524. ಪರಸಂಗದ ಗೆಂಡೆತಿಮ್ಮ (1978)



ಪರಸಂಗದ ಗೆಂಡಿತಿಮ್ಮ ಚಿತ್ರದ ಹಾಡುಗಳು 
  1. ನಿನ್ನಾ ರೂಪು ಎದೆಯ ಕಲಕಿ ಕಣ್ಣು ಮಿಂದಾಗ 
  2. ನೋಟದಾಗೇ ನಗೆಯ ಮೀಟಿ ಮೋಜಿನಾಗೆ ಎಲ್ಲೆಯ ಧಾಟಿ (ದುಃಖ) 
  3. ತೇರಾ ಏರಿ ಅಂಬರಡಾಗೇ ನೇಸರ ನಗ್ತಾನೆ 
  4. ನೋಟದಾಗೇ ನಗೆಯ ಮೀಟಿ ಮೋಜಿನಾಗೆ ಎಲ್ಲೆಯ ಧಾಟಿ 
ಪರಸಂಗದ ಗೆಂಡೆತಿಮ್ಮ (1978) - ನಿನ್ನಾ ರೂಪು ಎದೆಯ ಕಲಕಿ
ಸಂಗೀತ: ರಾಜನ್-ನಾಗೇಂದ್ರ ಸಾಹಿತ್ಯ: ದೊಡ್ಡರಂಗೇಗೌಡ  ಗಾಯನ: ಎಸ್.ಜಾನಕಿ

ನಿನ್ನಾ ರೂಪು ಎದೆಯ ಕಲಕಿ ಕಣ್ಣೂ ಎಂದಾಗ
ನಿನ್ನಾ ನೋಟ ಕೂಡಿದಾಗ ಕಂಡೇ ಅನುರಾಗಾ...
ಕಂಡೇ ಅನುರಾಗಾ... ಕಂಡೇ ಅನುರಾಗಾ...

ಮನಸಿನಾ ಚಿಲುಮೆಯಾಗೆ ಮುಗಿಯದಾಸೆ ಚಿಮ್ಮೈತೆ
ಹೃದಯದಾ ಕುಲುಮೆಯಾಗೆ ನೂರು ಬಯಕೇ ಸಿಡಿದೈತೆ
ನಿನ್ನಾ ಕಾಣುವ ಬಾವ ಬೆಳೆದು ನನ್ನಾ ಕನಸು ಕರೆದೈತೆ...
ನಿನ್ನಾ ರೂಪು ಎದೆಯ ಕಲಕಿ ಕಣ್ಣೂ ಎಂದಾಗ
ನಿನ್ನಾ ನೋಟ ಕೂಡಿದಾಗ ಕಂಡೇ ಅನುರಾಗ...

ತೆರೆಯದಾ ಬಯಕೆ ಬಾನೂ ದೂರಾ ದೂರಾ ಸರಿದೈತೆ
ಹರೆಯದಾ ಹಂಬಲ ಗಂಗೇ ಬಾಗೀ ಬಳುಕೀ ಹರಿದೈತೆ
ನಿನ್ನಾ ಸ್ನೇಹಕೆ ಬಾಳು ನಲಿದು ಆಸೆ ಗಂಧಾ ಹರಡೈತೆ...
ನಿನ್ನಾ ರೂಪು ಎದೆಯ ಕಲಕಿ ಕಣ್ಣೂ ಎಂದಾಗ
ನಿನ್ನಾ ನೋಟ ಕೂಡಿದಾಗ ಕಂಡೇ ಅನುರಾಗ...

