531. ಬೇಡಿ ಬಂದವಳು (1968)



ಬೇಡಿ ಬಂದವಳು ಚಿತ್ರದ ಹಾಡುಗಳು 
  1. ನೀರಿನಲ್ಲಿ ಅಲೆಯ ಉಂಗುರ 
  2. ಒಂದಾನೊಂದು ಊರು 
  3. ಯೌವ್ವನ ಮೂಡಿದೆ 
  4. ಬೇಡಿ ಬಂದವಳು 
  5. ಏಳು ಸ್ವರವು ಸೇರಿ 
  6. ಕನ್ನಡದ ತಾಯೆ 
ಬೇಡಿ ಬಂದವಳು (1968) 
ಸಂಗೀತ: ಆರ್. ಸುದರ್ಶನಂ ಸಾಹಿತ್ಯ: ಆರ್.ಎನ್. ಜಯಗೋಪಲ್  ಹಾಡಿದವರು: ಪಿ.ಬಿ. ಶ್ರೀ ಮತ್ತು ಪಿ. ಸುಶೀಲ 

ಹೆಣ್ಣು : ನೀರಿನಲ್ಲಿ ಅಲೆಯ ಉಂಗುರ ಭೂಮಿಮೆಲೆ ಹೂವಿನುಂಗುರ
          ಮನ ಸೆಳೆದ ನಲ್ಲ ಕೊಟ್ಟನಲ್ಲ ಮನ ಸೆಳೆದ ನಲ್ಲ ಕೊಟ್ಟನಲ್ಲ
         ಕೆನ್ನೆ ಮೇಲೆ ಪ್ರೇಮದುಂಗುರ....
ಗಂಡು : ನೀರಿನಲ್ಲಿ ಅಲೆಯ ಉಂಗುರ ಭೂಮಿಮೆಲೆ ಹೂವಿನುಂಗುರ
            ಮನ ಸೆಳೆದ ನಲ್ಲ ಕೊಟ್ಟನಲ್ಲ ಮನ ಸೆಳೆದ ನಲ್ಲ ಕೊಟ್ಟನಲ್ಲ
            ಕೆನ್ನೆ ಮೇಲೆ ಪ್ರೇಮದುಂಗುರ .....
ಇಬ್ಬರು : ನೀರಿನಲ್ಲಿ ಅಲೆಯ ಉಂಗುರ

ಗಂಡು : ಅಂಬಿಗೆಯು ಕಾಲಿನುಂಗುರ ಅದರಿ ದನಿ ಎಷ್ಟು ಸುಂದರ
           ಅಂಬಿಗೆಯು ಕಾಲಿನುಂಗುರ ಅದರಿ ದನಿ ಎಷ್ಟು ಸುಂದರ
ಹೆಣ್ಣು : ತರುವು ಲತೆಯು ಸೇರಿದ ಕಥೆಯು.....
          ತರುವು ಲತೆಯು ಸೇರಿದ ಕಥೆಯು ತನುವ ಬಳಿಸಿ ತೋಳಿನುಂಗುರ
ಗಂಡು : ನೀರಿನಲ್ಲಿ ಅಲೆಯ ಉಂಗುರ
ಹೆಣ್ಣು : ನೀರಿನಲ್ಲಿ ಅಲೆಯ ಉಂಗುರ

ಹೆಣ್ಣು : ಮಣ್ಣಿನಲ್ಲಿ ಕಂಡ ಉಂಗುರ
ಗಂಡು : ಹೆಣ್ಣು ನಾಚಿ ಗೀರಿದುಂಗುರ
ಹೆಣ್ಣು : ಮಣ್ಣಿನಲ್ಲಿ ಕಂಡ ಉಂಗುರ
ಗಂಡು : ಹೆಣ್ಣು ನಾಚಿ ಗೀರಿದುಂಗುರ
ಹೆಣ್ಣು : ಬೆರಳಿನಿಂದ ತೀಡಿದುಂಗುರ...
          ಬೆರಳಿನಿಂದ ತೀಡಿದುಂಗುರ
ಗಂಡು : ಕಣ್ಣ ಸೆಳೆವ ಕುರುಳು ಗುಂಗುರ
ಹೆಣ್ಣು : ನೀರಿನಲ್ಲಿ ಅಲೆಯ ಉಂಗುರ
ಗಂಡು : ನೀರಿನಲ್ಲಿ ಅಲೆಯ ಉಂಗುರ 

