514. ಚಂದ್ರಕುಮಾರ (1963)

ಚಂದ್ರಕುಮಾರ ಚಿತ್ರದ ಹಾಡುಗಳು 
  1. ನೀನೇ ನೀರೇ ಮಂದಾರ ಮಂದಿರದಿಂದ ಬಾರೇ 
  2. ಬಣ್ಣದಿಂದ ಬಂಗಾರದಿಂದ 
  3. ಮನಮೋಹನ ಚರಣದಲಿ 
  4. ಗತಿ ಕಾಣೇನೂ ಹೇ ಘನಶ್ಯಾಮ 
  5. ಗೆಜ್ಜೆ ಝಣ ಝಣ ನುಡಿದಾವೇ 
  6. ಬ್ರಹ್ಮದೇವ ಬ್ರಹ್ಮದೇವಾ 
ಚಂದ್ರಕುಮಾರ (1963) - ನೀನೆ ನೀರೆ ಮಂದಾರ ಮಂದಿರದಿಂದ ಬಾರೆ
ಸಾಹಿತ್ಯ: ಎಸ್.ಕೆ.ಕರೀಮಖಾನ, ಸಂಗೀತ:ಟಿ.ಚಲಪತಿರಾವ್, ಎಂ.ವೆಂಕಟರಾಜು ಹಾಡಿದವರು: ಪಿ.ಬಿ.ಶ್ರೀ, ಎಸ್.ಜಾನಕಿ

ಓಓಓ...  ಓಓಓ...
ಗಂಡು : ನೀನೆ ನೀರೆ ಮಂದಾರ ಮಂದಿರದಿಂದ ಬಾರೆ
ಹೆಣ್ಣು : ನೀನೆ ನೀರ ಸಿಂಗಾರ ಸಂಮುದ ತುಂಬಿ ತಾರ
ಗಂಡು : ನೀನೆ ನೀರೆ ಮಂದಾರ ಮಂದಿರದಿಂದ ಬಾರೆ
ಹೆಣ್ಣು : ನೀನೆ ನೀರ ಸಿಂಗಾರ ಸಂಮುದ ತುಂಬಿ ತಾರ
ಗಂಡು : ಓ ರಾಣಿ, (ಓ ಓ ಓ,) ಹೆಣ್ಣು :  ಓ ರಾಜ,( ಅ ಅ ಅ)
ಇಬ್ಬರು : ಈ ರಾಗ ಈ ಭೋಗದಿಂದ ಸಂಗೀತದಾನಂದ ತಂದ
              ಮಧುರ ದಿನ ನಿಜ ಮಿಲನ ನಲಿಯುತ ಹಾಡೋಣ
ಗಂಡು : ನೀನೆ ನೀರೆ ಮಂದಾರ ಮಂದಿರದಿಂದ ಬಾರೆ

ಗಂಡು : ನವ ಸುಮಧಾಮ ಅನುರಾಗ ತಾಳಿ
ಹೆಣ್ಣು : ಚೆಲ್ಲಿತಾನಂದ ಮೋಹದಿ ತೇಲಿ
ಗಂಡು : ನವ ಸುಮಧಾಮ ಅನುರಾಗ ತಾಳಿ
ಹೆಣ್ಣು : ಚೆಲ್ಲಿತಾನಂದ ಮೋಹದಿ ತೇಲಿ
ಗಂಡು : ಬಂದಾಗ,( ಮನೋಹರ ಭಾವನ)
            ತಂದಾಗ, (ಸುಮೋದವೆ ಜೀವನ)
           ಮಧುರ ದಿನ ನಿಜ ಮಿಲನ ನಲಿಯುತ ಹಾಡೋಣ
           ನೀನೆ ನೀರೆ ಮಂದಾರ ಮಂದಿರದಿಂದ ಬಾರೆ
ಹೆಣ್ಣು : ನೀನೆ ನೀರ ಸಿಂಗಾರ ಸಂಮುದ ತುಂಬಿ ತಾರ

