502. ಹಸಿರು ತೋರಣ (1970)


ಹಸಿರು ತೋರಣ ಚಿತ್ರದ ಹಾಡುಗಳು 
  1. ಒಂದು ದಿನ ಎಲ್ಲಿಂದಲೋ ನೀ ಬಂದೆ 
  2. ಈ ಮೀನಂಥ ಹೆಣ್ಣು 
  3. ನೋಡು ನೋಡು ಮೆಲ್ಲಗೆ 
  4. ಒಂದೇ ತಾಯಿಯ ಮಕ್ಕಳು 
  5. ಸೀತೆ ಹೃದಯ ಸಖಿ 
  6. ನೀ ಯಾರೋ ಏನೋ ಸಖ 
ಹಸಿರು ತೋರಣ (1970) - ಒಂದು ದಿನ ಎಲ್ಲಿಂದಲೋ ನೀ ಬಂದೆ
ಸಾಹಿತ್ಯ: ಅರ್.ಎನ್.ಜಯಗೊಪಾಲ್  ಸಂಗೀತ: ಉಪೇಂದ್ರಕುಮಾರ್  ಗಾಯನ: ಪಿ.ಬಿ.ಶ್ರೀನಿವಾಸ್, ಎಸ್.ಜಾನಕಿ


ಗಂಡು : ಒಂದು ದಿನ.. ಒಂದು ದಿನ ಎಲ್ಲಿಂದಲೋ ನೀ ಬಂದೆ
            ಒಂದು ದಿನ ಎಲ್ಲಿಂದಲೋ ನೀ ಬಂದೆ
            ಎನ್ನೆದೆಯ ಮಂದಿರದೇ ಎನ್ನೆದೆಯ ಮಂದಿರದೇ ನೀನಿಂದೆ
ಹೆಣ್ಣು : ಇರುಳಿನಲಿ ಬೆಳಕಾಗಿ ನೀ ಬಂದೆ ಇರುಳಿನಲಿ ಬೆಳಕಾಗಿ ನೀ ಬಂದೆ
          ಈ ಲತೆಗೆ ಆಸರೆಯ ಈ ಲತೆಗೆ ಆಸರೆಯ ನೀ ತಂದೆ
ಗಂಡು : ಕಟ್ಟಿದೆ ನೀನಿ ಮನೆಗೆ ಹಸಿರು ತೋರಣ  ನಿನ್ನಯ ಮಾತೆ ಪ್ರೇಮದ ಸಿಹಿ ಹೂರಣ
           ಕಟ್ಟಿದೆ ನೀನಿ ಮನೆಗೆ ಹಸಿರು ತೋರಣ ನಿನ್ನಯ ಮಾತೆ ಪ್ರೇಮದ ಸಿಹಿ ಹೂರಣ
ಹೆಣ್ಣು : ಕಂಗಳಲೂ ನಿದಿರೇ ತೊರೆಯೇ ನೀನೇ ಕಾರಣ  ಮೈಮರೆಯೇ ನಾನು ನಿನ್ನೊಲವೇ ಕಾರಣ
ಹೆಣ್ಣು : ಮೈತ್ರಿಯ ವೀಣೆ ಮಿಡಿದ ಮಧುರ ತಾನಕೆ  ಹಾಡಿದೆ ನೀ ಅನುರಾಗದ ರಾಗ ಮಾಲಿಕೆ
          ಮೈತ್ರಿಯ ವೀಣೆ ಮಿಡಿದ ಮಧುರ ತಾಣಕೆ   ಹಾಡಿದೆ ನೀ ಅನುರಾಗದ ರಾಗ ಮಾಲಿಕೆ
ಗಂಡು : ಚೈತ್ರದಲಿ ಬನದೇ ಮುದದೇ ಕರೆಯೇ ಕೋಗಿಲೇ ಚೆಂದುಟಿಯ ಚೆಲುವೆ ನಾ ಬೆರೆತೆ ನಿನ್ನಲೇ
            ಒಂದು ದಿನ ಎಲ್ಲಿಂದಲೋ ನೀ ಬಂದೆ
ಹೆಣ್ಣು : ಇರುಳಿನಲಿ ಬೆಳಕಾಗಿ ನೀ ಬಂದೆ
ಇಬ್ಬರೂ : ಎನ್ನೆದೆಯ ಮಂದಿರದೇ ಎನ್ನೆದೆಯ ಮಂದಿರದೇ ನೀನಿಂದೆ
------------------------------------------------------------------------------------------------------------------------

ಹಸಿರು ತೋರಣ (1970) - ನೀ ಯಾರೋ ಏನೋ ಸಖಾ ಎನಗಾಸರೆ
ಸಾಹಿತ್ಯ: ಜಿ.ವಿ. ಅಯ್ಯರ್  ಸಂಗೀತ: ಉಪೇಂದ್ರಕುಮಾರ್  ಗಾಯನ: ಎಸ್.ಜಾನಕಿ


ನೀ ಯಾರೋ ಏನೋ ಸಖಾ ಎನಗಾಸರೆ
ಕರುಣಾಳು ನೀನಾದೆಯಾ ಕಣ್ಣಾಮರೇ....ನೀ ಯಾರೋ..

