507. ಗುಣ ನೋಡಿ ಹೆಣ್ಣು ಕೊಡು (1982)


ಗುಣ ನೋಡಿ ಹೆಣ್ಣು ಕೊಡು ಚಿತ್ರದ ಹಾಡುಗಳು 
  1. ನೀ ಇರಲು ಜೊತೆಯಲ್ಲಿ ಬಾಳೆಲ್ಲ ಹಸಿರಾದಂತೆ
  2. ಏನೇ ಆಗಲೀ ಏನೇ ಹೋಗಲೀ 
  3. ಏ ಹುಡುಗಿ ಹೇ ಬೆಡಗಿ 
  4. ಯೌವ್ವನ ಹೊಸದಾದ 
  5. ನೀ ಇರಲು ಜೊತೆಯಲ್ಲಿ ಬಾಳೆಲ್ಲ ಹಸಿರಾದಂತೆ (ಎಸ್.ಜಾನಕೀ )
ಗುಣ ನೋಡಿ ಹೆಣ್ಣು ಕೊಡು (1982) - ನೀ ಇರಲು ಜೊತೆಯಲ್ಲಿ
ಸಾಹಿತ್ಯ: ಆರ್.ಏನ್. ಜಯಗೋಪಾಲ್ ಸಂಗೀತ: ಎಂ.ರಂಗರಾವ್ ಗಾಯನ: ಎಸ್.ಪಿ.ಬಿ, ಎಸ್.ಜಾನಕಿ


ಗಂಡು : ನೀ ಇರಲು ಜೊತೆಯಲ್ಲಿ ಬಾಳೆಲ್ಲ ಹಸಿರಾದಂತೆ
           ನೀ ಇರಲು ಜೊತೆಯಲ್ಲಿ ಬಾಳೆಲ್ಲ ಹಸಿರಾದಂತೆ
           ನಗುತ ನೀ ಕರೆದರೇ...
           ನಗುತ ನೀ ಕರೆದರೆ ಮನದೆ ಸಂತೋಷ ಹಾಡಾದಂತೆ
           ನೀ ಇರಲು ಜೊತೆಯಲ್ಲಿ ಬಾಳೆಲ್ಲ ಹಸಿರಾದಂತೆ

ಗಂಡು : ಮಾತಲ್ಲಿ ಏನೊ ಹೊಸತನ ಮಗುವನ್ನು ಹೋಲೊ ಹೂಮನ
            ರಸಕಾವ್ಯ ನಿನ್ನ ಯೌವ್ವನ ಎದೆ ತುಂಬಿ ನಿಂತೆ ಪ್ರತಿಕ್ಷಣ
            ಹಳ್ಳಿ ಮಣ್ಣಲಿ ಬಿರಿದ ಮಲ್ಲಿಗೆ
            ಹಳ್ಳಿ ಮಣ್ಣಲಿ ಬಿರಿದ ಮಲ್ಲಿಗೆ ಬೆರೆತೆ ಉಸಿರಲ್ಲಿ ಒಂದಾದಂತೆ... ಆಆಆಆ...
           ನೀ ಇರಲು ಜೊತೆಯಲ್ಲಿ ಬಾಳೆಲ್ಲ ಹಸಿರಾದಂತೆ
           ಆಆಆಆ... ಆಆಆಆ... ಆಆಆ... ಆಆಆ ... 
ಹೆಣ್ಣು : ಆಆಆಆ... ಆಆಆಆ... ಆಆಆ... ಆಆಆ ... 

ಗಂಡು : ಈ ನೀಲಿ ಕಣ್ಣ ಬೆಳಕಲ್ಲಿ ಮನೆಯೆಲ್ಲ ಎಂದು ಬೆಳಗಲಿ
           ನೀ ತಂದ ಪ್ರೀತಿ ಲತೆಯಲಿ ನಗುವೆಂಬ ಹೂವು ಅರಳಲಿ
           ಅಗಲಿ ನಿನ್ನನು ಬಾಳಲಾರೆನು..
           ಅಗಲಿ ನಿನ್ನನು ಬಾಳಲಾರೆನು ಜೀವ ಒಡಲಿಂದ ದೂರಾದಂತೆ
ಹೆಣ್ಣು : ಆಆಆಆ.... 
           ನೀ ಇರಲು ಜೊತೆಯಲ್ಲಿ ಬಾಳೆಲ್ಲ ಹಸಿರಾದಂತೆ
ಗಂಡು : ನಗುತ ನೀ ಕರೆದರೇ...
ಹೆಣ್ಣು : ನಗುತ ನೀ ಕರೆದರೆ
ಇಬ್ಬರು :  ಮನದೆ ಸಂತೋಷ ಹಾಡಾದಂತೆ
             ನೀ ಇರಲು ಜೊತೆಯಲ್ಲಿ ಬಾಳೆಲ್ಲ ಹಸಿರಾದಂತೆ
ಹೆಣ್ಣು : ಬಾಳೆಲ್ಲ ಹಸಿರಾದಂತೆ
ಗಂಡು : ಬಾಳೆಲ್ಲ ಹಸಿರಾದಂತೆ
-------------------------------------------------------------------------------------------------------------------------