ಹೆಣ್ಣು : ನವ ಮನಹಾರ ಮೋಹನ ನಾಮ
ಗಂಡು : ಹೂಡಿ ಹೂಬಾಣ ನಗುತಾನೆ ಕಾಮ
ಹೆಣ್ಣು : ನವ ಮನಹಾರ ಮೋಹನ ನಾಮ
ಗಂಡು : ಹೂಡಿ ಹೂಬಾಣ ನಗುತಾನೆ ಕಾಮ
ಹೆಣ್ಣು : ಆನಂದ, (ವಿನೋದವ ತೋರುವ)
          ಸಂಗೀತ, (ಸುನಾದವ ಸಾರುವ)
          ಮಧುರ ದಿನ ನಿಜ ಮಿಲನ ನಲಿಯುತ ಹಾಡೋಣ
ಗಂಡು : ನೀನೆ ನೀರೆ ಮಂದಾರ ಮಂದಿರದಿಂದ ಬಾರೆ
ಹೆಣ್ಣು : ನೀನೆ ನೀರ ಸಿಂಗಾರ ಸಂಮುದ ತುಂಬಿ ತಾರ
--------------------------------------------------------------------------------------------------------------------------

ಚಂದ್ರಕುಮಾರ (1963)  - ಬಣ್ಣದಿಂದ ಬಂಗಾರದಂದ ತಂದ
ಸಾಹಿತ್ಯ: ಎಸ್.ಕೆ.ಕರೀಮಖಾನ, ಸಂಗೀತ:ಟಿ.ಚಲಪತಿರಾವ್, ಎಂ.ವೆಂಕಟರಾಜು ಹಾಡಿದವರು: ಎಸ್.ಜಾನಕಿ

ಓ...ಓ...ಓ... ಓ...ಓ...ಓ...
ಬಣ್ಣದಿಂದ ಬಂಗಾರದಂದ ತಂದ  ಕಣ್ಣಾಸೆ ತುಂಬಿ ಬಂದಾ
ಆನಂದ ಈ ಬಂಧ ನೋಡಂದಾ
ಹೂ ಬಾಣ ಬಂಧನ ಜಾಣ ತಂದಾನಿ ಸುಂದರ ತಾಣ
ಹೂ ಬಾಣ ಬಂಧನ ಜಾಣ ತಂದಾನಿ ಸುಂದರ ತಾಣ
ಕಂಡೆ ನಾ ಕಣ್ಣ ತುಂಬಿ ತಂದಾ ಅಂದವೇ ಬಾಳೆಲ್ಲಾ ಚಂದವೇ ಮನವೇ....  
ಬಣ್ಣದಿಂದ ಬಂಗಾರದಂದ ತಂದ 

ಮೋಡಿ ಮಾಡಿತೆನ್ನ ಕೋಕಿಲಾ ಸುಖವಾಗಿ ಕೇಳಿಬಂತು ಕೋಮಲ 
ರಂಗೇಯ ಆನಂದದ ಲೀಲಾ ದುಂಬಿಯ ಆ ಸಂಕುಲ ಮೇಳ 
ನೋಡೆನ್ನ ಕಣ್ಣ ತುಂಬಿ ತಂದ  ಅಂದವೇ ಬಾಳೆಲ್ಲಾ ಚಂದವೇ ಮನವೇ.....  
ಬಣ್ಣದಿಂದ ಬಂಗಾರದಂದ ತಂದ 

ಮೂಡಿ ಮಿಂಚಿತೊಂದು ಭಾವನಾ ಮನರಾಣಿ ತುಂಬಿ ತಂದ ಸಾಧನಾ 
ಕಂಡೇ ನಾ ಆನಂದದ ಯಾನ ಕಂಡೆನಾ ಈ ಮಂಜಿನ ತಾನ 
ಇಂದೆನ್ನ ಕಣ್ಣಾ ತುಂಬಿ ತಂದ ಅಂದವೇ ಬಾಳೆಲ್ಲಾ ಚಂದವೇ ಮನವೇ....  
ಬಣ್ಣದಿಂದ ಬಂಗಾರದಂದ ತಂದ 

ಹೂವಿನಂತೇ ನನ್ನ ಜೀವನಾ ನವರಾಗ ಚಿಮ್ಮಿ ತಂದ ಶೋಭನಾ 
ಕಂಡೇ ನಾ ಆನಂದದ ಯಾನ ಕಂಡೆನಾ ಈ ಮಂಜುಳಾ ತಾನ 
ಇಂದೆನ್ನ ಕಣ್ಣಾ ತುಂಬಿ ತಂದ ಅಂದವೇ ಬಾಳೆಲ್ಲಾ ಚಂದವೇ ಮನವೇ....  
ಬಣ್ಣದಿಂದ ಬಂಗಾರದಂದ ತಂದ  ಕಣ್ಣಾಸೆ ತುಂಬಿ ಬಂದಾ
ಆನಂದ ಈ ಬಂಧ ನೋಡಂದಾ
ಹೂ ಬಾಣ ಬಂಧನ ಜಾಣ ತಂದಾನಿ ಸುಂದರ ತಾಣ
ಕಂಡೆ ನಾ ಕಣ್ಣ ತುಂಬಿ ತಂದಾ ಅಂದವೇ
ಬಾಳೆಲ್ಲಾ ಚಂದವೇ ಮನವೇ....  
ಬಣ್ಣದಿಂದ ಬಂಗಾರದಂದ ತಂದ 
-------------------------------------------------------------------------------------------------------------------------

