498. ಮೂರು ಜನ್ಮ (1984)


ಮೂರು ಜನ್ಮ ಚಲನ ಚಿತ್ರದ ಹಾಡುಗಳು 
  1. ನೀ ಬಂದರೆ ಮೆಲ್ಲಗೇ ಎದೆ ಚಿಮ್ಮಿತು ಝಲ್ಲನೆ 
  2. ನಿನಗಾಗಿ ಹಾಡುತಿಹೇ 
  3. ನನ್ನವನೇ ಚೆನ್ನಿಗನೇ 
  4. ನ್ಯಾಯಕ್ಕೆ ನೆಲೆಯಿಲ್ಲಾ 
ಮೂರು ಜನ್ಮ (1984) - ನೀ ಬಂದರೆ ಮೆಲ್ಲಗೆ 
ಸಂಗೀತ: ರಾಜನ್-ನಾಗೇಂದ್ರ ರಚನೆ: ಆರ್.ಎನ್.ಜಯಗೋಪಾಲ್  ಗಾಯನ: ಎಸ್.ಪಿ.ಬಾಲಸುಬ್ರಹ್ಮಣ್ಯಂ, ಎಸ್.ಜಾನಕಿ

ಕೋರಸ್: ಓಹೋ ಓಹೋ ಓಹೋ ಓಹೋ ಓಹೋಹೋ ಓಹೊಹೊ
                ತಾನಾನಿ ತಾನೀನನ ತಾನನ ತಾನನ ತಂದಾನನನೋ
               ಥಯ್ಯ ಥಯ್ಯ ಥಯ್ಯ ಥಯ್ಯ ಥಯ್ಯ
ಥಯ್ಯ ಥಯ್ಯ ಥಯ್ಯ
ಹೆಣ್ಣು: ನೀ ಬಂದರೆ ಮೆಲ್ಲನೆ ಎದೆ ಚಿಮ್ಮಿತು ಝಲ್ಲನೆ
         ನನ್ನ ಮನದಾಗೆ ಆಸೆ ಕಾರಂಜಿಯಾಗಿ ಹೊಮ್ಮಿ ಬಂದಿತು
        ಈ ನನ್ನ ಜೀವ ನಿನ್ನ ಸೇರಿತು
ಗಂಡು: ನೀ ಬಂದರೆ ಮೆಲ್ಲನೆ ಎದೆ ಚಿಮ್ಮಿತು ಝಲ್ಲನೆ
           ನನ್ನ ಮನದಾಗೆ ಆಸೆ ಕಾರಂಜಿಯಾಗಿ ಹೊಮ್ಮಿ ಬಂದಿತು
          ಈ ನನ್ನ ಜೀವ ನಿನ್ನ ಸೇರಿತು
ಹೆಣ್ಣು: ತನ್ನ ತಾನ      ಗಂಡು: ತಾನ          ಹೆಣ್ಣು: ಓಹೋ ಗಂಡು: ತನ್ನ ತನನ್
ಹೆಣ್ಣು: ಓಹೋಹೊ     ಗಂಡು: ಹೊಯ್ ಹೊಯೊ ಹೊಯ್ಯಾ

ಗಂಡು: ಕೈಯ ಬಳೆ ಘಲ್ ಘಲ್ ಅಂತ ನನ್ನ ಕರೆದಾಗ
          ಮೂಗುತಿ ಮಿಂಚು ಕಂಗಳ ಸಂಚು ಸಂಭ್ರಮ ತಂದಾಗ
          ಎದೆಯ ಬಡಿತಕ್ಕೆ ತಾಳ ತಪ್ ಹೋಯ್ತು
ಹೆಣ್ಣು: ಕೈಯ ಹಿಡಿದು ನನ್ನ ಸೆಳೆದು ಅಪ್ಪಿಕೊಂಡಾಗ
         ಒಂದು ಚಣ ಎದೆ ಗುಂಡಿಗೆ ಅಂಗೇ ನಿಂತಾಗ
         ನಾನು ಯಾರಂತ ನಂಗೆ ಮರೆತ್ ಹೋಯ್ತು
ಗಂಡು: ನಾನು ನೀನೆಂಬ ಭೇದ ಹೊಂಟ್ ಹೋಯ್ತು
ಹೆಣ್ಣು: ಹೊಯ್ ಹೊಯ್ ಈ ನೋಟದಾ ಮಾತಿಗೆ ನೀ ತೋರಿದ ಪ್ರೀತಿಗೆ
        ನನ್ನ ಮನದಾಗೆ ಆಸೆ ಕಾರಂಜಿಯಾಗಿ ಹೊಮ್ಮಿ ಬಂದಿತು
        ಈ ನನ್ನ ಜೀವ ನಿನ್ನ ಸೇರಿತು

