503. ಆನಂದ್ (1986)

ಆನಂದ ಚಿತ್ರದ ಹಾಡುಗಳು 
  1. ನೀಲ ಮೇಘ ಗಾಳಿ ಬೀಸಿ 
  2. ಟಿಕ್ ಟಿಕ್ ಟಿಕ್ ಟಿಕ್ ಟಿಕ್ ಬರುತಿದೆ ಕಾಲ 
  3. ಟುವ್ವಿ ಟುವ್ವಿ ಟುವ್ವಿ ಎಂದು ಹಾಡುವಾ 
  4. ಮೊಗವು ಚೆನ್ನ ನಗುವು ಚೆನ್ನ 
  5. ತಿಮ್ಮಾ ತಿಮ್ಮಾ ತಿಮ್ಮಾ 

ಆನಂದ್ (1986) - ನೀಲ ಮೇಘ ಗಾಳಿ ಬೀಸಿ
ಸಾಹಿತ್ಯ: ಚಿ. ಉದಯಶಂಕರ್ ಸಂಗೀತ: ಶಂಕರ್-ಗಣೇಶ್ ಗಾಯನ: ಎಸ್.ಪಿ.ಬಿ ಮತ್ತು ಎಸ್. ಜಾನಕಿ

ಗಂಡು : ನೀಲ ಮೇಘ ಗಾಳಿ ಬೀಸಿ ದೂರಾದ ಹಾಗೆ
            ಚಂದ್ರ ತಾರೆ ತಂಪು ಕಾಂತಿ ಚೆಲ್ಲಾಡೊ ಹಾಗೆ
            ಎದೆಯ ತುಂಬಿ ಕೆಣಕಿದ ಚಿಂತೆ  ಕರಗಿ ಕರಗಿ ಇಬ್ಬನಿಯಂತೆ
           ಮನ ಉಯ್ಯಾಲೆಯಂತಾಗಿ ತೂಗಾಡಿದೆ
ಹೆಣ್ಣು :  ನೀಲ ಮೇಘ ಗಾಳಿ ಬೀಸಿ ದೂರಾದ ಹಾಗೆ
           ಚಂದ್ರ ತಾರೆ ತಂಪು ಕಾಂತಿ ಚೆಲ್ಲಾಡೊ ಹಾಗೆ
           ಎದೆಯ ತುಂಬಿ ಕೆಣಕಿದ ಚಿಂತೆ  ಕರಗಿ ಕರಗಿ ಇಬ್ಬನಿಯಂತೆ
           ಮನ ಉಯ್ಯಾಲೆಯಂತಾಗಿ ತೂಗಾಡಿದೆ

ಗಂಡು: ಹೂವಾಯಿತು ಮನ ಹೂವಾಯಿತು  ನೀ ಸೇರಲು ಸವಿ ಜೇನಾಯಿತು
ಹೆಣ್ಣು: ಹಾಡಾಯಿತು ಹೊಸ ಹಾಡಾಯಿತು ನೀ ಹಾಡಲು ಬಲು ಇಂಪಾಯಿತು
ಗಂಡು: ಬಳಿ ಬಂದಾಗ, ಸುಖ ತಂದಾಗ
            ಬಳಿ ಬಂದಾಗ, ಸುಖ ತಂದಾಗ  ಆನಂದವೇ ತುಂಬಿತು
ಹೆಣ್ಣು: ನೀಲ ಮೇಘ ಗಾಳಿ ಬೀಸಿ ದೂರಾದ ಹಾಗೆ
ಗಂಡು : ಚಂದ್ರ ತಾರೆ ತಂಪು ಕಾಂತಿ ಚೆಲ್ಲಾಡೊ ಹಾಗೆ
ಹೆಣ್ಣು : ಎದೆಯ ತುಂಬಿ ಕೆಣಕಿದ ಚಿಂತೆ
ಗಂಡು : ಕರಗಿ ಕರಗಿ ಇಬ್ಬನಿಯಂತೆ
ಇಬ್ಬರು : ಮನ ಉಯ್ಯಾಲೆಯಂತಾಗಿ ತೂಗಾಡಿದೆ

