504. ರವಿವರ್ಮ (1992)

ರವಿವರ್ಮ ಚಲನಚಿತ್ರದ ಹಾಡುಗಳು 
  1. ನೆನಪು ನೂರು ಮನದಲಿ,
  2. ನಾನೇ ಬೇರೆ ನನ್ನ ಸ್ಟೈಲೇ ಬೇರೆ 
  3. ಓಡೋಡಿ ಹೋಗುವ ಆ ರೈಲು 
  4. ಸೊಗಸು ಕಣ್ಣು ಸೆಳೆದಿದೆ ಮನಸು ಹಾಡಿ ಕುಣಿದಿದೆ 
  5. ರವಿವರ್ಮ ಬರೆದಂತ ಬೊಂಬೆ ನಾನೂ 
ರವಿವರ್ಮ (1992) - ನೆನಪು ನೂರು ಮನದಲಿ,
ಸಾಹಿತ್ಯ: ಚಿ.ಉದಯಶಂಕರ್ ಸಂಗೀತ: ಉಪೇಂದ್ರಕುಮಾರ್ ಹಾಡಿದವರು: ಮನು

ನೆನಪು ನೂರು ಮನದಲಿ, ಮರೆಯಲಾರೆ ಬದುಕಲಿ
ನಿನ್ನ ನೋವಿನ ಕಣ್ಣೀರಿನ ಕಥೆ ಏನಿದೆಯೊ
ತಿಳಿದಿದೆ ಯುವತಿಯೆ, ನಿಜವನೆ ನುಡಿಯುವೆ
ಭಯವೇಕೆ ಹೇಳು ಇನ್ನು ನಿನಗೆ ಹೀಗೆ
ನೆನಪು ನೂರು ಮನದಲಿ, ಮರೆಯಲಾರೆ ಬದುಕಲಿ
ನಿನ್ನ ನೋವಿನ ಕಣ್ಣೀರಿನ ಕಥೆ ಏನಿದೆಯೊ
ತಿಳಿದಿದೆ ಯುವತಿಯೆ, ನಿಜವನೆ ನುಡಿಯುವೆ
ಭಯವೇಕೆ ಹೇಳು ಇನ್ನು ನಿನಗೆ ಹೀಗೆ

ಶಶಿಯ ಬೆಳಕು ತನುವ, ಮಧುರ ನುಡಿಯು ಮನವ
ಸುಡುವ ಮಾತು ನಿಜವಾಗುವುದೆ
ಸುಮದ ಒಡಲ ಸಿಹಿಯು, ಎಂದೂ ಒಂದೆ ರುಚಿಯು
ತರುಣಿ ಜೇನು ಕಹಿಯಾಗುವುದೆ
ಹೆದರಿಕೆ ಬಿಡು ಅನುಕ್ಷಣ, ಧೈರ್ಯದಿ ಇರು ಅನುದಿನ
ಗೆಳತಿಯೆ ನನ್ನ ಹಾಡಿನ, ರಾಗದ ಈ ಸ್ವರವನ
ನಿನಗಾಗಿಯೆ ನಾನು ಹುಡುಕೀ ತಂದೆ
ನೆನಪು ನೂರು ಮನದಲಿ, ಮರೆಯಲಾರೆ ಬದುಕಲಿ

ಎಲ್ಲೊ ಹುಟ್ಟಿ ಬಂದೆ, ಎಲ್ಲೊ ನಾನು ಬೆಳೆದೆ
ಸುಖದ ಮಾತು ದೂರಾಗುತಿದೆ
ಇನ್ನು ಯಾಕೊ ಕಾಣೆ, ಕಂಡರಾಯ್ತು ಬವಣೆ
ಹೃದಯ ಕರಗಿ ನೀರಾಗುವುದೆ
ಬದುಕಿನ ಲತೆ ಲತೆಯಲಿ, ಸುಮಗಳ ಜೊತೆ ಜೊತೆಯಲಿ
ಮುಳ್ಳಿನ ಮೊನೆ ಮೊನೆ ಇದೆ, ನೋವಿನ ವಿಷ ಅಂಟಿದೆ
ಈ ಜೀವನ ತರುವ ವರವೇ ಹೀಗೆ
ನೆನಪು ನೂರು ಮನದಲಿ, ಮರೆಯಲಾರೆ ಬದುಕಲಿ
ನಿನ್ನ ನೋವಿನ ಕಣ್ಣೀರಿನ ಕಥೆ ಏನಿದೆಯೊ
ತಿಳಿದಿದೆ ಯುವತಿಯೆ, ನಿಜವನೆ ನುಡಿಯುವೆ
ಭಯವೇಕೆ ಹೇಳು ಇನ್ನು ನಿನಗೆ ಹೀಗೆ
-------------------------------------------------------------------------------------------------------------

