497. ಕುಲಗೌರವ (1971)


ಕುಲ ಗೌರವ ಚಿತ್ರದ ಹಾಡುಗಳು 
  1. ನಾ ಹಾಡಬೇಕೇ ನೀ ಕೇಳಬೇಕೇ 
  2. ನಾವಿಕನಾರೋ ನಡೆಸುವನೆಲ್ಲೋ 
  3. ಒಂದು ಮಾತು ಒಂದು ಮಾತು 
  4. ರಾಗ ನಿನ್ನದು ಭಾವ ನನ್ನದು 
  5. ಯಾರೇ ಬಂದವನು 
  6. ಹೇ ಹುಡುಗಿ ಓಯೇ ಬೆಡಗಿ 
ಕುಲಗೌರವ (1971)
ಸಾಹಿತ್ಯ: ವಿಜಯನಾರಸಿಂಹ ಸಂಗೀತ: ಟಿ.ಜಿ.ಲಿಂಗಪ್ಪ ಹಾಡಿದವರು: ಪಿ.ನಾಗೇಶ್ವರ ರಾವ್

ನಾವಿಕನಾರೋ ನಡೆಸುವನೆಲ್ಲೋ ಸಾಗಿದೆ ಜೀವನ ನೌಕೆ
ನಾವಿಕನಾರೋ ನಡೆಸುವನೆಲ್ಲೋ   ಸಾಗಿದೆ ಜೀವನ ನೌಕೆ
ನಾವಿಕನಾರೋ ನಡೆಸುವನೆಲ್ಲೋ   ಸಾಗಿದೆ ಜೀವನ ನೌಕೆ
ಆಸೆಯ ಅಲೆಗಳ ಏರಿಳಿತದಲಿ  ಬಾಳಿನ ಬೆಳಕೆ ನಂಬಿಕೆ
ಬಾಳಿನ ಬೆಳಕೆ ನಂಬಿಕೆ
ನಾವಿಕನಾರೋ ನಡೆಸುವನೆಲ್ಲೋ  ಸಾಗಿದೆ ಜೀವನ ನೌಕೆ

ಕಲೆಯಲಿ ಕಲೆತು ಸಿರಿತನ ತೊರೆದು  ಒಲವನು ಅರಿಯದ ಜೀವ
ಕರುಳಿನ ಕುಡಿಗೆ ನೆರಳನು ಕಾಣದು   ತಾಳಿದೆ ಬೇಗುದಿ ನೋವ
ನಾಳಿನ ಆಸೆಯ ನಂಬಿಕೆ ನೀಡಿ  ನಗುತಿದೆ ಮೇಲಿನ ದೈವ
ನಾವಿಕನಾರೋ ನಡೆಸುವನೆಲ್ಲೋ  ಸಾಗಿದೆ ಜೀವನ ನೌಕೆ

ಸೀತೆಯ ತೆರದಿ ನಿಂದನೆ ಹೊಂದಿ  ಕಾಣದೆ ಬಾಳಿನ ಹಾದಿ
ಹೃದಯದ ಸುಧೆಯೆ ವಿಷವನು ನೀಡಿರೆ ಹೆಣ್ಣಿದು ಶೋಕದ ಕೈಸೆರೆ
ಆಸೆಯ ಅಲೆಗಳ ಕುಣಿತದ ಮೇಲೆ  ಕಾಣದ ಕೈಗಳ ಲೀಲೆ
ನಾವಿಕನಾರೋ ನಡೆಸುವನೆಲ್ಲೋ ಸಾಗಿದೆ ಜೀವನ ನೌಕೆ

ಸಾವನು ಸೆಳಸಿ ಮುಪ್ಪಿನ ಉಸಿರು ಹೊತ್ತಿದೆ ಎಲ್ಲಾ ದೂರು
ಮನೆಯನೆ ಒಡೆದೆ ಆಸರೆ ತೋರದು  ಬದುಕಿದೆ ಏತಕೆ ಎಂದು
ಆದರು ಆಸೆಯ ಅಲೆಗಳ ಮೇಲೆ  ಹಾಡಿದೆ ಜೀವದ ಲೀಲೆ
ನಾವಿಕನಾರೋ ನಡೆಸುವನೆಲ್ಲೋ ಸಾಗಿದೆ ಜೀವನ ನೌಕೆ
ನಾವಿಕನಾರೋ ನಡೆಸುವನೆಲ್ಲೋ  ಸಾಗಿದೆ ಜೀವನ ನೌಕೆ
------------------------------------------------------------------------------------------------------------------------