ಹೆಣ್ಣು: ಹಾರಾಡುವ ಗಿಳಿಯಂತಾಗುವ ಆ ಬಾನಲಿ ಜೊತೆನಾವಾಗುವ
ಗಂಡು: ಆ ದೂರದ ಗಿರಿಮೇಲೇರುವ ಸೌಂದರ್ಯದ ಸಿರಿ ಬಾ ನೋಡುವ
ಹೆಣ್ಣು: ಮಳೆ ಬಂದಾಗ, ಹಿತ ತಂದಾಗ
          ಮಳೆ ಬಂದಾಗ, ಹಿತ ತಂದಾಗ ಮಳೆಬಿಲ್ಲಲಿ ಜಾರುವ
ಗಂಡು : ನೀಲ ಮೇಘ ಗಾಳಿ ಬೀಸಿ ದೂರಾದ ಹಾಗೆ
ಹೆಣ್ಣು :  ಚಂದ್ರ ತಾರೆ ತಂಪು ಕಾಂತಿ ಚೆಲ್ಲಾಡೊ ಹಾಗೆ
ಗಂಡು : ಎದೆಯ ತುಂಬಿ ಕೆಣಕಿದ ಚಿಂತೆ 
ಹೆಣ್ಣು : ಕರಗಿ ಕರಗಿ ಇಬ್ಬನಿಯಂತೆ
ಇಬ್ಬರು : ಮನ ಉಯ್ಯಾಲೆಯಂತಾಗಿ ತೂಗಾಡಿದೆ
            ಲಾಲ ಲಾಲ ಲಾಲಲಲ ಲಾಲಲಲ
            ಲಾಲ ಲಾಲ ಲಾಲಲಲ ಲಾಲಲಲ
-------------------------------------------------------------------------------------------------------------------------

ಆನಂದ್ (1986) - ಟಿಕ್ ಟಿಕ್ ಬರುತಿದೆ ಕಾಲ

ಸಾಹಿತ್ಯ: ಚಿ||ಉದಯಶಂಕರ್  ಸಂಗೀತ: ಶಂಕರ್ - ಗಣೇಶ್   ಹಾಡಿರುವವರು: ಎಸ್.ಪಿ.ಬಾಲಸುಬ್ರಮಣ್ಯಂ

ಗಂಡು : ಟಿಕ್ ಟಿಕ್ ಟಿಕ್ ಟಿಕ್ ಟಿಕ್ ಟಿಕ್ ಬರುತಿದೆ ಕಾಲ
            ಟಿಕ್ ಟಿಕ್ ಟಿಕ್ ಟಿಕ್ ಟಿಕ್ ಟಿಕ್ ಬರುತಿದೆ ಕಾಲ
             ಮುಗಿವುದು ನಿನ್ನ ಮೋಸದ ಜಾಲ
             ವೇಷವ ಕಳಚಿ ಹಾಕಿದ ಮೇಲೆ
            ಗೌರವ ನಿನಗಿಲ್ಲ ಮಾನವ ಗೌರವ ನಿನಗಿಲ್ಲ
            ಎಚ್ಚರಿಕೆ ಮಾನವ ಎಚ್ಚರಿಕೆ
            ಟಿಕ್ ಟಿಕ್ ಟಿಕ್ ಟಿಕ್ ಟಿಕ್ ಟಿಕ್ ಬರುತಿದೆ ಕಾಲ
            ಟಿಕ್ ಟಿಕ್ ಟಿಕ್ ಟಿಕ್ ಟಿಕ್ ಟಿಕ್ ಬರುತಿದೆ ಕಾಲ
            ಮುಗಿವುದು ನಿನ್ನ ಮೋಸದ ಜಾಲ
            ವೇಷವ ಕಳಚಿ ಹಾಕಿದ ಮೇಲೆ
            ಗೌರವ ನಿನಗಿಲ್ಲ ಮಾನವ ಗೌರವ ನಿನಗಿಲ್ಲ
ಕೋರಸ್ :  ಎಚ್ಚರಿಕೆ ಮಾನವ ಎಚ್ಚರಿಕೆ

ಗಂಡು : ಮೇಲೆಲ್ಲ ಥಳಕು ಒಳಗೆಲ್ಲ ಹುಳುಕು  ಮನಸೆಲ್ಲ ಕೊಳಕು ಏಕೆ
            ಮಾಡಿದ ಪಾಪ ಬೆನ್ನಿನ ಹಿಂದೆ  ನೆರಳಂತೆ ಇದೆಯೋ ಜೋಕೆ
            ಇಂದಲ್ಲ ನಾಳೆ ಜನರೆಲ್ಲ ನಿನ್ನ... ಅಹಹಹ  ।।
            ಇಂದಲ್ಲ ನಾಳೆ ಜನರೆಲ್ಲ ನಿನ್ನ ಚಂಡಂತೆ ಜಾಡಿಸಬೇಕೆ
           ಟಿಕ್ ಟಿಕ್ ಟಿಕ್ ಟಿಕ್ ಟಿಕ್ ಟಿಕ್ ಬರುತಿದೆ ಕಾಲ
           ಟಿಕ್ ಟಿಕ್ ಟಿಕ್ ಟಿಕ್ ಟಿಕ್ ಟಿಕ್ ಬರುತಿದೆ ಕಾಲ
            ಮುಗಿವುದು ನಿನ್ನ ಮೋಸದ ಜಾಲ
            ವೇಷವ ಕಳಚಿ ಹಾಕಿದ ಮೇಲೆ
             ಗೌರವ ನಿನಗಿಲ್ಲ ಮಾನವ ಗೌರವ ನಿನಗಿಲ್ಲ
ಕೋರಸ್ :  ಎಚ್ಚರಿಕೆ ಮಾನವ ಎಚ್ಚರಿಕೆ.. (ಎಚ್ಚರಿಕೆ.)
         