ಹೆಣ್ಣು : ಆಗೆ ನಿನ್ನ ಕೈಯ ಸಂಚರ ಎನ್ನ ಹೃದಯ ಒಂದು ಡಂಗುರ
          ಆಗೆ ನಿನ್ನ ಕೈಯ ಸಂಚರ ಎನ್ನ ಹೃದಯ ಒಂದು ಡಂಗುರ
ಗಂಡು : ನಾನು ನುಡಿಯೆ ಕಿವಿಯಲಿಂಚರ......
            ನಾನು ನುಡಿಯೆ ಕಿವಿಯಲಿಂಚರ  ಹಣೆಯ ಮೇಲೆ ಬೆವರಿನುಂಗುರ
ಇಬ್ಬರು : ನೀರಿನಲ್ಲಿ ಅಲೆಯ ಉಂಗುರ ಭೂಮಿಮೆಲೆ ಹೂವಿನುಂಗುರ
             ಮನ ಸೆಳೆದ ನಲ್ಲ ಕೊಟ್ಟನಲ್ಲ ಮನ ಸೆಳೆದ ನಲ್ಲ ಕೊಟ್ಟನಲ್ಲ
             ಕೆನ್ನೆ ಮೇಲೆ ಪ್ರೇಮದುಂಗುರ
ಇಬ್ಬರು : ನೀರಿನಲ್ಲಿ ಅಲೆಯ ಉಂಗುರ.. ನೀರಿನಲ್ಲಿ ಅಲೆಯ ಉಂಗುರ
            ಹುಂಹುಂಹೂಂ
------------------------------------------------------------------------------------------------------------------------

ಬೇಡಿ ಬಂದವಳು (1968) - ಒಂದಾನೊಂದು ಊರು ಆ ಊರಲ್ಲಿ
ಸಂಗೀತ: ಆರ್. ಸುದರ್ಶನಂ  
ಸಾಹಿತ್ಯ: ಆರ್.ಎನ್. ಜಯಗೋಪಲ್ ಹಾಡಿದವರು: ಪಿ. ಸುಶೀಲ 

ಹೆಣ್ಣು : ಒಂದಾನೊಂದು ಊರು ಆ ಊರಲ್ಲಿ ಇಲಿಗಳು ನೂರು
           ಮನೆಮನೆಯಲ್ಲಿ ಬೀದಿಗಳಲ್ಲಿ ಅವುಗಳ ಕಾಟ ಜೋರು
ಮಕ್ಕಳು : ಒಂದಾನೊಂದು ಊರು ಆ ಊರಲ್ಲಿ ಇಲಿಗಳು ನೂರು
               ಮನೆಮನೆಯಲ್ಲಿ ಬೀದಿಗಳಲ್ಲಿ ಅವುಗಳ ಕಾಟ ಜೋರು
              ಲಾ ಲಲ್ಲಲ್ಲಾ ತನ್ನನ್ನ ನಂ ತನ್ನನ್ನ ನಂ ತನ್ನನ್ನ ನಂ

