527. ಏಕಲವ್ಯ (1990)

ಏಕಲವ್ಯ ಚಿತ್ರದ ಹಾಡುಗಳು 
  1. ನಿನ್ನ ಸ್ನೇಹ ಚೆನ್ನ, ನಿನ್ನ ಮೋಹ ಚೆನ್ನ
  2. ಅರೇ ಮುತ್ತು ಈಗ ಈ ಕೆನ್ನೆಗೇ ಬೇಕಾಗಿದೆ 
  3. ಮಳೆಬಿಲ್ಲು ಅಂದ ಇಲ್ಲ ಸುಳಿ ಮಿಂಚು ಅಂದ ಇಲ್ಲ 
  4. ಬಾ ಇಲ್ಲಿ ಬಾ ನನ್ನ ಅಂದ ನೋಡು 
  5. ಸಂಸಾರವೆಂದರೇನು ಲೇಟಾಗಿ ಅರಿತೇ ನಾನು 
ಏಕಲವ್ಯ (1990) - ನಿನ್ನ ಸ್ನೇಹ ಚೆನ್ನ, ನಿನ್ನ ಮೋಹ ಚೆನ್ನ
ಸಾಹಿತ್ಯ: ಚಿ.ಉದಯಶಂಕರ್ ಸಂಗೀತ: ಸಂಗೀತರಾಜ ಹಾಡಿದವರು: ಎಸ್.ಪಿ.ಬಿ., ಚಿತ್ರಾ

ಹೆಣ್ಣು : ನಿನ್ನ ಸ್ನೇಹ ಚೆನ್ನ, ನಿನ್ನ ಮೋಹ ಚೆನ್ನ
          ನಿನ್ನ ಸ್ನೇಹ ಚೆನ್ನ, ನಿನ್ನ ಮೋಹ ಚೆನ್ನ ನಿನ್ನ ಮಾತೆ ಚೆನ್ನ, ನನ್ನವನೆ
          ಎಲ್ಲಿರಲಿ ಹೇಗಿರಲಿ ನೀನೆ ನೀನೆ ನನ್ನೀ ಮನದಲ್ಲಿ
ಗಂಡು : ನಿನ್ನ ಸ್ನೇಹ ಚೆನ್ನ, ನಿನ್ನ ಮೋಹ ಚೆನ್ನ ನಿನ್ನ ಮಾತೆ ಚೆನ್ನ, ನನ್ನವಳೆ
            ಎಲ್ಲಿರಲಿ ಹೇಗಿರಲಿ ನೀನೆ ನೀನೆ ನನ್ನೀ ಮನದಲ್ಲಿ

ಗಂಡು : ಪ್ರಣಯದ ಕಡಲ ಹೊನ್ನ ನೀನಾದೆ ಬಾಳಲ್ಲಿ ಆನಂದ ಇಂದು ಪಡೆದೆ
            ಒಲವಿನ ಕಡಲ ಸೇರಿ ಮುತ್ತಾದೆ ಬಾಳಲ್ಲಿ ಉಲ್ಲಾಸ ಇಂದು ಪಡೆದೆ
            ಬಯಕೆ ಅರಳಿ ಹೊಸ ಆಸೆ ನೂರು ಇಂದು ಕಂಡೆ
           ನಿನ್ನ ಸ್ನೇಹ ಚೆನ್ನ, ನಿನ್ನ ಮೋಹ ಚೆನ್ನ
ಹೆಣ್ಣು : ಬಿಸಿಲಲು ಹಿತವು ನೀನು ಇದ್ದಾಗ ಮಳೆಯಲ್ಲು ಚಳಿ ಇಲ್ಲ ನೀ ಒಲಿದಾಗ
          ಹೊಸತನ ತರುವೆ ನೀನು ಬಂದಾಗ ನನ್ನನ್ನೇ ಮರೆತೆನು ನಾನು ಆಗ
          ಸಲಿಗೆ ತರುವ ಸುಖ ಏನು ಎಂದು ಇಂದು ಕಂಡೆ
         ನಿನ್ನ ಸ್ನೇಹ ಚೆನ್ನ, ನಿನ್ನ ಮೋಹ ಚೆನ್ನ ನಿನ್ನ ಮಾತೆ ಚೆನ್ನ, ನನ್ನವನೆ
         ಎಲ್ಲಿರಲಿ ಹೇಗಿರಲಿ ನೀನೆ ನೀನೆ ನನ್ನೀ ಮನದಲ್ಲಿ
--------------------------------------------------------------------------------------------------------------------------

