ದೇವರ ಕಣ್ಣು ಚಿತ್ರದ ಹಾಡುಗಳು
- ನಿನ್ನ ನೀನು ಮರೆತರೇನು
- ಓ ಇನಿಯಾ.... ಎಲ್ಲಿರುವೆ ನೀನಗಾಗಿ
- ನಗುವಿನ ಅಳುವಿನ ಸಂಕೋಲೆ
- ನಿನ್ನೆ ಸಂಜೆ ಅಲ್ಲಿ ನೋಡಿದೆ,
- ನಿನ್ನ ನೀನು ಮರೆತರೇನು (ಪಿ.ಸುಶೀಲಾ )
ಚಿತ್ರಗೀತೆ : ಚಿ. ಉದಯಶಂಕರ್ ಸಂಗೀತ : ಟಿ.ಜಿ.ಲಿಂಗಪ್ಪ ಗಾಯನ : ಎಸ್.ಪಿ.ಬಿ
ಆಆಆ... ಆಆಆ...
ನಿನ್ನ ನೀನು ಮರೆತರೇನು ಸುಖವಿದೆ
ತನ್ನತನವ ತೊರೆದರೇನು ಸೊಗಸಿದೆ
ನಿನ್ನ ನೀನು ಮರೆತರೇನು ಸುಖವಿದೆ
ತನ್ನತನವ ತೊರೆದರೇನು ಸೊಗಸಿದೆ
ನಿನ್ನ ನೀನು ಮರೆತರೇನು ಸುಖವಿದೆ
ಹಾಡುವುದನು ಕೋಗಿಲೆಯು ಮರೆಯುವುದೇ,
ಹಾರುವುದನು ಬಾನಾಡಿ ತೊರೆಯೆವುದೆ
ಮೀನು ಈಜದಿರುವುದೆ, ದು೦ಬಿ ಹೂವ ಮರೆವುದೆ
ಮೀನು ಈಜದಿರುವುದೆ, ದು೦ಬಿ ಹೂವ ಮರೆವುದೆ
ಮುಗಿಲ ಕ೦ಡ ನವಿಲು ನಲಿಯದೆ... ಆಆಆಆಅ...
ನಿನ್ನ ನೀನು ಮರೆತರೇನು ಸುಖವಿದೆ
ಗಾಳಿ ತನ್ನ ಚಲನೆಯನ್ನು ಮರೆಯುವುದೆ,
ಬೆಳ್ಳಿ ಮೋಡ ತೇಲದೆ ನಿಲ್ಲುವುದೆ
ತಾರೆ ಮಿನುಗದಿರುವುದೆ, ಮಿ೦ಚು ಹೊಡೆಯದಿರುವುದೆ
ನದಿಯು ಕಡಲ ಸ್ನೇಹ ಮರೆವುದೆ,
ಸಗಮಪ, ಗಮಪನಿ, ಪನಿಸ, ಪನಿರಿ, ಗಾ ನಿ ಸಾ ನಿ ಪಾ ಮಾ ಗಾ ಮ ರಿ ,
ಗಾ ನಿ ಸಾ ನಿ ಪಾ ಮ ಗಾ ಮ ಪಾ, ಗಾ ನಿ ಸಾ ನಿ ಪಾ ಮಾ ಗಾ ಮ
ನಿನ್ನ ನೀನು ಮರೆತರೇನು ಸುಖವಿದೆ ತನ್ನತನವ ತೊರೆದರೇನು ಸೊಗಸಿದೆ
ನಿನ್ನ ನೀನು ಮರೆತರೇನು ಸುಖವಿದೆ
-----------------------------------------------------------------------------------------------------------------------
ದೇವರ ಕಣ್ಣು (1975) - ನಿನ್ನ ನೀನು ಮರೆತರೇನು
ಚಿತ್ರಗೀತೆ : ಚಿ. ಉದಯಶಂಕರ್ ಸಂಗೀತ : ಟಿ.ಜಿ.ಲಿಂಗಪ್ಪ ಗಾಯನ : ಪಿ.ಸುಶೀಲಾ
ಓ ಇನಿಯಾ... .ಇನಿಯಾ... ಇನಿಯಾ...