ಹೆಣ್ಣು : ಇಲಿಗಳ ನಡುವೆ ಒಗ್ಗಟ್ಟು,  ಬೆಕ್ಕಿಗೆ ಬಹಳ ಬಿಕ್ಕಟ್ಟು 
            ಇಲಿಗಳ ನಡುವೆ ಒಗ್ಗಟ್ಟು,  ಬೆಕ್ಕಿಗೆ ಬಹಳ ಬಿಕ್ಕಟ್ಟು
            ಬಳಿಯಲಿ ಬರವು ಹಿಡಿಯಲು ಸಿಗವು ಕುಳಿತಿತು ಬೆಕ್ಕು  ಕಂಗೆಟ್ಟು 
            ಕುಳಿತಿತು ಬೆಕ್ಕು  ಕಂಗೆಟ್ಟು                      
ಮಕ್ಕಳು : ಒಂದಾನೊಂದು ಊರು ಆ ಊರಲ್ಲಿ ಇಲಿಗಳು ನೂರು
             ಮನೆಮನೆಯಲ್ಲಿ ಬೀದಿಗಳಲ್ಲಿ ಅವುಗಳ ಕಾಟ ಜೋರು 

ಹೆಣ್ಣು : ಬೆಕ್ಕು ಉಪಾಯ ಹೂಡಿ ಧರಿಸಿತು ಮೀಸೆ ದಾಡಿ 
          ಬೆಕ್ಕು ಉಪಾಯ ಹೂಡಿ ಧರಿಸಿತು ಮೀಸೆ ದಾಡಿ
          ತಪವನು ಮಾಡಿ ಬಂದಿಹೆ ನೋಡಿ ಎಂದಿತು ಇಲಿಗಳ ಕೂಡಿ
          ಎಂದಿತು ಇಲಿಗಳ ಕೂಡಿ 
ಮಕ್ಕಳು :  ಲಾ ಲಲ್ಲಲ್ಲಾ ಲಲ್ಲಲ್ಲಾ ಲಲ್ಲಲ್ಲಾ ತನ್ನನ್ನ ನಂ ತನ್ನನ್ನ ನಂ ತನ್ನನ್ನ ನಂ ಮಿಯಂ
           ಕಪಟ ಜೋಗಿಯನು ಕಂಡು ಮರುಳಾಯಿತು ಇಲಿಗಳ ಹಿಂಡು
          ಹಾಲನು  ನೀಡಿ ಸೇವೇಯ ಮಾಡಿ ಭಕ್ತಿಯ ತೋರಿತು ದಂಡು 

ಹೆಣ್ಣು : ಮೆಲ್ಲನೆ ಇಲಿ ಬಳಿ ಹೋಗಿ ಹಿಡಿಯಿತು ಒಂದನು ಜೋಗಿ 
           ಜೈ ಮಹಾಕಾಳಿ ಎಂದಿತು ಕೂಗಿ ಇಲಿಯನು ತಿಂದು ತೇಗಿ 
ಮಕ್ಕಳು:  ಕಳೆದವು ದಿನಗಳು ಆರು ಮುಗಿದವು ಇಲಿಗಳ ನೂರು 
          ಯುಕ್ತಿಯಿಂದ ಜಯಸಿದ ಬೆಕ್ಕು
          ಯುಕ್ತಿಯಿಂದ ಜಯಸಿದ ಬೆಕ್ಕು ಅರಸಿತು ಮುಂದಿನ ಊರು 
          ಯುಕ್ತಿಯಿಂದ ಜಯಸಿದ ಬೆಕ್ಕು ಅರಸಿತು ಮುಂದಿನ ಊರು 
-------------------------------------------------------------------------------------------------------------------------

ಬೇಡಿ ಬಂದವಳು (1968) - ಯೌವ್ವನ ಮೂಡಿದ ಆಸೆಯ 
ಸಂಗೀತ: ಆರ್. ಸುದರ್ಶನಂ  ಸಾಹಿತ್ಯ: ಆರ್.ಎನ್. ಜಯಗೋಪಲ್ ಹಾಡಿದವರು: ಪಿ.ಸುಶೀಲಾ 

ಯೌವ್ವನ ಮೂಡಿದೆ ಆಸೆಯಾ ತಂದಿದೆ ಕಂಗಳೋ ಬೇಡಿದೆ
ಬೇಗ ಬಾ ಬೇಗ ಬಾ ಎಂದಿದೆ
ಯೌವ್ವನ ಮೂಡಿದೆ ಆಸೆಯಾ ತಂದಿದೆ ಕಂಗಳೋ ಬೇಡಿದೆ
ಬೇಗ ಬಾ ಬೇಗ ಬಾ ಎಂದಿದೆ ಯೌವ್ವನ ಮೂಡಿದೆ