ಏಕಲವ್ಯ (1990) - ಅರೇ ಮುತ್ತು ಮುತ್ತು ಈಗ ಈ ಕೆನ್ನೆಗೆ ಬೇಕಾಗಿದೆ 
ಸಾಹಿತ್ಯ: ಚಿ.ಉದಯಶಂಕರ್ ಸಂಗೀತ: ಸಂಗೀತರಾಜ ಹಾಡಿದವರು: ಎಸ್.ಪಿ.ಬಿ., ಚಿತ್ರಾ

ಗಂಡು : ಅರೇ .. ಮುತ್ತು ಮುತ್ತು ಈಗ ಈ ಕೆನ್ನೆಗೆ ಬೇಕಾಗಿದೆ
ಹೆಣ್ಣು : ಅರೇ.. ಗೊತ್ತು ಗೊತ್ತು ಎಲ್ಲಾ ನಿನ್ನಾಟವೂ ಸಾಕಾಗಿದೇ
ಗಂಡು : ಹೊಯ್ ಮತ್ತೇ ಮತ್ತೇ ಬೇಕು ಎನ್ನೋದಿಲ್ಲ ಬಂಗಾರಿಯೇ
ಹೆಣ್ಣು : ಹೊಯ್.. ಹೊತ್ತು ಗೊತ್ತು ನೋಡಿ ಬಾ ಇಲ್ಲಿಗೇ ಸಂಗಾತಿಯೇ

ಗಂಡು :  ಬಾ ಚಿನ್ನಾ                        ಹೆಣ್ಣು : ಏನೂ
ಗಂಡು : ನನ್ನಾಸೆ                            ಹೆಣ್ಣು : ಹೇಳು
ಗಂಡು : ನೋಡಿಲ್ಲಿ                           ಹೆಣ್ಣು : ಯಾಕೇ
ಗಂಡು : ಯಾರಿಲ್ಲಾ                          ಹೆಣ್ಣು : ಬಲ್ಲೇ
ಗಂಡು : ನನ್ನನ್ನೂ ನೀ ಅಪ್ಪಿ ಒಲವಿಂದಾ
ಹೆಣ್ಣು : ಇಂದಲ್ಲಾ ನಾಳೆ ಇರುಳಾದ ಮೇಲೆ ಓ ನಲ್ಲ ಒಂದಾಗಿ ಸೇರೋಣ
ಗಂಡು : ಅರೇ .. ಮುತ್ತು ಮುತ್ತು ಈಗ ಈ ಕೆನ್ನೆಗೆ ಬೇಕಾಗಿದೆ
ಹೆಣ್ಣು : ಅರೇ.. ಗೊತ್ತು ಗೊತ್ತು ಎಲ್ಲಾ ನಿನ್ನಾಟವೂ ಸಾಕಾಗಿದೇ
ಗಂಡು : ಹೊಯ್ ಮತ್ತೇ ಮತ್ತೇ ಬೇಕು ಎನ್ನೋದಿಲ್ಲ ಬಂಗಾರಿಯೇ
ಹೆಣ್ಣು : ಹೊಯ್.. ಹೊತ್ತು ಗೊತ್ತು ನೋಡಿ ಬಾ ಇಲ್ಲಿಗೇ ಸಂಗಾತಿಯೇ

