47. ಆಕಾಶ್ (2005)

ಆಕಾಶ ಚಲನಚಿತ್ರದ ಹಾಡುಗಳು 
  1. ಆಹಾ ಎಂಥಾ ಆ ಕ್ಷಣ, ನೆನೆದರೆ ತಲ್ಲಣ
  2. ನೀನೆ ನೀನೆ ನನಗೆಲ್ಲ ನೀನೆ 
  3. ಹಬ್ಬ ಹಬ್ಬ 
  4. ಹೋಡಿ ಹೋಡಿ 
  5. ಓ ಮಾರಿಯಾ  
  6. ಏನಿದು ಈ ದಿನ 
  7. ಆಹಾ ಎಂಥಾ ಆ ಕ್ಷಣ, ನೆನೆದರೆ ತಲ್ಲಣ (ಚಿತ್ರಾ) 
ಆಕಾಶ್ (2005) - ಆಹಾ ಎಂಥಾ ಆ ಕ್ಷಣ, ನೆನೆದರೆ ತಲ್ಲಣ
ಸಂಗೀತ : ಆರ್.ಪಿ.ಪಾಟ್ನಾಯಕ, ಸಾಹಿತ್ಯ: ಕೆ ಕಲ್ಯಾಣ್  ಗಾಯನ : ಶ್ರೇಯ ಘೋಷಾಲ್

ಆಹಾ ಎಂಥಾ ಆ ಕ್ಷಣ, ನೆನೆದರೆ ತಲ್ಲಣ
ತನ್ನಂತಾನೇ ಎದೆಯಲಿ ಪ್ರೀತಿಯ ನರ್ತನ
ಇದು ಯಾವಾಗ ಹೇಗಾಯ್ತೋ ಯಾಕೆ ಅಂತ ಗೊತ್ತೇ ಆಗಲಿಲ್ಲ

ಈ ಪ್ರೀತೀಲಿ ಏನಿಂಥ ಮಾಯ ಮಂತ್ರ, ಒಂದೂ ತಿಳಿಯಲಿಲ್ಲ
ಕಣ್ಗಳ ಮಾತಿಗೆ ತುಟಿಗಳು ಮೌನವು
ಹೃದಯವು ಬೆರೆತರೆ ಉಳಿದವು ಗೌಣವು
ನಿನ್ನೆಯ ವರೆಗೂ ನಾ ಹೇಗೋ ಇದ್ದೆ
ನಾ ಬೇರೆ ನೀ ಬೇರೆ ಅಂತಿದ್ದೆ
ನೆಪ ಮಾತ್ರಕೆ ಎರಡು ದೇಹ ಇದೆ
ಅದರೊಳಗಿರೋ ಪ್ರಾಣವು ಒಂದೇ
ಈ ಪ್ರಾಣಾನೇ ನಿನಗಾಗಿ ಮೀಸಲಿಡುವೆ ಬಾರೋ ನನ್ನ ಗೆಳೆಯ
ನಿನ್ನ ಪ್ರೀತಿಗೆ ಏಳೇಳು ಜನ್ಮದಲ್ಲೂ ಮುಡಿಪು ನನ್ನ ಹೃದಯ
ಆಹಾ ಎಂಥ ಆ ಕ್ಷಣ...

ನದಿಗಳು ಓಡಿವೆ ಕಡಲನು ಸೇರಲು
ಚೈತ್ರವ ಕಾದಿದೆ ಹೂಗಳು ಅರಳಲು
ಸಂಗೀತ ಸಾಹಿತ್ಯ ಒಂದಾದಂತೆ
ಹಾಲಲ್ಲಿ ಬೆರೆತಿರುವ ಜೇನಂತೆ
ಸೂಜಿಯ ಹಿಂದಿನ ದಾರದಂತೆ
ನಾ ಬರುವೆ ಜೊತೆಯಾಗಿ ನೆರಳಂತೆ
ಈ ಪ್ರೀತಿಯು ಈ ನಮ್ಮ ಬಾಳಿನಲ್ಲಿ ಎಂದೂ ಹೀಗೆ ಇರಲಿ
ನಿನ್ನ ಪ್ರೀತೀನೆ ನನ್ನೆದೆಯ ಜ್ಯೋತಿಯಾಗಿ ಎಂದೂ ಬೆಳಗುತಿರಲಿ
ಆಹಾ ಎಂಥ ಆ ಕ್ಷಣ...
---------------------------------------------------------------------------------------------------------------------