ತಣ್ಣನೆಯ ಗಾಳಿ ತಾನು ಬೀಸಿದೆ ತಲ್ಲಣದ ನಿಟ್ಟುಸಿರ ತಂದಿದೆ
ತಣ್ಣನೆಯ ಗಾಳಿ ತಾನು ಬೀಸಿದೆ ತಲ್ಲಣದ ನಿಟ್ಟುಸಿರ ತಂದಿದೆ
ತಬ್ಬಿ ಹಿಡಿವ ತೋಳುಗಳ ಆರಸಿದೇ
ತಬ್ಬಿ ಹಿಡಿವ ತೋಳುಗಳ ಆರಸಿದೇ ತುಟಿಯು ತನ್ನ ಕಾಣಿಕೆಯ ಬಯಸಿದೆ
ಯೌವ್ವನ ಮೂಡಿದೆ ಆಸೆಯಾ ತಂದಿದೆ ಕಂಗಳೋ ಬೇಡಿದೆ
ಬೇಗ ಬಾ ಬೇಗ ಬಾ ಎಂದಿದೆ ಯೌವ್ವನ ಮೂಡಿದೆ

ಮೂಡಿದ ಹೂವು ಗಂಧವನ್ನು ಸೂಸಿದೆ ನಲ್ಲನೆದೆಗೆ ಸೋಕಲೆಂದು ಕಾದಿದೆ
ಮೂಡಿದ ಹೂವು ಗಂಧವನ್ನು ಸೂಸಿದೆ ನಲ್ಲನೆದೆಗೆ ಸೋಕಲೆಂದು ಕಾದಿದೆ
ಹೃದಯ ಮಿಡಿತ ಹೊಸದು ತಾಳ ಹಾಕಿದೆ
ಹೃದಯ ಮಿಡಿತ ಹೊಸದು ತಾಳ ಹಾಕಿದೆ ನಿನ್ನ ಸ್ಪರ್ಶದಲ್ಲೇ ಸ್ವರ್ಗ ಕಂಡಿದೆ...
ಯೌವ್ವನ ಮೂಡಿದೆ ಆಸೆಯಾ ತಂದಿದೆ ಕಂಗಳೋ ಬೇಡಿದೆ
ಬೇಗ ಬಾ ಬೇಗ ಬಾ ಎಂದಿದೆ ಯೌವ್ವನ ಮೂಡಿದೆ
------------------------------------------------------------------------------------------------------------------------

ಬೇಡಿ ಬಂದವಳು (1968)  
ಸಂಗೀತ: ಆರ್. ಸುದರ್ಶನಂ  ಸಾಹಿತ್ಯ: ಆರ್.ಎನ್. ಜಯಗೋಪಲ್ ಹಾಡಿದವರು:ಪಿ.ಬಿ..ಶ್ರೀನಿವಾಸ 

ಬೇಡಿ ಬಂದವಳು ಒಲವನು ಬೇಡಿ ಬಂದವಳು 
ಬಾಳಲು  ಬಯಸಿ ಸುಖವ ಅರಸಿ ಸಿಗದೇ ನೊಂದುವಳು 


ಬೇಡಿ ಬಂದವಳು ಒಲವನು ಬೇಡಿ ಬಂದವಳು 

ತುಟಿಗೂ ತುತ್ತಿಗೂ ನಡುವಿನ ಅಂತರ
ಆಸೆ ನಿರಾಸೆಯ ನಡುವಿನ ಅಂತರ 
ನಂಬಿದ ದೈವವೇ ಆಗಿರೇ ದೂರ 
ಕಂಬನಿಯೊಂದೇ ಬಾಳಲಿನಂತರ 
ಬೇಡಿ ಬಂದವಳು ಒಲವನು ಬೇಡಿ ಬಂದವಳು 

