ಕರುಳಿನ ಕೂಗು ಚಲಚಿತ್ರದ ಹಾಡುಗಳು
- ನಾನು ಬಡವ ನಾನು ಬಡವಿ
- ನನ್ನೆಂದ್ರೇ... ಚಿಂತೆಯಿಲ್ಲಾ
- ಬಿದಿರಿನ ಕೊಳಲು
- ರಾಗವಾಗಿ ನಾನು
- ಅಳಬೇಡ ಮಗಳೇ
ಕರುಳಿನ ಕೂಗು (೧೯೯೩) - ನಾನು ಬಡವ ನಾನು ಬಡವಿ
ಸಂಗೀತ: ಸಾಹಿತ್ಯ: ಹಂಸಲೇಖ ಗಾಯನ: ಮನು, ಚಿತ್ರ
ನಾನು ಬಡವ ನಾನು ಬಡವಿನಾನು ಬಡವ ನಾನು ಬಡವಿ
ನಮ್ಮ ಪ್ರೀತಿಗೆ ಬಡತನವಿಲ್ಲ ಪ್ರೀತಿಗೆ ಬಡತನವಿಲ್ಲ
ನಾನು ರಾಜ ನಾನು ರಾಣಿ ನಮ್ಮ ಮನೆಯಲ್ಲಿ ಸಿರಿತನವಿಲ್ಲ ಪ್ರೀತಿಗೆ ಬಡತನವಿಲ್ಲ
ಹಗಲಿನ ಹೊತ್ತು ದೇವರ ಮುತ್ತು ರಾತ್ರಿಯ ಹೊತ್ತು ತಾಂಡವ ಮೂರ್ತಿ
ಹಗಲು ಮಾತಿನ ಮೇಲೆ ನಡೆಯುತ್ತೆ ರಾತ್ರಿ ನಾಲ್ಕು ಕಾಲ್ಮೇಲೆ ನಡೆಯುತ್ತೆ ಯಾವುದದು ?
ಕುದುರೆ.. ಅಲ್ಲ ಭೂತ .. ಅಲ್ಲ ಮತ್ತೆ ಯಾವುದಮ್ಮ ? ನಿಂ ಅಪ್ಪ ನಮ್ಮ
ನಗುವಿನ ಅಲೆಗಳ ಮದುರ ನುಡಿಗಳ ಜೊತೆಗೆ ತುತ್ತಿನೋಟ
ತುಟಿಗಳಿಂದಲೆ ತಪ್ಪು ತಿದ್ದುವ ಉಚಿತ ಪ್ರೇಮ ಪಾಟ
ಕೋಪ ನಿಮಿಷ ಪ್ರೇಮ ವರುಷ ಮಾಯದ ಹರುಷ
ಮನೆ ಹಾಡುವ ಮಕ್ಕಳ ತೋಟ ಮನ ಹಾರುವ ಹಕ್ಕಿಯ ಕೋಟ
ಈ ಜನುಮಕೆ ಬೇಕಿನ್ನೇನು
ನಾನು ಬಡವ ನಾನು ಬಡವಿ ನಾನು ಬಡವ ನಾನು ಬಡವಿ
ನಮ್ಮ ಪ್ರೀತಿಗೆ ಬಡತನ ವಿಲ್ಲ ಪ್ರೀತಿಗೆ ಬಡತನ ವಿಲ್ಲ

ಶೃಂಗೇರಿಲಿಲ್ಲ ಕೊಲ್ಲೂರಲಿಲ್ಲ ಚಾಮುಂಡಿಯಲ್ಲ ಕಾವೇರಿಯಲ್ಲ
ಎಲ್ಲ ಪಾಪಗಳ ತೊಳೆಯುತ್ತಾಳೆ ಕಡೆವವರಿಗು ಕೈ ಹಿಡಿಯುತಾಳೆ
ಯಾರ್ ಆ ದೇವತೆ ? ಭೂಮಿ.. ಅಲ್ಲ ಕಾಮಧೇನು.. ಅಲ್ಲ ಮತ್ತೆ ಯಾವುದಪ್ಪ ?
