506. ಪ್ರೇಮ ತರಂಗ (೧೯೯೦)


ಪ್ರೇಮ ತರಂಗ ಚಲನಚಿತ್ರದ ಹಾಡುಗಳು 
  1. ನೀ ಹೀಂಗ ನೋಡಬ್ಯಾಡ ನನ್ನ
  2. ಪ್ರಣಯ ಗೀತೆಯ 
  3. ಓಂ ಸತ್ಯಂ ಓಂ ಶಿವಂ 
ಪ್ರೇಮ ತರಂಗ (೧೯೯೦)........ನೀ ಹೀಂಗ ನೋಡಬ್ಯಾಡ ನನ್ನ
ಸಂಗೀತ :ಎಂ.ರಂಗರಾವ್  ಸಾಹಿತ್ಯ : ದ.ರಾ.ಬೇಂದ್ರೆ  ಗಾಯನ : ರಾಜಕುಮಾರ್ ಭಾರತಿ

ಹೂಂ.....ಹೂಂ.....ಹೂಂ.....ಹೂಂ.....ಹೂಂ.....
ನೀ ಹೀಂಗ ನೋಡಬ್ಯಾಡ ನನ್ನ ನೀ ಹೀಂಗ ನೋಡಿದರೆ ನನ್ನ
ತಿರುಗಿ ನಾ ಹ್ಯಾಂಗ ನೋಡಲೇ ನಿನ್ನ
ನೀ ಹೀಂಗ ನೋಡಬ್ಯಾಡ ನನ್ನ ನೀ ಹೀಂಗ ನೋಡಿದರೆ ನನ್ನ
ತಿರುಗಿ ನಾ ಹ್ಯಾಂಗ ನೋಡಲೇ ನಿನ್ನ

ದಾರೀಲಿ ನೆನೆದ ಕೈ ಹಿಡಿದೆ ನೀನು ತಣ್ಣಾಗ ಅಂತ ನಾ ತಿಳಿದು
ಬಿಡವೊಲ್ಲಿ ಇನ್ನುನೂ ಬೂದಿಮುಚ್ಚಿದ ಕೆಂಡ ಇದಂತ ಹೊಳೆದು
ಮುಗಿಲಿನ ಕಪ್ಪರಿಸಿ ನೆಲಕ ಬಿದ್ದರ ನೆಲಕ ನೆಲಿ ಎಲ್ಲಿನ್ನ...
ಆ ಗಾದಿ ಮಾತು ನಂಬಿ ನಾನು ದೇವರಂತ ತಿಳಿದಿಯೇನ ನೀ ನನ್ನ
ನೀ ಹೀಂಗ ನೋಡಬ್ಯಾಡ ನನ್ನ ನೀ ಹೀಂಗ ನೋಡಿದರೆ ನನ್ನ
ತಿರುಗಿ ನಾ ಹ್ಯಾಂಗ ನೋಡಲೇ ನಿನ್ನ

ಇಬ್ಬನ್ನಿ ತೊಳೆದರೂ ಹಾಲು ಮೆತ್ತಿದಾ ಕವಳ ಕಾoತೆಯ ಹಣ್ಣು
ಹೊಳೆ ಹೊಳೆವ ಹಾಂಗ್ ಕಣ್ಣಿರುವ ಹೆಣ್ಣ ಹೇಳು ನಿನ್ನವೇನ ಈ ಕಣ್ಣು
ದಿಗಿಲಾಗಿ ಅನ್ನತದ ಜೀವ ನಿನ್ನ ಕಣ್ಣಾರೆ ಕಂಡು ಒಮ್ಮಿಗಿಲ
ಹುಣ್ಣವೀ ಚಂದಿರನ ಹೆಣ ಬಂತೊ ಮುಗಿಲಾಗ ತೇಲತ ಹಗಲ
ನೀ ಹೀಂಗ ನೋಡಬ್ಯಾಡ ನನ್ನ ನೀ ಹೀಂಗ ನೋಡಿದರೆ ನನ್ನ
ತಿರುಗಿ ನಾ ಹ್ಯಾಂಗ ನೋಡಲೇ ನಿನ್ನ