ಕೋರಸ್ : ಭಮ್ ಭಮ್ ಭಮ್ ಭಮ್ ಭಮ್ ಭಮ್ ಭಮ್ ಭಮ್ 
               ಭಮ್ ಭಮ್ ಭಮ್ ಭಮ್ ಭಮ್ ಭಮ್ ಭಮ್ ಭಮ್ 
ಗಂಡು : ಸುಡುವಂಥ ಕೆಂಡ ಮಡಿಲಲಿ ಇಟ್ಟೂ  ನಡೆಯೋನು ಜಾಣನೆ ಹೇಳು
            ಮಡಿಲನು ಸುಟ್ಟು ಒಡಲನು ಸುಟ್ಟು  ಬಾಳನ್ನೆ ಸುಡುವುದು ಕೇಳು
            ನೀನಾಗ ನೊಂದು ಅಹ್ಹಹ್ಹಹ ಅಯ್ಯಯ್ಯೊ ಎನಲು ಅಹಹಾ ।।
            ನೀನಾಗ ನೊಂದು ಅಯ್ಯಯ್ಯೊ ಎನಲು ಕೇಳಲ್ಲ ಯಾರು ಗೋಳು
           ಟಿಕ್ ಟಿಕ್ ಟಿಕ್ ಟಿಕ್ ಟಿಕ್ ಟಿಕ್ ಬರುತಿದೆ ಕಾಲ ರಬರಬಾಬಾಬ ಶಬರಿಬಬರಿಬ ರಿಬ
           ಟಿಕ್ ಟಿಕ್ ಟಿಕ್ ಟಿಕ್ ಟಿಕ್ ಟಿಕ್ ಬರುತಿದೆ ಕಾಲ
            ಮುಗಿವುದು ನಿನ್ನ ಮೋಸದ ಜಾಲ (ಹ್ಹಾಂ ಹ್ಹಾಂ )
            ವೇಷವ ಕಳಚಿ ಹಾಕಿದ ಮೇಲೆ (ಹ್ಹಾಂ ಹ್ಹಾಂ )
             ಗೌರವ ನಿನಗಿಲ್ಲ ಮಾನವ ಗೌರವ ನಿನಗಿಲ್ಲ
ಕೋರಸ್ :  ಎಚ್ಚರಿಕೆ ಮಾನವ ಎಚ್ಚರಿಕೆ.. ಹೇ..ಹೇ..ಹೇ.. (ಎಚ್ಚರಿಕೆ.)
-----------------------------------------------------------------------------------------------------------------------

ಆನಂದ್ (1986) - ಟುವ್ವಿ ಟುವ್ವಿ
ಸಾಹಿತ್ಯ: ಚಿ||ಉದಯಶಂಕರ್  ಸಂಗೀತ: ಶಂಕರ್ - ಗಣೇಶ್   ಹಾಡಿರುವವರು: ಎಸ್.ಪಿ.ಬಾಲಸುಬ್ರಮಣ್ಯಂ

ಗಂಡು: ಹೇ... ಟುವ್ವಿ ಟುವ್ವಿ ಟುವ್ವಿ ಎಂದು ಹಾಡುವ ಹೊಸ ಹಕ್ಕಿಯ ನೋಡಿದೆ
           ಟುವ್ವಿ ಟುವ್ವಿ ಟುವ್ವಿ ಎಂದು ಹಾಡುವ ಹೊಸ ಹಕ್ಕಿಯ ನೋಡಿದೆ
          ಕೇಳುತಾ ಕೇಳುತ ಮೇಲೆ ನಾ ಹಾರಿದೇ..
          ಕೇಳುತಾ ಕೇಳುತ ಮೇಲೆ ನಾ ಹಾರಿದೇ.. ಹಾಡಿದೆ..
          ಟುವ್ವಿ ಟುವ್ವಿ  ಟುವ್ವಿ ಟುವ್ವಿ  ಟುವ್ವಿ.. ಟುವ್ವಿ.. ಟುವ್ವೀ....
         ಟುವ್ವಿ ಟುವ್ವಿ ಟುವ್ವಿ ಎಂದು ಹಾಡುವ ಹೊಸ ಹಕ್ಕಿಯ ನೋಡಿದೆ
ಸಮೂಹ: ಟುವ್ವಿ ಟುವ್ವಿ ಟುವ್ವಿ ಎಂದು ಹಾಡುವ  ಹೊಸ ಹಕ್ಕಿಯ ನೋಡಿದೆ
ಗಂಡು: ಕೇಳುತಾ ಕೇಳುತ ಮೇಲೆ ನಾ ಹಾರಿದೇ..ಹೇ..
ಸಮೂಹ: ಕೇಳುತಾ ಕೇಳುತ ಮೇಲೆ ನಾ ಹಾರಿದೇ..
ಗಂಡು:  ಹಾಡಿದೆ..ಟುವ್ವಿ ಟುವ್ವಿ
ಸಮೂಹ: ಟುವ್ವಿ ಟುವ್ವಿ           ಗಂಡು: ಟುವ್ವಿ..
ಸಮೂಹ:  ಟುವ್ವಿ.. ಟುವ್ವೀ....  