ರವಿವರ್ಮ (1992) - ನಾನೇ ಬೇರೆ ನನ್ನ ಸ್ಟೈಲೇ ಬೇರೆ 
ಸಾಹಿತ್ಯ: ಚಿ.ಉದಯಶಂಕರ್ ಸಂಗೀತ: ಉಪೇಂದ್ರಕುಮಾರ್ ಹಾಡಿದವರು: ಮನು, ಕೋರಸ್  

ಗಂಡು : ಹೇ ನಾನೇ ಬೇರೆ ನನ್ನ ಸ್ಟೈಲೇ ಬೇರೆ 
            ಹೇ ನಾನೇ ಬೇರೆ ನನ್ನ ಸ್ಟೈಲೇ ಬೇರೆ ನನ್ನ ಕೆಣಕುವರುಂಟೇ .. 
ಕೋರಸ್ : ಲಲಲಲಲಲಾಲಾ ಲಲಲಲಲಲಾ ಲಲಲಲಲಲಾಲಾ ಲಲಲಲಲಲಾ 
ಗಂಡು : ನಾನೇ ಬೇರೆ ನನ್ನ ಸ್ಟೈಲೇ ಬೇರೆ ನನ್ನ ಕೆಣಕುವರುಂಟೇ
            ನನಗೆಂದೂ ಹೋರಾಟ ಇಂಥ ಕಾದಾಟ ತುಂಬಾ ಸಾಧಾರಣ 
            ನನ್ನ ರೀತಿನೇ ಹೀಗಾಗಿದೇ ನನ್ನ ಮಾತಲ್ಲೇ ಸತ್ಯವಿದೆ 
            ಆಯ್ ಡೋಂಟ್ ಕೇರ್.. ಆಯ್ ಡೋಂಟ್ ಕೇರ್.. 
           ಆಯ್ ಡೋಂಟ್ ಕೇರ್.. ಆಯ್ ಡೋಂಟ್ ಕೇರ್.. 
           ಹೇ ನಾನೇ ಬೇರೆ ನನ್ನ ಸ್ಟೈಲೇ ಬೇರೆ ನನ್ನ ಕೆಣಕುವರುಂಟೇ .. 
  
ಗಂಡು : ಹೇಹೇಹೇ ಬೇರೆ ಇನ್ಯಾರೂ ನನ್ನಂತಿದೆರೋರು ಇನ್ನೂ ಹುಟ್ಟಿಲ್ಲ 
           ಭೂಮಿಲೀ ಎದುರು ನಿಲ್ಲೋರು ನಿಂತು ಗೆಲ್ಲೋರು ಮಾತು ಆಡೋರು ಇನ್ನೆಲ್ಲಿ 
           ಸೋಲು ಅನ್ನೋದು ಎಂದೂ ಕಂಡಿಲ್ಲ ಗೆಲುವೇ ಎಂದೆಂದೂ ಬಾಳಲ್ಲಿ 
           ಸೋಲು ಅನ್ನೋದು ಎಂದೂ ಕಂಡಿಲ್ಲ ಗೆಲುವೇ ಎಂದೆಂದೂ ಬಾಳಲ್ಲಿ 
           ಗಗನವೇ ಬಿರಿಯಲಿ ಗುಡು ಗುಡು ಸಿಡಿಯಲಿ ಪ್ರಳಯವೇ ತೋರುಗಲಿ 
           ಆಯ್ ಡೋಂಟ್ ಕೇರ್.. ಆಯ್ ಡೋಂಟ್ ಕೇರ್.. 
           ಆಯ್ ಡೋಂಟ್ ಕೇರ್.. ಆಯ್ ಡೋಂಟ್ ಕೇರ್.. 
           ಹೇ ನಾನೇ ಬೇರೆ ನನ್ನ ಸ್ಟೈಲೇ ಬೇರೆ ನನ್ನ ಕೆಣಕುವರುಂಟೇ .. 

