510. ಯಾವ ಹೂವು ಯಾರ ಮುಡಿಗೋ (೧೯೮೧)

ಯಾವ ಹೂವೂ ಯಾರ ಮುಡಿಗೋ ಚಲನ ಚಿತ್ರದ ಹಾಡುಗಳು 
  1. ನಿಲ್ಲಲಾರೆ ನಿಲ್ಲಲಾರೆ ಹೇಳಲಾರೆ ತಾಳಲಾರೆ
  2. ಚೆಲುವಾದ ಹೂವೇ ಚಂಗುಲಾಬೀ ಹೂವೇ 
  3. ಆಡುವಾ ತೇಲಾಡುವಾ 
  4. ಯಾವ ಜೀವದ ಹಾದಿ 
ಯಾವ ಹೂವು ಯಾರ ಮುಡಿಗೋ (೧೯೮೧)......ನಿಲ್ಲಲಾರೆ ನಿಲ್ಲಲಾರೆ
ಸಂಗೀತ : ರಾಜನ್ - ನಾಗೇಂದ್ರ ಸಾಹಿತ್ಯ :ಎನ್.ಎಸ್.ಲಕ್ಷ್ಮೀನಾರಾಯಣಭಟ್ಟ  ಗಾಯನ : ಎಸ್.ಜಾನಕಿ

ಆ... ಅಹ್ಹಹ್ಹಹ್ಹ ..
ನಿಲ್ಲಲಾರೆ ನಿಲ್ಲಲಾರೆ ಹೇಳಲಾರೆ ತಾಳಲಾರೆ
ಒಲುಮೆ ಚಿಮ್ಮಿ ಹರುಷ ಹೊಮ್ಮಿ ದಾಟಿದೆ ಮೇರೆ.. ಹ್ಹಾ.. ಹ್ಹಾ.. ಹ್ಹಾ.. ಅಹ್ಹಹ್ಹಹ್ಹ..
ಒಲುಮೆ ಚಿಮ್ಮಿ ಹರುಷ ಹೊಮ್ಮಿ ದಾಟಿದೆ ಮೇರೆ
ಪ್ರೇಮಿಯ ಸವಿಮಿಲನದ ಚಂದ ತಂತು ಈ ಬಂಧ ಎಂಥಾ ಆನಂದ
ತಂತು ಈ ಬಂಧ ಎಂಥಾ ಆನಂದ
ನಿಲ್ಲಲಾರೆ ನಿಲ್ಲಲಾರೆ ಹೇಳಲಾರೆ ತಾಳಲಾರೆ 
ಒಲುಮೆ ಚಿಮ್ಮಿ ಹರುಷ ಹೊಮ್ಮಿ ದಾಟಿದೆ ಮೇರೆ

ಸಂಜೆಯ ರವಿಯ ಸುಂದರ ಬಿಂಬ ಚೆoದಾದ ಸಿಂಧೂರ ಬಾನಿನ ಹಣೆಗೆ
ಹಕ್ಕಿಯ ಮೋದ ಚಿಲಿಪಿಲಿ ನಾದ ನೂಪುರದ ದನಿಯಾಯ್ತು ಕೇಳುವ ಕಿವಿಗೆ
ಗಿರಿಗಳ ಸಾಲೆ ಕರಿಮಣೆ ಮಾಲೆ ಚೆಲುವಾಯ್ತು ಭೂದೇವಿ ಸಿರಿಯಲೆ ಮೇಲೆ
ನಲ್ಲನ ಕೈಯ ಹಿಡಿಯುವ ಹೆಣ್ಣ ಸೌಭಾಗ್ಯ ಸಿರಿಯಾಯ್ತು ಚೆಲುವಿನ ಲೀಲೆ
ರೋಮಾಂಚ ತಂದಿದೆ ಈ ಕಲ್ಪನಧಾರೆ
ನಿಲ್ಲಲಾರೆ ನಿಲ್ಲಲಾರೆ ಹೇಳಲಾರೆ ತಾಳಲಾರೆ ಒಲುಮೆ ಚಿಮ್ಮಿ ಹರುಷ ಹೊಮ್ಮಿ ದಾಟಿದೆ ಮೇರೆ