ಗುಣ ನೋಡಿ ಹೆಣ್ಣು ಕೊಡು (1982) - ಏನೇ ಆಗಲೀ ಏನೇ ಹೋಗಲಿ 
ಸಂಗೀತ: ಎಂ.ರಂಗರಾವ್ ಸಾಹಿತ್ಯ: ದೊಡ್ಡರಂಗೇಗೌಡ  ಗಾಯನ: ಎಸ್.ಜಾನಕಿ 

ಹೆಣ್ಣು : ಆಆಆಆ ... ಆಆಆಆ .. ಏನೇ ಆಗಲೀ ... ಏನೇ ಹೋಗಲೀ ...
         ಏನೇ ಆಗಲೀ ಏನೇ ಹೋಗಲೀ ಬಾಳಿನ ಆಟ ಸಾಗಲೀ....
         ಆಟದಲ್ಲಿ ಏಳುಬೀಳು ಮೋಜಿನ ಧಾಟಿ ಕಾಣಲಿ
 ಕೋರಸ್ : ಆಟದಲ್ಲಿ ಏಳುಬೀಳು ಮೋಜಿನ ಧಾಟಿ ಕಾಣಲಿ
         ಏನೇ ಆಗಲೀ (ಆಗಲೀ ) ಏನೇ ಹೋಗಲೀ (ಹೋಗಲೀ )
         ಏನೇ ಆಗಲೀ ಏನೇ ಹೋಗಲೀ ಬಾಳಿನ ಆಟ ಸಾಗಲೀ.... 
         ಆಟದಲ್ಲಿ ಏಳುಬೀಳು ಮೋಜಿನ ಧಾಟಿ ಕಾಣಲಿ
ಕೋರಸ್ : ಆಟದಲ್ಲಿ ಏಳುಬೀಳು ಮೋಜಿನ ಧಾಟಿ ಕಾಣಲಿ 
ಹೆಣ್ಣು : ಆಆಆಆ ... ಆಆಆಆ .. ಓಓಓಓಓ ಓಓಓಓಓ ಓಓಓ ... ಓಓಓ 

ಹೆಣ್ಣು : ಗತ್ತು ಜೋರಾಗಲೀ... ಹೊತ್ತು ದೂರಾಗಲೀ
          ಗತ್ತು ಜೋರಾಗಲೀ ಹೊತ್ತು ದೂರಾಗಲೀ ಧೈರ್ಯನೇ ತೋರಿಸಿ ವೈರಿಯ ಮೈ ಮೂರಿದು
          ತೋಳ್ಬಲ ಮೀರಿಸಿ ತನ್ನತಾನೇ ಪೂರಾ ಗೆದ್ದೂ
          ಮನಕೂ ಗುರುತೂ ಮಾಡಿ ಹುರುಪು ಸೊಕ್ಕು ಕೂಡಿ
          ಹುಡಾಗಾಟದಲ್ಲಿ ಕಾಡಿ ಎಲ್ಲಾ ಹುಡುಗಾಟದಲ್ಲಿ ಎಳೆದಾಡಿ
          ಹಿಗ್ಗಾ ಮುಗ್ಗಾ ಕೊಂದು ಎರದು ಮುರದು ನಲದು
          ಹಿಗ್ಗಾ ಮುಗ್ಗಾ ಕೊಂದು ಎರದು ಮುರದು ನಲದು
          ಕೋಲು ಕಾಣದೇ ಗುದ್ದಾಡಿ ಗೋಳು ತೋರದೇ ಹೋರಾಡಿ
ಕೋರಸ್ : ಕೋಲು ಕಾಣದೇ ಗುದ್ದಾಡಿ ಗೋಳು ತೋರದೇ ಹೋರಾಡಿ
ಹೆಣ್ಣು : ಇಂದೂ ಮುಂದೂ ಎಂದೂ ನಮ್ಮ ಆಸೆಯ ಬಾವುಟ ಹಾರಲಿ
         ಏನೇ ಆಗಲೀ (ಆಗಲೀ ) ಏನೇ ಹೋಗಲೀ (ಹೋಗಲೀ )
         ಏನೇ ಆಗಲೀ ಏನೇ ಹೋಗಲೀ ಬಾಳಿನ ಆಟ ಸಾಗಲೀ.... 
         ಆಟದಲ್ಲಿ ಏಳುಬೀಳು ಮೋಜಿನ ಧಾಟಿ ಕಾಣಲಿ
ಕೋರಸ್ : ಆಟದಲ್ಲಿ ಏಳುಬೀಳು ಮೋಜಿನ ಧಾಟಿ ಕಾಣಲಿ 

