526. ಸೂತ್ರದ ಗೊಂಬೆ (1976)


ಸೂತ್ರದ ಗೊಂಬೆ ಚಿತ್ರದ ಹಾಡುಗಳು 
  1. ನಿನ್ನ ಸೇರಿದಾಗ ಕಣ್ಣು 
  2. ಈ ಶುಭ ಸಮಯ 
  3. ಧಕ ಧಕ ಧಕ 
  4. ಬೀಸೋ ಗಾಳಿಗೆ ಬಳ್ಳಿ 
ಸೂತ್ರದ ಗೊಂಬೆ (1976)
ಸಂಗೀತ: ಸತ್ಯಂ, ಸಾಹಿತ್ಯ: ಚಿ.ಉದಯಶಂಕರ್, ಹಾಡಿದವರು: ಪಿ.ಬಿ.ಶ್ರೀನಿವಾಸ್, ಪಿ.ಸುಶೀಲಾ


ಹೆಣ್ಣು : ಆಹ್ಹಾ... ಒಹೋ..  ಆಹ್ಹಾ... ಒಹೋ..
          ನಿನ್ನಾ ಸೇರಿದಾಗ, ಕಣ್ಣು ಕೂಡಿದಾಗ
          ಅರಳಿತು ಈ ಮನ ಹೂವಾಗಿ
ಗಂಡು : ನಿನ್ನಾ ಸೇರಿದಾಗ, ಕಣ್ಣು ಕೂಡಿದಾಗ
           ಅರಳಿತು ಈ ಮನ ಹೂವಾಗಿ
ಇಬ್ಬರು : ನಿನ್ನಾ ಸೇರಿದಾಗ

ಹೆಣ್ಣು : ತನುವಿನ ಆಸೆಯು ಮಿಂಚಾಗಿ ತುಟಿಯಲೆ ಮೂಡಿತು ಜೇನಾಗಿ
ಗಂಡು : ಎದೆಯಲಿ ವೀಣೆಯ ಶೃತಿಯಾಗಿ ರಾಗವು ಹೊಮ್ಮಿತು ಹಿತವಾಗಿ
ಹೆಣ್ಣು : ಈ ದೂರ ಇನ್ನೇಕೆ ನೀ ಬಾ ಹತ್ತಿರ
          ನಿನ್ನಾ ಸೇರಿದಾಗ, ಕಣ್ಣು ಕೂಡಿದಾಗ 
          ಅರಳಿತು ಈ ಮನ ಹೂವಾಗಿ.. ನಿನ್ನಾ ಸೇರಿದಾಗ

ಗಂಡು : ಇರುಳಿನ ಮೋಡಿಗೆ ಬೆರಗಾಗಿ ಬೆರೆತೆನು ನಿನ್ನಲಿ ಸುಖವಾಗಿ
ಹೆಣ್ಣು : ಬಳಸಿದ ತೋಳಿಗೆ ಲತೆಯಾಗಿ ಮರೆತೆನು ಲೋಕವ ಹಾಯಾಗಿ
ಗಂಡು : ಎಂದೆಂದು ಒಂದಾಗಿ ಹೀಗೇ ಬಾಳುವ
           ನಿನ್ನಾ ಸೇರಿದಾಗ, ಕಣ್ಣು ಕೂಡಿದಾಗ
           ಅರಳಿತು ಈ ಮನ ಹೂವಾಗಿ.. ನಿನ್ನಾ ಸೇರಿದಾಗ
--------------------------------------------------------------------------------------------------------------------------

ಸೂತ್ರದ ಗೊಂಬೆ (1976) - ಈ ಶುಭ ಸಮಯ
ಸಂಗೀತ: ಸತ್ಯಂ, ಸಾಹಿತ್ಯ: ಚಿ.ಉದಯಶಂಕರ್, ಹಾಡಿದವರು: ಪಿ.ಸುಶೀಲಾ

ಹೆಣ್ಣು : ಆಆಆ.... ಆಆಆಅ... ಆಆಆ...
          ಈ ಶುಭ ಸಮಯ ಆನಂದಮಯ ಬಾಳಲಿ ತುಂಬಿತು ಜೇನು
          ಹಿರಿಯರ ಪ್ರೀತಿಗೇ  ಕಿರಿಯರ ಸ್ನೇಹಕೇ ನನ್ನಿ ಮರೆತೇನು ನಾನು

ಹೆಣ್ಣು : ಕಳೆದ ದಿನವ ಮರೆವ ಇಂದು ನಮದು ಎನ್ನುವಾ
          ನಲಿವಾ ಸೇರಿ ಕುಣಿವಾ ಎಲ್ಲಾ ಕಲೆತು ಹಾಡುವಾ
          ಈ ಸಂತೋಷ ಈ ಉಲ್ಲಾಸ ಎಂದು ನಮಗಿರಲೇನುವಾ
ಕೋರಸ್ :  ಹ್ಯಾಪಿ ಬರ್ತ್ ಡೇ ಟೂ ಯೂ  ಪ್ರಿನ್ಸಸ್  ರಾಜೇಶ್ವರಿ ದೇವಿ
                 ಹ್ಯಾಪಿ ಬರ್ತ್ ಡೇ ಟೂ ಯೂ