ಕಾಡಿನ ನಡುವೆ ಆಡುವ ತೊರೆಯು ಓಡೋಡಿ ಕಡಲನ್ನು ಕೂಡುವ ರೀತಿ
ಸಾಕಿದೆ ನನ್ನ ಸ್ನೇಹದ ನದಿಯು ನನ್ನವನ ಬಾಳಲ್ಲಿ ಬೆರೆಸಲು ಪ್ರೀತಿ
ಪ್ರೇಮದ ಕನಸು ಆಗಲಿ ನನಸು ಉಳಿದಿರಲಿ ಎಂದೆಂದೂ ಬದುಕಿಗೆ ಸೊಗಸು
ಕಾತರ ಮೀರಿ ಕಾಯುವೆ ದಾರಿ ಬರಲೆಂದು ನನ್ನ ಇನಿಯ ಪ್ರೀತಿಯ ತೋರಿ
ರೋಮಾಂಚ ತಂದಿದೆ ಈ ಕಲ್ಪನಧಾರೆ
ನಿಲ್ಲಲಾರೆ ನಿಲ್ಲಲಾರೆ ಹೇಳಲಾರೆ ತಾಳಲಾರೆ ಒಲುಮೆ ಚಿಮ್ಮಿ ಹರುಷ ಹೊಮ್ಮಿ ದಾಟಿದೆ ಮೇರೆ
ಒಲುಮೆ ಚಿಮ್ಮಿ ಹರುಷ ಹೊಮ್ಮಿ ದಾಟಿದೆ ಮೇರೆ
 ಪ್ರೇಮಿಯ ಸವಿಮಿಲನದ ಚಂದ ತಂತು ಈ ಬಂಧ ಎಂಥಾ ಆನಂದ
ನಿಲ್ಲಲಾರೆ ನಿಲ್ಲಲಾರೆ ಹೇಳಲಾರೆ ತಾಳಲಾರೆ ಲಲಲಲಲ ಲಲಲಲಲಲಾ ಲಲಲಲಲ ಲಲಲಲಲಲಾ ಲಲಾ 
--------------------------------------------------------------------------------------------------------------------------

ಯಾವ ಹೂವು ಯಾರ ಮುಡಿಗೋ (೧೯೮೧)......ಚೆಲುವಾದ ಹೂವೇ 
ಸಂಗೀತ : ರಾಜನ್ - ನಾಗೇಂದ್ರ ಸಾಹಿತ್ಯ :ದೊಡ್ಡರಂಗೇಗೌಡ  ಗಾಯನ : ಎಸ್.ಪಿ.ಬಿ.  

ಆ... ಆ... ಆ.. ಆಆಆ.... ಓಓಓಓಓ 
ಚೆಲುವಾದ ಹೂವೇ ಚಂಗುಲಾಬೀ ಹೂವೇ ಅನುರಾಗ ತುಂಬಿದ ಹೊನಲಾಗಿ ಬಂದೇ 
ಚೆಲುವಾದ ಹೂವೇ ಚಂಗುಲಾಬೀ ಹೂವೇ ಅನುರಾಗ ತುಂಬಿದ ಹೊನಲಾಗಿ ಬಂದೇ 
ಮೋಹ ನಿಲುಗಾದೇ ನನ್ನ ಜೊತೆಗಾದೇ ಸ್ನೇಹ ಸಂತೋಷ ತಂದೇ 
ಚೆಲುವಾದ ಹೂವೇ ಚಂಗುಲಾಬೀ ಹೂವೇ ಅನುರಾಗ ತುಂಬಿದ ಹೊನಲಾಗಿ ಬಂದೇ 

ಒಲವಿನ ಸವಿನೋಟ  ಬೀರಿ ಗೆಲುವಿನ ನವ ಕಾಂತಿ ತೋರಿ 
ರಾಗ ರಂಗಾಗಿ ಮಿಡಿದೇ ಪ್ರೀತಿ ಸಂಗಾತಿ ನೀನಾದೇ 
ಹೊಸಗೆಯ ಅನುಬಂಧ ಹೊಮ್ಮಿ ಬೆಸುಗೆಯ ಅರವಿಂದ ಹಾದಿ 
ಸೇರಿ ಸಂಬಂಧ ಪಡೆದೇ ಹ್ಹಾಂ ... ಹಾಡಿ ಬಾನಾಡಿ ನಾನಾದೇ 
ಸುಖಮಯ ಹನಿಯಾಗಿ ಮಧುಮಯ ಮನೆಯಾಗಿ ಇಂದೇ ಆನಂದ ನಮಗಾಗಿದೇ 
ಚೆಲುವಾದ ಹೂವೇ ಚಂಗುಲಾಬೀ ಹೂವೇ ಅನುರಾಗ ತುಂಬಿದ ಹೊನಲಾಗಿ ಬಂದೇ 
ಚೆಲುವಾದ ಹೂವೇ ಚಂಗುಲಾಬೀ ಹೂವೇ ಅನುರಾಗ ತುಂಬಿದ ಹೊನಲಾಗಿ ಬಂದೇ 

