ಭೂಮಿತಾಯಿಯ ಚೊಚ್ಚಲ ಮಗ ಚಲನಚಿತ್ರದ ಹಾಡುಗಳು
- ನೇಸರ ನೇಸರ, ಸುಂದರ ನೇಸರ
- ಸಾಪಾನಿಸ ವರ್ಲ್ದಲ್ಲೇ ಡೀಪೇಸ್ಟ್
- ಕೆಂಪು ಧೂಳಿನ ಕೆಂಧೂಳಿ
- ಭೂಮಿ ತಾಯಿಯ
- ನಾ ಪ್ರೀತಿಯ ಹುಡುಗ
- ಜುಮುಕಾ ಜುಮುಕಾ ಝಂ ಝಂ
ಭೂಮಿತಾಯಿಯ ಚೊಚ್ಚಲಮಗ (೧೯೯೮) - ನೇಸರ ನೇಸರ, ಸುಂದರ ನೇಸರ
ಸಂಗೀತ: ಹಾಗು ಸಾಹಿತ್ಯ: ವಿ.ಮನೋಹರ್ ಗಾಯನ : ಚಿತ್ರಾ
ನೇಸರ ನೇಸರ, ಸುಂದರ ನೇಸರ ಬಂದೇ ಬರುವನು, ಸುಂದರ ನೇಸರ
ಎದೆ ತುಂಬ ಬೆಳಗೊ ಪ್ರೇಮದ ನೇಸರ ನೇಸರ
ನೇಸರ ನೇಸರ, ಸುಂದರ ನೇಸರ ಬಂದೇ ಬರುವನು, ಸುಂದರ ನೇಸರ
ಎದೆ ತುಂಬ ಬೆಳಗೊ ಪ್ರೇಮದ ನೇಸರ ನೇಸರ
ಸುತ್ತೋ ಭೂಮಿ, ಪುಟ್ಟ ಭೂಮಿ ಇಲ್ಲೇ ಮತ್ತೊಮ್ಮೆ ಭೇಟಿ
ಎಲ್ಲಾ ಮೀಟಿ, ಎಲ್ಲವ ದಾಟಿ ಗೆಲ್ಲೋದು ಪ್ರೀತಿಯ ದಾಟಿ
ಕಹಿಯ ಕಣ್ಣೀರಿಗೆ ಮನದಿ ಮನೆ ನೀಡದೆ
ನಗುವ ಪ್ರೀತಿಸು ಒಲವೆಂಬ ದೀಪ ಹೃದಯದ
ನೇಸರ ನೇಸರ ನೇಸರ ನೇಸರ, ಸುಂದರ ನೇಸರ
ಬಂದೇ ಬರುವನು, ಸುಂದರ ನೇಸರ
ಎದೆ ತುಂಬ ಬೆಳಗೊ ಪ್ರೇಮದ ನೇಸರ ನೇಸರ
ನೆರಳು ಬಿಸಿಲು, ಕಮಲ ಕೆಸರು ಜೊತೆಗೆ ಇರುವುದೆ ಬದುಕು
ಕಹಿಯ ನೆನಪು, ನೀಗಿಸಲೆಂದೆ ಮರೆವು ಸೃಷ್ಟಿಯ ವರವು
ಉದುರೊ ಹೂ ಸಾವಿರ ಅರಳೊ ಹೂ ಸಾವಿರ
ಕಳೆದುದೇನಿದೆ ಕನಸನ್ನು ಕಾಣುವಾಸೆಯೆ
ನೇಸರ ನೇಸರ ನೇಸರ ನೇಸರ, ಸುಂದರ ನೇಸರ
ಬಂದೇ ಬರುವನು, ಸುಂದರ ನೇಸರ
ಇರುಳೆಲ್ಲ ದೂರ ಸರಿಸಿ ನಗುವ ನೇಸರ ನೇಸರ

-------------------------------------------------------------------------------------
ಭೂಮಿತಾಯಿಯ ಚೊಚ್ಚಲಮಗ (೧೯೯೮) - ಸಾಪಾನಿಸ ವರ್ಲ್ದಲ್ಲೇ ಡಿಪೆಸ್ಟ್
ಸಂಗೀತ: ಹಾಗು ಸಾಹಿತ್ಯ: ವಿ.ಮನೋಹರ್ ಗಾಯನ : ರಾಜೇಶ, ಕೋರಸ್