ಹೆಣ್ಣು : ಲಲಲ್ಲಲ್ಲಲಾ ಲಾ  ಲಲಲ್ಲಲ್ಲಲಾ ಲಲಲ್ಲಲ್ಲಲಾಲಾ
          ನಗುವಾಗ  ನಾ ಹೂವಂತೇ ಕುಲುಕಿ ಬಳುಕಿ ನಡೆಯುವಾಗ ಲತೆಯಂತೇ .. ಹ್ಹಾ..  
          ಮಾತೆಲ್ಲಾ ಆ.. ಮುತ್ತಂತೇ ಭೋಗ ಭಾಗ್ಯ ಎಲ್ಲ ನನ್ನ ನೆರಳಂತೇ
          ಪದವಿಗಾಗಿಯೇ ಹುಟ್ಟಿ ಬಂದೆನೂ ರಾಜಲಕ್ಷ್ಮಿಗೇ ಕುವರಿಯಾದೆನು
ಕೋರಸ್ :  ಹ್ಯಾಪಿ ಬರ್ತ್ ಡೇ ಟೂ ಯೂ ಪ್ರಿನ್ಸಸ್ ರಾಜೇಶ್ವರಿ ದೇವಿ
                 ಹ್ಯಾಪಿ ಬರ್ತ್ ಡೇ ಟೂ ಯೂ
       
ಹೆಣ್ಣು : ಚಿನ್ನದಾ ಹೂವಂತೇ ನಗುವ ಈ ರಸವಂತೇ ಆಆಆ... ಆಆಆ...
          ಬಯಕೆ ನನ್ನಲ್ಲಿ ಮೂಡಿದೆ ಹೃದಯ ಇಂದೇನೋ ಬೇಡಿದೆ
          ಕನಸು ನನಸಾಗಿ ಬದುಕು ಸೊಗಸಾಗಿ ನಲಿವೇ ಹಾಯಾಗೀ ಗೆಳೆಯ ಬಲ್ಲೆಯಾ...
--------------------------------------------------------------------------------------------------------------------------

ಸೂತ್ರದ ಗೊಂಬೆ (1976) - ಧಕ ಧಕ ಧಕ್
ಸಂಗೀತ: ಸತ್ಯಂ, ಸಾಹಿತ್ಯ: ಚಿ.ಉದಯಶಂಕರ್, ಹಾಡಿದವರು: ಎಸ್.ಜಾನಕೀ

ಸೀ ಸೇನಾರ್....
ಧಕ ಧಕ ಧಕ ಎದೆ ಬಡಿಯುತಿದೆ ಆಸೆ ಕರೆಯುತಿದೆ
ಜೀವ ಮಿಡಿಯುತಿದೆ ಓ.. ಅನಿಗೂ... ಓಓಓಓಓ...
ಧಕ ಧಕ ಧಕ ಎದೆ ಬಡಿಯುತಿದೆ ಆಸೆ ಕರೆಯುತಿದೆ
ಜೀವ ಮಿಡಿಯುತಿದೆ ಓ.. ಅನಿಗೂ... ಓಓಓಓಓ...

ಯೌವ್ವನ.... ಕೋಮಲ ಹೂವಿನ ತರಹವೂ 
ಕಾಲ ಮೀರಿ ಜಾರಿ ಹೋಗೀ... ಅಹ್ಹಹ್ಹ.. ಉಳಿಯುವುದು ವಿರಹ 
ಕಣ್ಣ ಕಣ್ಣ ನೋಟದಲ್ಲಿ ಸಾವಿರ ರಂಗಿನ ಮಾತು 
ಕೆಂದುಟಿ ಅಂಚೀನ ಜಾಲದಲ್ಲಿ ಬೀಳುವರೆಲ್ಲಾ ಸೋತು 
ನಿನ್ನದೀ ಈ ದಿನ ಹೆಣ್ಣಿನ ಈ ಮನ   
ನಿನ್ನದೀ ಈ ದಿನ ಹೆಣ್ಣಿನ ಈ ಮನ   
ತೊರೆ ತೊರೆ ತೊರೆ ತೊರೆ ತೊರೆ ನಿಧಾನ.. ಗ್ರೇಸಿ ಸೇನಾರ್ 
ಜೀವನಾ..... ರೈಲಿನ ಪಯಣದ ತರಹ 
ಸ್ನೇಹ ಪ್ರೀತಿಯಲ್ಲ ನಮ್ಮ ಹಣೆ ಮೇಲಿನ ಬರಹ 
ಇಂದು ಇಲ್ಲಿ ನಾಳೆಯಲ್ಲೋ ಬಲ್ಲವರಾರೋ ಇಲ್ಲ 
ಆ.. ಬಾಳಿನಲ್ಲಿ ಸಿಕ್ಕೋ ಸುಖವ ದೋಚಿಕೊಳ್ಳು ನಲ್ಲ 
ಮೌನವಾ ದೂಡಿ ಬಾ ನಾಚಿಕೆ ನೀಗಿ ಬಾ 
ತೊರೆ ತೊರೆ ತೊರೆ ತೊರೆ ತೊರೆ ನಿಧಾನ.. ಗ್ರೇಸಿ ಸೇನಾರ್ 
ಧಕ ಧಕ ಧಕ ಎದೆ ಬಡಿಯುತಿದೆ ಆಸೆ ಕರೆಯುತಿದೆ
ಜೀವ ಮಿಡಿಯುತಿದೆ ಓ.. ಅನಿಗೂ... ಓಓಓಓಓ... 
ಧಕ ಧಕ ಧಕ ಎದೆ ಬಡಿಯುತಿದೆ ಆಸೆ ಕರೆಯುತಿದೆ
ಜೀವ ಮಿಡಿಯುತಿದೆ ಓ.. ಅನಿಗೂ... ಓಓಓಓಓ... 
--------------------------------------------------------------------------------------------------------------------------