ಕುಲಗೌರವ (1971)
ಸಾಹಿತ್ಯ: ಆರ್.ಎನ್.ಜಯಗೋಪಾಲ್ ಸಂಗೀತ: ಟಿ.ಜಿ.ಲಿಂಗಪ್ಪ ಹಾಡಿದವರು: ಪಿ.ಬಿ.ಶ್ರೀನಿವಾಸ್, ಪಿ.ಸುಶೀಲಾ


ಹೆಣ್ಣು : ಓಓಓಓಓ.... ಓಓಓಓಓ.... ಓಓಓಓ
ಗಂಡು :ಓಓಓಓಓ.... ಓಓಓಓಓ.... ಓಓಓಓ  (ಲಲ್ಲಲಲ್ಲಲಲ್ಲಲ್ಲಾ )
ಗಂಡು : ಒಂದು ಮಾತು ಒಂದು ಮಾತು ನಾನು ಕೇಳಲೆ
           ಕಣ್ಣು ಕಣ್ಣು ಸೇರಲೇನು ಎಂದು ಹೇಳೆಲೆ
ಹೆಣ್ಣು : ಎಂಥ ಮಾತು ಎಂಥ ಮಾತು ನೀನು ಕೇಳಿದೆ
         ಮುಗ್ದ ಹೆಣ್ಣು ನಾನು ಎಂದು ನಿನಗೆ ತಿಳಿಯದೆ

ಗಂಡು : ಹೂವು ತನ್ನ ಅಂದವನ್ನು ತಾನು ತಿಳಿಯರೇ
ಹೆಣ್ಣು : ಮುಡಿಯುವರೆ ಬಲ್ಲರು ಹೂವ ಚೆಲುವನು
ಗಂಡು : ಹೂವು ತನ್ನ ಅಂದವನ್ನು ತಾನು ತಿಳಿಯರೇ
ಹೆಣ್ಣು : ಮುಡಿಯುವರೆ ಬಲ್ಲರು ಹೂವ ಚೆಲುವನು
ಗಂಡು : ಜೇನು ತನ್ನಲಿರುವ ಸಿಹಿಯ ತಾನು ಅರಿಯದೆ
           ಜೇನು ತನ್ನಲಿರುವ ಸಿಹಿಯ ತಾನು ಅರಿಯದೆ
ಹೆಣ್ಣು : ಸವಿಯುವರೆ ಬಲ್ಲರು ಜೇನ ಸಿಹಿಯನು
ಗಂಡು : ಒಂದು ಮಾತು ಒಂದು ಮಾತು ನಾನು ಕೇಳಲೆ
ಹೆಣ್ಣು : ಮುಗ್ದ ಹೆಣ್ಣು ನಾನು ಎಂದು ನಿನಗೆ ತಿಳಿಯದೆ

ಹೆಣ್ಣು : ಹೇಳು ನೀನು ಹಕ್ಕಿಯೇಕೆ ಹಾರಿ ಹೋಯಿತು (ಹ್ಹೂ ಹ್ಹೂ )
         ನಿನ್ನ ಪುಂಡುತನವ ಕಂಡು ನಾಚಿ ಹಾರಿತು
         ಹೇಳು ನೀನು ಹಕ್ಕಿಯೇಕೆ ಹಾರಿ ಹೋಯಿತು
         ನಿನ್ನ ಪುಂಡುತನವ ಕಂಡು ನಾಚಿ ಹಾರಿತು
ಗಂಡು : ಬಳ್ಳಿ ಮರವ ಹಬ್ಬಿತೇಕೆ ಹೇಳೆ ಜಾಣೆ (ಹೂಂ ಹುಂ )
           ಬಳ್ಳಿ ಮರವ ಹಬ್ಬಿತೇಕೆ ಹೇಳೆ ಜಾಣೆ
           ನಲ್ಲ ನಲ್ಲೆ ತಬ್ಬಿಹಿಡಿವ ರೀತಿ ಇದೇನೆ
ಹೆಣ್ಣು : ಎಂಥ ಮಾತು (ಹೂಂ ಹುಂ ) ಎಂಥ ಮಾತು (ಒಹೋ)
         ಎಂಥ ಮಾತು ಎಂಥ ಮಾತು ನೀನು ಕೇಳಿದೆ
         ಮುಗ್ದ ಹೆಣ್ಣು ನಾನು ಎಂದು ನಿನಗೆ ತಿಳಿಯದೆ
ಇಬ್ಬರು : ಲಾಲಾಲಾಲ ಲಾಲಾಲಾಲ ಲಾಲಾಲಾಲ
-------------------------------------------------------------------------------------------------------------------------

