491. ನಾನು ನನ್ನ ಹೆಂಡ್ತೀರು (1999)


ನಾನು ನನ್ನ ಹೆಂಡ್ತಿಯರು ಚಿತ್ರದ ಹಾಡುಗಳು 
  1. ನನ್ನೊಳು ಸಿಕ್ಕರೇ ಸಕ್ಕರೇ ಕಣ್ಣೆದುರು ನಿಂತರೆ ಅಪ್ಸರೆ 
  2. ಈ ಜಗವೇ ನಮದು ನಮದು 
  3. ರೆಡಿ ಒನ್ ಟೂ ತ್ರೀ ಕ್ಕೂ ಕ್ಕೂ ಕ್ಕೂ ಒನ್ ಟ್ರಕ್ಕು ಮ್ಯೂಜಿಕ್ಕು 
  4. ಗಪ್ ಚಿಪ್ ಗಪ್ ಚಿಪ್ ಗಪ್ ಚಿಪ್ ಅಂತ ಬಾರೆ ನನ್ ಪಕ್ಕ್ 
  5. ಈ ಭೂಮಿಗೆ ಮೊದಲು ಮೊದಲು ದೇವರು ಬಂದ 
  6. ನಾನು ನನ್ನ ಹೆಂಡ್ತಿಯರು ನಾನು ನನ್ನ ಡಾರ್ಲಿಂಗ್ಸು  
ನಾನು ನನ್ನ ಹೆಂಡ್ತೀರು (1999) - ನನ್ನೋಳು ನಕ್ಕರೆ
ಸಂಗೀತ: ವಿ ರವಿಚಂದ್ರನ್ 
ಚಿತ್ರಗೀತೆ : ಕೆ. ಕಲ್ಯಾಣ್  ಹಾಡಿರುವವರು: ಎಸ್.ಪಿ.ಬಾಲಸುಬ್ರಮಣ್ಯಂ, ಚಿತ್ರ

ಗಂಡು : ನನ್ನೋಳು ನಕ್ಕರೆ (ಅಹ್ಹಹ್ಹ) ಸಕ್ಕರೆ ಕಣ್ಣೆದುರು ನಿಂತರೆ ಅಪ್ಸರೆ
            ದಿನ ನಕ್ಕು ನಕ್ಕು ಕನಸಿಕ್ಕುತಾಳೆ ಚತುರೆ ಇವಳಿದ್ದಲ್ಲೆಲ್ಲ ನಾ ಮರೆಯಬೇಕು ನಿದಿರೆ
            ಅರೆರೆರೆ ಮರೆತು ಮರೆತು ಎಲ್ಲ ಮರೆತು ಹಾಯಾಗಿರುವೆ ಮೂರು ಹೊತ್ತು
           ನಿನ್ನ ಹೊರತು ಬೇರೆ ಏನು ನನ್ ಪ್ರೀತೀಗ್ ಗೊತ್ತು
           ಅರೆರೆರ ನಂಗು ನಿಂಗು ಹಂಗು ಹಿಂಗು ಯಾರ ಹಂಗು ಇಲ್ಲ ರಂಗು
           ಸುತ್ತ ಮುತ್ತ ನಿನ್ನ ಹೊರತು ಬೇರೆ ಏನ್ ಗೊತ್ತು
ಹೆಣ್ಣು : ನಮ್ಮೋರು ಎಂದರೆ ದೇವರೆ, ಶ್ರೀರಾಮ ಎಂದರೆ ಅವರೇ 

ಗಂಡು : ಬೊಗಸೆ ಕಣ್ಣೋಳು ಬೊಗಸೇಲಿ ಸಿಕ್ಕರೆ ಜಗವೇ ಸಿಕ್ಕಿದರೂ  ಬಿಡುವಷ್ಟು ಅಕ್ಕರೆ
ಇಬ್ಬರು :   ಹೀಗೆ ತಾನೆ ಪ್ರೀತಿ ಮಾಡೋರ್ ಪ್ರೀತಿಸ್ತಾರೆ
ಹೆಣ್ಣು : ಅದು ಎಷ್ಟು ಕಲೆಗಾರ ಕನಸೊಂದಾದರೆ ನಿನ್ನ ತುಂಟು ಪ್ರೀತೀಗೆ ಸರಿಸಾಟಿ ದೊರೆ
ಗಂಡು : ಅರೆರೆರೆ ತುಂಟಿ ತುಂಟಿ ಮಾತಲ್ ಶುಂಠಿ ಮನಸು ಮಾತ್ರ ಜೇನು ಬುಟ್ಟಿ
            ನಿನ್ನ ಪ್ರೀತಿಗಾಗಿ ಬರುವೆ ಮತ್ತೆ ನಾ ಹುಟ್ಟಿ
ಹೆಣ್ಣು : ನಾವೆ ತುಂಟ ತುಂಟಿ ಯಾರು ಸಾಟಿ ತುಂಟು ತನವೆ ನಮ್ಮ ಜಂಟಿ
          ನಿಮ್ಮ ಪ್ರೀತಿಗಾಗಿ ಬರುವೆ ಮತ್ತೆ ನಾ ಹುಟ್ಟಿ
          ನಮ್ಮೋರು ಎಂದರೆ ತೊಂದರೆ (ಅಹ್ಹಹ್ಹ)  ನಗುವಲ್ಲೆ ಸೋಲಿಸೋ ಚೋರರೆ