ಚಂದ್ರಕುಮಾರ (1963) - ಮನಮೋಹನನಾ ಚರಣದಲಿ
ಸಾಹಿತ್ಯ: ಎಸ್.ಕೆ.ಕರೀಮಖಾನ, ಸಂಗೀತ:ಟಿ.ಚಲಪತಿರಾವ್, ಎಂ.ವೆಂಕಟರಾಜು ಹಾಡಿದವರು: ಪಿ.ಸುಶೀಲಾ 

ಮನಮೋಹನನಾ ಚರಣದಲಿ... ಆಆಆ.....
ಮನಮೋಹನನಾ ಚರಣದಲಿ ಮನ ಕಾಣಿಕೆ ಅನುವಿನಲಿ
ಇಂದೆನ್ನ ಮನದ ನೋವಾ ಪೇಳೆ ಮತಿ ಕೊಂಚಲ
ಇನ್ನೋ ನೀನೇಯಾ  ಆಸೆಯಾ ಸೆರೆ ಓಓಓಓಓ...
ನೀನೇಯಾ  ಆಸೆಯಾ ಸೆರೆ
ಓ..ಎನ್ನ ಜೀಯಾ ಓ.. ಎನ್ನ ಗೆಳೆಯಾ ಬಾಳಿನಲಿ 
ನೀನೇಯಾ ಆಸೆಯಾ ಸೆರೆ
ನೀನೇಯಾ ಆಸೆಯಾ ಸೆರೆ ತದಯನೇ
ನೀನೇಯಾ ಆಸೆಯಾ ಸೆರೆ ತದಯನೇ
ನೀನೇಯಾ ಆಸೆಯಾ ಸೆರೆ

ವಿನಾಶ ಎದುರಾಗಿ ನೀತಿ ಮೀರಿ ನಿಂತಿಹುದೆ
ವಿನಾಶ ಎದುರಾಗಿ ನೀತಿ ಮೀರಿ ನಿಂತಿಹುದೆ 
ಏಕೋ ವಿಚಾರದಲಿ ಮನವೇತರ ತಾಳಿಹುದೇ 
ಏಕೋ ವಿಚಾರದಲಿ ಮನವೇತರ ತಾಳಿಹುದೇ 
ಪ್ರೇಮವೇ ಜೀವತವೆಂದು ರೂಪ ತಾಳಿ ಆಗಿಹುದೆ 
ಆಗಾಧ ಮಿಲನತೆ ಅದು ರಾಗ ಭಾವ ತುಂಬಿದೆ  
ಓ.. ಇನ್ನೂ  ನೀನೇಯಾ  ಆಸೆಯಾ ಸೆರೆ 
ಓ... ನೀನೇಯಾ  ಆಸೆಯಾ ಸೆರೆ 
ನೀನೇಯಾ ಆಸೆಯಾ ಸೆರೆ ತದಯನೇ
ನೀನೇಯಾ ಆಸೆಯಾ ಸೆರೆ
ನೀನೇಯಾ ಆಸೆಯಾ ಸೆರೆ ತದಯನೇ
ನೀನೇಯಾ ಆಸೆಯಾ ಸೆರೆ

ಆಆಆ... ಬಾಳಿನ ದಿವೀಗೀಗೆ ಬಿರುಗಾಳಿಯೂ ಬೀಸಿದೆ
ಜೀವಿತಕೆ ಆಸೆಯಿದೆ ಮನಸಿನಲಿ ಭಯ ತುಂಬಿದೆ  
ಓ.. ಇನ್ನೂ  ನೀನೇಯಾ  ಆಸೆಯಾ ಸೆರೆ 
ಓ... ನೀನೇಯಾ  ಆಸೆಯಾ ಸೆರೆ 
ಓ..ಎನ್ನ ಜೀಯಾ ಓ.. ಎನ್ನ ಗೆಳೆಯಾ ಬಾಳಿನಲಿ 
ನೀನೇಯಾ  ಆಸೆಯಾ ಸೆರೆ 
ನೀನೇಯಾ ಆಸೆಯಾ ಸೆರೆ ತದಯನೇ
ನೀನೇಯಾ ಆಸೆಯಾ ಸೆರೆ ತದಯನೇ
ನೀನೇಯಾ ಆಸೆಯಾ ಸೆರೆ
--------------------------------------------------------------------------------------------------------------------------

