493. ನಂಬರ್ ಐದೂ ಯೆಕ್ಕ (1981)


ನಂಬರ ಐದು ಎಕ್ಕಾ ಚಿತ್ರದ ಹಾಡುಗಳು 
  1. ನಾನು ನಿನ್ನ ಜೋಡಿ ಅನುದಿನ ಎಂದೆಂದೂ ಒಂದೇ ಮನ 
  2. ನಂಬರ ಐದು ಎಕ್ಕಾ 
  3. ಹೊಂಗನಸು ನನಸಾಗಿದೇ 
  4. ಭಾವ ರಾಗ 
ನಂಬರ್ ಐದೂ ಯೆಕ್ಕ (1981) - ನಾನು ನೀನು ಜೋಡಿ ಅನುದಿನ
ಸಾಹಿತ್ಯ: ಶ್ಯಾಮಸುಂದರ್ ಕುಲಕರ್ಣಿ ಸಂಗೀತ: ಎಂ.ರಂಗ ರಾವ್ ಹಾಡಿದವರು: ಎಸ್.ಪಿ.ಬಿ., ಎಸ್.ಜಾನಕಿ


ಹೆಣ್ಣು : ಆಆಆ... ಆಆಆಆ.. (ಆಹಾಹ್ಹಾಹ್ಹಹ್ಹಹ್ಹಾ)...  ಆಆಆ..  ಆಆಆ..  ಆಆಆ.. 
ಗಂಡು : ಆಹಾಹ್ಹಾಹ್ಹಹ್ಹಹ್ಹಾ..   ನಾನು ನೀನು ಜೋಡಿ ಅನುದಿನ ಎಂದೆಂದೂ ಒಂದೇ ಮನ
            ಉಲ್ಲಾಸ ತಂದಿದೆ ಮಿಲನ ಅನುರಾಗ ಬಾಳಿನ ಕರೆ ವಿರಾಗ ಬಾಳಿಗೆ ಹೊರೆ
ಹೆಣ್ಣು : ನಾನು ನೀನು ಜೋಡಿ ಅನುದಿನ ಎಂದೆಂದೂ ಒಂದೇ ಮನ
           ಉಲ್ಲಾಸ ತಂದಿದೆ ಮಿಲನ ಅನುರಾಗ ಬಾಳಿನ ಕರೆ ವಿರಾಗ ಬಾಳಿಗೆ ಹೊರೆ

ಗಂಡು : ಆಹ್ಹಾ.. ಆಆಆ ಹಿಮದ ಧವಳ ಮಣಿಯು ಹೊಳೆದಂತೆ ನಿನ್ನ ಅಂದ
ಹೆಣ್ಣು : ಆಹ್ಹಾ.. ಆಆಆ.. ಸುಮದ ಚೆಲುವ ದಳವು ಮಕರಂದ ದುಂಬಿ ಇಂದ
ಗಂಡು : ಕೋಗಿಲೆ (ಹೂಂ ) ಈಗಲೇ(ಆಆಆ) , ಕೋಗಿಲೆ ಈಗಲೇ
            ಸ್ನೇಹದಾಸೆ ಮೂಡಿ ಪ್ರೇಮಗಾನ ಹಾಡುತಿದೆ
ಹೆಣ್ಣು : ನಾನು ನೀನು ಜೋಡಿ ಅನುದಿನ
ಗಂಡು :  ಎಂದೆಂದೂ ಒಂದೇ ಮನ
ಹೆಣ್ಣು : ಉಲ್ಲಾಸ ತಂದಿದೆ ಮಿಲನ
ಗಂಡು :  ಅನುರಾಗ ಬಾಳಿನ ಕರೆ
ಇಬ್ಬರು : ವಿರಾಗ ಬಾಳಿಗೆ ಹೊರೆ