ಹೆಣ್ಣು : ಸುಮ್ನೆ ನಿಮ್ಮಿಷ್ಟ ನನಗಿಷ್ಟ ಎಂದರೆ ಒಂದು ನಿಮಿಷಾನು ಬಿಡಲಾರರು ಈ ದೊರೆ
ಇಬ್ಬರ : ಹೀಗೆ ತಾನೆ ಪ್ರೀತಿ ಮಾಡೋರ್ ಪ್ರೀತಿಸ್ತಾರೆ
ಗಂಡು : (ಅಹ್ಹಹ್ಹ) ಅದು ಎಷ್ಟು ಚೆಲುವೇ‍ರ ನಗು ಒಂದಾದರೆ ನಿನ್ನ ಸಣ್ಣ ನಗುವಿಗೆ ಸರಿಸಾಟಿ ಚತುರೆ
ಹೆಣ್ಣು : ಅರೆರೆರೆ ಸಂಡೇ ಮಂಡೇ ಅಂತ ನೋಡ್ದೆ ಮೀನ ಮೇಷ ಅಂತ ಕೂರ್ದೆ
          ರೀ ರೀ ಏನ್ರಿ ಕೊಡ್ತೀರೇನ್ರಿ ಕನಸಲ್ ಕೇಳಿದ್ದು
ಗಂಡು : ಅರೆರೆರೆ ಯಾವ ವಾರ ಯಾವ ಮಾಸ ಯಾವ ಸಮಯ ಆದರೆ ಏನು
            ಲೇ ಲೇ ಲೇ ನೀನು ಅಂದ್ರೆ ಲೋಕಾನೆ ನಿಂದು
           ನನ್ನೋಳು ಒಲಿದರೆ, ಶಾಂತಲೆ ಕುಂತಲ್ಲೆ ಅವಳನು ಕುಣಿಸಲೇ 
--------------------------------------------------------------------------------------------------------------------------

ನಾನು ನನ್ನ ಹೆಂಡ್ತೀರು (1999) - ಈ ಜಗವೇ ನಮದೂ ನಮದೂ
ಸಂಗೀತ: ವಿ ರವಿಚಂದ್ರನ್ ಚಿತ್ರಗೀತೆ : ಕೆ. ಕಲ್ಯಾಣ್ ಹಾಡಿರುವವರು: ಎಲ್.ಏನ್.ಶಾಸ್ತ್ರಿ, ಚಿತ್ರಾ 


ಗಂಡು : ಹೇಹೇಹೇ ... ಓಓಓ ...
            ಈ ಜಗವೇ ನಮದೂ.. ನಮದೂ ಈ ಜೀವ ನಿಮದೂ ನಿಮ್ಮದೂ
            ನಾ ಕಾಣೋ ಕನಸು ನಿಮ್ಮದೂ ಕೊಡುವೇ ಎಲ್ಲಾ ಎಲ್ಲಾ ಹೃದಯದಿಂದ 

ಹೆಣ್ಣು : ನಿಮ್ಮೂರು ಹೇಗಿದೆ ಜಾಣ ನಿಮ್ಮೋರು ನಿನ್ನ ಹಾಗೇನಾ 
ಗಂಡು : ನಮ್ಮೂರು ಕೋಟಿಗೆ ಒಂದು ನಮ್ಮೋರು ಪ್ರೀತಿಲಿ ಮುಂದೂ 
ಹೆಣ್ಣು : ಓಓಓ ... ಮಾತಿಗೆ ನಡೆಯೋರು ಹೆಚ್ಛಂತೆ  ನಿಮ್ಮ ನೆಲದಲ್ಲಿ 
ಗಂಡು : ನಮ್ಮಲ್ಲಿ ಎಲ್ಲಾರು ದಿನ ಹಾಡೋದು ಒಮ್ಮನಸಿನಿಂದಾನೇ... ಓಓಓ  
           ಈ ಜಗವೇ ನಮದೂ.. ನಮದೂ ಈ ಜೀವ ನಿಮದೂ ನಿಮ್ಮದೂ...