ಕೋರಸ್: ಓಹೊಯ್ ಓಹೋ ಓಹೋ ಓಹೋ ಓಹೋಹೋ ಓಹೊಹೊ
             ತಾನಾನಿ ತಾನೀನನ ತಾನನ ತಾನನ ತಂದಾನನ
            ಥಯ್ಯ ಥಯ್ಯ ಥಯ್ಯ ಥಯ್ಯ ಥಯ್ಯ ಥಯ್ಯ ಥಯ್ಯ ಥಯ್ಯ
ಹೆಣ್ಣು: ಗಾಳಿಯಲ್ಲಿ ಸೀರೆ ಸೆರಗು ಜಾರಿ ಹೋದಾಗ
         ಕದ್ದು ಮುಚ್ಚಿ ಕಣ್ಣು ನನ್ನ ಹಿಂದೆ ನಿಂತಾಗ
         ನಿನ್ನ ಮನಸೆಲ್ಲ ನಂಗೆ ಗೊತ್ತಾಯ್ತು
ಗಂಡು: ಸಣ್ಣ ಸೊಂಟ ಕಿಯ್ಯೋ ಮಿಯ್ಯೋ ತೂಗಿ ನಿಂತಾಗ
           ತಾಂಬೂಲ ಮೆದ್ದ ಚೆಂದುಟಿ ರಂಗು ಬಾ ಬಾ ಎಂದಾಗ
           ಬೆವತು ಹಣೆಯೆಲ್ಲ ಮುತ್ತು ಮುತ್ತಾಯ್ತು
ಹೆಣ್ಣು: ನನ್ನ ಒಡಲೆಲ್ಲ ನೀರು ನೀರಾಯ್ತು
ಗಂಡು: ಹೊಯ್ ಹೊಯ್ ನಿನ್ನ ನಡೆಯ ತಾಳಕೆ
ಹೆಣ್ಣು: ನಿನ್ನ ಜೊತೆಯ ಮ್ಯಾಳಕೆ
ಗಂಡು: ನನ್ನ ಮನದಾಗೆ ಆಸೆ ಮೇಳೈಸಿ ಬಂತು ನಿನ್ನ ನೋಡಲು
ಹೆಣ್ಣು: ಮೈ ಮರೆತು ಹೋಯ್ತು ನಿನ್ನ ಸೇರಲು
ಗಂಡು: ಹಯ್ಯ ನೀ ಬಂದರೆ ಮೆಲ್ಲನೆ
ಹೆಣ್ಣು: ಎದೆ ಚಿಮ್ಮಿತು ಝಲ್ಲನೆ
ಗಂಡು: ನನ್ನ ಮನದಾಗೆ ಆಸೆ
ಹೆಣ್ಣು: ಕಾರಂಜಿಯಾಗಿ ಹೊಮ್ಮಿ ಬಂದಿತು
ಗಂಡು: ಈ ನನ್ನ ಜೀವ ನಿನ್ನ ಸೇರಿತು
ಕೋರಸ್: ತಾನಾನಿ ತಾನೋ ತಾನ ತಂದಾನ ತಾನಾನಿ ತಾನೋ ತಾನಿ ತಂದಾನ
ಗಂಡು: ತಾನ ತಾನ ಹೆಣ್ಣು: ತಾನ ಗಂಡು: ಓಹೊಹೊಹೊ
ಕೋರಸ್: ಓಹೊಯ್ ಓಹೊಯ್
ಗಂಡು: ಓಹೊಹೊ ಹೆಣ್ಣು: ಓಹೊಹೊ ಗಂಡು: ಓಹೊಹೊ ಹೆಣ್ಣು: ಓಹೊಹೊ
--------------------------------------------------------------------------------------------------------------------------