ಎಳೆಯ ಹೂಗಳ ಆರೈಕೆ ಸುಖವು ಹಳೆಯ ನೆನಪು ಆಗಲಿದೆ
ಎಳೆಯ ಹೂಗಳ ಆರೈಕೆ ಸುಖವು ಹಳೆಯ ನೆನಪು ಆಗಲಿದೆ
ಬೆಳಗಲು ಮನೆಗೂ ತನಗೂ ಋಣವು ಇಂದು ತೀರಲಿದೆ
ಬೇಡಿ ಬಂದವಳು ಒಲವನು ಬೇಡಿ ಬಂದವಳು 

ಬಾಗ್ಯದ ಬಾಗಿಲು ತೆರೆದಿಹದೆಂದು ಕನಸು ಕಂಡವಳು
ಮರಳು ಗಾಡಿನ ಮಾರಿಚಿಯು ಕಂಡು ಭ್ರಾಂತಿಗೊಂಡವಳು 
ಬೇಡಿ ಬಂದವಳು ಒಲವನು ಬೇಡಿ ಬಂದವಳು 
ಬೇಡಿ ಬಂದವಳು ಬೇಡಿ ಬಂದವಳು
ಬೇಡಿ ಬಂದವಳು ಬೇಡಿ ಬಂದವಳು
-----------------------------------------------------------------------------------------------------------------------

ಬೇಡಿ ಬಂದವಳು (1968)
ಸಂಗೀತ: ಆರ್. ಸುದರ್ಶನಂ  ಸಾಹಿತ್ಯ: ಆರ್.ಎನ್. ಜಯಗೋಪಲ್ ಹಾಡಿದವರು: ಬಿ. ಪಿ.ಸುಶೀಲಾ 

ಹೆಣ್ಣು : ಸರಿಗಮಪದನಿ ಸನಿಗಮಪಮಗರಿ
ಮಕ್ಕಳು : ಸರಿಗಮಪದನಿ ಸನಿಗಪಮಗರಿ
ಹೆಣ್ಣು : ಏಳು ಸ್ವರವು ಸೇರಿ ಸಂಗೀತವಾಯಿತು 
           ಏಳು ಬಣ್ಣ ಸೇರಿ ಬಿಳಿಯ ಬಣ್ಣವಾಯಿತು 
ಮಕ್ಕಳು :  ಏಳು ಸ್ವರವು ಸೇರಿ ಸಂಗೀತವಾಯಿತು 
           ಏಳು ಬಣ್ಣ ಸೇರಿ ಬಿಳಿಯ ಬಣ್ಣವಾಯಿತು 
ಹೆಣ್ಣು : ಏಳು ದಿನವೂ ಸೇರಿ ಒಂದು ವಾರವಾಯಿತು 
          ಏಳು ದಿನವೂ ಸೇರಿ ಒಂದು ವಾರವಾಯಿತು 
          ಏಳು ತಾರೆ ಸಪ್ತಋಷಿಯ ಚಿಹ್ನೆಯಾಯಿತು 
ಎಲ್ಲರು  :  ಏಳು ಸ್ವರವು ಸೇರಿ ಸಂಗೀತವಾಯಿತು 
           ಏಳು ಬಣ್ಣ ಸೇರಿ ಬಿಳಿಯ ಬಣ್ಣವಾಯಿತು 