ಹೆಣ್ಣು : ಆಆಆಅ.. ಜನುಮ ಜನುಮ ಜೊತೆಯ ಬೆರೆತಾಗ ಪ್ರೇಮ ರಾಗ
ಗಂಡು : ಆಆಆಅ.. ಚೆಲುವ ಸಖಿಯು ಒಲುಮೆ ದೊರೆತಾಗ ಬಂತು ಯೋಗ
ಹೆಣ್ಣು : ನಿನ್ನಯ (ಒಹೋ ) ಸ್ನೇಹದ (ಓ) , ನಿನ್ನಯ ಸ್ನೇಹದ
          ದೋಣಿಯಲ್ಲೆ ನಲ್ಲ ಬಾಳ ಯಾನ ಸಾಗುತಿದೆ
ಗಂಡು : ನಾನು ನೀನು ಜೋಡಿ ಅನುದಿನ
ಹೆಣ್ಣು : ಎಂದೆಂದೂ ಒಂದೇ ಮನ
ಗಂಡು : ಉಲ್ಲಾಸ ತಂದಿದೆ ಮಿಲನ
ಹೆಣ್ಣು : ಅನುರಾಗ ಬಾಳಿನ ಕರೆ
ಇಬ್ಬರು : ವಿರಾಗ ಬಾಳಿಗೆ ಹೊರೆ

ಗಂಡು : ಆಆಆ.. ಮನಸು ಕನಸು ತೆನೆವ ವಯಸಲ್ಲೆ ನಿನ್ನ ಕಂಡೆ
ಹೆಣ್ಣು : ಆಆಆಅ... ಹಳೆಯ ದಿನವ ಮರೆತು ಜಗವನ್ನೆ ಗೆಲ್ಲು ಎಂದೆ
ಗಂಡು : ನಲ್ಲೆಯೇ(ಹ್ಹಾ.. )  ಬಲ್ಲೆಯಾ(ಹ್ಹಹ್ಹಾ) , ನಲ್ಲೆಯೇ ಬಲ್ಲೆಯಾ
          ನಿನ್ನ ಪ್ರೀತಿಯಿಂದ ಇಲ್ಲೆ ಸ್ವರ್ಗ ಕಾಣುತಿದೆ
ಗಂಡು : ನಾನು ನೀನು ಜೋಡಿ ಅನುದಿನ ( ಅಹ್ಹಹ್ಹಹ್ಹ)
           ಎಂದೆಂದೂ ಒಂದೇ ಮನ (ಹ್ಹಾ.. ಅಹ್ಹಹ್ಹಹಹಹ)
           ಉಲ್ಲಾಸ ತಂದಿದೆ ಮಿಲನ (ಆಆ )  ಅಹ್ಹಹ್ಹಾ
           ಅನುರಾಗ ಬಾಳಿನ ಕರೆ (ಹ್ಹೇಹ್ಹೇಹ್ಹೇ) 
          ವಿರಾಗ ಬಾಳಿಗೆ ಹೊರೆ (ಅಹ್ಹಹ್ಹಹಹ ) ಅಹ್ಹಹ್ಹಹ್ಹಹಹಹ್ 
--------------------------------------------------------------------------------------------------------------------------

ನಂಬರ್ ಐದೂ ಯೆಕ್ಕ (1981) - ನಂಬರ್ ಐದೂ ಯೆಕ್ಕ
ಸಂಗೀತ:ಎಂ.ರಂಗರಾವ್ ಸಾಹಿತ್ಯ:ಶ್ಯಾಮಸುಂದರ್ ಕುಲಕರ್ಣಿ ಹಾಡಿದವರು: ಮುಸುರಿ ಕೃಷ್ಣ್ಹಮೂರ್ತಿ, ಎಂ.ರಂಗರಾವ್