ಕೋರಸ್ : ಆಆಆಆ ... ಆಆಆಆ .. ಆಆಆಆ ... ಆಆಆಆ ... ಆಆಆಆ
              ಭಲೇ .ಭಲೇ .ಭಲೇ .ಭಲೇ .ಭಲೇ .ಭಲೇ .
ಹೆಣ್ಣು : ಶಕ್ತಿ ಮುಂದಾಗಲೀ ಯುಕ್ತಿ ಒಂದಾಗಲೀ
          ಶಕ್ತಿ ಮುಂದಾಗಲೀ ಯುಕ್ತಿ ಒಂದಾಗಲೀ ಕೇಡಿಗಳ ಓಡಿಸಿ ಮೋಡಿಯ ಮಾಟ ಕಳೆದು
          ಕೇಡಿಗಳ ಜಾಡಿಸೀ ನಿಯತ್ತ ನಂಬಿ ನಡೆದೂ ಹಠವ ತೊಟ್ಟು ನುಗ್ಗಿ ಗುರಿಯ ಮುಟ್ಟಿ ಹಿಗ್ಗಿ
          ಒಡನಾಟದಲ್ಲಿ ಒಗ್ಗಿ ನಮ್ಮ ಸೆಣಸಾಟವೆಲ್ಲ ಸುಖ ಸುದ್ದಿ
          ಪುಂಡರನಲ್ಲಾ ಒದ್ದು ಎದ್ವಾ ತದ್ವಾ ಬೆಳೆದು
          ಪುಂಡರನಲ್ಲಾ ಒದ್ದು ಎದ್ವಾ ತದ್ವಾ ಬೆಳೆದು ಮೋಸ ಮಂದಿಗೇ ವೈನಾಗೀ  ಆಸೇ ಬೇಡವೇ  ಈಡಾಗಿ
ಕೋರಸ್ : ಮೋಸ ಮಂದಿಗೇ ವೈರಾಗೀ  ಆಸೇ ಬೇಡದೇ ಈಡಾಗಿ
ಹೆಣ್ಣು : ರೀತಿ ನೀತಿ ಎಲ್ಲಾ ಒಳ್ಳೇ ಶೌರ್ಯ ಪಾಠವ ಸಾಗಲೀ
         ಏನೇ ಆಗಲೀ (ಆಗಲೀ ) ಏನೇ ಹೋಗಲೀ (ಹೋಗಲೀ )
         ಏನೇ ಆಗಲೀ ಏನೇ ಹೋಗಲೀ ಬಾಳಿನ ಆಟ ಸಾಗಲೀ.... 
         ಆಟದಲ್ಲಿ ಏಳುಬೀಳು ಮೋಜಿನ ಧಾಟಿ ಕಾಣಲಿ
ಕೋರಸ್ : ಆಟದಲ್ಲಿ ಏಳುಬೀಳು ಮೋಜಿನ ಧಾಟಿ ಕಾಣಲಿ 
                ಆಟದಲ್ಲಿ ಏಳುಬೀಳು ಮೋಜಿನ ಧಾಟಿ ಕಾಣಲಿ ಆಟದಲ್ಲಿ ಏಳುಬೀಳು ಮೋಜಿನ ಧಾಟಿ ಕಾಣಲಿ 
--------------------------------------------------------------------------------------------------------------------------

