515. ಒಂದೇ ಬಳ್ಳಿಯ ಹೂಗಳು (1967)

ಒಂದೇ ಬಳ್ಳಿಯ ಹೂವುಗಳು ಚಲನಚಿತ್ರದ ಹಾಡುಗಳು 
  1. ನೀನೆಲ್ಲಿ ನಡೆವೆ ದೂರ ಎಲ್ಲೆಲ್ಲು ಲೋಕವೆ
  2. ಅಣ್ಣ ನಿನ್ನ ಸೋದರಿಯನ್ನ ಮರೆಯದಿರು ಎಂದೆಂದು ಓ ಅಣ್ಣ
  3. ದಾರಿ ಕಾಣದೇ ಬಂದವಳೇ ನೂರು ಆಸೆಯ ತಂದವಳೇ
  4. ರಿಕ್ಷಾಗಾಡಿ ಮಿಸ್ಟರ್ ನಾ ರಿಕ್ಷಾ ಗಾಡಿ ಮಿಸ್ಟರ್
  5. ಓರೇ ನೋಟದ ವಯ್ಯಾರಿ 
  6. ಏಕೋ ಏಕೋ ಏತಕೋ 
ಒಂದೇ ಬಳ್ಳಿಯ ಹೂಗಳು (1967) - ನೀನೆಲ್ಲಿ ನಡೆವೆ ದೂರ
ಸಂಗೀತ : ಸತ್ಯಂ ಸಾಹಿತ್ಯ : ಗೀತಪ್ರಿಯ ಗಾಯನ : ಮಹಮ್ಮದ್ ರಫಿ

ನೀನೆಲ್ಲಿ ನಡೆವೆ ದೂರ ಎಲ್ಲೆಲ್ಲು ಲೋಕವೇ... ಈ ಲೋಕವೆಲ್ಲ ಘೋರ  ಎಲ್ಲೆಲ್ಲು ಶೋಕವೇ...
ನೀನೆಲ್ಲಿ ನಡೆವೆ ದೂರ... ಎಲ್ಲೆಲ್ಲು ಲೋಕವೇ... ಈ ಲೋಕವೆಲ್ಲ ಘೋರ  ಎಲ್ಲೆಲ್ಲು ಶೋಕವೇ...
ನೀನೆಲ್ಲಿ ನಡೆವೆ ದೂರ...

ನಗುವಾಗ ಎಲ್ಲ ನೆಂಟರು  ಅಳುವಾಗ ಯಾರು ಇಲ್ಲ...
ನಗುವಾಗ ಎಲ್ಲ ನೆಂಟರು  ಅಳುವಾಗ ಯಾರು ಇಲ್ಲ...
ಮುಳ್ಳಲ್ಲಿ ನಿನ್ನ ನಡೆಸಿ   ನಲಿವ ನಗುವೇ ವಿಕಾರ
ನೀನೆಲ್ಲಿ ನಡೆವೆ ದೂರ... ಎಲ್ಲೆಲ್ಲು ಲೋಕವೇ... ಈ ಲೋಕವೆಲ್ಲ ಘೋರ  ಎಲ್ಲೆಲ್ಲು ಶೋಕವೇ...
ನೀನೆಲ್ಲಿ ನಡೆವೆ ದೂರ

ನೆರಳನ್ನೂ ನೀಡುವಂಥಹ ಮರವನ್ನೇ ಕಡಿವರಲ್ಲಾ..
ನೆರಳನ್ನೂ ನೀಡುವಂಥಹ ಮರವನ್ನೇ ಕಡಿವರಲ್ಲಾ..
ನಿಸ್ವಾರ್ಥ ಜೀವಿಗಳಿಗೆ ಜಗವೇ ಕಹಿಯೇ ಅಪಾರ
ನೀನೆಲ್ಲಿ ನಡೆವೆ ದೂರ... ಎಲ್ಲೆಲ್ಲು ಲೋಕವೇ... ಈ ಲೋಕವೆಲ್ಲ ಘೋರ  ಎಲ್ಲೆಲ್ಲು ಶೋಕವೇ...
ನೀನೆಲ್ಲಿ ನಡೆವೆ ದೂರ