ಸಾಪನಿಸಾ... ವರ್ಲ್ಡಲ್ಲೇ ಡೀಪೇಸ್ಟ್ ನಮ್ಮ ಫ್ರೆಂಡ್ಶೀಪ್ ತಲುಪಿದೆ ಎವರೆಸ್ಟ್
ಸಾಪನಿಸಾ... ವರ್ಲ್ಡಲ್ಲೇ ಡೀಪೇಸ್ಟ್ ನಮ್ಮ ಫ್ರೆಂಡ್ಶೀಪ್ ತಲುಪಿದೆ ಎವರೆಸ್ಟ್
ಹೇ... ಫ್ರೆಂಡಶೀಪ್ ರೆಡಿ ರೆಡಿ ರೆಡಿ ರೆಡಿ
ಫ್ರೆಂಡಶೀಪ್ ವೈರಿಗೆ ಫ್ಲೈಟ್ ಸೂಪರ್ ಹತ್ತು ಬ್ರದರ್ ಲೈಫ್ ಲಾಂಗ್ ಎಂಜಾಯಿಂಗೆ
ಚಲಿಸುವ ಕಾರಿನ ಸ್ಟ್ರಿರಿಂಗ್ ತರಹ ನೆನಪಿಗೆ ಕೊಡುವ ಡೈಮಂಡ್ ರಿಂಗ್ ತರಹ
ನನ್ನಾ ಸ್ನೇಹವು ಒಂದೋ ಎರಡು ದೇಹವು
ಕಲರಫೂಲ್ ಹೊಂಗನಸ ರಿಯಲ್ ಆಗಿ ತರುವ
ಸ್ನೇಹದ ಬೆಸುಗೆಯ ಅರ್ಥವನ್ನು ಸಾರುವ
ಸಾಪನಿಸಾ... ವರ್ಲ್ಡಲ್ಲೇ ಡೀಪೇಸ್ಟ್ ನಮ್ಮ ಫ್ರೆಂಡ್ಶೀಪ್ ತಲುಪಿದೆ ಎವರೆಸ್ಟ್
ಹೇ... ಫ್ರೆಂಡಶೀಪ್ ರೆಡಿ ರೆಡಿ ರೆಡಿ ರೆಡಿ
ಹ್ಹಾ... ಸಕ್ಸಸ್ ಅನ್ನೋ ಸಿಕ್ಸರ್ ಹೊಡಿಯೋ ಫ್ರೆಂಡಶಿಫಗೇ ಬ್ಯಾಟು ಬೇಕಣ್ಣ
ಪ್ಲಸು ಮೈನಸ್ ಹಾರ್ಟಲ್ಲಿ ಲೈಟಣ್ಣ
ಜಗಳ ಇಲ್ಲದ ಲೋಕವ ನಾವು ಸೇರಿ ಕಟ್ಟುವ
ಹಿಸ್ಟರಿ ಬುಕ್ಕಿನಲ್ಲಿ ನಮ್ಮ ಕಥೆ ಬರಲಿ ಸ್ಕೂಲಿನ ಪಾಠದಲ್ಲಿ ನಮ್ಮ ಕಥೆ ಇರಲೀ
ಸಾಪನಿಸಾ... ವರ್ಲ್ಡಲ್ಲೇ ಡೀಪೇಸ್ಟ್ ನಮ್ಮ ಫ್ರೆಂಡ್ಶೀಪ್ ತಲುಪಿದೆ ಎವರೆಸ್ಟ್
ಹೇ... ಫ್ರೆಂಡಶೀಪ್ ರೆಡಿ ರೆಡಿ ರೆಡಿ ರೆಡಿ
ಫ್ರೆಂಡಶೀಪ್ ವೈರಿಗೆ ಫ್ಲೈಟ್ ಸೂಪರ್ ಹತ್ತು ಬ್ರದರ್ ಲೈಫ್ ಲಾಂಗ್ ಎಂಜಾಯಿಂಗೆ
------------------------------------------------------------------------------------
ಭೂಮಿತಾಯಿಯ ಚೊಚ್ಚಲಮಗ (೧೯೯೮) - ಕೆಂಪು ಧೂಳಿನ ಕೆಂಧೂಳಿ
ಸಂಗೀತ: ಹಾಗು ಸಾಹಿತ್ಯ: ವಿ.ಮನೋಹರ್ ಗಾಯನ : ರಾಜೇಶ, ರಮೇಶಚಂದ್ರ, ಚಿತ್ರಾ
ಗಂಡು : ಲೇ...ಲೆಲೆಲೆ ಲೇ ಲೇಲೆ ಲೇ