ಕುಲಗೌರವ (1971)
ಸಾಹಿತ್ಯ: ಆರ್.ಎನ್.ಜಯಗೋಪಾಲ್ ಸಂಗೀತ: ಟಿ.ಜಿ.ಲಿಂಗಪ್ಪ ಹಾಡಿದವರು: ಪಿ.ಸುಶೀಲಾ


ರಾಗ ನಿನ್ನದು ಭಾವ ನನ್ನದು
ರಾಗ ನಿನ್ನದು ಭಾವ ನನ್ನದು ತಾಳ ನಿನ್ನದು ನಾಟ್ಯ ನನ್ನದು
ತಾಳ ನಿನ್ನದು ನಾಟ್ಯ ನನ್ನದು   ರಾಗ ನಿನ್ನದು ಭಾವ ನನ್ನದು

ಮನವೆ ಯಮುನ ಮನೆಯೆ ಗೋಕುಲ
ಮನವೆ ಯಮುನ ಮನೆಯೆ ಗೋಕುಲ
ನಾನೇ ಮುರಳೀ ನೀನೇ ಗೋಪಾಲ
ನಾನೇ ಮುರಳೀ ನೀನೇ ಗೋಪಾಲ
ನೂತನ ಸಂಭ್ರಮ ನಮ್ಮಯ ಸಂಗಮ
ಹೃದಯ ವೀಣೆ ಮಿಡಿಯೆ ಗಾನ ಹಾಡಿ ನಲಿವ ಅಮರಗಾನ
ರಾಗ ನಿನ್ನದು ಭಾವ ನನ್ನದು

ಬಾಳಿನ ಗುಡಿಯಲಿ ದೀಪವ ಬೆಳಗಿದೆ
ಬಾಳಿನ ಗುಡಿಯಲಿ ದೀಪವ ಬೆಳಗಿದೆ
ಜೀವನ ನೌಕೆಗೆ ಅಂಬಿಗ ನೀನಾದೆ
ಜೀವನ ನೌಕೆಗೆ ಅಂಬಿಗ ನೀನಾದೆ
ನಿನ್ನಯ ಹೂನಗೆ ಬಾಡದ ಮಲ್ಲಿಗೆ
ಇಂಥ ಪ್ರೇಮ ಇಂಥ ಪ್ರೀತಿ ಎಂದು ಇರಲಿ ಒಂದೆ ರೀತಿ
ರಾಗ ನಿನ್ನದು ಭಾವ ನನ್ನದು
ತಾಳ ನಿನ್ನದು ನಾಟ್ಯ ನನ್ನದು
ರಾಗ ನಿನ್ನದು ಭಾವ ನನ್ನದು
--------------------------------------------------------------------------------------------------------------------------

ಕುಲಗೌರವ (1971)
ಸಂಗೀತ: ಟಿ.ಜಿ.ಲಿಂಗಪ್ಪ ಸಾಹಿತ್ಯ: ಚಿ.ಉದಯಶಂಕರ ಗಾಯನ : ಪಿ.ಬಿ.ಶ್ರೀನಿವಾಸ

ನಾ ಹಾಡಬೇಕೇ.. ಹಾಂ.... ನೀ ಕೇಳಬೇಕೇ ... ಹಾಂ.. ಹಾಂ..
ತಾಳ ಹಾಕಿದರೇ ನಾ ಹಾಡುವೇ
ನಾ ಹಾಡಬೇಕೇ .. ನೀ ಕೇಳಬೇಕೇ
ತಾಳ ಹಾಕಿದರೇ ನಾ ಹಾಡುವೇ