ನಿಮ್ಮ ಅಮ್ಮ ನಮ್ಮ
ಎಳು ಬೀಳಿನ ಗಾಳಿ ಎದುರಲು ನೀನು ಪಾರಿಜಾತ
ಉದಯವಾದರೆ ಹೃದಯದೊಳಗಡೆ ನೀನೆ ಸುಪ್ರಭಾತ
ಮಾಗಿ ಹೊತ್ತು ನೀಡು ಮುತ್ತು ಇಲ್ಲ ಆಪತ್ತು
ಅಪ್ಪ ಪ್ರೇಮದ ಕಲೆ ಇರೊ ಚಂದ್ರ
ಅಮ್ಮ ಕರುಣೆಯ ಮನಸಿರೊ ಕಡಲು
ಈ ಜನುಮಕೆ ಬೇಕಿನ್ನೇನು
ನಾನು ಬಡವ ನಾನು ಬಡವಿ
ನಾನು ಬಡವ ನಾನು ಬಡವಿ
ನಮ್ಮ ಪ್ರೀತಿಗೆ ಬಡತನ ವಿಲ್ಲ ಪ್ರೀತಿಗೆ ಬಡತನವಿಲ್ಲ
ನಾನು ರಾಜ ನಾನು ರಾಣಿ
ನಮ್ಮ ಮನೆಯಲ್ಲಿ ಸಿರಿತನವಿಲ್ಲ ಪ್ರೀತಿಗೆ ಬಡತನವಿಲ್ಲ
-------------------------------------------------------------------------------------------------------------------------
ಕರುಳಿನ ಕೂಗು (೧೯೯೩) - ನನ್ನೆಂದ್ರೇ... ಚಿಂತೆಯಿಲ್ಲಾ
ಸಂಗೀತ: ಸಾಹಿತ್ಯ: ಹಂಸಲೇಖ ಗಾಯನ: ಮನು,
ಹೆಂಡ ಕುಡುಕ ರತ್ನ ನನ್ನ ಮಾಸ್ಟ್ರು ಹೆಂಡ ಕುಡಿಯ ಬ್ಯಾಡ ಅಂತ ಅಂದ್ರು
ಹೆಂಡ ಮುಟ್ಟಲ್ಲ... ಹೆಂಡ್ತೀನ ಬಿಡಲ್ಲ ದೇಶೀ ಸಾರಾಯಿ ಕುಡಿಯೋ ಸಿಪಾಯಿ
ನನ್ನೆಂದ್ರೇ... ನನ್ನೆಂದ್ರೇ... ನನ್ನೆಂದ್ರೇ... ಚಿಂತೆಯಿಲ್ಲಾ
ನನ್ನ ಕೊಂದ್ರು ಪರವಿಲ್ಲ ಕನ್ನಡಾನ ಭೈ ಬ್ಯಾಡಾ
ಕಟ್ಕೊಂಡ ಹೆಂಡ್ತೀನ ಬಿಡಬ್ಯಾಡ
ಒಳಗೈತೆ ಸಾರಾಯಿ ಬಿಡ್ತಾ ಐತೆ ಬಾಯಿ ಬಾಯಿ
ಕೈಲಾಸಂ ಕುಡುದ್ರು ಸತ್ಯಕ್ಕೆ ದೀಪ ಹಿಡಿದ್ರು
ಅನಕೃನು ಕುಡುದ್ರು ಬದುಕಿನ ಬಟ್ಟಿ ಇಳಿಸಿದ್ರೂ
ಬರದು ಬರದು ಕರ್ನಾಟಕಕ್ಕೇ ಪುಣ್ಯಕಟ್ಟಿ ಕೊಟ್ಟು ಹೋದ್ರೂ
ಸುಮ್ನೆ ಕುಡಿಯೋ ನಮ್ಮಂತವರೆಗೆ ಬುದ್ದಿನ ಬಿಚ್ಚಿಟ್ಟು ಹೋದ್ರೂ
ಅನ್ನ ತಿಂದು ಅನ್ನಬೇಡ ಅನ್ನ ತಿಂದು ಅನ್ನಬೇಡ
ಬೆನ್ನ ಹಿಂದೆ ಚುಚ್ಚಬೇಡ ಬೆನ್ನ ಹಿಂದೆ ಚುಚ್ಚಬೇಡ
ನನ್ನನ್ನು ಲಚ್ಛಾ ... ನನ್ನನ್ನು ರಿಚ್ಚಾ

ದಕ್ಷಿಣ ಕನ್ನಡ ಸ್ವಚ್ಛ ಉತ್ತರ ಕನ್ನಡ ಉಚ್ಚ
ಹಳೇ ಕನ್ನಡ ಹಾಲು ಹೊಸ ಕನ್ನಡ ಜೇನು
ಇಡ್ಲಿ ರೊಟ್ಟಿ ಮುದ್ದೆ ಮೀನು ಎಲ್ಲ ಊಟಕ್ಕೆ ಬೇಕು
ಕೊಡವ ತುಳುವ ಕೊಂಕಣಿ ಲಂಬಾಣಿ ಕರ್ನಾಟಕ್ಕೆ ಬೇಕು
ಕನ್ನಡಕ್ಕೆ ಬೇಧವಿಲ್ಲಾ ಕನ್ನಡಕ್ಕೆ ಬೇಧವಿಲ್ಲಾ
ಯಾರ ಮೇಲೆ ದ್ವೇಷವಿಲ್ಲ.. ಯಾರ ಮೇಲೆ ದ್ವೇಷವಿಲ್ಲ..