ಗಂಡು:  ನಿನ್ನೆಯು ಮುಗಿದುದು ನಾಳೆಯು ಕನಸದು
            ತುಂಬಿದ ಯೌವನ ಈ ದಿನ ನಮ್ಮದು
            ಎನ್ನುತಾ ಆಡಿದೆ.. ಆಗ ಹೊಸತನ ನೋಡಿದೆ..
            ನಿನ್ನೆಯು ಮುಗಿದುದು ನಾಳೆಯು ಕನಸದು
            ತುಂಬಿದ ಯೌವನ ಈ ದಿನ ನಮ್ಮದು
           ಎನ್ನುತಾ ಆಡಿದೆ.. ಆಗ ಹೊಸತನ ನೋಡಿದೆ..
           ನೂರು ಕಲ್ಪನೆ ಮಾಡಿದೆ.. ನೂರು ರಾಗವ ಹಾಡಿದೆ..
           ನೂರು ಕಲ್ಪನೆ ಮಾಡಿದೆ.. ನೂರು ರಾಗವ ಹಾಡಿದೆ..
          ಟುವ್ವಿ ಟುವ್ವಿ ಟುವ್ವಿ ಎಂದು ಹಾಡುವ ಹೊಸ ಹಕ್ಕಿಯ ನೋಡಿದೆ
ಸಮೂಹ: ಟುವ್ವಿ ಟುವ್ವಿ ಟುವ್ವಿ ಎಂದು ಹಾಡುವ  ಹೊಸ ಹಕ್ಕಿಯ ನೋಡಿದೆ
ಗಂಡು: ಕೇಳುತಾ ಹಹ.. ಕೇಳುತ ಹೆಹೇ.. ಮೇಲೆ ನಾ ಹಾರಿದೇ..ಹೇ..
ಸಮೂಹ: ಕೇಳುತಾ ಕೇಳುತ ಮೇಲೆ ನಾ ಹಾರಿದೇ..
ಗಂಡು: ಹಾಡಿದೆ..  ಟುವ್ವಿ ಟುವ್ವಿ    ಸಮೂಹ: ಟುವ್ವಿ ಟುವ್ವಿ  ಗಂಡು:ಟುವ್ವಿ..  ಸಮೂಹ: ಟುವ್ವಿ.. ಟುವ್ವೀ....
ಗಂಡು: ಪರಪ್ಪಪ್ಪಾ.. ರಪ್ಪಪ್ಪಾ.. ರಪ್ಪಪ್ಪಪ್ಪ..       ಸಮೂಹ: ರಪ್ಪಪ್ಪಾ.. ರಪ್ಪಪ್ಪಾ.. ರಪ್ಪಪ್ಪಪ್ಪ..
ಗಂಡು: ರಪ್ಪಪ್ಪಪಾಪ.. ಪಪ್ಪಪ್ಪಪ್ಪಾ..                ಸಮೂಹ:  ರಪ್ಪಪ್ಪಪಾಪ.. ಪಪ್ಪಪ್ಪಪ್ಪಾ..