ಓ ಇನಿಯಾ.... ಎಲ್ಲಿರುವೆ ನೀನಗಾಗಿ ಕಾದಿರುವೆ
ಓ ಇನಿಯಾ....ನೀ ಎಲ್ಲಿರುವೆ ನೀನಗಾಗಿ ಕಾದಿರುವೆ
ದಾರಿಗೆ ಹೂವ ಚೆಲ್ಲಿರುವೆ ದೂರಕೆ ನೀನು ಹೋಗಿರುವೆ..
ಓ ಇನಿಯಾ....ನೀ ಎಲ್ಲಿರುವೆ ನೀನಗಾಗಿ ಕಾದಿರುವೆ
ಓ ಇನಿಯಾ....ನೀ ಎಲ್ಲಿರುವೆ ನೀನಗಾಗಿ ಕಾದಿರುವೆ
ಅಲೆದಿದೆ ಎಲ್ಲಾ ಕಾಡು ಮೇಡು
ಹಂಬಲ ಮೀರಿ ಕರೆದಿದೆ ನಿನ್ನ ಬೆಂಬಲಕ್ಕಾಗಿ ಬಾ ಚೆನ್ನ ....
ಬಾ ಚೆನ್ನ ಬಾ ಚೆನ್ನ ಬಾ ಚೆನ್ನ
ಓ ಇನಿಯಾ....ನೀ ಎಲ್ಲಿರುವೆ ನೀನಗಾಗಿ ಕಾದಿರುವೆ
ಮೋಡದ ರೀತಿ ನೀನಿರುವೆ ಆವಿಯ ರೀತಿ ನಾನಿರುವೆ
ಮೋಡದ ರೀತಿ ನೀನಿರುವೆ ಆವಿಯ ರೀತಿ ನಾನಿರುವೆ
ಇನಿಯಳ ಪ್ರೀತಿ ಮರೆತಿರುವೆ ಎಂದಿಗೆ ನನ್ನಾ ಸೇರುವೆ ...
ಸೇರುವೆ ... ಸೇರುವೆ ... ಸೇರುವೆ ...
ಓ ಇನಿಯಾ....ನೀ ಎಲ್ಲಿರುವೆ ನೀನಗಾಗಿ ಕಾದಿರುವೆ
ದಾರಿಗೆ ಹೂವ ಚೆಲ್ಲಿರುವೆ ದೂರಕೆ ನೀನು ಹೋಗಿರುವೆ..
ಹೋಗಿರುವೆ.. ಹೋಗಿರುವೆ.. ಹೋಗಿರುವೆ..
ಓ ಇನಿಯಾ....ನೀ ಎಲ್ಲಿರುವೆ
-------------------------------------------------------------------------------------------------------------------
ದೇವರ ಕಣ್ಣು (1975)
ಚಿತ್ರಗೀತೆ :ವಿಜಯನಾರಸಿಂಹ ಸಂಗೀತ : ಟಿ.ಜಿ.ಲಿಂಗಪ್ಪ ಗಾಯನ : ಕೆ.ಜೆ.ಏಸುದಾಸ್
ನಗುವಿನ ಅಳುವಿನ ಸಂಕೋಲೆ, ನಡುವೆ ದೇವರ ಲೀಲೆ
ಸಾಗಿದೆ ಗಾಲಿ ತೂರುತ ಧೂಳಿ
ಸಾಗಿದೆ ಗಾಲಿ ತೂರುತ ಧೂಳಿ ಪಯಣಕೆ ಎಲ್ಲಿದೆ ಎಲ್ಲೇ..
ಪಯಣಕೆ ಎಲ್ಲಿದೆ ಎಲ್ಲೇ..
ನಗುವಿನ ಅಳುವಿನ ಸಂಕೋಲೆ, ನಡುವೆ ದೇವರ ಲೀಲೆ
ಯೌವನ ಬಂದಾಗ ಪ್ರೇಮ ಪರೀಕ್ಷೆ,
ಯೌವನ ಬಂದಾಗ ಪ್ರೇಮ ಪರೀಕ್ಷೆ,
ನಾನಾ ವಿಧದ ಬಾಳ ನಿರೀಕ್ಷೇ
ನಾನಾ ವಿಧದ ಬಾಳ ನಿರೀಕ್ಷೇನಲಿವಿನ ಜೊತೆಯಲಿ ನೋವಿನ ಶಿಕ್ಷೆ....