ನಿನ ಕಣ್ಣಿನ್ಯಾಗ ಕಾಲೂರಿ ಮಳೆಯು ನಡ ನಡಕ ಹುಚ್ಚನಗಿ ಯಾಕ
ಹನಿ ಒಡೆಯಲಿಕ್ಕೆ ಬಂದಂಥ ಮೋಡ ತಡೆದ್ಹಾಂಗ ಗಾಳಿಯ ನೆವಕ
ಅತ್ತಾರೆ ಅತ್ತುಬಿಡು ಹೊನಲು ಬರಲಿ ನಕ್ಯಾಕೇ ಮರಸತೀ ದು:ಖ
ಎವೆಬಡಿಸಿ ಕೆಡವು ಬಿರಿಗಣ್ಣು ಬ್ಯಾಡ ತುಟಿಕಚ್ಚಿ ಹಿಡಿಯದಿರು ಬಿಕ್ಕ
ನೀ ಹೀಂಗ ನೋಡಬ್ಯಾಡ ನನ್ನ ನೀ ಹೀಂಗ ನೋಡಿದರೆ ನನ್ನ
ತಿರುಗಿ ನಾ ಹ್ಯಾಂಗ ನೋಡಲೇ ನಿನ್ನ
ನೀ ಹೀಂಗ ನೋಡಬ್ಯಾಡ ನನ್ನ ನೀ ಹೀಂಗ ನೋಡಿದರೆ ನನ್ನ
ತಿರುಗಿ ನಾ ಹ್ಯಾಂಗ ನೋಡಲೇ ನಿನ್ನ
ಹೂಂ.....ಹೂಂ.....ಹೂಂ.....ಹೂಂ.....ಹೂಂ.....
------------------------------------------------------------------------------------------------------------------------

ಪ್ರೇಮ ತರಂಗ (೧೯೯೦)........ಪ್ರಣಯ ಗೀತೆಯ ಹಾಡಿದೆ ಮನಸೂ
ಸಂಗೀತ :ಎಂ.ರಂಗರಾವ್ ಸಾಹಿತ್ಯ : ಉದಯರಾಜ ಗಾಯನ : ರಾಜಕುಮಾರ್ ಭಾರತಿ, ಬೆಂಗಳೂರು ಲತಾ


ಹೆಣ್ಣು : ಆಆಆ... ಆಆಆ.... ಆಆಆ...       
ಗಂಡು : ಆಆಆ... ಆಆಆ.... ಆಆಆ...
           ಪ್ರಣಯ ಗೀತೆಯ ಹಾಡಿದೆ ಮನಸೂ ನಿನ್ನನ್ನೂ ಬಳಿಗೆ ಕರೆದಿದೇ ವಯಸೂ 
           ಓ.. ನಲ್ಲೆ ಬಳಿ ಬಂದು ತೋಳಿಂದ ಬಳಸಿರಲೂ 
           ತನುವೆಲ್ಲಾ ಹಗುರಾಗೀ ಬಾನಲ್ಲಿ ತೇಲಿರಲೂ .. ತೇಲಿ.. ತೇಲಿ.. ಹೋಗುವೇ ನಾನೂ 
           ಹೊಸದೊಂದೂ ಲೋಕವ ಕಾಣುವೇ ನೀನೂ ..
           ಪ್ರಣಯ ಗೀತೆಯ ಹಾಡಿದೆ ಮನಸೂ 
ಹೆಣ್ಣು :  ಪ್ರಣಯ ಗೀತೆಯ ಹಾಡಿದೆ ಮನಸೂ ನಿನ್ನನ್ನೂ ಬಳಿಗೆ ಕರೆದಿದೇ ವಯಸೂ 
           ಓ.. ನಲ್ಲ ಬಳಿ ಬಂದು ತೋಳಿಂದ ಬಳಸಿರಲೂ 
           ತನುವೆಲ್ಲಾ ಹೂವಾಗೀ ನವಿಲಂತೇ ಕುಣಿದಿರಲೂ ಸೇರಿ.. ಸೇರಿ ಹೋಗುವೇ ನಾನೂ 
           ಹೊಸದೊಂದೂ ಲೋಕವ ಕಾಣುವೇ ನೀನೂ ..
           ಪ್ರಣಯ ಗೀತೆಯ ಹಾಡಿದೆ ಮನಸೂ 