 ಕೋರಸ್ : ಹೋಯ್ ಹೋಯ್ ಹೋಯ್ ಹೋಯ್ 
ಗಂಡು : ಹೇ.. ಪ್ರೀತಿ ಕಂಡಾಗ ಸ್ನೇಹ ಎಂದಾಗ ಹೃದಯ ಎಂದೆಂದೂ ಹೂವಂತೇ 
            ಸನಿಹ ಇದ್ದೋರು ಎಂದು ಹೇಳೋದು ನನ್ನ ಮನಸೆಂದೂ 
            ಹೊನ್ನಂತೆ ವಯಸ್ಸೂ ಆದಂತ ನೊಂದು ಬಂದಂತ ಜನಕೆ ನಾನೆಂದು ನೆರಳಂತೆ 
            ಹೊನ್ನಂತೆ ವಯಸ್ಸೂ ಆದಂತ ನೊಂದು ಬಂದಂತ ಜನಕೆ ನಾನೆಂದು ನೆರಳಂತೆ 
            ಕೆಡುಕರ ಬಳಗವೇ ಚಳಪಿಸಿ ಕತ್ತಿಯ ಎದುರಿಸಿ ನಿಲ್ಲಲ್ಲಿ 
           ಆಯ್ ಡೋಂಟ್ ಕೇರ್.. ಆಯ್ ಡೋಂಟ್ ಕೇರ್.. 
           ಆಯ್ ಡೋಂಟ್ ಕೇರ್.. ಆಯ್ ಡೋಂಟ್ ಕೇರ್.. 
           ಹೇ ನಾನೇ ಬೇರೆ ನನ್ನ ಸ್ಟೈಲೇ ಬೇರೆ ನನ್ನ ಕೆಣಕುವರುಂಟೇ .. 
            ನನಗೆಂದೂ ಹೋರಾಟ ಇಂಥ ಕಾದಾಟ ತುಂಬಾ ಸಾಧಾರಣ 
            ನನ್ನ ರೀತಿನೇ ಹೀಗಾಗಿದೇ ನನ್ನ ಮಾತಲ್ಲೇ ಸತ್ಯವಿದೆ 
            ಆಯ್ ಡೋಂಟ್ ಕೇರ್.. ಆಯ್ ಡೋಂಟ್ ಕೇರ್.. 
           ಆಯ್ ಡೋಂಟ್ ಕೇರ್.. ಆಯ್ ಡೋಂಟ್ ಕೇರ್.. 
           ಹೇ ನಾನೇ ಬೇರೆ ನನ್ನ ಸ್ಟೈಲೇ ಬೇರೆ ನನ್ನ ಕೆಣಕುವರುಂಟೇ .. 
-------------------------------------------------------------------------------------------------------------

ರವಿವರ್ಮ (1992) - ಓಡೋಡಿ ಹೋಗುವ ಆ ರೈಲು 
ಸಾಹಿತ್ಯ: ಚಿ.ಉದಯಶಂಕರ್ ಸಂಗೀತ: ಉಪೇಂದ್ರಕುಮಾರ್ ಹಾಡಿದವರು: ಮನು, ಎಸ್.ಜಾನಕೀ  