ಗಂಡು:  ಸೂರ್ಯನ ಕಿರಣವ ಕೈಯಲಿ ಹಿಡಿದೆನು
           ಮೋಡವ ಕರಗಿಸಿ ಆಡುತ ಕುಡಿದೆನು
           ಎಣಿಸುತಾ ತಾರೆಯ ನಾನು ಕಳೆದೆನು ರಾತ್ರಿಯಾ.. ತರತರಪರಪ್ಪರಪ್ಪ..
           ಸೂರ್ಯನ ಕಿರಣವ ಕೈಯಲಿ ಹಿಡಿದೆನು
           ಮೋಡವ ಕರಗಿಸಿ ಆಡುತ ಕುಡಿದೆನು
           ಎಣಿಸುತಾ ತಾರೆಯ ನಾನು ಕಳೆದೆನು ರಾತ್ರಿಯಾ..
           ಮುಗಿಲ ಮೆತ್ತೆಯಲಿ ತೇಲಿದೆ.. ಭುವಿಯ ಅಂದವನು ನೋಡಿದೆ..
           ಮುಗಿಲ ಮೆತ್ತೆಯಲಿ ತೇಲಿದೆ.. ಭುವಿಯ ಅಂದವನು ನೋಡಿದೆ..
          ಟುವ್ವಿ ಟುವ್ವೀ.. ಟುವ್ವಿ ಎಂದು ಹಾಡುವ ಹೊಸ ಹಕ್ಕಿಯ ನೋಡಿದೆ.. ಎವರಿಬಡಿ..
ಸಮೂಹ: ಟುವ್ವಿ ಟುವ್ವಿ ಟುವ್ವಿ ಎಂದು ಹಾಡುವ ಹೊಸ ಹಕ್ಕಿಯ ನೋಡಿದೆ
ಗಂಡು: ಹೆ.. ಕೇಳುತಾ ಕೇಳುತ ಮೇಲೆ ನಾ ಹಾರಿದೇ..ಹಾಗೆ ಜೊಯ್ನ್ ಫೋಕ್ಸ್..
ಸಮೂಹ: ಕೇಳುತಾ                   ಗಂಡು: ಹುಹೂ..
ಸಮೂಹ: ಕೇಳುತ                     ಗಂಡು: ಹಹಾ..
ಸಮೂಹ: ಮೇಲೆ ನಾ ಹಾರಿದೇ..  ಗಂಡು:  ಹಾಡಿದೆ.. ಟುವ್ವಿ ಟುವ್ವಿ
ಸಮೂಹ: ಟುವ್ವಿ ಟುವ್ವಿ               ಗಂಡು: ಟುವ್ವಿ..
ಸಮೂಹ: ಟುವ್ವಿ.. ಟುವ್ವೀ....
-----------------------------------------------------------------------------------------------------------------------

ಆನಂದ್ (1986) - ನೀಲ ಮೇಘ ಗಾಳಿ ಬೀಸಿ
ಸಾಹಿತ್ಯ: ಚಿ. ಉದಯಶಂಕರ್ ಸಂಗೀತ: ಶಂಕರ್-ಗಣೇಶ್ ಗಾಯನ: ಎಸ್.ಪಿ.ಬಾಲಸುಬ್ರಹ್ಮಣ್ಯಂ ಮತ್ತು ಎಸ್. ಜಾನಕಿ

ಗಂಡು : ಮೊಗವು ಚೆನ್ನ ನಗುವು ಚೆನ್ನ ಹುಡುಗಿ ಎಂಥ ಚೆನ್ನ
ಹೆಣ್ಣು : ನಡೆಯು ಚೆನ್ನ ನುಡಿಯು ಚೆನ್ನ ಹುಡುಗ ಎಂಥ ಚೆನ್ನ
ಗಂಡು : ಮೊಗವು ಚೆನ್ನ ನಗುವು ಚೆನ್ನ ಹುಡುಗಿ ಎಂಥ ಚೆನ್ನ
ಹೆಣ್ಣು : ನಡೆಯು ಚೆನ್ನ ನುಡಿಯು ಚೆನ್ನ ಹುಡುಗ ಎಂಥ ಚೆನ್ನ
ಗಂಡು: ಮಿಂಚು ಅವಳ ನಯನ...     
ಹೆಣ್ಣು : ಸೊಗಸು ಅವನ ವದನ
ಗಂಡು : ಇಂಥ ಅಂದ ಇಂಥ ಚಂದ ತಾನೇ ನನ್ನಾಣೆ.....
            ಮೊಗವು ಚೆನ್ನ ನಗುವು ಚೆನ್ನ ಹುಡುಗಿ ಎಂಥ ಚೆನ್ನ
ಹೆಣ್ಣು : ನಡೆಯು ಚೆನ್ನ ನುಡಿಯು ಚೆನ್ನ ಹುಡುಗ ಎಂಥ ಚೆನ್ನ
ಗಂಡು : ಇಂಥ ಅಂದ ಇಂಥ ಚಂದ ತಾನೇ ನನ್ನಾಣೆ.....
            ಮೊಗವು ಚೆನ್ನ ನಗುವು ಚೆನ್ನ ಹುಡುಗಿ ಎಂಥ ಚೆನ್ನ