ಹೆಣ್ಣು : ರಸಿಕ ರಸಿಕತೆಯಲ್ಲಿ ಏನಾರೂ ಹೊಸತನ ಹೇಳಿ 
ಗಂಡು : ನಮ್ಮಿಂದಲೇ ರಸಿಕತೆಯ ರಸಿಕತೆಯಿಂದಲೇ ನಾವೂ 
ಹೆಣ್ಣು : ಆಅಅ ... ರಸಿಕರ ಯಜಮಾನ ನಿಮ್ಮೂರ ಸಿಟಿ ಎಲ್ಲುಂಟು 
ಗಂಡು : ನಾವೂ ಪ್ರೀತಿಲಿ ಆ ಎವರೆಷ್ಟು ನಮ್ಮೂರು ಸಿಗದಷ್ಟು ಮೇಲುಂಟು 
            ಈ ಜಗವೇ ನಮದೂ.. ನಮದೂ ಈ ಜೀವ ನಿಮದೂ ನಿಮ್ಮದೂ
            ನಾ ಕಾಣೋ ಕನಸು ನಿಮ್ಮದೂ ಕೊಡುವೇ ಎಲ್ಲಾ ಎಲ್ಲಾ ಹೃದಯದಿಂದ 
--------------------------------------------------------------------------------------------------------------------------

ನಾನು ನನ್ನ ಹೆಂಡ್ತೀರು (1999) - ರೆಡಿ ಒನ್ ಟೂ ಥ್ರೀ ಕ್ಕೂ ಕ್ಕೂ ಕ್ಕೂ
ಸಂಗೀತ: ವಿ ರವಿಚಂದ್ರನ್ ಚಿತ್ರಗೀತೆ : ಕೆ. ಕಲ್ಯಾಣ್ ಹಾಡಿರುವವರು: ಗುರುಕಿರಣ, ಎಲ್.ಏನ್.ಶಾಸ್ತ್ರಿ