ಅಪಕಾರವನ್ನೆ ಕಾಣುವೆ  ಉಪಕಾರವನ್ನು ಕಾಣೆ...
ಅಪಕಾರವನ್ನೆ ಕಾಣುವೆ  ಉಪಕಾರವನ್ನು ಕಾಣೆ
ಅನುರಾಗವಿಲ್ಲಿ ಇಲ್ಲವೇ  ಮನದೆ ಇದುವೆ ವಿಚಾರ
ನೀನೆಲ್ಲಿ ನಡೆವೆ ದೂರ... ಎಲ್ಲೆಲ್ಲು ಲೋಕವೇ... ಈ ಲೋಕವೆಲ್ಲ ಘೋರ  ಎಲ್ಲೆಲ್ಲು ಶೋಕವೇ...
ನೀನೆಲ್ಲಿ ನಡೆವೆ ದೂರ...
--------------------------------------------------------------------------------------------------------------------------

ಒಂದೇ ಬಳ್ಳಿಯ ಹೂಗಳು (1967) - ಅಣ್ಣ ನಿನ್ನ ಸೋದರಿಯನ್ನ
ಸಾಹಿತ್ಯ : ಗೀತಪ್ರಿಯ ಸಂಗೀತ : ಸತ್ಯಂ ಗಾಯನ :ಎಸ್.ಜಾನಕೀ

ಅಣ್ಣ ನಿನ್ನ ಸೋದರಿಯನ್ನ ಮರೆಯದಿರು ಎಂದೆಂದು ಓ ಅಣ್ಣ
ಅಣ್ಣ ನಿನ್ನ ಸೋದರಿಯನ್ನ ಮರೆಯದಿರು ಎಂದೆಂದು ಓ ಅಣ್ಣ
ಅಣ್ಣ ನಿನ್ನ ಆಆಆಆ

ಆಆಆಆ ಆಆಆಆ ಆಆಆಆ ಆಆಆಆ ಆಆಆಆ
ಒಂದೇ ಬಳ್ಳೀಯ ಹೂಗಳು ನಾವು ಪ್ರೀತಿಯೆ ನಮಗಾಧಾರ
ಒಂದೇ ರಾಗ ಹರಿಸಿರೇ ಈಗ ಪಾವನ ಗಂಗಾ ಧಾರ...  ಆಆಆ
ಪಾವನ ಗಂಗಾ ಧಾರ ಆಆಆ...
ಅಣ್ಣ ನಿನ್ನ ಸೋದರಿಯನ್ನ ಮರೆಯದಿರು ಎಂದೆಂದು ಓ ಅಣ್ಣ
ಅಣ್ಣ ನಿನ್ನ ಆಆಆಆ

ಸಿರಿತನ ಮಾಯೆ ಬಡತನ ಛಾಯೆ ಶಾಶ್ವತ ಒಂದೇ ಪ್ರೀತಿ
ಸೋದರ ಪಾಶಾ ಅಳಿಯದ ಆಶಾ ತಂಗಿಯ ಬಾಳೀನ ಜ್ಯೋತಿ ಈಈಈ
ತಂಗಿಯ ಬಾಳೀನ ಜ್ಯೋತಿ...
ಅಣ್ಣ ನಿನ್ನ ಸೋದರಿಯನ್ನ ಮರೆಯದಿರು ಎಂದೆಂದು ಓಅಣ್ಣ
ಅಣ್ಣ ನಿನ್ನ ಆಆಆಆ