ಹರಿವ ನದಿಯ ಅಲೆಯ ಶೃತಿಯ ಜೊತೆಗೆ ದನಿಯ ಬೆರೆಸುವ
ಹರಿವ ನದಿಯ ಅಲೆಯ ಶೃತಿಯ ಜೊತೆಗೆ ದನಿಯ ಬೆರೆಸುವ
ಹಕ್ಕಿಯಂತೆ ಮುಗಿಲನೇರಿ ಆಡಿ ಹಾದಿ ನಲಿಯುವಾ 
ದುಂಬಿಯಂತೇ ಹಾರೀ... ದುಂಬಿಯಂತೇ ಹಾರೀ... 
ಹಾರಿ ಜೇನ ಹೀರಿ ಜೋರಾಗಿ ಕುಣಿಯುವಾ .. 
ನಾ ಹಾಡಬೇಕೇ .. ನೀ ಕೇಳಬೇಕೇ
ತಾಳ ಹಾಕಿದರೇ ನಾ ಹಾಡುವೇ
ಕಲೆಯೇ ಜೀವ ಕಲೆಯೇ ದೈವ ಕಲೆಗೆ ಬಾಳು ಮೀಸಲು
ಕಲೆಯೇ ಜೀವ ಕಲೆಯೇ ದೈವ ಕಲೆಗೆ ಬಾಳು ಮೀಸಲು
ಸೇವೆಗೊಂದು ಹೂವು ನಾನು ಲಲಿತ ಕಲೆಯ ಗುಡಿಯೊಳು 
ನಿನ್ನ ಹಿಂದೆ ನಾನು... ಹೇ..ಹೇ...ಹೇ  
ನಿನ್ನ ಹಿಂದೆ ನಾನು ನನ್ನ ಮುಂದೆ ನೀನು
ನಾ ನಿನ್ನ ಗೆಳೆಯನು
ನಾ ಹಾಡಬೇಕೇ .. ನೀ ಕೇಳಬೇಕೇ
ತಾಳ ಹಾಕಿದರೇ ನಾ ಹಾಡುವೇ
--------------------------------------------------------------------------------------------------------------------------

ಕುಲಗೌರವ (1971)
ಸಂಗೀತ: ಟಿ.ಜಿ.ಲಿಂಗಪ್ಪ ಸಾಹಿತ್ಯ: ಆರ್.ಏನ್.ಜಯಗೋಪಾಲ  ಗಾಯನ : ಪಿ.ಸುಶೀಲಾ

ಯಾರೇ ಬಂದವನು ಯಾರೇ ಬಂದವನು
ಏಕಾಂತದಲ್ಲಿರುವ ಈ ಹೆಣ್ಣಾ ಕಾಣಲು...
ಯಾರೇ ಬಂದವನು

ಕೆಂದಾವರೆಯ ಹೋಲುವ ಕಂಗಳು..
ಕೆಂದಾವರೆಯ ಹೋಲುವ ಈ ಕಂಗಳು..
ಬಲೆ ದುಂಬಿಗಳ ಸಾಳಂತೆ ಮುಂಗುರುಳು
ಬಲೆ ದುಂಬಿಗಳ ಸಾಳಂತೆ ಮುಂಗುರುಳು
ಹಾರಾಡಿ ಓಲಾಡಿ ಹಾರಾಡಿ ಓಲಾಡಿ
ನಲಿದು ಕುಣಿದು ಮಾನವ ಸೆಳೆಯೇ
ಯಾರೇ ಬಂದವನು

ಕಣ್ಣಲೇ ಕರೆವ ನೋಡುತ ನಗುವ
ಕಣ್ಣಲೇ ಕರೆವ ನೋಡುತ ನಗುವ
ಹೆಣ್ಣಿನ ಮನವ ಅರಳಿಸುತಿರುವ
ಹೆಣ್ಣಿನ ಮನವ ಅರಳಿಸುತಿರುವ
ಕೊಳಲಿನ ಗಾನದಿ ಧರೆ ಹಿಡಿದಿರುವ 
ಕೃಷ್ಣನ ಕೃಷ್ಣನ ಕೃಷ್ಣನ ಆಆಆ..... 
ಕೊಳಲಿನ ಗಾನದಿ ಧರೆ ಹಿಡಿದಿರುವಾ 
ಸಖ ಹೇಳೆ ಮನದನ್ನ... ಸಖ ಹೇಳೆ ಮನದನ್ನ
ಶ್ರೀ ಕೃಷ್ಣ ನೀ ತಾನೇ 
ಯಾರೇ ಬಂದವನು ಏಕಾಂತದಲ್ಲಿರುವ
ಈ ಹೆಣ್ಣಾ ಕಾಣಲು... ಯಾರೇ ಬಂದವನು 
------------------------------------------------------------------------------------------------------------------------