ಹೆಣ್ಣು : ಕಡಲಿನಿಂದ ನೀರ ಆವಿ ಮೋಡವಾಯಿತು 
          ಮೋಡಗಿರಿಗೆ ಮುತ್ತ ನೀಡೆ ಮಳೆಯೂ ಆಯಿತು            
          ಕಡಲಿನಿಂದ ನೀರ ಆವಿ ಮೋಡವಾಯಿತು 
          ಮೋಡಗಿರಿಗೆ ಮುತ್ತ ನೀಡೆ ಮಳೆಯೂ ಆಯಿತು            
          ಮಳೆಯೂ ನೆಲಕೆ ಬೀಳಲು ಬೆಳೆಯೂ ಆಯಿತು 
          ಮಳೆಯೂ ನೆಲಕೆ ಬೀಳಲು ಬೆಳೆಯೂ ಆಯಿತು 
         ಬೆಳೆದ ಕಾಳು ತಾನು ನಮಗೆ ಅನ್ನವಾಯಿತು 
         ಬೆಳೆದ ಕಾಳು ತಾನು ನಮಗೆ ಅನ್ನವಾಯಿತು  
ಎಲ್ಲರು  :  ಏಳು ಸ್ವರವು ಸೇರಿ ಸಂಗೀತವಾಯಿತು 
              ಏಳು ಬಣ್ಣ ಸೇರಿ ಬಿಳಿಯ ಬಣ್ಣವಾಯಿತು

ಹೆಣ್ಣು : ಬೀಜ ಮೊಳೆತು ಸಸಿಯಾಗಿ ಹೂವು ಬಿಟ್ಟಿತು
          ಹೂವಿನಿಂದ ಹೂವಿಗೆ ದುಂಬಿ ಹಾರಿತು
         ಬೀಜ ಮೊಳೆತು ಸಸಿಯಾಗಿ ಹೂವು ಬಿಟ್ಟಿತು
         ಹೂವಿನಿಂದ ಹೂವಿಗೆ ದುಂಬಿ ಹಾರಿತು
        ದುಂಬಿ ಆಟ ಹೂವನು ಕಾಯಿ ಮಾಡಿತು
        ದುಂಬಿ ಆಟ ಹೂವನು ಕಾಯಿ ಮಾಡಿತು
        ಕಾಯಿ ಮಾಗಿ ಹಣ್ಣು ಆಗಿ ಬೀಜ ತಂದಿತು
        ಕಾಯಿ ಮಾಗಿ ಹಣ್ಣು ಆಗಿ ಬೀಜ ತಂದಿತು
ಎಲ್ಲರು : ಏಳು ಸ್ವರವು ಸೇರಿ ಸಂಗೀತವಾಯಿತು
           ಏಳು ಬಣ್ಣ ಸೇರಿ ಬಿಳಿಯ ಬಣ್ಣವಾಯಿತು
          ಏಳು ಸ್ವರವು ಸೇರಿ ಸಂಗೀತವಾಯಿತು
          ಏಳು ಬಣ್ಣ ಸೇರಿ ಬಿಳಿಯ ಬಣ್ಣವಾಯಿತು
-----------------------------------------------------------------------------------------------------------------------

ಬೇಡಿ ಬಂದವಳು (1968)
ಸಂಗೀತ: ಆರ್. ಸುದರ್ಶನಂ ಸಾಹಿತ್ಯ: ಆರ್.ಎನ್. ಜಯಗೋಪಲ್ ಹಾಡಿದವರು: ಬಿ.ಕೆ.ಸುಮಿತ್ರಾ, ಬೆಂಗಳೂರು ಲತಾ


ಹೆಣ್ಣು : ಕನ್ನಡದ ತಾಯೆ ನಮ್ಮನ್ನು ನೀ ಕಾಯೇ
ಮಕ್ಕಳು : ಕನ್ನಡದ ತಾಯೆ ನಮ್ಮನ್ನು ನೀ ಕಾಯೇ
ಹೆಣ್ಣು : ನಿಮ್ಮಯ ಹೆಸರು ನಮ್ಮಯ ಉಸಿರು ಪಾಲಿಸು ಮಹಾತಾಯಿ
ಮಕ್ಕಳು: ನಿನ್ನಯ ಹೆಸರು ನಮ್ಮಯ ಉಸಿರು ಪಾಲಿಸು ಮಹಾತಾಯಿ
            ಕನ್ನಡದ ತಾಯೇ

