494. ಪಾಯಿಂಟ್ ಪರಿಮಳ (1980)


ಪಾಯಿಂಟ್ ಪರಿಮಳ ಚಿತ್ರದ ಹಾಡುಗಳು 
  1. ನಾನು ನಿನ್ನ ಜೋಡಿ ನೀನು ನನ್ನ ಜೋಡಿ 
  2. ಬಾನಲ್ಲಿ ಪೌರ್ಣಿಮೆ ಚಂದ್ರ  
  3. ಸಾಯಂಕಾಲ ನಲಿಯುವ ಕಾಲ 
  4. ಹೆಣ್ಣನು ಗಂಡು ನೋಡಿ ಒಪ್ಪಿಗೆ ತಂದಾಯ್ತು 
ಪಾಯಿಂಟ್ ಪರಿಮಳ (1980) - ನಾನು ನಿನ್ನ ಜೋಡಿ ನೀನು ನನ್ನ ಜೋಡಿ
ಸಂಗೀತ: ರಾಜನ್-ನಾಗೇಂದ್ರ ಸಾಹಿತ್ಯ: ಚಿ.ಉದಯಶಂಕರ್  ಹಾಡಿದವರು: ಎಸ್.ಪಿ.ಬಿ, ಎಸ್.ಜಾನಕಿ


ಹೆಣ್ಣು : ನಾನು ನಿನ್ನ ಜೋಡಿ ನೀನು ನನ್ನ ಜೋಡಿ
          ಜೋಡಿ ಹಕ್ಕಿ ನಾವಾಗಿ ಬಾ ಹಾಡುವ
         ನಾನು ನಿನ್ನ ಜೋಡಿ ಹ್ಹಾ ನೀನು ನನ್ನ ಜೋಡಿ
        ಜೋಡಿ ಹಕ್ಕಿ ನಾವಾಗಿ ಬಾ ಹಾಡುವ
ಗಂಡು : ಈ ಸವಿ ಮಾತಿಂದ ಈ ನುಡಿ ಮುತ್ತಿಂದ
           ಈ ಸವಿ ಮಾತಿಂದ ಈ ನುಡಿ ಮುತ್ತಿಂದ
          ಚಿನ್ನ ಇಂದು ಕಂಡೆ ನಾನು ಆನಂದ
ಹೆಣ್ಣು : ನಾನು ನಿನ್ನ ಜೋಡಿ ಹ್ಹಾ .. ನೀನು ನನ್ನ ಜೋಡಿ
          ಆ.. ಜೋಡಿ ಹಕ್ಕಿ ನಾವಾಗಿ ಬಾ ಹಾಡುವ

ಗಂಡು : ಹೇಹೇಹೇ ... ಡಿಡಿರರ ಡಿಡಿಏಏಏ..
ಹೆಣ್ಣು : ರುರೂರೂರ  ರುರೂರೂರ  ರುರೂರೂರ
ಗಂಡು: ಲೇ... ಹೇಹೇಹೇಹೇ ಡಿಡಿರರ ಡಿಡಿಏಏಏ..
ಹೆಣ್ಣು : ರುರೂರೂರ  ರುರೂರೂರ  ರುರೂರೂರ
ಇಬ್ಬರು : ಡಿಡಿರರ ಡಿಡಿಏಏಏ.. ಡಿಡಿರರ ಡಿಡಿಏಏಏ.. ಡಿಡಿರರ ಡಿಡಿಏಏಏ..
ಗಂಡು  : ಹಗಲಿಗೇ ಸೂರ್ಯ ಜೋಡಿಯು ಇರುಳಿಗೇ ಚಂದ್ರ ಜೋಡಿಯು
             ಓ ಮುದ್ದು ಹೆಣ್ಣೆ ನನಗೆಂದೂ ನೀನು ಹಿತವಾದ ಸರಿಯಾದ ಜೋಡಿ
             ಹಿತವಾದ ಸರಿಯಾದ ಜೋಡಿ
ಹೆಣ್ಣು : ಬಾನಿಗೇ ಮೋಡ ಜೋಡಿಯು ಬಳ್ಳಿಗೇ ಮರವು ಜೋಡಿಯು
           ನಿನ್ನೊಡನೆ ನಾನು ಎಂದೆಂದು ಹೀಗೆ ಇರುವಾಸೆ ನಿನ್ನನ್ನು ನೋಡಿ
           ಇರುವಾಸೆ ನಿನ್ನನ್ನು ಕೂಡಿ
ಗಂಡು :ಎಲ್ಲೂ ಇಲ್ಲ ಇಂದು ಇಂಥ ಒಳ್ಳೇ ಜೋಡಿಯು
ಹೆಣ್ಣು : ನಾನು ನಿನ್ನ ಜೋಡಿ
ಗಂಡು : ಹ್ಹ ನೀನು ನನ್ನ ಜೋಡಿ
ಇಬ್ಬರು : ಜೋಡಿ ಹಕ್ಕಿ ನಾವಾಗಿ ಬಾ ಹಾಡುವ