ಮೂರು ಜನ್ಮ (1984) - ನಿನಗಾಗಿ ಹಾಡುತಿಹೇ
ಸಂಗೀತ: ರಾಜನ್-ನಾಗೇಂದ್ರ ರಚನೆ: ಚಿ.ಉದಯಶಂಕರ ಗಾಯನ:ಎಸ್.ಜಾನಕಿ

ನಿನಗಾಗಿ ಹಾಡುತಿಹೆ ..... ಹಾಡುತಿಹೆ.....  ಹಾಡುತಿಹೆ... ಹಾಡುತಿಹೆ...
ನಿನಗಾಗಿ ಆಡುತಿಹೆ....  ಆಡುತಿಹೆ... ಆಡುತಿಹೆ...ಆಡುತಿಹೆ...
ನಿನಗಾಗಿ ಹಾಡುತಿಹೆ ನಿನಗಾಗಿ ಆಡುತಿಹೆ
ಮರೆಯಾಗಿ ನೀನೀಗ ಎಲ್ಲಿರುವೇ ನಲ್ಲ
ನೀ ಬರದೇ ಈ ಜೀವ ಉಳಿಯೋಲ್ಲ
ನೀ ಬರದೇ ಈ ಜೀವ ಉಳಿಯೋಲ್ಲ
ನಿನಗಾಗಿ ಹಾಡುತಿಹೇ...

ಮುಳಲ್ಲಿ ಬಿದ್ದ ಗಿಣಿಯಂತೆ ಆದೇ ಅಮ್ಮಮ್ಮ ನಾನಿಂದು ನೊಂದೆ 
ಹುಲಿಯನ್ನು ಕಂಡ ಮರಿಜಿಂಕೆಯಂತೆ ಎದುರಲ್ಲಿ ಸಾವನ್ನೂ ಕಂಡೆ 
ಭಯವಾಗಿದೆ ಮೈ ನಡುಗಿದೆ ಬೇರೆ ದಾರಿ ನಾ ಕಾಣದೇ ನಂಬಿ ನಿನ್ನ ಕೂಗಿದೆ 
ನಿನಗಾಗಿ ಹಾಡುತಿಹೆ ನಿನಗಾಗಿ ಆಡುತಿಹೆ 
ಮರೆಯಾಗಿ ನೀನೀಗ ಎಲ್ಲಿರುವೇ ನಲ್ಲ
ನೀ ಬರದೇ ಈ ಜೀವ ಉಳಿಯೋಲ್ಲ
ನೀ ಬರದೇ ಈ ಜೀವ ಉಳಿಯೋಲ್ಲ
ನಿನಗಾಗಿ ಹಾಡುತಿಹೇ... 