ಗುಣ ನೋಡಿ ಹೆಣ್ಣು ಕೊಡು (1982) - ಹೇ ಹುಡುಗಿ ಹೇ ಬೆಡಗಿ 
ಸಾಹಿತ್ಯ: ಆರ್.ಏನ್. ಜಯಗೋಪಾಲ್ ಸಂಗೀತ: ಎಂ.ರಂಗರಾವ್ ಗಾಯನ: ಗುರು, ಎಸ್.ಜಾನಕಿ 

ಗಂಡು : ಹೇ ಹುಡುಗಿ... ಹೇ ಬೆಡಗಿ...
           ಹೇ ಹುಡುಗಿ ಹೇ ಬೆಡಗಿ ಹೂವನ್ನ ಮುಡ್ಕೊಂಡು ಯಾವೋನ್ನ ಹುಡ್ಕೊಂಡು
           ಬಂದೇಕೇ ನೀನೀಲ್ಲಿ ಬಂಗಾರಿ ಸಿಂಗಾರಿ  ಹೇಳಲ್ಲೇ
ಹೆಣ್ಣು : ಯೂ .... 
ಗಂಡು :  ಯ್ಯಾ.. ಹೇ ಹುಡುಗಿ ಹೇ ಬೆಡಗಿ ಹೂವನ್ನ ಮುಡ್ಕೊಂಡು ಯಾವೋನ್ನ ಹುಡ್ಕೊಂಡು
           ಬಂದೇಕೇ ನೀನೀಲ್ಲಿ ಬಂಗಾರಿ ಸಿಂಗಾರಿ  ಹೇಳಲ್ಲೇ
ಹೆಣ್ಣು : ಹೇ.. ಹುಡುಗ  ಹೇ... ತುಡುಗ 
         ಹೇ.. ಹುಡುಗ  ಹೇ... ತುಡುಗ ಮೀಸೆಯ ತೀರಕೊಂಡೂ ಯಾವನ್ನ ಹುಡ್ಕೊಂಡು 
         ಬಂದೇಕೆ ನಿನೀಲ್ಲಿ ತುಂಟ ಓ.. ಭಂಟ ಹೇಳಲ್ಲೋ 

ಗಂಡು : ಲಾ..ಲ... ಲಾಲಲಲಲ ಲಾಲಾ           ಹೆಣ್ಣು : ಲಾ..ಲ... ಲಾಲಲಲಲ ಲಾಲಾ 
ಗಂಡು : ಪ್ರೀತಿಯಿಂದ ಕೊಟ್ಟುಬಿಟ್ಟೇ ಮನಸ್ಸನ್ನೂ ಆ ಚೆಲುವೆಗಾಗಿ ಮೀಸಲಿಟ್ಟೇ ಬಾಳನ್ನೂ 
           ಹ್ಹಾ... ಪ್ರೀತಿಯಿಂದ ಕೊಟ್ಟುಬಿಟ್ಟೇ ಮನಸ್ಸನ್ನೂ ಆ ಚೆಲುವೆಗಾಗಿ ಮೀಸಲಿಟ್ಟೇ ಬಾಳನ್ನೂ ನಾನೂ .... 
          ನಂಬಲಾರೆ ಬಳಿಗೆ ಬರದ ಹೆಣ್ಣನ್ನೂ 
ಹೆಣ್ಣು : ಅಂಕೆ ಮೀರಿ ನಡೆದಮೇಲೆ ಶಂಕೆ ಪಡದೇ ಇರಲು ಬಾಲೇ ಆ ಹೆಣ್ಣು ನಿನ್ನೊಳೆ ತಾಳಿಯ ಕಟ್ಟಿದ ಮೇಲೇ .... 
         ಹೇ.. ಹುಡುಗ  ಹೇ... ತುಡುಗ ಮೀಸೆಯ ತೀರಕೊಂಡೂ ಯಾವನ್ನ ಹುಡ್ಕೊಂಡು 
         ಬಂದೇಕೆ ನಿನೀಲ್ಲಿ ತುಂಟ ಓ.. ಭಂಟ ಹೇಳಲ್ಲೋ 