ಲಾ ಲಾ ಲಾ ಲಾ ಹೇ ಹೇ ಲಾ ಲಾ ಲಾ ಲಾ ಹ್ಹಾಂ
ತುರುತುತು ತುರುತುತು ತುರುತುತು
ರೆಡಿ ಒನ್ ಟೂ ಥ್ರೀ ಕ್ಕೂ ಕ್ಕೂ ಕ್ಕೂಒನ್ ಟ್ರಿಕ್ಕೂ ಮ್ಯೂಸಿಕ್ ಹ್ಯಾಟ್ರಿಕ್
ನನ್ನ ಹಾರ್ಟಿನ್ ಮ್ಯೂಜಿಕ್ ಎಲ್ಲಾ ಹಾರ್ಟಗು ಟಾನಿಕ್ಕು
ನಾ ನೀಡುವ ಕಿಕ್ಕು ಬೌನ್ಸ್ ಆಗದ ಚೆಕ್ಕು ನಾ ಹಾಕುವ ಲುಕ್ಕೂ ಬ್ರೇಕಿಲ್ಲದಾ ಬೈಕೂ
ಈ ರೀಮಿನ ದಿಕ್ಕು ಒಂದಿದ್ದರೇ ಸಾಕು ಸಿಕ್ಕೋರಿಗೆ ಲಕ್ಕು ಈ ಪ್ರೀತಿಯ ಬುಕ್ಕು
ಅಬ್ಬ ಕಾಂತೆಯರ ಕಣ್ಣಿದು ಆಯಸ್ಕಾಂತ ಪಟ
ಎದೆಯಲಿ ತೋಮ್ ತೋಮ್ ತರಿಗಿಡ ತರಿಗಿಡತಾ ತರಿಗಿಡತಾ ತರಿಗಿಡತಾ
ಇವರೇ ಕನಸೇ ಧೀಮ್ ಧೀಮ್ ಕಾಗುಣಿತ
ಮತ್ತ ಧೀಮ್ ಧೀಮ್ ತೋಮ್ ಕುಣಿತ ತಧಿಂತಾ ತಧಿಂತಾ ಹೇ ತಧಿಂತಾ
ಇವರಾ ತಕ್ಕತಕ್ಕ ತಕತಕ ಸೆಳೆತ ತಾತ್ತಾಧಿಮಿ ಧಿಮಿ ಧೀಮ್ ಧನ ಕುಣಿತ
ಬಲಗೈಗೊಬ್ಬಳು ನಾಧೀರ್ ಧಿನ್ನ ನಾಧಿರ ಧಿನ್ನ
ಎಡಗೈಗೊಬ್ಬಳು ನಡುವು ಸಣ್ಣ ನಡಿಗೆ ಸಣ್ಣ
ಕಣ್ಣಿಗಳಿಗೊಬ್ಬಳು ತಳಾಂಗುಧಿನ ತಳಾಂಗುಧಿನ
ತುಟಿಗಳಿಗೊಬ್ಬಳು  ಜೇಣಂಗೇನ ಇದು ನಂಗೇನಾ
ಕಿಂದರಿಗಂತೂ ತಲೆಯೇ ನಿಲಂದು ಹೆಜ್ಜೆಗೊಬ್ಬರು ಸುಂದ್ರಿಯರೂ
ಕಾಮಿಗಳಿಗೂ ಕಣ್ಣೇ ಕಾಣದು ತಪಸಿಗೊಬ್ರು ಮೇನಕೆಯರು
ಇಂಥಾ ಶ್ರೀರಾಮಚಂದ್ರನ ಎಂದೂ ದೇಹ ಮನಸಿಗೆ ಒಬ್ಬಳೇ ಹೆಂಡ್ರು
ನಾಧೀರ್ ಧೀನ್ನ್  ನಾಧೀರ್ ಧೀನ್ನ್  ನಾಧೀರ್ ಧೀನ್ನ್
ನಾಧೀರ್ ಧೀನ್ನ್  ನಾಧೀರ್ ಧೀನ್ನ್  ನಾಧೀರ್ ಧೀನ್ನ್
ತುರುತುತು  ತುರುತುತು ನಾಧೀರ್ ಧೀನ್ನ್
ತುರುತುತು  ತುರುತುತು ನಾಧೀರ್ ಧೀನ್ನ್
ರೆಡಿ ಒನ್ ಟೂ ಥ್ರೀ ಕ್ಕೂ ಕ್ಕೂ ಕ್ಕೂಒನ್ ಟ್ರಿಕ್ಕೂ ಮ್ಯೂಸಿಕ್ ಹ್ಯಾಟ್ರಿಕ್ 

ಇವಳ ಅಂಗ ಒಂದು ಧಿಮಿತಕ್ಕ ಮೃದಂಗ ಇವಳ ಅಂತರಂಗ ನೋಡಿದರೆ ಪತಂಗ 
ಇವಳು ಮೋಹನರಾಗದ ಮೋಹಿನಿ ಸರಿಗಮ ದದ ಪಗರಿದ 
ಹಂಸ ನಂದಿಗೆ ನರ್ತಿನಿ ಸಗಮ ದನಿಸಾ ನಿದ ಮಗರಿಸ 
ರನ್ನ ಜನ್ನ ಕವಿ ಪಂಪನಿಗೂ ಸರ್ವಜ್ಞನಿಗೂ ಸರಸದ ರಾಗವಿದೆ 
ಕಲ್ಯಾಣಿ ರಾಗ ಕಲ್ಯಾಣಿಗೆ ನಿರಿಗಮ ದನಿ ಸನಿದಪ ಮಗರಿಸ 
ಶಿವರಂಜಿನಿ ಈ ರಂಜಿನಿಗೆ ಸರಿಗಪ ಪದ ದದ ಪಗರಿಸ 
ಅಧರಂ ಮಧುರಂ ಮಧುರಾತಿ ಮಧುರಂ 
ಕಾಮ ಮರ್ಧಿನಿ ಕಾಮಿನಿಗೆ ಸರಿಗಮ ಪದನಿಸ ದಪ ಮಗರಿಸ 
ಅಖಿಲಂ ಸಕಲಂ ಚಲಲ ಸಲಲಂ ಈ ರಾಗ ನನ್ನ ಶ್ರೀಮತಿಗೇ 
ರತ್ತಿ ಪದನಿಸ ಮರಿಗರಿಸ ಕರ್ನಾಟಕ ಸಂಗೀತದ ಆಣೆ 
ನನಗೊಬ್ಬಳೇ ಹೆಂಡ್ತಿ ಕನ್ನಡಾದಾಣೆ 
--------------------------------------------------------------------------------------------------------------------------