ಆಕಾಶ್ (2005) - ನೀನೆ ನೀನೆ ನನಗೆಲ್ಲ ನೀನೆ  
ಸಾಹಿತ್ಯ: ಕೆ ಕಲ್ಯಾಣ್ ಸಂಗೀತ : ಆರ್.ಪಿ.ಪಾಟ್ನಾಯಕ ಗಾಯನ : ಕುನಲ್ ಗುಂಜಾವಾಲಾ

ನೀನೆ ನೀನೆ ನನಗೆಲ್ಲ ನೀನೆ ಮಾತು ನೀನೆ ಮನಸೆಲ್ಲಾ ನೀನೆ
ನನ್ನ ಎದೆಯ ತುಂಬಾ ನಿನ್ನ ಪ್ರೀತಿ ತಾನೇ ನೀನು ಇರದ ಮೇಲೆ ಹೇಗೆ ಇರಲಿ ನಾ ಹೇಳೆ ಜಾಣೇ...
ನೀನೆ ನೀನೆ ನನಗೆಲ್ಲ ನೀನೆ ಮಾತು ನೀನೆ ಮನಸೆಲ್ಲಾ ನೀನೆ
ನನ್ನ ಎದೆಯ ತುಂಬಾ ನಿನ್ನ ಪ್ರೀತಿ ತಾನೇ ನೀನು ಇರದ ಮೇಲೆ ಹೇಗೆ ಇರಲಿ ನಾ ಹೇಳೆ ಜಾಣೇ...

ಮಲೆಯಲ್ಲೂ ನಾ ಬಿಸಿಲಾಲ್ಲೂ ನಾ ಚಳಿಯಲ್ಲೂ ನಾ ಜೊತೆ ನಡೆಯುವೆ...
ಹಸಿವಲ್ಲು ನಾ ನೋವಲ್ಲು ನಾ ಸಾವಾಲ್ಲು ನಾ ಜೊತೆ ನಿಲ್ಲುವೆ...
ನಾನಾ ದೇಶ ನಾನಾ ವೇಷ ಯಾವುದಾದರೇನು ಒಪ್ಪಿಕೊಂಡ ಈ ಮನಸಿಗೆ ನೆರಳು ಎಂದು ಹಾಲು ಜೇನೂ...
ನೀನೆ ನೀನೆ, ನೀನೆ ನೀನೆ....
ನೀನೆ ನೀನೆ ನನಗೆಲ್ಲ ನೀನೆ ಮಾತು ನೀನೆ ಮನಸೆಲ್ಲಾ ನೀನೆ
ನನ್ನ ಎದೆಯ ತುಂಬಾ ನಿನ್ನ ಪ್ರೀತಿ ತಾನೇ ನೀನು ಇರದ ಮೇಲೆ ಹೇಗೆ ಇರಲಿ ನಾ ಹೇಳೆ ಜಾಣೇ...

ಕ್ಷಣವಾಗಲೀ ದಿನವಾಗಲೀ ಯುಗವಾಗಲೀ ನಾ ಕಾಯುವೆ...
ಕಲ್ಲಾಗಲಿ ಮುಳ್ಳಾಗಲಿ ನಿನ ಬದುಕಲೀ ಬೆಳಕಾಗುವೆ...
ಏನೇ ಆಗಲಿ ಪ್ರಾಣ ಹೋಗಲಿ ನನಗೆ ನೀನೆ ಬೇಕು...
ನಿನ್ನ ನನ್ನ ಈ ಪ್ರೀತಿಯ ಕಂಡು ಲೋಕ ಮೆಚ್ಚಬೇಕೂ....
ನೀನೆ ನೀನೆ, ನೀನೆ ನೀನೆ....
ನೀನೆ ನೀನೆ ನನಗೆಲ್ಲ ನೀನೆ ಮಾತು ನೀನೆ ಮನಸೆಲ್ಲಾ ನೀನೆ
ನನ್ನ ಎದೆಯ ತುಂಬಾ ನಿನ್ನ ಪ್ರೀತಿ ತಾನೇ ನೀನು ಇರದ ಮೇಲೆ ಹೇಗೆ ಇರಲಿ ನಾ ಹೇಳೆ ಜಾಣೇ...
ನೀನೆ ನೀನೆ ಮ್ ಹ್ಣೂ ಹ್ಣೂ ಹ್ಣೂ ಹ್ಣೂ...
ಮಾತು ನೀನೆ ಮ್ ಹ್ಣೂ ಹ್ಣೂ ಹ್ಣೂ ಹ್ಣೂ...
ಲಾ ಲಾ ಲಾ ಲಾ ಮ್ ಹ್ಣೂ ಹ್ಣೂ ಹ್ಣೂ ಹ್ಣೂ...
-------------------------------------------------------------------------------------------------------------

