508. ಸಿಪಾಯಿ ರಾಮು (1972)



ಸಿಪಾಯಿ ರಾಮು ಚಿತ್ರದ ಹಾಡುಗಳು 
  1. ಎಲ್ಲಿಗೆ ಪಯಣ ಯಾವುದು ದಾರಿ 
  2. ನೀದಿರೆಯು ಸದಾ ಏಕೋ 
  3. ಕಣ್ಣ ನೋಟದಲ್ಲೆ ನೀ ಕಾಡಬೇಡ 
  4. ತಂಗಾಳಿ ಸಂಗೀತ ಹಾಡಿದೆ 
  5. ಕೊಕೊರೆಕೊಕೋ  ಕೊಕೊರೆಕೊಕೋ ಕೋ 

ಸಿಪಾಯಿ ರಾಮು (1972) - ನಿದಿರೆಯು ಸದಾ ಏಕೋ ದೂರಾ
ಸಾಹಿತ್ಯ: ಆರ್.ಎನ್.ಜಯಗೋಪಾಲ್ ಸಂಗೀತ: ಉಪೇಂದ್ರಕುಮಾರ್ ಗಾಯನ: ಪಿ.ಬಿ.ಶ್ರೀನಿವಾಸ್ ಮತ್ತು ಪಿ.ಸುಶೀಲ


ನಿದಿರೆಯು ಸದಾ ಏಕೋ ದೂರಾನೆಲೆಸಿದೆ ಕಣ್ಣಾ ತುಂಬಾ
ಸಖಾ ನಿನ್ನಾ ಮುಖಾ
ಓ ಪ್ರಿಯಾ ಓ ಪ್ರಿಯಾ ಈ ಬೇಗೇ ತೀರೆಯಾ...ನಿದಿರೆಯು...

ಒಲವಿನ ಕಥೇ ಕಣ್ಣಾ ಮಾತೇ
ಚಲುವಿನ ಖನೀ ನಿನ್ನಾ ದನೀ ಸುಖಾ ಗೀತೇ
ನೀ ನಗೇ ಭೂಮಿಗೇ ಹೂ ಮಳೇ ಬಂದಂತೇ...ಒಲವಿನ...
ಎಳೆತನ ನನ್ನಾ ಬಿಟ್ಟೂ ಓಡೋಡೀ ಹೋದಾಗಾ
ಹರೆಯವು ಮೈ ತುಂಬೀ ಹಾಡಾಗೀ ಬಂತಾಗಾ
ಪ್ರಣಯದ ದೇವಿಯಾ ಎದುರಲೀ ಕಂಡಾಗಾ
ಹೃದಯದ ಕಾಣಿಕೇ ತಂದೇ ನಾನಾಗಾ
ಚಲುವಿನಾ ಖನೀ ನಿನ್ನಾ ದನೀಸುಖಾ ಗೀತೇ
ಓ ಪ್ರಿಯಾ ಓ ಪ್ರಿಯಾ ಈ ಬೇಗೇ ತೀರೆಯಾ...ನಿದಿರೆಯು...

ಹೆರಳನು ಅತ್ತಾ ಇತ್ತಾ ತೂರಾಡೀ ಬಂದೋಳೇ
ಹಗಲಲೆ ಮೂಡೀ ಬಂದಾ ಚಂದ್ರ ನಾ ಎಂದೋಳೇ
ನಗುತಾ ನಿಂದೋನೇ ನೋಟದೆ ಕೊಂದೋನೇ
ಮುಗುದೇ ಮನದಲೀ ಆಸೆಯ ತಂದೋನೇ
ಚಲುವಿನ ಖನೀ ನಿನ್ನಾ ದನೀ ಸುಖಾ ಗೀತೇ
ನೀ ನಗೇ ಭೂಮಿಗೇ ಹೂ ಮಳೇ ಬಂದಂತೇ...ನಿದಿರೆಯು...
----------------------------------------------------------------------------------------------------------------------