ನಾನು ನನ್ನ ಹೆಂಡ್ತೀರು (1999) - ಬಾರೇ ಬಾರೇ ಬಾರೇ ಚಿನ್ನ ಬಾರೇ ನನ್ನ ಚಿನ್ನ
ಸಂಗೀತ: ವಿ ರವಿಚಂದ್ರನ್ ಚಿತ್ರಗೀತೆ : ಕೆ. ಕಲ್ಯಾಣ್ ಹಾಡಿರುವವರು: ಎಸ್.ಪಿ.ಬಿ. ಚಿತ್ರಾ

ಗಂಡು : ಗಪ್ ಚಿಪ್ ಗಪ್ ಚಿಪ್ ಗಪ್ ಚಿಪ್ ಅಂತ ಬಾರೇ ನನ್ನ ಪಕ್ಕ
ಹೆಣ್ಣು : ಗಪ್ ಚಿಪ್ ಗಪ್ ಚಿಪ್ ಗಪ್ ಚಿಪ್ ಅಂತ ಬಂದೇ ನಿನ್ ಪಕ್ಕ

ಕೋರಸ್ : ಹೂಂಹೂಂಹೂಂಹೂಂಹೂಂಹೂಂಹೂಂಹೂಂ
ಗಂಡು : ಬಾರೇ.....  ಬಾರೇ ... ಬಾರೇ ಚಿನ್ನ ಬಾರೇ ನನ್ನ ಚಿನ್ನ
           ಅಪ್ಪ ಅಮ್ಮ ಆಗೋಣ ಬಾ ಆಗೋಣ ಬಾ ಅಮ್ಮಮ್ಮಮ್ಮ
ಹೆಣ್ಣು : ಚಂದಮಾಮ ಚಂದಮಾಮ ಕದ್ದು ನೋಡ್ತಾವ್ನೆ
          ಅಯ್ಯೋ ಮಾಮ ದಯಮಾಡಿಸು ದಯಮಾಡಿಸಿ ದಯಮಾಡಿಸು

ಹೆಣ್ಣು : ಹೋಹೋಹೊ ಹೂಂಹೂಂಹೂಂ
ಗಂಡು : ಅಕ್ಕ ಪಕ್ಕ ಯಾರು ಕದ್ದು ನೋಡೋರ್ ಇಲ್ಲ
           ತಕ್ಕ ಥೈಯ್ಯ ಥಕ್ಕ ನಿಂದೇ ರಾತ್ರಿ ಎಲ್ಲಾ ಹೂಂ ...
           ಇಲ್ಲಿ ಯಾರು ಇಲ್ಲ ಈಗಲೇ ಬಾ ಬಾರೇ ಬಾರೇ ತಾರೇ ಮುತ್ತನ್ನು
ಹೆಣ್ಣು : ಇಲ್ಲಿ ಯಾರು ಇಲ್ಲ ಅಂದರೂ ಅಲ್ಲಿ  ಓರೆಯಾಗಿ ತಾರೆ ನಿಂತರೂ
ಗಂಡು :ಓ.. ತಾರೇ ಕಳಚಿಕೋ... ಓ ತಾರೇ  ಬಂದುಕೋ
           ನಮ್ಮ ದಾರಿ ಕಾಯದೇ ನಿನ್ನ ದಾರಿ ನೋಡಿಕೋ
          ಆ ತಾರೆ ಹೊತ್ತ ಜೇನಧಾರೆ ಬೇಗ ತಾರೆ ನನ್ನ ಧ್ರುವತಾರೆ ಮಿನುಗುತಾರೆ
          ತಾರೆ ತಾರೆ ತಾರೆ ತಾರೆ ತಾರೆ ಮನಸಾರೆ
         ಚಂದ್ರ ಇಲ್ಲ ತಾರೆ ಇಲ್ಲ ಒಂದೇ ಸಾರೇ ತಾರೆ ಎಲ್ಲಾ