ಮರೆಯದಾ ಮೋಹ ಉಕ್ಕೀ ತೇಲೀ ತೇಲೀ ಬರದೈತೆ
ಇಂಗದಾ ದಾಹ ಬೇಗೇ ಕಾದೂ ಕಾದೂ ಕರೆದೈತೆ
ನಿನ್ನಾ ಸೇರುವ ರಾಗರಂಗಿಗೆ ನನ್ನಾ ಮನಸೂ ತೆರೆದೈತೆ...
ನಿನ್ನಾ ರೂಪು ಎದೆಯ ಕಲಕಿ ಕಣ್ಣೂ ಎಂದಾಗ
ನಿನ್ನಾ ನೋಟ ಕೂಡಿದಾಗ ಕಂಡೇ ಅನುರಾಗ...
ಕಂಡೇ ಅನುರಾಗ... ಕಂಡೇ ಅನುರಾಗ... ಕಂಡೇ ಅನುರಾಗ...
-------------------------------------------------------------------------------------------------------------------------

ಪರಸಂಗದ ಗೆಂಡೆತಿಮ್ಮ (1978) - ನೋಟದಾಗೆ ನಗೆಯ ಮೀಟೀ  (ದುಃಖ )
ಸಂಗೀತ: ರಾಜನ್-ನಾಗೇಂದ್ರ ಸಾಹಿತ್ಯ: ದೊಡ್ಡರಂಗೇ ಗೌಡ ಹಾಡಿದವರು: ಎಸ್.ಪಿ.ಬಿ

ನೋಟದಾಗೆ ನಗೆಯ ಮೀಟೀ....  ಮೋಜಿನಾಗೆ ಎಲ್ಲೆಯ ದಾಟೀ... 
ಮೋಡಿಯ ಮಾಡಿದೋಳ ಪರಸಂಗ ಐತೆ ಪರಸಂಗ ಐತೆ
ಮೋಹಾವ ತೋರಿದೋಳ ಪರಸಂಗ ಐತೆ ಪರಸಂಗ ಐತೆ

ಬದುಕೆಲ್ಲ ಹೂವಾಗ್ಲಿ ಅಂತ ಗುಲಾಬೀನೆ ಹುಡುಕಿ ತಂದೆ
ಮೂರು ಹೊತ್ತು ಮರೀದಂಗೆ  ಹೃದಯದಾಗೆ ಇಟ್ಕೊಂಡಿದ್ದೆ
ಕಂಪ ಕೊಡುವ ಹೂ ಕೂಡ... ಆಆಆ  
ಕಂಪ ಕೊಡುವ ಹೂ ಕೂಡ  ನನ್ ಜೊತೇ ಮುನಿದೈತೆ
ಏನೇ ಆದ್ರು ಎದೆಯಾಗೆ  ಮುಳ್ಳಾಗಿ ಉಳಿದೈತೆ

ಮನೆಯೆಲ್ಲಾ ಬೆಳಗ್ಲಿ ಅಂತ   ಹೊಸ ದೀಪ ಹಚ್ಚಿದೆ
ಮನಸೆಲ್ಲ ಹತ್ತಿ ಉರಿದು     ಮೈಯಾಗೆ ಉರಿ ನಾಟೈತೆ
ಎದೆ ಬೆಂಕಿ ಆರಿಸೋಕೇ   
ಎದೆ ಬೆಂಕಿ ಆರಿಸೋಕೆ  ತಾಳ್ಮೆಯ ನೀರು ಹುಯ್ದೆ
ಅದು ಕೂಡ ಕಿಡಿಯಾಗಿ  ಕೆಂಡವ ಕಾರೈತೆ
ನೋಟದಾಗೆ ನಗೆಯ ಮೀಟಿ  ಮೋಜಿನಾಗೆ ಎಲ್ಲೆಯ ದಾಟೀ
ಮೋಡಿಯ ಮಾಡಿದೋಳ  ಪರಸಂಗ ಐತೆ ಪರಸಂಗ ಐತೆ
ಮೋಹಾವ ತೋರಿದೋಳ  ಪರಸಂಗ ಐತೆ ಪರಸಂಗ ಐತೆ