ಚಂದ್ರಕುಮಾರ (1963) - ಗತಿ ಕಾಣೆನು ಹೇ ಘನ ಶ್ಯಾಮ 
ಸಾಹಿತ್ಯ: ಎಸ್.ಕೆ.ಕರೀಮಖಾನ, ಸಂಗೀತ:ಟಿ.ಚಲಪತಿರಾವ್, ಎಂ.ವೆಂಕಟರಾಜು ಹಾಡಿದವರು: ಪಿ.ಸುಶೀಲಾ 

ಗತಿ ಕಾಣೆನು ಹೇ ಘನ ಶ್ಯಾಮ  ಗತಿ ಕಾಣೆನು ಹೇ ಘನ ಶ್ಯಾಮ 
ಗತಿ ಕಾಣೆನು ಹೇ ಘನ ಶ್ಯಾಮ ಗತಿ ಕಾಣೆನು ಹೇ ಘನ ಶ್ಯಾಮ 
ದಾರಿ ತೋರು ನೀ ಹೇ ಪಾಂಡುರಂಗ 
ದಾರಿ ತೋರು ನೀ ಹೇ ಪಾಂಡುರಂಗ 
ಗತಿ ಕಾಣೆನು ಹೇ ಘನ ಶ್ಯಾಮ ಗತಿ ಕಾಣೆನು ಹೇ ಘನ ಶ್ಯಾಮ 

ಸವಿ ಬಾಳಿನ ಭಾವನಾ ಆಶಾ 
ಸವಿ ಬಾಳಿನ ಭಾವನಾ ಆಶಾ 
ಸರೆಗೈದಿದೆ ಆಆಆಅ... ಸರೆಗೈದಿದೆ ಲೋಕದ ಪಾಶ 
ಸುಖ ಕಾಣದು ಬಾಳಿಗೆ ಈಶ 
ಗತಿ ಕಾಣೆನು ಹೇ ಘನ ಶ್ಯಾಮ  ಗತಿ ಕಾಣೆನು 

ಸುಖ ಸಾರದ ನಾವೆಯು ದೂರಾ ಸಲೆ ಸಾಗಿದೆ ಕಾಣದೇ ತೀರ 
ಸುಖ ಸಾರದ ನಾವೆಯು ದೂರಾ ಸಲೆ ಸಾಗಿದೆ ಕಾಣದೇ ತೀರ 
ಅಲೆ ಸೇರಿದೆ ಶೋಕದ ತೀರಾ 
ಗತಿ ಕಾಣೆನು ಹೇ ಘನ ಶ್ಯಾಮ  ಗತಿ ಕಾಣೆನು 

ನಿಜ ಜೀವನ ಕಾಣಲು ನಾರಿ ನಿಜ ಜೀವನ ಕಾಣಲು ನಾರಿ 
ಜಗವಿಯದೋ ಬಾಳಿಗೆ ದಾರಿ ಜಗವಿಯದೋ ಬಾಳಿಗೆ ದಾರಿ 
ಜಗದೀಶನೇ ಆಸರೇ ತೋರೋ 
ಗತಿ ಕಾಣೆನು ಹೇ ಘನ ಶ್ಯಾಮ ಗತಿ ಕಾಣೆನು 
ದಾರಿ ತೋರು ನೀ ಹೇ ಪಾಂಡುರಂಗ 
ದಾರಿ ತೋರು ನೀ ಹೇ ಪಾಂಡುರಂಗ 
ಗತಿ ಕಾಣೆನು ಹೇ ಘನ ಶ್ಯಾಮ ಗತಿ ಕಾಣೆನು ಹೇ ಘನ ಶ್ಯಾಮ 
ಗತಿ ಕಾಣೆನು 
--------------------------------------------------------------------------------------------------------------------------