ಹೆಣ್ಣು : ಲಾ..ಲ... ಲಾಲಲಲಲ ಲಾಲಾ     (ಹೇ) ಆ... (ರೂರುರುರುರೂರೂ)
          ಚೆಲುವನೆಂದು ಒಳಗೇ ಬಿಟ್ಟೆ ಮನದಲ್ಲಿ ಆ ಹುಡುಗ ಕೈಯ್ ಕೊಡುವನೇನೂ ನಡುವಲ್ಲಿ 
          ಚೆಲುವನೆಂದು ಒಳಗೇ ಬಿಟ್ಟೆ ಮನದಲ್ಲಿ ಆ ಹುಡುಗ ಕೈಯ್ ಕೊಡುವನೇನೂ ನಡುವಲ್ಲಿ 
          ಎಂದೂ.... ಗುಣವ ನೋಡಿ ನಂಬಬೇಕೂ ಗಂಡನ್ನೂ 
ಗಂಡು : ಶೀಲವಂತ ನಾನು ನಲ್ಲೇ ಶಂಕೆ ಬಿಟ್ಟೂ ಬಾರೇ ಇಲ್ಲೇ 
           ನಾನಿನ್ನ ನೀನನ್ನ ತೋಳಲ್ಲಿ ಒಂದಾಗಿ ಆನಂದ ನೀಡೆ 
           ಹೇ ಹುಡುಗಿ ಹೇ ಬೆಡಗಿ ಹೂವನ್ನ ಮುಡ್ಕೊಂಡು ಯಾವೋನ್ನ ಹುಡ್ಕೊಂಡು
           ಬಂದೇಕೇ ನೀನೀಲ್ಲಿ ಬಂಗಾರಿ ಸಿಂಗಾರಿ  ಹೇಳಲ್ಲೇ
ಹೆಣ್ಣು : ಹೇ.. ಹುಡುಗ  ಹೇ... ತುಡುಗ 
         ಹೇ.. ಹುಡುಗ  ಹೇ... ತುಡುಗ ಮೀಸೆಯ ತೀರಕೊಂಡೂ ಯಾವನ್ನ ಹುಡ್ಕೊಂಡು 
         ಬಂದೇಕೆ ನಿನೀಲ್ಲಿ ಏ ತುಂಟ ಓ.. ಭಂಟ ಹೇಳಲ್ಲೋ 
ಗಂಡು : ಹೇ ಹುಡುಗಿ                   ಹೆಣ್ಣು : ಹೇ.. ಹುಡುಗ 
ಗಂಡು : ಹೇ ಬೆಡಗಿ                     ಹೆಣ್ಣು : ಹೇ.. ತುಡುಗ  
ಗಂಡು : ಹೇ ಹುಡುಗಿ                   ಹೆಣ್ಣು : ಹೇ.. ಹುಡುಗ 
ಗಂಡು : ಹೇ ಬೆಡಗಿ                     ಹೆಣ್ಣು : ಹೇ.. ತುಡುಗ  
--------------------------------------------------------------------------------------------------------------------------

ಗುಣ ನೋಡಿ ಹೆಣ್ಣು ಕೊಡು (1982) - ಯೌವ್ವನ ಹೊಸದಾದ 
ಸಂಗೀತ: ಎಂ.ರಂಗರಾವ್ ಸಾಹಿತ್ಯ: ಶ್ಯಾಮಸುಂದರ ಕುಲಕರ್ಣಿ ಗಾಯನ: ಎಸ್.ಪಿ, ಎಸ್.ಜಾನಕಿ, ಬೆಂಗಳೂರ ಲತಾ  

ಗಂಡು : ಆಹಾಹಾ... ಹೂಂಹುಂಹುಂ... ಹೇಹೇ ... ಲಾಲಲಲಲಾ
            ಯೌವ್ವನ... ಯೌವ್ವನ ಹೊಸದಾದ ಸವಿಯಾದ ಹೊಂಗನಸಿನ ಹೂಬನ
            ಸಂತೋಷದ ಸಂಗೀತದ ಸಮ್ಮೇಳನ ಒಲವೂ ನಲಿವೂ ಇರುವ ಜೀವನ
            ಯೌವ್ವನ ಹೊಸದಾದ ಸವಿಯಾದ ಹೊಂಗನಸಿನ ಹೂಬನ
            ಸಂತೋಷದ ಸಂಗೀತದ ಸಮ್ಮೇಳನ ಒಲವೂ ನಲಿವೂ ಇರುವ ಜೀವನ