ಆಹಾ ಆಹಾ ಆಹ್ಹಹ್ಹಹಾ  ಆಆಆಆ ಓಓಓಓಓ ... 
ಬಳುಕುವ ಲತೆಯಾಗಿ ತೂಗಿ ಕುಲುಕುವ ನಗೆಗಾಗಿ ಸಾಗೀ 
ಆಸೇ ಆಕಾಂಕ್ಷೆ ಸೆಳೆದೇ...  ರೂಪ ಸೌಭಾಗ್ಯ ನಿಧಿಯಾದೇ 
ಕಾಮನಬಿಲ್ಲಾಗಿ ಬಾಗಿ ಕೋಗಿಲೆ ಧನಿಯಾಗಿ ಕೂಗಿ 
ಪ್ರೇಮ ಕಾರಂಜಿಯಾದೇ .. ಅಹಹಹ್ ಸೌಮ್ಯ ಸಮ್ಮೋಹ ಸುಧೆಯಾದೇ 
ಕಲೆಯುವ ಸೆಲೆಯಾಗಿ ನಲಿಯುವ ನೆರಳಾಗಿ ಬಾಳ ಹೊಂಬಾಳೆ ಸುಮ ತುಂಬಿದೇ 
ಚೆಲುವಾದ ಹೂವೇ ಚಂಗುಲಾಬೀ ಹೂವೇ ಅನುರಾಗ ತುಂಬಿದ ಹೊನಲಾಗಿ ಬಂದೇ 
ಚೆಲುವಾದ ಹೂವೇ ಚಂಗುಲಾಬೀ ಹೂವೇ ಅನುರಾಗ ತುಂಬಿದ ಹೊನಲಾಗಿ ಬಂದೇ 
ಮೋಹ ಮಿನುಗಾದೇ ನನ್ನ ಜೊತೆಗಾದೇ ಸ್ನೇಹ ಸಂತೋಷ ತಂದೇ 
ಚೆಲುವಾದ ಹೂವೇ ಚಂಗುಲಾಬೀ ಹೂವೇ ಅನುರಾಗ ತುಂಬಿದ ಹೊನಲಾಗಿ ಬಂದೇ 
ಲಲಲಲಾ ಅಹ್ಹಹ್ಹಹ್ಹಾ ಓಹೋಹೊಹೋ ಅಹಹಾಹಾಹಾ 
--------------------------------------------------------------------------------------------------------------------------

ಯಾವ ಹೂವು ಯಾರ ಮುಡಿಗೋ (೧೯೮೧)......ಆಡುವಾ ತೇಲಾಡುವಾ
ಸಂಗೀತ : ರಾಜನ್ - ನಾಗೇಂದ್ರ ಸಾಹಿತ್ಯ :ದೊಡ್ಡರಂಗೇಗೌಡ ಗಾಯನ : ಎಸ್.ಪಿ.ಬಿ. ಎಸ್.ಜಾನಕೀ 

ಗಂಡು : ಆಹಾಹಾ...                            ಹೆಣ್ಣು : ಆಹ್ಹಾಹಾಹಾಹಾ
ಗಂಡು : ಆಡುವಾ ತೇಲಾಡುವಾ ಜೋಡಿ ನಾವಾಗುವಾ  ಆಹ್ಹಾ... 
            ಯೌವ್ವನ ಎಂಬ ದಾರೀ ಸ್ನೇಹದ ಗಂಗೇ ಸೇರಿ ಪ್ರೀತಿಯ ಜೇನ ಹೀರಿ ಹರಿದಾಡುವಾ 
ಹೆಣ್ಣು : ಆಸೆಯ ಹಕ್ಕಿ ಹಾರಿ ಕಾಮನ ಬಿಲ್ಲನೇರಿ ಮಾತು ಮೌನ ಮೀರಿ ಮೆರೆದಾಡುವಾ 
ಹೆಣ್ಣು : ಆಡುವಾ                               ಗಂಡು :  ತೇಲಾಡುವಾ 