ಎಲ್ಲಿದೇ ದೇವನ ರಕ್ಷೇ, ಎಲ್ಲಿದೇ ದೇವನ ರಕ್ಷೇ
ನಗುವಿನ ಅಳುವಿನ ಸಂಕೋಲೆ, ನಡುವೆ ದೇವರ ಲೀಲೆ
ಕಣ್ಣಿಗೆ ಕಾಣದ ಕೈಗಳ ಸೂತ್ರ
ಕಣ್ಣಿಗೆ ಕಾಣದ ಕೈಗಳ ಸೂತ್ರ ಆಡಿಸಿದಂತೆ ಆಡುವ ಪಾತ್ರ
ಆಡಿಸಿದಂತೆ ಆಡುವ ಪಾತ್ರ ಸೋಲೋ ಗೆಲುವೋ ಎಲ್ಲ ವಿಚಿತ್ರ...
ಎಲ್ಲರು ಇಲ್ಲೀ ನೆಪ ಮಾತ್ರ... ಎಲ್ಲರು ಇಲ್ಲೀ ನೆಪ ಮಾತ್ರ...
ನಗುವಿನ ಅಳುವಿನ ಸಂಕೋಲೆ, ನಡುವೆ ದೇವರ ಲೀಲೆ
ನಗುವಿನ ಅಳುವಿನ ಸಂಕೋಲೆ, ನಡುವೆ ದೇವರ ಲೀ... ಲೆ
------------------------------------------------------------------------------------------------------------------------
ನಗುವಿನ ಅಳುವಿನ ಸಂಕೋಲೆ, ನಡುವೆ ದೇವರ ಲೀ... ಲೆ
------------------------------------------------------------------------------------------------------------------------
ಚಿತ್ರಗೀತೆ :ಚಿ.ಉದಯಶಂಕರ ಸಂಗೀತ : ಟಿ.ಜಿ.ಲಿಂಗಪ್ಪ ಗಾಯನ : ವಾಣಿಜಯರಾಮ
ನಿನ್ನೆ ಸಂಜೆ ಅಲ್ಲಿ ನೋಡಿದೆ, ಕಣ್ಣಿನಲ್ಲೆ ನಿನ್ನ ಕೂಗಿದೆ
ಸನಿಹ ಬಾರೋ ಒಲವ ತೋರೋ ರಸಿಕನೇ ಎಂದೇ
ನಿನ್ನೆ ಸಂಜೆ ಅಲ್ಲಿ ನೋಡಿದೆ, ಕಣ್ಣಿನಲ್ಲೆ ನಿನ್ನ ಕೂಗಿದೆ
ಸನಿಹ ಬಾರೋ ಒಲವ ತೋರೋ ರಸಿಕನೇ ಎಂದೇ
ತುಟಿಯಾ ತುಂಬಾ ಸವಿಜೇನ ಕೊಡುವೆನಿಂದೇ ಬಾ ಜಾಣ
ನೀನು ಬಳೀಬಾರದೇ ನನ್ನನ್ನು ಸೇರದೆ
ನಿನ್ನೆಯಿಂದ ವಿರಹದಿಂದ ನೊಂದೆ ನಿನ್ನಿಂದ
ನಿನ್ನೆ ಸಂಜೆ ಅಲ್ಲಿ ನೋಡಿದೆ, ಕಣ್ಣಿನಲ್ಲೆ ನಿನ್ನ ಕೂಗಿದೆ
ಸನಿಹ ಬಾರೋ ಒಲವ ತೋರೋ ರಸಿಕನೇ ಎಂದೇ
ಇಂದು ಇರುಳು ಅಲ್ಲಿರುವೇ ಹೂವರಾಶಿ ಹಾಸಿರುವೆ
ನೀಲಿ ಬಾನಿನ ತಾರೆಗಳ ಎಣಿಸುವಂತೆ ಮಲಗಿರುವೆ
ತೋಳು ಮೈ ಬಳಸಿರೇ... ಮೈಗೆ ಮೈ ಬೆಸೆದರೇ
ನಿಮಿಷದಲ್ಲೇ ಸ್ವರ್ಗದಲ್ಲೇ ನೀನು ತೇಲಾಡುವೇ