ಹೆಣ್ಣು : ಆಆಆ... ಆಆಆ.... ಆಆಆ...          ಕೋರಸ್ : ಧಿಮಂತ್.. ಧಿಮಂತ್..ಧೀಮ್  ಧಿಮಂತನನನ .. ಧೀರನ 
ಹೆಣ್ಣು : ಆಆಆ... ಆಆಆ.... ಆಆಆ...         ಕೋರಸ್ : ಧಿಮಂತ್.. ಧಿಮಂತ್..ಧೀಮ್  ಧಿಮಂತನನನ .. ಧೀರನ 
ಹೆಣ್ಣು: ಮದನ.. ಮನ್ಮದನ  ಬಾ.. ಬಾ.. ಬಾ.. ಆಡೂ ಬಾ ಆಡೂ ಬಾ  ಸೇರೂ ಬಾ...  ಬಾ    
         ಮದನ ಮನ್ಮದನ ಮನ್ಮಥನೂ ನೀನಾಗಿ ಎದುರಲಿ ನಿಂತಾಗ ಹೂಬಾಣ ಹೂಡಿ ನನ್ನನ್ನೂ ಸೆಳೆದಾಗ 
         ಮನ್ಮಥನೂ ನೀನಾಗಿ ಎದುರಲಿ ನಿಂತಾಗ ಹೂಬಾಣ ಹೂಡಿ ನನ್ನನ್ನೂ ಸೆಳೆದಾಗ 
         ಶೃಂಗಾರ ರಾಗ.... ಆಆಆ... ಆಆಆ... ಆಆಆ... ಆಆಆ.... ಆಆಆ... 
         ಶೃಂಗಾರ ರಾಗ ಹಾಡುತಿರೇ ನೋಡೂ ನೀನಿಂದೇ ಬಂದೂ ವೈಭೋಗ ಹೀರೂ .. 
         ಮದನ.. ಮನ್ಮದನ  
ಗಂಡು : ರತಿಯೇ.. ಓ ರತಿಯೇ ..ಬಾ.. ಬಾ..ಬಾ.. ಆಡೂ ಬಾ ಹಾಡು ಬಾ ಸೇರು ಬಾ... ಬಾ.. 
            ರತಿಯೇ.. ಓ ರತಿಯೇ ರತಿಯಾಗಿ ನೀನೂ ಬಳಿ ಬಂದೇ ಏನೋ 
            ಕುಡಿ ನೋಟದಿಂದ ನನ್ನ ಸೆಳೆದೇ ಏನೋ ..  
           ರತಿಯಾಗಿ ನೀನೂ ಬಳಿ ಬಂದೇ ಏನೋ ಕುಡಿ ನೋಟದಿಂದ ನನ್ನ ಸೆಳೆದೇ ಏನೋ ..  
           ನೀ ಇಡಲೂ ಹೆಜ್ಜೇ .. ನೀ ಇಡಲೂ ಹೆಜ್ಜೇ .. ಅನುರಾಗ ಹೆಜ್ಜೇ ಶೃಂಗಾರ ಲೀಲಾ ಓ.. ರೋಣ ಏನೋ 
           ರತಿಯೇ.. ಓ ರತಿಯೇ .