ಹೆಣ್ಣು : ನಡೆಯು ಚೆನ್ನ ನುಡಿಯು ಚೆನ್ನ ಹುಡುಗ ಎಂಥ ಚೆನ್ನ

ಗಂಡು : ಇನ್ನೂ ಇನ್ನೂ  ನೋಡೋ ಆಸೆ ಅವಳನ್ನು.. ಲಲ್ಲ
ಹೆಣ್ಣು : ಇನ್ನೂ ಇನ್ನೂ ಕೇಳೋ ಆಸೆ ಮಾತನ್ನು .... ಲಲ್ಲ
ಗಂಡು : ಇನ್ನೂ ಇನ್ನೂ  ನೋಡೋ ಆಸೆ ಅವಳನ್ನು.. ಲಲ್ಲ
ಹೆಣ್ಣು : ಇನ್ನೂ ಇನ್ನೂ ಕೇಳೋ ಆಸೆ ಮಾತನ್ನು .... ಲಲ್ಲ
ಗಂಡು : ಅವಳ ಪ್ರೇಮಾ.. ಅವಳ ಸ್ನೇಹಾ.. ಗೆಳೆಯ ಕಂಡು ಸೋತು ಹೋದೆ...
ಹೆಣ್ಣು : ಅವನ  ಪ್ರೇಮಾ.. ಅವನ  ಸ್ನೇಹಾ.. ಗೆಳತಿ  ಕಂಡು ಸೋತು ಹೋದೆ...
 ಗಂಡು : ಲವ್ಲಿ ಗರ್ಲ್...  ಲವ್ಲಿ ಗರ್ಲ್....  ಲವ್ಲಿ ಗರ್ಲ್....
ಹೆಣ್ಣು : ಹ್ಯಾಪಿ ಬಾಯ್...  ಹ್ಯಾಪಿ ಬಾಯ್....  ಹ್ಯಾಪಿ ಬಾಯ್ ... 
ಗಂಡು : ಲವ್ಲಿ ಗರ್ಲ್...  ಲವ್ಲಿ ಗರ್ಲ್....  ಲವ್ಲಿ ಗರ್ಲ್....
ಹೆಣ್ಣು : ಹ್ಯಾಪಿ ಬಾಯ್...  ಹ್ಯಾಪಿ ಬಾಯ್....  ಹ್ಯಾಪಿ ಬಾಯ್ ... 
ಗಂಡು : ಮೊಗವು ಚೆನ್ನ ನಗುವು ಚೆನ್ನ ಹುಡುಗಿ ಎಂಥ ಚೆನ್ನ
ಹೆಣ್ಣು : ನಡೆಯು ಚೆನ್ನ ನುಡಿಯು ಚೆನ್ನ ಹುಡುಗ ಎಂಥ ಚೆನ್ನ
ಗಂಡು: ಮಿಂಚು ಅವಳ ನಯನ...     
ಹೆಣ್ಣು : ಸೊಗಸು ಅವನ ವದನ
ಗಂಡು : ಇಂಥ ಅಂದ ಇಂಥ ಚಂದ ತಾನೇ ನನ್ನಾಣೆ.....

ಹೆಣ್ಣು : ಮೊನ್ನೆಗಿಂತ ನೆನ್ನೆ ಚೆನ್ನ ನೋಡೋಕೆ.. ಲಲ್ಲಲ 
ಗಂಡು : ನಿನ್ನೆಗಿಂತ ಇಂದು ಚಂದ ಆಡೋಕೆ.. ಲಲ್ಲಲ 
ಹೆಣ್ಣು : ಮೊನ್ನೆಗಿಂತ ನೆನ್ನೆ ಚೆನ್ನ ನೋಡೋಕೆ.. ಲಲ್ಲಲ 
ಗಂಡು : ನಿನ್ನೆಗಿಂತ ಇಂದು ಚಂದ ಆಡೋಕೆ.. ಲಲ್ಲಲ 
ಹೆಣ್ಣು : ಸರಸ ಚೆನ್ನ ವಿರಸ ಚೆನ್ನ ಗೆಳತಿ.. ಅವನೇ ನನ್ನ ಪ್ರಾಣಾ..
ಗಂಡು: ಆ... ಸರಸ ಚೆನ್ನ ವಿರಸ ಚೆನ್ನ ಗೆಳೆಯ ಅವಳೇ ನನ್ನ ಪ್ರಾಣ...
ಹೆಣ್ಣು : ಹ್ಯಾಪಿ ಬಾಯ್...  ಹ್ಯಾಪಿ ಬಾಯ್....  ಹ್ಯಾಪಿ ಬಾಯ್ ... 
ಗಂಡು : ಲವ್ಲಿ ಗರ್ಲ್...  ಲವ್ಲಿ ಗರ್ಲ್....  ಲವ್ಲಿ ಗರ್ಲ್....
ಹೆಣ್ಣು : ಹ್ಯಾಪಿ ಬಾಯ್...  ಹ್ಯಾಪಿ ಬಾಯ್....  ಹ್ಯಾಪಿ ಬಾಯ್ ... 
ಗಂಡು : ಲವ್ಲಿ ಗರ್ಲ್...  ಲವ್ಲಿ ಗರ್ಲ್....  ಲವ್ಲಿ ಗರ್ಲ್....
ಗಂಡು : ಮೊಗವು ಚೆನ್ನ ನಗುವು ಚೆನ್ನ ಹುಡುಗಿ ಎಂಥ ಚೆನ್ನ
ಹೆಣ್ಣು : ನಡೆಯು ಚೆನ್ನ ನುಡಿಯು ಚೆನ್ನ ಹುಡುಗ ಎಂಥ ಚೆನ್ನ
ಗಂಡು: ಮಿಂಚು ಅವಳ ನಯನ...     
ಹೆಣ್ಣು : ಸೊಗಸು ಅವನ ವದನ
ಗಂಡು : ಇಂಥ ಅಂದ ಇಂಥ ಚಂದ ತಾನೇ ನನ್ನಾಣೆ.....
ಗಂಡು : ಮೊಗವು ಚೆನ್ನ ನಗುವು ಚೆನ್ನ ಹುಡುಗಿ ಎಂಥ ಚೆನ್ನ
ಹೆಣ್ಣು : ನಡೆಯು ಚೆನ್ನ ನುಡಿಯು ಚೆನ್ನ ಹುಡುಗ ಎಂಥ ಚೆನ್ನ
ಎಲ್ಲರು : ಲಲ್ಲಲಾ ಲಲ್ಲ ಲಲ್ಲ ಲಲ್ಲ ಲ್ಲಲಾ
-------------------------------------------------------------------------------------------------------------------------