ಆಕಾಶ್ (2005) - ಹಬ್ಬ ಹಬ್ಬ
ಸಾಹಿತ್ಯ: ಕೆ ಕಲ್ಯಾಣ್ ಸಂಗೀತ : ಆರ್.ಪಿ.ಪಾಟ್ನಾಯಕ ಗಾಯನ : ಉದಿತ್ ನಾರಾಯಣ

ನಗು ನಗುತಿರುವಾಗ ಮನಸಿಗೇ ಹುಮ್ಮಸ್ಸೂ ಬದುಕನು ಕಲಿತಾಗ ಲೈಫೇ ಈ ಸಕ್ಸಸ್ಸೂ 
ಇದು ಒಂಟಿ ಜೀವಗಳೂ ಜಂಟಿಯಾಗುವ ಸಂಭ್ರಮದ ವಯಸ್ಸೂ ... 
ಹಬ್ಬ ಹಬ್ಬ ಹಬ್ಬ ಹಬ್ಬ ಹಬ್ಬ ಹಬ್ಬ ಮದುವೇ ಹಬ್ಬ 
ನಗು ನಗುತಿರುವಾಗ ಮನಸಿಗೇ ಹುಮ್ಮಸ್ಸೂ ಬದುಕನು ಕಲಿತಾಗ ಲೈಫೇ ಈ ಸಕ್ಸಸ್ಸೂ 
ಇದು ಒಂಟಿ ಜೀವಗಳೂ ಜಂಟಿಯಾಗುವ ಸಂಭ್ರಮದ ವಯಸ್ಸೂ ... 
ಹಬ್ಬ ಹಬ್ಬ ಹಬ್ಬ ಹಬ್ಬ ಹಬ್ಬ ಹಬ್ಬ ಮದುವೇ ಹಬ್ಬ 

ಹೆಣ್ಣು ಹೆತ್ತವರಿಗೇ ಗಂಡು ಹುಡ್ಕೋದು ಕಷ್ಟ ಗಂಡು ಸೆಟ್ ಆದ್ಮೇಲೇ ಜೇಬಿಗೇ ನಷ್ಟ 
ಡಿಗ್ರೀ ಓದಿದ ಹುಡುಗಿಗೇ ಡಾಕ್ಟ್ರೇ ಬೇಕು ಅಂತಾರೇ 
ಇಂಜಿನಿಯರ್ ಹುಡುಗಂಗೇ ಎಲ್ಲರೂ ಬಾಯಿ ಬಾಯಿ ಬಿಡತಾರೇ 
ಥಳಕು ಬಳುಕಿನ ಸ್ಟಂಟ್ ಎಲ್ಲಾ ಬದುಕಿಗೆ ಇಂಪಾರ್ಟೆಂಟ್ ಅಲ್ಲಾ 
ಮ್ಯಾರೇಜಿಗೇ ಹಸಬಂಡ ವೈಫಲೀ ನಗು ಇರಬೇಕು ಲೈಫಲ್ಲೀ ನಗು 
(ನಗು ನಗುತಿರುವಾಗ ಮನಸಿಗೇ ಹುಮ್ಮಸ್ಸೂ ಬದುಕನು ಕಲಿತಾಗ ಲೈಫೇ ಈ ಸಕ್ಸಸ್ಸೂ) 