ಹೆಣ್ಣು : ಲಲಲ್ಲಲ್ಲಲಾ... ಲಲಲ್ಲಲ್ಲಲಾರರಾ ಓಹೋಹೋ  
         ಕಣ್ಣಲೀ ನಿನ್ನ ಆಸೆಯು ಮನದಲೀ ನಿನ್ನ ಆಸೆಯು
         ಕಡಲಂತೆ ಆಸೆ ಎದೆಯಲ್ಲಿ ತುಂಬಿ ನಾ ಕಂಡೆ ಸಂತೋಷವನ್ನು
         ನಾ ಕಂಡೆ ಸಂತೋಷವನ್ನು
ಗಂಡು : ಹೆಣ್ಣಿಗೇ ಗಂಡಿನಾಸೆಯು ಗಂಡಿಗೇ ಹೆಣ್ಣಿನಾಸೆಯು
            ಈ ಆಸೆ ತರುವ ಸಂಸಾರದಲ್ಲಿ ಕಾಣೋಣ ಆನಂದವನ್ನು
          ಕಾಣೋಣ ಆನಂದವನ್ನು
ಹೆಣ್ಣು : ನಿನ್ನ ಬಿಟ್ಟು ಇನ್ನು ನಾನು ಬಾಳಲಾರೆನು
ಗಂಡು : ನಾನು ನಿನ್ನ ಜೋಡಿ ನೀನು ನನ್ನ ಜೋಡಿ
          ಜೋಡಿ ಹಕ್ಕಿ ನಾವಾಗಿ ಬಾ ಹಾಡುವ
ಹೆಣ್ಣು : ಈ ಸವಿ ಮಾತಿಂದ ಈ ನುಡಿ ಮುತ್ತಿಂದ
         ಚಿನ್ನ ಇಂದು ಕಂಡೆ ನಾನು ಆನಂದ
ಇಬ್ಬರು : ನಾನು ನಿನ್ನ ಜೋಡಿ ಹ್ಹ ನೀನು ನನ್ನ ಜೋಡಿ
            ಜೋಡಿ ಹಕ್ಕಿ ನಾವಾಗಿ ಬಾ ಹಾಡುವ.... 
--------------------------------------------------------------------------------------------------------------------------

ಪಾಯಿಂಟ್ ಪರಿಮಳ (1980) - ಬಾನಲ್ಲಿ ಪೌರ್ಣಿಮೆ ಚಂದ್ರ ಬಳಿಯಲಿ ಪ್ರೇಮದ ಚಂದ್ರ
ಸಂಗೀತ: ರಾಜನ್-ನಾಗೇಂದ್ರ ಸಾಹಿತ್ಯ: ಚಿ.ಉದಯಶಂಕರ್ ಹಾಡಿದವರು: ಎಸ್.ಪಿ.ಬಿ, ಎಸ್.ಜಾನಕಿ