ಆಆಆಆ ಆಆಆ.. ತೌರನು ತೊರೆದು ನಡೆದರು ದೂರ ಬಾರದು ಪ್ರೀತಿಗೆ ಲೋಪ...ಆಆಆಆ
 ತಂಗಿಯ ನೆನೆದು ಉರಿಸುತಿರಣ್ಣ  ನೆನೆಪಿನ ನಂದಾ ದೀಪ ಆಆಆ
ನೆನೆಪಿನ ನಂದಾ ದೀಪ ಆಆಆ
ಅಣ್ಣ ನಿನ್ನ ಸೋದರಿಯನ್ನ ಮರೆಯದಿರು ಎಂದೆಂದು ಓ ಅಣ್ಣ
ಅಣ್ಣ ನಿನ್ನ ಆಆಆಆ ಆಆಆಆ
----------------------------------------------------------------------------------------------------------------------

ಒಂದೇ ಬಳ್ಳಿಯ ಹೂಗಳು (1967) - ದಾರಿ ಕಾಣದೆ ಬಂದವಳೇ
ಸಾಹಿತ್ಯ : ಗೀತಪ್ರಿಯ ಸಂಗೀತ : ಸತ್ಯಂ ಗಾಯನ :ಎಸ್.ಜಾನಕೀ, ಕೆ.ಜೆ.ಏಸುದಾಸ 

ಗಂಡು : ದಾರಿ ಕಾಣದೇ ಬಂದವಳೇ ನೂರು ಆಸೆಯ ತಂದವಳೇ
           ನೀನೇ ನನ್ನ ರಾಣಿಯು ರಾಜ ನಾನಾಗಿರೇ... ಹ..ಹ..ಹ..ಹ..
ಹೆಣ್ಣು : ದೂರ ತೀರಕೆ ತಂದವನೇ ನಾರಿ ನೋಟದೇ ನಿಂದವನೇ
          ನೀನೇ ನನ್ನ ಬಾಳಿಗೆ ಆಗಿಹೆ ಆಸರೆ... ಹ..ಹ..ಹ..ಹ..

ಗಂಡು : ಮಲ್ಲಿಗೆ ನೀ ನಿಲ್ಲಿಗೇ ಏತಕೆ ಬಂದೇ ..
            ಮಲ್ಲಿಗೆ ನೀ ನಿಲ್ಲಿಗೇ ಏತಕೆ ಬಂದೇ ..
ಹೆಣ್ಣು : ಇಲ್ಲಿಯೇ.. ನಾ ನಿಲ್ಲಿಯೇ ಜೀವನಾ ಕಂಡೆ..
          ಇಲ್ಲಿಯೇ.. ನಾ ನಿಲ್ಲಿಯೇ ಜೀವನಾ ಕಂಡೆ..
ಗಂಡು : ದಾರಿ ಕಾಣದೇ ಬಂದವಳೇ ನೂರು ಆಸೆಯ ತಂದವಳೇ
           ನೀನೇ ನನ್ನ ರಾಣಿಯು ರಾಜ ನಾನಾಗಿರೇ... ಹ..ಹ..ಹ..ಹ..

ಗಂಡು : ಮಿಂಚುವ ಕಣ್ ಅಂಚಲಿ ಹೂಡಿದೆ ಬಾಣಾ
           ಮಿಂಚುವ ಕಣ್ ಅಂಚಲಿ ಹೂಡಿದೆ ಬಾಣಾ
ಹೆಣ್ಣು :  ಹೊಂಚುವ ಒಳ ಸಂಚಿದು ಬಲ್ಲೆಯಾ ಜಾಣ
           ಹೊಂಚುವ ಒಳ ಸಂಚಿದು ಬಲ್ಲೆಯಾ ಜಾಣ
           ದೂರ ತೀರಕೆ ತಂದವನೇ ನಾರಿ ನೋಟದೇ ನಿಂದವನೇ
           ನೀನೇ ನನ್ನ ಬಾಳಿಗೆ ಆಗಿಹೆ ಆಸರೆ... ಹ..ಹ..ಹ..ಹ..