ಇದು ಹೊಸ ಜೀವನ ತೋಗು ಮಜಾನ ಬಿಡು ಎಲ್ಲ ದುಃಖನಾ ಪಡಿ ಸುಖನಾ 
ಬಿಡ್ರೀ ಸ್ವಾಮೀ ಟೆನಷನೂ ನಡಿಸರಿ ಚೆನ್ನಾಗಿ ಫಂಕಷನ್ನೂ 
ಮದುವೇ ಮಂಗಳ ಕಾರ್ಯದಲೀ  ಮನಸ್ಸೂ ನಿಮಗಿರಲೀ 
ಬಂಧು ಬಳಗ ಬಂದಾಯಿತು ತಾಳಿ ಕಟ್ಟೋ ಟೈಮ್ ಆಯಿತೂ    
ಬರಲೀ ಬೇಗ ಅಳಿಯಂದ್ರೂ ಹೇಳಲೀ ಮಂತ್ರ ಅಯ್ಯನೋವ್ರು 
(ಧೀನಕ್ ಧೀನಕ್ )
ನಗು ನಗುತಿರುವಾಗ ಮನಸಿಗೇ ಹುಮ್ಮಸ್ಸೂ ಬದುಕನು ಕಲಿತಾಗ ಲೈಫೇ ಈ ಸಕ್ಸಸ್ಸೂ
ಇದು ಒಂಟಿ ಜೀವಗಳೂ ಜಂಟಿಯಾಗುವ ಸಂಭ್ರಮದ ವಯಸ್ಸೂ ... 
ಹಬ್ಬ ಹಬ್ಬ ಹಬ್ಬ ಹಬ್ಬ ಎವರಿಬಡಿ ಹಬ್ಬ ಹಬ್ಬ ಮದುವೇ ಹಬ್ಬ 
ಹಬ್ಬ ಹಬ್ಬ ಹಬ್ಬ ಹಬ್ಬ ಹಬ್ಬ ಹಬ್ಬ ಹಬ್ಬ ಹಬ್ಬ ಹಬ್ಬ ಹಬ್ಬ ಮದುವೇ ಹಬ್ಬ 
-------------------------------------------------------------------------------------------------------------

ಆಕಾಶ್ (2005) - ಹೋಡಿ ಹೋಡಿ
ಸಾಹಿತ್ಯ: ಕೆ ಕಲ್ಯಾಣ್ ಸಂಗೀತ : ಆರ್.ಪಿ.ಪಾಟ್ನಾಯಕ ಗಾಯನ : ಪುನೀತ್ ರಾಜಕುಮಾರ್

ಹೊಡಿ ಹೊಡಿ ಹೊಡಿ ಹೊಡಿ ಡೋಲು ಹೊಡಿ ತಕಧಿಮಿ ಎರಡೇಟು ತಮಟೆ ಬಡಿ
ಹೊಡಿ ಹೊಡಿ ಹೊಡಿ ಹೊಡಿ ಡೋಲು ಹೊಡಿ ತಕಧಿಮಿ ಎರಡೇಟು ತಮಟೆ ಬಡಿ
ಎಂಗಾದ್ರು ಬೀಳಲಿ ಸ್ಟೆಪ್ಪುಗಳು ದಿಕ್ಕಾಪಾಲಾಗಲಿ ದಿಕ್ಕುಗಳು
ಭೇದನೆ ಇಲ್ಲ ಕಣೊ .. ಎಲ್ಲಾರು ಒಂದೇ ಕಣೋ  ಲೋ..
ಹೇ ಕುಲದಲ್ಲಿ ಕೀಳ್ಯಾವುದೋ ಹುಚ್ಚಪ್ಪ ಮತದಲ್ಲಿ ಮೇಲ್ಯಾವುದೊ
ಹೇ ಕುಲದಲ್ಲಿ ಕೀಳ್ಯಾವುದೋ ಹುಚ್ಚಪ್ಪ ಮತದಲ್ಲಿ ಮೇಲ್ಯಾವುದೊ
ಹೊಡಿ ಹೊಡಿ ಹೊಡಿ ಹೊಡಿ ಡೋಲು ಹೊಡಿ ತಕಧಿಮಿ ಎರಡೇಟು ತಮಟೆ ಬಡಿ
ಹೊಡಿ ಹೊಡಿ ಹೊಡಿ ಹೊಡಿ ಡೋಲು ಹೊಡಿ ತಕಧಿಮಿ ಎರಡೇಟು ತಮಟೆ ಬಡಿ