ನನ್ನನ್ನು ಲಚ್ಛಾ ... ನನ್ನನ್ನು ರಿಚ್ಚಾ
ನನ್ನೆಂದ್ರೇ... ನನ್ನೆಂದ್ರೇ... ನನ್ನೆಂದ್ರೇ... ಚಿಂತೆಯಿಲ್ಲಾ
ನನ್ನ ಕೊಂದ್ರು ಪರವಿಲ್ಲ ಕನ್ನಡಾನ ಭೈ ಬ್ಯಾಡಾ
ಕಟ್ಕೊಂಡ ಹೆಂಡ್ತೀನ ಬಿಡಬ್ಯಾಡ
ಒಳಗೈತೆ ಸಾರಾಯಿ ಬಿಡ್ತಾ ಐತೆ ಬಾಯಿ ಬಾಯಿ
ನಮ್ಮೂರೂ ಹಿಂಸೆ ತಾಳ್ರು ಹಿಂಸೆ ಆದ್ರೂ ಹೇಳ್ರು
ಮಂಗನಥರ ಹಾರು ಕಾಶಿಗೆ ಮಾನ ಮಾರು
ಹಿಂಗೇ ಅಂದು ಹಿಂಗೇ ಅಂದು ಎಲ್ಲ ಬಾಷೆ ಕಲತು
ಕನ್ನಡದೋವರೇ ಕನ್ನಡ ಬಾಷೆ ಮಾತಾಡೋದ ಮರತರು
ನಿನ್ನ ಮೀಸೆ ನೀನೆ ತಿರುವು ಅಲ್ಲೇ ನಿಲ್ಲ ಅಳಿವು ಉಳಿವು

-----------------------------------------------------------------------------------------------------------
ಕರುಳಿನ ಕೂಗು (೧೯೯೩) - ಬಿದುರಿನ ಕೊಳಲು
ಸಂಗೀತ: ಸಾಹಿತ್ಯ: ಹಂಸಲೇಖ ಗಾಯನ: ಚಿತ್ರಾ
ಬಿದುರಿನ ಕೊಳಲು ಈ ನನ್ನ ಒಡಲು ಉಸಿರಾಗಿ ನೀನಿಲ್ಲಿರುವೇ
ನೀನು ನೆನೆದಾಗ ನೀನೇ ನಡೆವೆ ಇಲ್ಲಿ ನೂರಾರು ಹೂಗಳಿಂದ
ನಾಳಿನ ಇರುಳನು ತಡೆಯುವ ನರರಾರು ಜನುಮಕ್ಕೆ ಕೊನೆಯಿಲ್ಲ ಮರಣಕ್ಕೆ ದಯವಿಲ್ಲ
ಬಿದುರಿನ ಕೊಳಲು ಈ ನನ್ನ ಒಡಲು ಉಸಿರಾಗಿ ನೀನಿಲ್ಲಿರುವೇ
ನಿನ್ನೆಗಿಂತ ನಾಳೆ ಚೆಂದ ನಾಳೆಗಿಂತ ಇಂದು ಸುಖಿ ಮಾಯಾಲೋಕಕೆ ಮೂರೂ ಮುಖ
ನಿನ್ನೆಗಿಂತ ನಾಳೆ ಚೆಂದ ನಾಳೆಗಿಂತ ಇಂದು ಸುಖಿ ಮಾಯಾಲೋಕಕೆ ಮೂರೂ ಮುಖ