ಗಂಡು : ಸಕ್ಕರೆ ನೀ ನಕ್ಕರೆ ಮೋಹದಾ ಮಲ್ಲೆ 
            ಸಕ್ಕರೆ ನೀ ನಕ್ಕರೆ ಮೋಹದಾ ಮಲ್ಲೆ 
 ಹೆಣ್ಣು : ನಲ್ಲನೆ ಈ ಬಣ್ಣನೆ ಏಕೆ ನಾ ಬಲ್ಲೆ 
           ನಲ್ಲನೆ ಈ ಬಣ್ಣನೆ ಏಕೆ ನಾ ಬಲ್ಲೆ 
ಗಂಡು : ದಾರಿ ಕಾಣದೇ ಬಂದವಳೇ ನೂರು ಆಸೆಯ ತಂದವಳೇ
           ನೀನೇ ನನ್ನ ರಾಣಿಯು ರಾಜ ನಾನಾಗಿರೇ... ಹ..ಹ..ಹ..ಹ..
ಹೆಣ್ಣು : ದೂರ ತೀರಕೆ ತಂದವನೇ ನಾರಿ ನೋಟದೇ ನಿಂದವನೇ
          ನೀನೇ ನನ್ನ ಬಾಳಿಗೆ ಆಗಿಹೆ ಆಸರೆ... (ಹ..ಹ..ಹ..ಹ..)  ಹ..ಹ..ಹ..ಹ..  ಲಲಲಲಲ್ಲಲ್ಲಲಾ 
--------------------------------------------------------------------------------------------------------------------------

ಒಂದೇ ಬಳ್ಳಿಯ ಹೂಗಳು (1967) - ರಿಕ್ಷಾಗಾಡಿ ಮಿಸ್ಟರ್ ನಾ ರಿಕ್ಷಾ ಗಾಡಿ ಮಿಸ್ಟರ್ಸಂಗೀತ : ಸತ್ಯಂ  ಸಾಹಿತ್ಯ : ಗೀತಪ್ರಿಯ ಗಾಯನ :ಪಿ.ಬಿ.ಎಸ್

ರಿಕ್ಷಾಗಾಡಿ ಮಿಸ್ಟರ್ ನಾ ರಿಕ್ಷಾ ಗಾಡಿ ಮಿಸ್ಟರ್ ಈ ರೋಡಿಗೆ ನಾ ಮಾಸ್ಟರ್,
ಈ ಗಾಡಿಗಿಲ್ಲ ಮೋಟಾರ್ ಮೊದಲೇ ಇಲ್ಲ ಮೀಟರ್, ನೀವ್ ಬನ್ನಿರಿ ಇಲ್ಲ ಡೇಂಜರ್........
ರಿಕ್ಷಾಗಾಡಿ ಮಿಸ್ಟರ್ ನಾ ರಿಕ್ಷಾ ಗಾಡಿ ಮಿಸ್ಟರ್ ಈ ರೋಡಿಗೆ ನಾನೇ  ಮಾಸ್ಟರ್,
ಈ ಗಾಡಿಗಿಲ್ಲ ಮೋಟಾರ್ ಮೊದಲೇ ಇಲ್ಲ ಮೀಟರ್, ನೀವ್ ಬನ್ನಿರಿ ಇಲ್ಲ ಡೇಂಜರ್........

ದುಡಿಮೆಯು ಯಾವುದು ಕೀಳಲ್ಲ ಧರ್ಮದಿ  ದುಡಿದರೆ ಭಯವಿಲ್ಲ
ಮೋಸದ ಗಳಿಕೆ ಅವಮಾನ ಬೆವರಿನ ಗಳಿಕೆ ಅಭಿಮಾನ
ಇದನರಿತು ಓ... ನಡೆಯದಿರೆ ಜೀವನವೇ ಪಂಚರ್...
ಆಹಾ.. ರಿಕ್ಷಾಗಾಡಿ ಮಿಸ್ಟರ್ ನಾ ರಿಕ್ಷಾ ಗಾಡಿ ಮಿಸ್ಟರ್ ಈ ರೋಡಿಗೆ ನಾ ಮಾಸ್ಟರ್,
ಈ ಗಾಡಿಗಿಲ್ಲ ಮೋಟಾರ್ ಮೊದಲೇ ಇಲ್ಲ ಮೀಟರ್, ನೀವ್ ಬನ್ನಿರಿ ಇಲ್ಲ ಡೇಂಜರ್....