ಚಂದ್ರಕುಮಾರ (1963) - ಗೆಜ್ಜೆ ಝಣ ಝಣ ನುಡಿದಾವೇ
ಸಾಹಿತ್ಯ: ಎಸ್.ಕೆ.ಕರೀಮಖಾನ, ಸಂಗೀತ:ಟಿ.ಚಲಪತಿರಾವ್, ಎಂ.ವೆಂಕಟರಾಜು ಹಾಡಿದವರು: ಎಸ್.ಜಾನಕೀ 

ಆಆಆ.... ಆಆಆ... 
ಗೆಜ್ಜೆ ಝಣ ಝಣ ನುಡಿದಾವೇ ಹೆಜ್ಜೆ ಘಲ್ ಘಲ್ ಕುಣಿದಾವೇ 
ಗೆಜ್ಜೆ ಝಣ ಝಣ ನುಡಿದಾವೇ ಹೆಜ್ಜೆ ಘಲ್ ಘಲ್ ಕುಣಿದಾವೇ 
ಮನದಾ  ಗಾನಾ ಮಧುರ ತಾಣ  ಮನದಾ  ಗಾನಾ ಮಧುರ ತಾಣ 
ಮೂಡಿ ಬಂತು ಹಾಡುವೇನಾ 
ಗೆಜ್ಜೆ ಝಣ ಝಣ ನುಡಿದಾವೇ ಹೆಜ್ಜೆ ಘಲ್ ಘಲ್ ಕುಣಿದಾವೇ 

ನಿನಗಾಗಿ ಮೋಹನ ಸುಖಸಾರದಿ ಜೀವನ ಮುದದಿ ತೀರುತ  ನೀಡುವೇ ಜಾಣ
ನಿನಗಾಗಿ ಮೋಹನ ಸುಖಸಾರದಿ ಜೀವನ ಮುದದಿ ತೀರುತ  ನೀಡುವೇ ಜಾಣ
ಅನುರಾಗದಿನೋ  ಮಕರಂದವನು ಅನುರಾಗದಿನೋ  ಮಕರಂದವನು
ಮನದೆನ್ನ ನೋಡು ನೀಡುವೆನು
ಗೆಜ್ಜೆ ಝಣ ಝಣ ನುಡಿದಾವೇ ಹೆಜ್ಜೆ ಘಲ್ ಘಲ್ ಕುಣಿದಾವೇ 

ಮನಮೋದಕರುವ ಸುವಿನೋದ ಸಾರುವ ನವ ಪ್ರೇಮದ ಬಂಧುರ ಜೀವ
ಮನಮೋದಕರುವ ಸುವಿನೋದ ಸಾರುವ ನವ ಪ್ರೇಮದ ಬಂಧುರ ಜೀವ  
ನಲಿದಾಡುವ ಬಾ ನಗು ತೀರುವಾ ನಲಿದಾಡುವ ಬಾ ನಗು ತೀರುವಾ ಬಾ 
ಮನದನ್ನ ಕೂಡಿ ಕುಣಿಯುವ ಬಾ
ಗೆಜ್ಜೆ ಝಣ ಝಣ  ಹೆಜ್ಜೆ ಘಲ್ ಘಲ್ 
ಗೆಜ್ಜೆ ಝಣ ಝಣ ನುಡಿದಾವೇ ಹೆಜ್ಜೆ ಘಲ್ ಘಲ್ ಕುಣಿದಾವೇ 
ಮನದಾ  ಗಾನಾ ಮಧುರ ತಾಣ  
ಮೂಡಿ ಬಂತು ಹಾಡುವೇನಾ 
ಗೆಜ್ಜೆ ಝಣ ಝಣ ನುಡಿದಾವೇ ಹೆಜ್ಜೆ ಘಲ್ ಘಲ್ ಕುಣಿದಾವೇ 
------------------------------------------------------------------------------------------------------------------------

ಚಂದ್ರಕುಮಾರ (1963) - ತಿರುಗೂ ಮೂರುಗೂ 
ಸಾಹಿತ್ಯ: ಎಸ್.ಕೆ.ಕರೀಮಖಾನ, ಸಂಗೀತ:ಟಿ.ಚಲಪತಿರಾವ್, ಎಂ.ವೆಂಕಟರಾಜು ಹಾಡಿದವರು: ಪಿ.ನಾಗೇಶ್ವರಾವ್  