ಆ.. ಹ್ಹಾಂ...  ಆ.. ಹ್ಹಾಂ... ಆ.. ಹ್ಹಾಂ...
ನನ್ನಂತೆ ನೀನು ಹೆಣ್ಣಲ್ಲವೇನು ಓ ದೇವಿ ನೀ  ನೋಡು ಬಂದು
ಕಣ್ಣೀರಿನಲ್ಲೇ ಅಭಿಷೇಕವನ್ನು ನಾ ಮಾಡಬೇಕೇನು ಇಂದು 
ದಯೆತೋರದೆ ಕಾಪಾಡದೇ ಅಮ್ಮ ನನ್ನ ಗತಿ ಏನಮ್ಮ 
ನೀನೇ ಹೇಳು ಬಪ್ಪಾಳಮ್ಮ 
ನಿನಗಾಗಿ ಹಾಡುತಿಹೆ ನಿನಗಾಗಿ ಆಡುತಿಹೆ
ಮರೆಯಾಗಿ ನೀನೀಗ ಎಲ್ಲಿರುವೇ ನಲ್ಲ
ನೀ ಬರದೇ ಈ ಜೀವ ಉಳಿಯೋದಿಲ್ಲ
ನೀ ಬರದೇ ಈ ಜೀವ ಉಳಿಯೋದಿಲ್ಲ
ನಿನಗಾಗಿ ಹಾಡುತಿಹೆ 
--------------------------------------------------------------------------------------------------------------------------

ಮೂರು ಜನ್ಮ (1984) - ನನ್ನವನೇ ಚೆನ್ನಿಗನೇ ನಗುನಗುತ
ಸಂಗೀತ: ರಾಜನ್-ನಾಗೇಂದ್ರ ರಚನೆ: ದೊಡ್ಡರಂಗೇಗೌಡ  ಗಾಯನ:ಎಸ್.ಪಿ.ಶೈಲಜಾ, ಎಸ್.ಜಾನಕೀ

ತನ್ನಮನೋ... ತದಗಿನನೋ
ನನ್ನವನೇ ಚೆನ್ನಿಗನೇ ನಗುನಗುತ ಮನ ಸೆಳೆದವನೇ
ಹೊತ್ತು ಗೊತ್ತು ಸೋರೋಗೈತೋ
ಮುತ್ತನು ಹೀರುತ ಮತ್ತನು ಬೀರುತ ನಿನ್ನ ತಣಿಸುವೆ
ಮುತ್ತನು ಹೀರುತ ಮತ್ತನು ಬೀರುತ ನಿನ್ನ ತಣಿಸುವೆ
ನನ್ನವನೇ ಚೆನ್ನಿಗನೇ ನಗುನಗುತ ಮನ ಸೆಳೆದವನೇ
ಹೊತ್ತು ಗೊತ್ತು ಸೇರೋಗೈತೋ
ಇಂದು ನಿನ್ನನೇ ನಾ ಕೂಡಿ ಬಾಳುವೇ
ಇಂದು ನಿನ್ನನೇ ನಾ ಕೂಡಿ ಬಾಳುವೇ
ನನ್ನವನೇ ಚೆನ್ನಿಗನೇ ನಗುನಗುತ ಮನ ಸೆಳೆದವನೇ

ನನ್ನೆದೆಯಾಚೆ ತೂಗಿ ನಿನ್ನದೇ ದಾರಿ ಸಾಗಿ 
ಮೆಲ್ಲಗೇ  ಗಲ್ಲವ ಸೋಕಿಸಿ ಅಂಗದ ಸಂಗಾ ಕೊರೈತೋ... 
ಹೆಣ್ಣಿನ ಮೋಹ ತೋರುತ ಕಣ್ಣಿನ ದಾಹ ತುಂಬುತ 
ನಿನ್ನನೇ ಒಪ್ಪುತ ಬೆಚ್ಚಗೆ ಅಪ್ಪುತ ಸ್ವರ್ಗ ಸಿಕ್ಕ್ಯೆತೋ  
ನಿನ್ನನ್ನೇ ನಂಬಿ ನಾನು ನನ್ನನೇ ನಂಬಿ ನೀನು 
ಅಕ್ಕರೆ ತುಂಬಿದ  ಸಕ್ಕರೆ ಬಾಳಲಿ ಪ್ರೇಮ ಕಂಡೈತೋ 
ಒಲ್ಲದ ಕಾಲ ಬಂದರು ಮುಳ್ಳಿನ ಹಾದಿ ಕಂಡರೂ 
ನಿನ್ನನ್ನೇ ನೆಚ್ಚುತ ನಿನ್ನೊಡ ನಾಡುತ ಪ್ರೀತಿ ಇರತೈತೋ... ಪ್ರೀತಿ ಇರತೈತೋ  
ನನ್ನವನೇ ಚೆನ್ನಿಗನೇ ನಗುನಗುತ ಮನ ಸೆಳೆದವನೇ
ಹೊತ್ತು ಗೊತ್ತು ಮೀರೋಗೈತೋ
ಮುತ್ತನು ಹೀರುತ ಮತ್ತನು ಬೀರುತ ನಿನ್ನ ತಣಿಸುವೆ
ನನ್ನವನೇ ಚೆನ್ನಿಗನೇ ನಗುನಗುತ ಮನ ಒಲಿದವನೇ