ಕೆಂಪು ಕೆಂಪಿನ ಕೆಂಧೂಳಿ ರಂಗು ತುಂಬಿದ ರಂಗೋಲಿ ಓಕುಳಿಯ ಚೆಲ್ಲೊಳು ಬಗೆಬಗೆ
ಹೆಣ್ಣು : ಓಡಿ ಬಾರೆ ಸುರಗಂಗೆ ತೇಲಿ ಬಾರೆ ಹರಗಂಗೆ ಧುಮುಕಿ ಬಾರೆ ಜಲಗಂಗೆ ಊರಿಗೆ
ಕೋರಸ್ : ಗಂಗವ್ವಾ ಬಾರವ್ವಾ ನೀರ ತಾರವ್ವ ಜೇನ ತಂಗವ್ವ ಬಾನ ತಂಗವ್ವ
ಗಂಡು : ಆಹ್ ಲೇ...ಲೆಲೆಲೆ ಲೇ ಲೇಲೆ ಲೇ
ಗಂಡು : ಬೆಳ್ಳಿ ಬೆಟ್ಟದಾ ಚಿನ್ನ ಮಲ್ಲನ ಕಾಲ ರುದ್ರನ ಜೊತೆಯೋ ಗಣ ಸಿರಿ ಝರಿ
ನಿನ್ನ ನಂಬಿದ ಕೋಟಿ ಜೀವವ ಪ್ರಾಣವಾದಿಯವ್ವಾ
ಹೆಣ್ಣು : ಚೆಂದ ಈ ಭೂಮಿಗೆ ಬಂಧುವು ನಿನವ್ವ ಹಸಿರಿನ ಪಸುರಿಗೆ ಉಸಿರ ಕೊಡವ್ವ
ಬಣ್ಣ ಬಣ್ಣ ಕುಸುರಿಯ ಕುಸುಮದ ಓಕುಳಿಯ ಬಯಲಲು ಹೊಲದಲು ಆಡಿಸುತಿರವ್ವ
ಗಂಡು : ಆಹ್ ಲೇ...ಲೆಲೆಲೆ ಲೇ ಲೇಲೆ ಲೇ
ಕೆಂಪು ಕೆಂಪಿನ ಕೆಂಧೂಳಿ ರಂಗು ತುಂಬಿದ ರಂಗೋಲಿ ಓಕುಳಿಯ ಚೆಲ್ಲೊಳು ಬಗೆಬಗೆ
ಗಂಡು : ನೀರು ಇಲ್ಲದೆ ಬಾಳದೋಣಿಯು ಮುಂದೆ ಸಾಗದು
ಬರಗಾಲ ತೊಲಗಿಸದಿರೆ ಕೋಟಿ ಬರಹವು ಸಾಟಿಯಲ್ಲವು ಹ್ಯಾಂಗ್ ಹೊಗಳಲವ್ವಾ
ಹೆಣ್ಣು : ಹರಸುತ ಹರಿಯುವ ಜಗದಲಿ ಹಿರಿಯವ್ವ ಬೆಳೆಗಳ ಬೆಳೆಸುವ ಮಳೆಯ ತಾರವ್ವಾ
ಮಮತೆಯ ಸುಧೆಯು ನೀ ಜಗವನ ಒಲವಲಿ ಸಲಹುವ ಮಾಯವೇ ನೀನು ನಮ್ಮವ್ವ
ಗಂಡು : ಆಹ್ ಲೇ...ಲೆಲೆಲೆ ಲೇ ಲೇಲೆ ಲೇ
ಕೆಂಪು ಕೆಂಪಿನ ಕೆಂಧೂಳಿ ರಂಗು ತುಂಬಿದ ರಂಗೋಲಿ ಓಕುಳಿಯ ಚೆಲ್ಲೊಳು ಬಗೆಬಗೆ
ಹೆಣ್ಣು : ಓಡಿ ಬಾರೆ ಸುರಗಂಗೆ ತೇಲಿ ಬಾರೆ ಹರಗಂಗೆ ಧುಮುಕಿ ಬಾರೆ ಜಲಗಂಗೆ ಊರಿಗೆ
ಕೋರಸ್ : ಗಂಗವ್ವಾ ಬಾರವ್ವಾ ನೀರ ತಾರವ್ವ ಜೇನ ತಂಗವ್ವ ಬಾನ ತಂಗವ್ವ
ಗಂಡು : ಆಹ್ ಲೇ...ಲೆಲೆಲೆ ಲೇ ಲೇಲೆ ಲೇ
------------------------------------------------------------------------------------