ಯಾರದೋ ನೆನಪು ಕಾಡುತಿರೆ ಯಾವುದೋ ಪಾಶ ಸೆಳೆಯುತಿರೆ
ಆಸೆ ನಿರಾಸೆಯ ದಾರಿಯಲಿ ಬಾಳಿನ ಬಂಡಿಯು ಓಡುತಿರೆ
ಪ್ರಣಯಿಗಳ.. ಆ.ಹಾ .  ಸೇರಿಸುತ ನಡೆಯುವೆ ನಾ ಜೋಕರ್
ಆಹಾ.. ರಿಕ್ಷಾಗಾಡಿ ಮಿಸ್ಟರ್ ನಾ ರಿಕ್ಷಾ ಗಾಡಿ ಮಿಸ್ಟರ್ ಈ ರೋಡಿಗೆ ನಾ ಮಾಸ್ಟರ್,
ಈ ಗಾಡಿಗಿಲ್ಲ ಮೋಟಾರ್ ಮೊದಲೇ ಇಲ್ಲ ಮೀಟರ್, ನೀವ್ ಬನ್ನಿರಿ ಇಲ್ಲ ಡೇಂಜರ್...  

ಕೆಲವರ ಬಳಿಯೇ ಹಣವೇಕೆ ಕೆಲವರ ಬಳಿಯೇ ಗುಣವೇಕೆ 
ಕೆಲವರಿಗೇಕೆ ಕೂಳಿಲ್ಲ ಏಕೆ ಅಶಾಂತಿಯು ಜಗವೆಲ್ಲಾ 
ಈ ಚಿಂತೆ ಜಗದಲ್ಲೇ ಹೊಡೆಯುತಿದೆ ಚಕ್ಕರ್ 
ರಿಕ್ಷಾಗಾಡಿ ಮಿಸ್ಟರ್ ನಾ ರಿಕ್ಷಾ ಗಾಡಿ ಮಿಸ್ಟರ್ ಈ ರೋಡಿಗೆ ನಾನೇ  ಮಾಸ್ಟರ್,
ಈ ಗಾಡಿಗಿಲ್ಲ ಮೋಟಾರ್ ಮೊದಲೇ ಇಲ್ಲ ಮೀಟರ್, ನೀವ್ ಬನ್ನಿರಿ ಇಲ್ಲ ಡೇಂಜರ್
------------------------------------------------------------------------------------------------------------------------

ಒಂದೇ ಬಳ್ಳಿಯ ಹೂಗಳು (1967) - ಓರೇ ನೋಟದ ವಯ್ಯಾರಿ
ಸಂಗೀತ : ಸತ್ಯಂ ಸಾಹಿತ್ಯ : ಗೀತಪ್ರಿಯ ಗಾಯನ :ಪಿ.ಬಿ.ಎಸ್, ಬಿ.ಕೆ.ಸುಮಿತ್ರಾ

ಗಂಡು : ಓರೇ ನೋಟದ ವಯ್ಯಾರಿ ಬಾರೇ ನಾಚದೇ ಬಂಗಾರೀ ..
ಹೆಣ್ಣು : ಓ.. ಪ್ರೇಮಲೋಕದ ಸಂಚಾರೀ .. ಸಾಕೂ ಸೋಜಿನ ಈ ದಾರೀ ..
ಗಂಡು : ಓ... ಓರೇ ನೋಟದ ವಯ್ಯಾರಿ ಬಾರೇ ನಾಚದೇ ಬಂಗಾರೀ ..
ಹೆಣ್ಣು : ಓ.. ಪ್ರೇಮಲೋಕದ ಸಂಚಾರೀ .. ಸಾಕೂ ಸೋಜಿನ ಈ ದಾರೀ ..

