ಯ ಮನೋಹರ ರಾಸಲೀಲೆ ಭವ್ಯ ಜೀವನದ ಉಯ್ಯಾಲೆ
           ನಮ್ಮೀ ಬಾಳೇ (ಆಆಆ)ರಸಮಯ ಆಆಆ ಕಾವ್ಯ ಪುಟ ಪುಟವೂ ನವ್ಯ
ಹೆಣ್ಣು : ಆಆಆ... ಆಆಆ... ಆಆಆ...
ಗಂಡು : ಆಶಾಗಗನದ ಚಂದಿರ ತಾರೆ ಆದೆವು ನಾವೆ ಗುರಿ ಸೇರೆ
ಕೋರಸ್ : ದಪಪಮ ಆಆಆ... ನಿದಮದ ಆಆಆ... ಸಾನಿದಾನಿ ಆಆಆ..
                 ನಿನಿಮಪ ಆಆಆ...

ಗಂಡು :ಆಶಾಗಗನದ ಚಂದಿರ ತಾರೆ ಆದೆವು ನಾವೆ ಗುರಿ ಸೇರೆ
           ಪ್ರಣಯ ವಿಲಾಸದ ವಿಟಾರದಲ್ಲಿ.. ಆಆಆ... ಆಆಆ...
          ಪ್ರಣಯ ವಿಲಾಸದ ವಿಟಾರದಲ್ಲಿ ಮೈಮನ ಮರೆತೆವು ಮನದಲ್ಲಿ
          ನಮ್ಮೀ ಬಾಳೇ (ಆಆಆ) ರಸಮಯ ಕಾವ್ಯ (ಆಆಆ) ಪುಟ ಪುಟವೂ ನವ್ಯ
          ನಮ್ಮೀ ಪ್ರೇಮದ (ಆಆಆ) ಭಾವ ತರಂಗ  (ಆಆಆ) ದಿನ ದಿನವೂ ದಿವ್ಯ
         ನಮ್ಮೀ ಬಾಳೇ ರಸಮಯ ಕಾವ್ಯ ಪುಟ ಪುಟವೂ ನವ್ಯ
----------------------------------------------------------------------------------------------------------------------

ನಾಗ ಕಾಳ ಭೈರವ (1981)
ಸಾಹಿತ್ಯ: ವಿಜಯನಾರಸಿಂಹ ಸಂಗೀತ: ಎಂ.ರಂಗ ರಾವ್ ಹಾಡಿದವರು: ಕೆ.ಜೆ.ಯೇಸುದಾಸ್, ಪಿ.ಸುಶೀಲಾ


ಗಂಡು : ಆಆಆ..        ಹೆಣ್ಣು : ಲಾಲಾಲಾಲಾ
ಇಬ್ಬರು : ಉಂ  ಉಂ ಉಂ ಉಂ ಉಂ ಉಂ
ಗಂಡು : ಒಲವಿನ ಉದಯ ಕಂಡಿತು ಹೃದಯ
           ಎಲ್ಲಾ ಮೋಹಮಯ, ಎಲ್ಲಾ ಪ್ರೇಮಮಯ
ಹೆಣ್ಣು : ಒಲವಿನ ಕರೆಯ ಕೇಳುವ ಸಮಯ
          ಎಲ್ಲಾ ಮಧುರಮಯ, ಎಲ್ಲಾ ಸ್ನೇಹಮಯ

ಗಂಡು : ನನ್ನನು ವರಿಸಿ ತಾಳಿಯ ದರಿಸಿ
            ನಾಳಿನ ಬಾಳನು ಬೆಳಗುವೆ ಅರಸಿ
            ನನ್ನನು ವರಿಸಿ ತಾಳಿಯ ದರಿಸಿ 
            ನಾಳಿನ ಬಾಳನು ಬೆಳಗುವೆ ಅರಸಿ
            ಚೆಲುವಿಗೆ ನನ್ನ ಒಲವನು ಬೆರಸಿ
            ಚೆಲುವಿಗೆ ನನ್ನ ಒಲವನು ಬೆರಸಿ
            ನಲಿಯುವೆ ರಾಣಿ ನಿನ್ನನು ಮೆರಸಿ
ಹೆಣ್ಣು : ಒಲವಿನ ಕರೆಯ ಕೇಳುವ ಸಮಯ
          ಎಲ್ಲಾ ಮಧುರಮಯ, ಎಲ್ಲಾ ಸ್ನೇಹಮಯ