ಭೂಮಿತಾಯಿಯ ಚೊಚ್ಚಲಮಗ (೧೯೯೮) - ಭೂಮಿ ತಾಯಿಯ
ಸಂಗೀತ: ವಿ.ಮನೋಹರ್ ಸಾಹಿತ್ಯ: ದ.ರಾ.ಬೇಂದ್ರೆ ಗಾಯನ : ಡಾ||ರಾಜಕುಮಾರ
ಭೂಮಿ ತಾಯಿಯ ಚೊಚ್ಚಲ ಮನಸನು ಕಣ್ತೆರೆದೊಮ್ಮೆ ನೋಡಿದಿರೇನು
ಭೂಮಿ ತಾಯಿಯ ಚೊಚ್ಚಲ ಮನಸನು ಕಣ್ತೆರೆದೊಮ್ಮೆ ನೋಡಿದಿರೇನು
ನೋಡಿದಿರೇನೂ... ಕಣ್ತೆರೆದೊಮ್ಮೆ ನೋಡಿದಿರೇನು
ನೋಡಿದಿರೇನೂ... ಕಣ್ತೆರೆದೊಮ್ಮೆ ನೋಡಿದಿರೇನು
ಮುಗಿಲೆಂಬುವುದು ಕಿಸಿಯಿತು ಹುಲ್ಲು ಬಂದಾ ಬೆಲೆಯೂ ಮಿಡಿಚಿಯ ಮೇವು
ಬಿತ್ತಿದ್ದಾಯಿತು ಉತ್ತಿಹ ಮಣ್ಣು ದಿನವೂ ಸಂಜೆಗೆ ಬೆವರಿನ ಜಳಕ
ಉಸಿರಿನ ಕೂಳಿಗೆ ಕಂಬನಿ ನೀರು ಹೊಟ್ಟೆಯು ಹತ್ತಿತು ಬೆನ್ನಿನ ಬೆನ್ನು
ಭೂಮಿ ತಾಯಿಯ ಚೊಚ್ಚಲ ಮನಸನು ಕಣ್ತೆರೆದೊಮ್ಮೆ ನೋಡಿದಿರೇನು
ನೋಡಿದಿರೇನೂ... ಕಣ್ತೆರೆದೊಮ್ಮೆ ನೋಡಿದಿರೇನು
ಎದೆಯ ಗೂಡಿನೊಳು ಚಿಂತೆಯ ಗೂಬೆ ಮಿದುಳಿನ ಮೂಲೆಗೆ ಲೊಚ ಲೊಚ ಹಲ್ಲಿ
ಮೊರೆಯು ಸಾವನು ಅಣುಕಿಸುತಿಹುದು ಕೊರಳಿಗೆ ಹತ್ತಿದೆ ಸಾಲದ ಶೂಲ
ಆದರೂ ಬರದೋ ಯಮನಿಗೆ ಕರುಣಾ ಉಸಿರಿಗೆ ಒಮ್ಮೆ ಜನನಾ ಮರಣಾ
ಉಸಿರಿಗೆ ಒಮ್ಮೆ ಜನನಾ ಮರಣಾ
ಭೂಮಿ ತಾಯಿಯ ಚೊಚ್ಚಲ ಮನಸನು ಕಣ್ತೆರೆದೊಮ್ಮೆ ನೋಡಿದಿರೇನು
ನೋಡಿದಿರೇನೂ... ಕಣ್ತೆರೆದೊಮ್ಮೆ ನೋಡಿದಿರೇನು
ನರಗಳ ನೂಲಿನ ಪರೆ ಪರೆ ಚೀಲ ತೆರೆ ತೆರೆಯಾಗಿದೆ ಗಿರಿ ಗಿರಿಯಾಗಿದೆ
ಅದರಳೊಂದು ಎಲುಬಿನ ಬಲೆಯು ಟುಕುಟುಕು ಡುಗುಡುಗು
ಉಲಿಯುವ ನರಳುವ ಜೀವದ ಜಂತು ಹೊರಳುತ ಉರುಳುತ
ಜನುಮವೆಂಬುವ ಕತ್ತಲೆಯಲ್ಲಿ ಬಿದ್ದಿದೆ ಒಳಗೆ ಹೇಗೋ ಬಂದು
ಸಾವಿನ ಬೆಳಕದು ಕಾಣುವುದೆಂದೋ ಎಂದೋ.. ಎಂದೋ.. ಎಂದೋ.. ಎಂದು
ಕನವರಿಸುವುದು ತಳಮಳಿಸುವುದು....