  ಗಂಡು : ಪ್ರೀತಿ ಪರಿಮಳ ತೂರಿ ಬಂತೂ ತಂಗಾಳಿಯ ಮೇಲೆ
             ಎರಡೂ ಮನಗಳ ಬೆಸೆದು ತಂದಿತು ಸಂಬಂಧದ ಮಾಲೇ
             ಪ್ರೀತಿ ಪರಿಮಳ ತೂರಿ ಬಂತೂ ತಂಗಾಳಿಯ ಮೇಲೆ
             ಎರಡೂ ಮನಗಳ ಬೆಸೆದು ತಂದಿತು ಸಂಬಂಧದ ಮಾಲೇ
             ಕರುಳಿನ ಆಸೆಯೇ ಬೇರೆ ಒಲವಿನ ಬಾಷೆಯೇ ಬೇರೇ
            ಸಂದೇಹದ... ಉಯ್ಯಾಲೆಗೇ...
            ಸಂದೇಹದ ಉಯ್ಯಾಲೆಗೇ ಸಿಲುಕಿ ನಲುಗಿ ಬಿಡದೀ ಬಂಧನಾ...
ಹೆಣ್ಣು : ಯೌವ್ವನ ಹೊಸದಾದ ಸವಿಯಾದ ಹೊಂಗನಸಿನ ಹೂಬನ
          ಸಂತೋಷದ ಸಂಗೀತದ ಸಮ್ಮೇಳನ ಒಲವೂ ನಲಿವೂ ಇರುವ ಜೀವನ

ಹೆಣ್ಣು : ಆಸೇ ಹಕ್ಕಿಯೂ ಹಾಡಿ ಹಾಡಿದೇ ಆಕಾಶವ ಏರಿ
          ಜೋಡಿ ಬೇಡುತ ಕೂಡಿ ಆಡಿದೆ ಸ್ವಚ್ಛಂದದಿ ಸೇರಿ
           ಆಸೇ ಹಕ್ಕಿಯೂ ಹಾಡಿ ಹಾಡಿದೇ ಆಕಾಶವ ಏರಿ
          ಜೋಡಿ ಬೇಡುತ ಕೂಡಿ ಆಡಿದೆ ಸ್ವಚ್ಛಂದದಿ ಸೇರಿ
          ಬಯಸಿದ ಗಂಡನು ಬೇಕೂ ಆಗಲೇ ಬಾಳಲಿ ಜೋರೂ
          ಸಂದೇಹವೂ ಇನ್ನೇತಕೇ ....
          ಸಂದೇಹವೂ ಇನ್ನೇತಕೇ ಇದುವೇ ನಿಜದಿ ಸುಖದ ಸಾಧನ
ಜಾನಕೀ : ಯೌವ್ವನ ಹೊಸದಾದ ಸವಿಯಾದ ಹೊಂಗನಸಿನ ಹೂಬನ
          ಸಂತೋಷದ ಸಂಗೀತದ ಸಮ್ಮೇಳನ ಒಲವೂ ನಲಿವೂ ಇರುವ ಜೀವನ

ಜಾನಕೀ : ಪೂರ್ವ ಜನ್ಮದ ಪುಣ್ಯದಂತೇ ಸಂಗಾತಿ ಸಂಯೋಗ
             ಮೇಲೆ ಕುಳಿತವ ಬರೆದ ರೀತಿಯೇ ಮಾಂಗಲ್ಯದ ಯೋಗ
             ಪೂರ್ವ ಜನ್ಮದ ಪುಣ್ಯದಂತೇ ಸಂಗಾತಿ ಸಂಯೋಗ
             ಮೇಲೆ ಕುಳಿತವ ಬರೆದ ರೀತಿಯೇ ಮಾಂಗಲ್ಯದ ಯೋಗ
            ಹೃದಯಕೆ ಪ್ರೀತಿಯೂ ಬೇಕು ಪ್ರೀತಿಗೆ ರೀತಿಯೂ ಬೇಕು
            ಕೈಗೂಡುವ ಬಾಳಲ್ಲಿಯೇ ...
            ಕೈಗೂಡುವ ಬಾಳಲ್ಲಿಯೇ ಸರಸ ಸೊಗಸು ಮಧುರ ಬಂಧನ
ಎಲ್ಲರು:  ಯೌವ್ವನ ಹೊಸದಾದ ಸವಿಯಾದ ಹೊಂಗನಸಿನ ಹೂಬನ
          ಸಂತೋಷದ ಸಂಗೀತದ ಸಮ್ಮೇಳನ ಒಲವೂ ನಲಿವೂ ಇರುವ ಜೀವನ
          ಒಲವೂ ನಲಿವೂ ಇರುವ ಜೀವನ
--------------------------------------------------------------------------------------------------------------------------