ಮೊಲೆ ನೀಡೆ ಲಾಲಿ ಹಾಡಿ ಮೃತ್ಯುದೇವತೆ ಕಾಯುವಳು ನಾಳೆ ಮರೆಸುವಳು ಇಲ್ಲಿ
ನೂರಾರು ಹುಟ್ಟಿನಿಂದ ನಾಳಿನ ಸಾವನ್ನೂ ತಡೆಯುವ ನರರಾರು
ಬ್ರಹ್ಮನಿಗೆ ಬಿಡುವಿಲ್ಲ ಯಮನಿಗೆ ಗಡುವಿಲ್ಲ
ಬಿದುರಿನ ಕೊಳಲು ಈ ನನ್ನ ಒಡಲು ಉಸಿರಾಗಿ ನೀನಿಲ್ಲಿರುವೇ
ಸದಾಕಾಲ ಇಲ್ಲೇ ಇರುವ ಹುಸಿ ಆಸೆ ಎಲ್ಲರದು
ರಾಮಶ್ಯಾಮರೂ ಬಲ್ಲರಿದು ಚಿರಂಜೀವಿ ಆದಿರೆಂದು
ಹರಸುವ ಶುಭ ಹರಕೆಯು ವಿಧಿಯ ನಗಿಸುವುದು
ಇಲ್ಲಿ ಸಿಹಿಯಾದ ಸುಳ್ಳಿನಿಂದ ಸತ್ಯದ ಕಹಿಯನ್ನು ಮರೆಸುವ ನರರಾರು
ನಾಳೆಗೆ ಅಳಿವಿಲ್ಲ ಇಂದಿಗೆ ಉಳಿವಿಲ್ಲ
ಬಿದುರಿನ ಕೊಳಲು ಈ ನನ್ನ ಒಡಲು ಉಸಿರಾಗಿ ನೀನಿಲ್ಲಿರುವೇ
ನೀನು ನೆನೆದಾಗ ನೀನೇ ನಡೆವೆ ಇಲ್ಲಿ ನೂರಾರು ಹೂಗಳಿಂದ
ನಾಳಿನ ಇರುಳನು ತಡೆಯುವ ನರರಾರು ಜನುಮಕ್ಕೆ ಕೊನೆಯಿಲ್ಲ ಮರಣಕ್ಕೆ ದಯವಿಲ್ಲ
ಬಿದುರಿನ ಕೊಳಲು ಈ ನನ್ನ ಒಡಲು ಉಸಿರಾಗಿ ನೀನಿಲ್ಲಿರುವೇ
-----------------------------------------------------------------------------------------------------------
ಕರುಳಿನ ಕೂಗು (೧೯೯೩) - ರಾಗವಾಗಿ ನಾನು
ಸಂಗೀತ: ಸಾಹಿತ್ಯ: ಹಂಸಲೇಖ ಗಾಯನ: ಚಿತ್ರಾ
ರಾಗವಾಗಿ ನಾನು ಭೂಮಿಗೆ ಬಂದೇ ಪಂಚಮ ಸ್ವರವಿಲ್ಲ ಮಗರಿಸ ಗರಿದಸಮ
ರಾಗವಾಗಿ ನಾನು ಭೂಮಿಗೆ ಬಂದೇ ಪಂಚಮ ಸ್ವರವಿಲ್ಲ ಮಗರಿಸ ಗರಿದಸಮ
ಪಂಚಮ ಸ್ವರವಿಲ್ಲ ನಿಶಾದದ ನೆರವಿಲ್ಲ..