ಹೆಣ್ಣು : ಬಾನಲ್ಲಿ ಪೌರ್ಣಿಮೆ ಚಂದ್ರ ಬಳಿಯಲಿ ಪ್ರೇಮದ ಚಂದ್ರ
          ಒಲವಿಂದ ಆನಂದ ಆ ಚಂದ್ರ ಬೆಳಕು ತಂದಾ  ಓ .. ಈ ಚಂದ್ರ ಬದುಕು ತಂದ
ಗಂಡು : ಬಾನಲ್ಲಿ ಮಿನುಗವ ತಾರೇ ಬಳಿಯಲ್ಲಿ ಪ್ರೇಮದ ತಾರೆ
            ಒಲವಿಂದ ಹಿತ ತಂದ  ಆ.. ತಾರೆ ಬಾನಿಗಂದ ಓಓಓ .. ಈ ತಾರೇ  ಬಾಳಿಗಂದ
ಹೆಣ್ಣು : ಬಾನಲ್ಲಿ ಪೌರ್ಣಿಮೆ ಚಂದ್ರ ಬಳಿಯಲಿ ಪ್ರೇಮದ ಚಂದ್ರ

ಹೆಣ್ಣು : ಈ ಕಣ್ಣ ಮಿಂಚ ಬೆಳಕಲ್ಲಿ ನಾನು ಇಂದು ಸೋತು ಹೋದೆನು
ಗಂಡು : ನಿನ್ನಾಕುಡಿ ನೋಟ ಕಂಡು ಕರಗಿ ಹೋದೆನು
ಹೆಣ್ಣು : ನೀನಿಂದೂ ತಂದ ಸಂತೋಷದಿಂದ  ನನ್ನೇ ಮರೆತು ಹೋದೆನು
 ಗಂಡು : ನಿನ್ನಾ ಉಸಿರಲ್ಲಿ ಉಸಿರಾಗಿ ಹೋದೆನು... ಉಸಿರಾಗಿ ಹೋದೆನು
ಹೆಣ್ಣು : ಬಾನಲ್ಲಿ ಪೌರ್ಣಿಮೆ ಚಂದ್ರ ಬಳಿಯಲಿ ಪ್ರೇಮದ ಚಂದ್ರ
          ಒಲವಿಂದ ಆನಂದ ಆ ಚಂದ್ರ ಬೆಳಕು ತಂದಾ  ಓ .. ಈ ಚಂದ್ರ ಬದುಕು ತಂದ
ಗಂಡು : ಬಾನಲ್ಲಿ ಮಿನುಗವ ತಾರೇ ಬಳಿಯಲ್ಲಿ ಪ್ರೇಮದ ತಾರೆ

ಗಂಡು : ಬೆಳದಿಂಗಳಂತೆ ಮನತುಂಬಿ ನಿಂತೇ ನನ್ನ ನೀನು ಸೇರಿದೇ 
ಹೆಣ್ಣು : ರಾಗ ಅನುರಾಗ ಕಂಡು ಮೂಕಳಾದೆ 
ಗಂಡು : ನೀನಾಡೋ ಮಾತು ಸಂಗೀತದಂತೆ ಎಲ್ಲ ಮಧುರವಾಗಿದೆ 
ಹೆಣ್ಣು : ನಿನ್ನ ಜೊತೆ ಸೇರಿ ಮನಸು ಹಗುರವಾಗಿದೆ.... ಮನಸು ಹಗುರವಾಗಿದೆ 
ಗಂಡು : ಬಾನಲ್ಲಿ ಮಿನುಗವ ತಾರೇ ಬಳಿಯಲ್ಲಿ ಪ್ರೇಮದ ತಾರೆ
            ಒಲವಿಂದ ಹಿತ ತಂದ  ಆ.. ತಾರೆ ಬಾನಿಗಂದ ಓಓಓ .. ಈ ತಾರೇ  ಬಾಳಿಗಂದ
ಹೆಣ್ಣು : ಬಾನಲ್ಲಿ ಪೌರ್ಣಿಮೆ ಚಂದ್ರ ಬಳಿಯಲಿ ಪ್ರೇಮದ ಚಂದ್ರ
ಇಬ್ಬರು : ಒಲವಿಂದ ಆನಂದ ಲಾಲಾ ಲಾಲಾಲಾ ಆಆಆ  ಲಾಲಾಲಾ ಆಆಆ
--------------------------------------------------------------------------------------------------------------------------