ನಿನ್ನೆ ಸಂಜೆ ಅಲ್ಲಿ ನೋಡಿದೆ, ಕಣ್ಣಿನಲ್ಲೆ ನಿನ್ನ ಕೂಗಿದೆ
ಸನಿಹ ಬಾರೋ ಒಲವ ತೋರೋ ರಸಿಕನೇ ಎಂದೇ
ಲಾಲಲಾಲಾಲಾಲ ಲಾಲಲಾಲಾಲಾಲ
--------------------------------------------------------------------------------------------------------------------------
ದೇವರ ಕಣ್ಣು (1975) - ನಿನ್ನ ನೀನು ಮರೆತರೇನು
ಚಿತ್ರಗೀತೆ : ಚಿ. ಉದಯಶಂಕರ್ ಸಂಗೀತ : ಟಿ.ಜಿ.ಲಿಂಗಪ್ಪ ಗಾಯನ :ಪಿ.ಸುಶೀಲಾ
ಆಆಆ... ಆಆಆ.... ಆಆಆ....
ನಿನ್ನ ನೀನು ಮರೆತರೇನು ಸುಖವಿದೆ
ತನ್ನತನವ ತೊರೆದರೇನು ಸೊಗಸಿದೆ
ನಿನ್ನ ನೀನು ಮರೆತರೇನು ಸುಖವಿದೆ
ತನ್ನತನವ ತೊರೆದರೇನು ಸೊಗಸಿದೆ
ನಿನ್ನ ನೀನು ಮರೆತರೇನು ಸುಖವಿದೆ
ಹಾಡುವುದನು ಕೋಗಿಲೆಯು ಮರೆಯುವುದೇ,
ಹಾರುವುದನು ಬಾನಾಡಿ ತೊರೆಯೆವುದೆ
ಮೀನು ಈಜದಿರುವುದೇ ದು೦ಬಿ ಹೂವ ಮರೆವುದೇ
ಮೀನು ಈಜದಿರುವುದೇ ದು೦ಬಿ ಹೂವ ಮರೆವುದೇ
ಮುಗಿಲ ಕ೦ಡ ನವಿಲು ನಲಿಯದೆ... ಆಆಆ...
ನಿನ್ನ ನೀನು ಮರೆತರೇನು ಸುಖವಿದೆ
ಗಾಳಿ ತನ್ನ ಚಲನೆಯನ್ನು ಮರೆಯುವುದೇ....
ಗಾಳಿ ತನ್ನ ಚಲನೆಯನ್ನು ಮರೆಯುವುದೇ....
ಬೆಳ್ಳಿ ಮೋಡ ತೇಲದೆ ನಿಲ್ಲುವುದೇ
ತಾರೆ ಮಿನುಗದಿರುವುದೆ, ಮಿ೦ಚು ಹೊಳೆಯದಿರುವುದೆ
ತಾರೆ ಮಿನುಗದಿರುವುದೆ, ಮಿ೦ಚು ಹೊಳೆಯದಿರುವುದೆ
ನದಿಯು ಕಡಲ ಸ್ನೇಹ ಮರೆವುದೆ,
ಸಗಮಪ, ಗಮಪನಿ, ಪನಿಸ, ಪನಿರಿ, ಗಾನಿಸಾನಿಪಾಮಾಗಾ ಮನಿ ,
ಗಾನಿಸಾನಿಪಾಮಗಮಗ , ಗಾನಿಸಾನಿಪಾಮಾಗಾಮ
ನಿನ್ನ ನೀನು ಮರೆತರೇನು ಸುಖವಿದೆ
ತನ್ನತನವ ತೊರೆದರೇನು ಸೊಗಸಿದೆ
ನಿನ್ನ ನೀನು ಮರೆತರೇನು ಸುಖವಿದೆ
-----------------------------------------------------------------------------------------------------------------------
No comments:
Post a Comment