ಕುಲಗೌರವ (1971)
ಸಂಗೀತ: ಟಿ.ಜಿ.ಲಿಂಗಪ್ಪ ಸಾಹಿತ್ಯ: ಚಿ.ಉದಯಶಂಕರ  ಗಾಯನ :ಪಿ.ಬಿ.ಶ್ರೀನಿವಾಸ,  ಪಿ.ಸುಶೀಲಾ 

ಗಂಡು : ಹೇ.. ಹುಡುಗಿ ಒಯೇ ಬೆಡಗಿ ನಿಲ್ಲೇ ನಿಲ್ಲೇ ಅಲ್ಲೇ ನಿಲ್ಲೇ
            ನಾನು ಬರುವೇ ಜೊತೆಯಲ್ಲೇ
ಹೆಣ್ಣು : ಬಾ ಮಗುವೇ ನಾ ಇಲ್ಲಿರುವೇ  ಪುಟ್ಟ ಪುಟ್ಟ ಹೆಜ್ಜೆ ಹಾಕಿ
           ಅಪ್ಪಾ ಬರುವಾ ನಿನ್ನ ಹುಡುಕಿ
ಗಂಡು : ಹೇ.. ಹುಡುಗಿ,           ಹೆಣ್ಣು : ಬಾ ಮಗುವೇ

ಗಂಡು : ಮೀನಿನ ಕಣ್ಣ ಬಲೆಯಲಿ ನನ್ನ ಸೆರೆಯನು ಹಾಕಿ ಓಡುವೇಯಾ
            ಮೀನಿನ ಕಣ್ಣ ಬಲೆಯಲಿ ನನ್ನ ಸೆರೆಯನು ಹಾಕಿ ಓಡುವೇಯಾ
ಹೆಣ್ಣು : ಒಲವಿನ ಮಾತು ಮೈ ಮರೆಸಿರಲು ತುಟಿಗಳ ಕಡೆಗೆ ಬಾಗುವೆಯಾ 
          ಒಲವಿನ ಮಾತು ಮೈ ಮರೆಸಿರಲು ತುಟಿಗಳ ಕಡೆಗೆ ಬಾಗುವೆಯಾ 
ಗಂಡು : ಈ ಸೊಗಸು ಈ ವಯಸು
ಹೆಣ್ಣು : ಸಾಕು ಸಾಕು ಮಹರಾಯ
ಗಂಡು : ಹೇ.. ಹುಡುಗಿ,           ಹೆಣ್ಣು : ಬಾ ಮಗುವೇ

ಹೆಣ್ಣು : ಈ ಕಣ್ಣೋಟಕೆ ಈ ತುಂಟಾಟಕೆ ಒಡೆಯಿತು ಹೃದಯ ಟಪ್ಪೆಂದು
          ಈ ಕಣ್ಣೋಟಕೆ ಈ ತುಂಟಾಟಕೆ ಒಡೆಯಿತು ಹೃದಯ ಟಪ್ಪೆಂದು
ಗಂಡು : ಹೃದಯದ ನಿಪುಣ ವೈದ್ಯರ ಜಾಣ ಕೊಡುವನು ಬಾರೆ ಹೊಸದೊಂದು
           ಹೃದಯದ ನಿಪುಣ ವೈದ್ಯರ ಜಾಣ ಕೊಡುವನು ಬಾರೆ ಹೊಸದೊಂದು
ಗಂಡು : ಬಾ... ಹುಡುಗಿ         ಹೆಣ್ಣು : ಬಾ ಹುಡುಗ
ಗಂಡು : ಒಂದೇ ಒಂದು ಸಿಹಿ ಮುತ್ತು 
ಹೆಣ್ಣು : ಅಲ್ಲೇ ನೋಡು ಆಪತ್ತು 
ಗಂಡು : ಹೇ.. ಹುಡುಗಿ,           ಹೆಣ್ಣು : ಬಾ ಮಗುವೇ 
ಗಂಡು : ನಿಲ್ಲೇ ನಿಲ್ಲೇ ಅಲ್ಲೇ ನಿಲ್ಲೇ
            ನಾನು ಬರುವೇ ಜೊತೆಯಲ್ಲೇ
ಗಂಡು :ಹೋಯ್ ಲಲಲಲ ,           ಹೆಣ್ಣು : ಆಯ್....ಲಲಲ 

No comments:

Post a Comment