ಇದೇ ಏನು ಸ್ನೇಹಾ ಧರ್ಮ ಇದೇ ನಂಬಿಕೆ ಏನೂ
ನೀ ದೂರವಾಗೀ ಹೋಗೆ ಮಾಡಿದಾ ತಪ್ಪೇನೂ
ಇರು ನೀನು ಎಲ್ಲಾದರೂ ಸುಖವಾಗಿರು....ನೀ ಯಾರೋ..

ಸದಾ ನಿನ್ನ ನೋಡುವಾಸೆ ಇದೇ ಏತಕೋ ಕಾಣೆ
ಬಾ ಒಂದು ಬಾರೀ ನೋಡು ಎಂದುದೇ ತಪ್ಪೇನು
ಇರು ನೀನು ಎಲ್ಲಾದರೂ ಸುಖವಾಗಿರು....ನೀ ಯಾರೋ..
--------------------------------------------------------------------------------------------------------------------------

ಹಸಿರು ತೋರಣ (1970) - ಒಂದು ದಿನ ಎಲ್ಲಿಂದಲೋ ನೀ ಬಂದೆ
ಸಾಹಿತ್ಯ: ಅರ್.ಎನ್.ಜಯಗೊಪಾಲ್  ಸಂಗೀತ: ಉಪೇಂದ್ರಕುಮಾರ್  ಗಾಯನ: ಎಲ್.ಆರ್.ಈಶ್ವರಿ 

ಲಲ್ಲಲಾ ಲಲಲಲಾಲಾ
ಈ ಮೀನಂಥ ಹೆಣ್ಣು ಇಲ್ಲಿದೆ  ಹೂವಂಥ ಕಣ್ಣು ಕರೆದಿದೆ
ಮಾತಾಡಲೆಂದು ಈಜಾಡೇ ಇಂದು
ನೀರಲ್ಲಿ ನೀನು ಇಳಿದು ಬಾ
ಈ ಮೀನಂಥ ಹೆಣ್ಣು ಇಲ್ಲಿದೆ  ಹೂವಂಥ ಕಣ್ಣು ಕರೆದಿದೆ 

ಮಾತಾಡಲೆಂದು ಈಜಾಡೇ ಇಂದು
ನೀರಲ್ಲಿ ನೀನು ಇಳಿದು ಬಾ.. ಅಹ್...

ಈ ಕೈ ಕೈ ಮೈ ಮೈ ಸೋಕಿದಾಗ
ದೇಹವೇ ಝಂ ಝಂ ಝಂ ಎಂದಿತಾಗ
ಓ..ಲಾಲಲಲ ಲಲಲಲಲ ಆಹಾ...  ಸುಖ ಆಹಾ...ಹೂಂ..
ಈ ತಣ್ಣೀರು ಸುಡುತಿದೆ  ತಂಗಾಳಿ ಬೇಗೆ ತರುತಿದೆ
ಮೈ ಬಾಗಿದೆ...  ಬಾಯಾರಿದೇ.. ಹತೋಟಿ ಕಳೆದುಕೊಂಡಿದೇ.. ಹೋಆ...

ಸೇರಬೇಕು ಮನಸು ಮನಸು ಒಲವಾಗಲು
ಕಣ್ಣು ಕಣ್ಣು ಸೇರಬೇಕು ಮಾತಾಡಲು
ಸೇರಬೇಕು ಮನಸು ಮನಸು ಒಲವಾಗಲು
ಕಣ್ಣು ಕಣ್ಣು ಸೇರಬೇಕು ಮಾತಾಡಲು
ಕೆನ್ನೆಗೆ ಕೆನ್ನೆಯು ಸೋಕಬೇಕು
ತುಟಿಗೆ ತುಟಿಯು ಸೇರಬೇಕು...  ತಂಪಾಗಲು
ಈ ಮೀನಂಥ ಹೆಣ್ಣು ಇಲ್ಲಿದೆ  ಹೂವಂಥ ಕಣ್ಣು ಕರೆದಿದೆ
ಮಾತಾಡಲೆಂದು ಈಜಾಡೇ ಇಂದು
ನೀರಲ್ಲಿ ನೀನು ಇಳಿದು ಬಾ ಆ..ಅ
------------------------------------------------------------------------------------------------------------------------