ಆನಂದ್ (1986) - ತಿಮ್ಮಾ ತಿಮ್ಮಾ ತಿಮ್ಮಾ 
ಸಾಹಿತ್ಯ: ಚಿ. ಉದಯಶಂಕರ್ ಸಂಗೀತ: ಶಂಕರ್-ಗಣೇಶ್ ಗಾಯನ:ರಮೇಶ, ವಾಣಿಜಯರಾಂ 

ಇಬ್ಬರು : ಹ್ಹಾ... ತಿಮ್ಮಾ ತಿಮ್ಮಾ...  ತಿಮ್ಮಾ ತಿಮ್ಮಾ...
            ತಿಮ್ಮಾ ತಿಮ್ಮಾ...ತಿಮ್ಮಾ ತಿಮ್ಮಾ...
ಗಂಡು : ನಮ್ಮ ಗೆಳೆಯ ತಿಮ್ಮನನ್ನು ಕೊಚ್ಚಿ ಕೊಂದ ಸರ್ಪವೇ
            ಹುತ್ತದಿಂದ ಹೊರಗೆ ಬೇಗ ಬಾ..
ಇಬ್ಬರು : ಹಾವೇ ಹಾವೇ ಅಯ್ಯೋ ಕಪ್ಪು ಹಾವೇ
             ಹಾವೇ ಹಾವೇ ಅಯ್ಯೋ ಕಪ್ಪು ಹಾವೇ
             ನಮ್ಮಲ್ಲಿ ಇನ್ನೂ ದ್ವೇಷವೇ....ತಿಮ್ಮಾ
            ತಿಮ್ಮಾ ತಿಮ್ಮಾ...  ತಿಮ್ಮಾ ತಿಮ್ಮಾ...
            ತಿಮ್ಮಾ ತಿಮ್ಮಾ...ತಿಮ್ಮಾ ತಿಮ್ಮಾ...
         
ಕೋರಸ್ :  ಒಹೋ ಒಹೋ ಹೊ ಒಹೋ
                 ಒಹೋ ಒಹೋ ಹೊ ಒಹೋ
                 ಒಹೋ ಒಹೋ ಹೊ ಒಹೋ
ಹೆಣ್ಣು : ಮೂರು ವರ್ಷಕೆ ಬುಂದಿ ಎಂದನೋ
ಗಂಡು : ಆರೇ ವರ್ಷಕೆ ಭ್ರಾಂದೀ ಎಂದನೋ
ಹೆಣ್ಣು : ಮೂರು ವರ್ಷಕೆ ಬುಂದಿ ಎಂದನೋ
ಗಂಡು : ಆರೇ ವರ್ಷಕೆ ಭ್ರಾಂದೀ ಎಂದನೋ
ಹೆಣ್ಣು : ಸೋಮವಾರ ಹುಟ್ಟಿದನು ಸಂತೆ ಪೇಟೇಲಿ 
ಗಂಡು : ಬುಧವಾರ ಬೆಳೆದನು ತೊಂಡೆ ಬಾವೀಲಿ 
ಹೆಣ್ಣು : ಶನಿವಾರ ಮದುವೆಯಾದ ಮಾರಿ ಕಣಿವೇಲಿ 
ಗಂಡು : ಭಾನುವಾರ ಕೊಂದೆ ಬಿಟ್ಟೇ ಕೋಲಾರದಲಿ 
ಹೆಣ್ಣು : ಮದುವೆಯಾದ ಹುಡುಗಿ ಗತಿಯು ಏನೋ
ಗಂಡು : ಲಕ್ಷ ಕೊಟ್ಟ ಮಾವ ಮಾಡೋದೇನೋ
ಇಬ್ಬರು : ನಮ್ಮಲ್ಲಿ ಇನ್ನೂ ದ್ವೇಷವೇ....ತಿಮ್ಮಾ
ಇಬ್ಬರು : ಹ್ಹಾ... ತಿಮ್ಮಾ ತಿಮ್ಮಾ...  ತಿಮ್ಮಾ ತಿಮ್ಮಾ...
            ತಿಮ್ಮಾ ತಿಮ್ಮಾ...ತಿಮ್ಮಾ ತಿಮ್ಮಾ...
ಹೆಣ್ಣು :  ನಮ್ಮ ಗೆಳೆಯ ತಿಮ್ಮನನ್ನು ಕೊಚ್ಚಿ ಕೊಂದ ಸರ್ಪವೇ
            ಹುತ್ತದಿಂದ ಹೊರಗೆ ಬೇಗ ಬಾ..
ಇಬ್ಬರು : ಹಾವೇ ಹಾವೇ ಅಯ್ಯೋ ಕಪ್ಪು ಹಾವೇ
             ಹಾವೇ ಹಾವೇ ಅಯ್ಯೋ ಕಪ್ಪು ಹಾವೇ
ಹೆಣ್ಣು :    ನಮ್ಮಲ್ಲಿ ಇನ್ನೂ ದ್ವೇಶವೇ....ತಿಮ್ಮಾ
            ತಿಮ್ಮಾ ತಿಮ್ಮಾ...  ತಿಮ್ಮಾ ತಿಮ್ಮಾ...
            ತಿಮ್ಮಾ ತಿಮ್ಮಾ...ತಿಮ್ಮಾ ತಿಮ್ಮಾ...