ಹೆಣ್ಣು : ಹೇಹೇಹೇಹೇ.. ಹೇ  ಹೂಂ
ಗಂಡು : ಅಕ್ಕಪಕ್ಕ ಯಾರು ಕದ್ದು ನೋಡೋರಿಲ್ಲ ಥಕ್ಕ ಥೈಯ್ಯಾ ಥಕ್ಕ ನಮ್ದೇ ರಾತ್ರಿ ಎಲ್ಲಾ
           ಯಾವ್ ತಾರೆ ಇಲ್ಲ ಕಾಯದೆ ಈಗ್ಯಾರು ತಾರೆ ಯಾರು ನೋಡ್ತಿಲ್ಲ   
ಹೆಣ್ಣು : ನೀ ತಾರೆ ಎಂದಾ ಕೂಡಲೇ ಪಾರಿವಾಳ ಬಂತು ಓಡಿಸೋ ನಲ್ಲ
ಗಂಡು : ಪಾರಿವಾಳ ಬಚ್ಚಿಕೋ ಕಣ್ಣೆರಡು ಮುಚ್ಚಿಕೋ
            ಶಿವಪೂಜೆ ಕರಡಿಯೇ ತಾರೇ ಬಾಚಿಕೋ
            ಅಯ್ಯೋ ಪಾಪ ಅನಿಸೋದಿಲ್ವಾ  ನಾವು ಇನ್ನೂ ಪಾಪಾ ಮಾಡಿಲ್ಲ ಹ್ಹಹ್ಹಹ್ಹ ಟೈಮ್ ಬಂದಿಲ್ಲ
ಹೆಣ್ಣು : ಪಾಪಾ ಪಾಪಾ  ಪಬಪಪ್ಪ ಪಬಪಪ್ಪಪಾ   ಪಾರಿವಾಳ ಹೋಯ್ತು
           ಅಪ್ಪ ಅಮ್ಮ ಆಗೋಣ ಬಾ ಆಗೋಣ ಬಾ ಹೊಸ ಲಾಲಿ ಹಾಡೋಣ ಬಾ
ಗಂಡು : ಬಾರೇ ಚಿನ್ನ ಅಪ್ಪ ಅಮ್ಮ ಆಟ ಆಡೋಣ ಅಮ್ಮಮ್ಮ ಆಡೋಣ ಬಾ ಆಡೋಣ ಬಾ ಅಮ್ಮಮ್ಮಮ್ಮ       
--------------------------------------------------------------------------------------------------------------------------

ನಾನು ನನ್ನ ಹೆಂಡ್ತೀರು (1999) - ಈ ಭೂಮಿಗೆ ಮೊದಲು
ಸಂಗೀತ: ವಿ ರವಿಚಂದ್ರನ್ ಚಿತ್ರಗೀತೆ : ಕೆ. ಕಲ್ಯಾಣ್ ಹಾಡಿರುವವರು: ಎಲ್.ಏನ್.ಶಾಸ್ತ್ರಿ

ಹೆಣ್ಣು : ಲಾಲಿ ಲಾಲಿ ಸುವ್ವಲಾಲಿ ಸುವ್ವಲಾಲಿ ಜೋ ಜೋ ಜೋ
         ಲಾಲಿ ಲಾಲಿ  ಸುವ್ವಲಾಲಿ ಸುವ್ವಲಾಲಿ  ಜೋ ಜೋ ಜೋ
          ನನ್ನ ರಾಜ ನೀನೇ ರಾಜ ಅಪ್ಪಿಕೊಳ್ಳು ಓ ರಾಜ
          ನನ್ನ ಕನಸಿನ ರಾಜ ನೀನು ಬಾರೋ ಮಹಾರಾಜ
ಗಂಡು : ಈ ಭೂಮಿಗೆ ಮೊದಲು ಮೊದಲು...
            ಈ ಭೂಮಿಗೆ ಮೊದಲು ಮೊದಲು ದೇವರು ಬಂದ ಆನಂತರ ತನ್ನ ಬದಲು ತಾಯಿಯ ತಂದ
ಹೆಣ್ಣು :  ತಾಯಿಯು ಎಲ್ಲಡೆ ಇರಲು ಸಾಧ್ಯವೇ ಇಲ್ಲ ಅದಕ್ಕೆಂದೇ ದೇವರು ತಂದ ಮಕ್ಕಳನೆಲ್ಲ
ಮಗು : ಏಬಿಸಿಡಿ ಏಬಿಸಿಡಿ ಹೇಳಿಕೊಡಿ ಓ ಮಮ್ಮಿ  ಏಬಿಸಿಡಿ ಕಲಿತ ಮೇಲೆ ಆಟ ಹೇಳಿ ಕೊಡಿ ಮಮ್ಮಿ
ಹೆಣ್ಣು : ಆಟ ಪಾಠ ಊಟ ನೋಟ ಎಲ್ಲಾ ನಿನ್ನ ಇಷ್ಟನೋ ನಿನ್ನ ಎಲ್ಲಾ ಇಷ್ಟಾಗಳೂ ನನಗೆ ಇಷ್ಟನೋ