ಬಿಡಿಸದಾ ಒಗಟೊಂದು  ಎದೆಬಿಡದೆ ತೊಡಕಾಯ್ತೆ
ನೆನೆದಾರೆ ಜೋರಾಗಿ  ಗೊಂದಲದ ಬೀಡಾಯ್ತೆ
ತಪ್ಪು ಸರಿ ತಿಳಿಯದೇ..... ಏಏಏಏಏಏಏ ಅಹ್ಹಹ್ಹಹ್ಹ
ತಪ್ಪು ಸರಿ ತಿಳಿಯದೇ ದಾರಿ ಅರಿಯದಾಯಿತೇ
ಹಗಲಿರುಳು ಗೋಳಾಡಿ ಬಾಳು ಬರೀ ಕತ್ತಲಾಯಿತೇ
------------------------------------------------------------------------------------------------------------------------


ಪರಸಂಗದ ಗೆಂಡೆತಿಮ್ಮ (1978) - ತೇರಾ ಏರಿ ಅಂಬರದಾಗೆ

ಸಾಹಿತ್ಯ: ದೊಡ್ಡ ರಂಗೇಗೌಡ  ಸಂಗೀತ: ರಾಜನ್-ನಾಗೇಂದ್ರ ಗಾಯನ: ಎಸ್.ಪಿ. ಬಾಲಸುಬ್ರಹ್ಮಣ್ಯಂ


ತೇರಾ ಏರಿ ಅಂಬರದಾಗೆ ನೇಸರು ನಗುತಾನೆ..
ಮರಗಿಡ ತೂಗ್ಯಾವೆ... ಹಕ್ಕಿ ಹಾಡ್ಯಾವೇ...
ಬೀರ್ಯಾವೇ, ಚೆಲುವಾ ಬೀರ್ಯಾವೇ ಬಾ,
ನೋಡಿ ನಲಿಯೋಣ ತಮ್ಮಾ ನಾವ್, ಹಾಡಿ ಕುಣಿಯೋಣ ತಮ್ಮಾ

ಬೇಲಿ ಮ್ಯಾಗೆ ಬಣ್ಣ ಬಣ್ಣದ ಹೂವು ಅರಳ್ಯಾವೆ...
ಆ ಹೂವಿನ ತುಂಬಾ ಸಣ್ಣ ಚಿಟ್ಟೆ ಕುಂತಾವೇ ....
ಬಾಗಿ ಬೀಗಿ ಅತ್ತ ಇತ್ತ ಬಾಳೆ ಬಳುಕ್ಯಾವೆ
ಆ ಬಾಳೇ ವನವೇ ನಕ್ಕು ಕಣ್ಣು ತಂದ್ಯಾವೆ
ಕುಂತರೆ ಸೆಳೆವ, ಅಹ್ಹಹ್ಹಾಹ್ಹಹ್ಹಾ  ಸಂತಸ ತರುವ
ಕುಂತರೆ ಸೆಳೆವ,  ಸಂತಸ ತರುವ
ಹೊಂಗೆ ಟೊಂಗೆ ತೂಗಿ ತೂಗಿ ಗಾಳಿ ಬೀಸ್ಯಾವೇ
ತೇರಾ ಏರಿ ಅಂಬರದಾಗೆ ನೇಸರು ನಗುತಾನೆ..
ಮರಗಿಡ ತೂಗ್ಯಾವೆ... ಹಕ್ಕಿ ಹಾಡ್ಯಾವೇ...
ಮರಗಿಡ ಕೂಗ್ಯಾವೇ... ಚಿಲಿಪಿಲಿ ಹಕ್ಕಿ ಹಾಡ್ಯಾವೇ...

ಭೂಮಿಮ್ಯಾಗೇ ಹಚ್ಚ ಹಚ್ಚಗೆ ಹಾದಿ ತೆರೆದ್ಯಾವೇ... 
ಆ ಹಾದಿ ಅಕ್ಕ ಪಕ್ಕ ಬಳ್ಳಿ ಬೆಳೆದ್ಯಾವೆ
ಸಾಲು ಸಾಲು ಬೆಟ್ಟ ಗುಡ್ಡ ಮೌನ ತಳೆದಾವೆ
ಆ ಮೌನದ ಗಾನ ಎಲ್ಲರ ಮನಸಾ ಸೆಳೆದಾವೆ
ಭಾವಾ ಬಿರಿದು, ಹತ್ತಿರ ಕರೆದು
ಭಾವಾ ಬಿರಿದು, ಹತ್ತಿರ ಕರೆದು
ಮಾವು ಬೇವು ತಾಳೆ ತೆಂಗು ಲಾಲಿ ಹಾಡ್ಯಾವೆ ಅಹ್ಹಹ್ಹಹ್ಹ ಅಹ್ಹಹ್ಹಹಹ್ಹಾ