ಹೇ ಯಾಕೊ ಮಗ ಯಾಕೊ ಮಗ ಬೇಸರ ಯಾಕೋ  ಕಾಲರನು ಮೇಲೆತ್ತಿ ಹಾಡು ಬಾ..
ಹಾಕು ಮಗ ಹಾಕು ಮಗ ತಾಳ ಹಾಕು ರೀಲು ಬಿಟ್ಟು ಮೋಜು ಮಸ್ತಿ ಮಾಡು ಬಾ
ಆಡು ಮಗ ಆಡು ಬಾ ಟಪ್ಪಾಂಗುಚ್ಚಿ ಮಾಡುಬಾ ಖುಶಿಯಾಗಿ ಕುಣಿಯೋಣ ರಂಗಿನ ಹಬ್ಬ
ನೋಡು ಮಗ ನೋಡು ಬಾ ಮುಕಾಬುಲ್ಲಾ ಮಾಡು ಬಾ ಚಿಂತೆಗಳ ಕಂತೆ ಕಟ್ಟಿ ಎಸೆಯೊ ಸುಬ್ಬಾ 
ಕುಲದಲ್ಲಿ ಕೀಳ್ಯಾವುದೋ ಹುಚ್ಚಪ್ಪ ಮತದಲ್ಲಿ ಮೇಲ್ಯಾವುದೊ
ಹೇ ಕುಲದಲ್ಲಿ ಕೀಳ್ಯಾವುದೋ ಹುಚ್ಚಪ್ಪ ಮತದಲ್ಲಿ ಮೇಲ್ಯಾವುದೊ
ಹೊಡಿ ಹೊಡಿ ಹೊಡಿ ಹೊಡಿ ಡೋಲು ಹೊಡಿ ತಕಧಿಮಿ ಎರಡೇಟು ತಮಟೆ ಬಡಿ
ಹೊಡಿ ಹೊಡಿ ಹೊಡಿ ಹೊಡಿ ಡೋಲು ಹೊಡಿ ತಕಧಿಮಿ ಎರಡೇಟು ತಮಟೆ ಬಡಿ

ನೇರ ನಡೆ ನೇರ ನುಡಿ ನೀತಿ ನಮ್ಮದು ಸುಳ್ಳು ಪೊಳ್ಳು ನಮ್ಮ ಮುಂದೆ ಸಲ್ಲದು
ಕೈ ಮುಗಿಯೊರ್ ಕೈ ಹಿಡಿಯೊ ಪ್ರೀತಿ ನಮ್ಮದು  ಕೈ ಎತ್ದೊರ್ ತಲೆ ತಗಿಯೋ ಕೈಯ್ಯಿದು
ಮಾಸ್ಟರಿಗೆ ಮಾಸ್ಟರು ಆಕ್ಟರಿಗೆ ಆಕ್ಟರು  ಕನ್ನಡವೆ ನಮ್ಮುಸಿರು ಎಂದೆಂದಿಗು
ಯಾರೆ ಏನೆ ಅಂದರು ನಿನ್ನ ಹಾಗೆ ನೀನಿರು ಗುರಿ ಒಂದೆ ಮುಖ್ಯ ಎಂದು ಮರೆಯದಿರು
ಕುಲದಲ್ಲಿ ಕೀಳ್ಯಾವುದೋ ಹುಚ್ಚಪ್ಪ ಮತದಲ್ಲಿ ಮೇಲ್ಯಾವುದೊ
ಹೇ ಕುಲದಲ್ಲಿ ಕೀಳ್ಯಾವುದೋ ಹುಚ್ಚಪ್ಪ ಮತದಲ್ಲಿ ಮೇಲ್ಯಾವುದೊ
ಹೊಡಿ ಹೊಡಿ ಹೊಡಿ ಹೊಡಿ ಡೋಲು ಹೊಡಿ ತಕಧಿಮಿ ಎರಡೇಟು ತಮಟೆ ಬಡಿ
ಹೊಡಿ ಹೊಡಿ ಹೊಡಿ ಹೊಡಿ ಡೋಲು ಹೊಡಿ ತಕಧಿಮಿ ಎರಡೇಟು ತಮಟೆ ಬಡಿ
ಕುಲದಲ್ಲಿ ಕೀಳ್ಯಾವುದೋ ಹುಚ್ಚಪ್ಪ ಮತದಲ್ಲಿ ಮೇಲ್ಯಾವುದೊ
ಹೇ ಕುಲದಲ್ಲಿ ಕೀಳ್ಯಾವುದೋ ಹುಚ್ಚಪ್ಪ ಮತದಲ್ಲಿ ಮೇಲ್ಯಾವುದೊ
ಕುಲದಲ್ಲಿ ಕೀಳ್ಯಾವುದೋ ಹುಚ್ಚಪ್ಪ ಮತದಲ್ಲಿ ಮೇಲ್ಯಾವುದೊ
ಹೇ ಕುಲದಲ್ಲಿ ಕೀಳ್ಯಾವುದೋ ಹುಚ್ಚಪ್ಪ ಮತದಲ್ಲಿ ಮೇಲ್ಯಾವುದೊ
------------------------------------------------------------------------------------------------------------