ಬಂ ಬಂ ಬಂ ಬಂ ಬಂ ಪಬಂಬಂ ಪಬಂಬಂ ಪಬಂಬಂ ಪಬಂಬಂ
ಡಂಡಂಡಂ ಬಂಬಂ ಬಂಬಂ   ಡಂಡಂಡಂ ಬಂಬಂ ಬಂಬಂ 
ಪಂಚ ಪ್ರಾಣಗಳು ನಾವೂ ಪಂಚಾಮೃತವೂ ನಾವೂ
ಪಂಚ ಪ್ರಾಣಗಳು ನಾವೂ ಪಂಚಾಮೃತವೂ ನಾವೂ
ಪ್ರಪಂಚದಲ್ಲಿ ಪ್ರಚಂಡರಾಗಿ ಪ್ರಖ್ಯಾತರೂ
ಪಬಪಬ  ಪಬಪಬ  ಪಬಪಬ   ಪಂಪಂಪಂ   
ಪಂಪಂಪಂ  ಪಂಪಂಪಂ  ಪಂಪಂಪಂ   
ದನಿದನಿದನಿ ಪಬಪಂ ಪಬಪಂ  ಪಬಪಂ
ದಾಗದಂ ದಾಗದಂ ದಾಗದಂ ದಾಗದಂ
ನಂಬರು ಐದು ಎಕ್ಕಾ ನಮಗೆಲ್ಲಾ ಒಂದೇ ಲೆಕ್ಕಾ
ನಂಬರು ಐದು ಎಕ್ಕಾ ನಮಗೆಲ್ಲಾ ಒಂದೇ ಲೆಕ್ಕಾ

ಪಮಗರಿಸ ಪಮಗರಿಸ ಪಮಗರಿಸ 
ಭಾರತ ದೇಶದ ಭಾವ್ಯಕತೆಯ ಜ್ಯಾತ್ಯಾತಿತದ ಸಂದೇಶ (ಹೌದು)
ಬಾಯಲಿ ಆಟದಿ ಬಾಯಲಿ ಮಾತು ತೋರುವುದೇ ನಮ್ಮ ಉದ್ದೇಶ 
ಎಕ್ಜೇಕಟಲಿ  ದ್ಯಾಟ್ಸ್ ಆಯ್ ವಾಟ್ ಡೂ ಹಮ್ ಸಬ ಏಕ್ ಹೈ 
ಭಾರತ ಮಾತಾ ಕೀ ಜೈ  ಭಾರತ ಮಾ ಕಿ ಜೈ 
ಎಲ್ಲರೂ ಒಂದೇ ಜಾತಿ ನಮಗೆಲ್ಲಾ ಒಂದೇ ನೀತಿ 
ಎಲ್ಲರೂ ಒಂದೇ ಜಾತಿ ನಮಗೆಲ್ಲಾ ಒಂದೇ ನೀತಿ 
ನಂಬರು ಐದು ಎಕ್ಕಾ ನಮಗೆಲ್ಲಾ ಒಂದೇ ಲೆಕ್ಕಾ
ನಂಬರು ಐದು ಎಕ್ಕಾ ನಮಗೆಲ್ಲಾ ಒಂದೇ ಲೆಕ್ಕಾ

ಬಾಳಲಿ ಬೇಕು ವಿನೋದ ನಮ್ಮಲ್ಲಿ ಕೂಡದೂ ವಿರೋಧ 
ಬಾಳಲಿ ಬೇಕು ವಿನೋದ ನಮ್ಮಲ್ಲಿ ಕೂಡದೂ ವಿರೋಧ 
ಕೋಪಕೂ ಎಂದೂ ನಿಷೇಧ  
ನಂಬರು ಐದು ಎಕ್ಕಾ ನಮಗೆಲ್ಲಾ ಒಂದೇ ಲೆಕ್ಕಾ
ನಂಬರು ಐದು ಎಕ್ಕಾ ನಮಗೆಲ್ಲಾ ಒಂದೇ ಲೆಕ್ಕಾ
--------------------------------------------------------------------------------------------------------------------------

ನಂಬರ್ ಐದೂ ಯೆಕ್ಕ (1981) - ಹೊಂಗನಸು ನನಸಾಗಿದೆ
ಸಂಗೀತ: ಎಂ.ರಂಗರಾವ್ ಸಾಹಿತ್ಯ: ದೊಡ್ಡರಂಗೇಗೌಡ್ ಹಾಡಿದವರು: ಮುಸುರಿಕೃಷ್ಣಮೂರ್ತಿ, ಬೆಂ. ಲತಾ