ಹೆಣ್ಣು : ತುಂಟಾಟ                      ಗಂಡು : ಬೇಕು
ಹೆಣ್ಣು : ಚೆಲ್ಲಾಟ                         ಗಂಡು : ಬೇಕು
ಹೆಣ್ಣು : ಸಂಗೀತ                        ಗಂಡು : ಬೇಕು
ಹೆಣ್ಣು : ಸಂತೋಷ                     ಗಂಡು : ಬೇಕು
ಹೆಣ್ಣು : ಜಾಣನಂತೇ ನೀ ದೂರ ನಿಲ್ಲಯ್ಯಾ
ಗಂಡು : ಅಯ್ಯಯ್ಯೋ ದೂರ ನಾ ನಿಲ್ಲಲಾರೇ ನೀ ಹೂವೂ ನಾ ದುಂಬಿ ಆಗೋಣ
           ಅರೇ .. ಮುತ್ತು ಮುತ್ತು ಈಗ ಈ ಕೆನ್ನೆಗೆ ಬೇಕಾಗಿದೆ
ಹೆಣ್ಣು : ಅರೇ.. ಗೊತ್ತು ಗೊತ್ತು ಎಲ್ಲಾ ನಿನ್ನಾಟವೂ ಸಾಕಾಗಿದೇ
ಗಂಡು : ಹೊಯ್ ಮತ್ತೇ ಮತ್ತೇ ಬೇಕು ಎನ್ನೋದಿಲ್ಲ ಬಂಗಾರಿಯೇ
ಹೆಣ್ಣು : ಹೊಯ್.. ಹೊತ್ತು ಗೊತ್ತು ನೋಡಿ ಬಾ ಇಲ್ಲಿಗೇ ಸಂಗಾತಿಯೇ
--------------------------------------------------------------------------------------------------------------------------

ಏಕಲವ್ಯ (1990) - ಮಳೆ ಬಿಲ್ಲು ಅಂದ ಇಲ್ಲ ಸುಳಿ ಮಿಂಚು ಅಂದ ಇಲ್ಲ 
ಸಾಹಿತ್ಯ: ಚಿ.ಉದಯಶಂಕರ್ ಸಂಗೀತ: ಸಂಗೀತರಾಜ ಹಾಡಿದವರು: ಎಸ್.ಪಿ.ಬಿ., ಚಿತ್ರಾ

ಗಂಡು : ಮಳೆ ಬಿಲ್ಲು ಅಂದ ಇಲ್ಲ ಸುಳಿ ಮಿಂಚು ಅಂದ ಇಲ್ಲ
           ಹುಣ್ಣಿಮೆಯ ಚಂದ್ರ ಕೂಡಾ ನಿನ ಹಾಗೇ ಅಂದ ಇಲ್ಲ
           ನಿಜವನ್ನೇ ನುಡಿವೇ ಕೇಳಮ್ಮಾ ನಿನ್ನ ಮುಂದೆ ಯಾರು ಇಲ್ಲಮ್ಮಾ..
ಹೆಣ್ಣು : ಬರಿ ಮಾತು ಆಡಬೇಡ ಕಣ್ಣಿಂದ ನುಂಗಬೇಡಾ
          ಬಳಿ ಬಂದು ತುಂಟನಂತೇ ಮೈ ಮುಟ್ಟಿ ಕಾಡಬೇಡ
          ಮದುವೆಯು ಇನ್ನೂ ಮುಗಿದಿಲ್ಲ ನಿನ್ನಾಟ ಈಗ ಸರಿಯಲ್ಲ