ನಿನ್ನಯ ಸ್ನೇಹದ ಕೋಡಿ ನನ್ನನ್ನೂ ಮೀಸಲೂ ಮಾಡಿ
ನಿನ್ನೆಯ ಮರೆಯುತ ನಾಳೆಯ ಕಾಣುತ ಸಂತಸ ತುಂಬೈತೋ...
ಮಲ್ಲಿಗೆ ಮೈಯ ಕೂಡಿಸಿ ಉಸಿರಲಿ ಉಸಿರನು ಸೇರಿಸಿ
ಮೋಹಕ ಒಸುಗೆಯ ಮೋಜಿನ ಬೆಸುಗೆಯ ಆಟ ಕಟ್ಟೈತೋ
ಪ್ರಾಣಕೆ ಪ್ರಾಣ ನೀಡಿ ಜೀವಕೆ ಜೀವ ಕೂಡಿ
ಹೃದಯವ ಒಪ್ಪಿಸಿ ಜೀವನ ಹೂವಿನ ನಂದನವಾಗೈತೋ
ನನ್ನನ್ನು ನೀನು  ನೋಡಲು ನಿನ್ನಯ ನೋಟ ಕಾಡಲು
ಮನ್ಮಥ ಲೋಕದ ಲೀಲೆಯ ಸವಿಯುವ ಬಂಧನ ತಂದೈತೋ
ಬಂಧನ ತಂದೈತೋ
ನನ್ನವನೇ ಚೆನ್ನಿಗನೇ ನಗುನಗುತ ಮನ ಒಲಿದವನೇ
ಹೊತ್ತು ಗೊತ್ತು ಸೇರೋಗೈತೋ
ಇಂದು ನಿನ್ನನೇ ನಾ ಕೂಡಿ ಬಾಳುವೇ
ಇಂದು ನಿನ್ನನೇ ನಾ ಕೂಡಿ ಬಾಳುವೇ
ನನ್ನವನೇ ಚೆನ್ನಿಗನೇ ನಗುನಗುತ ಮನ ಸೆಳೆದವನೇ
--------------------------------------------------------------------------------------------------------------------------

ಮೂರು ಜನ್ಮ (1984) - ನ್ಯಾಯಕ್ಕೆ ನೆಲೆಯಿಲ್ಲ ಅನ್ಯಾಯಕ್ಕೆ ಕೊನೆಯಿಲ್ಲ
ಸಂಗೀತ: ರಾಜನ್-ನಾಗೇಂದ್ರ ರಚನೆ: ಶ್ಯಾಮಸುಂದರ ಕುಲಕರ್ಣಿ ಗಾಯನ:ಎಸ್.ಪಿ.ಬಿ.