ಸಿಪಾಯಿ ರಾಮು (1972) - ಎಲ್ಲಿಗೇ ಪಯಣ ಯಾವುದೋ ದಾರಿ

ಸಾಹಿತ್ಯ : ಅರ್.ಎನ್.ಜಯಗೋಪಾಲ್  ಸಂಗೀತ : ಉಪೇಂದ್ರಕುಮಾರ್  ಗಾಯನ : ಪಿ.ಬಿ. ಶ್ರೀನಿವಾಸ್


ಕಥೆ ಮುಗಿಯಿತೇ ಆರಂಭದ ಮುನ್ನ...  ಲತೆ ಬಾಡಿ ಹೋಯಿತೆ ಹೂವಾಗುವ ಮುನ್ನ..
ಎಲ್ಲಿಗೇ ಪಯಣ ಯಾವುದೋ ದಾರಿ ಏಕಾಂಗಿ ಸಂಚಾರಿ ಏಕಾಂಗಿ ಸಂಚಾರಿ
ಮಡದಿ ಮಕ್ಕಳು ಸ್ನೇಹಿತರನ್ನು ಮಣ್ಣಿನ ವಶ ಮಾಡಿ
ನಡೆದಿಹೆ ಇಂದು ಅಂಧನ ರೀತಿ ಶೋಕದೇ ಏನೋ ನಿನ್ನ ಗುರಿ ಎಲ್ಲಿಗೇ ಪಯಣ
ಸೋಲು ಗೆಲುವು ಸಾವು ನೋವು ಜೀವನದುಯ್ಯಾಲೆ
ಸಾಯುವ ಮುನ್ನ ಜನಿಸಿದ ಮಣ್ಣಾ ದರುಶನ ನೀ ಪಡೆದು
ತಾಯಿಯ ಮಡಿಲ ಧೂಳಲಿ ಬೆರೆತು ಶೂನ್ಯದೇ ಮುಗಿಸು ನಿನ್ನ ಕಥೆ
ಎಲ್ಲಿಗೇ ಪಯಣ ಯಾವುದೋ ದಾರಿ ಏಕಾಂಗಿ ಸಂಚಾರಿ
ಏಕಾಂಗಿ ಸಂಚಾರಿ ಏಕಾಂಗಿ ಸಂಚಾರಿ
-----------------------------------------------------------------------------------------------------------------------

ಸಿಪಾಯಿ ರಾಮು (1972) - ಕಣ್ಣ ನೋಟದಲ್ಲೇ
ಸಂಗೀತ : ಉಪೇಂದ್ರಕುಮಾರ್  ಸಾಹಿತ್ಯ : ಅರ್.ಎನ್.ಜಯಗೋಪಾಲ್  ಗಾಯನ : ಪಿ.ಸುಶೀಲಾ

ಕಣ್ಣ ನೋಟದಲ್ಲೇ... 
ಕಣ್ಣ ನೋಟದಲ್ಲೇ... ನೀ ಕಾಡಬೇಡ ಸಾಜನ್ 
ಕಣ್ಣ ನೋಟದಲ್ಲೇ... ನೀ ಕಾಡಬೇಡ ಸಾಜನ್ 
ಹೂವಿನಂಥ ಹೆಣ್ಣು ನಾಜೂಕು ನನ್ನ ಯವ್ವನ 
 ಸಾಜನ್ ಸಾಜನ್ ಸಾಜನ್
ಕಣ್ಣ ನೋಟದಲ್ಲೇ... ನೀ ಕಾಡಬೇಡ ಸಾಜನ್ 
ಹೂವಿನಂಥ ಹೆಣ್ಣು ನಾಜೂಕು ನನ್ನ ಯವ್ವನ 
ಹೂವಿನಂಥ ಹೆಣ್ಣು ನಾಜೂಕು ನನ್ನ ಯವ್ವನ 
ಕಣ್ಣ ನೋಟದಲ್ಲೇ... ನೀ ಕಾಡಬೇಡ ಸಾಜನ್ 

ಮೂಗುತಿಯ ಮುಂಭಾರವ ತಾಳಲಾರೆ ಬಾಲುಮಾ
ಮೂಗುತಿಯ ಮುಂಭಾರವ ತಾಳಲಾರೆ ಬಾಲುಮಾ  
ಹೂವಿನ ಜಡೆ ಹಿಂಭಾರಕೆ ಸೋತು ನಿಂತೇ ಬಾಲುಮಾ 
ಅರೇ ಕರೆದಿದೆ ತೆರೆದಿದೆ ಸುಖ ಬಳಿ ಇದೆ... ಮೇರೇ ಪಾಸ್ ಆವೋನಾ 
ಕಣ್ಣ ನೋಟದಲ್ಲೇ... ನೀ ಕಾಡಬೇಡ ಸಾಜನ್ 
ಹೂವಿನಂಥ ಹೆಣ್ಣು ನಾಜೂಕು ನನ್ನ ಯವ್ವನ 
ಹೂವಿನಂಥ ಹೆಣ್ಣು ನಾಜೂಕು ನನ್ನ ಯವ್ವನ 
ಕಣ್ಣ ನೋಟದಲ್ಲೇ... ನೀ ಕಾಡಬೇಡ ಸಾಜನ್ 