ಹೆಣ್ಣು : ನಿನ್ನ ಹೆತ್ತವಳು ಯಾರೋ ನಾ ಕಾಣೇ ತಂದೇ ನೆರಳಿಲ್ಲದೆ ಬಂದೋನೆ
ಗಂಡು : ನಿನ್ನಿಂದಲೇ ಮನೆ ಬೆಳದಿಂಗಳು ಎಲ್ಲೋ ಚೆಂದಾಗಿರಲಿ ನಿನ್ನ ಹೆತ್ತವಳು
ಹೆಣ್ಣು : ಲಾಲಿ ತೂಗೋ ಹಾಡಿದು ಯಾವ ಪುಣ್ಯಾನೋ  ನಿನ್ನ ನೆನಪೇ ಜೋ  ನನ್ನಾ ಉಸಿರೇ ಜೋ
ಗಂಡು : ಸಾಕೋಳ ಒಬ್ಬಳು ಹೆತ್ತೋಳ ಒಬ್ಬಳು ಹೀಗೆ ಋಣಾನುಬಂಧನಾವು ಅಂದುಕೊಳ್ಳದೇ
            ತಾನೇ ನಡಿಯೋ ಪ್ರೀತಿ ಸಂಬಂಧ
ಹೆಣ್ಣು : ಇಂಥ ಎಲ್ಲ ಸಂಬಂಧದ ಸುತ್ತ ನಮ್ಮ ಅನುಬಂಧ ಯಾವ ದೈವ ತಂದ ನಮ್ಮ ಇಂಥ ಆನಂದ

ಹೆಣ್ಣು : ಹೆತ್ತು ಹೊತ್ತು ಕೂರುವ ಭಾರವಿಲ್ಲದೇ ತಾಯ್ತನ ಕೊಟ್ಟೇ ನೀ ಏನೂ ಕೇಳದೆ
ಗಂಡು : ಲಾಲಿ ಸುವ್ವಲಾಲಿ ಮನೆ ತುಂಬಿ ಹೋಗಿದೆ ಇದ್ದ ನಿರಾಸೆಯ ಮಾತೆಲ್ಲಿದೆ
ಹೆಣ್ಣು : ಈ ನನ್ನ ಕರುಳ ಹಾಡಿದು        ಗಂಡು : ನೆರಳಾಯ್ತಮ್ಮಾ
ಹೆಣ್ಣು : ಕನಸೇ ಕಂದ ಜೋ ... ಸೊಗಸೇ ಚೆಂದ ಜೋ
          ಸರಿಗಮ ಪದನಿನಿ ನೀನೇ ನನ್ನ ಬಾಳಿಗೆ   ಸನಿದಪ ಮಗರಿಸ ಸರಿಸರಿ ಬಾ ಹೀಗೆ
ಇಬ್ಬರು : ಸರಿ ಸರಿ ಸರಿ ಸಮ ಸಮಗಮ ನಾವಿಲ್ಲಿ ಆನಂದ ನಂದನವನ ನಮ್ಮ ಮನೆಯಲ್ಲಿ
ಗಂಡು : ಈ ಭೂಮಿಗೆ ಮೊದಲು ಮೊದಲು
            ಈ ಭೂಮಿಗೆ ಮೊದಲು ಮೊದಲು ದೇವರು ಬಂದ ಆನಂತರ ತನ್ನ ಬದಲು ತಾಯಿಯ ತಂದ
--------------------------------------------------------------------------------------------------------------------------

ನಾನು ನನ್ನ ಹೆಂಡ್ತೀರು (1999) - ನಾನು ನನ್ನ ಹೆಂಡ್ತೀರು  ನಾನು ನನ್ನ ಡಾರ್ಲಿಂಗ್ಸು
ಸಂಗೀತ: ವಿ ರವಿಚಂದ್ರನ್ ಚಿತ್ರಗೀತೆ : ಕೆ. ಕಲ್ಯಾಣ್ ಹಾಡಿರುವವರು: ಎಸ್.ಪಿ.ಬಿ. ಚಿತ್ರಾ