ಗಂಡು : ಮೈ ಮಾಟದೇ ಸೊಗಸೂ.. (ಆ..ಹಾ) ಈ ಬಿಂಕದೇ ಬೀರುಸೂ (ಒಹೋ)
            ಬಳುಕಿ ಆಡಿರೇ..  ಥಳಕು ತೋರಿರೇ.. ಹಂಸದಂತ ನಡಿಗೇ ..  ಅಹಹಹಾ... ಓಹೋಹೋಹೊಹೋ..
ಹೆಣ್ಣು : ಈ ನಾಟಕ ಒಲ್ಲೇ .. (ಆಹಾ) ನಿನ್ನಾಟವೇ ಬಲ್ಲೇ .. (ಒಹೋ)
           ಒಲವಿನಾಟದೇ ಗೆಲವು ಇಲ್ಲದೇ .. ಚಿಂತೇ ಏಕೇ ನಿನಗೇ .. ಓಹೋಹೋಹೊ.. ಅಹಹಹಾ...
ಗಂಡು : ಓರೇ ನೋಟದ ವಯ್ಯಾರಿ ಬಾರೇ ನಾಚದೇ ಬಂಗಾರೀ ..
ಹೆಣ್ಣು : ಓ.. ಪ್ರೇಮಲೋಕದ ಸಂಚಾರೀ .. ಸಾಕೂ ಸೋಜಿನ ಈ ದಾರೀ ..

ಗಂಡು : ಈ.. ಕಂಗಳೇ ನಿನ್ನ.. (ಆಹಾ) ನನ್ನ ಕನ್ನಡಿ ಚಿನ್ನಾ.. (ಒಹೋ)
            ಬರಿಯೇ ಮುನ್ನಡೀ.. ಚೆಲುವೇ ಚೆಂದುಟಿ ನನ್ನ ಪ್ರೇಮ ಕಥೆಗೇ .. ಅಹಹಹಾ... ಓಹೋಹೋಹೋ..
ಹೆಣ್ಣು : ನಿನ್ನಾಸೆಯ ತೋಡೀ .. (ಆಹಾ) ನೀ ಮಾಡಿದೇ ಮೋಡಿ ..  (ಒಹೋ)
          ಬಲೆಯ ಹೂಡಿದೆ ಮನವ ಕಾಡಿದೇ ಮೋಹ ತೋರಿ ಎನಗೇ .. ಅಹಹಹಾ... ಓಹೋಹೋಹೊಹೋ..
ಗಂಡು : ಓ... ಓರೇ ನೋಟದ ವಯ್ಯಾರಿ ಬಾರೇ ನಾಚದೇ ಬಂಗಾರೀ ..
ಹೆಣ್ಣು : ಓ.. ಪ್ರೇಮಲೋಕದ ಸಂಚಾರೀ .. ಸಾಕೂ ಸೋಜಿನ ಈ ದಾರೀ ..
ಗಂಡು : ಓ... ಓರೇ ನೋಟದ ವಯ್ಯಾರಿ (ಆಆಹಾ)  ಬಾರೇ ನಾಚದೇ ಬಂಗಾರೀ .. (ಓಹೋಹೋ)
ಹೆಣ್ಣು : ಓ.. ಪ್ರೇಮಲೋಕದ ಸಂಚಾರೀ .. (ಆಹಾ) ಸಾಕೂ ಸೋಜಿನ ಈ ದಾರೀ .. (ಓಹೋಹೋ)
--------------------------------------------------------------------------------------------------------------------------