ಗಂಡು : ಹೇ.. ಆಹಾ ಆಅಹ್ ಆಂ ..            ಹೆಣ್ಣು : ಹೇ..ಹೇ  ಆಹಾ ಆಅಹ್ ಆಂ .
ಗಂಡು : ಹೂಂ ಆಅಹ್ ಆಅಹ್ 
ಹೆಣ್ಣು : ಆಹ್ ಆಹ್                                 ಗಂಡು : ಆಹ್ ಆಹ್ 
ಹೆಣ್ಣು : ಹೂಂ ಹೂಂ                              ಗಂಡು : ಹೂಂ ಹೂಂ 
ಗಂಡು : ಓಡೋಡಿ ಹೋಗುವ ಆ ರೈಲು ಗಾಡಿಯು 
            ಆಡಿಸಿ ತೂಗಿಸಿ ಬೀಳಿಸಿ ನಮ್ಮ ಸೇರಿಸಿ ಪ್ರೀತಿಯ ಹೊಮ್ಮಿಸಿ 
ಹೆಣ್ಣು : ಓಡೋಡಿ ಹೋಗುವ ಆ ರೈಲು ಗಾಡಿಯು 
            ಆಡಿಸಿ ತೂಗಿಸಿ ಬೀಳಿಸಿ ನಮ್ಮ ಸೇರಿಸಿ ಪ್ರೀತಿಯ ಹೊಮ್ಮಿಸಿ 
ಗಂಡು : ಹೊಸ ಬಾಳಿನ ಸುಖ ತೋರಿಸಿ ನಮ್ಮ ಒಂದು ಮಾಡಿತು ಇಂದೂ 
            ಹೊಸ ಬಾಳಿನ ಸುಖ ತೋರಿಸಿ ನಮ್ಮ ಒಂದು ಮಾಡಿತು ಇಂದೂ 
            ಓಡೋಡಿ ಹೋಗುವ... ಓಡೋಡಿ ಹೋಗುವ ...   

ಗಂಡು : ತರುಣಿಯ ಸ್ನೇಹವೇ ನೋಡಿದೇನು ಯುವತಿಯ ಆಸೆಯೇನೂ 
           ಕೇಳಿದೇನೂ ಒಲವಿನ ಆಟವನ್ನೂ ಆಡಿದೇನು 
           ಚೆಲುವೆಯ ತೋಳಿನಲ್ಲಿ ಸೇರಿದೇನು 
ಹೆಣ್ಣು : ಕೊರಳಲಿ ತಾಳಿಯೂ ಹಣೆಯಲಿ ಕುಂಕುಮ 
          ಮುಡಿಯಲು ಹೂವುಗಳೂ ಗೃಹಿಣಿಯ ಲಕ್ಷಣ 
ಗಂಡು : ನನ್ನ ಲಕ್ಷಣ ಬಾ ಹೇಳುವೇ ಕಿವಿಯಲ್ಲಿ ತಾ..ನಾ..ನಾ..ನಾ..
ಹೆಣ್ಣು : ಓಡೋಡಿ ಹೋಗುವ ಆ ರೈಲು ಗಾಡಿಯು 
            ಆಡಿಸಿ ತೂಗಿಸಿ ಬೀಳಿಸಿ ನಮ್ಮ ಸೇರಿಸಿ ಪ್ರೀತಿಯ ಹೊಮ್ಮಿಸಿ 