ಹೆಣ್ಣು : ನಿನ್ನಯ ಮಣ್ಣಿಗೆ ಕಾವಲನಾಗಿಹ ಗೊಮ್ಮಟನು
          ನಿನ್ನನ್ನು ರಕ್ಷಿಸೇ ಅಸ್ತ್ರವ ಕೊಡುವಳು ಚಾಮುಂಡಿ ತಾನೂ
ಮಕ್ಕಳು : ನಿನ್ನಯ ಮಣ್ಣಿಗೆ ಕಾವಲನಾಗಿಹ ಗೊಮ್ಮಟನು
             ನಿನ್ನನ್ನು ರಕ್ಷಿಸೇ ಅಸ್ತ್ರವ ತೋಡುವಳು ಚಾಮುಂಡಿ ತಾನೂ
ಹೆಣ್ಣು : ಕಂಕಣ ತೊಟ್ಟು ಕಲಹವ ಬಿಟ್ಟೂ ದುಡಿವೆವು ನಿನಗಾಗಿ
ಮಕ್ಕಳು : ಕಂಕಣ ತೊಟ್ಟು ಕಲಹವ ಬಿಟ್ಟೂ ದುಡಿವೆವು ನಿನಗಾಗಿ
ಎಲ್ಲರು : ನಮ್ಮಯ ನಾಡಿನ ಹೀತಕ್ಕಾಗಿ ಕನ್ನಡದ ತಾಯೇ

ಹೆಣ್ಣು : ನಿನ್ನಯ ಚರಣವ ತೊಳೆಯುತಲಿಹಳು ಕಾವೇರಿಯೂ
          ನಿನ್ನಯ ಕಣ್ಣನು ಮೆರೆಯುತಲಿಹುದು ಬೇಲೂರು
ಮಕ್ಕಳು : ನಿನ್ನಯ ಚರಣವ ತೊಳೆಯುತಲಿಹಳು ಕಾವೇರಿಯೂ
             ನಿನ್ನಯ ಕಣ್ಣನು ಮೆರೆಯುತಲಿಹುದು ಬೇಲೂರು
ಹೆಣ್ಣು : ಗಂಧದ ಗೂಡು ಕಲೆಗಳ ಬೀಡು ನಿನ್ನಯ ಈ ನಾಡು
ಮಕ್ಕಳು : ಗಂಧದ ಗೂಡು ಕಲೆಗಳ ಬೀಡು ನಿನ್ನಯ ಈ ನಾಡು
ನಮ್ಮ ಚೆಲುವಿನ ಕರುನಾಡು ಕನ್ನಡದ ತಾಯೇ

ಹೆಣ್ಣು : ಮಕ್ಕಳರೊಮ್ಮೆ ದೊಡ್ಡವರಾಗಿ ಆಗುವರೋ
          ಚಿಕ್ಕವರಿದ್ದಾಗ ಕಲಿಸಿದ ಪಾಠವ ನೆನೆಯುವರೂ
         ಮಕ್ಕಳರೊಮ್ಮೆ ದೊಡ್ಡವರಾಗಿ ಆಗುವರೋ
         ಚಿಕ್ಕವರಿದ್ದಾಗ ಕಲಿಸಿದ ಪಾಠವ ನೆನೆಯುವರೂ
         ನಿನ್ನಯ ಕೀರುತಿ ನಿತ್ಯವೂ ಹಾಡುತಾ ಆರುತಿ ಬೆಳಗುವರು
ಮಕ್ಕಳು : ನಿನ್ನಯ ಕೀರುತಿ ನಿತ್ಯವೂ ಹಾಡುತಾ ಆರುತಿ ಬೆಳಗುವರು
              ನಿನಗೆ ಹೂಮಳೆ ಕರೆಯುವರೂ
ಎಲ್ಲರು : ಕನ್ನಡದ ತಾಯೆ ನಮ್ಮನ್ನು ನೀ ಕಾಯೇ
            ನಿಮ್ಮಯ ಹೆಸರು ನಮ್ಮಯ ಉಸಿರು ಪಾಲಿಸು ಮಹಾತಾಯಿ
          ಕನ್ನಡದ ತಾಯೆ
-------------------------------------------------------------------------------------------------------------------------

No comments:

Post a Comment