ಕನವರಿಸುವುದು ತಳಮಳಿಸುವುದು
ಭೂಮಿ ತಾಯಿಯ ಚೊಚ್ಚಲ ಮನಸನು ಕಣ್ತೆರೆದೊಮ್ಮೆ ನೋಡಿದಿರೇನು
ನೋಡಿದಿರೇನೂ... ಕಣ್ತೆರೆದೊಮ್ಮೆ ನೋಡಿದಿರೇನು
ನೋಡಿದಿರೇನೂ... ಕಣ್ತೆರೆದೊಮ್ಮೆ ನೋಡಿದಿರೇನು
------------------------------------------------------------------------------------
ಭೂಮಿತಾಯಿಯ ಚೊಚ್ಚಲಮಗ (೧೯೯೮) - ನಾ ಪ್ರೀತಿಯ ಹುಡುಗ
ಸಂಗೀತ: ಹಾಗು ಸಾಹಿತ್ಯ: ವಿ.ಮನೋಹರ್ ಗಾಯನ : ರಾಜೇಶ, ಸೌಮ್ಯ
ಗಂಡು : ನಾ ಪ್ರೀತಿಯ ಹುಡುಗ ನೀ ಜಂಭದ ಹುಡುಗಿ
ಹೆಣ್ಣು : ನೀ ಮೋಸದ ಹುಡುಗ ನಾ ಪ್ರೀತಿಯ ಹುಡುಗಿ
ಗಂಡು : ನಾನೇ ರಿಯಲ್ ಲವರ್ ನೀ ಬಾಳುವ ಫೀಜಾ ಟವರ್ ಗೊತ್ತೇನೆ ನಿನಗೆ ಲವ್ವಿಗೆ ಇರುವ ಪವರ್
ಹೆಣ್ಣು : ಹಾರ್ಟ್ ಇಲ್ಲದ ಪೇಷಂಟ್ ನಿನ್ನ ಲವ್ ಒಂದು ಕೈಕೊಡೋ ಕರೆಂಟ್
ಮನಸಲಿ ಇದ್ದು ಆಗದೆ ಉದುರೋ ನೀ ಕಲಬರಕೆ ಸಿಮೆಂಟ್
ಗಂಡು : ಛೇ ... ಐ ಹೆಟ್ ಯೂ ಹೆಣ್ಣು : ಐ ಕಿಲ್ ಯೂ
ಗಂಡು : ನೋ ನೋ ನೋ ಡೋಂಟ್ ಕಿಲ್ ಮೀ ಹೇ..ಹೇ..ಹೇ..ಪ್ಲೀಸ್ ಕಿಸ್ ಮೀ
ಸ್ಟಾಪ ದಿ ವಾರ್ ಪ್ಲೀಸ್ ಸ್ಟಾಪ್ ದಿ ವಾರ್
ಗಂಡು : ನಾ ಪ್ರೀತಿಯ ಹುಡುಗ ನೀ ಜಂಭದ ಹುಡುಗಿ
ಹೆಣ್ಣು : ನೀ ಮೋಸದ ಹುಡುಗ ನಾ ಪ್ರೀತಿಯ ಹುಡುಗಿ
ಗಂಡು : ಲವ್ ಅಂದ್ರೆ ಸ್ಲೋ ಪಾಯಿಜನ್ ಹುಡುಗಿ ಒಲಿದೆ ಇರೋ ಮೈ ಟೆನಷನ್
ರೋಮಿಯೋ ಸತ್ತ ಮಜನು ಸತ್ತ ಆದರೂ ಮುಗಿಯದ ಟೆನಷನ್
ಹೆಣ್ಣು : ಲವ್ ಅಂದ್ರೆ ಒಂದು ಮ್ಯೂಜಿಕ್ ಅದು ಕೇಳದ ಕಿವುಡನ ಬ್ಯಾಡ್ ಲಕ್