ಹೆಣ್ಣು : ಲಲಾ.. ಲಲಾ..          ಗಂಡು : ಲಲಾ.. ಲಲಾ..  
ಹೆಣ್ಣು : ಲಲಲಾ.. ಲಲಾ..          ಗಂಡು : ಲಲಲಾ.. ಲಲಾ..  
ಹೆಣ್ಣು : ಆಸರೆ ಕಾಣದಾಗಿ ಓಡಿದೇನು ದೇವರ ಹಾಗೇ ನಿನ್ನ ನೋಡಿದೇನು 
          ಸಲಿಗೆಯ ಪ್ರೀತಿ ಮಾತಾ ಕೇಳಿದೆನು ಒಲವಿಗೆ ಸೋತು ನಿನ್ನ ಸೇರಿದೇನು .. 
ಗಂಡು : ಬದುಕಿನ ಪಯಣದ ಸೊಗಸನು ಅರಿತರೆ 
           ಅನುದಿನ ಪ್ರಣಯದ ಸುಖವನು ಸವಿದರೆ 
ಹೆಣ್ಣು : ನವಜೀವನ ನವಚೇತನ ನಮಗೆಂದೂ ನನ್ನ ನಲ್ಲ 
ಗಂಡು : ಓಡೋಡಿ ಹೋಗುವ ಆ ರೈಲು ಗಾಡಿಯು 
            ಆಡಿಸಿ ತೂಗಿಸಿ ಬೀಳಿಸಿ ನಮ್ಮ ಸೇರಿಸಿ ಪ್ರೀತಿಯ ಹೊಮ್ಮಿಸಿ 
ಹೆಣ್ಣು : ಓಡೋಡಿ ಹೋಗುವ ಆ ರೈಲು ಗಾಡಿಯು 
            ಆಡಿಸಿ ತೂಗಿಸಿ ಬೀಳಿಸಿ ನಮ್ಮ ಸೇರಿಸಿ ಪ್ರೀತಿಯ ಹೊಮ್ಮಿಸಿ 
ಗಂಡು : ಹೊಸ ಬಾಳಿನ ಸುಖ ತೋರಿಸಿ ನಮ್ಮ ಒಂದು ಮಾಡಿತು ಇಂದೂ 
            ಹೊಸ ಬಾಳಿನ ಸುಖ ತೋರಿಸಿ ನಮ್ಮ ಒಂದು ಮಾಡಿತು ಇಂದೂ 
            ಓಡೋಡಿ ಹೋಗುವ... ಓಡೋಡಿ ಹೋಗುವ ...   
-------------------------------------------------------------------------------------------------------------

ರವಿವರ್ಮ (1992) - ಸೊಗಸು ಕಣ್ಣ ಸೆಳೆದಿದೆ ಮನಸು ಹಾಡಿ ಕುಣಿದಿದೆ 
ಸಾಹಿತ್ಯ: ಚಿ.ಉದಯಶಂಕರ್ ಸಂಗೀತ: ಉಪೇಂದ್ರಕುಮಾರ್ ಹಾಡಿದವರು: ಎಸ್.ಜಾನಕೀ 

ಹೇ ಹೇ ಹೇ ಹೇ ಹೇ ಆಹ್ ಆಹ್  ಲಲಲಾ ಲಲಲಾ ಹೇ ಹೇ ಹೇ ...   
ಸೊಗಸು ಕಣ್ಣ ಸೆಳೆದಿದೆ ಮನಸು ಹಾಡಿ ಕುಣಿದಿದೆ 
ಹೊಸ ಲೋಕವೂ ಹೊಸ ನಾಕವೂ ಹೊಸ ಆಗಸವೋ 
ಮುಗಿಲಲೂ ಸೊಬಗಿದೇ ಭುವಿಯಲೂ ಸೊಬಗಿದೇ 
ನನ್ನಾಸೆ ಹೇಳಲಾರೇ ಕನಸೋ ನಿಜವೋ 
ಸೊಗಸು ಕಣ್ಣ ಸೆಳೆದಿದೆ ಮನಸು ಹಾಡಿ ಕುಣಿದಿದೆ 

(ಲ ಲ ಲ ಲ ಲ ಲ ಲಾ ಲ ಲ ಲ ಲ ಲ ಲ ಲಾ  )
ಮರದ ಎಲೆಯ ಮರೆಯ ಗಿಳಿಯ ಮಧುರ ಧನಿಯ ಕೇಳಿ ಮನವೂ ನಲಿದಾಡುತ್ತಿರೇ 
ಸುಮದ ಒಡಲ ಬಯಸಿ ಸಿಹಿಯ ಕುಡಿದು ರಮಿಸಿ 
ಭ್ರಮರಾ ಸುಖದಿ ಹಾರಾಡುತ್ತಿದೇ ಗಾಳಿಯ ಸುಳಿ ಗಾಳಿಗೇ 
ಲತೆಗಳು ಓಲಾಡಿವೇ ಹೂಗಳೂ ತೂಗಾಡಿವೇ ಪರಿಮಳ ಚೆಲ್ಲಾಡಿದೇ 
ಈ ಸೃಷ್ಟಿಯ ಚೆಲುವ ಕಂಡು ಸೋತೆ .. 
ಸೊಗಸು ಕಣ್ಣ ಸೆಳೆದಿದೆ ಮನಸು ಹಾಡಿ ಕುಣಿದಿದೆ 
ಹೊಸ ಲೋಕವೂ ಹೊಸ ನಾಕವೂ ಹೊಸ ಆಗಸವೋ 
ಮುಗಿಲಲೂ ಸೊಬಗಿದೇ ಭುವಿಯಲೂ ಸೊಬಗಿದೇ 
ನನ್ನಾಸೆ ಹೇಳಲಾರೇ ಕನಸೋ ನಿಜವೋ 
ಸೊಗಸು ಕಣ್ಣ ಸೆಳೆದಿದೆ ಮನಸು ಹಾಡಿ ಕುಣಿದಿದೆ 