ಆಕ್ಷೀ...  ಆಕ್ಷೀ...  ಆಕ್ಷೀ...  ಆಕ್ಷೀ...
ಹೊ..ಹೊ.. ಬ್ರಹ್ಮದೇವಾ...  ಬ್ರಹ್ಮದೇವಾ....  ಮಾತಾಡು ಲೇ...
ಬ್ರಹ್ಮದೇವಾ...ಬ್ರಹ್ಮದೇವಾ...ಕೇಳೀಲಿಲ್ಲವೇ 
ಬುದ್ದಿ ಇಲ್ಲದೇ ಬರದೇನೋ ಬ್ರಹ್ಮದೇವಾ...
ತಿರುಗೂ ಮೂರುಗೂ  ಮೂರುಗೂ ತಿರುಗೂ.. ಹಾಯ್ 
ತಿರುಗೂ ಮೂರುಗೂ ಮಾಡುತೀಯೋ ಹಣೆಬರಹ ಹೋಯ್ ಹಣೆಬರಹ 
ಬುದ್ದಿ ಇಲ್ಲದೇ ಬರದೇನೋ ಬ್ರಹ್ಮದೇವಾ...
ತಿರುಗೂ ಮೂರುಗೂ ಮಾಡುತೀಯೋ ಹಣೆಬರಹ ಹೋಯ್ ಹಣೆಬರಹ 

ಮಣ್ಣಿನಿಂದ ಮನುಷ್ಯನ ಮಾಡಿ ಮನುಷ್ಯನಿಗೊಂದು ಮನಸ್ಸು ಮಾಡಿ 
ಮಣ್ಣಿನಿಂದ ಮನುಷ್ಯನ ಮಾಡಿ ಮನುಷ್ಯನಿಗೊಂದು ಮನಸ್ಸು ಮಾಡಿ 
ಮನಸ್ಸಿನಲ್ಲಿ ತುಂಬಿದೆ ಆಸೆ ನೂರು ತರಹ ಓಯ್... ನೂರು ತರಹ 
ಆಸೆ ಮೋಸ ಮಾಡುವಾಗ ಬದುಕು ಬಿಟ್ಟು ತದುಕುವಾಗ 
ಉಳಿಯೋದೆಲ್ಲಾ ಹುಡುಕಿದರೂ ಬರಿ ವಿರಹ ಓಯ್.. ಬರಿ ವಿರಹ 
ಬುದ್ದಿ ಇಲ್ಲದೇ ಬರದೇನೋ ಬ್ರಹ್ಮದೇವಾ...
ತಿರುಗೂ ಮೂರುಗೂ ಮಾಡುತೀಯೋ ಹಣೆಬರಹ ಹೋಯ್ ಹಣೆಬರಹ 
ಹೆಣ್ಣು... ಹೊನ್ನು... ಮಣ್ಣು..      
ಹೆಣ್ಣು ಹೊನ್ನು ಮಣ್ಣಿಂದ  ಆ.. ಬೆನ್ನಬಿದ್ದು ಬಂದ ಮೋಹ  
ಹೆಣ್ಣು ಹೊನ್ನು ಮಣ್ಣಿಂದ  ಆ.. ಬೆನ್ನಬಿದ್ದು ಬಂದ ಮೋಹ  
ಕಣ್ಣಿನಲ್ಲಿ ತೂರಿತಲ್ಲಾ ತೋರಿ ಕುರುಹಾ ಓಯ್ ತೋರಿ ಕುರುಹಾ 
ಹೆಣ್ಣಿಗಾಗಿ... ಹೆಣ್ಣಿಗಾಗಿ ರಾಜ್ಯ ಬಿಟ್ಟು ಬಂದೇವಲ್ಲಾ ಭಂಗ ಪಟ್ಟು 
ಬಾಳು ಗೋಳಾಯಿತ್ತಲ್ಲಾ ಏನೋ ಬರಹ ಹೋಯ್ ಹಣೆಬರಹ 
ಬುದ್ದಿ ಇಲ್ಲದೇ ಬರದೇನೋ ಬ್ರಹ್ಮದೇವಾ...
ತಿರುಗೂಮೂರುಗೂ ಮಾಡುತೀದಿ ಹಣೆಬರಹ ಹೋಯ್ ಹಣೆಬರಹ 
ಬುದ್ದಿ ಇಲ್ಲದೇ ಬರದೇನೋ ಬ್ರಹ್ಮದೇವಾ...
ತಿರುಗೂ ಮೂರುಗೂ ಮಾಡುತೀದಿ ಹಣೆಬರಹ ಹೋಯ್ ಹಣೆಬರಹ.. ಹೊಹೋ  
------------------------------------------------------------------------------------------------------------------------ 

No comments:

Post a Comment