ಲವ್ವಕೆ ಬರಿ ಭಾಷಣ ಮಾಡಿ ಮಾಡೋದೆಲ್ಲ ಲಿಪಸ್ಟಿಕ್
ಗಂಡು : ಹೇ... ಐ ಕಿಕ್ ಯೂ ಹೆಣ್ಣು : ಹೇ... ಐ ಕಿಲ್ ಯೂ
ಗಂಡು : ನೋ ನೋ ನೋ ಡೋಂಟ್ ಕಿಲ್ ಮೀ ಹೇ..ಹೇ..ಹೇ..ಪ್ಲೀಸ್ ಕಿಸ್ ಮೀ
ಸ್ಟಾಪ ದಿ ವಾರ್ ಪ್ಲೀಸ್ ಸ್ಟಾಪ್ ದಿ ವಾರ್ ಲವ್ ಮಾಡೋ ಏಜಲಿ ಯಾಕಮ್ಮಾ ಈ ಕದನ
ಗಂಡು : ಹೂವಿನ ಬಾಣ ಬಿಡೋ ಮದನ ಎವ್ರಿಬಡಿ ದೇರ್ ಇನ್ ಲವ್ ವಾರ್
ಮನಸು ತಿಳಿದರೆ ಪ್ರಾಬ್ಲಮ್ಮೇ ಇರಲ್ಲ
ಹೆಣ್ಣು : ನೋ ನೋ ನೋ ವೀ ಹೇಲ್ಟಿಚರ್ ನೋ ನೋ ಲವ್ ಬ್ರದರ್
ಗಂಡು : ಇಷ್ಟೆಲ್ಲಾ ರಿಕ್ವೆಸ್ಟ್ ಮಾಡಿ ಪ್ರೀತಿಸಲು ಒಲ್ಲದ ಜೋಡಿ
ನನ್ ಮಾತು ಕೇಳಲ್ಲಾಂದ್ರೆ ನಂಗ್ಯಾಕೆ ಬೇಕಿ ಬಾಡಿ
ಇಫ್ ಯೂ ಓನ್ ಡಿಸೈಡ್ ಐ ಯಾಮ್ ಕಮ್ ಏ ಸೂಸೈಡ್
ಐಟಂ ನಂಬರ್ ಒನ್ ಜಂಪಿಂಗ್ ಫ್ರಮ್ ದಿ ಟಿಪ್ಪು ಡ್ರಾಪ್
ಐಟಂ ನಂಬರ್ ಟೂ ಸ್ವಾಲೋ ಇನ್ ಡೈಮೆಂಡ್
ಐಟಂ ನಂಬರ್ ತ್ರೀ ಹ್ಯಾಗಿಂಗ್ ಮೈ ಸೆಲ್ಫ್ ನೋ ನೋ
ಗಂಡು : ಏ ..ಪ್ರೀತಿಯ ಹುಡುಗಿ ಐ ಲವ್ ಯು ಫಾರೆವರ್
ಹೆಣ್ಣು : ಏ ..ಪ್ರೀತಿಯ ಹುಡುಗ ಐ ಲವ್ ಯು ಫಾರೆವರ್
ಗಂಡು : ನೀನೇ ರಿಯಲ್ ಲವರ್ ಈ ಲವ್ವಿಗೆ ಎಂಥಾ ಕಲರ್
ಇಬ್ಬರು : ಲವ್ ಇಲ್ಲಾಂದ್ರೆ ನೋ ಲೈಫ್ ಈ ಲವ್ವೆಗೆ ಗ್ರೇಟೆಸ್ಟ್ ಪವರ್
-----------------------------------------------------------------------------------
ಭೂಮಿತಾಯಿಯ ಚೊಚ್ಚಲಮಗ (೧೯೯೮) - ಜುಮುಕಾ ಜುಮುಕಾ ಝಂ ಝಂ