ಗಂಡು : ರಾತ್ರಿಯ ಕನಸು ಕಾದಿದೆ ಮನಸು ನೀ ದೂರ ಹೋಗಬೇಡಮ್ಮಾ
           ಗಂಡಿನ ವಯಸು ಹೆಣ್ಣಿನ ಸೊಗಸು ಸೇರಲಿ ಬಳಿ ಬಾಮ್ಮಾ.. ಬಾ.. ಬಾ
ಹೆಣ್ಣು : ಓಲಗ ಇನ್ನೂ ಉದಿಲ್ಲ ಮಂತ್ರವೂ ಇನ್ನೂ ಹೇಳಿಲ್ಲಾ ತಾಳಿ ಇನ್ನೂ ನಾನು ನೋಡೇ ಇಲ್ಲ
          ಇನ್ನೂ ಮನೆಗೇ ಬಂದಿಲ್ಲ ಮೊದಲ ರಾತ್ರಿ ಮುಗಿದಿಲ್ಲ ಇಂಥಾ ಆಸೆ ಏಕೆ ನಲ್ಲ
ಗಂಡು : ಮಳೆ ಬಿಲ್ಲು ಅಂದ ಇಲ್ಲ ಸುಳಿ ಮಿಂಚು ಅಂದ ಇಲ್ಲ
           ಹುಣ್ಣಿಮೆಯ ಚಂದ್ರ ಕೂಡಾ ನಿನ ಹಾಗೇ ಅಂದ ಇಲ್ಲ
           ನಿಜವನ್ನೇ ನುಡಿವೇ ಕೇಳಮ್ಮಾ ನಿನ್ನ ಮುಂದೆ ಯಾರು ಇಲ್ಲಮ್ಮಾ..

ಹೆಣ್ಣು : ಕಣ್ಣಲ್ಲಿ ಕುಣಿಸಿ ಮಾತಲಿ ಕುಣಿಸಿ ನನ್ನನ್ನೂ ಕೆಣಕಬೇಡಯ್ಯಾ
         ಬೆಂಕಿಯ ಕಂಡ ಬೆಣ್ಣೆಯ ಹಾಗೇ ವಯಸಿದು ದಮ್ಮಯ್ಯ
ಗಂಡು : ಆಹ್ಹ್ .. ಬಿಟ್ಟೋರುಂಟೇ ಬಂಗಾರಿ ಬಿಟ್ಟೋರುಂಟೇ ವಯ್ಯಾರಿ ಒಂದೇ ಒಂದು ಬಾರಿ ಬಾರೇ ಸಾಕು
           ಮತ್ತೇ ಬೇಕು ಅನ್ನಲ್ಲ ನಿನ್ನಾ ಹೀಗೆ ಕಾಡಲ್ಲ ಈಗ ನೀನು ಬೇಕೇ ಬೇಕು
ಹೆಣ್ಣು : ಬರಿ ಮಾತು ಆಡಬೇಡ ಕಣ್ಣಿಂದ ನುಂಗಬೇಡಾ
          ಬಳಿ ಬಂದು ತುಂಟನಂತೇ ಮೈ ಮುಟ್ಟಿ ಕಾಡಬೇಡ
          ಮದುವೆಯು ಇನ್ನೂ ಮುಗಿದಿಲ್ಲ ನಿನ್ನಾಟ ಈಗ ಸರಿಯಲ್ಲ
ಗಂಡು : ಮಳೆ ಬಿಲ್ಲು ಅಂದ ಇಲ್ಲ ಸುಳಿ ಮಿಂಚು ಅಂದ ಇಲ್ಲ
           ಹುಣ್ಣಿಮೆಯ ಚಂದ್ರ ಕೂಡಾ ನಿನ ಹಾಗೇ ಅಂದ ಇಲ್ಲ
           ನಿಜವನ್ನೇ ನುಡಿವೇ ಕೇಳಮ್ಮಾ ನಿನ್ನ ಮುಂದೆ ಯಾರು ಇಲ್ಲಮ್ಮಾ..
--------------------------------------------------------------------------------------------------------------------------

ಏಕಲವ್ಯ (1990) - ಬಾ ಇಲ್ಲಿ ಬಾ ನನ್ನ ಅಂದ ನೋಡು 
ಸಾಹಿತ್ಯ: ಚಿ.ಉದಯಶಂಕರ್ ಸಂಗೀತ: ಸಂಗೀತರಾಜ ಹಾಡಿದವರು: ಎಸ್.ಪಿ.ಬಿ., ಚಿತ್ರಾ

ಬಾ ಇಲ್ಲಿ ಬಾ ನನ್ನ ಅಂದ ನೋಡು ಬಾ ಇಲ್ಲಿ ಬಾ ಹೊನ್ನ ಮೈಯ್ಯ ನೋಡು ಬಾ
ನೀ ಬಂದಾಗ ಸರಸಕೆ ಬಂದಾಗ ನಿನ್ನೇ ನೀನು ಮರೆಯುವೇ ಬಾ... ಬಾ... ಬಾ..