ಗುಣ ನೋಡಿ ಹೆಣ್ಣು ಕೊಡು (1982) - ನೀ ಇರಲು ಜೊತೆಯಲ್ಲಿ
ಸಂಗೀತ: ಎಂ.ರಂಗರಾವ್ ಸಾಹಿತ್ಯ: ಆರ್.ಏನ್. ಜಯಗೋಪಾಲ್ ಗಾಯನ: ಎಸ್.ಜಾನಕಿ


ಆಆಆ... ಆಆಆಅ...
ನೀ ಇರಲು ಜೊತೆಯಲ್ಲಿ ಬಾಳೆಲ್ಲ ಹಸಿರಾದಂತೆ
ನೀ ಇರಲು ಜೊತೆಯಲ್ಲಿ (ಆಆಆ) ಬಾಳೆಲ್ಲ ಹಸಿರಾದಂತೆ.. (ಆಆಆ)
ನಗುತ ನೀ ಕರೆದರೆ ... (ಆಆಆ)
ನಗುತ ನೀ ಕರೆದರೆ ಮನದೆ ಸಂತೋಷ ಹಾಡಾದಂತೆ
ನೀ ಇರಲು ಜೊತೆಯಲ್ಲಿ (ಆಆಆ) ಬಾಳೆಲ್ಲ ಹಸಿರಾದಂತೆ.. (ಆಆಆ)

ಮಾತಲ್ಲಿ ಏನೊ ಹೊಸತನ ಮಗುವನ್ನು ಹೋಲೊ ಹೂಮನ
ರಸಕಾವ್ಯ ನಿನ್ನ ಯೌವ್ವನ ಎದೆ ತುಂಬಿ ನಿಂತೆ ಪ್ರತಿಕ್ಷಣ
ರಸಕಾವ್ಯ ನಿನ್ನ ಯೌವ್ವನ ಎದೆ ತುಂಬಿ ನಿಂತೆ ಪ್ರತಿಕ್ಷಣ
ಹಳ್ಳಿ ಮಣ್ಣಲಿ ಬಿರಿದ ಮಲ್ಲಿಗೆ
ಹಳ್ಳಿ ಮಣ್ಣಲಿ ಬಿರಿದ ಮಲ್ಲಿಗೆ ಬೆರೆತೆ ಉಸಿರಲ್ಲಿ ಒಂದಾದಂತೆ... ಆಆಆಆ ..
ನೀ ಇರಲು ಜೊತೆಯಲ್ಲಿ (ಆಆಆ) ಬಾಳೆಲ್ಲ ಹಸಿರಾದಂತೆ.. (ಆಆಆ)

(ಆಆಆ... ಆಆಆ ಆಆಆ ಆಆಆ)
ಈ ನೀಲಿ ಕಣ್ಣ ಬೆಳಕಲ್ಲಿ ಮನೆಯೆಲ್ಲ ಎಂದು ಬೆಳಗಲಿ
ನೀ ತಂದ ಪ್ರೀತಿ ಲತೆಯಲಿ ನಗುವೆಂಬ ಹೂವು ಅರಳಲಿ.. .ಹ್ಹಹ್ಹಹ್ಹ
ನೀ ತಂದ ಪ್ರೀತಿ ಲತೆಯಲಿ ನಗುವೆಂಬ ಹೂವು ಅರಳಲಿ.. .ಹ್ಹಹ್ಹಹ್ಹ
ಅಗಲಿ ನಿನ್ನನು ಬಾಳಲಾರೆನು
ಅಗಲಿ ನಿನ್ನನು (ಆಆಆ) ಬಾಳಲಾರೆನು (ಆಆಆ) ಜೀವ ಒಡಲಿಂದ ದೂರಾದಂತೆ.. ಹ್ಹಹ್ಹ ದೂರಾದಂತೆ.
--------------------------------------------------------------------------------------------------------------------------

No comments:

Post a Comment