ಗಂಡು : ನಾನು ನನ್ನ ಹೆಂಡ್ತೀರು  ನಾನು ನನ್ನ ಡಾರ್ಲಿಂಗ್ಸು
            ಡೇ ಅಂಡ್ ನೈಟು ಸಿಂಗಿಂಗ್ಸು ಟಚಿಂಗ್ಸು ತಲೆ ತಿರುಗಿಂಗ್ಸು ಪ್ರೇಮಾ.... ಸೌಂದರ್ಯಾ....
ಹೆಣ್ಣು : ನಾವು ನಮ್ಮ ಯಜಮಾನ್ರು ನಾವು ನಮ್ಮ ಡಾರ್ಲಿಂಗ್ಸು
            ಡೇ ಅಂಡ್ ನೈಟು ಡ್ಯಾನ್ಯಸಿಂಗು  ಟಚಿಂಗ್ಸು ಮೈ ಮರೆಸಿಂಗು
            ರವಿ ಚಂದ್ರ ರಾತ್ರಿ ಹಗಲು ನಿದ್ದೆ ಕೆಡಿಸಿದ್ದು

ಗಂಡು : ರನ್ನ ಪೊನ್ನ ಕವಿ ಸರ್ವಜ್ಞನು ಮಾಸ್ತಿ ದ.ರಾ.ಬೇಂದ್ರೆ ರತ್ನನು
           ಮತ್ತೆ ಹುಟ್ಟಿ ಹಿಡಿಯಬೇಕು ಪೆನ್ನನು ಕಂಡು ನಮ್ಮ ಜೋಡಿಯನ್ನು
ಹೆಣ್ಣು : ನಮ್ಮ ಬಂಧ ಎಲ್ಲೂ ಬೆಲ್ಲ                  ಇಬ್ಬರು : ಕಾಳಿದಾಸ ಹಬ್ಬ ಮಾಡುವ
ಗಂಡು : ಓಹೋಹೋ... ಓಹೋಹೋ ಹೇಹೇಹೇಹೇ ಓಹೋಹೋ...
            ನಾನು ನನ್ನ ಹೆಂಡ್ತೀರು  ನಾನು ನನ್ನ ಡಾರ್ಲಿಂಗ್ಸು
ಇಬ್ಬರು : ಡೇ ಅಂಡ್ ನೈಟು ಸಿಂಗಿಂಗ್ಸು ಟಚಿಂಗ್ಸು ತಲೆ ತಿರುಗಿಂಗ್ಸು
ಗಂಡು :  ಪ್ರೇಮಾ.... ಸೌಂದರ್ಯಾ....

ಗಂಡು : ಅಂಗ ಅಂಗ ಸೇರಿ ಅಂತರಂಗವೇ       ಹೆಣ್ಣು : ನಮ್ಮ ಅಂತರಂಗ ನಿಮ್ಮದಲ್ಲವೇ  
ಗಂಡು : ಕಾಣೋದೆಲ್ಲ ಕೈಗೇ ಸಿಗುವ ಕಾಲವೇ   ಹೆಣ್ಣು : ನಮ್ಮ ಕಾಲ ಮರೆಯೋಲ್ಲವೇ 
ಗಂಡು : ಮುತ್ತು ಹವಳ...      ಹೆಣ್ಣು : ನಾನಾ... ಅವಳಾ 
ಗಂಡು : ನನ್ನೆರಡು ಕಣ್ಗಳು ನೀವು
            ಓಹೋಹೋಹೊಹೋ ಹೊಹೋ  ಹೇಹೇಹೇಹೇ ಓಹೋಹೋಹೊಹೋ  
ಗಂಡು : ನಾನು ನನ್ನ ಹೆಂಡ್ತೀರು  ನಾನು ನನ್ನ ಡಾರ್ಲಿಂಗ್ಸು
ಇಬ್ಬರು :  ಡೇ ಅಂಡ್ ನೈಟು ಸಿಂಗಿಂಗ್ಸು ಟಚಿಂಗ್ಸು ತಲೆ ತಿರುಗಿಂಗ್ಸು
ಗಂಡು : ಪ್ರೇಮಾ.... ಸೌಂದರ್ಯಾ....
ಹೆಣ್ಣು : ನಾವು ನಮ್ಮ ಯಜಮಾನ್ರು ನಾವು ನಮ್ಮ ಡಾರ್ಲಿಂಗ್ಸು
ಇಬ್ಬರು :  ಡೇ ಅಂಡ್ ನೈಟು ಡ್ಯಾನ್ಯಸಿಂಗು  ಟಚಿಂಗ್ಸು ಮೈ ಮರೆಸಿಂಗು
ಹೆಣ್ಣು : ರವಿ ಚಂದ್ರ ರಾತ್ರಿ
ಇಬ್ಬರು : ಹಗಲು ನಿದ್ದೆ ಕೆಡಿಸಿದ್ದು
--------------------------------------------------------------------------------------------------------------------------


No comments:

Post a Comment