ತಾಳೆನು ಚಳಿ ಬಾರೆಯ ಓ ಗೆಳೆಯ ಹೇ ಮುತ್ತಿಂದ ನಾ ಮತ್ತನು ತಂದಾಗ
ಮೈಯೆಲ್ಲಾ ಬಿಸಿ ಆಗ ಕಣ್ತುಂಬಾ ನೂರಾರು ಕನಸಾಗ
ಬಾ ಇಲ್ಲಿ ಬಾ ನನ್ನ ಅಂದ ನೋಡು ಬಾ ಇಲ್ಲಿ ಬಾ ಹೊನ್ನ ಮೈಯ್ಯ ನೋಡು ಬಾ
ನೀ ಬಂದಾಗ ಸರಸಕೆ ಬಂದಾಗ ನಿನ್ನೇ ನೀನು ಮರೆಯುವೇ ಬಾ... ಬಾ... ಬಾ..

ಸೇರಿದ ಕ್ಷಣ ಕಾಣದ ಸುಖ ತೋರಿಸುವೇ
ಕಣ್ಣಲಿ ನೀ ಕಣ್ಣನ್ನು ಇಟ್ಟಾಗ ಮನಸಾಗ ಉಯ್ಯಾಲೆ ಹೊಸದಾದ ಶೃಂಗಾರ ರತಿಲೀಲೆ
ಬಾ ಇಲ್ಲಿ ಬಾ ನನ್ನ ಅಂದ ನೋಡು ಬಾ ಇಲ್ಲಿ ಬಾ ಹೊನ್ನ ಮೈಯ್ಯ ನೋಡು ಬಾ
ನೀ ಬಂದಾಗ ಸರಸಕೆ ಬಂದಾಗ ನಿನ್ನೇ ನೀನು ಮರೆಯುವೇ ಬಾ... ಬಾ... ಬಾ..
--------------------------------------------------------------------------------------------------------------------------

ಏಕಲವ್ಯ (1990) -  ಸಂಸಾರವೆಂದರೇನು ಲೇಟಾಗಿ ಅರಿತೇ ನಾನು 
ಸಾಹಿತ್ಯ: ಚಿ.ಉದಯಶಂಕರ್ ಸಂಗೀತ: ಸಂಗೀತರಾಜ ಹಾಡಿದವರು: ಎಸ್.ಪಿ.ಬಿ., ಚಿತ್ರಾ

ಗಂಡು : ಸಂಸಾರವೆಂದರೇನು ಲೇಟಾಗಿ ಅರಿತೇ ನಾನು ಮ್ಯಾರೇಜು ಮುಗಿದು ಹೋಯ್ತು
            ಅಯ್ಯೋ ಮಾಡೋದು ಈಗ ಏನೂ
ಹೆಣ್ಣು :  ಸಂಸಾರವೆಂದರೇನು ಲೇಟಾಗಿ ಅರಿತೇ ನಾನು ಮ್ಯಾರೇಜು ಮುಗಿದು ಹೋಯ್ತು
            ಅಯ್ಯೋ ಮಾಡೋದು ಈಗ ಏನೂ

