520. ಭಾಗ್ಯವಂತರು (1977)




ಭಾಗ್ಯವಂತರು ಚಿತ್ರದ ಹಾಡುಗಳು 
  1. ನಿನ್ನ ನನ್ನ ಮನವು ಸೇರಿತು 
  2. ನಿನ್ನಾ ಸ್ನೇಹಕೆ ನಾ ಸೋತು ಹೋದೆನು 
  3. ಭಾಗ್ಯವಂತರು ನಾವು ಭಾಗ್ಯವಂತರು 
ಭಾಗ್ಯವಂತರು (1977) - ನಿನ್ನ ನನ್ನ ಮನವೂ
ಚಿತ್ರಗೀತೆ: ಚಿ. ಉದಯಶಂಕರ್ ಸಂಗೀತ : ರಾಜನ್ ನಾಗೇಂದ್ರ ಗಾಯನ : ಡಾ|| ರಾಜಕುಮಾರ
ನಿನ್ನ ನನ್ನ ಮನವೂ ... ಸೇರಿತು..
ನಿನ್ನ ನನ್ನ ಮನವೂ ಸೇರಿತು,  ನನ್ನ ನಿನ್ನ ಹೃದಯ ಹಾಡಿತು.
ನಿನ್ನ ನನ್ನ ಮನವೂ ಸೇರಿತು,  ನನ್ನ ನಿನ್ನ ಹೃದಯ ಹಾಡಿತು.
ರಾಗವು ಒಂದೇ, ಭಾವವೂ ಒಂದೇ,
ಜೀವ ಒಂದಾಯಿತು, ಬಾಳು ಹಗುರಾಯಿತು.
ನಿನ್ನ ನನ್ನ ಮನವೂ ಸೇರಿತು,  ನನ್ನ ನಿನ್ನ ಹೃದಯ ಹಾಡಿತು.

ಏಕಾಂಗಿ ಆಗಿರಲು, ಕೈ ಹಿಡಿದೆ, ಜೊತೆಯಾದೆ
ತಾಯಂತೆ ಬಳಿ ಬಂದೆ, ಆಧರಿಸಿ ಪ್ರೀತಿಸಿದೆ.
ಬಾಳಲಿ ಸುಖ ನೀಡಿದೆ, ನನ್ನೀ ಬದುಕಿಗೆ ಶ್ರುತಿಯಾದೆ,
ನನ್ನೀ ಮನೆಯ ಬೆಳಕಾದೆ.
ನಿನ್ನ ನನ್ನ ಮನವೂ ಸೇರಿತು,   ನನ್ನ ನಿನ್ನ ಹೃದಯ ಹಾಡಿತು.

ಎಂದು ಜೊತೆಯಲೇ ಬರುವೆ, ನಿನ್ನ ನೆರಳಿನ ಹಾಗೆ ಇರುವೆ,
ಕೊರಗದಿರು, ಮರುಗದಿರು, ಹಾಯಾಗಿ ನೀನಿರು.
ಎಂದು ಜೊತೆಯಲೇ ಬರುವೆ, ನಿನ್ನ ಉಸಿರಲಿ ಉಸಿರಾಗಿರುವೆ,
ನೋವುಗಳು ನನಗಿರಲಿ, ಆನಂದ ನಿನಗಾಗಲಿ
ನಗುವಿನ ಹೂಗಳ ಮೇಲೆ, ನಡೆಯುವ ಭಾಗ್ಯ ನಿನಗಿರಲಿ,
ನೋಡುವ ಭಾಗ್ಯ ನನಗಿರಲಿ.
ನಿನ್ನ ನನ್ನ ಮನವೂ ಸೇರಿತು, ನನ್ನ ನಿನ್ನ ಹೃದಯ ಹಾಡಿತು.
ರಾಗವು ಒಂದೇ, ಭಾವವೂ ಒಂದೇ,
ಜೀವ ಒಂದಾಯಿತು, ಬಾಳು ಹಗುರಾಯಿತು.
ನಿನ್ನ ನನ್ನ ಮನವೂ ಸೇರಿತು.....
ನನ್ನ ನಿನ್ನ ಹೃದಯ ಹಾಡಿತು......
--------------------------------------------------------------------------------------------------------------------------