ಪಾಯಿಂಟ್ ಪರಿಮಳ (1980) - ಸಾಯಂಕಾಲ ನಲಿಯುವ ಕಾಲ
ಸಂಗೀತ: ರಾಜನ್-ನಾಗೇಂದ್ರ ಸಾಹಿತ್ಯ: ಚಿ.ಉದಯಶಂಕರ್ ಹಾಡಿದವರು: ವಾಣಿಜಯರಾಂ

ಕೋರಸ್ : ಪಾಪಪಪಪ್ಪಪಪ ಪಾಪಪಪಪ್ಪಪಪ (ರುರುರುರೂರ್ )
                ಪಾಪಪಪಪ್ಪಪಪ ಪಾಪಪಪಪ್ಪಪಪ (ರುರುರುರೂರ್)
                ಪಾಪಪಪಪ್ಪಪಪ
ಹೆಣ್ಣು : ಸಾಯಂಕಾಲ ನಲಿಯುವ ಕಾಲ
          ಸಾಯಂಕಾಲ ನಲಿಯುವ ಕಾಲ ಸೇರುವ ಆಡುವ ನಾವೆಲ್ಲಾ
          ಸಾಯಂಕಾಲ ನಲಿಯುವ ಕಾಲ
       
ಹೆಣ್ಣು : ತಂಗಾಳಿ ಬೀಸುತಿದೆ ಚಳಿಯನು ತುಂಬುತ ಓಡುತಿದೆ
          ಮೈಯೆಲ್ಲಾ ಬಿಸಿ ಏರಿ ಬಯಕೆಯ ಹರಿದಿದೆ ಮಿಂಚಂತೆ
          ನೂರಾರು ಕನಸುಗಳು ಮಿನುಗುವ ತಾರೆಯು ಹೊಳೆವಂತೆ
          ಹೊಸ ಆಸೆ ಹಿತವಾಗಿ ತುಂಬಿದೆ ಹುಣ್ಣಿಮೆ ಬೆಳಕಂತೆ
          ಮನವನು ಕಲಕಿದೆ (ಲಲಲಲ್ಲಲಲ ) ತನುವನು ಕುಲಕಿದೆ (ಲಲಲಲ್ಲಲಲ )
          ಸುಖವನು ತಂದಿದೆ ಮರೆಸಲು ನೋವೆಲ್ಲಾ
         ಸಾಯಂಕಾಲ ನಲಿಯುವ ಕಾಲ (ತಾರತರ ಸೇರುವ ಆಡುವ ನಾವೆಲ್ಲಾ
        ಸೇರುವ ಆಡುವ ನಾವೆಲ್ಲಾ...  ಸಾಯಂಕಾಲ ನಲಿಯುವ ಕಾಲ     

ಹೆಣ್ಣು :  ಹೊತ್ತಿಗ ಜಾರಿದರೇ ಸುತ್ತಲೂ ಕತ್ತಲೆ ಕವಿಯುವುದು 
           ಮುತ್ತಂಥ ಆಸೆಗಳು ಕಣ್ಣಲೇ ಉಳಿವುದು ಎಂದೆಂದೂ 
          ನೆನಪುಗಳಾ ಹೂವುಗಳು ಮೆಲ್ಲಗೆ ಮನಸಲಿ ಅರಳುತಿವೆ 
          ಸಂಗಾತಿ ಎಲ್ಲೆಂದು ಕಂಗಳು ಕೂಗುತ ಹುಡುಕುತಿವೆ 
         ವಿರಹವ ಅಳಿಸುವ (ಲಲಲಲ್ಲಲಲ ) ವಿರಸವ ಮರೆಯುವ (ಲಲಲಲ್ಲಲಲ )
         ವಿರಹವ ಅಳಿಸುವ ವಿರಸವ ಮರೆಯುವ ಸರಸದಿ ಹರುಷವ ಪಡೆಯಿರಿ ನೀವೆಲ್ಲಾ 
        ಸಾಯಂಕಾಲ ನಲಿಯುವ ಕಾಲ
        ಸಾಯಂಕಾಲ (ಲಲಲಲ್ಲಲಲ ) ನಲಿಯುವ ಕಾಲ (ಲಲಲಲ್ಲಲಲ )
        ಸೇರುವ ಆಡುವ ನಾವೆಲ್ಲಾ 
--------------------------------------------------------------------------------------------------------------------------