ಗಂಡು : ನಮಗಿಂದು ನೆರಳು ಕೊಡುವ ಮನೆಯೊಂದ ಇಲ್ಲವೇನು
            ಮ್ಯಾರೇಜು ಮುಗಿದ ನೀನು ಗೃಹಲಕ್ಷ್ಮಿಯಲ್ಲವೇನು ಡಾರ್ಲಿಂಗ್ .. ಡಾರ್ಲಿಂಗ್
ಹೆಣ್ಣು : ದಿನವೆಲ್ಲ ಡ್ಯೂಟಿ ಡ್ಯೂಟಿ ಅಬ್ಬಬ್ಬಾ ಎಂಥ ಘಾಟಿ ಮದುವೆಗೆ ಮುಂಚೆ ಇವರು ಏನಂತಿದ್ರೂ ಗೊತ್ತಾ..
          ಮದುವೆಗೇ ಮುಂಚೆ ನನ್ನಾ ಮಾತೆಲ್ಲ ಸಿಹಿಯಾ ಜೇನು
          ಜೊತೆಗಾತಿಯಾದ ಮೇಲೆ ಕಹಿಯಾಗಿ ಹೋಯಿತೇನು
ಗಂಡು : ಸಂಸಾರವೆಂದರೇನು ಲೇಟಾಗಿ ಅರಿತೇ ನಾನು ಮ್ಯಾರೇಜು ಮುಗಿದು ಹೋಯ್ತು
            ಅಯ್ಯೋ ಮಾಡೋದು ಈಗ ಏನೂ

ಹೆಣ್ಣು : ರೇಷ್ಮೆಯ ಸೀರೆಗಿಂತ ಈ ಖಾಕಿ ಉಡುಪೇ ಮೇಲು
          ನಡುರಾತ್ರಿಯಲ್ಲಿ ಕೂಡ ಬಲು ಇಷ್ಟ ಹಾಳು ಜೈಲೂ
ಗಂಡು : ಒಂದ್ ಕೆಲ್ಸ್ ಮಾಡೋಣ ನಾವಿಬ್ಬರೂ ಪೊಲೀಸ್ ಸ್ಟೇಷನಲ್ಲೇ ಸಂಸಾರ ಮಾಡೋಣ .. ಓಕೆ...
ಹೆಣ್ಣು : ನಾ ಕಾವಿಯನ್ನು ಧರಿಸಿ ಕಾಡನ್ನು ಸೇರಲೇನು
          ಬಾಳೆಲ್ಲ ಒಂಟಿಯಾಗಿ ಹರಿಧ್ಯಾನ ಮಾಡಲೇನು
ಇಬರು  : ಭಜಗೋವಿಂದಂ ಭಜಗೋವಿಂದಂ ಗೋವಿಂದಂ ಭಜ ಮೂಡವತೆ    
            ಭಜಗೋವಿಂದ ಭಜಗೋವಿಂದ ಗೋವಿಂದ     
ಗಂಡು : ನನ್ನಂಥ ರಸಿಕನಿರಲು ವ್ಯೆರಾಗ್ಯವೇಕೆ ಹೇಳು
           ಜೊತೆಯಲಿ ಇರುವೆನೆಂದು ನೀ ನನ್ನಾ ಮಾತು ಕೇಳು
           ಈ ಕಾವಿಯನ್ನು ಮರೆತು ನನ್ನಲ್ಲಿ ಇಂದು ಬೆರೆತು ಸುಖವನ್ನು ಹೊಂದು ಹೆಣ್ಣೇ
           ಬಾ ಕೊಡುವೇ ಈಗ ನನ್ನ
ಹೆಣ್ಣು : ನಾ ನಿನ್ನ ನಂಬಲಾರೇ ಜೊತೆಯಲ್ಲಿ ಬಾಳಲಾರೇ
ಗಂಡು : ಸಂಸಾರವೆಂದರೇನು ಲೇಟಾಗಿ ಅರಿತೇ ನಾನು ಮ್ಯಾರೇಜು ಮುಗಿದು ಹೋಯ್ತು
            ಅಯ್ಯೋ ಮಾಡೋದು ಈಗ ಏನೂ
ಹೆಣ್ಣು :  ಸಂಸಾರವೆಂದರೇನು ಲೇಟಾಗಿ ಅರಿತೇ ನಾನು ಮ್ಯಾರೇಜು ಮುಗಿದು ಹೋಯ್ತು
            ಅಯ್ಯೋ ಮಾಡೋದು ಈಗ ಏನೂ
--------------------------------------------------------------------------------------------------------------------------

No comments:

Post a Comment