ಭಾಗ್ಯವಂತರು (1977) - ನಿನ್ನ ಸ್ನೇಹಕೆ ನಾ ಸೋತು ಹೋದೆನು
ಸಾಹಿತ್ಯ: ಚಿ.ಉದಯಶಂಕರ್   ಸಂಗೀತ: ರಾಜನ್-ನಾಗೇಂದ್ರ  ಗಾಯನ: ಡಾ| ರಾಜ್ ಕುಮಾರ್ ಮತ್ತು ಪಿ.ಸುಶೀಲಾ

ಗಂಡು: ಆ..ಆ..ಹೇ..ಹೇ      ಗಂಡು : ಹಾ         ಹೆಣ್ಣು : ಹಾ..ಹ..ಹಾ.
ಗಂಡು:  ನಿನ್ನ ಸ್ನೇಹಕೆ ನಾ ಸೋತು ಹೋದೆನು
            ಎಲ್ಲ ದೇವರ ನಾ ಬೇಡಿ ಕೊಂಡೆನು
            ದೇವರ ವರವೋ ಪುಣ್ಯದ ಫಲವೊ ಕಾಣೆನು.. ನಿನ್ನ ನಾ ಪಡೆದೆನು
ಹೆಣ್ಣು:  ಓ.ಓ.. ನಿಮ್ಮ ಸ್ನೇಹಕೆ ನಾ ಸೋತು ಹೋದೆನು
          ಎಲ್ಲ ದೇವರ ನಾ ಬೇಡಿ ಕೊಂಡೆನು
         ದೇವರ ವರವೋ ಪುಣ್ಯದ ಫಲವೊ ಕಾಣೆನು... ನಿಮ್ಮ ನಾ ಪಡೆದೆನು
ಗಂಡು: ಓಓ...  ನಿನ್ನ ಸ್ನೇಹಕೆ ನಾ ಸೋತು ಹೋದೆನು  ಎಲ್ಲಾ ದೇವರ ನಾ ಬೇಡಿ ಕೊಂಡೆನು

ಹೆಣ್ಣು :  ಆಆಆ   ಗಂಡು : ಲ್ಲ ಲ್ಲ  ಹೆಣ್ಣು : ಲಲಲಲಲ್ಲ ಗಂಡು : ಆಆಆ
ಗಂಡು: ನಿನ್ನ ನಾನು ಕಂಡಾಗ, ಮಲ್ಲಿಗೆಯಂತೆ ನಕ್ಕಾಗ ನನ್ನ ಮನದಲಿ ಆಸೆ ಮೂಡಿತು
ಹೆಣ್ಣು: ಅಂದು ನೀವು ಬಂದಾಗ ಮಲ್ಲಿಗೆ ಹೂವು ತಂದಾಗ ನನ್ನ ಹೃದಯದ ವೀಣೆ ಹಾಡಿತು
ಗಂಡು: ಪ್ರೇಮದ ದೇವತೆಯಾದೆ, ನನ್ನಲ್ಲಿ ಒಂದಾಗಿ ಇಂದು ಸೇರಿದೆ
ಹೆಣ್ಣು: ಪ್ರೇಮದ ಮೂರುತಿಯಾದೆ, ನನ್ನಲ್ಲಿ ಆನಂದ ತಂದು ತುಂಬಿದೆ
         ನನ್ನಲ್ಲಿ ಆನಂದ ತಂದು ತುಂಬಿದೆ
ಗಂಡು:  ನಿನ್ನ ಸ್ನೇಹಕೆ ನಾ ಸೋತು ಹೋದೆನು
ಹೆಣ್ಣು:  ಎಲ್ಲಾ ದೇವರ ನಾ ಬೇಡಿ ಕೊಂಡೆನು
ಹೆಣ್ಣು: ನನ್ನೀ ಬಾಳಿನ ದೀಪ, ನಿಮ್ಮದೆ ಈ ಪ್ರತಿ ರೂಪ
ಗಂಡು: ನಿನ್ನೀ ಕಂದನ ರೂಪ, ಬೆಳಗುವ ನಂದಾ ದೀಪ
ಹೆಣ್ಣು: ಮೈ ಮರೆಸಿ ನಮ್ಮ ಮನ ತಣಿಸಿ, ಹರುಷದ ಹೊನಲನು ಹರಿಸಿ
ಇಬ್ಬರು: ಇಂದು ಈ ಮುದ್ದು ಕಂದss, ತಂದ ನಮಗಾನಂದ
ಹೆಣ್ಣು: ಓಓ ನಿಮ್ಮ ಸ್ನೇಹಕೆ ನಾ ಸೋತು ಹೋದೆನು
ಗಂಡು: ಎಲ್ಲಾ ದೇವರ ನಾ ಬೇಡಿ ಕೊಂಡೆನು