ಪಾಯಿಂಟ್ ಪರಿಮಳ (1980) - ಹೆಣ್ಣನು ಗಂಡು ನೋಡಿ ಒಪ್ಪಿಗೆ ತಂದಾಯ್ತು
ಸಂಗೀತ: ರಾಜನ ನಾಗೇಂದ್ರ, ಸಾಹಿತ್ಯ:ಚಿ.ಉದಯಶಂಕರ್ ಗಾಯನ: ಎಸ್.ಪಿ.ಬಿ, ಪಿ.ಬಿ.ಎಸ್.ನಾಗೇಂದ್ರ, ಲಕ್ಷ್ಮೀಪತಿ

ಗಂಡು : ಹೆಣ್ಣನು ಗಂಡು ನೋಡಿ ಒಪ್ಪಿಗೆ ತಂದಾಯ್ತು
ಹೆಣ್ಣು : ಗಂಡನು ಹೆಣ್ಣು ನೋಡಿ ಮೆಚ್ಚಿಗೆ ಎಂದಾಯ್ತು
ಗಂಡು : ಹೆಣ್ಣನು ಗಂಡು ನೋಡಿ ಒಪ್ಪಿಗೆ ತಂದಾಯ್ತು
            ಗಂಡನು ಹೆಣ್ಣು ನೋಡಿ ಮೆಚ್ಚಿಗೆ ಎಂದಾಯ್ತು
ಎಲ್ಲರು : ಚಪ್ಪರ ಹಾಕೋಣ ಓಲಗ ಉದೋಣ
            ಮಂತ್ರವ ಹೇಳೋಣ ಮದುವೆಯ ಮಾಡೋಣ

ಗಂಡು : ಅರಗಿಣಿಯಂತೆ ಹೆಣ್ಣು ನಮ್ಮಿ ಬಾಳಿನ ಕಣ್ಣು
            ಪ್ರೀತಿಯಲಿ ಬೆಳೆಸಿದೆವು ನಿನ ನಂಬಿ ಕಳಿಸುವೆವು
ಹೆಣ್ಣು : ಮನಸು ಚಿನ್ನದ ಹಾಗೆ ಮಾತು ಮುತ್ತಿನ ಹಾಗೆ
ಗಂಡು : ನಿನ್ನ ಮನೆ ಬೆಳಗುವಳು ನಿನಗಾಗಿ ಬದುಕುವಳು
ಎಲ್ಲರು : ಜೊತೆಯಾಗಿ ಸುಖವಾಗಿ ಹಾಯಾಗಿ ಬಾಳಿ
ಗಂಡು :  ಹೆಣ್ಣು ಗಂಡು ಕೂಡಿ ಆದರೂ ಹೊಸ ಜೋಡಿ
            ಎಲ್ಲರೂ ಕೂಡಿ ಹಾಡಿ ಆರತಿಯನು ಮಾಡಿ
ಹೆಣ್ಣು : ಆರತಿ ಬೆಳಗೋಣ ಮುತ್ತಿನಾರತಿ ಬೆಳಗೋಣ
ಗಂಡು : ಸಾಂ ಪಾಂ ಸಾ ..ಪಾ..ಪಾ ಪಾ..
           ಪಮಪಪ  ನಿಮಪಪ   ಪಮಪಪ... 
          ನಿಪಪಪ ಮಪನಿಪ ಮಪನಿಪ ಶಬ್ಬಾಶ್...
          ಪಮಪ  ಮಮರಿರಿಮ ರೀರಿರಿರಿ ಲಿಲಿಲೀಲಿ
          ನೀನಿನಿನಿ... ನಿದಮಪ...  ಅಪರಿಮ...ಅಮರಿಸರೀ
          ಔ... ಧಿಧೀ.. ಧೂಮ್ ಧೂಮ್ ಧೂಮ್... ನನನನ...
         ತಝಮ್ ತಕಝಮ್  ತರೀಕಿಟತೋಮ್... ತತ್  ತರೀಕಿಟತೋಮ್    
        ತರೀಕಿಟತೋಮ್... ತತ್  ತರೀಕಿಟತೋಮ್     .   
ಎಲ್ಲರು : ಹೆಣ್ಣು ಗಂಡು ಕೂಡಿ ಆದರೂ ಹೊಸ ಜೋಡಿ
           ಎಲ್ಲರೂ ಕೂಡಿ ಹಾಡಿ ಆರತಿಯನು ಮಾಡಿ