ಹೆಣ್ಣು : ಅರಿಶಿಣ ಕುಂಕುಮ ಭಾಗ್ಯವ ಮೆರೆದು
          ಪುಣ್ಯದ ಜ್ಯೋತಿಯ ಪೂಜಿಸಿ ಪಡೆದು
          ಅರಿಶಿಣ ಕುಂಕುಮ ಭಾಗ್ಯವ ಮೆರೆದು
          ಪುಣ್ಯದ ಜ್ಯೋತಿಯ ಪೂಜಿಸಿ ಪಡೆದು
          ಬಾಳಿನ ದೈವ ನೀನೆ ಎಂದು
         ಬಾಳಿನ ದೈವ ನೀನೆ ಎಂದು
         ಬಾಳುವೆ ನಾನು ಎಂದೆಂದೂ
ಗಂಡು : ಒಲವಿನ ಉದಯ ಕಂಡಿತು ಹೃದಯ
           ಎಲ್ಲಾ ಮೋಹಮಯ, ಎಲ್ಲಾ ಪ್ರೇಮಮಯ

ಗಂಡು : ಮಂಗಳ ಸೂತ್ರದ ಮೋಹಿನಿಯನ್ನು ಬೇಡೆನು ನಾನು ಬೇರೇನನ್ನು
            ಮಂಗಳ ಸೂತ್ರದ ಮೋಹಿನಿಯನ್ನು ಬೇಡೆನು ನಾನು ಬೇರೇನನ್ನು
ಹೆಣ್ಣು : ಸೇವೆಗೆ ನಾನು ಮೀಸಲು ಹೂವು
          ಸೇವೆಗೆ ನಾನು ಮೀಸಲು ಹೂವು ಸಂತಸವೆಲ್ಲ ಹೊಂದುವ ನಾವು
ಗಂಡು : ಒಲವಿನ ಉದಯ ಕಂಡಿತು ಹೃದಯ
ಇಬ್ಬರೂ : ಎಲ್ಲಾ ಮಧುರಮಯ, ಎಲ್ಲಾ ಪ್ರೇಮಮಯ
             ಎಲ್ಲಾ ಪ್ರೇಮಮಯ
-----------------------------------------------------------------------------------------------------------------------

ನಾಗ ಕಾಳ ಭೈರವ (1981)
ಸಂಗೀತ: ಎಂ.ರಂಗ ರಾವ,  ಸಾಹಿತ್ಯ: ಚಿ.ಉದಯಶಂಕರ, ಹಾಡಿದವರು: ವಿಷ್ಣುವರ್ಧನ, ಎಸ್ ಜಾನಕೀ 

ಗಂಡು : ನಗುವುದೇ ಸ್ವರ್ಗ ಸ್ವರ್ಗ.. ಅಳುವುದೇ ನರಕ... ನರಕ
           ನಗುವುದೇ ಸ್ವರ್ಗ  (ಅಹ್ಹಹ್ಹ) ಅಳುವುದೇ ನರಕ... (ಆ )
           ನಗುವುದ ಕಲಿಯೋಣ ನಾವೂ ನಗುತಾ ಬಾಳೋಣ
           ನಗುವುದ ಕಲಿಯೋಣ ನಾವೂ ನಗುತಾ ಬಾಳೋಣ
ಹೆಣ್ಣು : ಪ್ರೀತಿಯೇ ಸ್ವರ್ಗ.. ಹಾಂ ಹಾಂ
          ಭೀತಿಯೇ ನರಕ ಯಾಹ್ ಯಾಹ್
          ಪ್ರೀತಿಯೇ ಸ್ವರ್ಗ ಭೀತಿಯೇ ನರಕ
          ಪ್ರೀತಿಸು ಬಾ ನನ್ನ ಸೇರಿ ಸ್ವರ್ಗವ ಕಾಣೋಣ
          ಪ್ರೀತಿಸು ಬಾ ನನ್ನ ಸೇರಿ ಸ್ವರ್ಗವ ಕಾಣೋಣ (ವಾಕ್ಯೂ)