(ಆಆಆ... ಆಆಆ... ಆಆಆ ಆಆಆ... ಆಆಆ ಆಆಆ... ಆಆಆ )
ನ್ಯಾಯಕ್ಕೆ ನೆಲೆಯಿಲ್ಲ ಅನ್ಯಾಯಕ್ಕೆ ಕೊನೆಯಿಲ್ಲ
ನ್ಯಾಯಕ್ಕೆ ನೆಲೆಯಿಲ್ಲ ಅನ್ಯಾಯಕ್ಕೆ ಕೊನೆಯಿಲ್ಲ
ಮೋಸ ವಂಚನೆ ಮೆರೆಯುವ ಜಗದಲ್ಲಿ
ನ್ಯಾಯಕ್ಕೆ ನೆಲೆಯಿಲ್ಲ ಅನ್ಯಾಯಕ್ಕೆ....  ಕೊನೆಯಿಲ್ಲ

ಕೂಡಿ ಹಾಡಿದ ಒಂದು ಹಕ್ಕಿಯು ಸೇರಿತು ಪಂಜರವಾ  
ಕೂಡಿ ಹಾಡಿದ ಒಂದು ಹಕ್ಕಿಯು ಸೇರಿತು ಪಂಜರವಾ  
ನೋವು ಸಹಿಸದೆ ನೊಂದ ಹಕ್ಕಿಯು ಸುರಿಸಿತು ಕಂಬನಿಯ
ನೆನೆಯುತ ಒಲವಿನ ನಂದನವಾ 
ಪ್ರೇಮ ಜೋಡಿಯ ಒಂದು ಜೀವವು ಮಸಣದ ಹೂವಾಯ್ತು
ವಿರಹ ಬೆಂಕಿಗೆ ಬೆಂದ ಒಡಲಿಗೆ ಜೀವನ ಹೊರೆಯಾಯ್ತು 
ಪ್ರೇಮವೂ ನೋವಿನ ಕಥೆಯಾಯಿತು 
(ಆ... ಆ... ಆ.. ಆ.. )
ನ್ಯಾಯಕ್ಕೆ ನೆಲೆಯಿಲ್ಲ ಅನ್ಯಾಯಕ್ಕೆ ಕೊನೆಯಿಲ್ಲ 
ಮೋಸ ವಂಚನೆ ಮೆರೆಯುವ ಜಗದಲ್ಲಿ
ನ್ಯಾಯಕ್ಕೆ ನೆಲೆಯಿಲ್ಲ ಅನ್ಯಾಯಕ್ಕೆ.... ಕೊನೆಯಿಲ್ಲ

ಹೆತ್ತ ತಾಯಿಯ ಸುತ್ತ ಮುತ್ತಲು ಮುಸುಕಿದೇ  ಮೋಡಗಳು 
ಹೆತ್ತ ತಾಯಿಯ ಸುತ್ತ ಮುತ್ತಲು ಮುಸುಕಿದೇ  ಮೋಡಗಳು
ಮಗಳ ಬಾಳಿಗೆ ಬಡಿದ ಸಿಡಿಲಿಗೆ ಮಿಡುಕಿದೆ ಹೆಂಗರಳು 
ಬಾಡಿದೆ ಮಮತೆಯ ಜೀವಗಳೂ 
ಸ್ನೇಹ ಜೀವವು ಮೋಹ ತುಂಬಿದ ಕಣ್ಣಿಗೆ ಸೆರೆಯಾಯ್ತು 
ಚಿತ್ರಹಿಂಸೆಗೆ ಸಿಕ್ಕ ಹೆಣ್ಣಿಗೆ ಮೌನವೇ ಗತಿಯಾಯ್ತು 
ಪ್ರೇಮವೂ ನೋವಿನ ಕಥೆಯಾಯಿತು 
(ಆ... ಆ... ಆ.. ಆ..ಆ  )
ನ್ಯಾಯಕ್ಕೆ ನೆಲೆಯಿಲ್ಲ ಅನ್ಯಾಯಕ್ಕೆ ಕೊನೆಯಿಲ್ಲ 
ಮೋಸ ವಂಚನೆ ಮೆರೆಯುವ ಜಗದಲ್ಲಿ
ನ್ಯಾಯಕ್ಕೆ ನೆಲೆಯಿಲ್ಲ.... ಅನ್ಯಾಯಕ್ಕೆ.... ಕೊನೆಯಿಲ್ಲ
--------------------------------------------------------------------------------------------------------------------------

No comments:

Post a Comment