ಗಂಡು : ಕಣ್ಣುಗಳೂ ಇರದಲೀ ದ್ವನಿಸಲೂ ದ್ವನಿಸಲೂ.. ಒಲವಿನ ಮಾತುಗಳೂ .. ಆಡಲೂ ಆಡಲೂ .. 
            ಕುಜಗಳೂ ಚಿಮ್ಮಿ  ಕುಣಿಯಲೂ.. ಕುಣಿಯಲೂ... ಕುಣಿಯಲೂ.. ಕುಣಿಯಲೂ.. 
ಕೋರಸ್ : ತನನನನ ದರನ ತನನನನಾನ
ಗಂಡು : ಹೃದಯಗಳೆರಡೂ ಸೇರಲೂ .. ಸೇರಲೂ .. ಭೋಗವೇ ಸಂಭೋಗವೇ.. ಭೋಗವೇ ಸಂಭೋಗವೇ 
ಹೆಣ್ಣು : ಆಆಆ... ಮದನನ ಚಿಮ್ಮಿ ಮಿಡಿಯಲೂ.. ಮಿಡಿಯಲೂ ತೊಡೆಯಳೆರಡೂ ಹೆಣೆಯಲೂ.. ಹೆಣೆಯಲೂ                
          ಸ್ವರ್ಗದ ಬಾಗಿಲೂ ತೆರೆಯಲೂ .. ತೆರೆಯಲೂ .. ಜಗವಲೀ ನಾವೂ ಮರೆಯಲೂ .. ಮರೆಯಲೂ .. 
          ಭೋಗವೇ ಸಂಭೋಗವೇ.. ಭೋಗವೇ ಸಂಭೋಗವೇ 
ಗಂಡು : ಆಆಆ... ಆಆಆ...               ಹೆಣ್ಣು :  ಆಆಆ... ಆಆಆ...  
ಗಂಡು : ಆಆಆ... ಆಆಆ...               ಹೆಣ್ಣು :  ಆಆಆ... ಆಆಆ...  
------------------------------------------------------------------------------------------------------------------------

ಪ್ರೇಮ ತರಂಗ (೧೯೯೦)........ ಓಂ ಸತ್ಯಂ ಓಂ ಶಿವಂ
ಸಂಗೀತ :ಎಂ.ರಂಗರಾವ್ ಸಾಹಿತ್ಯ : ಉದಯರಾಜ ಗಾಯನ : ಬೆಂಗಳೂರು ಲತಾ, ಕೋರಸ್  


ಕೋರಸ್ : ಓಂ ನಮಃ ಶಿವಾಯಃ     ಓಂ ನಮಃ ಶಿವಾಯಃ     
ಹೆಣ್ಣು : ಓಂ ಸತ್ಯಂ ...  (ಓಂ )  ಓಂ ಶಿವಂ...  (ಓಂ)  ಓಂ..  ರುಧ್ರಮ್ ..ಭದ್ರಂ ವೀರಭಧ್ರಮ್  (ಓಂ)
ಕೋರಸ್ : ಓಂ ನಮಃ ಶಿವಾಯಃ     ಓಂ ನಮಃ ಶಿವಾಯಃ
ಹೆಣ್ಣು : ಮೂಡಿ ಬಂದ ರವಿಯಿಂದ ವಾರೀಗಿಯ ಅಡಿಯಿಂದ
          ಮೂಡಿ ಬಂದ ರವಿಯಿಂದ ವಾರೀಗಿಯ ಅಡಿಯಿಂದ ಮೂಡಿ ಬಾ
          ಈ ಜಗದ ರಂಗದಲೀ ಆಡು ಬಾ..  ಓಂ..  ರುಧ್ರಮ್ ..ಓಂ ವೀರಭಧ್ರಮ್ 
 ಕೋರಸ್ : ಓಂ..  ರುಧ್ರಮ್ ...ಓಂ..  ವೀರಭಧ್ರಮ್ 

ಹೆಣ್ಣು : ಗಿರಿಯ ಮೇಲಿನಿಂದ ಹಾರೀ .. ಶಿಖರ ತುದಿಯಿಂದ ಜಾರೀ ..
          ಗಿರಿಯ ಮೇಲಿನಿಂದ ಹಾರೀ .. ಶಿಖರ ತುದಿಯಿಂದ ಜಾರೀ ..
          ತೊಟ್ಟ ತಪವ ಬಿಟ್ಟೂ ಬಾರೋ.. ಶಕ್ತಿಯೊಡನೇ ಕೂಡೀ  ಬಾರೋ
         ಸತ್ಯಂ ...  ಓ ಸತ್ಯಂ ...  ಭದ್ರಂ ವೀರಭದ್ರಂ ..
ಕೋರಸ್ : ಸತ್ಯಂ ...  ಓ ಸತ್ಯಂ ...  ಭದ್ರಂ ವೀರಭದ್ರಂ .. ಶಿವೋಮ್.. ಶಿವೋಮ್..ಶಿವೋಮ್..
------------------------------------------------------------------------------------------------------------------------

No comments:

Post a Comment