ಹೆಣ್ಣು : ಓಓಓ .... ಆಆಆ...
         ಹೊಂಗನಸು ನನಸಾಗಿದೇ ಮೈಮನ ಹೂವಂತೇ ಹಗುರಾಗಿದೆ ನನ್ನ
         ಹೊಂಗನಸು ನನಸಾಗಿದೇ ಮೈಮನ ಹೂವಂತೇ ಹಗುರಾಗಿದೆ
         ಜೀವನ ನಂದನವನವಾಗಿ ತೀರದ ಆಸೆಯ ಕಡಲಾಗಿ  
         ಜೀವನ ನಂದನವನವಾಗಿ ತೀರದ ಆಸೆಯ ಕಡಲಾಗಿ
         ನೋಟದಲ್ಲಿ ಕೂಟದಲ್ಲಿ ಮೂಡಿಬಂತು ಮಹಾ
         ಮಾತಿನಲ್ಲಿ ಮೋಜಿನಲ್ಲಿ ಕೂಡಿ ಬಂತು ಸ್ನೇಹಾ 
        ಎದೆಯಾಳದ ಅನುರಾಗದ ಒಡನಾಟವೂ ಓಲಾಡಿದೇ
        ಹೊಂಗನಸು ನನಸಾಗಿದೇ ಮೈಮನ ಹೂವಂತೇ ಹಗುರಾಗಿದೆ....

ಹೆಣ್ಣು : ಬಾಳ ಬಣ್ಣ ನೂರು ರೀತಿ ಕಂಡು ಕುಣಿದಾಡಿ
         ಆನಂದ ಕಣ್ಣ ತುಂಬಿಕೊಂಡು ಊರ ನಲಿದಾಡಿ
         ಬಾಳ ಬಣ್ಣ ನೂರು ರೀತಿ ಕಂಡು ಕುಣಿದಾಡಿ
         ಆನಂದ ಕಣ್ಣ ತುಂಬಿಕೊಂಡು ಊರ ನಲಿದಾಡಿ
         ಲೋಕದ ಸಂತೋಷವೇ ತೂಗಾಡುತ ಬಳಿ ಬಂದಿದೆ 
         ಲೋಕದ ಸಂತೋಷವೇ ತೂಗಾಡುತ ಬಳಿ ಬಂದಿದೆ 
         ನೀನೇ ರಾಗ ನಾನೇ ತಾಣ ಸಾಕು ಮೌನ ಹಾಡು ಗಾನ 
         ನೀನೇ ರಾಗ ನಾನೇ ತಾಣ ಸಾಕು ಮೌನ ಹಾಡು ಗಾನ 
         ಚೆಲುವಿನಲಿ ಗೆಲುವಿನಲಿ ಬೆರೆತಿರುವೇ
        ಹೊಂಗನಸು ನನಸಾಗಿದೇ ಮೈಮನ ಹೂವಂತೇ ಹಗುರಾಗಿದೆ....
        ಓಹೋಹೋ... (ಆಹಾಹಾ) ಆಹಾಹಾ (ಹೂಂಹೂಂಹೂಂ)

ಗಂಡು : ಜಿಂಕೆಯಂತ ನಿನ್ನ ಕಣ್ಣೂ ಸುತ್ತ ಹರಿದಾಗ 
           ಆ ಚಿನ್ನದಂತ ನಿನ್ನ ರೂಪು ನನ್ನ ಸೆಳೆದಾಗ 
           ಜಿಂಕೆಯಂತ ನಿನ್ನ ಕಣ್ಣೂ ಸುತ್ತ ಹರಿದಾಗ 
           ಆ ಚಿನ್ನದಂತ ನಿನ್ನ ರೂಪು ನನ್ನ ಸೆಳೆದಾಗ 
          ಲಾಸ್ಯದ ಲಾವಣ್ಯವೇ ಸೌಂದರ್ಯದ ಸೆಲೆ ತುಂಬಿದೆ            
          ಲಾಸ್ಯದ ಲಾವಣ್ಯವೇ ಸೌಂದರ್ಯದ ಸೆಲೆ ತುಂಬಿದೆ            
         ನಾಗವೇಣಿ ದಯೆಯ ತೋರೇ ಬಾಳಿಗೆಂತ ನಡುವು ಬಾಗಿ
         ನಾಗವೇಣಿ ದಯೆಯ ತೋರೇ ಬಾಳಿಗೆಂತ ನಡುವು ಬಾಗಿ
         ಸೊಬಗಿನಲಿ ನಡೆಯುತಲಿ ಕರೆದಿರುವೇ
ಹೆಣ್ಣು : ನನ್ನ... ಹೊಂಗನಸು ನನಸಾಗಿದೇ ಮೈಮನ ಹೂವಂತೇ ಹಗುರಾಗಿದೆ         
         ಹೂವಂತೇ ಹಗುರಾಗಿದೆ... ಹುಂಹುಂಹುಂ.. ಹೂವಂತೇ ಹಗುರಾಗಿದೆ                      
--------------------------------------------------------------------------------------------------------------------------