ಗಂಡು : ಎಲ್ಲೋ ಮೂಡಿದ ಹೂ ಮಲ್ಲಿಗೇ ಪರಿಮಳವ ಬೀರುತಿದೆ ಇಂದೇತಕೆ 
            ಎಲ್ಲೋ ಮೂಡಿದ ಹೂ ಮಲ್ಲಿಗೇ ಪರಿಮಳವ ಬೀರುತಿದೆ ಇಂದೇತಕೆ  
ಹೆಣ್ಣು : ಮೆಚ್ಚಿನ ಸಂಗಾತಿ ನೆಚ್ಚಿನ ಸಂಪ್ರೀತಿ ಸೋರಿ ಸೆಳೆಯುತಿದೇ ಸಿರಿ ಸಂಗತಿ 
ಗಂಡು : ತಂಗಾಳಿ ಬೀಸಿರಲೂ ಮೈಮನ ಹೂವಾಯ್ತು 
ಹೆಣ್ಣು : ಸಂತೋಷ ತುಳುಕಾಡಿ ತನು ತೂಗಾಡಿತೂ .. 
ಗಂಡು : ಆಡುವಾ ತೇಲಾಡುವಾ 
ಇಬ್ಬರು : ಜೋಡಿ ನಾವಾಗುವಾ ಆಹ್ಹಾ 
ಹೆಣ್ಣು : ಯೌವ್ವನ ಎಂಬ ದಾರೀ ಸ್ನೇಹದ ಗಂಗೇ ಸೇರಿ ಪ್ರೀತಿಯ ಜೇನ ಹೀರಿ ಹರಿದಾಡುವಾ 
ಗಂಡು : ಆಸೆಯ ಹಕ್ಕಿ ಹಾರಿ ಕಾಮನ ಬಿಲ್ಲನೇರಿ ಮಾತು ಮೌನ ಮೀರಿ ಮೆರೆದಾಡುವಾ 
ಗಂಡು : ಆಡುವಾ                               ಹೆಣ್ಣು : ತೇಲಾಡುವಾ 

ಹೆಣ್ಣು : ಎಲ್ಲೇ ಮೀರಿದ ಬಾನಾಡಿಯೂ ಇಂಪಾಗಿ ಹಾಡುತಿದೇ ತಾನೇತಕೆ 
          ಎಲ್ಲೇ ಮೀರಿದ ಬಾನಾಡಿಯೂ ಇಂಪಾಗಿ ಹಾಡುತಿದೇ ತಾನೇತಕೆ 
ಗಂಡು : ಅಕ್ಕರೇ ಒಡನಾಡಿ ನಕ್ಕರೇ ಜೊತೆಗೂಡಿ ಮೋಹ ಮಿಡಿಯುತಿದೇ ತುಂಟಾಟಕೇ 
ಹೆಣ್ಣು : ಕಣ್ಣೋಟ ಕೂಡಿರಲು ಭಾವನೇ ಬೆಳಕಾಯ್ತು 
ಗಂಡು : ಸಂಬಂಧ ಸರಿ ಹೊಂದಿ ಹೊಸ ಬಾಳಾ ಆಯಿತು  
ಹೆಣ್ಣು  : ಆಡುವಾ ತೇಲಾಡುವಾ 
ಇಬ್ಬರು : ಜೋಡಿ ನಾವಾಗುವಾ ಆಹ್ಹಾ 
ಗಂಡು : ಯೌವ್ವನ ಎಂಬ ದಾರೀ            ಹೆಣ್ಣು  : ಸ್ನೇಹದ ಗಂಗೇ ಸೇರಿ 
ಗಂಡು : ಪ್ರೀತಿಯ ಜೇನ ಹೀರಿ 
ಇಬ್ಬರು : ಹರಿದಾಡುವಾ 
ಹೆಣ್ಣು  : ಆಸೆಯ ಹಕ್ಕಿ ಹಾರಿ                 ಗಂಡು: ಕಾಮನ ಬಿಲ್ಲನೇರಿ ಮಾತು ಮೌನ ಮೀರಿ 
ಇಬ್ಬರು : ಮೆರೆದಾಡುವಾ 
ಗಂಡು : ಅಹಹಾ..                             ಹೆಣ್ಣು : ಅಹಹ್ಹಾ  
ಗಂಡು : ಓಹೋಹೋ                        ಹೆಣ್ಣು : ಓಹೋಹೋ  
ಇಬ್ಬರು : ಹೇಹೇಹೇಹೇಹೇ 
--------------------------------------------------------------------------------------------------------------------------

ಯಾವ ಹೂವು ಯಾರ ಮುಡಿಗೋ (೧೯೮೧)......ಯಾವ ಜೀವದ ಹಾದಿ
ಸಂಗೀತ : ರಾಜನ್ - ನಾಗೇಂದ್ರ ಸಾಹಿತ್ಯ :ಲಕ್ಷೀನಾರಾಯಣ ಭಟ್ಟ  ಗಾಯನ : ಎಸ್.ಪಿ.ಬಿ. 