ಗಂಡು : ಮಲ್ಲಿಗೇ ಮೊಗ್ಗು ನಕ್ಕರೇ ತಾನೇ ಹೂವೇ ಆಗುವುದೂ.. (ಅಹ್ಹಹ್ಹಹ್ಹ..  )
            ಮುದ್ದಿನ ಮಗುವು ನಕ್ಕರೆ ತಾನೇ ಅಂದವು ಹೆಚ್ಚುವುದೂ (ಆಆ ಅಹ್ಹಹ್ಹ )
            ಮಲ್ಲಿಗೇ ಮೊಗ್ಗು ನಕ್ಕರೇ ತಾನೇ ಹೂವೇ ಆಗುವುದೂ
            ಮುದ್ದಿನ ಮಗುವು ನಕ್ಕರೆ ತಾನೇ ಅಂದವು ಹೆಚ್ಚುವುದೂ
            ಬಾನಲಿ ಚಂದಿರ ನಕ್ಕರೇ ತಾನೇ
            ಹುಣ್ಣಿಮೆ ಕಾಣುವುದೂ ... ಆಆಆ... ಹುಣ್ಣಿಮೆ ಕಾಣುವುದೂ
            ನಕ್ಕರೇ ತಾನೇ ಬದುಕಲಿ ಸಂತಸ ಉಕ್ಕಿ ಹರಿಯುವುದೂ... ದೂ ದೂ ದೂ..  .
ಹೆಣ್ಣು : ಪ್ರೀತಿಯೇ ಸ್ವರ್ಗ.. ಹಾಂ ಹಾಂ
          ಭೀತಿಯೇ ನರಕ (ಹಾಂ ಹಾಂ )
          ಪ್ರೀತಿಯೇ ಸ್ವರ್ಗ ಭೀತಿಯೇ ನರಕ
          ಪ್ರೀತಿಸು ಬಾ ನನ್ನ ಸೇರಿ ಸ್ವರ್ಗವ ಕಾಣೋಣ
          ಪ್ರೀತಿಸು ಬಾ ನನ್ನ ಸೇರಿ ಸ್ವರ್ಗವ ಕಾಣೋಣ (ವಾಕ್ಯೂ)

ಹೆಣ್ಣು : ಕಣ್ಣಿನ ಬಾಷೆ ಅರಿತರೇ ತಾನೇ ನನ್ನ ಅರಿಯುವುದೂ (ಹ್ಹಹ್ಹಹ್ಹಹ್ಹಾ)
          ಹೆಣ್ಣಿನ ಅಂದ ಕಂಡರೇ ತಾನೇ ಆಸೇ ಮೂಡುವುದೂ (ಹ್ಹಹ್ಹಹ್ಹಹ್ಹಾ)
          ಕಣ್ಣಿನ ಬಾಷೆ ಅರಿತರೇ ತಾನೇ ನನ್ನ ಅರಿಯುವುದೂ
          ಹೆಣ್ಣಿನ ಅಂದ ಕಂಡರೇ ತಾನೇ ಆಸೇ ಮೂಡುವುದೂ
           ಸರಸದಿ ನನ್ನ ಬೆರೆತರೇ ತಾನೇ 
            ಹರುಷವ ಕಾಣುವುದೂ..  ಹರುಷವ ಕಾಣುವುದೂ
            ತೋಳಲಿ ನನ್ನ ಬಳಸಿದರೇನೇ ಸುಖವನೂ ನೋಡುವುದೂ 
ಗಂಡು :ಹೇ..   ನಗುವುದೇ ಸ್ವರ್ಗ (ಅಹ್ಹಹ್ಹ) ಅಳುವುದೇ ನರಕ...( ಅಹ್ಹಹ್ಹ)
           ನಗುವುದ ಕಲಿಯೋಣ  (ಅಹ್ಹಹ್ಹ)  ನಾವೂ ನಗುತಾ ಬಾಳೋಣ  (ಅಹ್ಹಹ್ಹ)
           ಹೇಹೇ .. ನಗುವುದ ಕಲಿಯೋಣ ನಾವೂ ನಗುತಾ ಅಹ್ಹಹ್ಹಹ್ಹ
ಹೆಣ್ಣು : ಪ್ರೀತಿಯೇ ಸ್ವರ್ಗ.. (ಅಹ್ಹಹ್ಹಹ್ಹ ಅಹ್ಹಹ್ಹಹ್ಹ )
          ಭೀತಿಯೇ ನರಕ (ಹೇಹೇಹೇಹೇ )
          ಪ್ರೀತಿಯೇ ಸ್ವರ್ಗ ಭೀತಿಯೇ ನರಕ
          ಪ್ರೀತಿಸು ಬಾ ನನ್ನ ಸೇರಿ ಸ್ವರ್ಗವ ಕಾಣೋಣ (ಹ್ಹಹ್ಹಹ ಹ್ಹಹ್ಹಹ )
          ಪ್ರೀತಿಸು ಬಾ ನನ್ನ ಸೇರಿ ಸ್ವರ್ಗವ ಕಾಣೋಣ 
ಗಂಡು :  ಹೇ ಹೇ ನಗುವುದೇ ಸ್ವರ್ಗ
ಹೆಣ್ಣು : ಆ.. ಪ್ರೀತಿಸು ನನ್ನ 
--------------------------------------------------------------------------------------------------------------------------