ನಂಬರ್ ಐದೂ ಯೆಕ್ಕ (1981) - ಭಾವ ರಾಗ
ಸಂಗೀತ: ಎಂ.ರಂಗರಾವ್ ಸಾಹಿತ್ಯ: ಗೀತಪ್ರಿಯ ಹಾಡಿದವರು: ಮುಸುರಿ ಕೃಷ್ಣಮೂರ್ತಿ

ಭಾವ...  ರಾಗ....  ತಾಳ....  ಸಂಗಮ... ಇವುಗಳ ಸಂಗಮವೇ ಭರತನಾಟ್ಯ
ಭಾವ...  ರಾಗ....  ತಾಳ....  ಸಂಗಮ
ಭರತ ಖಂಡದ ಅತಿ ಪುರಾ... ತನ
ಭರತ ಮುನಿಯ ನಾಟ್ಯ ಕೆಲಸ ಅನುಪಮಾ
ಭಾವ...  ರಾಗ....  ತಾಳ....  ಸಂಗಮ...

ಭರತ ಶಾಸ್ತ್ರೀಯ ಸಂಗೀತವೇ ಕೋಟಿ ಭಾವಗಳ ಕೋಶವಿದೇ
ಭರತ ಶಾಸ್ತ್ರೀಯ ಸಂಗೀತವೇ ಕೋಟಿ ಭಾವಗಳ ಕೋಶವಿದೇ
ಪ್ರತಿ ರಾಗ ತಾಳದಲಿ ವಿಧ ವಿಧ ರಸ ಭಾವವಿದೇ... ಏಏಏಏಏ... ಆಆಆ...ಆಆಆಅ.... 
ಪ್ರತಿ ರಾಗ ತಾಳದಲಿ ವಿಧ ವಿಧ ರಸ ಭಾವವಿದೇ. 
ಪ್ರತಿ ಸ್ವರದಲ್ಲೂ ನವರಸದ... ಸ್ವರ ಪಾಶವಿದೇ... ಏಏಏಏಏ... 
ರಿಗಮಪನಿದ  ಆಆಆ... ದನಿಧಪದಪಾ   ನಿದಪಮಪಗ ರಿಗಮನಿದಪ 
ಪ್ರತಿ ಸ್ವರದಲ್ಲೂ ನವರಸದ... ಸ್ವರ ಪಾಶವಿದೇ
ಮಧುರತೆಯ ಮೃದು ಹಾಸವಿದೇ 
ಮಧುರತೆಯ ಮೃದು ಹಾಸವಿದೇ 
ಶಿವತಾಂಡವದ ಆವೇಶವಿದೇ ಸಪ್ತಸ್ವರಗಳ ಸ್ವರಮೇಳದಲಿ 
ಸರ್ವ ಹೃದಯಗಳ ಸರತಿಯಿದೆ 
ಆರೋಧನ ಅವಲೋನಯತಿ ಅದ್ಬುತ ತೋರುವ ಶಕ್ತಿಯಿದೆ 
ಭಾವ...  ರಾಗ....  ತಾಳ....  ಸಂಗಮ... 
--------------------------------------------------------------------------------------------------------------------------

No comments:

Post a Comment