ತೇರಾ ಏರಿ ಅಂಬರದಾಗೆ ನೇಸರು ನಗುತಾನೆ..
ಮರಗಿಡ ತೂಗ್ಯಾವೆ... ಹಕ್ಕಿ ಹಾಡ್ಯಾವೇ...
ಮರಗಿಡ ಕೂಗ್ಯಾವೇ... ಚಿಲಿಪಿಲಿ ಹಕ್ಕಿ ಹಾಡ್ಯಾವೇ...

ಭೇದಭಾವ ಮುಚ್ಚುಮರೆ ಒಂದು ಮಾಡ್ದೇನೆ
ಆ ಸೂರ್ಯ ಒಂದೇ ಬೆಳಕ ನಮಗೆ ನೀಡ್ಯಾನೆ
ಗಾಳಿ ನೀರು ಎಲ್ಲ ಕೊಟ್ಟು ಜಗವ ನಡೆಸ್ಯಾನೆ
ಆ ಸಿರಿಯ ಹಂಚಿಕೊಂಡರೆ ಬಾಳು ಸವಿಜೇನೆ
ಪ್ರೀತಿ ಬೆಳೆದೆ ಸ್ನೇಹ ಕಳೆದು||
ನಗುತ ನಗುತ ನಾವು ನೀವು ಸವಿಯುವ ಸುಖವನ್ನೇ
ತೇರಾ ಏರಿ ಅಂಬರದಾಗೆ ನೇಸರು ನಗುತಾನೆ..
ತೇರಾ ಏರಿ ಅಂಬರದಾಗೆ ನೇಸರು ನಗುತಾನೆ..
ಮರಗಿಡ ತೂಗ್ಯಾವೆ... ಹಕ್ಕಿ ಹಾಡ್ಯಾವೇ...
ಬೀರ್ಯಾವೇ, ಚೆಲುವಾ ಬೀರ್ಯಾವೇ ಬಾ,
ನೋಡಿ ನಲಿಯೋಣ ತಮ್ಮಾ ನಾವ್, ಹಾಡಿ ಕುಣಿಯೋಣ ತಮ್ಮಾ
----------------------------------------------------------------------------------------------------------------------

ಪರಸಂಗದ ಗೆಂಡೆತಿಮ್ಮ (1978) - ನೋಟದಾಗೆ ನಗೆಯಾ ಮೀಟೀ...
ಸಾಹಿತ್ಯ: ದೊಡ್ಡರಂಗೇ ಗೌಡ    ಸಂಗೀತ: ರಾಜನ್-ನಾಗೇಂದ್ರ  ಹಾಡಿದವರು: ಎಸ್.ಪಿ.ಬಿ

ನೋಟದಾಗೆ ನಗೆಯಾ ಮೀಟೀ.... ಮೋಜಿನಾಗೆ ಎಲ್ಲೆ ದಾಟೀ.. ಆಹಾಹ 
ಮೋಡಿಯ ಮಾಡಿದೋಳ ಪರಸಂಗ ಐತೆ ಪರಸಂಗ ಐತೆ
ಆಹಾ ಮೋಹಾವ ತೋರಿದೋಳ ಪರಸಂಗ ಐತೆ ಪರಸಂಗ ಐತೆ