ಮಗು : ಅಮ್ಮ    ಇಬ್ಬರು :ಅಹಹಹ ..    ಮಗು : ಅಪ್ಪಾ..      ಇಬ್ಬರು :ಹೋಹೋ  
ಗಂಡು: ಅಮ್ಮ ಎಂದು ಅಂದಾಗ, ಅಮ್ಮನ ಮೊಗವ ಕಂಡಾಗ ಏನೊ ಹರುಷವು ನನ್ನ ಮನದಲಿ
ಹೆಣ್ಣು:  ಅಪ್ಪ ಎಂದು ಅಂದಾಗ ಪ್ರೀತಿ ಮಾತು ನುಡಿದಾಗ ಹಾಡಿ ಕುಣಿಯುವ ಆಸೆ ನನ್ನಲಿ
           ಎಂತಹ ಭಾಗ್ಯವ ಕಂಡೆ, ಜೇನಂತ ಮಾತಿಂದ ಹೃದಯ ತುಂಬಿದೆ
ಗಂಡು: ಎಂತಹ ಭಾಗ್ಯವ ತಂದೆ, ಹೆಣ್ಣಾಗಿ ಕಣ್ಣಾಗಿ ಮನೆಯ ತುಂಬಿದೆ  ಹೆಣ್ಣಾಗಿ ಕಣ್ಣಾಗಿ ಮನವ ತುಂಬಿದೆ
ಹೆಣ್ಣು: ನಿಮ್ಮ ಸ್ನೇಹಕೆ ನಾ ಸೋತು ಹೋದೆನು
ಹೆಣ್ಣು: ಎಲ್ಲಾ ದೇವರ ನಾ ಬೇಡಿ ಕೊಂಡೆನು
ಇಬ್ಬರು: ದೇವರ ಒಲವೊ ಪುಣ್ಯದ ಫಲವೊ ಕಾಣೆನು
ಗಂಡು: ನಿನ್ನ ನಾ ಪಡೆದೆನು.
--------------------------------------------------------------------------------------------------------------------------

ಭಾಗ್ಯವಂತರು (1977) - ಭಾಗ್ಯವಂತರು ನಾವೇ ಭಾಗ್ಯವಂತರು 


ಸಾಹಿತ್ಯ: ಚಿ.ಉದಯಶಂಕರ್   ಸಂಗೀತ: ರಾಜನ್-ನಾಗೇಂದ್ರ  ಗಾಯನ: ಪಿ.ಬಿ.ಎಸ್. ಎಸ್.ಪಿ.ಬಿ, ಎಸ್.ಜಾನಕೀ 

ಜಾನಕೀ : ಭಾಗ್ಯವಂತರು ನಾವೇ ಭಾಗ್ಯವಂತರು
              ಭಾಗ್ಯವಂತರು ನಾವೇ ಭಾಗ್ಯವಂತರು
              ತಾಯಿ ಮಮತೆಯ ತಂದೆ ಪ್ರೀತಿಯಾ 
              ಪಡೆದ ನಾವುಗಳೇ ಪುಣ್ಯವಂತರೂ 
              ಎಂದೂ ನಾವುಗಳೇ ಪುಣ್ಯವಂತರೂ 
              ಭಾಗ್ಯವಂತರು ನಾವೇ ಭಾಗ್ಯವಂತರು 