ಯಾವ ಜೀವದ ಹಾದಿ... ಎಲ್ಲೆಲ್ಲೀ ತೇರೆವುದೋ .... ಯಾವ ಬೀದಿಯ..  ತುದಿಯಲ್ಲೋ.. 
ಯಾವ ಜೀವದ ಹಾದಿ ಎಲ್ಲೆಲ್ಲೀ ತೇರೆವುದೋ ಯಾವ ಬೀದಿಯ ತುದಿಯಲ್ಲೋ
ಹೋಗದೇ ತೀರದೂ ವಿಧಿ ಬಂದು ಕರೆಯಲೂ ದೈವದ ಎದೆಯೂ ಬರಿ ಕಲ್ಲೋ 
ದೈವದ ಎದೆಯೂ ಬರಿ ಕಲ್ಲೋ ... 
ಯಾವ ಜೀವದ ಹಾದಿ ಎಲ್ಲೆಲ್ಲೀ ತೇರೆವುದೋ ಯಾವ ಬೀದಿಯ ತುದಿಯಲ್ಲೋ

ಬಾಲಕೀ ಬಡಿಸಿದ ಬಯಕೆಯ ಉಣಿಸೂ ಹಾದಿಯ ಹಕ್ಕಿಯ ಪಾಲಾಯಿತೇ .. 
ಬಾಲಕೀ ಬಡಿಸಿದ ಬಯಕೆಯ ಉಣಿಸೂ ಹಾದಿಯ ಹಕ್ಕಿಯ ಪಾಲಾಯಿತೇ .. 
ತಾಳಿಯ ಪಡೆಯಲೂ ಕಾದಿತ ಬಾಳನು ಹಾಳದ ಚಿಂತೇ ಆವರಿಸಿತೇ 
ಹಾಳದ ಚಿಂತೇ ಆವರಿಸಿತೇ 
ಯಾವ ಜೀವದ ಹಾದಿ ಎಲ್ಲೆಲ್ಲೀ ತೇರೆವುದೋ ಯಾವ ಬೀದಿಯ ತುದಿಯಲ್ಲೋ

ವಾಲಗ ಜಾಗಟೇ ಶಂಖದ ಧನಿ ತುಂಬಿ ಬೀಗಿದ ದೇಗುಲ ಬೀಳಾಯಿತೇ  
ವಾಲಗ ಜಾಗಟೇ ಶಂಖದ ಧನಿ ತುಂಬಿ ಬೀಗಿದ ದೇಗುಲ ಬೀಳಾಯಿತೇ  
ಒಲುಮೆಯ ತೈಲದಲಿ ಉರಿದಂತ ದೀಪವೂ ಒಲೆದಾಡಿ ಗಾಳಿಗೇ ಬೆಳಕಾರಿತೇ 
ಒಲೆದಾಡಿ ಗಾಳಿಗೇ ಬೆಳಕಾರಿತೇ 
ಯಾವ ಜೀವದ ಹಾದಿ ಎಲ್ಲೆಲ್ಲೀ ತೇರೆವುದೋ ಯಾವ ಬೀದಿಯ ತುದಿಯಲ್ಲೋ
ಹೋಗದೇ ತೀರದೂ ವಿಧಿ ಬಂದು ಕರೆಯಲೂ ದೈವದ ಎದೆಯೂ ಬರಿ ಕಲ್ಲೋ 
ದೈವದ ಎದೆಯೂ ಬರಿ ಕಲ್ಲೋ ... 
ಯಾವ ಜೀವದ ಹಾದಿ ಎಲ್ಲೆಲ್ಲೀ ತೇರೆವುದೋ ಯಾವ ಬೀದಿಯ ತುದಿಯಲ್ಲೋ
ತುದಿಯಲ್ಲೋ.. ಆಹ್ಹಾ.. ತುದಿಯಲ್ಲೋ
--------------------------------------------------------------------------------------------------------------------------

No comments:

Post a Comment