ರಾಗ ಹೀನವಾಗಲು ಆಆಆ... ವಾಯು ಲೀನವಾಗಲು
ರಾಗವಾಗಿ ನಾನು ಭೂಮಿಗೆ ಬಂದೇ ಪಂಚಮ ಸ್ವರವಿಲ್ಲ ಮಗರಿಸ ಗರಿದಸಮ
ರಾಮ ಪಾದದ ಸ್ಪರ್ಶ ಪಡೆದ ಆ ಶಿಲೆಯಂತೇ ಶಾಪ ಮುಕ್ತಿಯ ಕ್ಷಣಕೆ ಕಾಯುತಿರುವೆ
ರಾಮ ಪಾದದ ಸ್ಪರ್ಶ ಪಡೆದ ಆ ಶಿಲೆಯಂತೇ ಶಾಪ ಮುಕ್ತಿಯ ಕ್ಷಣಕೆ ಕಾಯುತಿರುವೆ
ಇಲ್ಲಿ ಕರುಳಿನ ಕೂಗು ಅಲ್ಲಿ ದೇವರು ಕೂಗು ಕತ್ತರಿಯ ಬಾಯೊಳಗೆ ನಲುಗುತಿರುವೆ
ಸಂಗೀತ ಮಧುರ ಸಂಸಾರ ಸಮರ
ಮಾತೃದೇವೋ ಭವ ಪಿತೃದೇವೋ ಭವ ಆಚಾರ್ಯದೇವೋ ಭವ
ಮಾತೃದೇವೋ ಭವ ಪಿತೃದೇವೋ ಭವ ಆಚಾರ್ಯದೇವೋ ಭವ
ಅನುರಾಗ ಅಮರ ಅಲ್ಪಾಯು ಆಧಾರ
ರಾಗವಾಗಿ ನಾನು ಭೂಮಿಗೆ ಬಂದೇ ಪಂಚಮ ಸ್ವರವಿಲ್ಲ ಮಗರಿಸ ಗರಿದಸಮ
ಸಿರಿಯ ಗಿರಿಯನು ನೋಡೇ ಥಳುಕು ಬೆಡಗಲು ಬೇಡೆ
ನೊಂದವರ ಶೃತಿಯಾಗಿ ಮಿಡಿಯುತಿರಲು ಸಾ ರೀ ಗ ಗ ಮ ಗ ಸ
ಏಳು ಸ್ವರಗಳೇ ನನ್ನ ಬಾಳ ಕೊರಳಿನ ಚಿನ್ನ
ದಿನವೂ ಶುಭ ಸಂಕ್ರಾಂತಿ ಹಾಡುತಿರಲೂ
ನೋವೆಲ್ಲ ಹಗುರಾಗಿ ಉಪವಾಸ ಮಧುರ..
ಸಂಸಾರ ಸಮರ ಸಂಗೀತ ಮಧುರ
ಸಂಸಾರ ಸಮರ ಸಂಗೀತ ಮಧುರ
ಪಂಚಮದ ಸೋಕಿದರೆ ಹೂವೂ... ಹೂವೂ.. ಹೂವೂ
ನಿಶಾದವ ಸೋಕಿದರೆ ಮಾವು
ಪಂಚಮದ ಸೋಕಿದರೆ ಹೂವೂ... ಹೂವೂ.. ಹೂವೂ
ನಿಶಾದವ ಸೋಕಿದರೆ ಮಾವು
ರಾಗವಾಗಿ ನಾನು ಭೂಮಿಗೆ ಬಂದೇ ಪಂಚಮ ಸ್ವರವಿಲ್ಲ ಮಗರಿಸ ಗರಿದಸಮ
ರಾಗವಾಗಿ ನಾನು ಭೂಮಿಗೆ ಬಂದೇ ಪಂಚಮ ಸ್ವರವಿಲ್ಲ ಮಗರಿಸ ಗರಿದಸಮ
ಪಂಚಮ ಸ್ವರವಿಲ್ಲ ನಿಶಾದದ ನೆರವಿಲ್ಲ..
ರಾಗ ಹೀನವಾಗಲು ಆಆಆ... ವಾಯು ಲೀನವಾಗಲು
ರಾಗವಾಗಿ ನಾನು ಭೂಮಿಗೆ ಬಂದೇ ಪಂಚಮ ಸ್ವರವಿಲ್ಲ ಮಗರಿಸ ಗರಿದಸಮ
-----------------------------------------------------------------------------------------------------------
ಕರುಳಿನ ಕೂಗು (೧೯೯೩) - ಅಳ್ಬೇಡ ಮಗಳೇ
ಸಂಗೀತ: ಸಾಹಿತ್ಯ: ಹಂಸಲೇಖ ಗಾಯನ: ಎಸ್.ಪಿ.ಬಿ.
ಸೂಯ್ ಜಗವೆಲ್ಲ ... ಮನೆಯಾ ಒಳಗಿಲ್ಲ...