ಸೂತ್ರದ ಗೊಂಬೆ (1976) - ಬೀಸೋ ಗಾಳಿಗೆ ಬಳ್ಳಿ
ಸಂಗೀತ: ಸತ್ಯಂ, ಸಾಹಿತ್ಯ: ಚಿ.ಉದಯಶಂಕರ್, ಹಾಡಿದವರು: ಎಸ್.ಜಾನಕೀ, ಎಸ್ಪಿ.ಬಿ. 

ಹೆಣ್ಣು : ಬೀಸೋ ಗಾಳಿಗೆ ಬಳ್ಳಿ ನಡುವು ಬಳುಕಿದೇ ಆಡುತಲಿ
          ಬಳುಕಿದೇ ಆಡುತಲಿ
ಗಂಡು : ಉಳುಕುವುದೇನು ತಾಳು ಚಂಚಲೇ ಬಳುಸುವೇ ತೋಳಿನಲೀ
ಹೆಣ್ಣು : ಬೀಸೋ ಗಾಳಿಗೆ ಬಳ್ಳಿ ನಡುವು ಬಳುಕಿದೇ ಆಡುತಲಿ
          ಬಳುಕಿದೇ ಆಡುತಲಿ
ಗಂಡು : ಉಳುಕುವುದೇನು ತಾಳು ಚಂಚಲೇ ಬಳುಸುವೇ ತೋಳಿನಲೀ
           ಬಾರೇ ಇಲ್ಲಿ ಬಾರೇ
ಹೆಣ್ಣು : ಆಹಾ.. ಆಆಆ... ಆಆಆ....

ಹೆಣ್ಣು : ಸಂಪಿಗೆ ಹೂವಿನ ಕಂಪಿಗೆ ಮತ್ತು ಏರಿದೇ ನನ್ನಲ್ಲೀ
          ಸಂಪಿಗೆ ಹೂವಿನ ಕಂಪಿಗೆ ಮತ್ತು ಏರಿದೇ ನನ್ನಲ್ಲೀ
ಗಂಡು : ನಿಲ್ಲದೇ ಅಲ್ಲೇ ಇಲ್ಲಿಗೇ ಬಾರೇ ಆಸರೆ ಇದೇ ಇಲ್ಲಿ... ಆಆಆ...
            ನಿಲ್ಲದೇ ಅಲ್ಲೇ ಇಲ್ಲಿಗೇ ಬಾರೇ ಆಸರೆ ಇದೇ ಇಲ್ಲಿ ಆಆಆ...
ಹೆಣ್ಣು : ಹರುಷಕೆ ಹಿಗ್ಗಿ ಅರಳಿತು ಮೊಗ್ಗು ಜೇನಿದೇ ಒಡಲ್ಲಲ್ಲಿ
ಗಂಡು : ಪ್ರಣಯದ ಕವಿತೆಯ ಹಾಡುತ ದುಂಬಿ ಮೆರೆವುದು ಕ್ಷಣದಲ್ಲಿ
           ಬಾರೇ ಇಲ್ಲಿ ಬಾರೇ
ಹೆಣ್ಣು : ಆಹಾ.. ಆಆಆ... ಆಆಆ.... 

ಹೆಣ್ಣು : ಸಂಜೆಯ ಕೆಂಪು ಚೆಲ್ಲಿದೇ ರಂಗನೂ ನೋಡಿ ಕೆನ್ನೆಯಲೀ... ಆಆಆ..
          ಸಂಜೆಯ ಕೆಂಪು ಚೆಲ್ಲಿದೇ ರಂಗನೂ ನೋಡಿ ಕೆನ್ನೆಯಲೀ... ಆಆಆ..
ಗಂಡು : ಸನಿಹಕೆ ಬಾರೇ ಒರೆಸುವೇ ರಂಗನು ನನ್ನೀ ತುಟಿಗಳಲೀ.. ಆಆಆ
           ಸನಿಹಕೆ ಬಾರೇ ಒರೆಸುವೇ ರಂಗನು ನನ್ನೀ ತುಟಿಗಳಲೀ.. ಆಆಆ
--------------------------------------------------------------------------------------------------------------------------

No comments:

Post a Comment