ಆಕಾಶ್ (2005) - ಓ ಮಾರಿಯಾ  
ಸಾಹಿತ್ಯ: ಕೆ ಕಲ್ಯಾಣ್ ಸಂಗೀತ : ಆರ್.ಪಿ.ಪಾಟ್ನಾಯಕ ಗಾಯನ : ಕುನಲ್ ಗುಂಜಾವಾಲಾ 

-------------------------------------------------------------------------------------------------------------

ಆಕಾಶ್ (2005) - ಏನಿದು ಈ ದಿನ
ಸಾಹಿತ್ಯ: ಕೆ ಕಲ್ಯಾಣ್ ಸಂಗೀತ : ಆರ್.ಪಿ.ಪಾಟ್ನಾಯಕ ಗಾಯನ : ರಾಜೇಶ ಕೃಷ್ಣನ್

ತಾ ದ ರಿ ನ ತ ನ ಧೀಮ್ ತನ ತ ದ ರಿ ನ ತನ ಧಿಮ ತನ  
ಧೀಮ್ ತ ಧೀಮ್ ತ ಧೀ ರೇ ನ ತ ದ ರಿ ದ 
ಧೀಮ್ ತ ಧೀಮ್ ತ ಧೀ ರೇ ನ ಧೀಮ್ ತ ಧೀಮ್ ತ ಧೀ ರೇ ನ ತ ದ ರಿ ದ ನಿ 
ಧೀಮ್ ತ ಧೀಮ್ ತ ಧೀ ರೇ ನ ಧೀಮ್ ತ ಧೀಮ್ ತ ಧೀ ರೇ ನ ತ ದ ರಿ ದ ನಿ 
ಧೀಮ್ ತ ಧೀಮ್ ತ ಧೀ ರೇ ನ
ಏನಿದೂ ಈ ದಿನ ಕಣ ಕಣ ಕಂಪನ 
ಏನಿದೂ ಈ ದಿನ ಕಣ ಕಣ ಕಂಪನ 
ಇಂಥ ಆರಂಭಕೆ ಇಲ್ಲೀ ಏನೂ ಕಾರಣ ಅರ್ಥವಾಗೋದಿಲ್ಲ 
ನಿನ್ನಲೇ ನೂರು ಪ್ರಶ್ನೆನಾ ಕೇಳಿಕೊಂಡರೂ ಉತ್ತರಾನೇ ಇಲ್ಲಾ 
ಏನಿದೂ ಈ ದಿನ ಕಣ ಕಣ ಕಂಪನ 
ಏನಿದೂ ಈ ದಿನ ಕಣ ಕಣ ಕಂಪನ 

ಕಂಗಳ ಸೆಳೆತಕೇ ಸೋತಿದೆ ಮನಸಿದು ದೇವರ ಲೆಕ್ಕವೂ ಎಂದಿಗೂ ತಪ್ಪದೂ 
ಕುಣಿಸುವ ಪ್ರೀತಿಯ ಅಂಗೈಯಲ್ಲಿ ಕೈ ಗೊಂಬೆ ಎಂದೆಂದೂ ನಾವಿಲ್ಲೀ 
ಕಲ್ಲಾದ ಮನಸ್ಸಿಗ ಕರಗೋತ್ತಿತ್ತು ಆಸೆಯೂ ಎದೆ ತುಂಬಿ ಹಾಡಾಯಿತು 
ಈ ಪ್ರೀತಿಗೇ ಬಂತೀಗ ಚೈತ್ರ ಕಾಲ ಕಣ್ಣು ತೆರೆದೂ ನೋಡೂ 
ನಿನ್ನೇ ನಾಳೆಯ ಚಿಂತೆಯ ದೂರ ಮಾಡಿ ಮನಸೂ ಬಿಚ್ಚಿ ಹಾಡೂ .. ಆಆಆ   
-------------------------------------------------------------------------------------------------------------