ಬರಡಾದ ಬುದುಕಿಗೆ ಹೊಸನೆಸರು ಅರಳೈತೆ...
ಮನಸ್ನಾಗೆ ಹೊಸ ಆಸೆ ಹೊಸ ಭಾಷೆ ಬೆಳೆದೈತೆ...
ಕುಂತ್ರು ನಿಂತ್ರು ನನ್ನ ಚೆಲವಿ ಚೆಲುವೇ ಕಾಡೈತೆ
ಮೈಯಾಗೆ ಸಂತೋಷದ ಮಲ್ಲಿಗೆ ಬಿರಿದೈತೆ..
ಮೈಯಾಗೆ ಸಂತೋಷದ ಮಲ್ಲಿಗೆ ಬಿರಿದೈತೆ..
ನೋಟದಾಗೆ ನಗೆಯಾ ಮೀಟೀ.... ಮೋಜಿನಾಗೆ ಎಲ್ಲೆ ದಾಟೀ.. 
ಮೋಡಿಯ ಮಾಡಿದೋಳ ಪರಸಂಗ ಐತೆ ಪರಸಂಗ ಐತೆ.. ಹೇಹೇ ಹೇಹೇ
ಮೋಹಾವ ತೋರಿದೋಳ ಪರಸಂಗ ಐತೆ ಪರಸಂಗ ಐತೆ

ಕಡುಬಾಳ ಹಾದ್ಯಾಗೆ ನನ್ನಪರಂಜಿ ಒಳದೈತೆ
ಹಗಲಾಗೆ ಇರುಳಾಗೆ  ಆ  ನಿಲುವೇ ಸೆಳಿದೈತಿ
ಬಲವಾದ ಹಂಬಲಕೆ  ನಗೆಬಿಲ್ಲೆ ಮಿನುಗೈತೆ
ನನ್ನ ಉಡ್ಗಿ ತನಿ ಬೆಡಗು ಮಿಂಚುತಾ ಮೆರೆದೈತೆ
ನನ್ನ ಉಡ್ಗಿ ತನಿ ಬೆಡಗು ಮಿಂಚುತಾ ಮೆರೆದೈತೆ.. ಹೋಯ್
ನೋಟದಾಗೆ ನಗೆಯಾ ಮೀಟೀ.... ಮೋಜಿನಾಗೆ ಎಲ್ಲೆ ದಾಟೀ.. ಆಹಾಹ 
ಮೋಡಿಯ ಮಾಡಿದೋಳ ಪರಸಂಗ ಐತೆ ಪರಸಂಗ ಐತೆ
ಆಹಾ ಮೋಹಾವ ತೋರಿದೋಳ ಪರಸಂಗ ಐತೆ ಪರಸಂಗ ಐತೆ

ಕೊರಳಾಗ ಇನಿದನಿ ಕೋಗಿಲೆ ಸರವೈತೆ... ಅಹ್ ..
ನಡೆಯಾಗೆ ತಳುಕುವ ಹಂಸಾದ ಬಳುಕೈತೆ
ಮುಖದಾಗೆ ತಾವರೆಯ ಹೊಳಪೇ  ಚೆಲ್ಲೈತೆ
ನನ್ ರಾಣಿ ನಿಜ ರೂಪ ರಂಗನ್ನೇ ಹರಿಸೈತೆ
ನನ್ ರಾಣಿ ನಿಜ ರೂಪ ರಂಗನ್ನೇ ಹರಿಸೈತೆ..  ಆಹಾ
ನೋಟದಾಗೆ ನಗೆಯಾ ಮೀಟೀ.... ಮೋಜಿನಾಗೆ ಎಲ್ಲೆ ದಾಟೀ.. 
ಮೋಡಿಯ ಮಾಡಿದೋಳ ಪರಸಂಗ ಐತೆ ಪರಸಂಗ ಐತೆ
ಆಹಾ ಮೋಹಾವ ತೋರಿದೋಳ ಪರಸಂಗ ಐತೆ ಪರಸಂಗ ಐತೆ
ಆಹಾಹ ಆಹಾಹ ಹೂಂ ಹೂಂ  ಆಹಾಹ ಆಹಾಹ ಹೂಂ ಹೂಂ
ಆಹಾಹ ಆಹಾಹ ಹೂಂ ಹೂಂ ಆಹಾಹ ಆಹಾಹ ಹೂಂ ಹೂಂ
--------------------------------------------------------------------------------------------------------------------------

No comments:

Post a Comment