(ಲ ಲ ಲ ಲ ಲ ಲ ಲಾ ಲ ಲ ಲ ಲ ಲ ಲ ಲಾ  )
ಗಗನವೆಂಬ ತೆರೆಯಾ ಮೇಲೆ ಹಿಡಿದ ಹಸೆಯಾ ಬೆಳ್ಳಿ ಮೋಡ 
ಬರೆದೋಡುತಿದೆ ಸಂಜೆ ಹೆಣ್ಣು ಒಂದು ಕೆಂಪು ಕೆರೆಯ ಕಂಡು
ಆ ಶೃತಿಗಳು ಓಡಲೂ ಹಿತವಾಗುತ್ತಿದೇ
ನಿಂತಿಹ ಗಿರಿ ಸಾಲಲಿ ನವಿಲಿನ ಗರಿ ಗರಿಯಲಿ 
ಹರಿಯುವ ನದಿ ಅಲೆಯಲ್ಲಿ ಬದುಕಿನ ಪ್ರತಿ ಕ್ಷಣದಲ್ಲಿ 
ಹೊಸ ರೂಪವ ದಿನವೂ ನೋಡಿ ಸೋತೆ 
ಸೊಗಸು ಕಣ್ಣ ಸೆಳೆದಿದೆ ಮನಸು ಹಾಡಿ ಕುಣಿದಿದೆ 
ಹೊಸ ಲೋಕವೂ ಹೊಸ ನಾಕವೂ ಹೊಸ ಆಗಸವೋ 
ಮುಗಿಲಲೂ ಸೊಬಗಿದೇ ಭುವಿಯಲೂ ಸೊಬಗಿದೇ 
ನನ್ನಾಸೆ ಹೇಳಲಾರೇ ಕನಸೋ ನಿಜವೋ 
ಸೊಗಸು ಕಣ್ಣ ಸೆಳೆದಿದೆ ಮನಸು ಹಾಡಿ ಕುಣಿದಿದೆ 
-------------------------------------------------------------------------------------------------------------

ರವಿವರ್ಮ (1992) - ರವಿವರ್ಮ ಬರೆದಂತ ಬೊಂಬೆ ನಾನೂ 
ಸಾಹಿತ್ಯ: ಚಿ.ಉದಯಶಂಕರ್ ಸಂಗೀತ: ಉಪೇಂದ್ರಕುಮಾರ್ ಹಾಡಿದವರು: ಮನು, ಎಸ್.ಜಾನಕೀ  

ಹೆಣ್ಣು : ಹೇಹೇ .. ಹೋ ಹೋ ಹೋ ಹೋ 
          ರವಿವರ್ಮ ಬರೆದಂತ ಬೊಂಬೆ ನಾನೂ ನಿನಗೆಂದೇ ಬಂದಂತ ರಂಭೆ ನಾನೂ 
          ರವಿವರ್ಮ ಬರೆದಂತ ಬೊಂಬೆ ನಾನೂ ನಿನಗೆಂದೇ ಬಂದಂತ ರಂಭೆ ನಾನೂ 
          ನನ್ನ ಜಾಣ ಭುಗಿಲೆದ್ದ ಜ್ವಾಲೆಯನ್ನು ನಾನು ತಾಳೇನೂ 
ಗಂಡು : ರವಿವರ್ಮ ಬರೆದಂತ ಬೊಂಬೆ ನೀನೂ ನನಗೆಂದೇ ಬಂದಂತ ರಂಭೆ ನೀನೂ 
            ರವಿವರ್ಮ ಬರೆದಂತ ಬೊಂಬೆ ನೀನೂ ನನಗೆಂದೇ ಬಂದಂತ ರಂಭೆ ನೀನೂ 
            ನನ್ನ ಜಾಣೆ ನಿನಗಾಗೇ ಕಾದು ನಿಂತ ಸ್ನೇಹ ಜೀವಿ ನಾ 