ನಲ್ಲ ಬಿಡು ಬಳ್ಳಿ ನಡು ಹೊಡೆದು ಹೋಗಬಹುದು
ನಲ್ಲ ಬಿಡು ಬಳ್ಳಿ ನಡು ಹೊಡೆದು ಹೋಗಬಹುದು
ತೋಳ ಕೊಡು ಹರೆಯಾಕಿದು ಬಳುಕಿ ಬಾಡ ಬಹುದು 
ತಾನು ತಡೆಯಲು ಮಧು ಸವಿಯಲು ಜಾಗ ಮರೆಯಲು... ಮುಝೇ... ಗಲೇ ಲಗಾನಾ
ಕಣ್ಣ ನೋಟದಲ್ಲೇ... ನೀ ಕಾಡಬೇಡ ಸಾಜನ್ 
ಕಣ್ಣ ನೋಟದಲ್ಲೇ... ನೀ ಕಾಡಬೇಡ ಸಾಜನ್ 
ಹೂವಿನಂಥ ಹೆಣ್ಣು ನಾಜೂಕು ನನ್ನ ಯವ್ವನ 
ಹೂವಿನಂಥ ಹೆಣ್ಣು ನಾಜೂಕು ನನ್ನ ಯವ್ವನ 
ಕಣ್ಣ ನೋಟದಲ್ಲೇ... ನೀ ಕಾಡಬೇಡ ಸಾಜನ್ 

ನಿನ್ನ ದಾರಿ ಕಾದು ಕಾದು ಬಳಲಿತೆನ್ನ ನಯನ
ನಿನ್ನ ದಾರಿ ಕಾದು ಕಾದು ಬಳಲಿತೆನ್ನ ನಯನ 
ನಿನ್ನ ವಿನಹ ನನ್ನ ಮನ ಮರಕದು ಸಾಜನಾ  
ಇದೆ ವಿರಹದ ಬಿಸಿ ಉಸಿರದು ಹೇ... ದಿಲ್ ಹೈ ದಿವಾನ್ 
ಕಣ್ಣ ನೋಟದಲ್ಲೇ... ನೀ ಕಾಡಬೇಡ ಸಾಜನ್ 
ಕಣ್ಣ ನೋಟದಲ್ಲೇ... ನೀ ಕಾಡಬೇಡ ಸಾಜನ್ 
ಹೂವಿನಂಥ ಹೆಣ್ಣು ನಾಜೂಕು ನನ್ನ ಯವ್ವನ 
ಹೂವಿನಂಥ ಹೆಣ್ಣು ನಾಜೂಕು ನನ್ನ ಯವ್ವನ 
ಕಣ್ಣ ನೋಟದಲ್ಲೇ... ನೀ ಕಾಡಬೇಡ ಸಾಜನ್ 
-------------------------------------------------------------------------------------------------------------------------

ಸಿಪಾಯಿ ರಾಮು (1972) - ತಂಗಾಳಿ ಸಂಗೀತ ಹಾಡಿದೆ
ಸಂಗೀತ : ಉಪೇಂದ್ರಕುಮಾರ್  ಸಾಹಿತ್ಯ : ಅರ್.ಎನ್.ಜಯಗೋಪಾಲ್  ಗಾಯನ : ಪಿ.ಸುಶೀಲಾ

ತಂಗಾಳಿ ಸಂಗೀತ ಹಾಡಿದೆ, ಮನದಲಿ ಹೊಸ ತಾಳ ಹಾಕಿದೆ
ತಂಗಾಳಿ ಸಂಗೀತ ಹಾಡಿದೆ, ಮನದಲಿ ಹೊಸ ತಾಳ ಹಾಕಿದೆ
ಬಳೆಗಳ ಕಣಕಣ ಒಲವಿನ ಝಣಝಣ
ಬಳೆಗಳ ಕಣಕಣ ಒಲವಿನ ಝಣಝಣ
ತಂಗಾಳಿ ಸಂಗೀತ ಹಾಡಿದೆ