ನಾಗ ಕಾಳ ಭೈರವ (1981)
ಸಂಗೀತ: ಎಂ.ರಂಗ ರಾವ,  ಸಾಹಿತ್ಯ: ಚಿ.ಉದಯಶಂಕರ, ಹಾಡಿದವರು: ಕೆ.ಜೆ.ಏಸುದಾಸ್ 

ಅಹ್ಹಹ್ಹಹ ಉಂ ಉಂಉಂಉಂಉಂಉಂ
ನಗುವುದೇ ಸ್ವರ್ಗ ಸ್ವರ್ಗ ಅಳುವುದೇ ನರಕ
ನಗುವುದೇ ಸ್ವರ್ಗ ಸ್ವರ್ಗ ಅಳುವುದೇ ನರಕ
ನಗುವುದ ಕಲಿಯೋಣ ನಾವೂ ನಗುತಾ ಬಾಳೋಣ
ನಗುವುದೇ ಸ್ವರ್ಗ ಸ್ವರ್ಗ ಅಳುವುದೇ ನರಕ

ನಾ ಯಾರೆಂದು ತಿಳಿದರೇ ತಾನೇ ನೆಮ್ಮದಿ ಕಾಣುವುದೂ
ನಾ ಯಾರೆಂದು ತಿಳಿದರೇ ತಾನೇ ನೆಮ್ಮದಿ ಕಾಣುವುದೂ
ನನ್ನವರಾರೋ ಅರಿತರೇ ತಾನೇ ಶಾಂತಿಯೂ ಮೂಡುವುದೂ ಹೂಂ ಹೂಂ 
ನಗುವುದೇ ಸ್ವರ್ಗ ಸ್ವರ್ಗ ಅಳುವುದೇ ನರಕ
ನಗುವುದ ಕಲಿಯೋಣ ನಾವೂ ನಗುತಾ ಬಾಳೋಣ
ನಗುವುದೇ ಸ್ವರ್ಗ ಸ್ವರ್ಗ ಅಳುವುದೇ ನರಕ 

ಹೆತ್ತವರನ್ನೂ ಕಂಡರೇ ತಾನೇ ಬಾಳು ಬೆಳಗುವುದೂ 
ಹೆತ್ತವರನ್ನೂ ಕಂಡರೇ ತಾನೇ ಬಾಳು ಬೆಳಗುವುದೂ 
ಕತ್ತಲೆಯಲ್ಲಿ ಬಳಲುತ ಹೇಗೇ  ನಗುತ ಬದುಕುವುದೂ ಅಹ್ಹಹ್ಹ 
ನಗುವುದೇ ಸ್ವರ್ಗ ಸ್ವರ್ಗ ಅಳುವುದೇ ನರಕ
ನಗುವುದ ಕಲಿಯೋಣ ನಾವೂ ನಗುತಾ ಬಾಳೋಣ
ನಗುವುದೇ ಸ್ವರ್ಗ ಸ್ವರ್ಗ ಅಳುವುದೇ ನರಕ 
ಅಳುವುದೇ ನರಕ ಅಳುವುದೇ ನರಕ 
--------------------------------------------------------------------------------------------------------------------------

ನಾಗ ಕಾಳ ಭೈರವ (1981)
ಸಂಗೀತ: ಎಂ.ರಂಗ ರಾವ, ಸಾಹಿತ್ಯ: ವಿಜಯನಾರಸಿಂಹ, ಹಾಡಿದವರು: ಎಸ್.ಪಿ.ಬಿ., ವಾಣಿಜಯರಾಂ