ಸಂಗೀತ: ಹಾಗು ಸಾಹಿತ್ಯ: ವಿ.ಮನೋಹರ್ ಗಾಯನ : ರಾಜೇಶ, ಸೌಮ್ಯ
ಗಂಡು : ಜುಮುಕಾ ಜುಮುಕಾ ಝಂ ಝಂ ಝಂ ಝಂ ಝಂ ಝಂ
ಮೈ ಅಲ್ಲಾ ಗಮಕಾ ತಕಝಮ್ ತಕಝಮ್
ಸೇರುವ ತನಕಾ.... ಹ್ಹಾಂ ನಿಲ್ಲದು ಮನಸೂ .... ಹ್ಹಾಂ ಅಪ್ಪಿಕೋ ನನ್ನ ಡಾರ್ಲಿಂಗ್
ಜುಮುಕಾ ಜುಮುಕಾ ಝಂ ಝಂ ಝಂ ಝಂ ಝಂ ಝಂ
ಮೈ ಅಲ್ಲಾ ಗಮಕಾ ತಕಝಮ್ ತಕಝಮ್
ಹೆಣ್ಣು : ಮಳೆ ಬರುವಂತೆ ಹೆಂಚಾದ ಭೂಮಿಯ ಹಾಗೆ ಧಗ ಧಗ ದಾಹ ಮೈಯೆಲ್ಲಾ ಬೆಂಕಿಯ ಬೇಗೆ
ಗಂಡು : ಹ್ಹಾಂ ಹ್ಹಾಂ ಹ್ಹಾಂ... ತುಟಿಯಲೇ ನಿನ್ನ ಮೈಯೆಲ್ಲ ತಣಿಸುವೆ ಹೀಗೆ
ಮರವನು ಮುಟ್ಟೋ ಮುಂಜಾನೆ ಮಂಜಿನ ಹಾಗೆ
ಜುಮುಕಾ ಜುಮುಕಾ ಝಂ ಝಂ ಝಂ ಝಂ ಝಂ ಝಂ
ಮೈ ಅಲ್ಲಾ ಗಮಕಾ ತಕಝಮ್ ತಕಝಮ್
ಹೆಣ್ಣು : ಎದೆಯಲಿ ದುಂಬಿಯ ಝೇಂಕಾರ ಪ್ರೇಮದ ರಾಗ (ಅರೆರೆರೆರೇ)
ಅಲೆ ಅಲೆ ಉಕ್ಕಿ ಮೈಯೆಲ್ಲಾ ಪ್ರೇಮ ಪರಾಗ
ಗಂಡು : ಹ್ಹಾಂ ಹ್ಹಾಂ ಹ್ಹಾಂ... ಪ್ರೇಮವು ಹೀಗೆ ಜೋರಾದ ಗಾಳಿಯ ವೇಗ
ಬೆರೆತರೆ ಪ್ರೇಮದ ಸಂಗೀತ ಕೇಳುವ ಯೋಗ
ಜುಮುಕಾ ಜುಮುಕಾ ಝಂ ಝಂ ಝಂ ಝಂ ಝಂ ಝಂ
ಮೈ ಅಲ್ಲಾ ಗಮಕಾ ತಕಝಮ್ ತಕಝಮ್
ಸೇರುವ ತನಕಾ.... ಹ್ಹಾಂ ನಿಲ್ಲದು ಮನಸೂ .... ಹ್ಹಾಂ ಅಪ್ಪಿಕೋ ನನ್ನ ಡಾರ್ಲಿಂಗ್
ಜುಮುಕಾ ಜುಮುಕಾ ಝಂ ಝಂ ಝಂ ಝಂ ಝಂ ಝಂ
ಮೈ ಅಲ್ಲಾ ಗಮಕಾ ತಕಝಮ್ ತಕಝಮ್
----------------------------------------------------------------------------------
No comments:
Post a Comment