ಅಳಬೇಡ ಮಗಳೇ ಕತ್ತಲಾಗುವಾಗ ಸತ್ಯ ಕಾಣುವಾಗ
ನೋಯಬೇಡ ಮಗಳೇ ಬಂದು ಹೋಗುವಾಗ ಬಂಧ ಮುಗಿಯುವಾಗ
ಅಳಬೇಡ ಮಗಳೇ ಕತ್ತಲಾಗುವಾಗ ಸತ್ಯ ಕಾಣುವಾಗ
ನೋಯಬೇಡ ಮಗಳೇ ಬಂದು ಹೋಗುವಾಗ ಬಂಧ ಮುಗಿಯುವಾಗ
ಸೂರ್ಯ ಜಗವೆಲ್ಲಾ .. ಮನೆಯಾ ಒಳಗಿಲ್ಲಾ .. ಚಂದ್ರ ಬಾನೆಲ್ಲಾ ಮನೆಯ ಒಳಗಿಲ್ಲ
ನಿನಗೆ ನೀನೇ ನೆರಳು ಇಷ್ಟೇ ಬಾಳಿನ ತಿರುಳು
ಅಳಬೇಡ ಮಗಳೇ ಕತ್ತಲಾಗುವಾಗ ಸತ್ಯ ಕಾಣುವಾಗ
ನೋಯಬೇಡ ಮಗಳೇ ಬಂದು ಹೋಗುವಾಗ ಬಂಧ ಮುಗಿಯುವಾಗ
ಮುಗಿಲು ಕಡಲು ಕಾಣುವುದೆಷ್ಟೋ ಅಷ್ಟೇ
ಪುರುಷ ಪುಣ್ಯ ಪ್ರೀತಿ ಪ್ರೇಮ ದೊರೆವುದು ಬರೆದಿರುವಷ್ಟೇ
ಬಾಳು ಹೂವು ನೆಲಕೆ ಬೀಳೋ ಬದಲು ನೆರಳಿನ ಮರಕೆ
ಬರಸಿಡಿಲೆರೆದು ಉರುಳುವುದು ವಿಧಿ ಅಷ್ಟೇ
ಶಿಲೆಯೇ ಶಿವನಲ್ಲ ಆಳುವ ಕೊನೆಯಲ್ಲ
ಚಿಂತೆ ಚಿತೆಯಲ್ಲ ನೋವೇ ಜಗವಲ್ಲ
ನಿನಗೆ ನೀನೇ ನೆರಳು ಇಷ್ಟ ಬಾಳಿನ ತಿರುಳು
ಅಳಬೇಡ ಮಗಳೇ ಕತ್ತಲಾಗುವಾಗ ಸತ್ಯ ಕಾಣುವಾಗ
ನೋಯಬೇಡ ಮಗಳೇ ಬಂದು ಹೋಗುವಾಗ ಬಂಧ ಮುಗಿಯುವಾಗ
ಆಶಾ ಪಾಶ ಹಿಂದೆ ಬರುವುದು ಇಲ್ಲ ನಡೆಸೋತನಕ ಕಾಯಿ ತವಕ ಮುಂದೆ ಕಾಲನೇ ಎಲ್ಲ
ಗಿರಿಯ ಗಿಡಕೆ ಮೋಡವೇ ತಾನೇ ಎಲ್ಲ ನಾನು ನನದು ಭ್ರಮೆಯೇ ನಮದು ಎಲ್ಲಕೂ ಉತ್ತರ ಇಲ್ಲ...
ಜೀವನ ಜಡವಲ್ಲ ನಿಲ್ಲುವ ತೀರಲ್ಲ ಚಿಂತೆ ಚಿತೆಯಲ್ಲ ನೋವೇ ಜಗವಲ್ಲ
ನಿನಗೆ ನೀನೇ ನೆರಳು ಇಷ್ಟ ಬಾಳಿನ ತಿರುಳು
ಅಳಬೇಡ ಮಗಳೇ ಕತ್ತಲಾಗುವಾಗ ಸತ್ಯ ಕಾಣುವಾಗ
ನೋಯಬೇಡ ಮಗಳೇ ಬಂದು ಹೋಗುವಾಗ ಬಂಧ ಮುಗಿಯುವಾಗ
ಸೂರ್ಯ ಜಗವೆಲ್ಲಾ .. ಮನೆಯಾ ಒಳಗಿಲ್ಲಾ .. ಚಂದ್ರ ಬಾನೆಲ್ಲಾ ಮನೆಯ ಒಳಗಿಲ್ಲ
ನಿನಗೆ ನೀನೇ ನೆರಳು ಇಷ್ಟೇ ಬಾಳಿನ ತಿರುಳು
ಅಳಬೇಡ ಮಗಳೇ ಕತ್ತಲಾಗುವಾಗ ಸತ್ಯ ಕಾಣುವಾಗ
ನೋಯಬೇಡ ಮಗಳೇ ಬಂದು ಹೋಗುವಾಗ ಬಂಧ ಮುಗಿಯುವಾಗ
---------------------------------------------------------------------------------------------------------
No comments:
Post a Comment