ಕೋರಸ್ :  ಒಹೋ ಒಹೋ ಹೊ ಒಹೋ
                 ಒಹೋ ಒಹೋ ಹೊ ಒಹೋ
                 ಒಹೋ ಒಹೋ ಹೊ ಒಹೋ
                 ಒಹೋ ಒಹೋ ಹೊ ಒಹೋ 
ಹೆಣ್ಣು : ಅವನು ನಕ್ಕರೇ ಕಲ್ಲು ಸಕ್ಕರೆ 
ಗಂಡು : ಜೊತೆಯಲ್ಲಿದ್ದರೇ ಸ್ವರ್ಗ ಈ ಧರೇ 
ಹೆಣ್ಣು : ಅವನು ನಕ್ಕರೇ ಕಲ್ಲು ಸಕ್ಕರೆ 
ಗಂಡು : ಜೊತೆಯಲ್ಲಿದ್ದರೇ ಸ್ವರ್ಗ ಈ ಧರೇ 
ಹೆಣ್ಣು : ದಾರಿಲೀ ಹೋಗುವಾಗ  ಇವನ ಕಂಡರೇ 
ಗಂಡು : ಕಾಲೇಜು ಹೆಣ್ಣುಗಳಿಗೆ ತುಂಬಾ ತೊಂದರೆ
ಹೆಣ್ಣು : ಊರಲ್ಲಿ ಅವನನ್ನು  ಎಲ್ಲ ಮೆಚ್ಚೋರೇ
ಗಂಡು : ನೋಡೀಗ ಅವನ ನೆನೆದು ಎಲ್ಲಾ ಆಡೋರೇ
ಹೆಣ್ಣು : ಅವನ ಜೀವ ಹೊತ್ತು ಹೋಗು ನಾವೂ
ಗಂಡು : ಬೇಗ ಬಂದು ವಿಷವ ಹೀರೊ ಈಗಾ
ಇಬ್ಬರು : ನಮ್ಮಲ್ಲಿ ಇನ್ನೂ ದ್ವೇಷವೇ... ತಿಮ್ಮಾ
ಇಬ್ಬರು : ತಿಮ್ಮಾ ತಿಮ್ಮಾ...  ತಿಮ್ಮಾ ತಿಮ್ಮಾ...
            ತಿಮ್ಮಾ ತಿಮ್ಮಾ...ತಿಮ್ಮಾ ತಿಮ್ಮಾ...
ಹೆಣ್ಣು :  ನಮ್ಮ ಗೆಳೆಯ ತಿಮ್ಮನನ್ನು ಕೊಚ್ಚಿ ಕೊಂದ ಸರ್ಪವೇ
            ಹುತ್ತದಿಂದ ಹೊರಗೆ ಬೇಗ ಬಾ..
ಇಬ್ಬರು : ಹಾವೇ ಹಾವೇ ಅಯ್ಯೋ ಕಪ್ಪು ಹಾವೇ
             ಹಾವೇ ಹಾವೇ ಅಯ್ಯೋ ಕಪ್ಪು ಹಾವೇ
ಹೆಣ್ಣು : ನಮ್ಮಲ್ಲಿ ಇನ್ನೂ ದ್ವೇಷವೇ....ತಿಮ್ಮಾ
            ತಿಮ್ಮಾ ತಿಮ್ಮಾ...  ತಿಮ್ಮಾ ತಿಮ್ಮಾ...
            ತಿಮ್ಮಾ ತಿಮ್ಮಾ...ತಿಮ್ಮಾ ತಿಮ್ಮಾ...
--------------------------------------------------------------------------------------------------------------------------

No comments:

Post a Comment