ಹೆಣ್ಣು : ಭುಗಿಲೆದ್ದ ಜ್ವಾಲೆಯನ್ನೂ ನಾನು ತಾಳೆ ನಾ 
ಗಂಡು : ನಿನ್ನಯ ಕಳೆದಿರುವೇ ನನ್ನೆಯ ನೆನಪಿನಲಿ 
ಹೆಣ್ಣು : ಬಂಧನ ಬಯಸುತಲೇ ಬಂಧೀಹೇ ತೋಳಿನಲಿ 
ಗಂಡು : ಕೆರಳುತ್ತಿದ್ದೇ ಯೌವ್ವನವೂ 
ಹೆಣ್ಣು : ಕಳಚುತ್ತಿದೆ ಸಂಯವವು 
ಗಂಡು : ನಿನಗಾಗೇ ಹುಟ್ಟಿ ಬಂದೆ ಪ್ರೇಮ ಹಂಚಲೂ 
ಹೆಣ್ಣು : ರವಿವರ್ಮ ಬರೆದಂತ ಬೊಂಬೆ ನಾನೂ ನಿನಗೆಂದೇ ಬಂದಂತ ರಂಭೆ ನಾನೂ 
          ನನ್ನ ಜಾಣ ಭುಗಿಲೆದ್ದ ಜ್ವಾಲೆಯನ್ನು ನಾನು ತಾಳೇನೂ 

ಹೆಣ್ಣು : ರಸಮಯ ಇರುಳಿನಲಿ ರಸಿಕತೆ ಅರಳುತ್ತಿದೆ 
ಗಂಡು : ಪ್ರಣಯದ ಪಯಣದಲಿ ಖುಷಿಯನು ಅರಸುತ್ತಿದೆ 
ಹೆಣ್ಣು : ಚಂದ್ರಮನು ಬೆಳಗಿರಲೂ 
ಗಂಡು : ತಾರೆಗಳೂ ಮಿನುಗಿರಲೂ 
ಹೆಣ್ಣು : ತುಟಿಯಿಂದ ಜೇನು ಹೀರೂ ಏಕೇ ಯೋಚನೇ 
ಗಂಡು : ರವಿವರ್ಮ ಬರೆದಂತ ಬೊಂಬೆ ನಾನೂ ನಿನಗೆಂದೇ ಬಂದಂತ ರಂಭೆ ನಾನೂ 
           ನನ್ನ ಜಾಣ ಭುಗಿಲೆದ್ದ ಜ್ವಾಲೆಯನ್ನು ನಾನು ತಾಳೇನೂ 
           ನನ್ನ ಜಾಣೆ ನಿನಗಾಗೇ ಕಾದು ನಿಂತ ಸ್ನೇಹ ಜೀವಿ ನಾ 
ಹೆಣ್ಣು : ರವಿವರ್ಮ ಬರೆದಂತ ಬೊಂಬೆ ನಾನೂ ನಿನಗೆಂದೇ ಬಂದಂತ ರಂಭೆ ನಾನೂ 
          ರವಿವರ್ಮ ಬರೆದಂತ ಬೊಂಬೆ ನಾನೂ ನಿನಗೆಂದೇ ಬಂದಂತ ರಂಭೆ ನಾನೂ 
          ನನ್ನ ಜಾಣ ಭುಗಿಲೆದ್ದ ಜ್ವಾಲೆಯನ್ನು ನಾನು ತಾಳೇನೂ 
-------------------------------------------------------------------------------------------------------------

No comments:

Post a Comment