ಹೆಣ್ಣು : ಪಡೆದ ಪ್ರೇಮದ ಕಾಣಿಕೆ ಅದಕೆ ಏತಕೆ ನಾಚಿಕೆ ಮೊಗ್ಗು ಅರಳುವ ಕಾಲವಮ್ಮ 
ಗಂಡು : ನಕ್ಕು ನಲಿಯುವ ಸಮಯವಮ್ಮ ಎನ್ನ ಮನೆಯ ನಿನ್ನ ಮಡಿಲ ನಗುವಿನಿಂದ ತುಂಬಲು 
ಹೆಣ್ಣು : ಹುಟ್ಟು ಮಗುವ ತಾಯಿಯಾಗು ಪತಿಯ ವಂಶವ ಬೆಳೆಸಲು 
ಗಂಡು : ವರುಷ ವರುಷ ಹೀಗೆ ಹರುಷ ಒಂದೊಂದು ಮಗುವ ತಂದು ನೀಡು 
ಹೆಣ್ಣು : ಚಿನ್ನ ನಿನ್ನ ತುಟಿಯು ಹವಳದ ಕೆಂಪು ಕುಡಿಯು 
ಗಂಡು :  ಕುಡಿ ಹುಬ್ಬು ಮಳೆಬಿಲ್ಲು ನಿನ್ನ ಕಣ್ಣು ಕಮಲಗಳು 
ಹೆಣ್ಣು : ಅಳುವ ನಿನ್ನಯ ಧ್ವನಿಯು ಕೋಗಿಲೆಯ ಸುಸ್ವರವೂ 
ಗಂಡು :ನಿನ್ನ ನಗು ಹೂ ಮಳೆಯೂ ನಿನ್ನ ನೋಟ ಚಂದ್ರಿಕೆಯು 
ಹೆಣ್ಣು : ಹಸುಕಂದ ನಿನ್ನಿಂದ ಮನೆಗೆಲ್ಲಾ ಆನಂದ 
ಎಲ್ಲರು : ತಂಗಿ ನಿನ್ನ ಸೀಮಂತವೂ ಇಂದು ನಮಗಾನಂದವೂ 
ಗಂಡು : ಲಾಲೀ ಕಂದ ಲಾಲಿ ಜೋಗುಳದ ಲಾಲಿ ಹೀಗೆ ಅತ್ತರೇ ನೀನು ಕಣ್ಣಿರೆಲ್ಲಾ ಖಾಲಿ 
            ಲೊಲೊಳೊಳೊಯಾಯಿ ಲೊಲೊಳೊಳೊಯಾಯಿ 
            ಲೊಲೊಳೊಳೊಯಾಯಿ ಲೊಲೊಳೊಳೊಯಾಯಿ 
--------------------------------------------------------------------------------------------------------------------------

No comments:

Post a Comment