ಎತ್ತ ತೂಗೋವಾಗ ರೈತ ಹಾಡುವಾಗ
ಮೈಯ ಮರೆಸೋ ಸುವ್ವಿ ರಾಗ
ತನಗೈ ಬಂತಾಗ ಏನೇನೋ ಆ ವೇಗ
ಅಮ್ಮಮ್ಮಮ್ಮ ಎದೆ ಬಡಿತದ ವೇಗ ಲಲಲಲ ಲಲಲ

ರಾಧೆಯ ಕೃಷ್ಣನು ಕರೆದಿಹ ರೀತಿ
ರಾಧೆಯ ಕೃಷ್ಣನು ಕರೆದಿಹ ರೀತಿ
ಮುರಳಿ ನನ್ನ ಕೂಗಿದೆ
ಪೂಜೆಯೋ ಪ್ರೇಮವು ಮನದಲಿ ಕಾಣೆ
ನಿನ್ನೆಯಾ ಧ್ಯಾನ ತುಂಬಿದೆ..
ಈ ನಾನು ಆ ನೀನು ಒಂದಾಗಿ ಮುಂದೇನು
ಅಮ್ಮಮಮ್ಮ ಅದ ನೆನೆದರೆ ನಾನು
ತಂಗಾಳಿ ಸಂಗೀತ ಹಾಡಿದೆ, ಮನದಲಿ ಹೊಸ ತಾಳ ಹಾಕಿದೆ
ಬಳೆಗಳ ಕಣಕಣ ಒಲವಿನ ಝಣಝಣ
ಬಳೆಗಳ ಕಣಕಣ ಒಲವಿನ ಝಣಝಣ
ತಂಗಾಳಿ ಸಂಗೀತ ಹಾಡಿದೆ ಮನದಲಿ ಹೊಸ ತಾಳ ಹಾಕಿದೆ
--------------------------------------------------------------------------------------------------------------------------

ಸಿಪಾಯಿ ರಾಮು (1972) - ತಂಗಾಳಿ ಸಂಗೀತ ಹಾಡಿದೆ
ಸಂಗೀತ : ಉಪೇಂದ್ರಕುಮಾರ್  ಸಾಹಿತ್ಯ : ಅರ್.ಎನ್.ಜಯಗೋಪಾಲ್  ಗಾಯನ : ಎಸ್. ಪಿ.ಬಾಲು, ಎಲ್.ಆರ್.ಈಶ್ವರಿ 

ಕೋಕೋರೆಕೊಕೊ ಕೋಕೋರೆಕೊಕೊ ಕೋಕೋರೆಕೊಕೊ ಕೋ
ಬಹರೇ ಮೇರಾ ಮುರುಗಾ ಬಹರೇ ನನ್ನ ರಂಗ
ಯಾರು ಇಲ್ಲ ಸಾಟಿ ಇವ ಭಲೇ ಕಿಲಾಡಿ ರಂಗ
ಬಾಜಿ ಕಟ್ಟಿ ನೋಡು ಬಾರಾ ಮೀಸೆ ಮಾವ
ಬಾಜಿ ಕಟ್ಟಿ ನೋಡು ಬಾರಾ ಮೀಸೆ ಮಾವ
ಓ ಮಾವ ಓ ಮಾವ ಓ ಮಾವ ಮೀಸೆ ಮಾವ
ಬಾಜಿ ಕಟ್ಟಿ ನೋಡು ಬಾರಾ ಮೀಸೆ ಮಾವ
ನತ್ಥನ ನತ್ಥನ ನತ್ಥನನತ್ಥನನತ್ಥನ ಹಮಮ್
ಬಹರೇ ಮೇರಾ ಮುರುಗಾ ಬಹರೇ ನನ್ನ ಸಿಂಗ
ಸಿಂಗನ ಮುಂದೆ ರಂಗನು ಎಂದು ಇಂಗು ತಿಂದ ಮಂಗ 
ಬಾಜಿ ಕಟ್ಟಲೆಂದು ಬಂದೆ ಗಂಡುಬೀರಿ ಹೆಣ್ಣೇ 
ಬಾಜಿ ಕಟ್ಟಲೆಂದು ಬಂದೆ ಗಂಡುಬೀರಿ ಹೆಣ್ಣೇ
ಅರೇ ಛೋಡೋ ಅರೇ ದೇಖೋ