ಒಂದೇ ಬಳ್ಳಿಯ ಹೂಗಳು (1967) - ಏಕೋ ಏಕೋ ಏತಕೋ
ಸಂಗೀತ : ಸತ್ಯಂ ಸಾಹಿತ್ಯ : ಗೀತಪ್ರಿಯ ಗಾಯನ :.ಬಿ.ಕೆ.ಸುಮಿತ್ರಾ, ಕೋರಸ್ 

ಹೆಣ್ಣು : ಏಕೋ ಏಕೋ ಏತಕೋ ಏಕೀ ಭಾವನೇ ಮೂಡಿತು ಉಮರಾಣಿ ತಲೆಬಾಗಿ ನಿಂತಾಳೇಕೋ..
ಕೋರಸ್ : ಏಕೋ ಏಕೋ ಏತಕೋ ಕೆನ್ನೇ ಕೆಂಪಾಗಿಯಿತು ಕಣ್ಣಲ್ಲಿ ಕಾರಣವೂ ಕಂಡಿತೇನೂ ..
ಹೆಣ್ಣು : ಏಕೋ ಏಕೋ ಏತಕೋ ಏಕೀ ಭಾವನೇ ಮೂಡಿತು ಉಮರಾಣಿ ತಲೆಬಾಗಿ ನಿಂತಾಳೇಕೋ..

ಹೆಣ್ಣು : ಸಂತೋಷದಾ ಸಂದೇಶವಾ ಋತುರಾಜ ನೀಡುತಾ ಬಂದ
ಕೋರಸ್ : ಓ.ಓ.. ಋತುರಾಜ ನೀಡುತಾ ಬಂದ
ಹೆಣ್ಣು : ಆಆಆ.. ಸಂತೋಷದಿ ಸುಮನಾಚಿರೇ.  ಹೀತವನ್ನೂ ತಾರುತ ನಿಂದಾ .. ಆಆಆ
ಕೋರಸ್ : ಹೀತವನ್ನೂ ತಾರುತ ನಿಂದಾ ..
ಹೆಣ್ಣು : ಕುಹೂ ಕುಹೂ ಕೋಗಿಲೇ ಹಾಡಿರೇ ಈಗ ಸುವ್ವಾಲೇ ಮನದಲ್ಲಿ ಹೊಸ ಆಸೇ ಕಂಡಿತೇನೋ..
ಕೋರಸ್ : ಏಕೋ ಏಕೋ ಏತಕೋ ಕೆನ್ನೇ ಕೆಂಪಾಗಿಯಿತು ಕಣ್ಣಲ್ಲಿ ಕಾರಣವೂ ಕಂಡಿತೇನೂ ..

ಹೆಣ್ಣು : ಒಲಿದಾತನ ನವಬಾಳಿಗೆ ನೀನಾಗಿ ಸೌರಾಭಸಾರ
ಕೋರಸ್ : ಓ..ಓ..  ನೀನಾಗಿ ಸೌರಾಭಸಾರ
ಹೆಣ್ಣು : ಓಓಓ .. ಒಲವಿಂದಲೀ ಪೊರೆದಾಸರ ದೊರೆಯುತ ಸಾಗುವೇ ದೂರ... ಆಆಆ...
ಕೋರಸ್ : ದೊರೆಯುತ ಸಾಗುವೇ ದೂರ
                ಮದುಮಗಳಾಗು ಓ ಬಾಲೇ ಕರದಲಿ ಪಿಡಿಯೇ ಹೂಮಾಲೇ ಜೀವನಾಗೇ ಉಯ್ಯಾಲೇ ಆಡಿತೇನೋ..
ಹೆಣ್ಣು : ಏಕೋ ಏಕೋ ಏತಕೋ ಏಕೀ ಭಾವನೇ ಮೂಡಿತು ಉಮರಾಣಿ ತಲೆಬಾಗಿ ನಿಂತಾಳೇಕೋ..
--------------------------------------------------------------------------------------------------------------------------

No comments:

Post a Comment