ಗಂಡು : ಹೇಹೇ... ಹೇಹೇಹೇ ... ಚಿಮ್ಮಿತೂ ಹೊಮ್ಮಿತೂ
           ಚಿಮ್ಮಿತೂ ಹೊಮ್ಮಿತೂ ಮಿಂಚಿತು ವಂಚಿತು
           ಹರಿಸಿತು ಹರಿಸಿತು ಹಾಡಿತು ಹಾರಿತು
          ಗೆಲುವಿನ ಹರುಷದ ಹೊನಲೂ ಕೂಡಿತು ಬಾಳಿನ ಕಡಲು
         ಗೆಲುವಿನ ಹರುಷದ ಹೊನಲೂ ಕೂಡಿತು ಬಾಳಿನ ಕಡಲು
ಹೆಣ್ಣು : ಚಿಮ್ಮಿತೂ ಹೊಮ್ಮಿತೂ
          ಚಿಮ್ಮಿತೂ ಹೊಮ್ಮಿತೂ ಮಿಂಚಿತು ವಂಚಿತು
          ಹರಿಸಿತು ಹರಿಸಿತು ಹಾಡಿತು ಹಾರಿತು
         ಗೆಲುವಿನ ಹರುಷದ ಹೊನಲೂ ಕೂಡಿತು ಬಾಳಿನ ಕಡಲು
         ಗೆಲುವಿನ ಹರುಷದ ಹೊನಲೂ ಕೂಡಿತು ಬಾಳಿನ ಕಡಲು

ಗಂಡು : ಹೆಣ್ಣಿಗೇ ಗಂಡು ಗಂಡಿಗೆ ಹೆಣ್ಣು ನೀಡಲು ಸ್ನೇಹದ ಸವಿಯನ್ನೂ
ಹೆಣ್ಣು : ಸಾಗರ ತೀರದ ಚೆಲುವಿಗೇ ಎಲ್ಲಾ ನೀಡಿತು ಸಂಗಮ ಒಲವನ್ನೂ
ಗಂಡು : ಹೆಣ್ಣಿಗೇ ಗಂಡು ಗಂಡಿಗೆ ಹೆಣ್ಣು ನೀಡಲು ಸ್ನೇಹದ ಸವಿಯನ್ನೂ
ಹೆಣ್ಣು : ಸಾಗರ ತೀರದ ಚೆಲುವಿಗೇ ಎಲ್ಲಾ ನೀಡಿತು ಸಂಗಮ ಒಲವನ್ನೂ
ಗಂಡು : ಚಿಮ್ಮಿತೂ . ಹೆಣ್ಣು : ಹೊಮ್ಮಿತೂ

ಹೆಣ್ಣು : ಹನಿ ಹನಿ ಮುತ್ತು ಆಗುತಲಿತ್ತು ಸ್ವಾತಿ ಮಳೆಯದು ಬಿತ್ತು
ಗಂಡು : ಸೊಗಸಿನ ಸನಿಹದ ಭಾವನೆಯಲ್ಲಿ ಅನುಪಮ ಅನುಭವ ಇತ್ತೂ
ಹೆಣ್ಣು : ಹನಿ ಹನಿ ಮುತ್ತು ಆಗುತಲಿತ್ತು ಸ್ವಾತಿ ಮಳೆಯದು ಬಿತ್ತು
ಗಂಡು : ಸೊಗಸಿನ ಸನಿಹದ ಭಾವನೆಯಲ್ಲಿ ಅನುಪಮ ಅನುಭವ ಇತ್ತೂ
ಗಂಡು : ಚಿಮ್ಮಿತೂ . ಹೆಣ್ಣು : ಹೊಮ್ಮಿತೂ
ಗಂಡು: ಚಿಮ್ಮಿತೂ ಹೊಮ್ಮಿತೂ ಮಿಂಚಿತು ವಂಚಿತು
ಹೆಣ್ಣು : ಹರಿಸಿತು ಹರಿಸಿತು ಹಾಡಿತು ಹಾರಿತು
ಇಬ್ಬರೂ: ಗೆಲುವಿನ ಹರುಷದ ಹೊನಲೂ ಕೂಡಿತು ಬಾಳಿನ ಕಡಲು
           ಗೆಲುವಿನ ಹರುಷದ ಹೊನಲೂ ಕೂಡಿತು ಬಾಳಿನ ಕಡಲು
--------------------------------------------------------------------------------------------------------------------------

No comments:

Post a Comment