ಸವಾಲು ನಂದು ಜವಾಬು ನಿಂದು
ನೋಡುವೆ ಏಕೆ ಹಿಂದೂ ಮುಂದು
ಪಟಾಪಟಿ ಕಾಳಗವ ಮಾಡು ಮಾಡು
ಲಟಾಪಟಿ ಹೊರಟವ ನೋಡು ನೋಡು
ಪೊತಪೋಟಿ ಗಂಡಾಗುಂಡಿ
ಪೊತಪೋಟಿ ಗಂಡಾಗುಂಡಿ ಹೆದ್ರೋಳಲ್ಲ ನಾನು ಬಂಡಿ.. ಬಾಜಿ ಕಟ್ಟಿ... ಹೇ.. ಹೇ..
ಬಾಜಿ ಕಟ್ಟಿ ನೋಡು ಬಾರಾ ಮೀಸೆ ಮಾವ
ಬಾಜಿ ಕಟ್ಟಲೆಂದು ಬಂದೆ ಗಂಡುಬೀರಿ ಹೆಣ್ಣೇ

ರಂಗ ಸರ್ ಅಂತ ಹಾರಿ ಬಂದು ಕುಕ್ಕುವಾ
ಸಿಂಗ ಪುರ್ ಅಂತ ಹಾರಿ ಹೋಗಿ ನಿಲ್ಲುವ
ಅರೇ ಹಥ್ ಥೇರಕಿ ...
ಉಗುರಿನಿಂದ ಸಿಂಗ ಬಲವಾಗಿ ಚುಚ್ಚಿದಾಗ
ಭಯದಿಂದ ರಂಗ ಠಣ್ ಕೆಳಗೆ ಬಿದ್ದನಾಗ
ಅರೇ ನಹೀ ನಹೀ ...
ರಂಗ ಕೋಪದಿಂದ ನುಗ್ಗಿ ಬಂದು ಕೊಲ್ಲುವಾ
ಆವ ಜಂಭದಿಂದ ತಲೆ ಎತ್ತಿ ನಿಲ್ಲುವಾ
ರಂಗ ಕೋಪದಿಂದ ನುಗ್ಗಿ ಬಂದು ಕೊಲ್ಲುವಾ
ಆವ ಜಂಭದಿಂದ ತಲೆ ಎತ್ತಿ ನಿಲ್ಲುವಾ
ಹೈ ನೋಡ್ತಿನಿ ಒಂದು ಕೈ, ಮೀಸೆ ಮೇಲೆ ಸೈ  
ಸೋತು ನೀನು ಹಿಸುಕ ಬೇಕು ಕೈ ಕೈ ಕೈಸ್
ಅರೇ ಬಾಜಿ ಕಟ್ಟಿ ನೋಡು ಬಾರಾ ಮೀಸೆ ಮಾವಾ
ಅಹ್ ಬಾಜಿ ಕಟ್ಟಲೆಂದು ಬಂದೆ ಗಂಡುಬೀರಿ ಹೆಣ್ಣೇ
ವಾಹರೇ ಮೇರಾ ಮುರಘಾ, ವಾಹರೇ ನನ್ನ ರಂಗಾ
ಸಿಂಗನ ಮುಂದೆ ರಂಗನು ಎಂದು ಇಂಗು ತಿಂದ ಮಂಗ
ಬಾಜಿ ಕಟ್ಟಿ ನೋಡು ಬಾರಾ ಮೀಸೆ ಮಾವ
ಅಹ..  ಬಾಜಿ ಕಟ್ಟಲೆಂದು ಬಂದೆ ಗಂಡುಬೀರಿ ಹೆಣ್ಣೇ
ಓ.. ಮಾವ..  ಓ.. ಹೆಣ್ಣೇ...  ಓ.. ಮಾವ..  ಓ.. ಹೆಣ್ಣೇ...  ಓ.. ಮಾವಾ.. 

No comments:

Post a Comment