ಜಾನಕೀ : ಚಿನ್ನದ ಗೌರಿ ಕರುಣೆಯ ತೋರಿ
               ಚಿನ್ನದ ಗೌರಿ ಕರುಣೆಯ ತೋರಿ
              ಹರಸಲು ನಮ್ಮೆಲ್ಲರ ಬಂದ ಹಾಗಿದೇ
ಎಸ್.ಪಿ.ಬಿ : ಕಾಣದೇ ಗೌರಿ ಆತುರ ತೋರಿ
                 ಕಾಣದೇ ಗೌರಿ ಆತುರ ತೋರಿ
                 ಹುಡುಕುತ ಮಹೇಶ್ವರ ನೊಂದ ಹಾಗಿದೆ...
ಜಾನಕೀ : ಶಿವನು ಪಾರ್ವತಿಯು ಒಂದಾಗಿ ಸೇರಿದ
               ಶಿವನು ಪಾರ್ವತಿಯು ಒಂದಾಗಿ ಸೇರಿದ ಆನಂದ
               ಈ ಅನುಬಂಧ ನಮ್ಮ ಮನೆಯಲ್ಲಿ ತುಂಬಿರಲಿ ಎಂದೆಂದಿಗೂ
ಎಲ್ಲರು : ಭಾಗ್ಯವಂತರು ನಾವೇ ಭಾಗ್ಯವಂತರು
             ಭಾಗ್ಯವಂತರು ನಾವೇ ಭಾಗ್ಯವಂತರು 
             ತಾಯಿ ಮಮತೆಯ ತಂದೆ ಪ್ರೀತಿಯಾ 
             ಪಡೆದ ನಾವುಗಳೇ ಪುಣ್ಯವಂತರೂ 
             ಎಂದೂ ನಾವುಗಳೇ ಪುಣ್ಯವಂತರೂ 
             ಭಾಗ್ಯವಂತರು ನಾವೇ ಭಾಗ್ಯವಂತರು 

ಪಿ.ಬಿ.ಎಸ್.: ಸ್ನೇಹದಿ ಬಂದೇ ಪ್ರೀತಿಯ ತಂದೇ
                 ಸ್ನೇಹದಿ ಬಂದೇ ಪ್ರೀತಿಯ ತಂದೇ
                 ಪ್ರಣಯದ ಗಂಗೆಯಲಿ ತಾವರೆಯಾದೆ
                 ಜೀವದ ಜೀವ ನೀ ನನಗಾದೇ
                 ಜೀವದ ಜೀವ ನೀ ನನಗಾದೇ
                 ನಲಿಯುವ ಮಕ್ಕಳನೇ ಕಾಣಿಕೆ ತಂದೇ
                 ಇಂತಹ ಸುದಿನವನು ನಾ ಕಾಣೇನೂ
                 ಇಂತಹ ಸುದಿನವನು ನಾ ಕಾಣೇನೂ
                 ಸಂತೋಷ
ಜಾನಕೀ: ಈ ಸೌಭಾಗ್ಯ
ಎಲ್ಲರೂ : ನಮ್ಮ  ಬಾಳಲ್ಲಿ ತುಂಬಿರಲಿ ಎಂದೆಂದಿಗೂ
ಎಲ್ಲರು : ಭಾಗ್ಯವಂತರು ನಾವೇ ಭಾಗ್ಯವಂತರು
             ಭಾಗ್ಯವಂತರು ನಾವೇ ಭಾಗ್ಯವಂತರು 
             ನಗುವ ಸಂಸಾರ ಬದುಕು ಬಂಗಾರ 
             ನಾವೇ ಈ ಜಗದಿ ಪುಣ್ಯವಂತರೂ 
             ನಾವೇ ಈ ಜಗದಿ ಭಾಗ್ಯವಂತರು 
             ನಾವೇ ಈ ಜಗದಿ ಭಾಗ್ಯವಂತರು 
-------------------------------------------------------------------------------------------------------------------------










No comments:

Post a Comment