ಹಸಿರು ತೋರಣ (1970) - ನೋಡು ನೋಡು ಮೆಲ್ಲಗೆ ಕೆಂಡದಾ ಸಂಪಿಗೆ
ಸಂಗೀತ: ಉಪೇಂದ್ರಕುಮಾರ್ ಸಾಹಿತ್ಯ: ಜಿ.ವಿ.ಅಯ್ಯರ್    ಗಾಯನ: ಪಿ.ಬಿ..ಶ್ರೀನಿವಾಸ್ 

ಒಹೋ... ಒಹೋ... ಒಹೋ... ಒಹೋ... ಲಲಲಲಲ್ಲಾ
ನೋಡು ನೋಡು ಮೆಲ್ಲಗೆ ಕೆಂಡದಾ ಸಂಪಿಗೆ
ಜೋಡಿಯಾಗಿ ಮೆಲ್ಲಗೆ ಹೋಗುವೇ ಎಲ್ಲಿಗೇ....
ನೋಡು ನೋಡು ಮೆಲ್ಲಗೆ ಕೆಂಡದಾ ಸಂಪಿಗೆ
ಜೋಡಿಯಾಗಿ ಮೆಲ್ಲಗೆ ಹೋಗುವೇ ಎಲ್ಲಿಗೇ....

ಓ..ಓ... ಸೊಗಸಾದ ಹೆಣ್ಣು ರಸಬಾಳೆ ಹಣ್ಣು 
ಸಿಗದಯ್ಯ ಇನ್ನೂ ಬೀಡಬೇಡ ಕಣ್ಣೂ 
ಓ... ತಕರಾರು ಏನು ಇರಕೂಡ ಇನ್ನೂ 
ಮಕಮಲ್ಲಿ ಕಿಟಲೀ ಮಲಗಯ್ಯ ನೀನು 
ನೋಡು ನೋಡು ಮೆಲ್ಲಗೆ ಕೆಂಡದಾ ಸಂಪಿಗೆ
ಜೋಡಿಯಾಗಿ ಮೆಲ್ಲಗೆ ಹೋಗುವೇ ಎಲ್ಲಿಗೇ....

ದೋಸ್ತಿ ಮಾಡಿ ನೋಡು  ದೂಸರಾ ಮಾತು ಆಡದೇ... 
ಹೇ... ಪೆಹಲಿ ಬಾರಿ ಜೋಡು ಕೈಯಲಿ  ಸಿಕ್ಕಿದೇ... 
ಶುರನಲ್ಲಿ ಡೀಲಾ ಆಗಬೇಡಾ ಆದರೆ ಅದೇ 
ತಂದುರಸ್ತು ಅಲ್ವೇನೇ ಅಣ್ಣಾ...  
ನೋಡು ನೋಡು ಮೆಲ್ಲಗೆ ಕೆಂಡದಾ ಸಂಪಿಗೆ
ಜೋಡಿಯಾಗಿ ಮೆಲ್ಲಗೆ ಹೋಗುವೇ ಎಲ್ಲಿಗೇ....  
--------------------------------------------------------------------------------------------------------------------------

ಹಸಿರು ತೋರಣ (1970) - ಒಂದೇ ತಾಯಿಯ ಮಕ್ಕಳು ಒಂದೇ ಕೊಂಬೆ ಹೂಗಳು
ಸಂಗೀತ: ಉಪೇಂದ್ರಕುಮಾರ್ ಸಾಹಿತ್ಯ: ಅರ್.ಎನ್.ಜಯಗೊಪಾಲ್  ಗಾಯನ:  ಎಸ್.ಜಾನಕಿ