ಆಕಾಶ್ (2005) - ಆಹಾ ಎಂಥಾ ಆ ಕ್ಷಣ, ನೆನೆದರೆ ತಲ್ಲಣ (ಚಿತ್ರಾ)
ಸಾಹಿತ್ಯ: ಕೆ ಕಲ್ಯಾಣ್ ಸಂಗೀತ : ಆರ್.ಪಿ.ಪಾಟ್ನಾಯಕ ಗಾಯನ : ಚಿತ್ರಾ

ಆಹಾ ಎಂಥಾ ಆ ಕ್ಷಣ, ನೆನೆದರೆ ತಲ್ಲಣ
ತನ್ನಂತಾನೇ ಎದೆಯಲಿ ಪ್ರೀತಿಯ ನರ್ತನ
ಇದು ಯಾವಾಗ ಹೇಗಾಯ್ತೋ ಯಾಕೆ ಅಂತ ಗೊತ್ತೇ ಆಗಲಿಲ್ಲ 
ಈ ಪ್ರೀತೀಲಿ ಏನಿಂಥ ಮಾಯ ಮಂತ್ರ, ಒಂದೂ ತಿಳಿಯಲಿಲ್ಲ
ಆಹಾ ಎಂಥಾ ಆ ಕ್ಷಣ, ನೆನೆದರೆ ತಲ್ಲಣ

ಕಣ್ಗಳ ಮಾತಿಗೆ ತುಟಿಗಳು ಮೌನವು ಹೃದಯವು ಬೆರೆತರೆ ಉಳಿದವು ಗೌಣವು
ನಿನ್ನೆಯವರೆಗೂ ನಾ ಹೇಗೋ ಇದ್ದೆ ನಾ ಬೇರೆ ನೀ ಬೇರೆ ಅಂತಿದ್ದೆ
ನೆಪಮಾತ್ರಕೆ ಎರಡು ದೇಹ ಇದೆ ಅದರೊಳಗಿರೋ ಪ್ರಾಣವು ಒಂದೇ 
ಈ ಪ್ರಾಣಾನೇ ನಿನಗಾಗಿ ಮೀಸಲಿಡುವೆ ಬಾರೋ ನನ್ನ ಗೆಳೆಯ
ನಿನ್ನ ಪ್ರೀತಿಗೆ ಏಳೇಳು ಜನ್ಮದಲ್ಲೂ ಮುಡಿಪು ನನ್ನ ಹೃದಯ 
ಆಹಾ ಎಂಥಾ ಆ ಕ್ಷಣ, ನೆನೆದರೆ ತಲ್ಲಣ

ನದಿಗಳು ಓಡಿವೆ ಕಡಲನು ಸೇರಲು ಚೈತ್ರವ ಕಾದಿವೇ ಹೂಗಳು ಅರಳಲು
ಸಂಗೀತ ಸಾಹಿತ್ಯ ಒಂದಾದಂತೆ ಹಾಲಲ್ಲಿ ಬೆರೆತಿರುವ ಜೇನಂತೆ 
ಸೂಜಿಯ ಹಿಂದಿರುವ ದಾರದಂತೆ ನಾ ಬರುವೆ ಜೊತೆಯಾಗಿ ನೆರಳಂತೆ
ಈ ಪ್ರೀತಿಯು ಈ ನಮ್ಮ ಬಾಳಿನಲ್ಲಿ ಎಂದೂ ಹೀಗೆ ಇರಲಿ 
ನಿನ್ನ ಪ್ರೀತೀನೆ ನನ್ನೆದೆಯ ಜ್ಯೋತಿಯಾಗಿ ಎಂದೂ ಬೆಳಗುತಿರಲಿಆಹಾ ಎಂಥಾ ಆ ಕ್ಷಣ, ನೆನೆದರೆ ತಲ್ಲಣ
-------------------------------------------------------------------------------------------------------------

No comments:

Post a Comment