ಒಂದೇ ತಾಯಿಯ ಮಕ್ಕಳು ಒಂದೇ ಕೊಂಬೆ ಹೂಗಳು
ಒಂದೇ ತಾಯಿಯ ಮಕ್ಕಳು ಒಂದೇ ಕೊಂಬೆ ಹೂಗಳು
ಬಾನು ಭೂಮಿ ಸಾಗರಕೆ ಒಂದೇ ನಾವೆಲ್ಲರೂ
ಒಂದೇ ನಾವೆಲ್ಲರೂ
ಒಂದೇ ತಾಯಿಯ ಮಕ್ಕಳು ಒಂದೇ ಕೊಂಬೆ ಹೂಗಳು
ಬಾನು ಭೂಮಿ ಸಾಗರಕೆ ಒಂದೇ ನಾವೆಲ್ಲರೂ
ಒಂದೇ ನಾವೆಲ್ಲರೂ
ಒಂದೇ ತಾಯಿಯ ಮಕ್ಕಳು ಒಂದೇ ಕೊಂಬೆ ಹೂಗಳು
ಮನವೇ ದೇಗುಲ ಮಾನವ ದೇವರು 
ಮನವೇ ದೇಗುಲ ಮಾನವ ದೇವರು 
ಮನದ ಒಳ್ಳೆತನವು ತುಂಬಿದಾಗಿನ ಬಂದು ಮಾನವನಿನದು  
ಒಳ್ಳೆ ಮನವಿ ಜಗದೊಳಗೆ ಆರದ ದೀಪ 
ಆ ಬೆಳಕಿನಲ್ಲಿ ಒಂದುಗೂಡಿ ದಾರಿ ಸಾಗುವಾ... 
ಒಂದೇ ತಾಯಿಯ ಮಕ್ಕಳು ಒಂದೇ ಕೊಂಬೆ ಹೂಗಳು 

ನಿಜದ ಮಾತಲಿ ನೀತಿಯ ದಾರಿ ನೀ 
ನಿಜದ ಮಾತಲಿ ನೀತಿಯ ದಾರಿ ನೀ 
ಬಾಳ ಮುಂದೆ ಸಾಗಿಸಲು ನೀನು ಕಲಿತುಕೋ.. 
ಕಲಿತು ನಡೆದುಕೋ  
ಬಾಧೇ ನೂರು ಬಂದರೂ ಎದೆಗುಂದದೇ  ನೀನು
ನಗುವೊಂದಿಗೇ ನೀ ದಾಟುವಂಥ ಧೈರ್ಯ ತಂದುಕೋ 
ಒಂದೇ ತಾಯಿಯ ಮಕ್ಕಳು ಒಂದೇ ಕೊಂಬೆ ಹೂಗಳು
ಬಾನು ಭೂಮಿ ಸಾಗರಕೆ ಒಂದೇ ನಾವೆಲ್ಲರೂ
ಒಂದೇ ನಾವೆಲ್ಲರೂ 
ಒಂದೇ ತಾಯಿಯ ಮಕ್ಕಳು ಒಂದೇ ಕೊಂಬೆ ಹೂಗಳು 
ಒಂದೇ ತಾಯಿಯ ಮಕ್ಕಳು ಒಂದೇ ಕೊಂಬೆ ಹೂಗಳು
ಬಾನು ಭೂಮಿ ಸಾಗರಕೆ ಒಂದೇ ನಾವೆಲ್ಲರೂ
ಒಂದೇ ನಾವೆಲ್ಲರೂ 
ಒಂದೇ ತಾಯಿಯ ಮಕ್ಕಳು ಒಂದೇ ಕೊಂಬೆ ಹೂಗಳು 
-------------------------------------------------------------------------------------------------------------------------

ಹಸಿರು ತೋರಣ (1970) - ಸೀತೆ ಹೃದಯ ಸಖಿ ಸೀತೆ
ಸಂಗೀತ: ಉಪೇಂದ್ರಕುಮಾರ್ ಸಾಹಿತ್ಯ: ಜಿ.ವಿ.ಅಯ್ಯರ್ ಗಾಯನ: ಪಿ.ಬಿ..ಶ್ರೀನಿವಾಸ್


ಸೀತೆ ಹೃದಯ ಸಖಿ ಸೀತೆ
ನೀ ಎಲ್ಲಿ ಹೋದೆ  ಭೂ.. ಜಾತೇ  ನಿನ್ನನು ಕಾಣದೇ
ದಾರಿಗಾಣದೇ ನೊಂದು ನಾ ಸೋತೇ 
ಸೀತೆ ಹೃದಯ ಸಖಿ ಸೀತೆ 

ವನದೇವತೆಗಳೇ ಋಷಿ ತಾಪಸಿಗಳೇ 
ಹೇಳಲಾರಿಹ ಅವಳೇಲ್ಲಿ 
ಹೇ.. ಭೂ ಮಾತೇ....ಏಏಏಏಏ...ಆಆಆ... 
ಹೇ.. ಭೂ ಮಾತೇ ನೀನಾದರೂ ತಿಳಿಸು 
ನಿನ್ನಯ ಮಡಿಲಿನ ಮಗಳೆಲ್ಲಿ... ಮಗಳೆಲ್ಲಿ ... ಮಗಳೆಲ್ಲಿ 
-------------------------------------------------------------------------------------------------------------------------

No comments:

Post a Comment